Monday, September 2, 2019

ಚಂದ್ರಯಾನ ೨ : ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ಪ್ರತ್ಯೇಕ

ಚಂದ್ರಯಾನ :  ಆರ್ಬಿಟರ್ ನಿಂದ 
ವಿಕ್ರಮ್  ಲ್ಯಾಂಡರ್  ಪ್ರತ್ಯೇಕ

ಇಸ್ರೋಗೆ ಮತ್ತೊಂದು ಯಶಸ್ಸು
ನವದೆಹಲಿ:  ಚಂದ್ರಯಾನ -2 ಬಾಹ್ಯಾಕಾಶ ನೌಕೆಯ ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ನಿಂದ ಬೇರ್ಪಡೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನವು 2019ರ ಸೆಪ್ಟೆಂಬರ್ 2ರಂದು  ಮಹತ್ವದ  ಯಶಸ್ಸನ್ನು ಸಾಧಿಸಿತು.

 ಚಂದ್ರಯಾನ  - ರಲ್ಲಿದ್ದ  ಲ್ಯಾಂಡರ್-ರೋವರ್ ನ್ನು ಈದಿನ  ಮಧ್ಯಾಹ್ನ ಸಂಯೋಜಿತ ಮಾಡ್ಯೂಲ್ನಿಂದ ಬೇರ್ಪಡಿಸಲಾಯಿತು.  ಈಗ, ಲ್ಯಾಂಡರ್ ಮತ್ತು ಆರ್ಬಿಟರ್ ಅನ್ನು ಪ್ರತ್ಯೇಕವಾಗಿ ನಿಯಂತ್ರಿಸಲಾಗುತ್ತದೆ.

ವಿಕ್ರಮ್  ಲ್ಯಾಂಡರ್  ಈದಿನ ಮಧ್ಯಾಹ್ನ ಭಾರತೀಯ ಕಾಲಮಾನ  ೧೩.೧೫ ಗಂಟೆಗೆ ಚಂದ್ರಯಾನ- ಆರ್ಬಿಟರ್ನಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಚಂದ್ರಯಾನ ಆರ್ಬಿಟರ್ ಮತ್ತು ಲ್ಯಾಂಡರ್ ನ  ಎಲ್ಲಾ ವ್ಯವಸ್ಥೆಗಳು ಸುಸ್ಥಿತಿಯಲ್ಲಿವೆಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೇಳಿಕೆ ತಿಳಿಸಿತು.
ಬೆಂಗಳೂರು ಸಮೀಪದ  ಬ್ಯಾಲಾಳುವಿನಲ್ಲಿರುವ  ಭಾರತೀಯ  ಅಂತರಿಕ್ಷ ಜಾಲವು (ಇಂಡಿಯನ್  ಡೀಪ್ ಸ್ಪೇಸ್  ನೆಟ್ವರ್ಕ್ -ಐಡಿಎಸ್ಎನ್) ಆಂಟೆನಾಗಳ ಬೆಂಬಲದೊಂದಿಗೆ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ನಲ್ಲಿ  (ಐಎಸ್ಟಿಆರ್ಎಸಿ) ಇರುವ  ಮಿಷನ್ ಆಪರೇಶನ್ಸ್  ಕಾಂಪ್ಲೆಕ್ಸಿನಿಂದ (ಎಂಒಎಕ್ಸ್) ಲ್ಯಾಂಡರ್ ಮತ್ತು ಆರ್ಬಿಟರ್  ಅನ್ನು ಪರೀಕ್ಷಿಸುತ್ತಿದೆ.

ಇಸ್ರೋ  ವಿಜ್ಞಾನಿಗಳು  ನಾಳೆ  (ಸೆಪ್ಟೆಂಬರ್ 3ರ ಬೆಳಿಗ್ಗೆ ೦೯:೦೦ ರಿಂದ ೧೦:೦೦ ವೇಳೆಯಲ್ಲಿ  ಎರಡು ಡಿಬೂಸ್ಟಿಂಗ್  ಕಾರ್ಯವನ್ನು   ನಿರ್ವಹಿಸಲಿದ್ದಾರೆ. ಉಭಯ ಕಾರ್ಯಗಳು  ಲ್ಯಾಂಡರ್-ರೋವರ್ ಅನ್ನು ೩೬x ೧೦೦ ಕಿಮೀ ಕಕ್ಷೆಗೆ ಇಳಿಸಲಿದೆ.

ದೇಶೀಯವಾಗಿ  ಅಭಿವೃದ್ಧಿ ಪಡಿಸಿದ ಲ್ಯಾಂಡರ್ ನ ವ್ಯವಸ್ಥೆಗಳು ಚೆನ್ನಾಗಿ ಕಾರ್ಯ ನಿರ್ವರ್ಹಿಸುತ್ತಿವೆಯೇ ಎಂಬುದಾಗಿ ಪರೀಕ್ಷಿಸಲು ನಡೆದ ಚೊಚ್ಚಲ ಯತ್ನವಾದ್ದರಿಂದ ಚಂದ್ರಯಾನ 2ರ ಆರ್ಬಿಟರ್ ನಿಂದ ಲ್ಯಾಂಡರ್- ರೋವರ್ ನ್ನು ಪ್ರತ್ಯೇಕಿಸಿರುವ ಈದಿನದ ಕಾರ್ಯವು ಚಂದ್ರಯಾನ 2 ಯೋಜನೆಯ ನಿರ್ಣಾಯಕ ಕಾರ್ಯವಾಗಿತ್ತು.
ಚಂದ್ರನೆಲದ ಮೇಲೆ ಇಳಿಯುವ ಪ್ರಕ್ರಿಯೆ  ಪೂರ್ಣಗೊಳ್ಳುವವರೆಗೆ, ಅದು ಭಯಾನಕವಾಗಿರುತ್ತದೆ. ಇಲ್ಲಿಯವರೆಗೆ, ನಾವು ಲ್ಯಾಂಡರ್ನಲ್ಲಿರುವ  ವ್ಯವಸ್ಥೆಗಳನ್ನು, ವಿಶೇಷವಾಗಿ ಪ್ರೊಪಲ್ಷನ್ ಸಿಸ್ಟಮನ್ನು ನಿರ್ವಹಿಸಿಲ್ಲ. ಚಾಲಿತ ಮೂಲವನ್ನು ಒಳಗೊಂಡಂತೆ ಇದೇ ಮೊದಲ ಬಾರಿಗೆ  ನಾವು ಇದನ್ನು ನಿರ್ವಹಿಸುತ್ತಿದ್ದೇವೆ. ಹೀಗಾಗಿಯೇ ಇದು ನಿರ್ಣಾಯಕ’  ಎಂದು ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಗೆ ಪ್ರವೇಶಿಸಿದ ನಂತರ ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದರು.

No comments:

Post a Comment