Friday, September 6, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 06


2019: ನವದೆಹಲಿ:  ಕೇರಳದ ಎರ್ನಾಕುಲಂ ಜಿಲ್ಲೆಯ ಮರಡು ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಅಕ್ರಮ ಅಪಾರ್ಟ್ಮೆಂಟ್ ಕಟ್ಟಡಗಳನ್ನು ಕಠಿಣ ಕರಾವಳಿ ವಲಯ ನಿಯಮಾವಳಿಗಳ ಉಲ್ಲಂಘನೆಗಳಿಗಾಗಿ ಸೆಪ್ಟೆಂಬರ್ ೨೦ರ ಒಳಗೆ ಕೆಡವಿ ಹಾಕಬೇಕು ಎಂದು ಸುಪ್ರೀಂಕೋರ್ಟ್ ಕೇರಳ ಸರ್ಕಾರದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ ಮತ್ತು ಎಂ.ಆರ್. ಶಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಸೆಪ್ಟೆಂಬರ್ ೨೩ರಂದು ನಡೆಯಲಿರುವ ಪ್ರಕರಣದ ಮುಂದಿನ ವಿಚಾರಣೆ ವೇಳೆಯಲ್ಲಿ ಹಾಜರಿರುವಂತೆ ಕೇರಳದ ಮುಖ್ಯ ಕಾರ್ಯದರ್ಶಿಗೂ ನಿರ್ದೇಶನ ನೀಡಿತು.  ನ್ಯಾಯಾಲಯದ ಆದೇಶ ಪಾಲನೆಗೆ ಕನಿಷ್ಠ ನಾಲ್ಕು ವಾರಗಳ ಕಾಲಾವಕಾಶವನ್ನಾದರೂ ನೀಡುವಂತೆ ಕೇರಳದ ವಕೀಲ ಜಿ. ಪ್ರಕಾಶ್ ಅವರು ಮಾಡಿದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತು.  ಒಂದು ದಿನವನ್ನು ಕೂಡಾ ಹೆಚ್ಚಿಗೆ ಕೊಡಲಾಗದು. ೧೦ ದಿನಗಳು ಬೇಕಾದಷ್ಟಾಯಿತು. ನ್ಯಾಯಾಲಯದ ಆದೇಶ ಪಾಲಿಸದೇ ಇರುವುದಕ್ಕೆ ನಿಮ್ಮ ರಾಜ್ಯ ಕುಖ್ಯಾತವಾಗಿದೆ. ನಮ್ಮ ಆದೇಶಕ್ಕೆ ಅವಿಧೇಯತೆ ಪ್ರದರ್ಶಿಸಬೇಡಿ. ಏನಾಗುತ್ತಿದೆ ಮತ್ತು ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ನಿಮ್ಮ ಮುಖ್ಯ ಕಾರ್ಯದರ್ಶಿಗೆ ಇಲ್ಲಿ ಹಾಜರು ಇರುವುದಕ್ಕೆ ಹೇಳಿಎಂದು ನ್ಯಾಯಮೂರ್ತಿ ಮಿಶ್ರ ಅವರು ವಕೀಲ  ಪ್ರಕಾಶ್ ಅವರಿಗೆ  ತಾಕೀತು ಮಾಡಿದರು. ಫ್ಲ್ಯಾಟ್ಗಳ ನಿವಾಸಿಗಳು ಮರುಚಿಂತನೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ಇತ್ತೀಚೆಗೆ ತಿರಸ್ಕರಿಸಿತ್ತು. ಫ್ಲ್ಯಾಟ್ಗಳನ್ನು ನೆಲಸಮಗೊಳಿಸುವಂತೆ ಮಾಡಿದ ಆದೇಶವು ವಿಸ್ತೃತವಾಗಿದೆ ಮತ್ತು ಸ್ಪಷ್ಟವಾಗಿದೆ ಎಂದು ಕೋರ್ಟ್ ಹೇಳಿತ್ತು. ಫ್ಲ್ಟಾಟ್ಗಳಲ್ಲಿ ೪೦೦ಕ್ಕೂ ಹೆಚ್ಚು ಕುಟುಂಬಗಳು ವಾಸವಾದ್ದವು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಪೀಠವು ಜುಲೈ ೧೦ರಂದು ತಿರಸ್ಕರಿಸಿತ್ತು. ಅಪಾರ್ಟ್ಮೆಂಟ್ ನೆಲಸಮ ಆದೇಶಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟಿನ ಇನ್ನೊಂದು ಪೀಠದ ಮುಂದೆ ನಿವಾಸಿಗಳು ಅರ್ಜಿ ಸಲ್ಲಿಸಿದ್ದಕ್ಕಾಗಿ ನ್ಯಾಯಮೂರ್ತಿ ಅರುಣ್ ಮಿಶ್ರ ಕಟುವಾಗಿ ಟೀಕಿಸಿದರು. ಮೇ ೮ರಂದು ನ್ಯಾಯಮೂರ್ತಿ ಮಿಶ್ರ ನೇತೃತ್ವದ ಪೀಠವು ಒಂದು ತಿಂಳ ಒಳಗಾಗಿ ಅಪಾರ್ಟ್ಮೆಂಟ್ ನೆಲಸಮ ಮಾಡುವಂತೆ ಆದೇಶ ನೀಡಿತ್ತು. ಏನಿದ್ದರೂ, ಆದೇಶಕ್ಕೆ ತಡೆಯಾಜ್ಞೆ ಪಡೆಯುವ ಸಲುವಾಗಿ, ಜೂನ್ ೧೦ರಂದು ಅಪಾರ್ಟ್ಮೆಂಟ್ ನಿವಾಸಿಗಳು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಸುಪ್ರೀಂಕೋರ್ಟಿನ ಇನ್ನೊಂದು ರಜಾಕಾಲೀನ ಪೀಠಕ್ಕೆ ಮನವಿ ಮಾಡಿದ್ದರು.  ಅಪಾರ್ಟ್ಮೆಂಟ್ ನೆಲಸಮಕ್ಕೆ ಆದೇಶ ನೀಡಿದ್ದ ನ್ಯಾಯಮೂರ್ತಿ ಅರುಣ್ ಮಿಶ್ರ ನೇತ್ವತ್ವದ ಪೀಠವು ಆದೇಶ ನೀಡುವುದಕ್ಕೆ ಮುನ್ನ ತಮ್ಮನ್ನು ಆಲಿಸಿರಲಿಲ್ಲ ಎಂದು ಅಪಾರ್ಟ್ಮೆಂಟ್ ನಿವಾಸಿಗಳು ದೂರಿದ್ದರು. ಕೋಪಾವಿಷ್ಟರಾಗಿದ್ದ ನ್ಯಾಯಮೂರ್ತಿ ಮಿಶ್ರ ಅವರು ಒಂದು ಪೀಠದ ಆದೇಶವನ್ನು ಹುಗಿಯಲು ಇನ್ನೊಂದು ಪೀಠದ ಮುಂದೆ ಹೋದ ನಿವಾಸಿಗಳ ಕ್ರಮವನ್ನು ನ್ಯಾಯಾಲಯಕ್ಕೆ ಎಸಗಿರುವಮಹಾವಂಚನೆಎಂದು ಕರೆದರು. ಇದರಲ್ಲಿ ಶಾಮೀಲಾದ ವಕೀಲರ ವಿರುದ್ಧವೂ ನ್ಯಾಯಾಲಯ ನಿಂದನೆ ಮೊಕದ್ದಮೆ ದಾಖಲಿಸುವುದಾಗಿ ನ್ಯಾಯಮೂರ್ತಿ ಎಚ್ಚರಿಸಿದರು. ಕಡೆಗೆ ನಿವಾಸಿಗಳು ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳಬೇಕಾಗಿ ಬಂತು. ಸುಪ್ರೀಂಕೋರ್ಟ್ ನೇಮಿಸಿದ್ದ ತ್ರಿಸದಸ್ಯ ಸಮಿತಿಯ ಉಲ್ಲಂಘನೆಗಳಿಗೆ ಸಂಬಂಧಿಸಿದ ಶೋಕಾಸ್ ನೋಟಿಸುಗಳ ಬಗ್ಗೆ ಸಮರ್ಪಕ ವಿಚಾರಣೆ ನಡೆಸಲಿಲ್ಲ, ಹೀಗಾಗಿ ನೆಲಸಮ ಆದೇಶವು ತಮ್ಮ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂದು ಕಟ್ಟಡ ನಿರ್ಮಾಣಗಾರರು ವಾದಿಸಿದ್ದರು. ಕೇರಳದ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು (ಕೆಸಿಝಡ್ಎಂಎ) ನ್ಯಾಯಾಲಯದ ಹಾದಿ ತಪ್ಪಿಸಿದ ಪರಿಣಾಮವಾಗಿ ನ್ಯಾಯಾಲಯವು ಮೇ ೮ರ ನಿರ್ಧಾರಕ್ಕೆ ಬಂದಿದೆ ಎಂದೂ ಅವರು ಆಪಾದಿಸಿದರು.  ಅಪಾರ್ಟ್ಮೆಂಟ್ ಕಟ್ಟಡಗಳು ಸಿಆರ್ಝಡ್- ಮಿತಿಗಳ ವ್ಯಾಪ್ತಿಯ ಒಳಗೆ ಬಂದಿವೆ ಎಂಬ ತೀರ್ಮಾನಕ್ಕೆ ತ್ರಿಸದಸ್ಯ ಸಮಿತಿ ಬಂದಿತ್ತು. ಅದು ೧೯೯೧ರ ಸಿಆರ್ಝಡ್ ಅಧಿಸೂಚನೆಯ ಪ್ರಕಾರ ಮತ್ತು ಕೇರಳ ಕರಾವಳಿ ವಲಯ ನಿರ್ವಹಣೆ ಯೋಜನೆ ೧೯೯೬ರ ಪ್ರಕಾರ, ಪ್ರದೇಶವು ಸಿಆರ್ಝಡ್ ೩ರ ವ್ಯಾಪ್ತಿಗೆ ಬಂದಿದೆ. ೧೯೯೧ರ ಸಿಆರ್ಝಡ್ ಅಧಿಸೂಚನೆಯ ಪ್ರಕಾರ, ಸಿಆರ್ಝಡ್ -೩ರಲ್ಲಿ ಕರಾವಳಿ ರೇಖೆಯಿಂದ ೨೦೦ ಮೀಟರುಗಳ ವ್ಯಾಪ್ತಿಯೊಳಗೆ ಯಾವುದೇ ನಿರ್ಮಾಣಗಳಿಗೂ ಅನುಮತಿ ನೀಡುವಂತಿಲ್ಲ ಎಂದು ವರದಿ ಹೇಳಿತ್ತು. ಮರಡು ಪ್ರದೇಶವನ್ನು ಸಿಆರ್ ಝಡ್ -೨ರ ಅಡಿಯಲ್ಲಿ ವರ್ಗೀಕರಿಸಿ, ಪರಿಸರ ಮತ್ತು ಅರಣ್ಯ ಸಚಿವಾಲಯವು ೨೦೧೯ರ ಫೆಬ್ರುವರಿ ೨೮ರಂದು ಅನುಮೋದನೆ ನೀಡಿದ, ೨೦೧೧ರ ಸಿಆರ್ಝಡ್ ಅಧಿಸೂಚನೆ ಪ್ರಕಾರ ಕರಾವಳಿ ವಲಯ ನಿರ್ವಹಣೆ ಯೋಜನೆಯನ್ನು ರೂಪಿಸಲಾಗಿದೆ ಎಂಬ ವಾಸ್ತವಾಂಶವವನ್ನು ಪ್ರಾಧಿಕಾರವು ನ್ಯಾಯಾಲಯದಿಂದ ಮುಚ್ಚಿಟ್ಟಿತ್ತು ಎಂದು ಕಟ್ಟಡ ಸಮಿತಿ ನ್ಯಾಯಾಲಯಕ್ಕೆ ತಿಳಿಸಿತ್ತು. ನಿರ್ಮಾಣ ಚಟುವಟಿಕೆಗಳ ಪರಿಣಾಮವಾಗಿ ನೀರಿನ ನೈಸರ್ಗಿಕ ಹರಿವಿನ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಹಾನಿಕಾರಕ ಪರಿಣಾಮUಳಾಗುತ್ತವೆ ಎಂದು ಮೇ ೮ರ ಸುಪ್ರೀಂಕೋರ್ಟ್ ತೀರ್ಪು ಹೇಳಿತ್ತು. ನದಿ ದಂಡೆಗಳಲ್ಲಿ ಅಕ್ರಮ ನಿರ್ಮಾಣ ಮಾಡುವುದು ಹಿನ್ನೀರಿನ ಸಹಜ ಮಾರ್ಗದ ನಿರ್ಲಜ್ಞ ಅತಿಕ್ರಮಣ. ಇಂತಹ ಅತಿಕ್ರಮಣವು ತಮಿಳುನಾಡು, ಕೇರಳ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ಕಂಡು ಬಂದಂತಹ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತದೆ ಎಂದು ತೀರ್ಪು ಹೇಳಿತ್ತು.

2019: ನವದೆಹಲಿ:ದೆಹಲಿ ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಆಮ್ ಆದ್ಮಿ ಪಕ್ಷದ ಸರ್ಕಾರದ ಶಿಫಾರಸಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿ, ಈ ಯೋಜನೆಯಿಂದ ಆರ್ಥಿಕವಾಗಿ ಬೀರುವ ಪರಿಣಾಮಗಳ ಬಗ್ಗೆ ಪ್ರಶ್ನಿಸಿತು. ರಾಜ್ಯ ಸರ್ಕಾರ ಜನಸಾಮಾನ್ಯರ ಹಣವನ್ನು ಉಪಯೋಗಿಸುವಾಗ ತುಂಬಾ ಜಾಗರೂಕತೆ ವಹಿಸಬೇಕೆಂದು ಸಲಹೆ ನೀಡಿದ ಸುಪ್ರೀಂಕೋರ್ಟ್, ಇಂತಹ ಉಚಿತ ಸೇವೆಗಳ ಯೋಜನೆಗಳಿಂದ ದೆಹಲಿ ಮೆಟ್ರೋ ರೈಲ್ವೆ ಕಾರ್ಪೋರೇಶನ್ ಗೆ ಭಾರೀ ನಷ್ಟ ಉಂಟಾಗಲಿದೆ ಎಂದು ತಿಳಿಸಿತು. ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬ ದೆಹಲಿ ಸರ್ಕಾರದ ಶಿಫಾರಸನ್ನು ಪ್ರಶ್ನಿಸಿ ಎಂಸಿ ಮೆಹ್ತಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತು. ಸುರಕ್ಷತೆಯ ದೃಷ್ಟಿಯಲ್ಲಿ ಮೆಟ್ರೋ, ಡಿಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಜೂನ್ 3ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದರು. ಯೋಜನೆಯನ್ನು 2-3 ತಿಂಗಳಲ್ಲಿನಲ್ಲಿಯೇ ಕಾರ್ಯಗತಗೊಳಿಸುವುದಾಗಿಯೂ ತಿಳಿಸಿದ್ದರು. ಅಲ್ಲದೇ ಉಚಿತ ಪ್ರಯಾಣದ ವೆಚ್ಚವನ್ನು ದೆಹಲಿ ಸರ್ಕಾರ  ಭರಿಸಲಿದೆ. ಆದರೆ ಕೇಂದ್ರ ಸರಕಾರ ತಮಗೆ ಹಣಕಾಸಿನ ಸಹಕಾರ ನೀಡುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಏತನ್ಮಧ್ಯೆ ಕೇಜ್ರಿವಾಲ್ ಘೋಷಣೆಯನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು. ಮುಂದಿನ ವರ್ಷ 2020ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉಚಿತ ಪ್ರಯಾಣದ ಕೇಜ್ರಿವಾಲ್ ಘೋಷಣೆ ಮಾಡಿದ್ದಾಗಿ ಬಿಜೆಪಿ ತಿರುಗೇಟು ನೀಡಿತ್ತು.

2019: ಮಂಗಳೂರು:  ಕಳೆದ ಎರಡಯ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಈದಿನ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದ ಸಸಿಕಾಂತ ಸೆಂಥಿಲ್ ಅವರು ಜಿಲ್ಲೆಯಲ್ಲಿ ಹಲವು ಜನಪರ ಕೆಲಸಗಳಿಂದ ಜನಪ್ರಿಯರಾಗಿದ್ದರುಪ್ರಜಾಪ್ರಭುತ್ವ ವ್ಯವಸ್ಥೆಯ ಗೋಡೆಗಳು ಕುಸಿಯುತ್ತಿವೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಬಹಳಷ್ಟು ಸವಾಲುಗಳು ಎದುರಾಗಲಿದೆ. ಸಿದ್ದಾಂತಕ್ಕೆ ವಿರುದ್ದವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸೆಂಥಿಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಸಮಯದಲ್ಲಿ ಸಾರ್ವಜನಿಕ ಸೇವೆಯಲ್ಲಿರುವುದರಿಂದ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ದಿಯು ದಾಮನ್ ಐಎಎಫ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಆಗಸ್ಟ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆಯನ್ನು ಇನ್ನುಕೂಡಾ ಸ್ವೀಕರಿಸಲಾಗಿಲ್ಲ. ಖಡಕ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಕಳೆದ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ರಾಜೀನಾಮೆ ನೀಡಿದ್ದರು.  ವೈಯಕ್ತಿಕ ಕಾರಣ ನೀಡಿ ಅವರು ರಾಜೀನಾಮೆ ನೀಡಿದ್ದರು. 2009 ಕರ್ನಾಟಕ ಕೇಡರುಬ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್, 2017 ಅಕ್ಟೋಬರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 40 ವರ್ಷದ ಸಸಿಕಾಂತ್ ಸೆಂಥಿಲ್ ಮೂಲತಃ ತಮಿಳುನಾಡು ರಾಜ್ಯದವರು. ತಿರುಚನಾಪಲ್ಲಿಯ ಭಾರತೀದಾಸನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು.  2009ರಿಂದ 2012ರವರೆಗೆ  ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ ಸಸಿಕಾಂತ್ ಸೆಂಥಿಲ್, ನಂತರ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕೆಲಸ ಮಾಡಿದ್ದರು. ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಸೆಂಥಿಲ್ 2016ರಲ್ಲಿ ಗಣಿ ಮತ್ತು ಭೂಗರ್ಭ ಇಲಾಖೆ ನಿರ್ದೇಶಕತರಾಗಿ ಸೇವೆ ಸಲ್ಲಿಸಿದ್ದರು.ರಾಜೀನಾಮೆ ಹಿಂತೆಗೆದುಕೊಳ್ಳಲು ಸೆಂಥಿಲ್ ಅವರ ಮನವೊಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಬಳಿಕ ಬಂದ ವರದಿಗಳು ತಿಳಿಸಿದವು.

2019: ಬೆಂಗಳೂರು: ಚಂದ್ರ ನೆಲದ ಮೇಲೆ ಭಾರತದಚಂದ್ರಯಾನ- 2019 ಸೆಪ್ಟೆಂಬರ್ 07ರ ಶನಿವಾರ ನಸುಕಿನಲ್ಲಿ ಇಳಿಯುವ ಐತಿಹಾಸಕ ಸಂಭ್ರಮಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಸಂಜೆಯೇ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿನಇಸ್ಟ್ರಾಕ್ ಗೆ ಆಗಮಿಸಿದರು.  ‘ನಾನು ಜುಲೈ ೨೨ರಂದು ಚಂದ್ರಯಾನ ಉಡಾವಣೆಗೊಂಡ ಕ್ಷಣದಿಂದಲೂ ಅದಕ್ಕೆ ಸಂಬಂಧಪಟ್ಟ ಮಾಹಿತಿ- ಬೆಳವಣಿಗೆಗಳ ಬಗ್ಗೆ ಅತ್ಯಂತ ಕಾತರದೊಂದಿಗೆ ಗಮನಿಸುತ್ತಿದ್ದೇನೆ. ಯೋಜನೆಯು ಭಾರತದ ಅತ್ಯುನ್ನತ ಪ್ರತಿಭೆ ಮತ್ತು ಸ್ಥಿರತೆಯ ಚೈತನ್ಯವನ್ನು ಪ್ರದರ್ಶಿಸಲಿದೆ. ಇದರ ಯಶಸ್ಸು ಕೋಟ್ಯಂತರ ಭಾರತೀಯರಿಗೆ ಅನುಕೂಲಕರವಾಗಲಿದೆ ಎಂದು ಇಸ್ರೋ ಕೇಂದ್ರಕ್ಕೆ ತಲುಪುತ್ತಿದ್ದಂತೆಯೇ ಪ್ರಧಾನಿ ನುಡಿದರು. ಚಂದ್ರ ನೆಲದ ಮೇಲೆ ಭಾರತದ ಚಂದ್ರಯಾನವು ಇಳಿಯುವ ಚಾರಿತ್ರಿಕ ಕ್ಷಣವನ್ನು ವೀಕ್ಷಿಸುವಂತೆ ಎಲ್ಲ ಭಾರತೀಯರಿಗೂ ಪ್ರಧಾನಿ ಕರೆ ನೀಡಿದರು.  ಚಂದ್ರಯಾನ- ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯವ ವಿಶೇಷ ಕ್ಷಣಗಳನ್ನು ವೀಕ್ಷಿಸುವಂತೆ ನಾನು ಎಲ್ಲರನ್ನೂ ಒತ್ತಾಯಿಸುವೆ. ನಿಮ್ಮ ಫೊಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ. ನಾನು ಅವುಗಳಲ್ಲಿ ಕೆಲವನ್ನು ರಿಟ್ವೀಟ್ ಮಾಡುವೆ ಎಂದು ಪ್ರದಾನಿ ಮೋದಿ ಟ್ವೀಟ್ ಮಾಡಿದರು. ರಾಷ್ಟ್ರದ ವಿವಿಧ ಕಡೆಗಳಿಂದ ವಿಶೇಷ ಬಾಹ್ಯಾಕಾಶ ರಸಪ್ರಶ್ನೆ (ಕ್ವಿಜ್) ಆಧಾರದಲ್ಲಿ ಆಯ್ಕೆ  ಮಾಡಲಾದ ೬೦ ಮಂದಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಚಂದ್ರಯಾನ -೨ರ ಚಂದ್ರ ನೆಲ ಸ್ಪರ್ಶದ ವೀಕ್ಷಣೆ ಮಾಡುವರು. ಚಾರಿತ್ರಿಕ ಕ್ಷಣದ ವೀಕ್ಷಣೆಗಾಗಿ ಭೂತಾನಿನ ಕೆಲವು ವಿದ್ಯಾರ್ಥಿಗಳನ್ನೂ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಹ್ವಾನಿಸಲಾಗಿತ್ತು.  ‘ನಾನು ಬೆಂಗಳೂರಿನ ಇಸ್ರೋ ಕೇಂದ್ರದಿಂದ ವಿಶೇಷ ಕ್ಷಣಗಳನ್ನು ವೀಕ್ಷಿಸುವ ಹೊತ್ತಿನಲ್ಲಿ ನನ್ನೊಂದಿಗೆ ಸಾಕ್ಷಿಯಾಗುತ್ತಿರುವ ಕಿರಿಯರು ಸಾಮಾನ್ಯರಲ್ಲ. ಅವರು ನನ್ನ ಸರ್ಕಾರದ ಕುರಿತ ಇಸ್ರೋ ಬಾಹ್ಯಾಕಾಶ ರಸಪ್ರಶ್ನೆಯ ವಿಜೇತರು. ರಸಪ್ರಶ್ನೆಯಲ್ಲಿ ದೊಡ್ಡ ಪ್ರಮಾಣದ ವಿದ್ಯಾರ್ಥಿ ಸಮೂಹವು ಪಾಲ್ಗೊಂಡದ್ದು ಯುವಕರಿಗೆ ವಿಜ್ಞಾನ ಮತ್ತು ಬಾಹ್ಯಾಕಾಶದಲ್ಲಿ ಇರುವ ಆಸಕ್ತಿಯನ್ನು ತೋರಿಸಿಕೊಟಿದೆ. ಇದು ಮಹಾನ್ ಸೂಚನೆ ಎಂದೂ ಮೋದಿ ಟ್ವೀಟ್ ಮಾಡಿದರು.

2019: ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ವಿದ್ಯುತ್ನ್ನು ಉತ್ಪಾದಿಸಲು ಪೂರಕ ವಾಗಿ ಸೋಲಾರ್ ಪಾರ್ಕ್ ನೀತಿಯನ್ನು ಸರ್ಕಾರ ಪರಿಷ್ಕರಿಸಿದ್ದು ಇನ್ನು ಮುಂದೆ ೨೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದವರಿಗೂ  ಕೇಂದ್ರದಿಂದ  ಶೇಕಡಾ ೨೦ ರಷ್ಟು ಸಬ್ಸಿಡಿ ಸಿಗಲಿದೆ.  ಈದಿನ  ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕುರಿತು ಒಪ್ಪಿಗೆ ನೀಡಲಾಗಿದೆ ಎಂದು ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲು ಐದು ಎಕರೆ ಭೂಮಿ ಬೇಕು. ಹೀಗಿರುವಾಗ ನೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕನಿಷ್ಟ ಐನೂರು ಎಕರೆ ಭೂಮಿ ಬೇಕು. ಇಷ್ಟು ಪ್ರಮಾಣದ ಭೂಮಿ ಪಡೆದು ವಿದ್ಯುತ್ ಉತ್ಪಾದಿಸಿದರೆ ಅದಕ್ಕೆ ಸೋಲಾರ್ ಪಾರ್ಕ್ ಎಂದು ಪರಿಗಣಿಸಲಾಗುತ್ತದೆ. ಆದರೆ ಸೋಲಾರ್ ನೀತಿ ಹೀಗೇ ಇದ್ದರೆ ಭಾರೀ ಹಣವಂತರು ಮಾತ್ರ ಸೋಲಾರ್ ಪಾರ್ಕ್ಗಳನ್ನು ನಿರ್ಮಿಸಬಹುದು. ಇತರರು ಸೋಲಾರ್ ಪಾರ್ಕ್ ಮಾಡಲು ಸಾಧ್ಯವಿಲ್ಲ.ಹೀಗಾಗಿ ಸೋಲಾರ್ ನೀತಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದ್ದು ಇನ್ನು ಮುಂದೆ ನೂರಿಪ್ಪತ್ತೈದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದರೂ ಅದನ್ನು  ಸೋಲಾರ್ ಪಾರ್ಕ್ ಎಂದು ಪರಿಗಣಿಸಲಾಗುವುದು. ಹೀಗಾಗಿ ಇವರಿಗೂ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಶೇಕಡಾ ಇಪ್ಪತ್ತರಷ್ಟು ಸಬ್ಸಿಡಿ ಸಿಗಲಿದೆ.ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳು ಲಭ್ಯ ವಾಗಲಿವೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು


No comments:

Post a Comment