Tuesday, September 10, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 10

2019: ಜಿನೀವಾ/ ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಭಾರತದಆಂತರಿಕ ವಿಷಯಎಂಬುದಾಗಿ ಸ್ವಿಜರ್ಲೆಂಡಿನ ಜಿನೇವಾದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ  (ಯುಎನ್ಎಚ್ಆರ್ಸಿ) ಸಮಾವೇಶದಲ್ಲಿ ಪುನರುಚ್ಚರಿಸುವ ಮೂಲಕ ಭಾರತವು 2019 ಸೆಪ್ಟೆಂಬರ್  10ರ ಮಂಗಳವಾರ ಪಾಕಿಸ್ತಾನಕ್ಕೆ ಪ್ರಬಲ ಎದಿರೇಟು ನೀಡಿತು. ಮಂಡಳಿಯ ೪೨ನೇ ಅಧಿವೇಶನದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖರೇಶಿ ಅವರು ಮಾಡಿದ ಪ್ರಸ್ತಾಪಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ (ಪೂರ್ವ) ವಿಜಯ್ ಠಾಕುರ್ ಸಿಂಗ್ ಅವರು  ಖಡಕ್ ಉತ್ತರ  ನೀಡಿದರು. ಭಾರತದ ವಿರುದ್ಧ ಮಾತನಾಡಲು ಯೋಜಿತರಾಗಿದ್ದ ಖರೇಶಿಕಾಶ್ಮೀರ ವಿಷಯವು ನೇರವಾಗಿ ಅಂತಾರಾಷ್ಟ್ರೀಯ ಕಳಕಳಿಯ ವಿಷಯ, ಕೇವಲ ಭಾರತದ ಆಂತರಿಕ ವಿಷಯವಲ್ಲಎಂದು ಹೇಳಿದ್ದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಗತಿಪರ ನೀತಿಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮಹಿಳಾ ಹಕ್ಕುಗಳನ್ನು ಅನುಷ್ಠಾನಗೊಳಿಸಲಾಗುವುದುಎಂದು ವಿಜಯ್  ಠಾಕುರ್ ಸಿಂಗ್  ಹೇಳಿದರು. ಹಿಂದಿನ ಜಮ್ಮು -ಕಾಶ್ಮೀರ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಪಾಕಿಸ್ತಾನದ ಆಪಾದನೆಗಳು ತಪ್ಪು ಹಾಗೂ ಕಟ್ಟುಕಥೆಗಳು ಎಂದು ಹೇಳಿದ ವಿಜಯ್, ’ಭಾರತದ ಸಾರ್ವಭೌಮ ನಿರ್ಧಾರಗಳು ಸಂಪೂರ್ಣವಾಗಿ ಆಂತರಿಕ ವಿಷಯಗಳಾಗಿವೆಎಂದು ನುಡಿದರು. ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯು ೪೭ ಸದಸ್ಯರನ್ನು ಹೊಂದಿದ್ದು ಭಾರತ ಮತ್ತು ಪಾಕಿಸ್ತಾನ ಪ್ರಸ್ತುತ ಏಷ್ಯಾ ಫೆಸಿಫಿಕ್ ಸಮೂಹದ ಪಟ್ಟಿಯಲ್ಲಿವೆ. ಭಾರತವು ೨೦೨೧ರವರೆಗೆ ಸದಸ್ಯನಾಗಿದ್ದರೆ, ಪಾಕಿಸ್ತಾನದ ಸದಸ್ಯತ್ವವು ೨೦೨೦ಕ್ಕೆ ಮುಗಿಯಲಿದೆ. ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ಅಧಿಕೇಂದ್ರವಾಗಿದ್ದು, ಅದು ಮಾಡಿರುವ ಆಪಾದನೆಗಳು ತಪ್ಪು ಹಾಗೂ ಕಟ್ಟು ಕಥೆಗಳು. ಭಯೋತ್ಪಾದಕ ನಾಯಕರಿಗೆ ಆಶ್ರಯ ನೀಡಿದ ಜಾಗತಿಕ ಭಯೋತ್ಪಾದನೆಯ ಅಧಿಕೇಂದ್ರದಿಂದ ತಪ್ಪು, ಕಟ್ಟುಕಥೆಗಳು ಬರುತ್ತಿವೆ ಎಂಬುದು ಇಡೀ ಜಗತ್ತಿದೆ ಗೊತ್ತಿದೆಎಂದು ವಿಜಯ್ ಠಾಕೂರ್ ಸಿಂಗ್ ನುಡಿದರು.

2019: ನವದೆಹಲಿ/ ಜಿನೇವಾ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ೪೨ನೇ ಅಧಿವೇಶನದಲ್ಲಿ (ಯುಎನ್ಎಚ್ಆರ್ಸಿ) ಕಾಶ್ಮೀರ ವಿಷಯವನ್ನು 2019 ಸೆಪ್ಟೆಂಬರ್ 10ರ ಮಂಗಳವಾರ ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರುಕಾಶ್ಮೀರವನ್ನು ಭಾರತೀಯ ರಾಜ್ಯಎಂಬುದಾಗಿ ಉಲ್ಲೇಖಿಸಿ, ಜಮ್ಮು- ಕಾಶ್ಮೀರವುಭಾರತದ ಅವಿಭಾಜ್ಯ ಅಂಗಎಂಬುದನ್ನು ಒಪ್ಪಿಕೊಂಡರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಭಾರತ ಸರ್ಕಾರದ ಕ್ರಮವನ್ನು ವಿರೋಧಿಸುತ್ತಿರುವ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ ಸಭೆಯಲ್ಲಿ ಜಾಗತಿಕ ರಾಷ್ಟ್ರಗಳ ಬೆಂಬಲ ಪಡೆಯಲು ವಿಫಲ ಯತ್ನ ನಡೆಸಿದ ಬಳಿಕ ವಿಷಯನ್ನು ಮಂಗಳವಾರ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ (ಯುಎನ್ಎಚ್ಆರ್ಸಿ) ಒಯ್ದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್ ಗಂಜ್ ನಡುವಣ ೬೦ ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಚಾರಿತ್ರಿಕ ಕೊಳವೆಮಾರ್ಗವನ್ನು (ಪೈಪ್ ಲೈನ್) ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ವಿಡಿಯೋ ಕಾನ್ಪರೆನ್ಸ್ ಮೂಲಕ  2019 ಸೆಪ್ಟೆಂಬರ್ 10ರ ಮಂಗಳವಾರ ಜಂಟಿಯಾಗಿ ಉದ್ಘಾಟಿಸಿದರು. ಪೈಪ್ ಲೈನ್ ದಕ್ಷಿಣ ಏಷ್ಯಾದ ಮೊತ್ತ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್ ಲೈನ್ ಎಂದು ಖ್ಯಾತಿ ಪಡೆದಿದೆ. ಹಿಂದೆ ೧೯೭೩ರಿಂದ ಜಾರಿಯಲ್ಲಿರುವ ವ್ಯವಸ್ಥೆಯ ಒಂದು ಭಾಗವಾಗಿ ನೇಪಾಳಕ್ಕೆ ಭಾರತದಿಂದ ಟ್ಯಾಂಕರುಗಳ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತು. ಇದು ದುಬಾರಿಯಾಗಿದ್ದ ಕಾರಣ ಎರಡೂ ದೇಶಗಳು ಜಂಟಿಯಾಗಿ ಯೋಜನೆಗೆ ಕೈ ಹಾಕಿದ್ದವು. ಕುರಿತು ಸೋಮವಾರವೇ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ ಸಚಿವಾಲಯ, ಭಾರತ-ನೇಪಾಳ ಇಂಧನ ಸಹಕಾರ ಯೋಜನೆಯು ಎರಡೂ ದೇಶಗಳ ನಿಕಟ ದ್ವಿಪಕ್ಷೀಯ ಸಂಬಂಧಗಳ ಸಂಕೇತವಾಗಿದೆ. ಯೋಜನೆ ಇಂಧನದ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸಾರಿಗೆ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಮುಂಬೈ: ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷದ ಜೊತೆಗಿನ ತಮ್ಮ ತನ್ನ ಅಲ್ಪ ಕಾಲದ ಸಖ್ಯಕ್ಕೆ 2019 ಸೆಪ್ಟೆಂಬರ್ 10ರ ಮಂಗಳವಾರ ವಿದಾಯ ಹೇಳಿದರು. ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದ ಉರ್ಮಿಳಾ, ಐದು ತಿಂಗಳ ಕಾಂಗ್ರೆಸ್ ರಾಜಕಾರಣದ ನಂತರ ಹೊರನಡೆದರು. ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉರ್ಮಿಳಾ ಮಾತೋಂಡ್ಕರ್  ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಭಾರಿ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಪಕ್ಷದ ಒಳ ರಾಜಕೀಯದಿಂದ ಸಂಪೂರ್ಣ ನಿರಾಶಳಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉರ್ಮಿಳಾ ಮಾತೋಂಡ್ಕರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ವಾರಾಂತ್ಯದಲ್ಲಿ ನೀಡಿದ ಜಂಟಿ ಹೇಳಿಕೆಯೊಂದರಲ್ಲಿ ಕಾಶ್ಮೀರ ವಿಷಯವು ಇತಿಹಾಸದಿಂದ ಬಿಟ್ಟುಹೋಗಿರುವ ವಿವಾದ ಎಂಬುದಾಗಿ ಬಣ್ಣಿಸಿ ಮಾಡಿರುವ ಉಲ್ಲೇಖವನ್ನು ಭಾರತವು 2019 ಸೆಪ್ಟೆಂಬರ್ 10ರ ಮಂಗಳವಾರ ದೃಢವಾಗಿ ತಿರಸ್ಕರಿಸಿತು. ‘ಚೀನೀ ವಿದೇಶಾಂಗ ಸಚಿವರ ಇತ್ತೀಚಿನ ಭೇಟಿಯ ಬಳಿಕ ಚೀನಾ ಮತ್ತು ಪಾಕಿಸ್ತಾನವು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮಿರದ ಬಗ್ಗೆ ಮಾಡಿರುವ ಉಲ್ಲೇಖವನ್ನು ನಾವು ತಿರಸ್ಕರಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ್ ಮಂಗಳವಾರ ಇಲ್ಲಿ ತಿಳಿಸಿದರು.  ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾ -ಪಾಕಿಸ್ತಾನ ಆರ್ಥಿಕ ಕಾರಿಡಾರ್ ಕೆಲಸವನ್ನು ಸ್ಥಗಿತಗೊಳಿಸಬೇಕುಎಂದೂ ಭಾರತವು ಉಭಯ ರಾಷ್ಟ್ರಗಳಿಗೆ ಸೂಚಿಸಿತು. ’ಇಂತಹ ಚಟುವಟಿಕೆಗಳನ್ನು ತತ್ ಕ್ಷಣ ಸ್ಥಗಿತಗೊಳಿಸಬೇಕು ಎಂದು ನಾವು ಸಂಬಂಧಪಟ್ಟ ಎಲ್ಲರಿಗೂ ಸೂಚಿಸುತ್ತೇವೆಎಂದು ಕುಮಾರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ:  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐ) ಪಕ್ಷದ ಹಿಂದೂ ರಾಜಕಾರಣಿ, ಮಾಜಿ ಶಾಸಕರೊಬ್ಬರು ಭಾರತದಲ್ಲಿ ರಾಜಕೀಯ ಆಶ್ರಯ ಕೋರಿದ್ದು ಪಾಕಿಸ್ತಾನದಲ್ಲಿ ಹಿಂದುಗಳು ಮತು ಮತ್ತು ಸಿಕ್ಖರು ಸೇರಿದಂತೆ ಅಲ್ಪಸಂಖ್ಯಾತರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತದೆ ಎಂದು ಹೇಳಿದರು. ಪಾಕಿಸ್ತಾನವು ಜಿನೇವಾದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಪರಿಷತ್ತಿನಲ್ಲಿ (ಯುಎನ್ಎಚ್ಆರ್ಸಿ) ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆಪಾದನೆಯ ವಿಷಯವನ್ನು ಪ್ರಸ್ತಾಪಿಸುವ  ಯತ್ನದಲ್ಲಿ ಇರುವಾಗಲೇ ಪಾಕ್ ಪ್ರಧಾನಿಯ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐ) ಪಕ್ಷದ ಮಾಜಿ ಎಂಎಲ್ ಬಲದೇವ್ ಕುಮಾರ್ ಅವರು ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಕರಾಳ ಮುಖ ತೆರೆದಿಟ್ಟು ಭಾರತದಲ್ಲಿ ರಾಜಕೀಯ ಆಶ್ರಯ ಕೋರಿದರು. ‘ಅಲ್ಪಸಂಖ್ಯಾತರಷ್ಟೇ ಅಲ್ಲ, ಮುಸ್ಲಿಮರು ಕೂಡಾ ಅಲ್ಲಿ (ಪಾಕಿಸ್ತಾನ) ಸುರಕ್ಷಿತರಲ್ಲ. ನಾವು ಪಾಕಿಸ್ತಾನದಲ್ಲಿ ತೀವ್ರ ಸಂಕಷ್ಟಗಳೊಂದಿಗೆ ಬದುಕುತ್ತಿದ್ದೇವೆ. ನನಗೆ ಇಲ್ಲಿ ಆಶ್ರಯ ನೀಡುವಂತೆ ನಾನು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಾನು ಪಾಕಿಸ್ತಾನಕ್ಕೆ ವಾಪಸಾಗುವುದಿಲ್ಲಎಂದು ಬಲದೇವ್ ಕುಮಾರ್ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment