2019: ನವದೆಹಲಿ: ಪಂಜಾಬಿನ ವಿವಿಧ ಕಡೆಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ’ಡ್ರೋಣ್’ ಮೂಲಕ ಶಸ್ತ್ರಾಸ್ತ್ರ- ಮದ್ದು ಗುಂಡು ತಂದು ಇಳಿಸಿದ ಪ್ರಕರಣಗಳ ಹಿಂದೆ ಪಾಕಿಸ್ತಾನಿ ಸರ್ಕಾರಿ ಅಧಿಕಾರಿಗಳ ಕೈವಾಡ ಇತ್ತು ಎಂದು ಗುಪ್ತಚರ ಸಂಸ್ಥೆಗಳು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿವು. ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಗುಪ್ತಚರ ಸಂಸ್ಥೆಗಳು ಈ ಗಂಭೀರವಾದ ಡ್ರೋಣ್
ಚಟುವಟಿಕೆಯನ್ನು ಪತ್ತೆ ಹಚ್ಚುವಲ್ಲಿ ವಾಯುಪಡೆ ಅಥವಾ ಗಡಿಭದ್ರತಾ ಪಡೆಗಳು ವಿಫಲಗೊಂಡಿರುವುದು ಹೇಗೆ ಎಂದೂ ಪ್ರಶ್ನಿಸಿವೆ ಎಂದು ಮೂಲಗಳು 2019 ಅಕ್ಟೋಬರ್
10ರ ಗುರುವಾರ ಹೇಳಿದವು. ಪಾಕಿಸ್ತಾನಿ ಸರ್ಕಾರಿ ಅಧಿಕಾರಿಗಳ ಪಾತ್ರ ಬಗ್ಗೆ ತನಿಖೆ ನಡೆಸುವಂತೆ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸೂಚಿಸಿದೆ ಎಂದು ಮೂಲಗಳು ಹೇಳಿದವು. ಗಡಿಯುದ್ದಕ್ಕೂ ಈ ಡ್ರೋಣ್‌ಗಳು
ಎಷ್ಟು ಬಾರಿ ಕಾರ್ಯಾಚರಣೆಯನ್ನು ಪುನರಾವರ್ತಿಸಿವೆ ಎಂಬುದನ್ನು ಪತ್ತೆ
ಹಚ್ಚುವಂತೆಯೂ ಗೃಹ ಸಚಿವಾಲಯವು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಗೆ (ಎನ್‌ಟಿಆರ್‌ಒ)ನಿರ್ದೇಶಿಸಿತು. ರಾಷ್ಟ್ರೀಯ
ತಾಂತ್ರಿಕ ಸಂಶೋಧನಾ ಸಂಸ್ಥೆಯು ಈಗಾಗಲೇ ಕಾರ್ಯಾಚರಣೆ ಪುನರಾವರ್ತನೆ ಪತ್ತೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಡ್ರೋಣ್ ಹಾರಾಟದ ಪುನರಾವರ್ತನೆ ಎಷ್ಟು ಬಾರಿ ಆಗಿದೆ ಎಂಬುದನ್ನು ಪತ್ತೆ ಹಚ್ಚುವುದರಿಂದ ಡ್ರೋಣ್ ಮತ್ತು ಅದರ ಮೂಲ ನೆಲೆಯ ನಡುವಣ ಸಂಪರ್ಕದ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಎಕೆ-೪೭ ಅಸಾಲ್ಟ್ ರೈಫಲ್ಗಳನ್ನು ಭಾರೀ ಪ್ರಮಾಣದಲ್ಲಿ ಪಂಜಾಬಿನ ಅಮೃತಸರದಲ್ಲಿ ಡ್ರೋಣ್ ಮೂಲಕ ತಂದು ಇಳಿಸಲಾಗಿದ್ದು ಈ ಡ್ರೋಣ್‌ಗಳು
ಪಾಕಿಸ್ತಾನದಿಂದ ಬಂದಿದ್ದವು ಎಂದು ಈ ಮುನ್ನ ಪಂಜಾಬ್
ಪೊಲೀಸರು ತಿಳಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ’ಭಯೋತ್ಪಾದನೆ
ಬೆದರಿಕೆ’ ಹಿನ್ನೆಲೆಯಲ್ಲಿ
ಕಣಿವೆಯಿಂದ ಹೊರಹೋಗುವಂತೆ ನೀಡಿದ್ದ ನಿರ್ದೇಶನದ ಎರಡು ತಿಂಗಳುಗಳ ಬಳಿಕ
2019 ಅಕ್ಟೋಬರ್ 10ರ ಗುರುವಾರ
ಜಮ್ಮು ಮತ್ತು ಕಾಶ್ಮೀರವನ್ನು ಪ್ರವಾಸಿಗರಿಗಾಗಿ ಮುಕ್ತಗೊಳಿಸಲಾಯಿತು. ಪ್ರವಾಸಿಗರ
ಮೇಲಿನ ನಿರ್ಬಂಧ ರದ್ದು ಪಡಿಸುವ ನಿರ್ಧಾರವನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಸೋಮವಾರ ಸಲಹೆಗಾರರು ಮತ್ತು ಮುಖ್ಯ ಕಾರ್ಯದರ್ಶಿ ಜೊತೆಗೆ ’ಪರಿಸ್ಥಿತಿ ಹಾಗೂ ಭದ್ರತಾ ಪರಿಶೀಲನೆಯ’
ಬಳಿಕ ಪ್ರಕಟಿಸಿದ್ದರು. ಕೇಂದ್ರ ಸರ್ಕಾರವು ಗುಪ್ತಚರ ಸಂಸ್ಥೆಗಳು ಭಯೋತ್ಪಾದನೆ ಬೆದರಿಕೆಯ ಮಾಹಿತಿ ಒದಗಿಸಿದ್ದನ್ನು ಅನುಸರಿಸಿ ಆಗಸ್ಟ್ ೨ರಂದು ಅಮರನಾಥ ಯಾತ್ರೆಯನ್ನು ರದ್ದುಪಡಿಸಿ ಯಾತ್ರಿಕರು ಮತ್ತು ಪ್ರವಾಸಿಗಳಿಗೆ ಕಣಿವೆ ವಾಸ್ತವ್ಯವನ್ನು ಮೊಟಕುಗೊಳಿಸಿ ತತ್ ಕ್ಷಣವೇ ಕಣಿವೆಯಿಂದ ಹೊರಹೋಗುವಂತೆ ಸೂಚಿಸಿದ್ದವು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ೩೭೦ನೇ ವಿಧಿ ರದ್ದು ಪಡಿಸುವುದಕ್ಕೆ ಕೆಲವು ದಿನ ಮುಂಚಿತವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು.
ಇನ್ನೊಂದು ಕ್ರಮದಲ್ಲಿ ಆಡಳಿತವು ಹಿರಿಯ ಮಾಧ್ಯಮಿಕ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳ ಪುನಾರಂಭಕ್ಕೆ ಅನುಮತಿ
ನೀಡಿತ್ತು. ಶ್ರೀನಗರದಲ್ಲಿ
ಪ್ರತಿಷ್ಠಿತ ಶ್ರೀ ಪ್ರತಾಪ್ ಕಾಲೇಜಿನ ಹೊರಗೆ ಭದ್ರತಾ ಪಡೆಗಳನ್ನು ಇರಿಸಲಾಗಿದ್ದು, ಗುರುತಿನ ಚೀಟಿಗಳ ತಪಾಸಣೆಯ ಬಳಿಕ ಭದ್ರತಾ ಸಿಬ್ಬಂದಿ ಕಾಲೇಜು ಆವರಣದ ಒಳಕ್ಕೆ ವಿದ್ಯಾರ್ಥಿಗಳಿಗೆ
ಪ್ರವೇಶ ನೀಡಿದರು. ’ನಾನು ಇಲ್ಲಿಗೆ ಅಧ್ಯಯನ ಪರಿಕರಗಳನ್ನು ಪಡೆಯಲು ಬಂದಿದ್ದೇನೆ, ತರಗತಿಗಳಿಗೆ ಹಾಜರಾಗಲು ಅಲ್ಲ, ಪರಿಸ್ಥಿತಿ ಸಂಪೂರ್ಣ ಸಹಜಸ್ಥಿತಿಗೆ ಬಂದ ಬಳಿಕ ತರಗತಿಗಳು ಆರಂಭವಾಗುತ್ತವೆ ಎಂದು ಶಿಕ್ಷಕರು ನಮಗೆ ತಿಳಿಸಿದರು’
ಎಂದು ಹೆಸರು ಹೇಳಲು ಇಚ್ಛಿಸದ ರಸಾಯನಶಾಸ್ತ್ರದ ವಿದ್ಯಾರ್ಥಿಯೊಬ್ಬರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸುವ ನಿರ್ಧಾರವನ್ನು ವಿರೋಧಿಸಿದ್ದಕ್ಕಾಗ್ಗಿ ಮಹಾರಾಷ್ಟ್ರದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (ಎನ್ಸಿಪಿ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಅಕ್ಟೋಬರ್
10ರ ಗುರುವಾರ ಹಿಗ್ಗಾಮುಗ್ಗಾ
ತರಾಟೆಗೆ ತೆಗೆದುಕೊಂಡರು. ‘ಪ್ರಧಾನಿ ನರೇಂದ್ರ ಮೋದಿ ಅವರು ೩೭೦ನೇ ವಿಧಿ ರದ್ದು ಪ್ರಸ್ತಾಪವನ್ನು ಮುಂದಿಟ್ಟಾಗ, ಕಾಂಗ್ರೆಸ್ ಮತ್ತು ಎನ್ಸಿಪಿ ಎರಡೂ ಪಕ್ಷಗಳು ಅದನ್ನು ವಿರೋಧಿಸಿ, ಬಂಡೆದ್ದವು. ೩೭೦ನೇ ವಿಧಿ ರದ್ದನ್ನು ವಿರೋಧಿಸಿದ್ದು ಏಕೆ ಎಂಬುದಾಗಿ ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಅವರು ಮಹಾರಾಷ್ಟ್ರದ ಜನತೆಗೆ ವಿವರಿಸಬೇಕು ಎಂದು ನಾನು ಬಯಸುತ್ತೇನೆ’ ಎಂದು
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಟ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಕೇಂದ್ರ ಸಚಿವರು ನುಡಿದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಎರಡೂ ಪಕ್ಷಗಳು ಈ ನಿರ್ಧಾರವನ್ನು ವಿರೋಧಿಸಿದವು.
ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿದೀತು (ಕಾಶ್ಮೀರ್ ಮೆ ಖೂನ್ ಕಿ
ನದಿಯಾ ಬೆಹ್ ಜಾಯೇಂಗಿ) ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ಒಂದೇ ಒಂದು ಬುಲೆಟ್ ಕೂಡಾ ಬೆಂಕಿ ಉಗುಳಲಿಲ್ಲ’
ಎಂದು ಶಾ ಹೇಳಿದರು. ‘ಪ್ರಧಾನಿ
ಮೋದಿ ಅವರು ಇತ್ತೀಚೆಗೆ ವಿಶ್ವಸಂಸ್ಥೆಯಿಂದ ವಾಪಸಾದರು. ಇಡೀ
ವಿಶ್ವ ೩೭೦ನೇ ವಿಧಿ ರದ್ದು ಪಡಿಸಿದ ಅವರ ನಿರ್ಣಯದ ಹಿಂದೆ ನಿಂತಿತು. ಇನ್ನೊಂದೆಡೆ ಪಾಕಿಸ್ತಾನ ಏಕಾಂಗಿಯಾಗಿ ಮೂಲೆಯಲ್ಲಿ ನಿಂತಿತ್ತು’
ಎಂದು ಶಾ ನುಡಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment