Thursday, September 26, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 26

2019: ನವದೆಹಲಿ: ವಿಧಾನಸಭಾಧ್ಯಕ್ಷರು ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜನತಾದಳದ (ಜಾತ್ಯತೀತ೧೭ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಎನ್ .ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ೧೫ ಕ್ಷೇತ್ರಗಳ ಉಪಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಪ್ರಕರಣದ ವಿಸ್ತೃತ ವಿಚಾರಣೆಯನ್ನು ಅಕ್ಟೋಬರ್ ೨೨ರಂದು ನಡೆಸುವುದಾಗಿ  2019 ಸೆಪ್ಟೆಂಬರ್  26ರ ಗುರುವಾರ ಪ್ರಕಟಿಸಿತು. ಇದರೊಂದಿಗೆ ಉಪಚುನಾವಣೆಯನ್ನು ತಡೆ ಹಿಡಿಯುವಂತೆ ಕೋರಿದ್ದ ಅನರ್ಹ ಶಾಸಕರಿಗೆ ತಾತ್ಕಾಲಿಕ ನಿರಾಳತೆ ಲಭಿಸಿತು. ಇದಕ್ಕೆ ಮುನ್ನ ಚುನಾವಣಾ ಆಯೋಗವು ಅಕ್ಟೋಬರ್ ೨೧ಕ್ಕೆ ನಿಗದಿಯಾಗಿರುವ ಕರ್ನಾಟಕದ ೧೫ ವಿಧಾನಸಭಾ ಸ್ಥಾನಗಳ ಉಪಚುನಾವಣೆಯನ್ನು ಅನರ್ಹ ಶಾಸಕರ ಅರ್ಜಿಗಳ ಬಗ್ಗೆ ನ್ಯಾಯಮೂರ್ತಿಗಳು ನಿರ್ಧರಿಸುವವರೆಗೆ ಮುಂದೂಡಲು ತಾನು ಸಿದ್ಧ ಎಂದು ಪೀಠಕ್ಕೆ ತಿಳಿಸಿತು. ತಮ್ಮನ್ನು ಹಾಲಿ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅನರ್ಹಗೊಳಿಸಿ ವಿಧಾನಸಭಾಧ್ಯಕ್ಷರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ೧೭ ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಾಲದಲ್ಲಿ ಚುನಾವಣಾ ಆಯೋಗವು ತನ್ನ ನಿಲುವನ್ನು ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿತು. ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತ ಕೃಷ್ಣ ಮುರಾರಿ ಅವರೂ ಇದ್ದ ತ್ರಿಸದಸ್ಯ ಪೀಠವು ತಾನು ವಿಷಯವನ್ನು ಪೂರ್ಣವಾಗಿ ಆಲಿಸಿ ನಿರ್ಧರಿಸುವುದಾಗಿ ಹೇಳಿದ ಬಳಿಕ ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು  ’ಹಾಗಿದ್ದರೆ (ಕರ್ನಾಟಕದ ೧೫ ವಿಧಾನಸಭಾ ಸ್ಥಾನಗಳ) ಉಪಚುನಾವಣೆಯನ್ನು ಸ್ವಲ್ಪ ಕಾಲ ಮುಂದೂಡುವಂತೆ ನಾನು ಚುನಾವಣಾ ಆಯೋಗಕ್ಕೆ ಸೂಚಿಸುವೆಎಂದು ಹೇಳಿದರು.  ‘ನಿಮ್ಮ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಬಹುದೇಎಂಬುದಾಗಿ ಪೀಠ ಪ್ರಶ್ನಿಸಿದಾಗ ಹಿರಿಯ ವಕೀಲರುನಾವು ಹಾಗೆಯೇ ಮಾಡುತ್ತೇವೆಎಂದು ಉತ್ತರಿಸಿದರು. ಅನರ್ಹ ಶಾಸಕರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಕ್ಷಿದಾರರ ಪರ ಹಾಜರಾಗಿದ್ದ ವಕೀಲರು ಉಪಚುನಾವಣೆಗನ್ನು ಮುಂದೂಡಲು ತಮ್ಮ ಆಕ್ಷೇಪವಿಲ್ಲ ಎಂಬುದಾಗಿ ಪೀಠಕ್ಕೆ ತಿಳಿಸಿದರು. ಆಗ ತನ್ನ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಪ್ರಕಟಿಸಿದ ಪೀಠವು, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆ ಮತ್ತು ಹಾಗೂ ಇತರ ರಾಜ್ಯಗಳಲ್ಲಿ ನಡೆಯಲಿರುವ ಉಪಚುನಾವಣೆಗಳು ಪೂರ್ಣಗೊಂಡ ಬಳಿಕ ಅಕ್ಟೋಬರ್ ೨೨ರಂದು ತಾನು ಪ್ರಕರಣವನ್ನು ವಿಸ್ತೃತ ವಿಚಾರಣೆಗಾಗಿ ಎತ್ತಿಕೊಳ್ಳುವುದಾಗಿ ಹೇಳಿತು.  (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ಕುಟುಂಬ ನಿರ್ವಹಣೆಗಾಗಿಮೂಲಭೂತ  ವೆಚ್ಚಗಳನ್ನುಭರಿಸಲು ತನ್ನ ಬ್ಯಾಂಕ್ ಖಾತೆಯನ್ನು ಬಳಸಲು ಲಷ್ಕರ್ --ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ಗೆ ಅವಕಾಶ ನೀಡುವಂತೆ ಪಾಕಿಸ್ತಾನವು ಮಾಡಿದ ಮನವಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯು  2019 ಸೆಪ್ಟೆಂಬರ್ 26ರ ಗುರುವಾರ ಅನುಮೋದನೆ ನೀಡಿತು. ಹಫೀಜ್ ಸಯೀದ್, ಮೊಹಮ್ಮದ್ ಸಯೀದ್, ಹಾಜಿ ಮುಹಮ್ಮದ್ ಆಶ್ರಫ್ ಮತ್ತು ಝಫರ್ ಇಕ್ಬಾಲ್ ಅವರಿಗೆ ಕೆಲವೊಂದು ಮೂಲ ವೆಚ್ಚಗಳನ್ನು ಭರಿಸುವ ಸಲುವಾಗಿ ಬ್ಯಾಂಕ್ ಖಾತೆ ಬಳಸಲು ಅನುಮತಿ ನೀಡುವ ಪಾಕಿಸ್ತಾನಿ ಅಧಿಕಾರಿಗಳ ಉದ್ದೇಶವನ್ನು ಗೌರವಿಸುವ ಸಮಿತಿಯ ನಿರ್ಧಾರವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನಕ್ಕೆ ಬರೆದ ತನ್ನ ಕರಡು ಪತ್ರದಲ್ಲಿ ತಿಳಿಸಿತು. ಪಾಕಿಸ್ತಾನವು ಉಲ್ಲೇಖಿಸಿರುವ ಮೂಲಭೂತ  ವೆಚ್ಚಗಳನ್ನು ಭರಿಸುವ ಪ್ರಸ್ತಾಪವನ್ನು ಸಮಿತಿಯು ಗೌರವಿಸುತ್ತದೆ ಎಂದು ಐಸಿಸ್, ಅಲ್ -ಖೈದಾ ಮತ್ತು ಸಂಬಂಧಪಟ್ಟ ವ್ಯಕ್ತಿಗಳು, ಮತ್ತಿತರ ಭಯೋತ್ಪಾದಕ ಗುಂಪುಗಳ ಜೊತೆ ವ್ಯವಹರಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ೧೨೬೭ರ ಸಮಿತಿಯು ನೀಡಿದ ಪತ್ರ ತಿಳಿಸಿತು. ಹಫೀಜ್ ಸಯೀದ್ಗೆ ತನ್ನ ಬ್ಯಾಂಕ್ ಖಾತೆ ಬಳಸಲು ಅವಕಾಶ ನೀಡುವಂತೆ ಕೋರಿದ ಪಾಕಿಸ್ತಾನಿ ಮನವಿಗೆ ವಿಶ್ವಸಂಸ್ಥೆ ಸಮಿತಿಯ ಸದಸ್ಯರ ಅಥವಾ ವಿಶ್ವಸಂಸ್ಥೆಯ ಬೇರೆ ಯಾರೇ ಸದಸ್ಯರ ಆಕ್ಷೇಪವಿಲ್ಲ ಎಂದು ಪತ್ರದ ಟಿಪ್ಪಣಿ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ತನ್ನ ನಿಲುವಿಗೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಕ್ರೋಡೀಕರಿಸಲು ಹೆಣಗಿ, ಎಲ್ಲೂ ಬೆಂಬಲ ಸಿಗುತ್ತಿಲ್ಲ ಎಂಬುದಾಗಿ ಗೊಣಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ಮಹಾಅಧಿವೇಶನದಲ್ಲೂ ಭಾರತದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಮುಂದುವರೆಸುತ್ತಾ ಬೆಂಬಲ ಗಳಿಕೆಗಾಗಿ ಹೊಸ ವೇದಿಕೆಗಳ ಹುಡುಕಾಟ ನಡೆಸಿದರು.  ಇತ್ತ ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ವಿವಿಧ ಮಾದರಿಯ ದಾಳಿಗಳಿಗೆ ಸಿದ್ದತೆಗಳನ್ನು ನಡೆಸುತ್ತಿದ್ದು ತಮ್ಮ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಮತ್ತೆ ಸಕ್ರಿಯಗೊಳಿಸಿರುವ ವರದಿಗಳು ಬಂದವು. ಭಾರತೀಯ ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್--ಮೊಹಮ್ಮದ್ ಏಳು ತಿಂಗಳ ಹಿಂದೆ ಭಾರತೀಯ ವಾಯುಪಡೆ ವಿಮಾನದಾಳಿಯಲ್ಲಿ ಧ್ವಂಸವಾಗಿದ್ದ ತನ್ನ ಬಾಲಾಕೋಟ್ ತರಬೇತಿ ಶಿಬಿರವನ್ನು ಪುನಾರಂಭಿಸಿರುವುದನ್ನು ವಾರದಲ್ಲಿ ದೃಢ ಪಡಿಸಿದ್ದರು. ಆದರೆ ಜೈಶ್ ಗುಂಪು ನಡೆಸುತ್ತಿರುವ ಬಾಲಾಕೋಟ್ ತರಬೇತಿ ಶಿಬಿರವು ಭಯೋತ್ಪಾದಕರು ಇತ್ತೀಚಿನ ವಾರಗಳಲ್ಲಿ ಸದ್ದಿಲ್ಲದೆ ಪುನರಾಂಭ ಮಾಡಿರುವ ಹಲವಾರು ತರಬೇತಿ ಶಿಬಿರಗಳ ಪೈಕಿ ಒಂದು ಮಾತ್ರ ಎಂದು ಭಾರತೀಯ ಭಯೋತ್ಪಾದಕ ನಿಗ್ರಹ ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2019: ನವದೆಹಲಿ: ಅಯೋಧ್ಯೆ ಪ್ರಕರಣದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಹಕ್ಕನ್ನು ಪ್ರಶ್ನಿಸಿದ ವಿಚಾರದಲ್ಲಿ ಮುಸ್ಲಿಂ ಅರ್ಜಿದಾರರು ಸುಪ್ರೀಂ ಕೋರ್ಟಿನಲ್ಲಿ 2019 ಸೆಪ್ಟೆಂಬರ್ 26ರ ಗುರುವಾರ ತಮ್ಮ ನಿಲುವನ್ನು ಬದಲಾಯಿಸಿಕೊಂಡರು. 2003 ಪುರಾತತ್ವ ಇಲಾಖೆಯ ಸಮೀಕ್ಷಾ ಹಕ್ಕಿನ ಕರ್ತೃತ್ವವನ್ನು ಪ್ರಶ್ನಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುಮಾಡಿದ್ದಾಕ್ಕಾಗಿ ಮುಸ್ಲಿಂ ಅರ್ಜಿದಾರ ಪರ ವಕೀಲರು ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಸಾಂವಿಧಾನಿಕ ಪೀಠದ ಕ್ಷಮಾಪಣೆಯನ್ನು ಕೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ  ಪೀಠದ ಮುಂದೆ ವಿಚಾರವನ್ನು ಪ್ರಸ್ತಾವಿಸಿದ ಮುಸ್ಲಿಂ ಅರ್ಜಿದಾರರ ಪರ ವಕೀಲ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಅವರು  ತಮ್ಮ ಕಕ್ಷಿದಾರರು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಯ ಸಾರಾಂಶವನ್ನು ಪ್ರಶ್ನಿಸಲು ಬಯಸುವುದಿಲ್ಲ ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.ಸಮೀಕ್ಷೆಯ ಪ್ರತೀ ಪುಟದಲ್ಲಿ ಸಹಿ ಇರಬೇಕಿತ್ತು ಎಂದು ನಿರೀಕ್ಷಿಸುವಂತಿಲ್ಲ. ಇದರ ಕರ್ತೃತ್ವ ಮತ್ತು ಸಾರಾಂಶವನ್ನು ಪ್ರಶ್ನಿಸುವ ಅಗತ್ಯವಿಲ್ಲ. ಒಂದು ವೇಳೆ ನಾವು ವಿಚಾರದಲ್ಲಿ ಘನ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಿದ್ದಲ್ಲಿ, ನಾವು ಇದಕ್ಕಾಗಿ ಕ್ಷಮೆಯನ್ನು ಕೋರುತ್ತೇವೆ ಎಂದು ರಾಜೀವ್ ಧವನ್ ಅವರು ಪೀಠದ ಮುಂದೆ ಹೇಳಿದರು. ವರದಿಯ ಕರ್ತೃತ್ವ ಒಂದು ಪ್ರಶ್ನೆಯಾಗಿತ್ತು ಮತ್ತು ನಾವು ಕರ್ತೃತ್ವವನ್ನು ಪ್ರಶ್ನಿಸುವುದಿಲ್ಲ ಎಂದೂ ಸಹ ಮುಸ್ಲಿಂ ಅರ್ಜಿದಾರ ಪಕ್ಷಗಳ ಪರ ವಕೀಲರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.(ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)



No comments:

Post a Comment