ನಾನು ಮೆಚ್ಚಿದ ವಾಟ್ಸಪ್

Wednesday, October 16, 2019

ಇಂದಿನ ಇತಿಹಾಸ History Today ಅಕ್ಟೋಬರ್ 16

ನವದೆಹಲಿ:  ಪ್ರಮುಖ ಬೆಳವಣಿಗೆಯೊಂದರಲ್ಲಿ ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂಮಿಯ ಮೇಲಿನ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಡುವ ಕೊಡುಗೆಯನ್ನು ಸುನ್ನಿ ವಕ್ಫ್ ಮಂಡಳಿಯು ಸುಪ್ರೀಂಕೋರ್ಟಿನಿಂದ ನೇಮಕಗೊಂಡ ತ್ರಿಸದಸ್ಯ ಸಂಧಾನ ಪೀಠದ ಮುಂದಿಟ್ಟಿದೆ ಎಂದು ವರದಿಯಾಗಿದ್ದು, ಸುಪ್ರೀಂಕೋರ್ಟಿನ ಪಂಚಸದಸ್ಯ ಸಂವಿಧಾನ ಪೀಠವು  2019 ಅಕ್ಟೋಬರ್ 17 ಗುರುವಾರ ಕೊಠಡಿಯಲ್ಲಿ ಸಂಧಾನ ಸಮಿತಿಯ ವರದಿ ಬಗ್ಗೆ ರಹಸ್ಯ ಕಲಾಪ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸಂವಿಧಾನಪೀಠವು ಸಂಧಾನಸಮಿತಿಯ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದೆ ಎಂದು  2019 ಅಕ್ಟೋಬರ್ 16  ಬುಧವಾರ ವರದಿಗಳು ಹೇಳಿದವು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲ ನೇತೃತ್ವದ ಸಂಧಾನ ಸಮಿತಿಯು ಅಯೋಧ್ಯಾ ಪ್ರಕರಣದ ಕೊನೆಯ ದಿನವಾದ  2019 ಅಕ್ಟೋಬರ್ 16ರ ಬುಧವಾರ ತನ್ನ ಇತ್ತೀಚಿನ ಸಂಧಾನ ಯತ್ನಗಳ ಕುರಿತ ವರದಿಯನ್ನು ಸಂವಿಧಾನಪೀಠಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿ ಅದು ಸಂಧಾನ ಪ್ರಸ್ತಾಪವನ್ನು ಇಟ್ಟಿದೆ ಎಂದು ಹೇಳಲಾಗಿತ್ತು. ಸಂಜೆ ಟ್ವೀಟ್ ಒಂದನ್ನು ಮಾಡಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಶ್ರೀ ರವಿಶಂಕರ ಅವರುಸಂಪೂರ್ಣ ಸಂಧಾನ ಪ್ರಕ್ರಿಯೆಯನ್ನು ಎಲ್ಲ ಪಕ್ಷಗಳ ನಡುವಣ ತಿಳುವಳಿಕೆ ಮತ್ತು ಸಹೋದರತ್ವದ ಭಾವನೆಯೊಂದಿಗೆ ನಡೆಸಲಾಗಿದೆಎಂದು ತಿಳಿಸಿದರು. ಖ್ಯಾತ ಸಂಧಾನಕಾರ ವಕೀಲ ಶ್ರೀರಾಮ್ ಪಂಚು ಅವರು ಸಂಧಾನಸಮಿತಿಯ ಇನ್ನೊಬ್ಬ ಸದಸ್ಯರಾಗಿದ್ದರು. ಶ್ರೀ ಶ್ರೀ ರವಿಶಂಕರ ಅವರ ಟ್ವೀಟ್ ಪ್ರಕಟವಾಗುತ್ತಿದ್ದಂತೆಯೇ ಕಾಕತಾಳಿಯವಾಗಿ ಮಾಧ್ಯಮವೊಂದು ಸುನ್ನಿ ವಕ್ಫ್ ಮಂಡಳಿಯು ವಿವಾದಿತ ಭೂಮಿ ಮೇಲಿನ ತನ್ನ ಹಕ್ಕು ಬಿಟ್ಟುಕೊಡುವ ಕೊಡುಗೆ ಮುಂದಿಟ್ಟಿದೆ ಎಂಬ ವರದಿಯನ್ನು ಪ್ರಕಟಿಸಿತು. ರಾಮಮಂದಿರಕ್ಕಾಗಿ ಭೂಮಿಯನ್ನು ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲು ತನ್ನ ಆಕ್ಷೇಪ ಇಲ್ಲ ಎಂಬುದಾಗಿ ಮಂಡಳಿಯು ತಿಳಿಸಿರುವುದಾಗಿ ಸಂಧಾನಸಮಿತಿಯು ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸುದ್ದಿಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ರಾಜಕೀಯವಾಗಿ ಅತ್ಯಂತ  ಸೂಕ್ಷ್ಮವಾಗಿರುವ ಅಯೋಧ್ಯೆಯ ರಾಮ ಜನ್ಮ ಭೂಮಿ- ಬಾಬರಿ ಮಸೀದಿ ಭೂವಿವಾದ ಪ್ರಕರಣದಲ್ಲಿ ಉಭಯ  ಕಡೆಯ ವಕೀಲರ ವಾದ-ಪ್ರತಿವಾದಗಳು 2019 ಅಕ್ಟೋಬರ್ 16 ಬುಧವಾರ ಮುಕ್ತಾಯಗೊಂಡಿದ್ದು, ಸತತ ೪೦ ದಿನಗಳಿಂದ ವಾದ-ಪ್ರತಿವಾದ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು ಅತ್ಯಂತ ಕುತೂಹಲಕರವಾದ ತನ್ನ ತೀರ್ಪನ್ನು ಕಾಯ್ದಿರಿಸಿತು. ನ್ಯಾಯಮೂರ್ತಿಗಳಾದ ಎಸ್.. ಬೊಬ್ಡೆ, ವೈವಿ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರನ್ನೂ ಒಳಗೊಂಡಿರುವ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದ ಅಯೋಧ್ಯೆಯ ಭೂವಿವಾದ ಪ್ರಕರಣದ ೧೪ಕ್ಕೂ ಹೆಚ್ಚು ಮೇಲ್ಮನವಿಗಳ ವಿಚಾರಣೆಯನ್ನು ಸಂಜೆ .೩೦ ಗಂಟೆಗೆ ಮುಕ್ತಾಯಗೊಳಿಸಿ, ತೀರ್ಪನ್ನು ಕಾಯ್ದಿರಿಸಿರುವುದಾಗಿ ಪ್ರಕಟಿಸಿತುಈದಿನ  ಸಂಜೆ ಗಂಟೆಯ ಒಳಗಾಗಿ ವಾದ-ಪ್ರತಿವಾದ ಮುಗಿಸಲು ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್  ಪ್ರಕರಣದ ವಾದಗಳ ಲಿಖಿತ ಸಾರಾಂಶವನ್ನು ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡಿತು.  ಸಿಜೆಐ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಅದಕ್ಕೆ ಮುನ್ನವೇ ತೀರ್ಪು ಹೊರಬೀಳುವ ನಿರೀಕ್ಷೆ ಇದೆ. ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರಿಂಕೋರ್ಟ್ ಸಂವಿಧಾನ ಪೀಠವು ನಡೆಸಿತ್ತು. ಅಯೋಧ್ಯೆಯಲ್ಲಿ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವೂ ಇದ್ದ ನಿವೇಶನ ಸೇರಿದಂತೆ .೭೭ ಎಕರೆ ವಿವಾದಿತ ಭೂಮಿಯನ್ನು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ : ಬಹುಮತದ ಆದೇಶವನ್ನು  ನೀಡಿತ್ತು. ಈದಿನ  ವಾದ, ಪ್ರತಿವಾದಕ್ಕೆ ಉಭಯ ಪಕ್ಷಗಳ ವಕೀಲರಿಗೂ ಸಂಜೆ ೫ಗಂಟೆಯವರೆಗೆ ಸಿಜೆಐ ಗಡುವು ನೀಡಿದ್ದರು. ಅದರಂತೆಯೇ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆ ಅಂತ್ಯಗೊಂಡಿದ್ದು, ೧೩೪ ವರ್ಷಗಳಷ್ಟು ಹಳೆಯ ವಿವಾದದ ಅಂತಿಮ ತೀರ್ಪನ್ನು ಸಿಜೆಐ ಗೋಗೊಯಿ ನಿವೃತ್ತಿಗೂ ಮುನ್ನ ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
2019: ನವದೆಹಲಿ: ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯು (ಎಫ್ಎಟಿಎಫ್) ೨೦೨೦ರ ಫೆಬ್ರವರಿ ವರೆಗೂ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಯೇ (’ಗ್ರೇ ಲಿಸ್ಟ್) ಮುಂದುವರೆಸಲು ಬುಧವಾರ ತೀರ್ಮಾನ ಕೈಗೊಂಡಿದೆ ಎಂದು ಮಾಧ್ಯಮ ವರದಿಗಳು  2019 ಅಕ್ಟೋಬರ್  16 ಬುಧವಾರ ತಿಳಿಸಿದವು. ಭಯೋತ್ಪಾದಕ ಸಂಘಟನೆಗಳು ಹಾಗೂ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಕಣ್ಗಾವಲು ಸಂಸ್ಥೆಯು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ ಎಂದು ವರದಿ ಹೇಳಿತು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ಸಿನಲ್ಲಿ 2019 ಅಕ್ಟೋಬರ್ 15ರ ಮಂಗಳವಾರ ನಡೆದ ಸಭೆಯಲ್ಲಿ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಹತ್ತಿಕ್ಕಲು ಪಾಕಿಸ್ತಾನ ಕೈಗೊಂಡ ಕ್ರಮಗಳ ಕುರಿತು ವಿಶ್ಲೇಷಣೆ ನಡೆಸಿದ ಬಳಿಕ ಎಫ್ಎಟಿಎಫ್ ನಿರ್ಧಾರ ಕೈಗೊಂಡಿತು.  ೨೦೨೦ರ ಫೆಬ್ರವರಿ ನಂತರ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸಬೇಕೋ, ಕಡುಬೂದು ಪಟ್ಟಿಗೆ ಸೇರಿಸಬೇಕೊ, ಇಲ್ಲವೇ ಕಪ್ಪುಪಟ್ಟಿಗೆ ಸೇರಿಸಬೇಕೋ ಎಂಬ ಬಗ್ಗೆ ಎಫ್ಎಟಿಎಫ್ ತೀರ್ಮಾನ  ಕೈಗೊಳ್ಳಲಿದೆಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಪೂರ್ಣವಾಗಿ ನಿರ್ಮೂಲನೆ ಮಾಡಲು ಎಫ್ಎಟಿಎಫ್ ಪಾಕಿಸ್ತಾನಕ್ಕೆ ಕಾಲಮಿತಿಯ ಗಡುವು ನೀಡಿ, ಗಡುವಿನೊಳಗೆ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲ ಹತ್ತಿಕ್ಕದಿದ್ದರೆ, ಕಪ್ಪು ಪಟ್ಟಿಗೆ ಸೇರಿಸುವುದಾಗಿ ಹೇಳಿತ್ತು. ಆದರೆ ಬಗ್ಗೆ ಪಾಕಿಸ್ತಾನ ಯಾವುದೇ ತೋರಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಕಪ್ಪು ಪಟ್ಟಿ ಸೇರುವ ಎಲ್ಲ ಲಕ್ಷಣಗಳೂ ಕಾಣಿಸಿವೆ.  . (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
ಮುಂಬೈ: ಅಮೆರಿಕದ ಅತೀ ದೊಡ್ಡ ನಾಗರಿಕ ಹೆಲಿಕಾಪ್ಟರ್ ಸೇವಾ ಸಂಸ್ಥೆಯಾಗಿರುವ ಫ್ಲೈ ಬ್ಲೇಡ್ ಈಗ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ನಗರಗಳನ್ನು ಸಂಪರ್ಕಿಸುವ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಿದೆ. ಅಕ್ಟೋಬರ್ ಮಾಸಾಂತ್ಯದಲ್ಲಿ ವಿಶೇಷ ಸೇವೆ ಆರಂಭವಾಗಲಿದೆ. ಫ್ಲೈ ಬ್ಲೇಡ್ ಸಂಸ್ಥೆಯ ಭಾರತದಲ್ಲಿನ ಬ್ಲೇಡ್ ಇಂಡಿಯಾ ವಿಭಾಗವು ಸೇವೆಯನ್ನು ಮೊತ್ತ ಮೊದಲಿಗೆ ಮಹಾರಾಷ್ಟ್ರದಲ್ಲಿ ಪರಿಚಯಿಸಲಿದೆ. ಇದು ಕೆಲಸ ಮಾಡಬೇಕಾದರೆ ನಾವು ಸಂಸ್ಥೆಯ ಮೊಬೈಲ್ ಆಪ್  ಅಥವಾ ವೆಬ್ಸೈಟ್ನಲ್ಲಿ ಟಿಕೇಟ್ ಬುಕ್ ಮಾಡಬೇಕು. ಹೆಲಿಕಾಪ್ಟರ್ ಸೇವೆಯ ಟಿಕೇಟ್ ಬುಕ್ಕಿಂಗ್ ಮತ್ತು ಸೇವಾ ವಿಧಾನ ವಿಮಾನಗಳ ಸೇವಾ ಮಾದರಿಯಲಿ ಇರುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರ್ದಿಷ್ಟ ಸಮಯದಲ್ಲಿ ಹೆಲಿಕಾಪ್ಟರ್ ಸಂಚರಿಸಲಿದೆ.  ಆರಂಭದಲ್ಲಿ ಪುಣೆ, ಮುಂಬೈ, ಮತ್ತು ಶಿರ್ಡಿ ನಗರಗಳನ್ನು ಸಂಸ್ಥೆಯು ಆಯ್ದುಕೊಂಡಿದ್ದು, ಸದ್ಯ ಮೂರು ನಗರದಲ್ಲಿ ಸೇವೆ ನೀಡಲಿದೆ.  ಕಳೆದ ಮಾರ್ಚ್ ತಿಂಗಳಲ್ಲಿ ಸೇವೆ ಆರಂಭಿಸುವ ಗುರಿ ಇತ್ತು. ಆದರೆ ಲೋಕಸಭಾ ಚುನಾವಣೆ ಕಾರಣ ಅದು ಈಡೇರಲಿಲ್ಲ ಎಂದು ಸಂಸ್ಥೆ ಹೇಳಿದೆ. . (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
2019: ಶ್ರೀನಗರ (ಜಮ್ಮು-ಕಾಶ್ಮೀರ): ಪಾಕಿಸ್ತಾನ ಬೆಂಬಲಿತ ಲಷ್ಕರ್ --ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಗೆ ಸೇರಿದ  ಮೂವರನ್ನು ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ 2019 ಅಕ್ಟೋಬರ್ 16ರ ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದವು. ಮಂಗಳವಾರ ತಡರಾತ್ರಿ ಪಜಲ್ಪೋರಾ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದವು.  ಮನೆಯೊಂದರ ಮಾಲೀಕನನ್ನು ಬೆದರಿಸಿ ಮೂವರು ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಪೊಲೀಸರೂ ಕೂಡ ಪ್ರದೇಶವನ್ನು ಸುತ್ತುವರಿದರು. ಗುಂಡಿನ ದಾಳಿಗೆ ಭಯೋತ್ಪಾದಕರು ಅಡಗಿದ್ದ ಮನೆ ಸಂಪೂರ್ಣ ನಾಶವಾಯಿತು. ಮೃತ ಭಯೋತ್ಪಾದಕರು ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಲಷ್ಕರ್ --ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದರು.  ಮೃತ ಭಯೋತ್ಪಾದಕರನ್ನು ನಾಸಿರ್ ಗುಲ್ಜರ್ ಛಾದ್ರೂ, ಜಾಹಿದ್ ಅಹ್ಮದ್ ಲೋನ್ ಮತ್ತು ಅಕ್ವಿಬ್ ಅಹ್ಮದ್ ಹಜಾಂ ಎಂದು ಗುರುತಿಸಲಾಗಿದೆ. ಮೂವರೂ ಸ್ಥಳೀಯ ನಿವಾಸಿಗರು ಎಂದು ಅಧಿಕಾರಿಗಳು ತಿಳಿಸಿದರು.  ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರದ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಪಾಕಿಸ್ತಾನ, ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಒಳಗೊಳಗೇ ದುಷ್ಕೃತ್ಯಗಳ ಸಂಚು ರೂಪಿಸಿದ್ದು, ಪಾಕಿಸ್ತಾನದ ಪ್ರತಿಯೊಂದು ದುಸ್ಸಾಹಸಕ್ಕೂ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.  . (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ 55 ದಿನಗಳ ಕಾಲ ಸಿಬಿಐ ಮತ್ತು ನ್ಯಾಯಾಂಗ ವಶದಲ್ಲಿದ್ದ ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ 2019 ಅಕ್ಟೋಬರ್  16ರ ಬುಧವಾರ ಬಂಧಿಸಿತು. ಐಎನ್ ಎಕ್ಸ್ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯಕ್ಕೆ ನವದೆಹಲಿಯ ಸ್ಥಳೀಯ ಕೋರ್ಟ್ ಹಿಂದಿನ ದಿನ ಅನುಮತಿ ನೀಡಿತ್ತು.ಸೆಪ್ಟೆಂಬರ್ 5ರಿಂದ ಜೈಲುವಾಸದಲ್ಲಿದ್ದ ಚಿದಂಬರಂ ಅವರ ಸಿಬಿಐ ವಿಚಾರಣೆ ಪೂರ್ಣಗೊಂಡಿದ್ದು, ಈದಿನ ಬೆಳಗ್ಗೆ ತಿಹಾರ್ ಜೈಲಿಗೆ ಭೇಟಿ ನೀಡಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ ಅವರನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿತು. ಹೆಚ್ಚಿನ ವಿಚಾರಣೆಗಾಗಿ ಚಿದಂಬರಂ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ವಿಶೇಷ ಸಿಬಿಐ ನ್ಯಾಯಾಧೀಶ  ಅಜಯ್ ಕುಮಾರ್ ಕುಹರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಚಿದಂಬರಂ ಅವರನ್ನು ಕಸ್ಟಡಿಗೆ ಒಪ್ಪಿಸಿ ವಿಚಾರಣೆ ನಡೆಸುವುದು ಅಗತ್ಯವಿದೆ ಎಂದು ಕೂಡ ಹೇಳಿತ್ತು. ಹಿನ್ನೆಲೆಯಲ್ಲಿ ತಿಹಾರ್ ಜೈಲಿಗೆ ತೆರಳಿ ಚಿದಂಬರಂ ಅವರನ್ನು ವಿಚಾರಣೆ ನಡೆಸಿ ವಶಕ್ಕೆ ಪಡೆಯುವಂತೆ ನ್ಯಾಯಾಧೀಶ ಕುಹರ್ ಹಿಂದಿನ ದಿನ .ಡಿಗೆ ಆದೇಶ ನೀಡಿದ್ದರು.



No comments:

Post a Comment