ನಾನು ಮೆಚ್ಚಿದ ವಾಟ್ಸಪ್

Sunday, September 1, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 01

ಇಂದಿನ  ಇತಿಹಾಸ  History Today  ಸೆಪ್ಟೆಂಬರ್ 01
2019: ಚೆನ್ನೈ: ಅಂಡಮಾನ್ ನಿಕೋಬಾರ್ ದ್ವೀಪ ಭಾಗದಲ್ಲಿ ಚೀನಾ ಭಾರತೀಯ ಜಲ ಪ್ರದೇಶಗಳಲ್ಲಿರುವ ನಮ್ಮ ನೌಕಾ ನೆಲೆಗಳ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಏಜೆನ್ಸಿ ಮಾಹಿತಿಗಳು ಬಹಿರಂಗಗೊಳಿಸಿದವು. ಈ ಭಾಗದಲ್ಲಿರುವ ಭಾರತದ ಜಲಪ್ರದೇಶದಲ್ಲಿರುವ ನೌಕಾನೆಲೆಗಳಲ್ಲಿ ಭಾರತ ನೆಲೆಗೊಳಿಸಿರುವ ಯುದ್ಧ ನೌಕೆಗಳ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸುವ ದುರುದ್ದೇಶದಿಂದ ಚೀನಾವು ಆಗಾಗ್ಗೆ ಕಣ್ಗಾವಲು ನೌಕೆಗಳನ್ನು ಭಾರತೀಯ ಜಲ ಪ್ರದೇಶಗಳತ್ತ ಕಳುಹಿಸುತ್ತಿದೆ ಎಂಬ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆ ಕಲೆಹಾಕಿರುವ ಮಾಹಿತಿಗಳಿಂದ ಬಹಿರಂಗಗೊಂಡಿತು. ಖಾಸಗಿ ವೆಬ್ ಸೈಟ್ ಒಂದಕ್ಕೆ ಲಭಿಸಿರುವ ಮಾಹಿತಿಯಂತೆ ಚೀನಾದ ನೌಕಾದಳವು ಇತ್ತೀಚೆಗಷ್ಟೇಟಿಯಾನ್ ವಾಂಗ್ ಕ್ಸಿಂಗ್ಎಂಬ ಹೆಸರಿನ ಅತ್ಯಾಧುನಿಕ ತಂತ್ರಜ್ಞಾನದ ಗೂಢಚಾರಿ ನೌಕೆಯನ್ನು ಭಾರತೀಯ ಜಲಪ್ರದೇಶದಲ್ಲಿ ನಿಯೋಜನೆಗೊಳಿಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಮಾಡಿತ್ತು ಎಂದು ತಿಳಿದುಬಂದಿತು. ಭಾರತದ  ವಿಶೇಷ ಆರ್ಥಿಕ ವಲಯದೊಳಕ್ಕೆ (ಎಕ್ಸ್ ಕ್ಲೂಸಿವ್ ಎಕನಾಮಿಕ್ ಝೋನ್) ಪ್ರವೇಶಿಸಿದ್ದ ಚೀನಾದ ಗೂಢಚಾರ ನೌಕೆ ಇಲ್ಲಿ ಕೆಲವು ಸಮಯಗಳವರೆಗೆ ತಂಗಿತ್ತು ಎಂಬ ಮಾಹಿತಿಯೂ ಇದೀಗ ಲಭಿಸಿತು.. ಅಂಡಮಾನ್ ನಿಕೋಬಾರ್ ದ್ವೀಪದ ಸಮೀಪದಲ್ಲಿ ಪೂರ್ವ ಸಮುದ್ರದ ಗಡಿಪ್ರದೇಶಕ್ಕೆ ತುಂಬಾ ಸನಿಹದಲ್ಲಿ ನೌಕೆ ಕಾಣಿಸಿಕೊಂಡಿತ್ತು. ಭಾರತದ ನೌಕಾದಳಕ್ಕೆ ಸಂಬಂಧಪಟ್ಟಂತೆ ಅಂಡಮಾನ್ ನಿಕೋಬಾರ್ ದ್ವೀಪಭಾಗವು ತುಂಬಾ ಸೂಕ್ಷ್ಮವಾಗಿರುವ ಹಾಗೂ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವ ನೆಲೆಯಾಗಿದೆ. ಪೋರ್ಟ್ ಬ್ಲೇರ್ ಕೆಂದ್ರವಾಗಿರುವಂತೆ ಇದು ಭಾರತೀಯ ಸಶಸ್ತ್ರ ಪಡೆಗಳ ಮೊತ್ತಮೊದಲ ಮತ್ತು ಏಕಮಾತ್ರ ತ್ರಿ-ಸೇವಾ ಥಿಯೇಟರ್ ಕಮಾಂಡ್ ನೆಲೆ ಇದಾಗಿದೆ. 815ಜಿ ಮಾದರಿಯಟಿಯಾನ್ ವಾಂಗ್ ಕ್ಸಿಂಗ್ಗೂಢಚಾರ ನೌಕೆಯಲ್ಲಿ ಅತ್ಯಾಧುನಿಕ ಮಾದರಿಯ ವಿದ್ಯನ್ಮಾನ ಗೂಢಚಾರಿಕೆ ಉಪಕರಣಗಳಿವೆ. ರೀತಿಯಾಗಿ ಶತ್ರು ದೇಶವೊಂದರ ಅತ್ಯಾಧುನಿಕ ಮಾದರಿಯ ಗೂಢಚಾರಿ ನೌಕೆಯೊಂದು ನಮ್ಮ ದೇಶದ ಜಲಪ್ರದೇಶವನ್ನು ಪ್ರವೇಶಿಸಿರುವುದು ನಮ್ಮ ರಕ್ಷಣಾ ವ್ಯವಸ್ಥೆ ಕಳವಳಪಡುವ ವಿಚಾರವಾಗಿದೆ.

2019:  ಚೆನ್ನೈ: ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಪ್ರಸ್ತಾವದಿಂದ ಒಂದೇ ಒಂದು ಉದ್ಯೋಗ ನಷ್ಟವೂ ಸಂಭವಿಸದು, ವಿಲೀನದ ಪರಿಣಾಮವಾಗಿ ಒಬ್ಬನೇ ಒಬ್ಬ ನೌಕರನನ್ನೂ ಕಿತ್ತು ಹಾಕಲಾಗುವುದಿಲ್ಲ ಎಂಬುದಾಗಿ ಈದಿನ ಇಲ್ಲಿ ಹೇಳುವ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳ ವಿಲೀನದಿಂದ ಉದ್ಯೋಗ ನಷ್ಟವಾಗಬಹುದೆಂಬ ಭೀತಿಯನ್ನು ಅಲ್ಲಗಳೆದರು. ಇದೇ ವೇಳೆಗೆ ಜಿಎಸ್ಟಿ ದರ ಕಡಿತ ತಮ್ಮ ಕೈಯಲ್ಲಿ ಇಲ್ಲ, ಅದನ್ನು ಜಿಎಸ್ಟಿ ಮಂಡಳಿ ನಿರ್ಧರಿಸುತ್ತದೆ ಎಂದೂ ಸಚಿವರು ಸ್ಪಷ್ಟ ಪಡಿಸಿದರು.  ಉದ್ಯೋಗ ಕಡಿತದ ಕುರಿತಾದದ್ದು ಸಂಪೂರ್ಣ ತಪ್ಪು ಮಾಹಿತಿ. ಬ್ಯಾಂಕುಗಳಲ್ಲಿನ ಪ್ರತಿಯೊಬ್ಬ ನೌಕರನಿಗೂ ಕಳೆದ  ಆಗಸ್ಟ್ 30ರ ಶುಕ್ರವಾರ ನಾನು ಏನು ಹೇಳಿದ್ದೆ ಎಂಬುದನ್ನು ನೆನೆಪುಮಾಡಿಕೊಳ್ಳಿ ಎಂದು ಹೇಳಬಯಸುತ್ತೇನೆ ಮತ್ತು ಬ್ಯಾಂಕುಗಳ ನೌಕರ ಸಂಘಗಳ ಪ್ರತಿಯೊಬ್ಬನಿಗೂ ಭರವಸೆ ನೀಡಬಯಸುತ್ತೇನೆ. ಕ್ರಮದ ಪರಿಣಾಮವಾಗಿ ಉದ್ಯೋಗ ಕಡಿತಗಳು ಆಗುವುದಿಲ್ಲ ಎಂದು ನಾನು ಹೇಳಿದ್ದೆ. ಉದ್ಯೋಗ ನಷ್ಟ ಆಗುವುದೇ ಇಲ್ಲಎಂದು ವಿತ್ತ ಸಚಿವರು ಸ್ಪಷ್ಟ ಪಡಿಸಿದರು. ಉದ್ಯೋಗ ನಷ್ಟವಾಗಬಹುದೆಂಬ ಹಿನ್ನೆಲೆಯಲ್ಲಿ ವಿಲೀನ ಪ್ರಸ್ತಾಪವನ್ನು ಬ್ಯಾಂಕ್ ನೌಕರರ ಸಂಘಗಳು ವಿರೋಧಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸಿದರು.  ಸರ್ಕಾರಿ ಸ್ವಾಮ್ಯದ ೧೦ ಬ್ಯಾಂಕುಗಳನ್ನು ವಿಲೀನಗೊಳಿಸಿ ನಾಲ್ಕು ಬ್ಯಾಂಕುಗಳನ್ನಾಗಿ ಮಾಡುವ ಮಹಾ ಯೋಜನೆಯನ್ನು ಸೀತರಾಮನ್ ಅವರು ಆಗಸ್ಟ್ ೩೦ರಂದು ಪ್ರಕಟಿಸಿದ್ದರು. ಬ್ಯಾಂಕುಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ಜಾಗತಿಕ ಮಟ್ಟದಲ್ಲಿ ಪ್ರಬಲ ಬ್ಯಾಂಕುಗಳನ್ನು ಕಟ್ಟುವ ಸಲುವಾಗಿ ಮತ್ತು ಐದು ವರ್ಷಗಳಲ್ಲಿಯೇ ಅತ್ಯಂತ ಕೆಳಕ್ಕೆ ಕುಸಿದಿರುವ ಆರ್ಥಿಕತೆಗೆ  ಪುನಶ್ಚೇತನ ನೀಡುವ ಸಲುವಾಗಿ ವಿತ್ತ ಸಚಿವರು ಕ್ರಮನ್ನು ಪ್ರಕಟಿಸಿದ್ದರು. ಸರ್ಕಾರದ ಕ್ರಮದ ಪರಿಣಾಮವಾಗಿ ಉದ್ಯೋಗ ನಷ್ಟದ ಹೊರತಾಗಿ ಬ್ಯಾಂಕುಗಳು ಮುಚ್ಚುವ ಸ್ಥಿತಿಯೂ ಬರಬಹುದು ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಭೀತಿ ವ್ಯಕ್ತ ಪಡಿಸಿತ್ತು. ಇದೇ ವೇಳೆಯಲ್ಲಿ, ಭಾರತದ ಆರ್ಥಿಕತೆ ಕುಸಿತಕ್ಕೆ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)  ಕಾರಣ ಎಂಬುದಾಗಿ ಟೀಕಿಸಿದ ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರು ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, ’ಜಿಎಸ್ಟಿ ದರ ಕಡಿತವು ನನ್ನ ಕೈಯಲ್ಲಿ ಇಲ್ಲ. ಬಗ್ಗೆ ನಿರ್ಧಾರ ಕೈಗೊಳ್ಳುವುದು ಜಿಎಸ್ಟಿ ಮಂಡಳಿಎಂದು ಹೇಳಿದರು. ಕೇಂದ್ರೀಯ ಅಂಕಿಸಂಖ್ಯಾ ಕಚೇರಿಯು, ಭಾರತದ ತ್ರೈಮಾಸಿಕ ಜಿಡಿಪಿಯು (ದೇಶದ ಸಮಗ್ರ ಆಂತರಿಕ ಉತ್ಪನ್ನ) ಇದೇ ಹಣಕಾಸು ವರ್ಷದ ಹಿಂದಿನ ತ್ರೈಮಾಸಿಕದಲ್ಲಿ ಇದ್ದ ಶೇಕಡಾ .೮ರಿಂದ ಕಳೆದ ತ್ರೈಮಾಸಿಕದಲ್ಲಿ ಶೇಕಡಾ ೫ಕ್ಕೆ ಇಳಿದಿರುವುದಾಗಿ ಪ್ರಕಟಿಸಿದ ಒಂದು ದಿನದ ಬಳಿಕ ವಿತ್ತ ಸಚಿವರು ಹೇಳಿಕೆ ನೀಡಿದರು. ಕಳೆದ ವಿತ್ತ ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ .೮ರಷ್ಟು ಇತ್ತು. ಉತ್ಪಾದನೆ  ಮತ್ತು ಖಾಸಗಿ ಬಳಕೆ ಕುಸಿತವೇ ಆರ್ಥಿಕ ಹಿನ್ನಡೆಗೆ ಕಾರಣ ಎಂದು ಹೇಳಲಾಗಿತ್ತು. ‘ಬ್ಯಾಂಕುಗಳ ವಿಲೀನದ ಪರಿಣಾಮವಾಗಿ ಯಾವ ಬ್ಯಾಂಕನ್ನೂ ಮುಚ್ಚಲಾಗುವುದಿಲ್ಲ. ಈಗ ನಿರ್ವಹಿಸುತ್ತಿರುವುದಕ್ಕಿಂತ ಭಿನ್ನವಾದ ಯಾವುದೇ ಕಾರ್ ನಿರ್ವಹಿಸುವಂತೆ ಸೂಚಿಸಲಾಗುವುದಿಲ್ಲ. ವಾಸ್ತವವಾಗಿ ನಾವು ಅವುಗಳಿಗೆ ಹೆಚ್ಚಿನ ಬಂಡವಾಳವನ್ನು ಒದಗಿಸುತ್ತಿದ್ದೇವೆಎಂದು ಸೀತಾರಾಮನ್ ಹೇಳಿದರು. ಸೀತಾರಾಮನ್ ಅವರು ಆಗಸ್ಟ್ 30ರ ಶುಕ್ರವಾರ ಸರ್ಕಾರಿ ಸ್ವಾಮ್ಯದ ೧೦ ಬ್ಯಾಂಕುಗಳ ವಿಲೀನವನ್ನು ಪ್ರಕಟಿಸಿದ್ದರು. ಇದರಿಂದ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಪ್ರಬಲವಾಗುವುದು ಮತ್ತು ಆರ್ಥಿಕ ಬೆಳವಣಿಗೆ ಪುನರುಜ್ಜೀವಿತಗೊಳ್ಳುವುದು ಎಂದು ಅವರು ಹೇಳಿದ್ದರು. ವಿಲೀನಗಳ ಪರಿಣಾಮವಾಗಿ ೨೦೧೭ರಲ್ಲಿ ೨೭ರಷ್ಟಿದ್ದ ಬ್ಯಾಂಕುಗಳ ಸಂಖ್ಯೆ ೧೨ಕ್ಕೆ ಇಳಿಯಲಿದೆ. ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಮಹತ್ವದ ಆರ್ಥಿಕ ಸುಧಾರಣಾ ಕ್ರಮ ಇದಾಗಿತ್ತು. ಹಿಂದೆ ಶೇಕಡಾ .೩ರಷ್ಟು ಜಿಡಿಪಿಯ ಭವಿಷ್ಯ ನುಡಿದಿದ್ದ ಇಂಡಿಯಾ ರೆಟಿಂಗ್ಸ್ ಅಂಡ್ ರೀಸರ್ಚ್ (ಇಂಡ್ -ರಾ) ಸಂಸ್ಥೆಯು ೨೦೧೮ರಲ್ಲಿ ಜಿಡಿಪಿಯು ಶೇಕಡಾ .೩ರಿಂದ ಶೇಕಡಾ .೭ಕ್ಕೆ ಕುಸಿದಾಗ ( ವರ್ಷಗಳಲ್ಲೇ ಅತ್ಯಂತ ಕಡಿಮೆ), ಬೆಳವಣಿಗೆ ಕುಂಠಿತದ ಕಾರಣ ಮೂರನೇ ವರ್ಷ ಸತತವಾಗಿ ಜಿಡಿಪಿ ಕುಸಿಯುವುದು ಎಂದು ಕಳೆದ ವರ್ಷ ಆಗಸ್ಟ್ ೨೮ರಂದು ಭವಿಷ್ಯ ನುಡಿದಿತ್ತು. ಬಳಕೆದಾರರ ಬೇಡಿಕೆ ಮಂದವಾಗುತ್ತಿರುವುದು, ವಿಳಂಬಗೊಂಡಿರುವ ಮುಂಗಾರು, ಉತ್ಪಾದನೆಯಲ್ಲಿ ಇಳಿಕೆ ಮತ್ತು ಹೆಚ್ಚುತ್ತಿರುವ ಜಾಗತಿಕ ವ್ಯಾಪಾರ ಪ್ರಕ್ಷುಬ್ಧತೆಯಿಂದಾಗಿ ರಫ್ತಿನ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಆರ್ಥಿಕ ಹಿನ್ನಡೆಗೆ ಪ್ರಾಥಮಿಕ ಕಾರಣಗಳು ಎಂದು ಸಂಸ್ಥೆ ಹೇಳಿತ್ತು. ಈದಿನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಆರ್ಥಿಕ ಹಿನ್ನಡೆಗಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ’ಸಾರ್ವತ್ರಿಕ ಕೆಟ್ಟ ನಿರ್ವಹಣೆಯೇ ಆರ್ಥಿಕತೆಯ ಹಾಲಿ ದುಃಸ್ಥಿತಿಗೆ ಕಾರಣಎಂದು ಅವರು ಹೇಳಿದ್ದರು.  ತ್ವರಿತ ಅಭಿವೃದ್ಧಿಯ ತಾಕತ್ತು ಭಾರತಕ್ಕೆ ಇದೆ. ಆದರೆ ನರೇಂದ್ರ ಮೋದಿ ಸರ್ಕಾರದ ಸಾರ್ವತ್ರಿಕ ಕೆಟ್ಟ ನಿರ್ವಹಣೆ ಈಗಿನ ದುಃಸ್ಥಿತಿಗೆ ಕಾರಣವಾಗಿದೆ. ಉತ್ಪಾದನಾ ರಂಗದಲ್ಲಿ .೬ರಷ್ಟು ಬೆಳವಣಿಗೆ ಕುಂಠಿತಗೊಂಡಿರುವುದು ಚಿಂತಾರ್ಹ ವಿಷಯ. ನೋಟು ಅಮಾನ್ಯೀಕರಣ ಮತ್ತು ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲಾದ ಜಿಎಸ್ಟಿ ಯಂತಹ ಮಾನವ ನಿರ್ಮಿತ ತಪ್ಪುಗಳಿಂದ ಹಳಿ ತಪ್ಪಿದ ನಮ್ಮ ಆರ್ಥಿಕತೆ ಇನ್ನೂ ಚೇತರಿಸಿಲ್ಲ ಎಂಬುದನ್ನು ಇದು ಸುಸ್ಪಷ್ಟಗೊಳಿಸಿದೆ ಎಂದು ಮಾಜಿ ಪ್ರಧಾನಿ ತಮ್ಮ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದರು.  ಮನಮೋಹನ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ, ಪ್ರತಿಕ್ರಿಯಿಸಲು ಸೀತಾರಾಮನ್ ನಿರಾಕರಿಸಿದರು.

2019: ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಕೇರಳ, ತೆಲಂಗಾಣ ಮತ್ತು ರಾಜಸ್ಥಾನ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ಈದಿನ ನೇಮಕ ಮಾಡಿದರು.  ಅವರಲ್ಲಿ ಬಿಜೆಪಿಯ ತಮಿಳುನಾಡು ಘಟಕದ ಮುಖ್ಯಸ್ಥ ೫೮ರ ಹರೆಯದ ಡಾ. ತಮಿಳಿಸಾಯಿ  ಸೌಂದರರಾಜನ್ ಮತ್ತು ಮಾಜಿ ಸಚಿವ ಬಂಡಾರು ದತ್ತಾತ್ರೇಯ ಮತ್ತು ತ್ರಿವಳಿ ತಲಾಖ್ ಪದ್ಧತಿಯ ಪ್ರಬಲ ಟೀಕಾಕಾರ ಆರಿಫ್ ಮೊಹಮ್ಮದ್ ಖಾನ್ ಸೇರಿದರು. ಬಿಜೆಪಿ ನಾಯಕ ಹಾಗೂ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ೭೭ರ ಹರೆಯದ ಭಗತ್ ಸಿಂಗ್ ಕೋಶ್ಯಾರಿ  ಅವರು ಮಹಾರಾಷ್ಟ್ರದ ಹೊಸ ರಾಜ್ಯಪಾಲರಾಗಿ ನೇಮಕಗೊಂಡರು.  ತಮಿಳುನಾಡಿದ ಬಿಜೆಪಿ ಘಟಕದ ಮುಖ್ಯಸ್ಥ ತಮಿಳುಸಾಯಿ ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು. ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲರಾಜ್ ಮಿಶ್ರಾ ಅವರ ಸ್ಥಾನದಲ್ಲಿ ಕೇಂದ್ರದ ಮಾಜಿ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ (೭೨) ಅವರನ್ನು ನೇಮಕ ಮಾಡಲಾಯಿತು.  ಮಾಜಿ ಕೇಂದ್ರ ಸಚಿವ ಕಲರಾಜ್ ಮಿಶ್ರ ಈಗ ರಾಜಸ್ಥಾನದ ರಾಜ್ಯಪಾಲರಾಗಿ ಐದು ವರ್ಷಗಳ ಅವಧಿ ಪೂರೈಸಿರುವ ಕಲ್ಯಾಣ್ ಸಿಂಗ್ ಬದಲಿಗೆ ನೇಮಕಗೊಂಡರು.  ಇತ್ತೀಚೆಗೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಮಿಶ್ರ ಅವರು ಇದೀಗ ರಾಜಸ್ಥಾನಕ್ಕೆ ಸ್ಥಳಾಂತರಗೊಂಡರು. ಕೋಶ್ಯಾರಿ ಅವರು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ಬದಲಿಗೆ ನೇಮಕಗೊಂಡಿದ್ದರೆ, ಸೌಂದರರಾಜನ್ ಅವರು ತೆಲಂಗಾಣದ ಹಾಲಿ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.  ಇವರಲ್ಲದೆ, ಕೇಂದ್ರದ ಮಾಜಿ ಸಚಿವ ೬೮ರ ಹರೆಯದ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರ ಸ್ಥಾನಕ್ಕೆ ನೇಮಕ ಮಾಡಲಾಯಿತು. ಆರಿಫ್ ಮೊಹಮ್ಮದ್ ಖಾನ್ ಅವರು ಒಂದೇ ಉಸಿರಿನಲ್ಲಿ ತ್ರಿವಳಿ ತಲಾಕ್ ಪದ ಉಸುರಿ ವಿಚ್ಛೇದನ ನೀಡುವ ಮುಸ್ಲಿಂ ವಿಚ್ಚೇದನ ಪದ್ಧತಿಯ ಪ್ರಬಲ ಟೀಕಾಕಾರರಾಗಿದ್ದರು. ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಅಮಾನ್ಯಗೊಳಿಸುವ ಸಲುವಾಗಿ ಕಾನೂನು ರೂಪಿಸಿದ್ದನ್ನು ಪ್ರತಿಭಟಿಸಿ ಅವರು ಆಗಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವನ್ನು ತ್ಯಜಿಸಿದ್ದರು ಮತ್ತು ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳ ಅಗತ್ಯವನ್ನು ಪ್ರತಿಪಾದಿಸಿದ್ದರು.  ಈದಿನ ಎಲ್ಲ ನೇಮಕಾತಿಗಳು ನೇಮಕಾತಿ ಹೊಂದಿದವರು ತಮ್ಮ ಕಚೇರಿಗಳಲ್ಲಿ ಅಧಿಕಾರ ವಹಿಸಿಕೊಳ್ಳುವ ದಿನದಿಂದ ಜಾರಿಗೆ ಬರುತ್ತವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು. ಪ್ರಕಟಣೆಯ ನಂತರ ಸುದ್ದಿ ಸಂಸ್ಥೆ  ಜೊತೆ ಮಾತನಾಡಿದ ಆರಿಫ್ಖಾನ್ ಇದನ್ನು ಸೇವೆ ಮಾಡಲು ತಮಗೆ ಲಭಿಸಿರುವ ಅವಕಾಶ ಎಂದು  ಬಣ್ಣಿಸಿದರು. "ಸಮೃದ್ಧವಾದ  ವೈವಿಧ್ಯತೆಗಳಿರವ ಭಾರತದಂತಹ ದೇಶದಲ್ಲಿ ಜನಿಸಿರುವುದು ನನ್ನ ಅದೃಷ್ಟ.   ದೇಶದ ಗಡಿಭಾಗವನ್ನು ತಿಳಿದುಕೊಳ್ಳಲು ಇದು ನನಗೆ ಒಂದು ಉತ್ತಮ ಅವಕಾಶವಾಗಿದೆಎಂದು ಅವರು ಹೇಳಿದರು.  ಹೊಸ ಜವಾಬ್ದಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ  ಮತ್ತು "ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇನೆ" ಎಂದು ಬಂಡಾರು ದತ್ತಾತ್ರೇಯ ಹೇಳಿದರು.  ೧೯೮೫ರ ಭಾಷಣ: ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ್ನು ಬೆಂಬಲಿಸಿ ಮೊದಲಿಗೆ ರಾಜೀವ ಗಾಂಧಿ ಸರ್ಕಾರ ತಳೆದಿದ್ದ ನಿಲುವನ್ನು ಮೆಚ್ಚಿ ಆರಿಫ್ ಮೊಹಮ್ಮದ್ ಖಾನ್ ಅವರು ತೀರ್ಪನ್ನು ಸಮರ್ಥಿಸಿ ಸಂಸತ್ತಿನಲ್ಲಿ ಮಾಡಿದ್ದ ಭಾಷಣ ಅತ್ಯಂತ ಜನಪ್ರಿಯತೆ ಗಳಿಸಿತ್ತು.  ಏನಿದ್ದರೂ ಬಳಿಕ ಮುಸ್ಲಿಂ ಧರ್ಮಗುರುಗಳ ಒತ್ತಡಕ್ಕೆ ಮಣಿದು ಉಲ್ಟಾ ಹೊಡೆದಿದ್ದ ರಾಜೀವಗಾಂಧಿ ಸರ್ಕಾರವು ಸುಪ್ರೀಂಕೋರ್ಟ್ ತೀರ್ಪನ್ನೇ ಅಮಾನ್ಯಗೊಳಿಸಲು ಕಾನೂನು ರೂಪಿಸಿತ್ತು. ಅದನ್ನು ಪ್ರತಿಭಟಿಸಿ ಆರಿಫ್ ಖಾನ್ ಅವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಉತ್ತರಪ್ರದೇಶದ ರಾಜಕಾರಣಿಯಾದ ಖಾನ್ ಅವರು ಬಳಿಕ ಬಿಜೆಪಿ ಸೇರಿದರಾದರೂ ೨೦೦೭ರಿಂದ ನಿಷ್ಕ್ರಿಯರಾಗಿ ಉಳಿದಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತ್ರಿವಳಿ ತಲಾಖ್ ವಿಚ್ಛೇದನ ಕ್ರಮವನ್ನು ದಂಡನೀಯ ಅಪರಾಧವನ್ನಾಗಿ ಮಾಡಿ ಕಾನೂನು ತಂದಾಗ ಆರಿಫ್ ಖಾನ್ ಅವರು ಅದನ್ನು ಬೆಂಬಲಿಸಿದ್ದರು. ಶಾಬಾನೋ ಪ್ರಕರಣಲ್ಲಿ, ತ್ರಿವಳಿ ತಲಾಖ್ ಮೂಲಕ ವಿಚ್ಛೇದಿತಳಾದ ಮುಸ್ಲಿಂ ಮಹಿಳೆಗೆ ಮಾಸಾಶನ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿ ಸುಪ್ರೀಂಕೋರ್ಟ್ ಚಾರಿತ್ರಿಕ ತೀರ್ಪು ನೀಡಿತ್ತು.

2019: ಇಸ್ಲಾಮಾಬಾದ್:  ಪಾಕಿಸ್ತಾನದಲ್ಲಿ ಗೂಢಚರ್ಯೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿ ಸೆರೆಯಲ್ಲಿರುವ ಭಾರತದ ನಿವೃತ್ತ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಸೆಪ್ಟೆಂಬರ್ ೨ರ ಸೋಮವಾರ ಭಾರತದ ದೂತಾವಾಸ ಸಂಪರ್ಕ ಒದಗಿಸಲಾಗುವುದು ಎಂದು ಪಾಕಿಸ್ತಾನವು ಪ್ರಕಟಿಸಿತು.  ೪೯ರ ಹರೆಯದ ಜಾಧವ್ಗೆ ವಿಯೆನ್ನಾ ಸಮಾವೇಶದ ನಿರ್ಣಯ, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಮತ್ತು ಪಾಕಿಸ್ತಾನದ ಕಾನೂನುಗಳಿಗೆ ಅನುಗುಣವಾಗಿ ದೂತಾವಾಸ ಸಂಪರ್ಕವನ್ನು ಒದಗಿಸಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದರು. ಜಾಧವ್ ಅವರಿಗೆ ಗೂಢಚರ್ಯೆ ಆಪಾದನೆಯಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂದು ಪಾಕಿಸ್ತಾನ ಪ್ರತಿಪಾದಿಸಿತ್ತು. ಆದರೆ ನಿವೃತ್ತಿಯ ಬಳಿಕ ತಮ್ಮ ಸ್ವಂತ ವಹಿವಾಟಿನ ಸಂಬಂಧ ಇರಾನಿಗೆ ತೆರಳಿದ್ದ ಜಾಧವ್ ಅವರನ್ನು ಇರಾನಿನಿಂದ ಅಪಹರಿಸಿ ಪಾಕಿಸ್ತಾನಕ್ಕೆ ಒಯ್ಯಲಾಗಿದ್ದು ಅವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಭಾರತ ಪ್ರತಿಪಾದಿಸಿತ್ತು. 
2019: ಬೆಂಗಳೂರು: ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹಳೆಯದಾಗಿದ್ದು, ಅದರಲ್ಲಿ ನಿಮ್ಮ ಭಾವಚಿತ್ರ ಸರಿಯಾಗಿ ಕಾಣಿಸುತ್ತಿಲ್ಲವೇ? ಹಾಗಾದರೆ ಚಿಂತಿಸಬೇಡಿ. ನಿಮಗೆ ಒಂದು ಒಳ್ಳೆಯ ಸುದ್ದಿ ಇಲ್ಲಿದೆ. ಈಗ ನಿಮ್ಮ ಹಳೆಯ ಮತದಾರರ ಗುರುತಿನ ಚೀಟಿಯನ್ನು  ನಿಮ್ಮ ಇತ್ತೀಚೆಗಿನ ಹೊಸ ಕಲರ್ ಭಾವ ಚಿತ್ರವನ್ನು ಹಾಕಿ ನವೀಕರಿಸಬಹುದು. ಅಷ್ಟೇ ಅಲ್ಲ, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿನ ಮತದಾರರ ಯಾದಿಯಲ್ಲಿ ನಿಮ್ಮ ಹೆಸರಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ಕೂಡ ಅವಕಾಶ ಒದಗಿಸಲಾಗಿದೆ.  ಇದಕ್ಕಾಗಿ www.nvsp.in ವೆಬ್ಸೈಟ್ ಗೆ ಲಾಗಿನ್ ಆಗಬೇಕು. ಬಳಿಕ ಅಲ್ಲಿ ನಿಮ್ಮ ಭಾವಚಿತ್ರ ಮತ್ತು ಮಾಹಿತಿ ತಿದ್ದುಪಡಿಗಳನ್ನು ನೀವು ಮಾಡಬಹುದು.  ವಾರ್ತಾ ಇಲಾಖೆಯ ಕಚೇರಿಯಲ್ಲಿ ಈದಿನ  ಚುನಾವಣಾ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ  ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ವಿಷಯವನ್ನು ತಿಳಿಸಿದರು. ಮತದಾರರ ಯಾದಿಯಲ್ಲಿ ಶೇ. ಕ್ಕಿಂತಲೂ ಹೆಚ್ಚು ನಕಲಿ ಮತದಾರರಿದ್ದಾರೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ. ಮತದಾರರ ಯಾದಿ ಪರಿಶೀಲನೆಗೆ ಸಾರ್ವಜನಿಕರು ಸೂಕ್ತವಾಗಿ ಸಹಕರಿಸಿದಲ್ಲಿ ಇಂತಹ ನಕಲಿ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಾಗಲಿದೆ ಎಂದು ಸಂಜೀವ್ ಕುಮಾರ್ ಹೇಳಿದರು. ಸದ್ಯದ ಚುನಾವಣಾ ಮತದಾರರ ಯಾದಿಯಲ್ಲಿ ಲಿಂಗ ಅಸಮಾನತೆ ಸರಿಯಾಗಿದ್ದು, ಪುರುಷ - ಮಹಿಳೆ ಮತದಾರರ ಅನುಪಾತ  ಸಾವಿರಕ್ಕೆ ೯೭೯ ಇದೆ.  ಇದರ ಹೊರತಾಗಿ, ಯುವ ಮತದಾರರ ಸಂಖ್ಯೆಯಲ್ಲಿ ಕೆಲವೊಂದು ಸಮಸ್ಯೆಗಳಿವೆ. ಅರ್ಹ ಯುವ ಮತದಾರರ ಸಂಖ್ಯೆ ೧೧ಲಕ್ಷಕ್ಕೂ ಅಧಿಕ ಇದೆ. ಆದರೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ ಸುಮಾರು ೧೦ಲಕ್ಷ ಮಾತ್ರ ಇದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಮೂಲಕ ಯುವ ಮತದಾರರ ನೋಂದಣಿಯನ್ನು ಶೇ.೧೦೦ರಷ್ಟು ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಮಾತನಾಡಿ, ವೋಟರ್ ಐಡಿಯಲ್ಲಿರುವ ಹಳೆ ಫೋಟೋ ಬದಲಾವಣೆಗೆ ಅವಕಾಶ ಇದೆ. ಹಾಗೆಯೇ ಒಂದು ಕುಟುಂಬದ ಎಲ್ಲ ಮತದಾರರನ್ನು ಒಂದೇ ಮತಗಟ್ಟೆಯಲ್ಲಿ ಸೇರಿಸಲು ಅವಕಾಶ ಇದೆ. ಬದಲಾವಣೆಗಳನ್ನು ಅಂತರ್ಜಾಲದ (ಆನ್ ಲೈನ್) ಮೂಲಕವೇ ಮಾಡಿಕೊಳ್ಳಬಹುದು ಎಂದು ವಿವರಿಸಿದರು.

2019: ಸುಬ್ರಹ್ಮಣ್ಯ: ಕರ್ನಾಕದ ದಕ್ಷಿಣ ಕನ್ನಡ ಜಿಲ್ಲೆಯ ದಟ್ಟ ಕಾನನದ ಮಧ್ಯೆ ಕುಮಾರ ಪರ್ವತ ಮತ್ತು ಶೇಷ ಪರ್ವತಗಳ ರಮಣೀಯ ಪರಿಸರದಲ್ಲಿ ಇರುವ ಕುಕ್ಕೆ ಸುಬ್ರಹ್ಮಣ್ಯ ಕರ್ನಾಟಕದ ಏಳು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದು. ಭಾರತದ 108 ಶೈವ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕು ಸುಬ್ರಹ್ಮಣ್ಯ  ಅಗಾಧ ಶಕ್ತಿಯ ಕಾರ್ಣಿಕೆ ಇರುವ ಕ್ಷೇತ್ರ ಎಂದೇ ಪ್ರತೀತಿ. ಮಳೆ, ಬೆಳೆ, ಸಂಪತ್ತು, ಸಂತಾನಪ್ರಾಪ್ತಿ, ರೋಗಗಳಿಂದ ಮುಕ್ತಿಗಾಗಿ ಭಕ್ತರು ಇಲ್ಲಿ ಸಲ್ಲಿಸುವ ಪ್ರಾರ್ಥನೆ ಫಲ ನೀಡುತ್ತದೆ ಎಂಬ ನಂಬಿಕೆ ಪುರಾತನ ಕಾಲದಿಂದಲೇ ಇದೆ. ಕುಮಾರಧಾರಾ ನದಿಯಲ್ಲಿ ಒಂದು ಮುಳುಗು ಹಾಕಿ ಸುಬ್ರಹ್ಮಣ್ಯನಿಗೆ ಉರುಳು ಸೇವೆ ಸಲ್ಲಿಸುವುದರಿಂದ ಚರ್ಮರೋಗಗಳಿಂದ ಮುಕ್ತಿ ದೊರೆಯುವುದು ಎಂಬ ನಂಬಿಕೆ ಇದೆ.  ಈ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇದೀಗ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದೆ. ನೂತನ ಬ್ರಹ್ಮರಥದ ಕೆಲಸ ಕಾರ್ಯಗಳು ಬಹುತೇಕ ಪೂರ್ತಿಗೊಂಡಿದೆ.  ವಿವಿಧ ಜಾತಿಯ 2000 ಸಿ ಎಫ್ ಟಿ  ಮರ ಬಳಸಿ ಈ ಬ್ರಹ್ಮರಥವನ್ನು ನಿರ್ಮಿಸಲಾಗಿದೆ. ಕೋಟೇಶ್ವರದಲ್ಲಿ ಕೇವಲ 7 ತಿಂಗಳಲ್ಲಿ ಸುಂದರವಾದ ಕೆತ್ತನೆಗಳೊಂದಿಗೆ ನೂತನ ಬ್ರಹ್ಮರಥ ನಿರ್ಮಾಣವಾಗಿದೆ.  ನವರಾತ್ರಿ ಆರಂಭವಾಗುವ ಹೊತ್ತಿಗೆ,  ಸೆಪ್ಟೆಂಬರ  29 ರಂದು ರಥವನ್ನು ದೇವಾಲಯಕ್ಕೆ ಬಿಟ್ಟು ಕೊಡಲಾಗುತ್ತದೆ. ಸೆಪ್ಟೆಂಬರ  30 ರಂದು ಬೆಳಗ್ಗೆ ರಥವು ಟ್ರಾಲಿಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಸ್ತುತ  ಸುಮಾರು 400 ವರ್ಷಗಳ ಪುರಾತನವಾದ ರಥ ಇದೆ. ಈ ಪುರಾತನ ರಥದ ಅಳತೆಗೆ, ಶಾಸ್ತ್ರಕ್ಕೆ ಯಾವುದೇ ಧಕ್ಕೆಯಾಗದಂತೆ ಅದೇ ಮಾದರಿಯಲ್ಲಿ ಈಗ ಹೊಸ ಬ್ರಹ್ಮರಥ ನಿರ್ಮಾಣ ಮಾಡಲಾಗಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಕೋಟೇಶ್ವರದ  ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ರೈ ಕಡಬ ದಾನ ರೂಪದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ  ರಥವನ್ನು ನಿರ್ಮಿಸಿಕೊಡುತ್ತಿದ್ದಾರೆ.
2019: ನವದೆಹಲಿ:  ದೇಶದ ಆರ್ಥಿಕ ಸ್ಥಿತಿಯ ಹಿಂಜರಿತದ ಪರಿಣಾಮ ರಾಷ್ಟ್ರದ ಒಟ್ಟಾರೆ ಸರಕು ಮತ್ತು ಸೇವಾ ತೆರಿಗೆ  (ಜಿಎಸ್ ಟಿ) ಸಂಗ್ರಹದಲ್ಲಿ ಇಳಿಕೆ ಕಂಡು ಬಂದಿತು.  ಅಗಸ್ಟ್ತಿಂಗಳಿನಲ್ಲಿ 1.02 ಲಕ್ಷ ಕೋಟಿಯಿಂದ 98,202 ಕೋಟಿಗೆ ಇಳಿಕೆಯಾಗಿದೆ ಎಂದು ಕೇಂದ್ರದ ಹಣಕಾಸು ಇಲಾಖೆ ಹೇಳಿತು.
ಆದರೆ ಕಳೆದ ವರ್ಷ ಇದೇ ಅವಧಿಗೆ ಸಂಗ್ರಹವಾದ ಜಿಡಿಪಿ ಪ್ರಮಾಣಕ್ಕೆ ಹೋಲಿಸಿದರೆ ಶೇ. 4.5 ಪ್ರಗತಿ ಕಂಡಿತು. ಕಳೆದ ವರ್ಷದ ಇದೇ ಅವಧಿಯಲ್ಲಿ 93,960 ಕೋಟಿ. ರೂ. ಸಂಗ್ರಹಿಸಲಾಗಿತ್ತು. ವರ್ಷ ಅದು 98,202ಕ್ಕೆ ಏರಿಕೆಯಾಯಿತು. ದೇಶದ ಆರ್ಥಿಕ ಹಿಂಜರಿತದ ಪರಿಣಾಮ ದೇಶದ ಜಿಡಿಪಿ ಪ್ರಮಾಣ ಕುಸಿತವಾಗಿತ್ತು. ಮುಖ್ಯವಾಗಿ ಅಟೋ ಮೊಬೈಲ್ಸೇರಿದಂತೆ ಇತರ ಉತ್ಪಾದನಾ ಕ್ಷೇತ್ರದಲ್ಲಿ ಇಳಿಕೆ ದಾಖಲಾಗಿತ್ತು. ಇದರ ಪರಿಣಾಮ ಜಿಎಸ್ಟಿ ಸಂಗ್ರಹದಲ್ಲೂ ಇಳಿಕೆಯಾಗಿದೆ ಎಂದು ಹೇಳಲಾಯಿತು.  2019-20 ಸುಮಾರಿಗೆ ಕೇಂದ್ರ ಸರ್ಕಾರ ಸುಮಾರು 6.10 ಲಕ್ಷ ಕೋಟಿ ಸಿಜಿಎಸ್ಟಿ ಮತ್ತು ಕಾಂಪನ್ಸೇಶನ್ಸೆಸ್ರೂಪದಲ್ಲಿ 1.01 ಲಕ್ಷ ಕೋಟಿ ಸಂಗ್ರಹಿಸುವ ಇರಾದೆ ವ್ಯಕ್ತಪಡಿಸಿತ್ತು.


No comments:

Post a Comment