ನಾನು ಮೆಚ್ಚಿದ ವಾಟ್ಸಪ್

Monday, October 21, 2019

ಇಂದಿನ ಇತಿಹಾಸ History Today ಅಕ್ಟೋಬರ್ 21

2019: ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ  2019 ಅಕ್ಟೋಬರ್ 21ರ ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡಾ ೬೦ರಿಂದ ೬೫ರಷ್ಟು ಮತದಾನವಾಗಿದ್ದು, ಮತದಾನ ಮುಗಿಯುತ್ತಿದ್ದಂತೆಯೇ ಪ್ರಕಟಗೊಂಡಿರುವ ವಿವಿಧ ಮತದಾನೋತ್ತರ ಸಮೀಕ್ಷೆಗಳು ಉಭಯ ರಾಜ್ಯಗಳಲ್ಲೂ ದೀಪಾವಳಿಯ ಕೊಡುಗೆಯಾಗಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಪ್ರಚಂಡ ವಿಜಯದ ಭವಿಷ್ಯ ನುಡಿದವು. ಸಂಜೆ .೩೦ರ ವೇಳೆಗೆ ಬಂದ ವರದಿಯಂತೆ ಮಹಾರಾಷ್ಟ್ರದಲ್ಲಿ ಶೇಕಡಾ ೬೦.೫ರಷ್ಟು ಮತ್ತು ಹರಿಯಾಣದಲ್ಲಿ ಶೇಕಡಾ ೬೫ರಷ್ಟು ಮತದಾನವಾಯಿತು. ಬಿರುಮಳೆಯ ಪರಿಣಾಮವಾಗಿ ಉಭಯ ರಾಜ್ಯಗಳ ವಿಧಾನಸಭೆಗಳಲ್ಲದೆ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಉಪಚುನಾವಣೆಗಳಲ್ಲಿ ಮಂದಗತಿಯ ಮತದಾನ ನಡೆಯಿತು ಎಂದು ವರದಿಗಳು ಹೇಳಿದವು.  ಮತಗಳ ಎಣಿಕೆ ಅಕ್ಟೋಬರ್ ೨೪ರ ಗುರುವಾರ ನಡೆಯಲಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಪ್ರಕಟಗೊಂಡ ಬಹುತೇಕ ಮತಗಟ್ಟೆ ಸಮೀಪದ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ ಪ್ರಚಂಡ ವಿಜಯದ ಭವಿಷ್ಯ ನುಡಿದವು.  ಟೈಮ್ಸ್  ನೌ ಮತದಾನೋತ್ತರ ಸಮೀಕ್ಷೆಯು ಮಹಾರಾಷ್ಟ್ರ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಒಟ್ಟು ೨೩೦ ಸ್ಥಾನಗಳು ಲಭಿಸುವ ಭವಿಷ್ಯ ನುಡಿಯಿತು. ಅದರ ಪ್ರಕಾರ ಕಾಂಗ್ರೆಸ್ -ಎನ್ಸಿಪಿ ಮೈತ್ರಿಕೂಟಕ್ಕೆ ಕೇವಲ ೪೮ ಸ್ಥಾನಗಳು ಲಭಿಸಲಿವೆ. ಹರಿಯಾಣದಲ್ಲಿ ಬಿಜೆಪಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರಿಗೆ ಎರಡನೇ ಅವಧಿಗೆ ಅಧಿಕಾರ ಪ್ರಾಪ್ತಿಯ ಸಾಧ್ಯತೆ ದಟ್ಟವಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2019: ನವದೆಹಲಿ: ಮುಸ್ಲಿಮರ ವಿವಾಹ ವಿಚ್ಛೇದನಕ್ಕೆ ಅಸ್ತಿತ್ವದಲ್ಲಿದ್ದ ತ್ರಿವಳಿ ತಲಾಖ್ ಪ್ರಕ್ರಿಯೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ರೂಪಿಸಿದ ಹೊಸ ಕಾಯ್ದೆಯನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿತು.
ಕೇಂದ್ರ ರೂಪಿಸಿರುವ ಮುಸ್ಲಿಮ್ ಮಹಿಳಾ ವಿವಾಹ ಹಕ್ಕು ರಕ್ಷಣಾ ಕಾಯ್ದೆಯ ಪ್ರಕಾರ ಮೂರು ಬಾರಿ ತಲಾಖ್ ಹೇಳಿ ವಿವಾಯ ವಿಚ್ಛೇದನ ನೀಡುವುದು ಅಕ್ರಮವಾಗಿದೆ. ಹಾಗೆ ಮಾಡಿದರೆ ಪತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಂಸತ್ತಿನ ಅನುಮೋದನೆಯೊಂದಿಗೆ ಇದೇ ಆಗಸ್ಟ್ನಿಂದ ಕಾನೂನು ಜಾರಿಗೆ ಬಂದಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)
2019: ನವದೆಹಲಿ: ಕರ್ತಾರಪುರ ಸಾಹಿಬ್ ಕಾರಿಡಾರ್ ಯೋಜನೆ ಸಂಬಂಧ ಪಾಕಿಸ್ತಾನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಭಾರತ ಸರ್ಕಾರ 2019 ಅಕ್ಟೋಬರ್ 21  ಸೋಮವಾರ ಹೇಳಿದೆ. ಸಂಬಂಧ ಪತ್ರಿಕಾ ಪ್ರಕರಣೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ,ಗುರುದ್ವಾರದ ಕರ್ತಾರಪುರ ಸಾಹಿಬ್ಗೆ ವೀಸಾ ಮುಕ್ತ ಪ್ರವೇಶವನ್ನು ನೀಡಬೇಕು ಎಂಬ ಯಾತ್ರಾರ್ಥಿಗಳ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ನವೆಂಬರ್ 12ರ ಮೊದಲು ಕಾರಿಡಾರನ್ನು ಕಾರ್ಯಗತಗೊಳಿಸಲು ಅಕ್ಟೋಬರ್ 23ರಂದು ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿತು. ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಳ್ಳಲಾಗಿದೆ. ಯಾತ್ರಾರ್ಥಿಗಳಿಗೆ ವಿಧಿಸುವ ಸೇವಾ ಶುಲ್ಕ 20  ಡಾಲರನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮತ್ತೊಮ್ಮೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ತಿದ್ದುಪಡಿ ಒಪ್ಪಂದಕ್ಕೆ ಯಾವುದೇ ಸಮಯದಲ್ಲಿ ಸಹಿ ಮಾಡಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತು. ಹೇಳಿಕೆಯಲ್ಲಿ ಪಾಕಿಸ್ತಾನದ ಸೇವಾ ಶುಲ್ಕ ಪ್ರಸ್ತಾವನೆಗೆ ವಿದೇಶಾಂಗ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಸೇವಾ ಶುಲ್ಕವನ್ನು ಹಿಂಪಡೆಯುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2019: ನವದೆಹಲಿ: ಸಂತ ರವಿದಾಸ ದೇಗುಲವನ್ನು ಮರುನಿರ್ಮಾಣ ಮಾಡುವಂತೆ ಸುಪ್ರೀಂಕೋರ್ಟ್2019 ಅಕ್ಟೋಬರ್ 21 ಸೋಮವಾರ ಆದೇಶ ನೀಡಿತು. ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ಆಗಸ್ಟ್ನಲ್ಲಿ ಒಡೆದು ಹಾಕಲಾಗಿದ್ದ ಸಂತ ರವಿದಾಸ ದೇಗುಲವನ್ನು ಅದೇ ಜಾಗದಲ್ಲಿ ಮರುನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕ ಸುಪ್ರೀಂಕೋರ್ಟ್ ಆದೇಶ ನೀಡಿತು.  ದಕ್ಷಿಣ ದೆಹಲಿಯ ತುಘ್ಲಕ್ ಬಾದಿನಲ್ಲಿದ್ದ ಸಂತ ರವಿದಾಸ ದೇಗುಲವನ್ನು ಒಡೆದುಹಾಕಿದ್ದರಿಂದ ಭಕ್ತಾದಿಗಳ ಪ್ರತಿಭಟನೆ ಕಾಡ್ಗಿಚ್ಚಿನಂತೆ ಎಲ್ಲೆಡೆ ವ್ಯಾಪಿಸಿತ್ತು. ಶಾಂತಿ ಮತ್ತು ಸೌಹಾರ್ದತೆ ದೃಷ್ಟಿಯಿಂದ ಅದೇ ಸ್ಥಳದಲ್ಲಿ ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದರು.  ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ 400 ಚದರ ಅಡಿ ದುಪ್ಪಟ್ಟು ಜಾಗವನ್ನು ಹಂಚಿಕೆ ಮಾಡಿದೆ. ಮರುನಿರ್ಮಾಣವಾದ ದೇಗುಲ ನಿರ್ವಹಣೆಗಾಗಿ ಭಕ್ತಾದಿಗಳ ಸಮಿತಿ ರಚನೆಯ ಪ್ರಸ್ತಾವನೆಯನ್ನು ಕೂಡ ಸರ್ಕಾರ ಮಾಡಿದೆ ಎಂದು ನ್ಯಾಯಾಲಯಕ್ಕೆ ಕೆ.ಕೆ.ವೇಣುಗೋಪಾಲ್ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2019: ನವದೆಹಲಿ: ಮುಂಬೈ ಮೂಲದ 32 ಕಂಪೆನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದ
ಭೀತಿ ಎದುರಾಯಿತು. ತನ್ನ ಆದೇಶವನ್ನು ಪಾಲಿಸದ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತು. ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಕಾರಣ. ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ವಿನಯ್ ಮರ್ಸಾಂಟೈಲ್, ಅನೂಪ್ ಮಲ್ಟಿಟ್ರೇಡ್, ಅನ್ಶುಲ್ ಮೆರ್ಸಾಂಟೈಲ್, ಎವರ್ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್ ಟ್ರೇಡಿಂಗ್, ನ್ಯೂಟ್ರೀ ಮರ್ಸಾಂಟೈಲ್, ಸರ್ವೇಶ್ವರ ಟ್ರೇಡಿಂಗ್ ಮೊದಲಾದ ಕಂಪನಿಗಳು ಸುಪ್ರೀಂ ಕೆಂಗಣ್ಣಿಗೆ ಗುರಿಯಾದವು. 2016ರಲ್ಲಿ ಪ್ರಕರಣವೊಂದರ ಸಂಬಂಧ 32 ಕಂಪನಿಗಳು ಷೇರು ಪೇಟೆ ನಿಯಂತ್ರಣ ಸಂಸ್ಥೆಯಾದ ಸೆಬಿಗೆ ತಲಾ 5 ಲಕ್ಷ ದಂಡ ಕಟ್ಟುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಮೂರು ವರ್ಷಗಳಾದರೂ ಕಂಪನಿಗಳಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಹಿನ್ನೆಲೆಯಲ್ಲಿ ಸೆಬಿ 2017ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ| ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ಸುಪ್ರೀಂಕೋರ್ಟ್  ನ್ಯಾಯಪೀಠ ಈಗ ಕಂಪನಿಗಳ ಅಧಿಕಾರಿಗಳಿಗೆ ಜಾಮೀನುರಹಿತ ವಾರೆಂಟ್ ಹೊರಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)




No comments:

Post a Comment