Friday, September 20, 2019

ಇಂದಿನ ಇತಿಹಾಸ History Todaya ಸೆಪ್ಟೆಂಬರ್ 20


2019: ನವದೆಹಲಿ
: ಸಂಕಷ್ಟಕ್ಕೆ ಸಿಲುಕಿದ ದೇಶದ ಆರ್ಥಿಕತೆಯ ಬೆಳವಣಿಗೆಗೆ ಪ್ರಚಂಡ ಬಲ
ನೀಡಲು ನೀಡಲು ದೇಶೀಯ ಸಂಸ್ಥೆಗಳ  ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ ೩೦ರಿಂದ ಶೇಕಡಾ ೨೨ಕ್ಕೆ ಮತ್ತು ನೂತನ ಉತ್ಪಾದನಾ ಕಂಪನಿಗಳಿಗೆ (ನವೋದ್ಯಮಗಳು) ಶೇಕಡಾ ೨೫ರಿಂದ ಶೇಕಡಾ ೧೫ಕ್ಕೆ ಇಳಿಸುವ ಮೂಲಕ ಉದ್ಯಮಿಗಳಿಗೆ ಭರಪೂರ ಕೊಡುಗೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019ರ ಸೆಪ್ಟೆಂಬರ್ 20ರ ಶುಕ್ರವಾರ ಪ್ರಕಟಿಸಿದರು.ಖಾಸಗಿ ಹೂಡಿಕೆಗೆ ಮತ್ತು ಆಟೋಮೊಬೈಲ್ ಕ್ಷೇತ್ರಕ್ಕೆ ಪುನಃಶ್ಚೇತನ ಹಾಗೂ ಆರು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ದೇಶದ ಸಮಗ್ರ ಆಂತರಿಕ ಉತ್ಪನ್ನವನ್ನು (ಜಿಡಿಪಿ) ಮೇಲೆತ್ತುವ ಮತ್ತು ನಿರುದ್ಯೋಗದ ಪರಿಣಾಮವಾಗಿ ದೇಶಾದ್ಯಂತ ಎದ್ದಿರುವ ಅಸಮಾಧಾನವನ್ನು ನಿವಾರಿಸುವ ಉದ್ದೇಶದೊಂದಿಗೆ ಸೀತರಾಮನ್ ಅವರು .೪೫ ಲಕ್ಷ ಕೋಟಿ ರೂಪಾಯಿಗಳ ಪ್ರೋತ್ಸಾಹದ ಮೂಲಕ ಭೀಮಬಲ ನೀಡುವ ಮಹತ್ವದ ಉಪಕ್ರಮವನ್ನು ಗೋವಾದಲ್ಲಿ ನಡೆದ ಜಿಎಸ್ಟಿ ಸಭೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ಸಚಿವರ ಆರ್ಥಿಕ ಪ್ರೋತ್ಸಾಹದ ಪ್ರಕಟಣೆ ಹೊರಬಿದ್ದ ಗಂಟೆಯೊಳಗಾಗಿ ಷೇರು ಮಾರುಕಟ್ಟೆ ಗರಿಗೆದರಿ, ದಿನದ ಮುಕ್ತಾಯದ ವೇಳೆಗೆ ಸೂಚ್ಯಂಕವು ೨೦೦೦ ಅಂಕಗಳಿಗೆ ಜಿಗಿಯಿತು. ಷೇರು ಮಾರುಕಟ್ಟೆ ಸುಮಾರು ಲಕ್ಷ ಕೋಟಿ ರೂಪಾಯಿಗಳಷ್ಟು ಲಾಭ ಮಾಡಿಕೊಂಡಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕೂಡಾ ೬೬ ಪೈಸೆಯಷ್ಟ್ಟು ವರ್ಧಿಸಿ ರೂಪಾಯಿ ಮೌಲ್ಯವನ್ನು ೭೦.೬೮ ರೂಪಾಯಿಗೆ ಏರಿಸಿತು.’ತೆರಿಗೆ ಕಡಿತದ ಕ್ರಮವು ಭಾರತದ ಸಾಂಸ್ಥಿಕ ತೆರಿಗೆದರವನ್ನು ಪೂರ್ವ ಏಷ್ಯಾದ ದೇಶಗಳಿಗೆ ಸಮನಾಗಿಸುತ್ತದೆ ಮತ್ತು ಸೆನ್ಸೆಕ್ಸ್ಅನ್ನು ಶೇಕಡಾ .೨೩ ರಷ್ಟು ಅಥವಾ ಸುಮಾರು ೨೦೦೦ ಅಂಕಗಳಷ್ಟು ಹೆಚ್ಚಿಸುತ್ತದೆಎಂದು  ಸರ್ಕಾರದ ಉಪಕ್ರಮದ ಬಗ್ಗೆ ವಿವರಿಸುತ್ತಾ ಸೀತಾರಾಮನ್ ಹೇಳಿದರು.ತೆರಿಗೆ ರಿಯಾಯಿತಿಗಳನ್ನು ೨೦೧೯ರ ಏಪ್ರಿಲ್ ರಿಂದ ಅನ್ವಯಿಸಲಾಗುವುದು ಮತ್ತು ಕಂಪನಿಗಳು ಪಾವತಿಸುವ ಯಾವುದೇ ಮುಂಗಡ ತೆರಿಗೆಯನ್ನು ಅದಕ್ಕೆ ತಕ್ಕಂತೆ ಸರಿಹೊಂದಿಸಲಾಗುವುದು. ಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ  ವಾರ್ಷಿಕವಾಗಿ .೪೫ ಲಕ್ಷ ಕೋಟಿ ರೂಪಾಯಿ ಆದಾಯವನ್ನು ನಷ್ಟವಾಗುತ್ತದೆ ಎಂದು ಸೀತಾರಾಮನ್ ಹೇಳಿದರು. ೨೦-೨೫ ಉತ್ಪನ್ನಗಳ ಮಾರಾಟ ತೆರಿಗೆಯನ್ನು ಇಳಿಸುವ ಬಗೆಗೂ ಪರಿಶೀಲಿಸಲಾಗುತ್ತಿದೆ ಎಂದೂ ಸಚಿವರು ನುಡಿದರು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಸರಾ ರಜೆಯನ್ನು ಅಕ್ಟೋಬರ್ 1 ರಿಂದ 15 ತನಕ ನೀಡಲು ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಸೂಚನೆ ನೀಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ 2019 ಸೆಪ್ಟೆಂಬರ್ 20ರ ಶುಕ್ರವಾರ ತಿಳಿಸಿದರು. ಈ ಕುರಿತು ಸಚಿವರನ್ನು ಅಭಿನಂದಿಸಿದ ಶಾಸಕ ಕಾಮತ್ ಅವರು ಅಕ್ಟೋಬರ್ 1 ರಿಂದ ದಸರಾ ರಜೆ ಆರಂಭವಾಗುವುದರಿಂದ ದೇವಿ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಶಾಸಕ ಕಾಮತ್ ಅವರು ಸಚಿವ ಸುರೇಶ್ ಕುಮಾರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದರು.

2019: ಶಹಜಹಾನ್ ಪುರ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ
ಎದುರಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕ ಸ್ವಾಮಿ ಚಿನ್ಮಯಾನಂದ ಅವರನ್ನು ಪೊಲೀಸರು 2019 ಸೆಪ್ಟೆಂಬರ್ 20ರ ಶುಕ್ರವಾರ ಬೆಳಿಗ್ಗೆ ಬಂಧಿಸಿದರು. ಸ್ವಾಮಿ ಚಿನ್ಮಯಾನಂದ ಅವರು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ವರದಿಗಳು ತಿಳಿಸಿದವು. 73 ಹರೆಯದ ಬಿಜೆಪಿ ನಾಯಕ ಕಳೆದ ಹಲವು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದು, ವೈದ್ಯಕೀಯ ತಂಡದಿಂದ ಆಶ್ರಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಶಹಜಹಾನ್ ಪುರದ ಸ್ವಾಮಿ ಸುಖದೇವಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಯೋರ್ವಳು ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು.ಸ್ವಾಮಿ ಚಿನ್ಮಯಾನಂದ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ಮುಂಬೈ: ರಾಮಮಂದಿರ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ, ಸಮಯದಲ್ಲಿ
ಮಾತಿನ ಮಲ್ಲರು ಸುಮ್ಮನಿರಬೇಕು ಎಂಬುದಾಗಿ ಪ್ರಧಾನಿ ನರೇಂದ್ರ  ಮೋದಿ ಗುಡುಗಿದ್ದಕ್ಕೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ 2019 ಸೆಪ್ಟೆಂಬರ್ 20ರ ಶುಕ್ರವಾರ ಸ್ಪಷ್ಟನೆ ನೀಡಿ, ನಮ್ಮ ಪಕ್ಷ ಹಿಂದೂಗಳ ಭಾವನೆಗೆ ಸ್ಪಂದಿಸುತ್ತದೆ ಎಂದು ಸಮರ್ಥಿಸಿದರು. ರಾಮಮಂದಿರ ವಿಚಾರವಾಗಿ ಮಾತಿನ ಮಲ್ಲರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ದೇಶದ ಪ್ರತಿಯೊಬ್ಬರು ಸುಪ್ರೀಂ ಕೋರ್ಟಿಗೆ ಗೌರವ ಕೊಡಬೇಕು. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ನಿಮ್ಮೆಲ್ಲರಿಗೂ ಕೈಮುಗಿಯುತ್ತೇನೆ, ದಯವಿಟ್ಟು ನ್ಯಾಯಾಂಗ ವ್ಯವಸ್ಥೆಗೆ ಗೌರವ ಕೊಡಿ ಎಂದು ಹಿಂದಿನ ದಿನವಷ್ಟೇ ನಾಸಿಕ್ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಮನವಿ ಮಾಡಿಕೊಳ್ಳುವ ರೂಪದಲ್ಲಿ ತಿವಿದಿದ್ದರು. ಪ್ರಧಾನಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉದ್ಧವ್ ಠಾಕ್ರೆ, ನನ್ನನ್ನು ಮಾತಿನ ಮಲ್ಲರಿಗೆ ಹೋಲಿಸಲು ಮೋದಿ ಯಾರು ಎಂದು ಕೇಳಿದರು. ನಾನೇನೂ ಮಾತಿನ ಮಲ್ಲನಲ್ಲ ಎಂದಿರುವ ಠಾಕ್ರೆ, ನಾನು ಕೇವಲ ಹಿಂದೂಗಳ ಭಾವನೆಯನ್ನು ಬಿಂಬಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ
ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಜೊತೆಗಿನ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು  ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2019 ಸೆಪ್ಟೆಂಬರ್  20ರ ಶುಕ್ರವಾರ ಮಧ್ಯಾಹ್ನ 12ಗಂಟೆಯಿಂದ ಸತತವಾಗಿ ವಿಚಾರಣೆಗೊಳಪಡಿಸಿದರು ಎಂದು  ಮಾಧ್ಯಮ  ವರದಿ ತಿಳಿಸಿತು. ದೆಹಲಿಯ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಡಿಕೆಶಿ ನಡುವಿನ ಹಣ ವರ್ಗಾವಣೆ ಕುರಿತು ತನಿಖೆ ನಡೆಯಿತು  ಎಂದು ವರದಿ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)




No comments:

Post a Comment