Sunday, September 15, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 15

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಯ
ವಿಷಯನ್ನಾಗಿಸುವ ತಮ್ಮ ಮುಂದುವರೆದ ಯತ್ನವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ಅಣ್ವಸ್ತ್ರ ಸಮರದ ಕ್ಯಾತೆ ತೆಗೆದರು. ಪಾಕ್ ಪ್ರಧಾನಿಯ ಮಾತಿಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಖಡಕ್ ಎದಿರೇಟು ನೀಡಿ ಭಯೋತ್ಪಾದನೆ ನೀತಿ, ಯುದ್ಧೋನ್ಮಾದ ಬಿಡದಿದ್ದರೆ ಪಾಕಿಸ್ತಾನ ಛಿದ್ರ ಛಿದ್ರವಾದೀತು ಎಂದು ಈದಿನ  ಎಚ್ಚರಿಕೆ ನೀಡಿದರು. ದೋಹಾ ಮೂಲದ ಅಲ್ ಜಜೀರಾ ಸುದ್ದಿವಾಹಿನಿಗೆ  ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಅವರು ತಮ್ಮ ಯುದ್ಧೋನ್ಮಾದವನ್ನು ಮುಂದುವರೆಸಿ, ಉಭಯ ರಾಷ್ಟ್ರಗಳ ನಡುವಣ ಸಾಂಪ್ರದಾಯಿಕ ಸಮರದಲ್ಲಿ ಪಾಕಿಸ್ತಾನವು ಜಯಗಳಿಸಲು ಸಾಧ್ಯವಿಲ್ಲ, ಆದ್ದರಿಂದ ಅತ್ಯಂತ ಸುಲಭವಾಗಿ ಅದು  ಅಣ್ವಸ್ತ್ರ ಸಮರವಾಗಿ ಪರಿವರ್ತನೆಗೊಂಡೀತು ಎಂದು ಹೇಳಿದ್ದರು. ’ಅಣ್ವಸ್ತ್ರಗಳನ್ನು ಹೊಂದಿದ ಎರಡು ರಾಷ್ಟ್ರಗಳು ಯುದ್ಧಕ್ಕೆ ಇಳಿದಾಗ, ಅವರು ಪರಂಪರಾಗತ ಸಮರ ಆರಂಭಿಸಿದರೂ ಅದು ಅಣ್ವಸ್ತ್ರ ಸಮರವಾಗಿ ಪರ್‍ಯವಸಾನಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಇದನ್ನೂ ಯೋಚಿಸಲೂ ಸಾಧ್ಯವಿಲ್ಲ’ ಎಂದು ಇಮ್ರಾನ್ ಖಾನ್ ಸಂದರ್ಶನದಲ್ಲಿ ಹೇಳಿದ್ದರು. ’ಪಾಕಿಸ್ತಾನವು ಸಾಂಪ್ರದಾಯಿಕ ಸಮರದಲ್ಲಿ ಇಳಿದರೆ ಸೋಲುವುದು ಖಂಡಿತ. ಶರಣಾಗತಿ ಮತ್ತು ಸ್ವಾತಂತ್ರ್ಯಕ್ಕಾಗಿ ಸಾವಿನವರೆಗೂ ಹೋರಾಡುವ ಆಯ್ಕೆ ಎದುರಾದರೆ ಪಾಕಿಸ್ತಾನಿಗಳು ಸ್ವಾತಂತ್ರ್ಯಕ್ಕಾಗಿ ಸಾಯುವವರೆಗೂ ಹೋರಾಟಕ್ಕೆ ಸಿದ್ಧರಾಗುತ್ತಾರೆ ಎಂಬುದು ನನಗೆ ಗೊತ್ತಿದೆ’ ಎಂದ ಇಮ್ರಾನ್ ಖಾನ್ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಪಾಕಿಸ್ತಾನದಿಂದ ನಡೆದ ೨೦೦೦ಕ್ಕೂ ಹೆಚ್ಚು ಕದನವಿರಾಮ ಉಲಂಘನೆಗಳಲ್ಲಿ
೨೧ ಭಾರತೀಯರು ಸಾವನ್ನಪ್ಪಿದ್ದರೂ, ಭಾರತೀಯ ಸೇನೆ ಅಪಾರ ಸಂಯಮ ಮೆರೆದಿದೆ ಎಂದು  ಈದಿನ ಪಾಕಿಸ್ತಾನಕ್ಕೆ ಹೇಳಿದ ಭಾರತ ೨೦೦೩ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಸ್ಥಾಪನೆ ಮಾಡಿ ಎಂದು ಎಚ್ಚರಿಕೆ ನೀಡಿತು. ’ಪ್ರಸ್ತುತ ವರ್ಷ ಅವರು ೨೦೧೫ಕ್ಕೂ ಹೆಚ್ಚು ಅಪ್ರಚೋದಿತ ಕದನವಿರಾಮ ಉಲ್ಲಂಘನೆಗಳನ್ನು ನಡೆಸಿದ್ದು, ಅವುಗಳಿಗೆ ೨೧ ಭಾರತೀಯರು ಬಲಿಯಾಗಿದ್ದಾರೆ. ೨೦೦೩ರ ಕದನವಿರಾಮ ಒಪ್ಪಂದಕ್ಕೆ ಬದ್ಧರಾಗುವಂತೆ ಮತ್ತು ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಯಲ್ಲಿ ಶಾಂತಿ ಸ್ಥಾಪನೆ ಮಾಡುವಂತೆ ನಾವು ಪದೇ ಪದೇ ಪಾಕಿಸ್ತಾನಕ್ಕೆ ಹೇಳಿದ್ದರೂ ಇದು ನಡೆದಿದೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿದವು. ’ಪಾಕಿಸ್ತಾನದಿಂದ ಇಷ್ಟೊಂದು ಕದನವಿರಾಮ ಉಲ್ಲಂಘನೆ, ಭಯೋತ್ಪಾದಕರ ನುಸುಳುವಿಕೆ ಯತ್ನಗಳಾಗಿದ್ದರೂ, ಭಾರತೀಯ ಸೇನೆ ಅಪಾರ ಸಂಯಮ ವಹಿಸಿದೆ ಮತ್ತು ಪಾಕಿಸ್ತಾನದ ಈ ಪ್ರಚೋದನೆ ಮತ್ತು ಭಯೋತ್ಪಾದಕರನ್ನು ನುಗ್ಗಿಸುವ ಯತ್ನಗಳಿಗೆ ಪ್ರತಿಕ್ರಿಯಿಸಿಲ್ಲ ಎಂದು ಮೂಲ ಹೇಳಿತು. ಸೆಪ್ಟೆಂಬರ್ ೧೪ರಂದು ನಿಕಿಯಾಲ್ ಮತ್ತು ಜಂಡ್ರೋಟ್ ವಿಭಾಗಗಳ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದಿಂದ ಕದನವಿರಾಮ ಉಲ್ಲಂಘನೆಯಾಗಿದೆ ಎಂದು ಆಪಾದಿಸಿದ ಪಾಕಿಸ್ತಾನ ಭಾರತೀಯ ವಿದೇಶಾಂಗ ವ್ಯವಹಾರಗಳ ವಿಭಾಗದ ಗೌರವ್ ಅಹ್ಲುವಾಲಿಯಾ ಅವರನ್ನು ಕರೆಸಿ ಖಂಡನೆ ವ್ಯಕ್ತಪಡಿಸಿದ ಬಳಿಕ ಭಾರತದಿಂದ ಪಾಕ್ ಕದನ ವಿರಾಮಗಳ ಕುರಿತ ಹೇಳಿಕೆ ಬಂದಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಗಾಯಕಿಗೆ ಪಾಕಿಸ್ತಾನದ ನ್ಯಾಯಾಲಯವು 2 ವರ್ಷಗಳ ಸೆರೆವಾಸದ  ಶಿಕ್ಷೆ ವಿಧಿಸಿತು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಪ್ರಧಾನಿ ಮೇಲೆ ಹಾವು ಛೂ ಬಿಡುತ್ತೇನೆ ಎಂದು ಪಾಕ್​​ ಮೂಲದ ಪಾಪ್ ಗಾಯಕಿ ರಬಿ ಪಿರ್ಜಾದಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ತನ್ನ ಕೈಯಲ್ಲೇ ದೈತ್ಯ ಹಾವುಗಳನ್ನು ಹಿಡಿದು ಮೋದಿ ಮೇಲೆ ಛೂ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಇದೀಗ ಪಾಕಿಸ್ತಾನ ನ್ಯಾಯಲಯವೂ ಗಾಯಕಿಗೆ 2 ವರ್ಷ ಜೈಲು ಜೊತೆಗೆ ದಂಡ ವಿಧಿಸಿತು. ಟಿವಿ ನಿರೂಪಕಿ ಹಾಗೂ ಪಾಪ್ ಗಾಯಕಿ ರಬಿ ಪಿರ್ಝಾದಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು. ಈಕೆ ಯುಟ್ಯೂಬ್ ಚಾನಲ್ನಲ್ಲಿ ಸೆಪ್ಟೆಂಬರ್ 2ರಂದು ಬಿಡುಗಡೆ ಮಾಡಿದ್ದ ವಿಡಿಯೋ ಸಾಕಷ್ಟು ಜನ ನೋಡಿದ್ದರು. ಸ್ಥಳೀಯ ಸುದ್ದಿ ಮಾಧ್ಯಮಗಳು ಇದನ್ನು ಪ್ರಸಾರ ಮಾಡಿದ್ದವು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಆಂಧ್ರಪ್ರದೇಶ:  ದೋಣಿ ಮುಳುಗಿ 12ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ
ಪೂರ್ವ ಗೋದಾವರಿ ನದಿಯಲ್ಲಿ ಘಟಿಸಿತು. ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿದವು. ಕಚ್ಚಲೂರು ಬಳಿಯ ಗೋದಾವರಿ ನದಿಯಲ್ಲಿ ದುರಂತ ಸಂಭವಿಸಿತು. ದೋಣಿಯಲ್ಲಿ ಒಟ್ಟು 63 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಯಿತು. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯಿತು.  ಈವರೆಗೆ 23 ಮಂದಿಯನ್ನು ರಕ್ಷಿಸಲಾಯಿತು. ಸ್ಥಳಕ್ಕೆ ಎನ್ಡಿಆರ್ಎಫ್ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಘಟನೆ ಬಗ್ಗೆ  ತನಿಖೆಗೆ ಆದೇಶಿಸಿ,  ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಪರಿಹಾರ ಘೋಷಿಸಿದರು. ಕೆಲವು ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಗೋದಾವರಿ ನದಿಗೆ 5 ಲಕ್ಷ ಕೂಸೆಕ್ ನೀರನ್ನು ಬಿಡಲಾಗಿತ್ತು.ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ 11 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಬೆಂಗಳೂರು/ ಚಿಕ್ಕಮಗಳೂರು: ಭಾರೀ ಮಳೆ ಮತ್ತು ಪ್ರವಾಹಕ್ಕೆ ಗುಡ್ಡ ಕುಸಿತದ
ಕಾರಣದಿಂದ  ಮುಚ್ಚಲಾಗಿದ್ದ ಚಿಕ್ಕಮಗಳೂರಿನಿಂದ ಉಡುಪಿ, ಧರ್ಮಸ್ಥಳ, ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಚಾರ್ಮಾಡಿ ಘಟ್ಟಈದಿನ  ತೆರೆಯಲಾಗಿದ್ದು ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು.  ಚಾರ್ಮಾಡಿ ಘಟ್ಟದಲ್ಲಿ ಲಘು ವಾಹನಗಳ ಸಂಚಾರಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ಆದೇಶ ಹೊರಡಿಸಿದ್ದಾರೆ. 20 ಕಿ.ಮೀ. ವೇಗದ ಮಿತಿ ದಾಟದಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ 6ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಕಾಫಿನಾಡಿನಲ್ಲಿ ಮಹಾಮಳೆಗೆ ಗುಡ್ಡ ಕುಸಿದು, ಹಲವೆಡೆ ರಸ್ತೆ ಕೊಚ್ಚಿ ಹೋಗಿತ್ತು. 2019 ಆಗಸ್ಟ್​ 9ರಿಂದ ಚಾರ್ಮಾಡಿ ಘಟ್ಟ ರಸ್ತೆಯಲ್ಲಿ ಸಂಚಾರ ಬಂದ್ಆಗಿತ್ತು. ಇದರಿಂದಾಗಿ ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗಿತ್ತು(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment