ನಾನು ಮೆಚ್ಚಿದ ವಾಟ್ಸಪ್

Monday, October 7, 2019

ಇಂದಿನ ಇತಿಹಾಸ History Today ಅಕ್ಟೋಬರ್ 07

2019: ನವದೆಹಲಿ:  ಭಾರತ ಹಾಗೂ ಸ್ವಿಜರ್ಲೆಂಡ್ ನಡುವಿನ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿ ಭಾರತದ ನಿವಾಸಿಗಳು ಸ್ವಿಜರ್ಲೆಂಡ್ ಖಾಸಗಿ ಬ್ಯಾಂಕುಗಳಲ್ಲಿ ಹೊಂದಿರುವ ಹಣಕಾಸು ಖಾತೆಗಳ ವಿವರವನ್ನು ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ  ಕೊನೆಗೂ ಸಫಲವಾಗಿದ್ದು, ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿಯ ಮೊದಲ ಕಂತು ಕೇಂದ್ರದ ಕೈಸೇರಿದೆ ಎಂದು ಸುದ್ದಿ ಮೂಲಗಳು 2019 ಅಕ್ಟೋಬರ್ 07ರ ಸೋಮವಾರ  ತಿಳಿಸಿದವು.  ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಎನ್ ಡಿಎ ಸರ್ಕಾರ ದೀರ್ಘ ಕಾಲದಿಂದ ನಡೆಸಿದ್ದ ಯತ್ನಗಳಿಗೆ ಯಶಸ್ಸು ಸಿಕ್ಕಿದಂತಾಯಿತು. ವಿದೇಶಿ ಬ್ಯಾಂಕ್ಗಳಲ್ಲಿ ಸಂಗ್ರಹಿಸಲಾಗಿರುವ ಭಾರತದ ಕಪ್ಪು ಹಣವನ್ನು ಮರಳಿ ದೇಶಕ್ಕೆ ಹಿಂದಿರುಗಿಸುವ ಕೇಂದ್ರ ಸರ್ಕಾರದ ನಿರಂತರ ಹೋರಾಟದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಲಾಯಿತು. ಪ್ರಸ್ತುತ ನೀಡಲಾಗಿರುವ ಪಟ್ಟಿಯಲ್ಲಿ ರಾಜಕಾರಣಿಗಳು, ವ್ಯವಹಾರಸ್ಥರು ಸೇರಿದಂತೆ ಹಲವಾರು ಗಣ್ಯರ ಹೆಸರು ಇದೆ ಎನ್ನಲಾಯಿತು. ಎಇಒಐ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ತಮ್ಮ ದೇಶದಲ್ಲಿನ ಭಾರತೀಯರ ಹಣಕಾಸು ಖಾತೆಗಳ ಮಾಹಿತಿಯನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಂಡಿತು. ಈ ರೀತಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾದ  75 ದೇಶಗಳಲ್ಲಿ ಭಾರತವೂ ಸೇರಿದೆ  ಎಂದು ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

2019: ಸ್ಟಾಕ್ ಹೋಮ್: ಆಮ್ಲಜನಕದ ಲಭ್ಯತೆಯನ್ನು ಜೀವಕೋಶಗಳು ಹೇಗೆ ಗ್ರಹಿಸುತ್ತವೆ ಮತ್ತು
ಅದಕ್ಕೆ  ಹೊಂದಿಕೊಳ್ಳುತ್ತವೆ ಎಂಬ ವಿಷಯದ ಕುರಿತ ಆವಿಷ್ಕಾರಗಳಿಗಾಗಿ ಅಮೆರಿಕದ ಸಂಶೋಧಕರಾದ ವಿಲಿಯಂ ಕೈಲಿನ್ ಹಾಗೂ ಗ್ರೆಗ್ ಸೆಮೆನ್ಜಾ ಮತ್ತು ಬ್ರಿಟನ್ ಪೀಟರ್ ರಾಟ್ಕ್ಲಿಫ್  ಅವರು ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ನೊಬೆಲ್ ಸಂಸ್ಥೆಯು 2019ರ ಅಕ್ಟೋಬರ್ 07 ಸೋಮವಾರ ಪ್ರಕಟಿಸಿತು. ಆಮ್ಲಜನಕದ ಮಟ್ಟವು ಜೀವಕೋಶಗಳ ಚಯಾಪಚಯ ಮತ್ತು ಶಾರೀರಿಕ ಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಮ್ಮ ತಿಳುವಳಿಕೆಗೆ ಅವರು ಆಧಾರವನ್ನು ಸ್ಥಾಪಿಸಿದ್ದಾರೆ" ಎಂದು ತೀರ್ಪುಗಾರರು ಹೇಳಿದರು, ಅವರ ಆವಿಷ್ಕಾರಗಳು "ರಕ್ತಹೀನತೆ, ಕ್ಯಾನ್ಸರ್ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಹೊಸ ತಂತ್ರಗಳನ್ನು ನೀಡುವಲ್ಲಿ ದಾರಿ ಮಾಡಿಕೊಟ್ಟಿದೆ" ಎಂದು ಅವರು ನುಡಿದರು. ನೊಬೆಲ್ ಪಾರಿತೋಷಕದಲ್ಲಿ 9 ಮಿಲಿಯನ್ ಕ್ರೊನೋರ್ (ಸುಮಾರು 65 ಕೋಟಿ ರೂಪಾಯಿ) ನಗದು ಹಣ ಒಳಗೊಂಡಿರುತ್ತದೆ. 65 ಕೋಟಿ ಹಣವನ್ನು ಮೂವರು ವಿಜ್ಞಾನಿಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಕರೋಲಿಂಸ್ಕಾ ಇನ್ಸ್ಟಿಟ್ಯೂಟ್ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿಹಸಿರು  ಕಾರ್ಯಕರ್ತರಿಗೆ ಒಳ್ಳೆಯ ಸುದ್ದಿಯೊಂದರಲ್ಲಿ, ಸುಪ್ರೀಂ ಕೋರ್ಟ್ 2019 ಅಕ್ಟೋಬರ್  07ರ ಸೋಮವಾರ ಮುಂಬೈಯ ಆರೇ ಕಾಲೋನಿಯಲ್ಲಿ ಮೆಟ್ರೊ ಕಾರ್  ಶೆಡ್  ಸ್ಥಾಪಿಸಲು ಮರಗಳನ್ನು ಕಡಿಯುವುದಕ್ಕೆ ತಡೆ ನೀಡಿ, ಯಥಾಸ್ಥಿತಿ ಪಾಲನೆಗೆ ಆದೇಶ ನೀಡಿತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ವಿಷಯವನ್ನು  ಸಮಗ್ರವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳಿ,  ವಿಷಯವನ್ನು ಅಕ್ಟೋಬರ್ ೨೧ ರಂದು ತನ್ನ ಅರಣ್ಯ ಪೀಠದ ಮುಂದೆ ವಿಚಾರಣೆಗೆ  ನಿಗದಿ  ಪಡಿಸಿತು.  "ಈಗ ಏನನ್ನೂ ಕತ್ತರಿಸಬೇಡಿಎಂದು ನ್ಯಾಯಪೀಠ   ನಿರ್ದೇಶಿಸಿತು. ಮರಗಳ  ನಾಶವನ್ನು  ಪ್ರತಿಭಟಿಸಿದ್ದಕ್ಕಾಗಿ  ಯಾರಾದರೂ ಇನ್ನೂ ಬಂಧನದಲ್ಲಿದ್ದರೆವೈಯಕ್ತಿಕ ಬಾಂಡ್ಗಳ  ಮೇಲೆ  ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆಜ್ಞಾಪಿಸಿತು.  ಆರೇಯಲ್ಲಿ ಮರ ಕಡಿಯುವುದನ್ನು ವಿರೋಧಿಸಿ ಬಂಧನಕ್ಕೊಳಗಾದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ  ಎಂದು  ವಿಚಾರಣೆಯ ವೇಳೆ ಮಹಾರಾಷ್ಟ್ರ ಸರ್ಕಾರವು ನ್ಯಾಯಪೀಠಕ್ಕೆ ತಿಳಿಸಿತು.  ರಾಜ್ಯ  ಸರ್ಕಾರದ  ಪರವಾಗಿ  ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು  ತಮಗೆ ಎಲ್ಲಾ ದಾಖಲೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿ,  ಪ್ರಕರಣವು ತೀರ್ಮಾನವಾಗುವವರೆಗೂ ಆರೇಯಲ್ಲಿ ಏನನ್ನೂ ಕಡಿಯುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರುಆರೇ  ಅರಣ್ಯವನ್ನು ರಾಜ್ಯ ಸರ್ಕಾರವು  "ವರ್ಗೀಕರಿಸದ ಅರಣ್ಯಎಂದು ಪರಿಗಣಿಸಿದೆ ಮತ್ತು ಅಲ್ಲಿ ಮರಗಳನ್ನು ಕಡಿಯುವುದು ಕಾನೂನುಬಾಹಿರ ಎಂದು  ಸಾರ್ವಜನಿಕ  ಹಿತಾಸಕ್ತಿ ಖಟ್ಲೆಯ ( ಪಿಐಎಲ್) ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದರುಆದರೆಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಅವಲೋಕಿಸಿದ ನಂತರನ್ಯಾಯಪೀಠವು ಆರೆ ಪ್ರದೇಶವು ಅಭಿವೃದ್ಧಿಯಿಲ್ಲದ ವಲಯವಾಗಿದೆ ಮತ್ತು ಅರ್ಜಿದಾರರು ಹೇಳಿದಂತೆ  ಪರಿಸರ ಸೂಕ್ಷ್ಮ ವಲಯವಲ್ಲ ಎಂದು ಅಭಿಪ್ರಾಯಪಟ್ಟಿತು.  (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).

2019: ಮುಂಬೈ:  ನಗರದಹಸಿರು ಶ್ವಾಸಕೋಶದಲ್ಲಿ ಹೆಚ್ಚಿನ ಮರಗಳನ್ನು ಕಡಿಯುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ಕೆಲವೇ ಗಂಟೆಗಳ ನಂತರ, ಉತ್ತರ ಮುಂಬೈನ ಆರೇ ಕಾಲೋನಿಯಲ್ಲಿ ,೧೪೧ ಮರಗಳನ್ನು ಕಾರ್ ಶೆಡ್ ನಿರ್ಮಾಣಕ್ಕಾಗಿ ಈಗಾಗಲೇ ಕತ್ತರಿಸಲಾಗಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ (ಎಂಎಂಆರ್ ಸಿ)  2019 ಅಕ್ಟೋಬರ್ 07ರ ಸೋಮವಾರ ಪ್ರಕಟಿಸಿತು . ಸುಪ್ರೀಂ ಕೋರ್ಟ್ ಯಾವುದೇ ಹೆಚ್ಚಿನ ನಿರ್ದೇಶನಗಳನ್ನು ನೀಡುವವರೆಗೂ ಸ್ಥಳದಲ್ಲಿ ಭವಿಷ್ಯದ ಮರ ಕಡಿಯುವಿಕೆಯನ್ನು ಕೈಗೊಳ್ಳಲಾಗುವುದಿಲ್ಲ . ಆದರೆ ಮರವನ್ನು ತೆರವುಗೊಳಿಸಿದ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಂಎಂಆರ್ ಸಿ ಪ್ರಕಟಣೆ ತಿಳಿಸಿತು.  ಎಂಎಂಆರ್ ಸಿ  ಹೇಳಿಕೆಯು "ಯಥಾಸ್ಥಿತಿ (ಉಳಿಸಿಕೊಳ್ಳಬೇಕು) ... ಎಂಬ ಸುಪ್ರೀಂಕೋರ್ಟ್ ಆದೇಶವು  ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಮಾತ್ರ" ಎಂಬುದಾಗಿ ರಾಜ್ಯ ಸರ್ಕಾರವು ವ್ಯಕ್ತ ಪಡಿಸಿದ  ಅಭಿಪ್ರಾಯಕ್ಕೆ ಅನುಗುಣವಾಗಿರುವುದನ್ನು ದೃಢಪಡಿಸಿತು.ಈದಿನದ  ವಿಚಾರಣೆಯ ಸಮಯದಲ್ಲಿ, ಮರಗಳನ್ನು ಕಡಿಯುವುದರ ವಿರುದ್ಧದ ಅರ್ಜಿಯನ್ನು ಆಲಿಸಿದ ವಿಶೇಷ ಸುಪ್ರೀಂ ಕೋರ್ಟ್ ಪೀಠವು ಆರೇ ಪ್ರದೇಶವು "ಯಾವುದೇ   ಅಭಿವೃದ್ಧಿ ರಹಿತ ವಲಯ"  ಎಂದು  ಹೇಳಿತ್ತು. ಅರ್ಜಿದಾರರು ಹೇಳಿದಂತೆ  ಪರಿಸರ ಸೂಕ್ಷ್ಮ ವಲಯವಲ್ಲ ಎಂದು ಅದು ಅಭಿಪ್ರಾಯಪಟ್ಟಿತ್ತು.ಯಾವುದೇ ಅಭಿವೃದ್ಧಿ ರಹಿತ  ವಲಯದಲ್ಲಿ ನಿರ್ಮಾಣ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ. ಮೂಲ ಯೋಜನೆ ಪ್ರಕಾರ ,೬೪೬ ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು.  ಆದರೆ ಈದಿನ, ಮಹಾರಾಷ್ಟ್ರ ಸರ್ಕಾರವು  "ಕತ್ತರಿಸಬೇಕಾದದ್ದನ್ನು ಈಗಾಗಲೇ ಮಾಡಲಾಗಿದೆ",  ಈಗಾಗಲೇ ತೆರವುಗೊಳಿಸಿದ ಪ್ರದೇಶದಲ್ಲಿ ಶೆಡ್ ಅನ್ನು ನಿರ್ಮಿಸುವುದಾಗಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.  ಆರೇ  ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಎಂಎಂಆರ್ ಸಿ ಎಲ್  ಮರಗಳನ್ನು ಕಡಿಯಲು ಪ್ರಾರಂಭಿಸಿತ್ತು ಮತ್ತು  ಪರಿಸರ ಕಾರ್ಯಕರ್ತರ  ಮತ್ತು ಸ್ಥಳೀಯ ನಿವಾಸಿಗಳ ತೀವ್ರ ವಿರೋಧದ ನಡುವೆಯೂ ಹಸಿರು ವಲಯದಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡುವ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರವನ್ನು ರದ್ದುಗೊಳಿಸಲು ನಿರಾಕರಿಸಿತು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment