ನಾನು ಮೆಚ್ಚಿದ ವಾಟ್ಸಪ್

Tuesday, October 22, 2019

ಇಂದಿನ ಇತಿಹಾಸ History Today ಅಕ್ಟೋಬರ್ 22

2019: ನವದೆಹಲಿ: ಎರಡು ಮಾದರಿಯ ಪಟಾಕಿಗಳು ಮಾತ್ರವೇ ಕಾನೂನುಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸುವುದರೊಂದಿಗೆ ಪ್ರಸ್ತುತ ವರ್ಷದ ದೀಪಾವಳಿ ಸದ್ದು ಗದ್ದಲವಿಲ್ಲದೆ ದೀಪಾವಳಿಯಾಗಲಿದೆ. ’ಅನರ್ಮತ್ತು ಫುಲ್ಜಾರಿಗಳ ಹಸಿರು ಆವೃತ್ತಿ ಮಾತ್ರವೇ ಕಾನೂನು ಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸಿರುವುದರಿಂದ ಇವೆರಡೂ ಪಟಾಕಿಗಳೂ ಬಾರಿ ಸದ್ದು ಮಾಡದೆಮೌನಆಗಲಿವೆ. ಉಳಿದ ರಾಕೆಟ್ಗಳು, ಬಾಂಬುಗಳು ಮತ್ತು ಸದ್ದು ಮಾಡುವ ಇತರ ಎಲ್ಲ  ಪಟಾಕಿಗಳೂ ಬಾರಿ ನಿಷೇಧಕ್ಕೆ ಒಳಗಾದವು. ಈ ವಿಚಾರವನ್ನು ದೆಹಲಿಯಲ್ಲಿ 2019 ಅಕ್ಟೋಬರ್ 22ರ ಮಂಗಳವಾರ ಸ್ಪಷ್ಟ ಪಡಿಸಿರುವ ಪೊಲೀಸರುಪಟಾಕಿ ಖರೀದಿಗೆ ಮುನ್ನ ಪ್ರತಿಯೊಬ್ಬರೂ ಅಧಿಕೃತ ಮುದ್ರೆಯನ್ನು ಗಮನಿಸಿಕೊಳ್ಳಬೇಕುಎಂದು ಎಚ್ಚರಿಕೆ ನೀಡಿದರು. ಅಧಿಕೃತ ಮುದ್ರೆಯು ಕ್ಯೂಆರ್ ಕೋಡ್ನ್ನು (ಸ್ಪೆಷಲ್ ಕ್ವಿಕ್ ರೆಸ್ಪಾನ್ಸ್  ಕೋಡ್) ಅಥವಾ ಹಸಿರು ಲಾಂಛನವನ್ನು ಹೊಂದಿರುತ್ತದೆ. ೫೦ಫುಲ್ಜಾರಿಗಳುಅಥವಾ ಐದುಅನರ್ಗಳು ಇರುವ ಒಂದು ಪೊಟ್ಟಣಕ್ಕೆ ೨೫೦ ರೂಪಾಯಿ ಬೆಲೆ ಇರುತ್ತದೆ. ಇವು ಎರಡು ಬಣ್ಣಗಳಲ್ಲಿ ಬರುತ್ತವೆ.   ‘ಹಸಿರು ಪಟಾಕಿಗಳಿಗೆ (ಪರಿಸರ ಮಿತ್ರ ಪಟಾಕಿಗಳು) ಮಾತ್ರವೇ ಅನುಮತಿ ನೀಡಲಾಗಿದೆ. ಇವುಗಳನ್ನು ಮಾರುವ ಮಾರಾಟಗಾರರ ತಪಾಸಣೆಗೆ ನಾವು ತಂಡಗಳನ್ನು ರಚಿಸಿದ್ದೇವೆ. ಯಾರಾದರೂ ಬೇರೆ ಮಾದರಿಯ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುಎಂದು ದೆಹಲಿ ಪೊಲೀಸರ ವಕ್ತಾರ ಎಂಎಸ್ ರಾಂಧವ ಹೇಳಿದರು. ಹಸಿರು ಪಟಾಕಿಗಳು ಎಂಬುದಾಗಿ ಕರೆಯಲಾಗಿರುವ ಪಟಾಕಿಗಳು ಶೇಕಡಾ ೩೦ರಷ್ಟು ಕಡಿಮೆ ವಾಯುಮಾಲಿನ್ಯ ಉಂಟು ಮಾಡುತ್ತವೆ ಎಂದು ಸರ್ಕಾರವು ಪ್ರತಿಪಾದಿಸಿದೆ. ಚಳಿಗಾಲ ಬರುತ್ತಿರುವಂತೆಯೇ ದೆಹಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ವಿಭಾಗದಲ್ಲಿ ಭಯೋತ್ಪಾದಕರನ್ನು ಭಾರತಕ್ಕೆ ನುಸುಳುವಂತೆ ಮಾಡುವ ಪಾಕಿಸ್ತಾನಿ ಸೇನೆಯ ಯತ್ನವನ್ನು ಭಾರತೀಯ ಸೇನೆಯು 2019 ಅಕ್ಟೋಬರ್ 22ರ ಮಂಗಳವಾರ ಭಗ್ನಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಸದೆ ಬಡಿಯಿತು. ಸಂದರ್ಭದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕಿರಿಯ ಅಧಿಕಾರಿಯೊಬ್ಬರು (ಜ್ಯೂನಿಯರ್ ಕಮಿಷನ್ಡ್ ಆಫೀಸರ್- ಜೆಸಿಒ) ಹುತಾತ್ಮರಾದರು. ಸುದ್ದಿ ಮೂಲಗಳ ಪ್ರಕಾರ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ಸಶಸ್ತ್ರ ಭಯೋತ್ಪಾದಕರ ತಂಡವೊಂದು ನಿಯಂತ್ರಣ ರೇಖೆಯನ್ನು ದಾಟಿ ಸುಮಾರು ೪೦೦ ಮೀಟರುಗಳಷ್ಟು ಭಾರತೀಯ ಪ್ರದೇಶದೊಳಕ್ಕೆ ನುಸುಳಿತ್ತು. ಅಷ್ಟರಲ್ಲಿ ಭಾರತೀಯ ಸೇನೆ ಅವರನ್ನು ಅಡ್ಡ ಗಟ್ಟಿತು. ತೀವ್ರ ಗುಂಡಿನ ಹಾರಾಟ ನಡೆದು ಮೂವರು ಭಯೋತ್ಪಾದಕರನ್ನು ಕೊಂದು ಹಾಕುವ ಮೂಲಕ ಪಾಕ್ ಸೇನೆ ಬೆಂಬಲಿತ ಅತಿಕ್ರಮಣ ಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿತು.  ಮೂವರು ಭಯೋತ್ಪಾದಕರ ಹೆಣಗಳು ಉರುಳುತ್ತಿದ್ದಂತೆಯೇ ಉಳಿದ ನುಸುಳುಕೋರರು ರಕ್ಷಣೆಗಾಗಿ ಹಿಂದಕ್ಕೆ ಓಡಿದರು ಎಂದು ಸುದ್ದಿ ಮೂಲಗಳು ಹೇಳಿದವು. ಭಾರತೀಯ ಸೇನೆಯ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಫಿರಂಗಿದಾಳಿ ನಡೆಸಿ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಸಂಭವಿಸಿದ ಮೊದಲ ಘರ್ಷಣೆ ಇದಾಗಿದೆ. ಪಾಕಿಸ್ತಾನಿ ಸೇನೆಯು ತಂಗ್ಧರ್ ವಿಭಾಗದಲ್ಲಿ ನುಸುಳುಕೋರರಿಗೆ ನೆರವಾಗುವ ಸಲುವಾಗಿ ಕದನವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ದಾಳಿಯನ್ನು ನಡೆಸಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಬೆಂಗಳೂರು/ನವದೆಹಲಿ: ಹತ್ತು ಸರ್ಕಾರಿ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳಲ್ಲಿ ವಿಲೀನಗೊಳಿಸುವ ಸರ್ಕಾರದ ಉಪಕ್ರಮವನ್ನು ವಿರೋಧಿಸಿ ಸರ್ಕಾರಿ ಮತ್ತು ಖಾಸಗಿ ವಲಯಗಳ ಬ್ಯಾಂಕುಗಳ ನೌಕರರು ಮುಷ್ಕರ ನಡೆಸಿದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶಾದ್ಯಂತ 2019 ಅಕ್ಟೋಬರ್ 22ರ ಮಂಗಳವಾರ ಬ್ಯಾಂಕ್ ಸೇವೆಗಳು ಅಸ್ತವ್ಯಸ್ತಗೊಂಡವು. ಬ್ಯಾಂಕ್ ಕಚೇರಿಯ ಸೇವೆಗಳ ಜೊತೆಗೆ ಹಲವೆಡೆಗಳಲ್ಲಿ ಎಟಿಎಂ ಸೇವೆಗಳೂ ಲಭಿಸದೆ ಸಾರ್ವಜನಿಕರು ಪರದಾಡಿದರು. "ಬ್ಯಾಂಕುಗಳ ವಿಲೀನದ ಬಳಿಕ ನಾವು ನಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರದ ಕ್ರಮವು ನಿರುದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ನೌಕರರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ" ಎಂದು ಬಿಹಾರ ಬ್ಯಾಂಕ್ ಆಫ್ ಬರೋಡಾದ ಪ್ರಧಾನ ಕಾರ್ಯದರ್ಶಿ ಜಿಯಾನ್ ಲಾಲ್ ಹೇಳಿದರು. "ನಮ್ಮ ಗ್ರಾಹಕರಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ವಿಲೀನಗೊಳಿಸುವ ಕ್ರಮವು ಕಾರ್ಪೊರೇಟ್ಗಳಿಗೆ ಮಾತ್ರ ಅನುಕೂಲ ಮಾಡುತ್ತದೆ ಮತ್ತು ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದರು. "ನಾವು ಬ್ಯಾಂಕುಗಳು ಲಾಭ ಗಳಿಸಲು ಬುಡ ಮಟ್ಟದಲ್ಲಿ ಕೆಲಸ ಮಾಡಿದ್ದೇವೆ. ವಿಲೀನವು ಸರಿಯಾದ ಕ್ರಮವಲ್ಲ. ಸಾರ್ವಜನಿಕರಿಗೆ ನೈಜ ಚಿತ್ರವನ್ನು ತೋರಿಸಲಾಗುತ್ತಿಲ್ಲಎಂದು ಪಾಟ್ನಾದ ಇನ್ನೊಬ್ಬ ಬ್ಯಾಂಕ್ ನೌಕರ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ನವದೆಹಲಿ: ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆ ನಡೆಸಿರುವ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ  ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ 2019 ಅಕ್ಟೋಬರ್ 22ರ ಮಂಗಳವಾರ ಶರತ್ತಿನ ಜಾಮೀನು ಮಂಜೂರು ಮಾಡಿತು. ೬೧ ದಿನಗಳ ಹಿಂದೆ ಆಗಸ್ಟ್ ೨೧ರಂದು ಸಿಬಿಐಯಿಂದ ಬಂಧಿತರಾದ ೭೪ರ ಹರೆಯದ ಕಾಂಗ್ರೆಸ್ ನಾಯಕನಿಗೆ ಇದರೊಂದಿಗೆ ಅಲ್ಪ ನಿರಾಳತೆ ಲಭಿಸಿದಂತಾಯಿತು. ಏನಿದ್ದರೂ, ಚಿದಂಬರಂ ಅವರು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೆರೆಮನೆಯಿಂದ ಹೊರಕ್ಕೆ ಬರುವಂತಿಲ್ಲ. ಜಾರಿ ನಿರ್ದೇಶನಾಲಯವು (ಇಡಿ) ಕೂಡಾ ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸಿ ತನ್ನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದು, ಅಕ್ಟೋಬರ್ ೨೪ರವರೆಗೆ ತನ್ನ ವಶದಲ್ಲಿ ಇಟ್ಟುಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯವು ಅನುಮತಿ ನೀಡಿತ್ತು. ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ದ್ವಿಸದಸ್ಯ ಸುಪ್ರೀಂಕೋರ್ಟ್ ಪೀಠವು ಮಾಜಿ ಗೃಹ ಹಾಗೂ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟಿನ ಸೆಪ್ಟೆಂಬರ್ ೩೦ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ, ಒಂದು ಲಕ್ಷ ರೂಪಾಯಿಗಳ ಜಾಮೀನು ಬಾಂಡ್ ಮತ್ತು ಎರಡು ಖಾತರಿಗಳನ್ನು ಒದಗಿಸುವಂತೆ ಚಿದಂಬರಂ ಅವರಿಗೆ ನಿರ್ದೇಶನ ನೀಡಿತು. ಅವರು ತಮ್ಮ ಪಾಸ್ ಪೋರ್ಟ್ನ್ನು ಇನ್ನೂ ನ್ಯಾಯಾಲಯಕ್ಕೆ ಒಪ್ಪಿಸಿಲ್ಲವಾದರೆ ಅದನ್ನು ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಸುಪ್ರೀಂಪೀಠವು ಸೂಚಿಸಿತು. ಮಾಜಿ ಸಚಿವ ಚಿದಂಬರಂ ಅವರು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ನೆಲೆಯಲ್ಲಿ ಜಾಮೀನು ನಿರಾಕರಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಪೀಠವು ಮೇಲ್ಮನವಿ ವಿಚಾರಣೆ ಬಳಿಕ ತಳ್ಳಿಹಾಕಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ನವದೆಹಲಿ: ಜಮ್ಮು ಮತು ಕಾಶ್ಮೀರ ರಾಜ್ಯದ ಪ್ರಸ್ತುತ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಅಕ್ಟೋಬರ್ ೩೧ರಂದು ರಾಜ್ಯವು ಕೇಂದ್ರಾಡಳಿತ ಪ್ರದೇಶವಾಗಿ  ವರ್ಗಿಕರಿಸಲ್ಪಟ್ಟ ಬಳಿಕಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮೊದಲ ಲೆಫ್ಟಿನೆಂಟ್ ಗವರ್ನರ್  (ಎಲ್ ಜಿ) ಆಗಿ ನೇಮಕಗೊಳ್ಳುವ ಸಾಧ್ಯತೆಗಳು ಉಜ್ವಲವಾಗಿವೆ. ‘ಉನ್ನತ ಹುದ್ದೆಗೆ ಇತರ ಹೆಸರುಗಳನ್ನು ಕೂಡಾ ಪರಿಶೀಲಿಸಲಾಗುತ್ತಿದೆ. ಆದರೆ ಮಲಿಕ್ ಅವರ ಹೆಸರು ಮುಂಚೂಣಿಯಲ್ಲಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆಎಂದು ಸರ್ಕಾರಿ ಮೂಲವೊಂದು 2019 ಅಕ್ಟೋಬರ್ 22ರ ಮಂಗಳವಾರ ಸುದ್ದಿ ಸಂಸ್ಥೆಗೆ ತಿಳಿಸಿತು. ಪ್ರಸ್ತುತ ಸ್ಥಿತಿಯಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ರಾಜ್ಯವನ್ನು ಚೆನ್ನಾಗಿ ಮುನ್ನಡೆಸುತ್ತಿರುವ ಮಲಿಕ್ ಅವರು ಲಭ್ಯವಿರುವ ಅತ್ಯುತ್ತಮ ಆಯ್ಕೆ ಎಂಬುದು ಸರ್ಕಾರದ ಭಾವನೆಯಾಗಿದೆಎಂದು ಮೂಲಗಳು ಹೇಳಿದವು. ಏನಿದ್ದರೂ, ಈದಿನ  ಮಲಿಕ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯೊಂದು ಅಂತಿಮ ಕ್ಷಣದಲ್ಲಿ ಅವರು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳ್ಳುವ ಸಾಧ್ಯತೆಯನ್ನು ತಪ್ಪಿಸಬಹುದೇ ಎಂಬ ಅನುಮಾನವನ್ನು ಕೂಡಾ ಹುಟ್ಟು ಹಾಕಿದೆ. ‘ದೇಶದಲ್ಲಿ ರಾಜ್ಯಪಾಲರ (ಗವರ್ನರ್) ಸ್ಥಾನವು ಅತ್ಯಂತ ದುರ್ಬಲವಾದುದಾಗಿದೆ. ಏಕೆಂದರೆ ಅವರಿಗೆ ಪತ್ರಿಕಾಗೋಷ್ಠಿ ನಡೆಸುವ ಅಥವಾ ಮನಃತುಂಬಿ ಮಾತನಾಡುವ ಹಕ್ಕು ಇಲ್ಲಎಂಬುದಾಗಿ ಮಲಿಕ್ ಅವರು ವಿವಾದಾತ್ಮಕ ಹೇಳಿಕೆ ನೀಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)



No comments:

Post a Comment