ನಾನು ಮೆಚ್ಚಿದ ವಾಟ್ಸಪ್

Monday, September 9, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 09

2019: ಭುವನೇಶ್ವರ(ಮಲ್ಕಾನ್ ಗಿರಿ):ವಿಮಾನದ ಪೈಲಟ್ ಆಗಬೇಕೆಂಬ ಕನಸನ್ನು ಕೊನೆಗೂ ಒಡಿಶಾದ ಬುಡಕಟ್ಟು ಯುವತಿ ನನಸಾಗಿಸಿಕೊಂಡಳು. ಇದರೊಂದಿಗೆ ಮಾವೋವಾದಿ ಬಾಹುಳ್ಯದ ಮಲ್ಕಾನ್ ಗಿರಿ ಜಿಲ್ಲೆಯ ಕುಗ್ರಾಮದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಬಿಟ್ಟು, 2012ರಲ್ಲಿ ಏವಿಯೇಷನ್ ಅಕಾಡೆಮಿಗೆ ಅನುಪ್ರಿಯಾ ಲಾರ್ಕಾ ಸೇರಿಕೊಂಡಿದ್ದರು. ಏಳು ವರ್ಷಗಳ ಬಳಿಕ 23 ಹರೆಯದ ಅನುಪ್ರಿಯಾ ಅವರ ಪೈಲಟ್ ಆಗಬೇಕೆಂಬ ಕನಸು ನನಸಾಯಿತು. ಒಡಿಶಾದ ಬುಡಕಟ್ಟು ಬಾಹುಳ್ಯದ ಜಿಲ್ಲೆಯ ನಿವಾಸಿಯಾಗಿರುವ ಅನುಪ್ರಿಯಾ ಈಗ ಖಾಸಗಿ ವಿಮಾನದಲ್ಲಿ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದಾರೆಪೈಲಟ್ ಆಗಬೇಕೆಂಬ ಕನಸನ್ನು ನನಸಾಗಿಸಿಕೊಂಡ ಲಾರ್ಕಾ ಅವರನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಭಿನಂದಿಸಿದ್ದಾರೆ. ಅಲ್ಲದೇ ಅನುಪ್ರಿಯಾ ಇತರರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

2019: ಬೆಂಗಳೂರು: ಚಂದ್ರನ ಅಂಗಳದಲ್ಲಿ ಪತ್ತೆಯಾಗಿರುವ ವಿಕ್ರಮ್ ಲ್ಯಾಂಡರ್ ಸ್ವಲ್ಪ ಓರೆಯಾದ ಸ್ಥಿತಿಯಲ್ಲಿ ಇರುವುದು ಬೆಳಕಿಗೆ ಬಂದಿತು. ಯೋಜಿಸಿದ್ದಂತೆ ನಿಧಾನವಾಗಿ ನೆಲಕ್ಕಿಳಿಯಲು ಸಾಧ್ಯವಾಗದೆ, ರಭಸವಾಗಿ ನೆಲಕ್ಕೆ ಇಳಿದಿದ್ದರೂ, ವಿಕ್ರಮ್ಗೆ ಯಾವುದೇ ಹಾನಿ ತಟ್ಟಿಲ್ಲ, ಒಂದಿಷ್ಟು ಚೂರಾಗದೆ ಸುಸ್ಥಿತಿಯಲ್ಲಿ ಇದೆ ಎಂದು ಇಸ್ರೋ ವಿಜ್ಞಾನಿಗಳು ಈದಿನ  ತಿಳಿಸಿದರು.ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ಚಂದ್ರಯಾನ-೨ರ ಆರ್ಬಿಟರ್ ಹಿಂದಿನ ದಿನ ಕಳುಹಿಸಿದ್ದ ಥರ್ಮಲ್ ಚಿತ್ರದ ಪರಿಶೀಲನೆಯಿಂದವಿಕ್ರಮ್ಸುಸ್ಥಿತಿಯಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ವಿಜ್ಞಾನಿಗಳು ಹೇಳಿದರು.ಓರೆಯಾಗಿದ್ದರೂ, ಸುಸ್ಥಿತಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡಿರುವ ವಿಜ್ಞಾನಿಗಳುವಿಕ್ರಮ್ನ್ನು ಸಂಪರ್ಕಿಸಲು ಸತತ ಯತ್ನ ನಡೆಸುತ್ತಿದ್ದಾರೆ. ಆರ್ಬಿಟರ್ ತನ್ನ ಉತ್ಕೃಷ್ಟ ದರ್ಜೆಯ ಕ್ಯಾಮರಾದಲ್ಲಿ ವಿಕ್ರಮ್ ಚಿತ್ರವನ್ನು ಸೆರೆ ಹಿಡಿದಿದ್ದು, ಅದರಲ್ಲಿ ವಿಕ್ರಮ್ ಓರೆಯಾಗಿ ಇರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ನಿಧಾನವಾಗಿ ಇಳಿಸಲು ಯೋಜಿಸಿದ್ದ ಸ್ಥಳದ ಸಮೀಪದಲ್ಲಿಯೇ ಲ್ಯಾಂಡರ್ ರಭಸವಾಗಿ ಚಾಂದ್ರ ನೆಲದ ಮೇಲೆ ಬಿದ್ದಿದೆ ಆದರೆ ಬಿದ್ದ ರಭಸಕ್ಕೆ ಲ್ಯಾಂಡರ್ ತುಂಡಾಗಿಲ್ಲ, ಬದಲಿಗೆ ಸ್ವಲ್ಪ ಓರೆಯಾಗಿ ನಿಂತಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದರು.(ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ಇಸ್ಲಾಮಾಬಾದ್: ಗಡಿಭಾಗದಲ್ಲಿ ಸೇನೆ ಹಾಗೂ ಉಗ್ರರನ್ನು ಪಾಕಿಸ್ತಾನ ಜಮಾವಣೆ ಗೊಳಿಸುತ್ತಿರುವ ನಡುವೆಯೇ ಇದೀಗ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜೈಶ್ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರನನ್ನು ಪಾಕಿಸ್ತಾನ ಬಂಧಿಸಿದ ಒಂದು ತಿಂಗಳ ಬಳಿಕ ರಹಸ್ಯವಾಗಿ ಬಿಡುಗಡೆ ಮಾಡಿತು. ಅಲ್ಲದೇ ಜಮ್ಮುವಿನ ಸಿಯಾಲ್ ಕೋಟ್ ವಿಭಾಗ ಮತ್ತು ರಾಜಸ್ಥಾನದ ಗಡಿಭಾಗಗಳಲ್ಲಿ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆಗೊಳಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಎಂದು ವರದಿ ತಿಳಿಸಿತು. ಗಡಿಭಾಗದಲ್ಲಿನ ಪಾಕ್ ಚಟುವಟಿಕೆ ಹಾಗೂ ಉಗ್ರ ಮಸೂದ್ ಬಿಡುಗಡೆ ಗಮನಿಸಿದರೆ ಭಾರತದ ಮೇಲೆ ಉಗ್ರರ ದಾಳಿ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತು. ನಿಟ್ಟಿನಲ್ಲಿ ಗಡಿಭಾಗಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿತು. ಇತ್ತೀಚೆಗಷ್ಟೇ ಎಫ್ ಎಟಿಎಫ್ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಸಂದರ್ಭದಲ್ಲಿ ಪಾಕಿಸ್ತಾನ ತಾನು ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಉಗ್ರ ಮಸೂದ್ ಅಜರನನ್ನು ಬಂಧಿಸುವ ನಾಟಕವಾಡಿತ್ತು. ಇದೀಗ ರಹಸ್ಯವಾಗಿ  ಆತನನ್ನು ಬಿಡುಗಡೆ ಮಾಡಿತು.

2019: ನವದೆಹಲಿ: ಗುಜರಾತಿನ ಸರ್ ಕ್ರೀಕ್ನಲ್ಲಿ ಕೆಲವು ಪರಿತ್ಯಕ್ತ ಅನಾಥ ದೋಣಿಗಳನ್ನು ಪತ್ತೆ
ಹಚ್ಚಲಾಗಿದ್ದು, ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಮೂಲಗಳಿಂದ  ತನಗೆ ಮಾಹಿತಿ ಲಭಿಸಿದೆ ಎಂದು ಭಾರತದ ಈದಿನ ಹೇಳಿತು. ಸರ್ ಕ್ರೀಕ್ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ೯೬ ಕಿಮೀ ವ್ಯಾಪ್ತಿಯ ಅಳಿವೆ (ನದೀಮುಖ) ಪ್ರದೇಶವಾಗಿದ್ದು, ಅರಬ್ಬಿ ಸಮುದ್ರದತ್ತ ತೆರೆದುಕೊಂಡಿರುವ ಪ್ರದೇಶವು ಭಾರತದ ಗುಜರಾತ್ ರಾಜ್ಯವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ರದಿಂದ ವಿಭಜಿಸುತ್ತದೆ. ’ಭಾರತದ ದಕ್ಷಿಣ ಭಾಗದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆಎಂಬ ಗುಪ್ತಚರ ಮಾಹಿತಿ ನಮಗೆ ಲಭಿಸಿದೆ. ಸರ್ ಕ್ರೀಕ್ನಲ್ಲಿ ಕೆಲವು ಪರಿತ್ಯಕ್ತ ಅನಾಥ ದೋಣಿಗಳನ್ನು ಪತ್ತೆ ಹಚ್ಚಲಾಗಿದೆ. ಶತ್ರುಶಕ್ತಿಗಳುಮತ್ತು ಭಯೋತ್ಪಾದಕರ ಷಡ್ಯಂತ್ರಗಳನ್ನು ತಡೆಯಲು ನಾವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದೇವೆಎಂದು ದಕ್ಷಿಣ ಸೇನಾ ಕಮಾಂಡ್ ಕಮಾಂಡಿಂಗ್ ಇನ್ ಚೀಫ್ ಸಾಮಾನ್ಯ ಅಧಿಕಾರಿ ಜನರಲ್ ಎಸ್ಕೆ ಸೈನಿ ಅವರು ಪುಣೆಯಲ್ಲಿ ಹೇಳಿದರು. ಸೇನೆಯ ಎಚ್ಚರಿಕೆಯನ್ನು ಅನುಸರಿಸಿ ಕೇರಳ ಪೊಲೀಸರು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಿದ್ದಾರೆ. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಂತಹ ಜನದಟ್ಟಣೆಯ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ರಾಜ್ಯ ಪೊಲೀಸ್ ಪ್ರಮುಖರು ಸೂಚನೆ ನೀಡಿದರು. ಸೆಪ್ಟೆಂಬರ್ 11ರ ಬುಧವಾರ ಓಣಂ ಆಚರಣೆ ಕಾಲದಲ್ಲಿ ಹೆಚ್ಚು ಜನರು ಸೇರುವ ಜಾಗಗಳಲ್ಲಿ ಕೂಡಾ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಯಿತು. ಲಷ್ಕರ್ --ತೊಯ್ಬಾ ಸದಸ್ಯರು ರಾಜ್ಯದೊಳಕ್ಕೆ ನುಸುಳಿದ ಬಗ್ಗೆ ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದನ್ನು ಅನುಸರಿಸಿ, ತಮಿಳುನಾಡಿನಾದ್ಯಂತ ಆಗಸ್ಟ್ ತಿಂಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿತ್ತು. ಭಯೋತ್ಪಾದಕ ಸಂಘಟನೆಗಳ ಸದಸ್ಯರು ಶ್ರೀಲಂಕೆಯಿಂದ ಸಮುದ್ರ ಮಾರ್ಗವಾಗಿ ರಾಜ್ಯದೊಳಕ್ಕೆ ಪ್ರವೇಶಿಸಿ ಕೊಯಮತ್ತೂರು ಸೇರಿದಂತೆ ವಿವಿಧ ನಗರಗಳಿಗೆ ತೆರಳಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ರಾಜ್ಯಾದ್ಯಂತ ವಿಮಾನ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ಬಸ್ಸು ನಿಲ್ದಾಣಗಳು ಮತ್ತು ಪೂಜಾ ಸ್ಥಳಗಳಲ್ಲಿ ಇದೀಗ ಭದ್ರತೆಯನ್ನು ಹೆಚ್ಚಿಸಲಾಯಿತು. ಭವಿಷ್ಯದಲ್ಲಿ ಯಾವುದೇ ನುಸುಳುವಿಕೆಯನ್ನು ತಡೆಗಟ್ಟಲು ದಕ್ಷಿಣ ಭಾರತದಾದ್ಯಂತ, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ಹೇಳಿದವು. ಪಾಕಿಸ್ತಾನದಲ್ಲಿ ಕುದಿಯುತ್ತಿರುವ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಭಾರತದ ದಕ್ಷಿಣ ಭಾಗದಲ್ಲಿ ಸಂಭಾವ್ಯ ಭಯೋತ್ಪಾದಕ ದಾಳಿಗಳ ಬಗೆಗಿನ ಸುಳಿವು ನಮಗೆ ಲಭಿಸಿದೆ ಎಂದು ಸೇನೆ ಹೇಳಿತು. ಮಾಸಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆಯ ಸಭೆಗಿಂತ ಮುಂಚಿತವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಪುನಾರಂಭಿಸಲು ತನ್ನ ಪಾಕಿಸ್ತಾನಿ ಬೆಂಬಲಿಗರಿಗೆ ಜೈಶ್ --ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮೌಲಾನ ಮಸೂದ್ ಅಜರ್ ಕರೆ ಕೊಟ್ಟಿರುವ ಬಗ್ಗೆ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆ ಅಧಿಕಾರಿಗಳು ತಿಳಿಸಿದ ಒಂದು ದಿನದ ಬಳಿಕ ಜನರಲ್ ಸೈನಿ ಅವರಿಂದ ಎಚ್ಚರಿಕೆ ಬಂದಿತು. ಫೆಬ್ರುವರಿ ೧೪ರಂದು ಕಾಶ್ಮೀರದ ಪುಲ್ವಾಮದಲ್ಲಿ ಆತ್ಮಾಹತ್ಯಾ ದಾಳಿ ನಡೆಸಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯೋಧರನ್ನು ಬಲಿಪಡೆದ ಬಳಿಕ ಭಾರತ-ಪಾಕ್ ಗಡಿಯುದ್ದಕ್ಕೂ ಭಾರತೀಯ ಸೇನೆಯನ್ನು ಜಾಗೃತ ಸ್ಥಿತಿಯಲ್ಲಿ ಇರಿಸಲಾಗಿತ್ತು. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಿಂದ ಇತ್ತೀಚಿನ ದಿನಗಳಲ್ಲಿ ಕದನ ವಿರಾಮ ಉಲ್ಲಂಘನೆಯ ಹಲವಾರು ಘಟನೆಗಳು ಘಟಿಸಿದ ಹಿನ್ನೆಲೆಯಲ್ಲಿ ಸೇನೆಯು ತನ್ನ ಪಹರೆಯನ್ನು ಹೆಚ್ಚಿಸಿತ್ತು.ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿದ ಭಾರತ ಸರ್ಕಾರದ ಕ್ರಮವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡುವ ಸಲುವಾಗಿ ಪಾಕಿಸ್ತಾನವು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಧ್ಯತೆಗಳು ಇವೆ ಎಂಉ ಭಾರತದ ಸೇನಾ ದಂಡ ನಾಯಕ ಜನರಲ್ ಬಿಪಿನ್ ರಾವತ್ ಕಳೆದ ತಿಂಗಳಲ್ಲೇ ಎಚ್ಚರಿಸಿದ್ದರು.


2019: ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ವಿರುದ್ಧದ ೧೯೮೪ರ  ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ  ಮರುಜೀವ ನೀಡುವ ಪ್ರಸ್ತಾಪಕ್ಕೆ ಕೇಂದ್ರ ಗೃಹ ಸಚಿವಾಲಯವು 2019 ಸೆಪ್ಟೆಂಬರ್ 09ರ ಸೋಮವಾರ ಒಪ್ಪಿಗೆ ನೀಡಿತು. ಇದರೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಗೆ ಸಂಕಷ್ಟ ಎದುರಾಯಿತು.  ವಿಶೇಷ ತನಿಖಾ ತಂಡವು ಕಮಲ್ನಾಥ್ ವಿರುದ್ಧದ ಆಪಾದನೆಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ದೆಹಲಿ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಮನಜಿಂದರ್ ಸಿಂಗ್ ಸಿರ್ಸಾ ಅವರು ಹೇಳಿರುವುದಾಗಿ ಪತ್ರಿಕಾ ವರದಿಯೊಂದು ತಿಳಿಸಿತು.  ಕಮಲನಾಥ್ ಮತ್ತಿತರರ ಹೆಸರುಗಳಿರುವ ಎಫ್ಐಆರ್ ೬೦೧/೮೪ ಇದಕ್ಕೆ ಮರುಜೀವ ನೀಡಲಾಗಿದೆಎಂಬುದಾಗಿ ಸಿರ್ಸಾ ಹೇಳಿದ್ದನ್ನು ಪತ್ರಿಕಾ ವರದಿ ಉಲ್ಲೇಖಿಸಿತು. ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಕಮಲ್ನಾಥ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ವಜಾಮಾಡಬೇಕು ಎಂದು ದೆಹಲಿ ಗುರುದ್ವಾರ ಪ್ರಬಂಧಕ ಸಮಿತಿ ಆಗ್ರಹಿಸಿತು. ಕಮಲ್ನಾಥ್ ಅವರನ್ನು  ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸದಿದ್ದರೆ ಅದು ಅವರ ಸಿಖ್ ವಿರೋಧಿ ಮುಖವನ್ನು ಪ್ರತಿಫಲಿಸುತ್ತದೆ ಎಂದು ಸಿರ್ಸಾ ಹೇಳಿದರು. ಕೇಂದ್ರ ಗೃಹ ಸಚಿವಾಲಯವು ರಚಿಸಿದ್ದ ವಿಶೇಷ ತನಿಖಾ ತಂಡವು (ಎಸ್ಐಟಿ), ಸಿಖ್ ವಿರೋಧಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ  ಸಿಖ್ ವಿರೋಧಿ ದಂಗೆ ಪ್ರಕರಣಗಳಿಗೆ ಮರುಜೀವ ನೀಡಲು ನಿರ್ಧರಿಸಿದೆ. ಎಲ್ಲ ಪ್ರಕರಣಗಳಲ್ಲೂ ಆರೋಪಿಗಳನ್ನು ಖುಲಾಸೆ ಮಾಡಲಾಗಿತ್ತು ಅಥವಾ ತನಿಖೆಯನ್ನು ಮುಕ್ತಾಯಗೊಳಿಸಲಾಗಿತ್ತು ಎಂದು ಅಧಿಕೃತ ಪ್ರಕಟಣೆ ತಿಳಿಸಿತು.


No comments:

Post a Comment