Monday, September 23, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 23

2019: ನ್ಯೂಯಾರ್ಕ್: ಜಾಗತಿಕ ಹವಾಮಾನ ಬದಲಾವಣೆಯ ವಿಚಾರದಲ್ಲಿ ಮಾತನಾಡುತ್ತಾ ಕೂರುವ ಕಾಲ ಮುಗಿದಿದೆ, ಈಗ ಕಾರ್ಯ ಪ್ರವೃತ್ತರಾಗಬೇಕಾದ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಸೆಪ್ಟೆಂಬರ್  23ರ ಸೋಮವಾರ ವಿಶ್ವಕ್ಕೆ ಸಂದೇಶ ನೀಡಿದರು. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಮೊದಲಿಗರಾಗಿ ಮಾತನಾಡಿದ ಪ್ರಧಾನಿ ಮೋದಿ ಬಳಸಿ ಬಿಸಾಕುವ (ಏಕ ಬಳಕೆಯ) ಪ್ಲಾಸ್ಟಿಕ್ನ್ನು ನಿಷೇಧಿಸಿರುವ ಭಾರತವು ವಿಶ್ವಕ್ಕೆ ನಿಟ್ಟಿನಲ್ಲಿ ಸ್ಫೂರ್ತಿಯಾದೀತು ಎಂದು ಹಾರೈಸಿದರು. ‘ಮಾತನಾಡುತ್ತಾ ಕೂರುವ ಕಾಲ ಮುಗಿದಿದೆ, ಕಾರ್ಯಪ್ರವೃತ್ರರಾಗಬೇಕಾದುದು ಈಗ ಜಗತ್ತಿನ ಅಗತ್ಯ’ ಎಂದು ಅವರು ನುಡಿದರು. ‘ಭಾರತವು ಇಲ್ಲಿಗೆ ಬಂದಿರುವುದು ಗಂಭೀರ ವಿಷಯದ (ಹವಾಮಾನ ಬದಲಾವಣೆ) ಬಗ್ಗೆ ಕೇವಲ ಮಾತನಾಡುತ್ತಾ ಕೂರುವುದಕ್ಕೆ ಅಲ್ಲ. ತಾನು ಕೈಗೊಂಡಿರುವ ಪ್ರಾಯೋಗಿಕ ಕೆಲಸವನ್ನು ಮುಂದಿಡುವುದಕ್ಕಾಗಿ. ಬದಲಾವಣೆಯ ನಿಟ್ಟಿನಲ್ಲಿ ಜಗತ್ತಿನ ಜನರು ಕಾರ್ಯಪ್ರವೃತ್ತರಾಗಬೇಕಾದ ಅಗತ್ಯ ಈಗಿದೆಎಂದು ಅವರು ಹೇಳಿದರು. ೨೦೧೫ರಲ್ಲಿ ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವ ಹಂತಗಳಲ್ಲಿ ಡಿಗ್ರಿ ಸೆಲ್ಸಿಯಸ್ಗಿಂತಲೂ ಕೆಳಕ್ಕೆ ಇರಿಸುವ ಉದ್ದೇಶವನ್ನು ಬಲಪಡಿಸಲು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದನ್ನು . ಡಿಗ್ರಿ ಸೆಲ್ಸಿಯಸ್ಗಿಂತಲೂ ಕೆಳಕ್ಕೆ ಇಳಿಸಬೇಕಾದ ಅಗತ್ಯವಿದೆ. ಭಾರತವು ಗಿಗಾವ್ಯಾಟ್ನಷ್ಟು (ಜಿಡಬ್ಲ್ಯೂ) ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅದು ೨೦೨೨ರ ವೇಳೆಗೆ ೧೦೦ ಗಿಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಗುರಿಯನ್ನು ನಿಗದಿಪಡಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ಚೆನ್ನೈ: ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಾರತೀಯ ವಾಯುಪಡೆ ಬಾಂಬ್ ದಾಳಿ ನಡೆಸಿದ್ದ ಭಯೋತ್ಪಾದಕ ಶಿಬಿರ ಇತ್ತೀಚೆಗೆ ಮತ್ತೆ ಸಕ್ರಿಯಗೊಂಡಿದ್ದುಕನಿಷ್ಠ ೫೦೦ ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಭಾರತದ ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರು 2019 ಸೆಪ್ಟೆಂಬರ್ 23ರ ಸೋಮವಾರ ಇಲ್ಲಿ ದೃಢಪಡಿಸಿದರುಭಯೋತ್ಪಾದಕ ಶಿಬಿರ ಮತ್ತೆ ಸಕ್ರಿಯಗೊಂಡಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜನರಲ್ ರಾವತ್ ಅವರುಇದಕ್ಕೆ ಭಾರತದ ಪ್ರತಿಕ್ರಿಯೆ ಸರ್ಜಿಕಲ್ ದಾಳಿಯನ್ನು ಮೀರುವ ಸಂಭವ ಇದೆಎಂದೂ ಹೇಳಿದರುಚೆನ್ನೈ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ (ಒಟಿಎ) ವರದಿಗಾರರ ಜೊತೆ ಮಾತನಾಡುತ್ತಿದ್ದ ಜನರಲ್ ರಾವತ್  ’ಸಧ್ಯಕ್ಕೆ ಕನಿಷ್ಠ ೫೦೦ ಮಂದಿ ಭಾರತಕ್ಕೆ ನುಸುಳಲು ಕಾದಿದ್ದಾರೆ. ಸಂಖ್ಯೆ ಕಾಲದಿಂದ ಕಾಲಕ್ಕೆ ವ್ಯತ್ಯಾಸವಾಗುತ್ತಿದೆಎಂದು ನುಡಿದರುಸವಾಲು ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದು ನುಡಿದ ಅವರುಭಾರತದ ಪ್ರತ್ರಿಕ್ರಿಯೆ ಬಾಲಾಕೋಟ್ ಕಾರ್ಯಾಚರಣೆಯಂತೆಯೇ ಇರಬಹುದು ಅಥವಾ ಅದನ್ನು ಮೀರಿದ ಕಾರ್ಯಾಚರಣೆಯಾಗಿರಬಹುದುಎಂದು ಸುಳಿವು ನೀಡಿದರು. ಭಾರತದ ಪ್ರತಿಕ್ರಿಯೆ ಬಾಲಾಕೋಟ್ ಪುನರಾವರ್ತನೆ ಆಗಿರುತ್ತದೆಯೇ ಎಂಬ ಪ್ರಶ್ನೆಗೆಪುನರಾವರ್ತನೆ ಏಕೆ? ಅದಕ್ಕಿಂತ ಮಿಗಿಲಾಗಿ ಏಕಿರಬಾರದು? ಅವರು ಊಹಿಸುತ್ತಿರಲಿಎಂದು ಜನರಲ್ ರಾವತ್ ಉತ್ತರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಹಲವಾರು ಕಂಪೆನಿಗಳ ಸ್ವತಂತ್ರ ನಿರ್ದೇಶಕಿಯಾಗಿ ಪಡೆಯುತ್ತಿರುವ ಆದಾಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತ ಅಶೋಕ ಲಾವಸ ಅವರ ಪತ್ನಿ ನೊವೆಲ್ ಸಿಂಘಲ್ ಅವರಿಗೆ ಆದಾಯ ತೆರಿಗೆ ಇಲಾಖೆಯು 2019 ಸೆಪ್ಟೆಂಬರ್ 23ರ ಸೋಮವಾರ ನೋಟಿಸ್ ಜಾರಿ ಮಾಡಿತು. ಮೂಲಗಳ ಪ್ರಕಾರ ಚುನಾವಣಾ ಆಯುಕ್ತರು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ಹೊಣೆ ಹೊತ್ತ ಬಳಿಕ ಲಾವಸ ಅವರ ಪತ್ನಿ ನೊವೆಲ್ ಸಿಂಘಲ್ ಅವರು ಹಲವಾರು ಕಂಪೆನಿಗಳ  ಸ್ವತಂತ್ರ ನಿರ್ದೆಶಕಿ ಆಗಿದ್ದರು. ಮೊದಲು ಬ್ಯಾಂಕರ್ ಆಗಿದ್ದ ನೊವೆಲ್ ೨೦೦೫ರಲ್ಲಿ ಎಸ್ಬಿಐಗೆ ರಾಜೀನಾಮೆ ನೀಡಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ವಿರುದ್ಧದ ಎಂಸಿಸಿ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ೧೧ ಪ್ರಕರಣಗಳಲ್ಲಿ ಉಭಯ ನಾಯಕರಿಗೆ ಚುನಾವಣಾ ಆಯೋಗವು ಕ್ಲೀನ್ ಚಿಟ್ ನೀಡಿದ ಸಂದರ್ಭಗಳಲ್ಲಿ ಭಿನ್ನಮತ ವ್ಯಕ್ತ ಪಡಿಸಿದ್ದ ಹಿನ್ನೆಲೆಯಲ್ಲಿ ಲಾವಸ ಅವರು ಲೋಕಸಭಾ ಚುನಾವಣೆಗಳ ವೇಳೆಯಲ್ಲಿ ಪತ್ರಿಕೆಗಳಲ್ಲಿ ರಾರಾಜಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಬೆಂಗಳೂರು : ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕರ್ನಾಟಕದ ಪ್ರಸಿದ್ದ ದೇವಸ್ಥಾನವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ಭೋರ್ಗರೆಯುತ್ತಿದೆ, ಆದಿ ಸುಬ್ರಹ್ಮಣ್ಯ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ, ಭಾರೀ ಮಳೆಯಿಂದಾಗಿ ನದಿ ನೀರು ದೇವಸ್ಥಾನವನ್ನೂ ಪ್ರವೇಶಿಸಿದ್ದು, ಸುಬ್ರಹ್ಮಣ್ಯ ಪರಿಸರವೂ ಮುಳುಗಡೆಯ ಭೀತಿಯಲ್ಲಿದೆ ಎಂದು 2019 ಸೆಪ್ಟೆಂಬರ್ 23ರ ಸೋಮವಾರ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿದವು. ಬೆಂಗಳೂರಿನಲ್ಲೂ ಈದಿನ ವ್ಯಾಪಕ ಮಳೆ ಸುರಿಯಿತು. ಪಶ್ಚಿಮಘಟ್ಟದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ಉಕ್ಕಿ ಹರಿಯಲಾರಂಭಿಸಿತು. ಕುಮಾರ ಪರ್ವತದಿಂದ ಹರಿದು ಬರುತ್ತಿರುವ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.  ಕುಕ್ಕೆ ರಥಬೀದಿಯ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಕುಕ್ಕೆ ಸುಬ್ರಹ್ಮಣ್ಯದಿಂದ ಆದಿ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕಿರು ಸೇತುವೆಯೂ ಮುಳುಗಡೆಯಾಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.ದಿಢೀರನೆ ಎಡೆಬಿಡದೆ ಸುರಿಯುತ್ತಿರುವ ಜಡಿಮಳೆಯಿಂದ ಸ್ಥಿತಿ ನಿರ್ಮಾಣಗೊಂಡಿದ್ದು, ನದಿ ತೀರದ ಕೃಷಿ ಭೂಮಿಗಳೂ ಮುಳುಗಡೆಯಾಗಿದೆ ಎಂದು ವರದಿಗಳು ಹೇಳಿದವು. ದರ್ಪಣ ತೀರ್ಥ ನದಿ ಪಾತ್ರದಲ್ಲಿರುವ ಮನೆಗಳು ಹಾಗೂ ಕೆಲವು ವಸತಿ ಗೃಹಗಳಿಗೆ ನೀರು ನುಗ್ಗಿದೆ. ಜಲಾವೃತಗೊಂಡ ಪ್ರದೇಶಗಳಿಗೆ ಅಗ್ನಿಶಾಮಕ ಇಲಾಖೆ ಹಾಗೂ ಸ್ಥಳೀಯರು ಧಾವಿಸಿದ್ದು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವರದಿಗಳು ತಿಳಿಸಿದವು.
2019: ವಾಷಿಂಗ್ಟನ್: ಪ್ರತಿಷ್ಠಿತ ಥಾಮಸ್ ಕುಕ್ ಕಂಪನಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಕಷ್ಟು ಪ್ರಯತ್ನ ನಡೆಸಿಯೂ ಕೊನೆಗೆ ವಿಫಲವಾದ ಹಿನ್ನೆಲೆಯಲ್ಲಿ ಥಾಮಕ್ ಕುಕ್ ಟ್ರಾವೆಲ್ ಕಂಪನಿ ದಿವಾಳಿಯಾಗಿದ್ದು, 2019 ಸೆಪ್ಟೆಂಬರ್ 23ರ ಸೋಮವಾರ ಬೆಳಗ್ಗೆ ಜಾಗತಿಕವಾಗಿ 600,000 ಟಿಕೆಟುಗಳನ್ನು  ರದ್ದು ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿತು. ಥಾಮಸ್ ಕುಕ್ ಕಂಪನಿ ಐಶಾರಾಮಿ ಹೋಟೆಲ್ಗಳನ್ನು, ರೆಸಾರ್ಟ್ಸ್, ವಿಮಾನ ಯಾನ ವ್ಯವಹಾರ ನಡೆಸುತ್ತಿದ್ದು, 16 ದೇಶಗಳಲ್ಲಿ 21,000 ಉದ್ಯೋಗಿಗಳಿದ್ದಾರೆ. ಬ್ರಿಟನ್ ನಲ್ಲಿಯೇ 9000 ಸಾವಿರ ಮಂದಿ ಕೆಲಸಗಾರರಿದ್ದು, ಎಲ್ಲರೂ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿ ವಿವರಿಸಿತು.  178 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಥಾಮಕ್ ಕುಕ್ ಕಂಪನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 200 ಮಿಲಿಯನ್ ಪೌಂಡ್ಸ್ ನೆರವು ಕೇಳಲಾಗಿತ್ತು. ಆದರೆ ವಾರಾಂತ್ಯದಲ್ಲಿ ಶೇರುದಾರರು ಮತ್ತು ಕ್ರೆಡಿಟರ್ಸ್ ಜತೆಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕಂಪನಿ ದಿವಾಳಿ ಹಂತಕ್ಕೆ ತಲುಪಿದೆ ಎಂದು ವರದಿ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಆಧಾರ್ ಕಾರ್ಡ್, ಪಾಸ್ಪೋರ್ಟ್, ವಾಹನ ಚಾಲನಾ ಪರವಾನಗಿ ಹಾಗೂ ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ಕಾರ್ಡ್ ಮೂಲಕ ಪಡೆಯುವ ವಿವಿದೋದ್ದೇಶ ಗುರುತಿನ ಚೀಟಿಯನ್ನು ಶೀಘ್ರದಲ್ಲಿ ದೇಶದ ಪ್ರಜೆಗಳಿಗೆ ನೀಡಲಾಗುವುದು. ಅಲ್ಲದೆ, 2021ರಲ್ಲಿ ದೇಶದ ಜನಗಣತಿಯನ್ನು ಆ್ಯಪ್ ಮೂಲಕ ನಡೆಸಲಾಗುವುದು. ಮೊಬೈಲ್ಗಳ ಸಹಾಯದಿಂದ ದತ್ತಾಂಶಗಳನ್ನು ಸಂಗ್ರಹಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು..ಆಧಾರ್ ಕಾರ್ಡ್, ಪಾಸ್ಪೋರ್ಟ್, ಬ್ಯಾಂಕ್ ಖಾತೆ, ವಾಹನ ಚಾಲನಾ ಪರವಾನಗಿ ಮತ್ತು ಮತದಾರರ ಗುರುತಿನ ಚೀಟಿಯಂತಹ ಎಲ್ಲಾ ಉಪಯೋಗಗಳನ್ನು ಕೇವಲ ಒಂದೇ ಕಾರ್ಡ್ನಲ್ಲಿ ಹೊಂದಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ಉಪಯೋಗವಾಗಲಿದೆ. ಅಲ್ಲದೆ, ಒಬ್ಬ ವ್ಯಕ್ತಿಯು ಸತ್ತಾಗ ಜನಸಂಖ್ಯೆಯ ದತ್ತಾಂಶದಲ್ಲಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ನವೀಕರಿಸುವ ತಂತ್ರಜ್ಞಾನವನ್ನೂ ಇದರಲ್ಲಿ ಅಳವಡಿಸಲಾಗುವುದುಎಂದು ಶಾ ಹೇಳಿದರು. ದೇಶದ ಜನಸಂಖ್ಯಾ ಗಣತಿ ನೀರಸ ಕೆಲಸವೇನಲ್ಲ. ಸರ್ಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಒದಗಿಸಲು ಇದು ಸಹಾಯ ಮಾಡುತ್ತದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಎಂಬುದು ದೇಶದ ಅಸಂಖ್ಯಾತ ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಸುಪ್ರೀಂ ಕೋರ್ಟಿನ ನೂತನ ನ್ಯಾಯಮೂರ್ತಿಗಳಾಗಿ ನಾಲ್ವರು 2019 ಸೆಪ್ಟೆಂಬರ್ 23 ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಸುಪ್ರೀಂ ಕೋರ್ಟ್ ನಾಯಮೂರ್ತಿಗಳ ಸಂಖ್ಯೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 34ಕ್ಕೆ ಏರಿತು.ಸುಪ್ರೀಂ ಕೋರ್ಟಿನನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ಸಮ್ಮುಖದಲ್ಲಿ ಬೆಳಗ್ಗೆ ನ್ಯಾಯಮೂರ್ತಿಗಳಾದ ವಿ.ರಾಮಸುಬ್ರಮಣಿಯನ್, ಕೃಷ್ಣ ಮುರಾರಿ, ಎಸ್.ರವೀಂದ್ರ ಭಟ್ ಮತ್ತು ಹೃಷಿಕೇಶ್ ರಾಯ್ ಅವರು ಪ್ರಮಾಣ ವಚನ ಸ್ವೀಕರಿಸಿದರು ಎಂದು ಬಾರ್ ಅಂಡ್ ಬೆಂಚ್ ವೆಬ್  ವರದಿ ಮಾಡಿತು. ಕೃಷ್ಣ ಮುರಾರಿ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಎಸ್.ರವೀಂದ್ರ ಭಟ್ ಅವರು ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ವಿ.ಸುಬ್ರಮಣಿಯನ್ ಅವರು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಹೃಷಿಕೇಶ್ ರಾಯ್ ಅವರು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ನಾಲ್ವರನ್ನು ಸುಪ್ರೀಂ ಕೋರ್ಟ್ನಲ್ಲಿ ಖಾಲಿ ಉಳಿದಿದ್ದ ನಾಲ್ಕು ನ್ಯಾಯಮೂರ್ತಿಗಳ ಸ್ಥಾನಕ್ಕೆ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಆಗಸ್ಟ್ 28ರಂದು ಶಿಫಾರಸು ಮಾಡಿತ್ತು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ತಮ್ಮ ಸ್ಥಾನಗಳಿಗೆ ಘೋಷಿಸಲಾಗಿರುವ ಉಪಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಕರ್ನಾಟಕದ ೧೫ ಮಂದಿ ಅನರ್ಹ ಶಾಸಕರು ಸಲ್ಲಿಸಿದ ಅರ್ಜಿಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ 2019 ಸೆಪ್ಟೆಂಬರ್  23ರ ಸೋಮವಾರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತು. ಈ ಮಧ್ಯೆ ಅನರ್ಹ ಶಾಸಕರ ಸ್ಪರ್ಧೆಗೆ ಯಾವುದೇ ಆಕ್ಷೇಪವಿಲ್ಲ ಎಂಬುದಾಗಿ ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದು, ಅನರ್ಹರಿಗೆ ನ್ಯಾಯ ಲಭಿಸುವ ಸಣ್ಣ ಭರವಸೆಯ ಆಶಾಕಿರಣ ಮೂಡಿತು. ವಿಧಾನಸಭಾಧ್ಯಕ್ಷರ ನಿರ್ಣಯದ ವಿರುದ್ಧ ತಾವು ಸಲ್ಲಿಸಿರುವ ಮೇಲ್ಮನವಿಗಳ ಬಗ್ಗೆ ಸುಪ್ರಿಂಕೋರ್ಟ್ ನಿರ್ಧಾರ ಕೈಗೊಳ್ಳುವವರೆಗೆ, ತಮ್ಮ ಸ್ಥಾನಗಳಿಗೆ ಘೋಷಿಸಲಾಗಿರುವ ಉಪಚುನಾವಣೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ೧೫ ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟಿಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ಕೋರಿದರು. ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಅರ್ಜಿ ಸಂಬಂಧ ನೋಟಿಸ್ಗಳನ್ನು ಜಾರಿಗೊಳಿಸಿದ ಬಳಿಕ ಪ್ರಕರಣದ ವಿಚಾರಣೆಯನ್ನು 2019 ಸೆಪ್ಟೆಂಬರ್ 25ರ  ಬುಧವಾರ ನಡೆಸಲಾಗುವುದು ಎಂದು ಪ್ರಕಟಿಸಿತು. ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಹಾಗೂ ಕೃಷ್ಣ ಮುರಾರಿ ಅವರು ತ್ರಿಸದಸ್ಯ ನ್ಯಾಯಪೀಠದ ಇತರ ಇಬ್ಬರು ಸದಸ್ಯರು. ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆಯ ಖಾಲಿ ಬಿದ್ದಿರುವ ೧೫ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ಪ್ರಕಟಣೆ ಹೊರಡಿಸಿದ ಬಳಿಕ ಅನರ್ಹ ಶಾಸಕರು ಸುಪ್ರೀಂಕೋರ್ಟಿಗೆ ಮನವಿ ಮಾಡಿದರು. ಉಪಚುನಾವಣೆಗೆ ಸಂಬಂಧಿಸಿದ ಔಪಚಾರಿಕ ಪ್ರಕಟಣೆಯು 2019 ಸೆಪ್ಟೆಂಬರ್ ೨೭ರ ಶುಕ್ರವಾರ ಹೊರಬೀಳಲಿದೆ.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)



No comments:

Post a Comment