ನಾನು ಮೆಚ್ಚಿದ ವಾಟ್ಸಪ್

Saturday, September 28, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 28

2019: ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯವನ್ನು ಕೇಂದ್ರೀಕರಿಸಿ ಮಾಡಿದ  ದ್ವೇಷ ಭಾಷಣಕ್ಕೆ ಭಾರತವು 2019 ಸೆಪ್ಟೆಂಬರ್ 28 ಶನಿವಾರ ಖಡಕ್ ಉತ್ತರ ನೀಡಿತು. ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಉತ್ತರಿಸುವ ಹಕ್ಕನ್ನು ಚಲಾಯಿಸಿ, ಖಡಕ್ ಎದಿರೇಟು ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಥಮ ಕಾರ್ಯದರ್ಶಿ ವಿದಿಶಾ ಮೈತ್ರ  ಅವರು, ಪಾಕಿಸ್ತಾನದ ಜಾತಕವನ್ನೇ ಜಾಲಾಡಿ, ’ತನ್ನ ನೆಲದಲ್ಲಿ ವಿಶ್ವಸಂಸ್ಥೆಯು ಪ್ರಕಟಿಸಿದ ಜಾಗತಿಕ ಉಗ್ರರ ಪಟ್ಟಿಯ ೩೦ ಮಂದಿ ಭಯೋತ್ಪಾದಕರು ತನ್ನ ನೆಲದಲ್ಲಿ ಇಲ್ಲ ಎಂಬುದಾಗಿ ನಿರಾಕರಿಸುವಂತೆಪಾಕಿಸ್ತಾನದ ಪ್ರಧಾನಿಗೆ ಸವಾಲು ಹಾಕಿದರು. ವಿಶ್ವಸಂಸ್ಥೆಯು ಹೆಸರಿಸಿರುವ ಅಲ್-ಖೈದಾ ಮತ್ತು ದಾಯೆಶ್ ದಿಗ್ಬಂಧನ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಪಿಂಚಣಿ ನೀಡುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಪಾಕಿಸ್ತಾನ ಎಂಬುದಾಗಿ ಮೈತ್ರ ಅವರು ಜರೆದರು. ‘೧೩೦ ಮಂದಿ ವಿಶ್ವಸಂಸ್ಥೆ ನಿಯೋಜಿತ ಭಯೋತ್ಪಾದಕರು ಮತ್ತು ವಿಶ್ವಸಂಸ್ಥೆಯು ಪಟ್ಟಿ ಮಾಡಿರುವ ೨೫ ಭಯೋತ್ಪಾದಕರಿಗೆ ತನ್ನ ರಾಷ್ಟ್ರವು ಆಶ್ರಯ ಕೊಟ್ಟಿಲ್ಲ ಎಂಬುದಾಗಿ ಪಾಕಿಸ್ತಾನದ ಪ್ರಧಾನಿಯವರು ದೃಢ ಪಡಿಸುವರೇ?’ ಎಂದು ವಿದಿಶಾ ಮೈತ್ರ ಪ್ರಶ್ನಿಸಿದರು. ‘ಪಾಕಿಸ್ತಾನದಲ್ಲಿ ಯಾವುದೇ ಉಗ್ರಗಾಮಿ ಸಂಘಟನೆಗಳು ಇಲ್ಲ ಎಂಬುದನ್ನು ಪರಿಶೀಲಿಸಲು ಪಾಕಿಸ್ತಾನಕ್ಕೆ ಆಗಮಿಸುವಂತೆ ಈಗ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ವೀಕ್ಷಕರನ್ನು ಆಹ್ವಾನಿಸಿದ್ದಾರೆ. ವಚನವನ್ನು ಈಡೇರಿಸುವಂತೆ ವಿಶ್ವವು ಆಗ್ರಹಿಸಬೇಕುಎಂದು ಮೈತ್ರ  ಹೇಳಿದರು.‘ಪ್ರಧಾನಿ ಖಾನ್ ಅವರು ಅಣ್ವಸ್ತ್ರ ಸಮರದ ಬೆದರಿಕೆಯ ಮಾತುಗಳನ್ನು ಆಡುತ್ತಿರುವುದು ಮುತ್ಸದ್ಧಿತನವಲ್ಲ, ಅದು  ಉತ್ತರನ ಪೌರುಷಎಂದು ಮೈತ್ರ ಬಣ್ಣಿಸಿದರು.(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಮುಂಬೈ: ಭಾರತದ ಜೊತೆಗೆ ಸಶಸ್ತ್ರ ಘರ್ಷಣೆಗೆ ಇಳಿಯುವುದರ ವಿರುದ್ಧ 2019 ಸೆಪ್ಟೆಂಬರ್ 28ರ ಶನಿವಾರ ಇಲ್ಲಿ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಮಾರಕ ಹೊಡೆತ ನೀಡುವ ಸಾಮರ್ಥ್ಯ ನಮಗಿದೆಎಂದು ಹೇಳಿದರು.ಭಾರತದ ಎರಡನೆಯ ಸ್ಕಾರ್ಪೇನ್ ದರ್ಜೆಯ ದೇಶೀ ನಿರ್ಮಿತ ಶಬ್ಧರಹಿತ ಜಲಾಂತರ್ಗಾಮಿ ಐಎನ್ಎನ್ ಖಂಡೂರಿ ಕಾರ್ಯಾರಂಭ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವರು, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮಾಡಿದ ಭಾಷಣದ ಹಿನ್ನೆಲೆಯಲ್ಲಿ ನೆರೆರಾಷ್ಟ್ರಕ್ಕೆ ಸಂದೇಶವನ್ನು ರವಾನಿಸಿದರು.ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಶುಕ್ರವಾರ ಮಾತನಾಡಿದ್ದ ಇಮ್ರಾನ್ ಖಾನ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಅಣ್ವಸ್ತ್ರಸಜ್ಜಿತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಸಮರಕ್ಕೆ ಇಳಿದರೆ ಸಂಭವಿಸಬಹುದಾದ ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಗೆ ಎಚ್ಚರಿಕೆ ನೀಡಿದ್ದರು.’ಐಎನ್ಎಸ್ ಖಂಡೂರಿ ಕಾರ್ಯಾರಂಭದೊಂದಿಗೆ ಭಾರತೀಯ ನೌಕಾಪಡೆಯು ಅತ್ಯಂತ ಪ್ರಬಲವಾಗಿದೆ ಎಂಬುದನ್ನು ಪಾಕಿಸ್ತಾನವು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಅವರು ನಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳಬೇಕು ಮತ್ತು ಅಗತ್ಯ ಬಿದ್ದಲ್ಲಿ ನಾವು ಅದನ್ನು ಬಳಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕುಎಂದು ರಕ್ಷಣಾ ಸಚಿವರು ಮುಂಬೈಯಲ್ಲಿ ಶನಿವಾರ ಮುಂಜಾನೆ ಕಾರ್ಯಾರಂಭ ಮಾಡಿದ ಸ್ಕಾರ್ಪೇನ್ ದರ್ಜೆಯ ದಾಳಿ ಜಲಾಂತರ್ಗಾಮಿಯ ಕಾರ್ಯಾರಂಭವನ್ನು ಉಲ್ಲೇಖಿಸುತ್ತಾ ಘೋಷಿಸಿದರು.‘ಭಾರತಕ್ಕೆ ತನ್ನ ನೌಕಾಪಡೆಯ ಬಗ್ಗೆ ಹೆಮ್ಮೆ ಇದೆ. ೧೯೭೧ರ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ವಹಿಸಿದ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಆಪರೇಷನ್ ಟ್ರೈಡೆಂಟ್ ಮತ್ತು ಆಪರೇಷನ್ ಪೈಥೋನ್ ಪಾಕಿಸ್ತಾನಿ ನೌಕಾಪಡೆಯ ಬೆನ್ನುಮೂಳೆಯನ್ನೇ ಮುರಿದಿದ್ದವುಎಂದು ಆಧುನಿಕ ಆಯಕಟ್ಟಿನ ಸಮರದಲ್ಲಿ ಜಲಾಂತರ್ಗಾಮಿಗಳ ಮಹತ್ವವನ್ನು ಉಲ್ಲೇಖಿಸುತ್ತಾ ಸಚಿವರು ನುಡಿದರು.(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಜಮ್ಮು: ಜಮ್ಮು-ಕಾಶ್ಮೀರದ ರಾಮಬನ್ ಜಿಲ್ಲೆಯಲ್ಲಿನ ಶ್ರೀನಗರ ಹೆದ್ದಾರಿಯ ಬಟೋಟೆ ನಗರದ ಮನೆಯೊಂದರಲ್ಲಿ ಬಿಜೆಪಿ ಕಾರ್ಯಕರ್ತನಾಗಿದ್ದ ಮನೆ ಮಾಲೀಕನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಐವರು ಭಯೋತ್ಪಾದಕರ ಗುಂಪಿನ ವಿರುದ್ಧ 2019 ಸೆಪ್ಟೆಂಬರ್  28ರ ಶನಿವಾರ ಸತತ ಹತ್ತು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಸೇನಾಪಡೆಯು ಮೂವರು ಭಯೋತ್ಪಾದಕರನ್ನು ಹತ್ಯೆಗೈದು ಒತ್ತೆಯಾಳನ್ನು ಸುರಕ್ಷಿತವಾಗಿ ಕರೆತಂದಿದೆ ಎಂದು ಅಧಿಕಾರಿಗಳು ತಿಳಿಸಿದರು.ರಾಮಬನ್ ಜಿಲ್ಲೆಯ ಬಟೋಟೆ ಪ್ರದೇಶದಲ್ಲಿನ ಮನೆಯೊಳಕ್ಕೆ ನುಗ್ಗಿದ್ದ ಮೂವರು ಭಯೋತ್ಪಾದಕರು, ಮನೆಯಲ್ಲಿದ್ದ ಮಾಲೀಕನನ್ನು ಒತ್ತೆಯಾಳುವನ್ನಾಗಿ ಇಟ್ಟುಕೊಂಡು, ಗುಂಡಿನ ದಾಳಿ ನಡೆಸಿದ್ದರು. ಸಂದರ್ಭದಲ್ಲಿ ಸೇನೆ ಪ್ರತಿದಾಳಿ ಮೂಲಕ ಕಾರ್ಯಾಚರಣೆ ನಡೆಸಿತ್ತು.ಸತತ ಹತ್ತು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಯಿತು. ಸಂದರ್ಭದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿರುವುದಾಗಿ ಜಮ್ಮು ಇನ್ಸ್ಪೆಕ್ಟರ್ ಜನರಲ್ ಮುಕೇಶ್ ಸಿಂಗ್ ತಿಳಿಸಿದರು.ಉಳಿದ ಇಬ್ಬರು ಭಯೋತ್ಪಾದಕರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.ಶನಿವಾರ ಬೆಳಗ್ಗೆ ಹೈವೇ ಟೌನ್ ನಲ್ಲಿ ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ ಬಳಿಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ವೇಳೆ ಮೂವರು ಭಯೋತ್ಪಾದಕರು ಮನೆಯೊಳಕ್ಕೆ ನುಗ್ಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಸೇನೆಯ ಕಾರ್ಯಾಚರಣೆಯಲ್ಲಿ ಮೂವರು ಸಾವನ್ನಪ್ಪಿದರು. ಕಾರ್ಯಾಚರಣೆ ಪೂರ್ಣಗೊಂಡಿದ್ದು, ಒತ್ತೆಯಾಳನ್ನು ರಕ್ಷಿಸಲಾಗಿದೆ ಎಂದು  ಎಂದು ಸಿಂಗ್ ವಿವರಿಸಿದರು.ಎಲ್ಲ ಭಯೋತ್ಪಾದಕರ ಸದ್ದಡಗಿಸಲಾಗಿದೆ ಎಂದು ಅವರು ನುಡಿದರು. ಬಿಜೆಪಿ ಕಾರ್ಯಕರ್ತನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಗುಂಪಿನಲ್ಲಿ ಮೂವರು ಭಯೋತ್ಪಾದಕರು ಮಾತ್ರ ಇದ್ದರು ಎಂದು ಅವರು ನುಡಿದರು.(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಬೆಂಗಳೂರು:  ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿರುವ ಹೊತ್ತಿನಲ್ಲಿ ಸುದ್ದಿ ಕೇಳಿದರೆ ಸಾಕು ಹೃದಯಾಘಾತವಾಗುವಂತಹ ಸುದ್ದಿಯೊಂದು ಬಂದಿದೆ.  ಹೌದು, ಈ ಸುದ್ದಿ ಕೇಳಿದರೆ,  ಎದೆಗುಂಡಿಗೆ ಗಟ್ಟಿ ಇದ್ದವರ ಹೃದಯಬಡಿತವೂ ತೀವ್ರವಾಗುವ ಸಾಧ್ಯತೆ ಇದೆ. ಜೀವನಶೈಲಿ ಬದಲಾದಂತೆ ಆರೋಗ್ಯದಲ್ಲೂ ಏರುಪೇರಾಗುತ್ತವೆ. ಹೃದಯಾಘಾತಕ್ಕೆ ಇಂಥದ್ದೇ ಕಾರಣ ಎಂದು ಹೇಳುವಂತಿಲ್ಲ. ರಕ್ತದ ಒತ್ತಡ (ಬಿಪಿ) ಜಾಸ್ತಿ ಆದರೆ,  ಸಿಹಿ-ಜಿಡ್ಡು ಜಾಸ್ತಿ ತಿಂದು ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿ ಆದರೂ ಹೃದಯಾಘಾತವಾಗುತ್ತದೆ. ಧೂಮಪಾನ, ಮದ್ಯಪಾನದಿಂದಲೂ ಹೃದಯಾಘಾತ ಆಗುತ್ತದೆ ಎಂಬುದು ಬಹುತೇಕ ಮಂದಿಗೆ ಗೊತ್ತಿರುವ ವಿಚಾರ.  ಅದರೆ ಬೆಂಗಳೂರಿನ ಬೃಹತ್ ಸಮಸ್ಯೆಯಾಗಿರುವ ಕಸದಿಂದಲೂ ಹೃದಯಾಘಾತ ಆಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಿದೆಯೇ? ಹೌದು, ಅಚ್ಚರಿ ಪಡಬಹುದಾದ  ಈ ವಿಚಾರವನ್ನು. ಬೆಂಗಳೂರಿನ ಖ್ಯಾತ  ಜಯದೇವ ಹೃದ್ರೋಗ ಸಂಸ್ಥೆ ನಡೆಸಿರುವ ನೂತನ ಸಂಶೋಧನೆ ವಿಷಯವನ್ನು ಬೆಳಕಿಗೆ ತಂದಿದೆ.. ತಂಬಾಕನ್ನು ಸೇದುವುದರಿಂದ, ಜಗಿಯುವುದರಿಂದ ಸಾಯುವುದಕ್ಕಿಂತ ಹೆಚ್ಚಿನ ಜನ ವಾಯುಮಾಲಿನ್ಯದಿಂದ ಸಾಯುತ್ತಿದ್ದಾರೆ. ಹೃದಯಕ್ಕೆ ವಾಯುಮಾಲಿನ್ಯ ಅದೆಷ್ಟು ದೊಡ್ಡ ಪೆಟ್ಟು ಕೊಡುತ್ತದೆ ಅಂದರೆ 5 ನಿಮಿಷ ಟ್ರಾಫಿಕ್ನಲ್ಲಿ ಇರುವುದೂ ಒಂದೇ, 5 ಸಿಗರೇಟ್ ಸೇದುವುದೂ ಒಂದೇ  ಎಂದು ವೈದ್ಯರು ಹೇಳುತ್ತಾರೆ. ಈ ಕಾರಣದಿಂದಲೇ ಹಾಗಾಗಿ 35 ವರ್ಷದೊಳಗಿನ ಅನೇಕ ಯುವಕ-ಯುವತಿಯರು ಇತ್ತೀಚೆಗೆ ಹೃದಯಾಘಾತದಿಂದ ಬಳಲುತ್ತಾ ಇದ್ದಾರೆ. ಅದರಲ್ಲೂ ಕಾರು, ಲಾರಿಗಳ ಚಾಲಕರೇ ಹೆಚ್ಚಾಗಿ ಹೃದಯಾಘಾತದಿಂದ ಬಳಲುತ್ತಾ ಇರುವುದು ಕೂಡಾ ಈ ಅಧ್ಯಯನದಿಂದ  ತಿಳಿದುಬಂದಿದೆ.(ವಿವರಗಳಿಗೆ ಇಲ್ಲಿಕ್ಲಿಕ್  ಮಾಡಿರಿ)



No comments:

Post a Comment