ನಾನು ಮೆಚ್ಚಿದ ವಾಟ್ಸಪ್

Sunday, September 8, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 08

2019: ಬೆಂಗಳೂರು: ಚಂದ್ರನ ನೆಲದ ಮೇಲೆ ಇಳಿಯಲು ಕೇವಲ ಕಿಮೀಗಳಷ್ಟು ಎತ್ತರದಲ್ಲಿದ್ದಾಗ ನಿಯಂತ್ರಣ ಕೇಂದ್ರದ ಜೊತೆಗಿನ ಸಂವಹನವನ್ನು ಕಳೆದುಕೊಂಡಿದ್ದ ಚಂದ್ರಯಾನ- ವಿಕ್ರಮ್ ಲ್ಯಾಂಡರ್ ಚಂದ್ರ ಮೇಲ್ಮೈಯಲ್ಲಿ ಪತ್ತೆಯಾಯಿತು.  ‘ವಿಕ್ರಮ್’ ಜೊತೆಗೆ ಸಂವಹನ ಮರುಸ್ಥಾಪನೆಗೆ ತೀವ್ರ ಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ. ಶಿವನ್ ಅವರು ಈದಿನ ಇಲ್ಲಿ ಪ್ರಕಟಿಸಿದರು.’ವಿಕ್ರಮ್ ಲ್ಯಾಂಡರ್ ಥರ್ಮಲ್ ಚಿತ್ರವನ್ನು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಕ್ಲಿಕ್ ಮಾಡಿದೆ. ಆದರೆ ಯಾವುದೇ ಸಂವಹನ ಇನ್ನೂ ಸಾಧ್ಯವಾಗಿಲ್ಲ. ಸಂಪರ್ಕ ಸ್ಥಾಪಿಸಲು ನಾವು ಯತ್ನಿಸುತ್ತಿದ್ದೇವೆ ಎಂದು ಶಿವನ್ ಸುದ್ದಿ ಸಂಸ್ಥೆ ಒಂದಕ್ಕೆ ತಿಳಿಸಿದರು. ವಿಕ್ರಮ್ ಲ್ಯಾಂಡರ್ ಬಗ್ಗೆ ಏನನ್ನು ಹೇಳಲೂ ಇದು ಪಕ್ವವಾದ ಕಾಲ ಅಲ್ಲ. ಬಗ್ಗೆ ಮುಂದಕ್ಕೆ ತಿಳಿಸಲಾಗುವುದು ಎಂದು ಶಿವನ್ ಹೇಳಿದರು. ಚಾಂದ್ರನೆಲದ ಮೇಲೆ ಇಳಿಯುವ ಕೊನೆಯ ಕ್ಷಣಗಳಲ್ಲಿವಿಕ್ರಮ್ ಸಂವಹನ ಕಡಿದುಕೊಂಡ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮಸ್ಥೈರ್ಯ ನೀಡಿ ಹುರಿದುಂಬಿಸಿದ ಪರಿಯಿಂದ ವಿಜ್ಞಾನಿಗಳು ಮತ್ತು ಎಂಜಿನಿಯರುಗಳ  ತಂಡದ ನೈತಿಕ ಸ್ಥೈರ್ ಹೆಚ್ಚಿದ್ದು, ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದರು. ಇದಕ್ಕೆ ಮುನ್ನ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಾಸಾ ಮುಖ್ಯಸ್ಥರು ಕೂಡಾ ಇಸ್ರೋ ಸಾಧನೆಯನ್ನು ಮೆಚ್ಚಿ ಮುಂದಿನ ಬಾಹ್ಯಾಕಾಶ ಯಾನಗಳಲ್ಲಿ ಜೊತೆಗೂಡುವ ಆಶಯ ವ್ಯಕ್ತ ಪಡಿಸಿದ್ದರು. ಸೆಪ್ಟೆಂಬರ್ ೭ರ ಶನಿವಾರ ನಸುಕಿನ .೫೩ ಗಂಟೆಯ ವೇಳೆಗೆ, ಚಂದ್ರನ ಮೇಲ್ಮೈಯನ್ನು ನಿಧಾನವಾಗಿ  ಸ್ಪರ್ಶಿಸಲು ನಿಮಿಷ ಮುನ್ನ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕ ಕಳೆದುಕೊಂಡಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019: ಬೆಂಗಳೂರು: ಭಾರತದ ಬಹು ನಿರೀಕ್ಷಿತ ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡರೂ ಯೋಜನೆಯು ಶೇಕಡಾ 90ರಷ್ಟು ಯಶಸ್ವಿಯಾಗಿದೆ. ಭಾರತದ ವಿಜ್ಞಾನಿಗಳ ಸಾಧನೆಗೆ ವಿಶ್ವದೆಲ್ಲೆಡೆ ಮೆಚ್ಚುಗೆ ಕೇಳಿ ಬರುತ್ತಿದ್ದು, ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಇಸ್ರೋ ಪ್ರಯತ್ನವನ್ನು ಅಭಿನಂದಿಸಿತು. ಈ ಬಗ್ಗೆ ಟ್ವೀಟ್ ಮಾಡಿರುವ ನಾಸಾ, ಅಂತರಿಕ್ಷ ನಿಜಕ್ಕೂ ಕಷ್ಟ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರನನ್ನು ಇಳಿಸುವ ಇಸ್ರೋ ಪ್ರಯತ್ನವನ್ನು  ನಾವು ನಿಜಕ್ಕೂ ಪ್ರಶಂಸಿಸುತ್ತೇವೆ. ನಿಮ್ಮ ಪಯಣದಲ್ಲಿ ನೀವು ನಮ್ಮಗೆ ಸ್ಪೂರ್ತಿಯಾಗಿದ್ದೀರಿ.  ಸೌರ ಮಂಡಲದ ಮುಂದಿನ ಯೋಜನೆಗಳಲ್ಲಿ ನಾವು ಜೊತೆಯಾಗಿ ಸಾಗೋಣ ಎಂದು ಟ್ವೀಟಿನಲ್ಲಿ ಬರೆಯಿತು. ನಾಸಾದ ಟ್ವೀಟ್ ಗೆ ವಿಶ್ವದೆಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು.

2019: ಮಂಗಳೂರು: ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು  ಒತ್ತಾಯಿಸಿ ಟ್ವಿಟ್ಟರಿನಲ್ಲಿ ಅಭಿಯಾನ ಪ್ರಾರಂಭವಾಯಿತು.   ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ರೀತಿಯ ಆಂದೋಲನಗಳು ನಡೆದಿದ್ದವು.  ಇದೀಗ ತುಳು ಭಾಷಿಕರ ಹೋರಾಟಕ್ಕೆ ರಾಜ್ಯದ ಇತರ ಕಡೆಗಳಿಂದಲೂ  ಭಾರೀ ಬೆಂಬಲ ವ್ಯಕ್ತವಾಯಿತು.   ಹಿಂದಿನ ಎಲ್ಲಾ ಸರ್ಕಾರಗಳು ತುಳುವನ್ನು ಕಡೆಗಣಿಸುತ್ತಲೇ ಬಂದಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜನರ ಮನವಿಗಳಿಗೆ ಬೆಂಬಲ ಲಭಿಸಿರಲಿಲ್ಲ. ಇದೀಗ ಮತ್ತೆ, ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂಬ ತುಳುವರ  ಆಗ್ರಹಕ್ಕೆ ಇದೀಗ ಟ್ವೀಟರ್ಅಭಿಯಾನದ ಮೂಲಕ ಸೋಷಿಯಲ್ ಮೀಡಿಯಾ ಹೋರಾಟದ ಸ್ಪರ್ಶ ದೊರಕಿದಂತಾಯಿತು.  ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಟ್ವೀಟರ್ನಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಕನ್ನಡ ಮತ್ತು ತುಳು ಭಾಷೆಯ ಚಿತ್ರ ನಟರು ಹಾಗೂ ಜನಪ್ರತಿನಿಧಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದರು.  ಚಿತ್ರನಟರಾಗಿರುವ ತುಳುನಾಡಿನವರೇ ಆಗಿರುವ ನಟ ರಕ್ಷಿತ್ಶೆಟ್ಟಿ ಸೇರಿದಂತೆ ಕನ್ನಡದ ಜನಪ್ರಿಯ ನಟ  ಜಗ್ಗೇಶ್ಅವರೂ ಸಹ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. #ತುಳು ಸಹೋದರರೆ ಉಸಾರ್ ಉಲ್ಲೇರ!ಬೊಕ್ಕ ತುಳು ಭಾಷೆಯ ವಿಷಯ ಯಾನ್ ಲಾ ನಿಮ್ಮೊಟ್ಟಿಗೆ ಬರ್ಪೇ! ಎಂದು ಜಗ್ಗೇಶ್ ಬರೆದರು.   ಅಭಿಯಾನಕ್ಕೆ ಕರಾವಳಿ ಭಾಗದ ಜನಪ್ರತಿನಿಧಿಗಳೂ ಸಹ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, ಅಭಿಯಾನವನ್ನು ಬೆಂಬಲಿಸಿ ತುಳು ಭಾಷೆಯಲ್ಲೇ ಟ್ವೀಟ್ಮಾಡಿ ಗಮನ ಸೆಳೆದರು. ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರ ಮೂಲದ ಸತೀಶ್ ಆಚಾರ್ಯ ಅವರೂ ಸಹ ತಮ್ಮ ಹಿಂದಿನ ಕಂಬಳ ಸಂಬಂಧಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡುವ ಮೂಲಕ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.

2019: ನವದೆಹಲಿ: ಕೇಂದ್ರದ ಮಾಜಿ ಕಾನೂನು ಸಚಿವ, ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ರಾಮ್ ಬೂಲ್ಚಂದ್ ಜೇಠ್ಮಲಾನಿ ಅವರು ಈದಿನ ಮುಂಜಾನೆ ವಿಧಿವಶರಾದರು. ೯೫ ವರ್ಷಗಳನ್ನು ಪೂರೈಸಿ ಇನ್ನು ದಿನಗಳಲ್ಲಿ ಅವರು ೯೬ನೇ ವರ್ಷಕ್ಕೆ ಕಾಲಿಡಲಿದ್ದರು.ವಯೋ ಸಹಜ ಆರೋಗ್ಯ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಮ್ ಜೇಠ್ಮಲಾನಿ, ನವದೆಹಲಿಯ ತಮ್ಮ ನಿವಾಸದಲ್ಲಿ ಬೆಳಗ್ಗೆ .೪೫ ಗಂಟೆಗೆ ಕೊನೆಯುಸಿರೆಳೆದರು.
ಸಿಂಧ್ ಪ್ರಾಂತ್ಯದ ಸಿಖಾರ್ಪುರ ಗ್ರಾಮದಲ್ಲಿ ೧೯೨೩ರ  ಸೆಪ್ಟೆಂಬರ್ ೧೪ ರಂದು ರಾಮ್ ಜೇಠ್ಮಲಾನಿ ಜನಿಸಿದ್ದರು. ತಮ್ಮ ೧೩ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಅವರು ೧೭ನೇ ವರ್ಷಕ್ಕೆ ಈಗ ಪಾಕಿಸ್ತಾನದಲ್ಲಿ ಇರುವ ಸಿಂಧ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ವಕಾಲತ್ತು ನಡೆಸಲು ೨೧ ವರ್ಷ ಆಗಬೇಕಾಗಿದ್ದುದರಿಂದ ಅವರು ವಿಶೇಷ ಅನುಮತಿ ಪಡೆಯಬೇಕಾಗಿ ಬಂದಿತ್ತು.ಹಲವು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ವಾದಿಸಿದ್ದ ಜೇಠ್ಮಲಾನಿ ಒಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸುಪ್ರೀಂಕೋರ್ಟ್ ವಕೀಲರಾಗಿದ್ದರು. ದೇಶದ ಪ್ರಖ್ಯಾತ ಕ್ರಿಮಿನಲ್ ವಕೀಲರಲ್ಲಿ ಅವರು ಒಬ್ಬರಾಗಿದ್ದರು.ಭಾರತೀಯ ಜನತಾ ಪಕ್ಷದಿಂದ ಮುಂಬೈಯಲಿ ಚುನಾವಣೆ ಎದುರಿಸಿದ್ದ ರಾಮ್ ಜೇಠ್ಮಲಾನಿ ಎರಡು ಬಾರಿ ಸಂಸತ್ ಸದಸ್ಯರಾಗಿದ್ದರು. ಕಾನೂನು ಸಚಿವ ಮತ್ತು ನಗರಾಭಿವೃದ್ದಿ ಸಚಿವರಾಗಿ ಕೆಲಸ ಮಾಡಿದ್ದ ಅವರು ೨೦೧೦ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು.ಜೇಠ್ಮಲಾನಿ ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಗಳಲ್ಲಿ ಹಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದವರು. ವಕೀಲರಾಗಿ ವೃತ್ತಿಜೀವನ ಆರಂಭಿಸಿದ್ದ ಜೀಠ್ಮಲಾನಿ ೧೯೫೯ರಲ್ಲಿ ಬಹುಕೋಟಿ ಜಿ ಹಗರಣ, ಕೆ.ಎಂ.ನಾನಾವತಿ ಪ್ರಕರಣ ಮತ್ತು ಜೆಸ್ಸಿಕಾ ಲಾಲ್ ಪ್ರಕರಣಗಳ ವಕಾಲತ್ತು ವಹಿಸಿದ್ದಲ್ಲದೆ, ಮಹಾರಾಷ್ಟ್ರ ಸರ್ಕಾರದ  ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು. (ಜೇಠ್ಮಲಾನಿವಕಾಲತ್ತು ವಹಿಸಿದ್ದ ಪ್ರಕರಣಗಳ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment