ನಾನು ಮೆಚ್ಚಿದ ವಾಟ್ಸಪ್

Sunday, October 13, 2019

ಇಂದಿನ ಇತಿಹಾಸ History Today ಅಕ್ಟೋಬರ್ 13

2019: ನವದೆಹಲಿ: ಇನ್ಸ್ಟಾಗ್ರಾಮ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಗಳ (ಫಾಲೋಯರ್ಸ್) ಸಂಖ್ಯೆ  2019 ಅಕ್ಟೋಬರ್ 13 ಭಾನುವಾರ ೩೦೦ ಲಕ್ಷದ/ ಕೋಟಿಯ (೩೦ ಮಿಲಿಯನ್) ಗಡಿ ದಾಟಿತು. ಇದರೊಂದಿಗೆ ಮೋದಿಯವರು ಫೊಟೋ ಹಂಚಿಕೊಳ್ಳುವ ಅಪ್ಲಿಕೇಶನ್ನಿನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಮೋದಿಯವರು ಇನ್ಸ್ಟಾಗ್ರಾಮ್ನಲ್ಲಿ ೩೦ ಮಿಲಿಯನ್ ಮೈಲಿಗಲ್ಲು ತಲುಪಿದ ಏಕೈಕ ಜಾಗತಿಕ ನಾಯಕರಾಗಿದ್ದಾರೆ. ಹಿಂಬಾಲಕರನ್ನು ಪಡೆಯುವಲ್ಲಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನೂ ಹಿಂದಿಕ್ಕಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಪ್ರಧಾನಿಯವರು ಟ್ವಟ್ಟರಿನಲ್ಲಿ ೫೦ ಮಿಲಿಯನ್ (೫೦೦ ಲಕ್ಷ) ಅನುಯಾಯಿಗಳ ಗಡಿಯನ್ನು ದಾಟಿದ್ದರು. ಪ್ರಧಾನಿ ಮೋದಿಯವರು ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯರಾಗಿದ್ದು, ನಿಯಮಿತವಾಗಿ ಪೋಸ್ಟ್ಗಳನ್ನು ಮತ್ತು ಅಪ್ ಡೇಟ್ಗಳನ್ನು ಮಾಡುತ್ತಿರುತ್ತಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಗಳ ಸಂಖೆಯ ೩೦ ಮಿಲಿಯನ್ ದಾಟಿದೆ. ಅವರು ಈಗ ಇನ್ಸ್ಟಾಗ್ರಾಮ್ನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕರಾಗಿದ್ದಾರೆ. ಹಿಂಬಾಲಕರನ್ನು ಗಳಿಸುವಲ್ಲಿ ಅವರು ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರಿಂದಲೂ ಮುಂದೆ ಸಾಗಿದ್ದಾರೆ. ಇದು ಅವರ ಜನಪ್ರಿಯತೆ ಮತ್ತು ಯುವಕರ ಜೊತೆಗಿನ ಸಂಪರ್ಕಕ್ಕೆ ಇನ್ನೊಂದು ಸಾಕ್ಷಿಯಾಗಿದೆಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಒಂದರಲ್ಲಿ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ಪುನಃಸ್ಥಾಪನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 13ರ ಭಾನುವಾರ ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು. ಮಹಾರಾಷ್ಟ್ರದ ಜಲಗಾಂವ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ೩೭೦ನೇ ವಿಧಿ ರದ್ದು ಪಡಿಸಿದ್ದಕ್ಕೆ ಸಂಬಂಧಿಸಿದಂತೆ ತಳೆದ ನಿಲುವಿಗಾಗಿ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (ಎನ್ಸಿಪಿ) ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತಮ್ಮ ಮೊಸಳೆ ಕಣ್ಣೀರಿನ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿರುವ ನಾಯಕರು ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ಪುನಃ ತರಬಲ್ಲರೇ? ಭಾರತದ ಜನರು ಅವರಿಗೆ ಹೀಗೆ ಮಾಡಲು ಅವಕಾಶ ನೀಡುತ್ತಾರೆಯೇ? ಭಾರತದ ಜನರು ಇದನ್ನು ಸ್ವೀಕರಿಸುತ್ತಾರೆಯೇ? ೩೭೦ನೇ ವಿಧಿಯನ್ನು ಪುನಃ ತರುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವಂತೆ ನಾನು ವಿರೋಧ ಪಕ್ಷಗಳಿಗೆ ಸವಾಲು ಹಾಕುತ್ತೇನೆಎಂದು ಮೋದಿ ನುಡಿದರು. ಬಿಜೆಪಿಯ ಪಾಲಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇವಲ ಭೂಮಿಯ ತುಂಡಲ್ಲ ಅಥವಾ ಪ್ರದೇಶವಲ್ಲ. ಅದು ಭಾರತದ ಕಿರೀಟವಾಗಿದೆ. ಭದ್ರತಾ ಅಗತ್ಯಗಳನ್ನು ಪರಿಗಣಿಸಿ, ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲ ನಕಾರಾತ್ಮಕ ಶಕ್ತಿಗಳ ನಡುವೆಯೂ ಪ್ರದೇಶದಲ್ಲಿ ಸಹಜ ಸ್ಥಿತಿಯ ಖಾತರಿಗಾಗಿ ಸಾಧ್ಯವಿರುವ ಎಲ್ಲ ಅತ್ಯುತ್ತಮ ಪ್ರಯತ್ನಗಳನ್ನು ನಾವು ಮಾಡಿದ್ದೇವೆಎಂದು ಪ್ರಧಾನಿ ಹೇಳಿದರು. ವಾಲ್ಮೀಕಿ ಸಮುದಾಯದ ಹಕ್ಕುಗಳನ್ನು ಪುನಸ್ಥಾಪಿಸಿದ್ದು ಸೇರಿದಂತೆ ಹಲವಾರು ಚಾರಿತ್ರಿಕ ವಿಷಯಗಳ ಜೊತೆ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಆಗಸ್ಟ್ ೫ರ ಸರ್ಕಾರದ ನಿರ್ಧಾರಕ್ಕೆ ಸಂಬಂಧವಿದೆಎಂದು ರಾಮಾಯಣ ಕೃತಿಯ  ಸೃಷ್ಟಕರ್ತ ವಾಲ್ಮೀಕಿ ಋಷಿಯ ಜನ್ಮದಿನವಾದ ಈದಿನ ನಡೆದ ರಾಲಿಯಲ್ಲಿ ಪ್ರಧಾನಿ ಮೋದಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ) 

2019: ನವದೆಹಲಿ: ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗುವ ೩೬ ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲ ವಿಮಾನವನ್ನು ಔಪಚಾರಿಕವಾಗಿ ಸ್ವೀಕರಿಸಿದ ಬಳಿಕ ಫ್ರಾನ್ಸಿನಿಂದ ವಾಪಸಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಶ್ಮೀರ ವಿಚಾರದಲ್ಲಿ ಕಾಲು ಕೆರೆಯುತ್ತಿರುವ ಪಾಕಿಸ್ತಾನಕ್ಕೆ ಹರಿಯಾಣದಲ್ಲಿ 2019 ಅಕ್ಟೋಬರ್ 13 ಭಾನುವಾರ ಸೌಮ್ಯವಾಗಿಯೇ ಕಠಿಣ ಎಚ್ಚರಿಕೆಯನ್ನು ರವಾನಿಸಿದರು. ಕಾಶ್ಮೀರ ಕುರಿತ ಯೋಚನೆಯ ಧಾಟಿಯನ್ನು ಬದಲಿಸಿಕೊಳ್ಳುವಂತೆ ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೆ ಮನವಿ ಮಾಡಿದ ರಕ್ಷಣಾ ಸಚಿವರು ತಮ್ಮ ಮನವಿಯನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಸಚಿವರುಅತ್ಯಂತ ಸೌಮ್ಯವಾಗಿಯೇ  ಪಾಕಿಸ್ತಾನಕ್ಕೆ ತಮ್ಮ ಮನವಿಯನ್ನು ಮಾಡಿದರು. ’ಈದಿನ ಅತ್ಯಂತ ಸೌಮ್ಯವಾಗಿಯೇ, ನಾನು ಪಾಕಿಸ್ತಾನಕ್ಕೆ ತನ್ನ ಯೋಚನೆಯ ದಿಕ್ಕನ್ನು ಬದಲಿಸಿಕೊಳ್ಳಬೇಕು ಎಂಬದಾಗಿ ಸಲಹೆ ಮಾಡಬಯಸುತ್ತೇನೆ, ಇಲ್ಲದೇ ಇದ್ದಲ್ಲಿ ಈಗಾಗಲೇ ಇಬ್ಭಾಗವಾಗಿರುವ ಪಾಕಿಸ್ತಾನ ಈಗ ಹಲವು ಹೋಳುಗಳಾಗಿ ವಿಭಜನೆಗೊಳ್ಳಬಹುದುಎಂದು ಕಠಿಣ ಎಚ್ಚರಿಕೆ ನೀಡಿದರು. ಸಿಂಗ್ ಅವರು ಹರಿಯಾಣದ ಪಟೌಡಿಯಲ್ಲಿ  ಬಿಜೆಪಿಯ ಚುನಾವಣಾ ಸಿದ್ಧತೆಗೆ ಒತ್ತು ಕೊಡುವ ಸಲುವಾಗಿ ಆಗಮಿಸಿದ್ದರು. ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ ೨೧ರಂದು ನಡೆಯಲಿದ್ದು, ಅಕ್ಟೋಬರ್ ೨೪ರಂದು ಮತಗಳ ಎಣಿಕೆ ನಡೆಯಲಿದೆ. ‘ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ, ಭಯೋತ್ಪಾದನೆಯನ್ನು ನಿವಾರಿಸುವಂತೆ, ಸಹೋದರತ್ವವನ್ನು ಉಳಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ಮಾಡಲು ನಾನು ಬಯಸುತ್ತೇನೆ. ನಾವು ನೆರೆ ಹೊರೆಯವರು, ನಾವು ಒಟ್ಟಾಗಿ ನಡೆಯಬಯಸುತ್ತೇವೆ. ನೀವು ಭಯೋತ್ಪಾದನೆ ವಿರುದ್ಧ ಪ್ರಾಮಾಣಿಕವಾಗಿ ಹೋರಾಟ ಮಾಡದೇ ಇದ್ದಲ್ಲಿ, ಭಾರತಕ್ಕೆ ಮೂಲಭೂತವಾದಿ ಶಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆ ಎಂದು ಸ್ಪಷ್ಟವಾಗಿ ಹೇಳಲು ನಾನು ಬಯಸುತ್ತೇನೆಎಂದು ಸಚಿವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2019:ಮುಂಬೈನರೇಂದ್ರ ಮೋದಿ ಸರ್ಕಾರವು ಭಾರತದ ಆರ್ಥಿಕತೆಯನ್ನು  ನಾಶಪಡಿಸುತ್ತಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ಅಕ್ಟೋಬರ್ 13ರ  ಭಾನುವಾರ ಆಪಾದಿಸಿದರುಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ’ಭಾರತದ ಆರ್ಥಿಕತೆಯನ್ನು ಮೋದಿ ಸರ್ಕಾರ ನಾಶ ಪಡಿಸುತ್ತಿದೆಮುಂದಿನ - ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆಆದರೆ ನೈಜ ವಿಷಯಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ಮತ್ತು ಅದರ ನಾಯಕ ಮೋದಿ ೩೭೦ನೇ ವಿಧಿ ಮತ್ತು ಚಂದ್ರಯಾನದಂತಹ ವಿಷಯ ಪ್ರಸ್ತಾಪಿಸುತ್ತಾ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ’ ಎಂದು ಹೇಳಿದರುಭವಿಷ್ಯದಲ್ಲಿ ರಾಷ್ಟ್ರದ ಆರ್ಥಿಕ ಸ್ಥಿತಿ ಇನ್ನಷ್ಟು ನಿಕೃಷ್ಟಗೊಳ್ಳಲಿದ್ದು ಅತ್ಯಂತ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಎಚ್ಚರಿಸಿದರು. ‘ಸಮಸ್ಯೆ ಈಗಷ್ಟೇ ಶುರುವಾಗಿದೆಭಾರತದ ಆರ್ಥಿಕತೆಯನ್ನು ಸುಧಾರಿಸಲು ಕಾಂಗ್ರೆಸ್ ಪಕ್ಷ ಮತ್ತು ಮನಮೋಹನ್ ಸಿಂಗ್ ಅವರಿಗೆ ಹಲವು ವರ್ಷಗಳು ಬೇಕಾಗಿದ್ದವುಅದನ್ನು ಈಗ ನಾಶ ಪಡಿಸಲಾಗಿದೆ ಸಮಸ್ಯೆ ಬಗ್ಗೆ ಅವರು ಒಂದಕ್ಷರವನ್ನೂ ಉಸುರುವುದಿಲ್ಲಬದಲಿಗೆ ನಿಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸುತ್ತಾರೆ’ ಎಂದು ಮಹಾರಾಷ್ಟ್ರದಲ್ಲಿ ಅಕ್ಟೋಬರ್ ೨೧ರ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡುತ್ತಾ ರಾಹುಲ್ ಗಾಂಧಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ಇಟಾನಗರ: ಮುಖ್ಯಮಂತ್ರಿಗಳು ರಸ್ತೆ ವೀಕ್ಷಣೆಗೆ ಕಾರಿನಲ್ಲಿ,ಕೆಲವೊಮ್ಮೆ ಸಂಪುಟ
ಸಚಿವರೊಂದಿಗೆ ಬಸ್ಸಿನಲ್ಲಿ ಹೋಗುವುದು ಉಂಟು, ಆದರೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಯಿಂಗ್ಕಿಯಾಂಗ್ ಮತ್ತು ಪಸಿಘಾಟ್ ಮಧ್ಯೆ 2019 ಅಕ್ಟೋಬರ್ 13ರ ಭಾನುವಾರ  ಬೈಕ್ ಸವಾರಿ ಮಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರುಅದೂ 122 ಕಿ.ಮೀ. ದೂರದ ದಾರಿಯನ್ನು ಅವರು ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಬೈಕ್ನಲ್ಲಿ ಕ್ರಮಿಸಿದರು.  ಈ ದಾರಿ ಡಾಮರೀಕರಣವಾಗಿ ಅತ್ಯುತ್ತಮವಾಗಿದ್ದು ಬೈಕರ್ಗಳಿಗೆ ಹೇಳಿಮಾಡಿಸಿದ್ದಾಗಿದೆ. ಆದ್ದರಿಂದ ಆಸಕ್ತರು ಇಲ್ಲಿಗೊಮ್ಮೆ ಭೇಟಿ ಕೊಡಿ ಎಂದು ರಾಜ್ಯದ ಪ್ರವಾಸೋದ್ಯಮದ ಕುರಿತೂ ಅವರು ಪ್ರಚಾರ ಮಾಡಿದರು. ವಿಚಾರವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment