ನಾನು ಮೆಚ್ಚಿದ ವಾಟ್ಸಪ್

Sunday, October 20, 2019

ಇಂದಿನ ಇತಿಹಾಸ History Today ಅಕ್ಟೋಬರ್ 20

2019: ನವದೆಹಲಿ: ಜನ ಸಾಮಾನ್ಯರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಪಾಕಿಸ್ತಾನದ ಕ್ರಮಕ್ಕೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದ ತಂಗ್ಧರ್ ವಿಭಾಗದಲ್ಲಿ ಉಗ್ರ ನೆಲೆಗಳ ಮೇಲೆ  2019 ಅಕ್ಟೋಬರ್ 20 ಭಾನುವಾರ ಫಿರಂಗಿದಾಳಿ ನಡೆಸಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯಲ್ಲಿ ಕನಿಷ್ಠ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದೆ. ದಾಳಿಯಲ್ಲಿ ಹಲವು ಭಯೋತ್ಪಾದಕರ ಜೊತೆಗೆ ಕನಿಷ್ಠ -೧೦ ಪಾಕಿಸ್ತಾನಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಕಟಿಸಿದರು. ಸಾವು ನೋವುಗಳ ಬಗ್ಗೆ ಇನ್ನೂ ವರದಿಗಳ ಬರುತ್ತಿದ್ದು, ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಭಾರತದ ಒಳಕ್ಕೆ ಭಯೋತ್ಪಾದಕರಿಗೆ ನುಸುಳಲು ಪಾಕಿಸ್ತಾನಿ ಸೇನೆ ನೀಡುತ್ತಿದ್ದ ಬೆಂಬಲವನ್ನು ನಿಷ್ಕ್ರಿಯಗೊಳಿಲು ಭಾರತೀಯ ಸೇನೆ ಪ್ರತೀಕಾರದ ಕ್ರಮ ಕೈಗೊಂಡಿತು ಎಂದು ರಾವತ್ ತಿಳಿಸಿದರು. ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತೀಯ ಸೇನೆಯು ಫಿರಂಗಿಗಳನ್ನು ಬಳಸಿದ್ದು, ಲಷ್ಕರ್--ತೊಯ್ಬಾ (ಎಲ್ ಇಟಿ), ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಶ್--ಮೊಹಮ್ಮದ್ (ಜೆಇಎಂ) ಇತ್ಯಾದಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿದ್ದ ನೀಲಂ ಕಣಿವೆಯ ಭಯೋತ್ಪಾದಕ ಶಿಬಿರಗಳನ್ನು ನಾಶ ಪಡಿಸಿತು. ಭಾರತೀಯ ಸೇನೆಯ ಪ್ರತೀಕಾರದ ದಾಳಿಯಲ್ಲಿ ಪಾಕಿಸ್ತಾನದ ಕನಿಷ್ಠ -೧೦ಮಂದಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ರಾವತ್ ಹೇಳಿದರು. ಭಾರೀ ಸಂಖ್ಯೆಯ ಭಯೋತ್ಪಾದಕರು ತೀವ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ಅನುಸರಿಸಿ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯ ಜುರಾ, ಅತ್ಮುಗಂ, ಕುಂಡಲಸಾಹಿ ಮತ್ತು ಇತರ ಕಡೆಗಳಲ್ಲಿನ ಉಗ್ರ ಶಿಬಿರಗಳನ್ನು ಗುರಿಯಾಗಿಟ್ಟು ಸೇನೆ ಫಿರಂಗಿ ದಾಳಿ ನಡೆಸಿತು ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2019: ಅಬುಧಾಬಿ: ವಿಶ್ವದ ಅತ್ಯಂತ ಹಳೆಯದು ಎಂದು ಪ್ರಾಕ್ತನತಜ್ಞರು ಅಭಿಪ್ರಾಯಪಟ್ಟಿರುವ, ,೦೦೦ ವರ್ಷಗಳಷ್ಟು ಹಳೆಯದಾದನೈಸರ್ಗಿಕ ಮುತ್ತುಅಬುಧಾಬಿಯಲ್ಲಿ ಪತ್ತೆಯಾಗಿದ್ದು ಅದನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದು ಅಧಿಕಾರಿಗಳು 2019 ಅಕ್ಟೋಬರ್ 20ರ ಭಾನುವಾರ ಇಲ್ಲಿ ತಿಳಿಸಿದರು. ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿಯಾದ ಮರಾವಾ ದ್ವೀಪದಲ್ಲಿ ಉತ್ಖನನ ಮಾಡುವಾಗ ಕೋಣೆಯೊಂದರ ನೆಲದಡಿಯಲ್ಲಿ ನೈಸರ್ಗಿಕ ಮುತ್ತು ಪತ್ತೆಯಾಗಿದ್ದು, ಇದು ದೇಶದಲ್ಲಿ ಕಂಡುಬರುವ ಆರಂಭಿಕ ವಾಸ್ತುಶಿಲ್ಪವನ್ನು ಬೆಳಕಿಗೆ ತಂದಿತು. "ಮುತ್ತು ಬಂದಿರುವ ಪದರಗಳು ನವಶಿಲಾಯುಗದ ಅವಧಿಯಲ್ಲಿ ಕ್ರಿ.ಪೂ ೫೮೦೦-೫೬೦೦ರಷ್ಟು ಇಂಗಾಲವನ್ನು ಹೊಂದಿವೆ" ಎಂದು ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ತಿಳಿಸಿತು. "ಅಬುಧಾಬಿಯಲ್ಲಿ ವಿಶ್ವದ ಅತ್ಯಂತ ಹಳೆಯ ಮುತ್ತುಗಳ ಪತ್ತೆಯು ನಮ್ಮ ಇತ್ತೀಚಿನ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವು ಆಳವಾದ ಬೇರುಗಳನ್ನು ಹೊಂದಿದ್ದು ಅದು ಇತಿಹಾಸಪೂರ್ವದ ಉದಯದವರೆಗೆ ವಿಸ್ತರಿಸಿದೆ ಎಂಬುದನ್ನು ಸಾಬೀತು ಪಡಿಸಿದೆ" ಎಂದು ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷ ಮೊಹಮ್ಮದ್ ಅಲ್-ಮುಬಾರಕ್ ಹೇಳಿದರು. ನವಶಿಲಾಯುಗದ ಕಲ್ಲಿನ ರಚನೆಗಳಿಂದ ಕೂಡಿದ ಮರಾವಾ ತಾಣದ ಉತ್ಖನನವು ಪಿಂಗಾಣಿ, ಶೆಲ್ ಮತ್ತು ಕಲ್ಲಿನಿಂದ ಮಾಡಿದ ಮಣಿಗಳು ಮತ್ತು ಫ್ಲಿಂಟ್ ಬಾಣದ ಮೊನೆಗಳನ್ನು ಸಹ ಪತ್ತೆ ಹಚ್ಚಿತು. . (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2019: ಅಹ್ಮದಾಬಾದ್:  ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಹಿಂದೂ ಸಂಘಟನೆಯ ನಾಯಕ ಕಮಲೇಶ್ ತಿವಾರಿ ಹತ್ಯೆಯ ಮುಖ್ಯ ಸಂಚುಕೋರರಲ್ಲಿ ಒಬ್ಬ ಎರಡು ತಿಂಗಳುಗಳ ಹಿಂದಿನವರೆಗೂ ದುಬೈಯಲ್ಲಿ ಕಂಪ್ಯೂಟರ್ ಆಪರೇಟರ್ ಅಗಿ ಕೆಲಸ ಮಾಡುತ್ತಿದ್ದ ಮತ್ತು ಕುಟುಂಬದ ವಿವಾಹ ಸಮಾರಂಭ ಒಂದಕ್ಕಾಗಿ ಗುಜರಾತಿನ ಸೂರತ್ತಿಗೆ ಹಿಂತಿರುಗಿದ್ದ. ಆತ ಮತ್ತು ಸಂಗಡಿಗರು ಖರೀದಿಸಿದ್ದ ಸಿಹಿ ತಿಂಡಿಗಳಬಾಕ್ಸ್ಅವರ ಬಂಧನಕ್ಕೆ ದಾರಿ ಸುಗಮಗೊಳಿಸಿತು ಎಂಬುದು ಬೆಳಕಿಗೆ ಬಂದಿತು.೨೩ರ ಹರೆಯದ ಸೂರತ್ ನಗರದ ಲಿಂಬಾಯತ್ ಪ್ರದೇಶದ ಝಿಲ್ಲಾನಿ ಮಂಜಿಲ್ ನಿವಾಸಿ ರಶೀದ್ ಪಠಾಣ್ ಮತ್ತು ಆತನ ನೆರೆಹೊರೆ ವ್ಯಕ್ತಿ ಮೌಲಾನಾ ಸಲೀಂ ಶೇಖ್ (೨೪) ಇಬ್ಬರನ್ನೂ  2019 ಅಕ್ಟೋಬರ್ 19ರ ಶನಿವಾರ ಅಹ್ಮದಾಬಾದಿನಲ್ಲಿ ಬಂಧಿಸಲಾಗಿದ್ದು, ಅಹ್ಮದಾಬಾದಿಗೆ ಕರೆ ತರಲಾಯಿತು. ಶೇಖ್ನನ್ನು ಇತರ ನಾಲ್ವರ ಜೊತೆಗೆ ಕಮಲೇಶ್ ತಿವಾರಿ ೨೦೧೫ರಲ್ಲಿ ಮಾಡಿದ್ದ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣದ ವಿಡಿಯೋ ತೋರಿಸಿ ತೀವ್ರಗಾಮಿಯನ್ನಾಗಿ ಪರಿವರ್ತನೆ ಮಾಡಲಾಗಿತ್ತು ಎಂದು ಕೊಲೆ ಪ್ರಕರಣದ ಬಗ್ಗೆ ವಿವರಗಳನ್ನು ನೀಡುತ್ತಾ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒಪಿ ಸಿಂಗ್ ತಿಳಿಸಿದರು. ಸಿಂಗ್ ಅವರ ಪ್ರಕಾರ ರಶೀದ್ ಕೊಲೆಯ ಯೋಜನೆಯನ್ನು ರೂಪಿಸಿದ್ದರೆ, ಫೈಝಾನ್ ಸೂರತ್ ನಗರದ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಿದ್ದ. ಇವರಿಬ್ಬರ ಬಂಧನದಿಂದ ಕೊಲೆ ಸಂಚು ಸೂರತ್ ನಗರದಲ್ಲೇ ರಶೀದ್ ದುಬೈಯಿಂದ ವಾಪಸಾದ ಬೆನ್ನಲ್ಲೇ ರೂಪುಗೊಂಡಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ಸೂರತ್ ಪೊಲೀಸ್ ಇಲಾಖೆಯ ಅಪರಾಧ ಶಾಖೆಯ ಹಿರಿಯ ಅಧಿಕಾರಿ ನುಡಿದರು. . (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2019: ಬೆಂಗಳೂರು: ಮಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆ, ಆರು ನಗರ ಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್ ಸೇರಿದಂತೆ ಒಟ್ಟು ೧೪ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ  2019 ಅಕ್ಟೋಬರ್ 20 ಭಾನುವಾರ ಘೋಷಿಸಿತು. ಇದರ ಜೊತೆಗೆ ಒಂದು ಜಿಲ್ಲಾ ಪಂಚಾಯತ್ ಹಾಗೂ ನಾಲ್ಕು ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳಿಗೂ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸಿತು.  ನವಂಬರ್ ೧೨ ಕ್ಕೆ ರಾಮನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ ಹಾಗೂ ಬಳ್ಳಾರಿಯ ೧೪ ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದೆ.  ಅಕ್ಟೋಬರ್ ೨೪ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿರುತ್ತದೆ. ನವಂಬರ್ ೦೨ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ನವಂಬರ್ ೦೪ ಕೊನೆಯ ದಿನವಾಗಿರುತ್ತದೆ. ನವಂಬರ್ ೧೨ರಂದು ಅಗತ್ಯವಿರುವ ಕಡೆಗಳಲ್ಲಿ ಮತದಾನ ನಡೆಯಲಿದೆ. ಮರುಮತದಾನ ಅಗತ್ಯವಿರುವ ಕಡೆಗಳಲ್ಲಿ ನವಂಬರ್ ೧೩ರಂದು ಮತದಾನ ನಡೆಯಲಿದೆ. ನವಂಬರ್ ೧೪ರ ಗುರುವಾರದಂದು ಆಯಾ ತಾಲೂಕುಗಳ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದ್ದು ಅದೇ ದಿನ ಫಲಿತಾಂಶವೂ ಪ್ರಕಟಗೊಳ್ಳಲಿದೆ. . (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)



No comments:

Post a Comment