ನಾನು ಮೆಚ್ಚಿದ ವಾಟ್ಸಪ್

Wednesday, October 2, 2019

ಇಂದಿನ ಇತಿಹಾಸ History Today ಅಕ್ಟೋಬರ್ 02

2019: ಅಹ್ಮದಾಬಾದ್:  ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮ ದಿನಾಚರಣೆಯ ನೆನಪಿಗಾಗಿ ೧೫೦ ರೂಪಾಯಿಗಳ ನಾಣ್ಯ ಮತ್ತು ಸ್ಮಾರಕ ಅಂಚೆ ಚೀಟಿಗಳನ್ನು 2019ಅಕ್ಟೋಬರ್ 02 ಬುಧವಾರ ಇಲ್ಲಿ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರುಗ್ರಾಮೀಣ ಭಾರತವು ಬಯಲುಶೌಚ ಮುಕ್ತ ದೇಶವಾಗಿದೆಎಂದು ಘೋಷಿಸಿದರು. ಗಾಂಧಿ ಜಯಂತಿಯ ಅಂಗವಾಗಿ ಅಹ್ಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿಯವರು ಸಬರಮತಿ ನದಿಯ ಮುಂಭಾಗದಲ್ಲಿ ಸ್ವಚ್ಛ ಭಾರತ ದಿವಸ್-೨೦೧೯ನ್ನು ಉದ್ಘಾಟಿಸಿ ಭಾರತವು ಬಯಲು ಶೌಚ ಮುಕ್ತ ದೇಶವಾಗಿದೆ ಎಂಬುದಾಗಿ ಪ್ರಕಟಿಸಿದರುಇದಕ್ಕೂ ಮುನ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರಸ್ವಚ್ಛ ಭಾರತಕನಸನ್ನು ನನಸಾಗುತ್ತಿರುವುದಕ್ಕೆ  ಸಾಕ್ಷಿಯಾಗುತ್ತಿರುವುದಕ್ಕಾಗಿ ನನಗೆ ತೃಪ್ತಿ ಇದೆ. ಸಂದರ್ಭದಲ್ಲಿ ಭಾರತವು ಯಶಸ್ವಿಯಾಗಿ ಬಯಲು ಶೌಚಾಲಯವನ್ನು ಸ್ಥಗಿತಗೊಳಿಸಿದೆ ಎಂಬುದಾಗಿ ಆಶ್ರಮದಲ್ಲಿ ಹೇಳುವ ಅದೃಷ್ಟ ನನ್ನದಾಗಿದೆಎಂದು ಬರೆದರು. ನರ್ಮದಾ ನದಿಯ ಮುಂಭಾಗದಲ್ಲಿ ೨೦,೦೦೦ ಮಂದಿ ಪಂಚಾಯತ್ ಮುಖ್ಯಸ್ಥರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ‘ಇಡೀ ಜಗತ್ತು ಬಾಪು ಅವರ ಜನ್ಮದಿನವನ್ನು ಆಚರಿಸುತ್ತಿದೆ. ಕೆಲವು ದಿನಗಗಳ ಹಿಂದೆ ವಿಶ್ವಸಂಸ್ಥೆಯು ಸಂದರ್ಭವನ್ನು ಸ್ಮರಣೀಯವಾಗಿಸಲು ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು. ಈಗ ಇಲ್ಲೂ ಸ್ಮಾರಕ ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಗ್ರಾಮೀಣ ಭಾರತ ಮತ್ತು ಅದರ ಹಳ್ಳಿಗಳು ಈದಿನ ಸ್ವತಃ ಸಂಪೂರ್ಣವಾಗಿ ಬಯಲು ಶೌಚ ಮುಕ್ತವಾಗಿರುವುದಾಗಿ ಘೋಷಿಸಿವೆ ಎಂದು ಪ್ರಧಾನಿ ಸಂದರ್ಭದಲ್ಲಿ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ/ ಅಹ್ಮದಾಬಾದ್:  ’ವಿಶ್ವವು ಎದುರಿಸುತ್ತಿರುವ ಯಾವುದೇ ಸಮಸ್ಯೆಯನ್ನು ತೆಗೆದುಕೊಳ್ಳಿ, ಸವಾಲುಗಳಿಗೆ ಮಹಾತ್ಮ ಗಾಂಧಿ ಅವರ ಬೋಧನೆಗಳಲ್ಲಿ ಪರಿಹಾರವಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 02 ಬುಧವಾರ ಗುಜರಾತಿನ ಅಹ್ಮದಾಬಾದಿನಲ್ಲಿ ಹೇಳಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನದ ಅಂಗವಾಗಿ ಅಹ್ಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮಾಗಾಂಧಿ ಅವರ ಪ್ರತಿಮಗೆ ಹಾರಾರ್ಪಣೆ ಮಾಡಿ ಗೌರವಾರ್ಪಣೆ ಮಾಡಿದ ಪ್ರಧಾನಿ, ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಸಬರಮತಿ ಆಶ್ರಮದ ಮಕ್ಕಳು ಮತ್ತು ಸ್ವಯಂಸೇವಕರ ಜೊತೆಗೆ ಸಂವಹನ ನಡೆಸಿದರು. ಅಮೆರಿಕದ ಹ್ಯೂಸ್ಟನ್ನಲಿ ನಡೆದಹೌಡಿ ಮೋದಿ’ ಕಾರ್ಯಕ್ರಮದ ಸಂದರ್ಭದಲ್ಲಿ ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಇರುವ ಗೌರವದ ಮಿನುಗುನೋಟವನ್ನು ನಾವು ಕಂಡಿದ್ದೇವೆ. ಕಾರ್ಯಕ್ರಮದಲಿ ರಿಪಬ್ಲಿಕನ್ಸ್ ಮತ್ತು ಡೆಮಾಕ್ರಾಟ್ ನಾಯಕರು ಮಾತನಾಡಿದರು. ಅವರು ಅಲ್ಲಿಗೆ ಬಂದದ್ದೇ ವಿಶೇಷವಾಗಿತ್ತುಎಂದು ಪ್ರಧಾನಿ ಮೋದಿ ಹೇಳಿದರು. ವಿಶ್ವ ವೇದಿಕೆಯಲ್ಲಿ ಸಂಭವಿಸುತ್ತಿರುವ ಹಲವಾರು ಧನಾತ್ಮಕ ಬದಲಾವಣೆಗಳಲ್ಲಿ ಭಾರತ ಮುಂಚೂಣಿಯಲ್ಲಿರುವದನ್ನು ಜಗತ್ತು ಗಮನಿಸುತ್ತಿದೆ ಎಂದು ಅವರು ನುಡಿದರು. ‘ವಾಸ್ತವವಾಗಿ ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದೊಯ್ಯುವುದರಲ್ಲಿ ಭಾಋತ ನಂಬಿಕೆ ಇರಿಸಿದೆ. ಇದನ್ನೂ ಜಗತ್ತು ಗಮನಕ್ಕೆ ತೆಗೆದುಕೊಂಡಿದೆಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ಮಾನವ ಸಮಾಜದ ಕೆಲವೊಂದು ಮಹಾನ್ ದ್ವಂದ್ವಗಳ ಮಧ್ಯೆ ಸೇತುವೆಯಾಗಬಲ್ಲಂತಹ ಅನನ್ಯ ಸಾಮರ್ಥ್ಯ ಮಹಾತ್ಮ ಗಾಂಧಿ ಅವರಿಗೆ ಇತ್ತು ಎಂದು ಪ್ರಧಾ|ನಿ ನರೇಂದ್ರ ಮೋದಿ ಅವರು ೧೫೦ನೇ ಗಾಂಧಿ ಜಯಂತಿ ಅಂಗವಾಗಿ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ  2019 ಅಕ್ಟೋಬರ್ 02ರ  ಬುಧವಾರ ಬರೆದ ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟರು. ಮಹಾತ್ಮ ಗಾಂಧಿಯವರು ರಾಷ್ಟ್ರೀಯವಾದಕ್ಕೆ ಮಹತ್ವ ನೀಡಿದ್ದೇಕೆ ಎಂಬುದಕ್ಕೆ ಲೇಖನದಲ್ಲಿ ಒತ್ತು ನೀಡಿದ ಪ್ರಧಾನಿ ಮೋದಿಯವರು, ೧೯೨೫ರಷ್ಟು ಹಿಂದೆಯೇರಾಷ್ಟ್ರೀಯತೆ ವಾಸ್ತವವಾದಾಗ ಮಾತ್ರವೇ ಅಂತಾರಾಷ್ಟ್ರೀಯತೆ ಸಾಧ್ಯಎಂಬುದಾಗಿ ಹೇಳಿದ್ದನ್ನು ಉಲ್ಲೇಖಿಸಿದರು. ಆದರೆ  ಗಾಂಧೀಜಿಯವರು ಭಾರತದ ರಾಷ್ಟ್ರೀಯತೆಯನ್ನು ಎಂದಿಗೂ ಸಂಕುಚಿತ ಅಥವಾ ಪ್ರತ್ಯೇಕವಾಗಿರದ, ಆದರೆ ಮಾನವೀಯತೆಯ ಸೇವೆಗಾಗಿ ಕೆಲಸ ಮಾಡುವಂತಹುದ್ದು  ಎಂಬುದಾಗಿ ಕಲ್ಪಿಸಿಕೊಂಡಿದ್ದರುಎಂದು ಪ್ರಧಾನಿ ಹೇಳಿದರು. ‘ಭಾರತ ಮತ್ತು ಜಗತ್ತಿಗೆ ಗಾಂಧಿ ಏಕೆ ಬೇಕುಶೀರ್ಷಿಕೆಯ ಲೇಖನದಲ್ಲಿ ಭಾರತ ಮತ್ತು ಅದರಿಂದಾಚೆಗೆ ವ್ಯಾಪಿಸಿದ ಮಹಾತ್ಮ ಗಾಂಧಿಯವರ ಚಿಂತನೆಯ ಶಕ್ತಿ ಮತ್ತು ಪರಿಣಾಮದ ಬಗ್ಗೆಒಂದು ವಿಶೇಷವಾದ ಐನ್ಸ್ಟೀನ್ ಸವಾಲುಎಂಬುದಾಗಿ ಬಣ್ಣಿಸಿ ಪ್ರಧಾನಿ ಮೋದಿ ಬರೆದರು.  ‘ರಕ್ತ ಮತ್ತು ಮಾಂಸಭರಿತವಾದ ಇಂತಹ ವ್ಯಕ್ತಿಯೊಬ್ಬ ಭೂಮಿಯಲ್ಲಿ ನಡೆದಾಡಿದ್ದ ಎಂಬುದನ್ನು ನಂಬಲು ಕೂಡಾ ಮುಂಬರುವ ತಲೆಮಾರುಗಳು ಹೆದರಬಹುದುಎಂಬುದಾಗಿ ಮಹಾತ್ಮ ಗಾಂಧಿಯವರ ಬಗ್ಗೆ ಆಲ್ಬರ್ಟ್ ಐನ್ಸ್ಟೀನ್ ಅವರು ಹೇಳಿದ್ದನ್ನು  ಪ್ರಧಾನಿ ಉಲ್ಲೇಖಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2019: ಲಂಡನ್ (ಇಂಗ್ಲೆಂಡ್):  ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ವಿಚಾರ ಸೇರಿದಂತೆ ಕೆಲವು ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿತು. ಹೈದರಾಬಾದ್ ನಿಜಾಮನಿಗೆ ಸೇರಿದ್ದ ಸಂಪತ್ತಿನ (ಅಂದಾಜು 35 ಮಿಲಿಯನ್ ಬ್ರಿಟಿಷ್ ಪೌಂಡ್) ಬಗೆಗಿನ  ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿ, ಭಾರತದ ನಿಲುವನ್ನು ಇಂಗ್ಲೆಂಡ್ ಹೈಕೋರ್ಟ್  (ಯುಕೆ ಹೈಕೋರ್ಟ್)  2019 ಅಕ್ಟೋಬರ್  02ರ ಬುಧವಾರ ಎತ್ತಿಹಿಡಿಯಿತು. ಏನಿದು ಪ್ರಕರಣ? ಹೈದರಾಬಾದ್ ನಿಜಾಮನಿಗೆ  ಸೇರಿದ್ದ ಬರೋಬ್ಬರಿ 35 ಮಿಲಿಯನ್ (ಬ್ರಿಟಿಷ್ ಪೌಂಡ್ಸ್) ನಷ್ಟು ಸಂಪತ್ತು ತನಗೆ ಸೇರಬೇಕೆಂದು ಪಾಕಿಸ್ತಾನ ವಾದಿಸಿದ್ದ 70 ವರ್ಷಗಳಷ್ಟು ಹಳೆಯ ಪ್ರಕರಣ ಇದು. ಹೈದರಾಬಾದ್ ನಿಜಾಮನಿಗೆ ಸೇರಿದ್ದ ಸಂಪತ್ತಿನ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ಯುಕೆ ಕೋರ್ಟ್ ತೀರ್ಪು ನೀಡಿತು. ಲಂಡನ್ ವೆಸ್ಟ್ ಮಿನಿಸ್ಟರ್ ಬ್ಯಾಂಕ್ ನಲ್ಲಿರುವ ನಿಜಾಮನಿಗೆ  ಸೇರಿದ ಸಂಪತ್ತು ತನಗೆ ಸೇರಿದ್ದು ಎಂದು ಪಾಕಿಸ್ತಾನ ಇಂಗ್ಲೆಂಡ್  ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.ಆದರೆ ಹೈದರಾಬಾದ್ ನಿಜಾಮನ ಸಂಪತ್ತು ಭಾರತಕ್ಕೆ ಸೇರಿದ್ದು ಎಂದು ಇಂಗ್ಲೆಂಡ್ ಕೋರ್ಟ್ ತೀರ್ಪು ನೀಡುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿತು.  ಹೈದರಾಬಾದಿನ 7ನೇ ನಿಜಾಮ 1948ರಲ್ಲಿ ಒಂದು ಮಿಲಿಯನ್ ಪೌಂಡ್ ಹಣವನ್ನು ಲಂಡನ್ ಬ್ಯಾಂಕ್ ಗೆ ವರ್ಗಾಯಿಸಿದ್ದರು. ಇದರ ಮೌಲ್ಯ ಈಗ 35 ಮಿಲಿಯನ್ ಪೌಂಡ್. ಐತಿಹಾಸಿಕ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)



No comments:

Post a Comment