Thursday, September 19, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 19

2019: ನಾಸಿಕ್: ಜನರು ಭಾರತದ ನ್ಯಾಯಾಂಗದ ಮೇಲೆ ನಂಬಿಕೆ ಇಡಬೇಕು ಮತ್ತು ರಾಮ ಮಂದಿರಕ್ಕೆ ಸಂಬಂಧಿಸಿದಂತೆಅಸಂಬದ್ಧಮಾತುಗಳಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದ ಬೃಹತ್ ಸಭೆಯಲ್ಲಿ 2019 ಸೆಪ್ಟೆಂಬರ್  19ರ ಗುರುವಾರ ಕಿವಿಮಾತು ಹೇಳಿದರು.ಪ್ರಧಾನಿಯವರು ಯಾರನ್ನು ಉದ್ದೇಶಿಸಿ ಮಾತು ಹೇಳಿದರು ಎಂಬುದು ತತ್ಕ್ಷಣಕ್ಕೆ ಸ್ಪಷ್ಟವಾಗಲಿಲ್ಲ. ೭೦ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿ - ಬಾಬರಿ ಮಸೀದಿ ಭೂ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಪ್ರತಿನಿದಿನವೂ ವಿಚಾರಣೆ ನಡೆಸುತ್ತಿರುವಾಗ ವ್ಯಕ್ತಿಗಳುಅಡಚಣೆಗಳನ್ನು ಏಕೆ ಸೃಷ್ಟಿಸಬೇಕುಎಂದು ಪ್ರಧಾನಿ ಅಚ್ಚರಿ ವ್ಯಕ್ತ ಪಡಿಸಿದರು.’ಬಯಾನ್ ಬಹಾದುರ್ಎಲ್ಲಿಂದ ಬಂದರು ಎಂದು ನನಗೆ ಅಚ್ಚರಿಯಾಗುತ್ತಿದೆ? ಇವರು ಏಕೆ ಅಡಚಣೆಗಳನ್ನು ಸೃಷ್ಟಿಸುತ್ತಿದ್ದಾರೆ? ನಾವು ಸುಪ್ರೀಂಕೋರ್ಟ್, ಭಾರತದ ಸಂವಿದಾನ ಮತ್ತು ನ್ಯಾಯಾಂಗದ ಮೇಲೆ ವಿಶ್ವಾಸ ಇಡಬೇಕು. ದೇವರ ಮೇಲೆ ಆಣೆಇಟ್ಟು ಜನರಿಗೆ ನಾನು ಮನವಿ ಮಾಡುತ್ತಿದ್ದೇನೆ- ಭಾರತದ ನ್ಯಾಯಾಂಗದ ಮೇಲೆ ವಿಶ್ವಾಸ ಇಡಿಎಂದು ಪ್ರಧಾನಿ ಹೇಳಿದರು.’ಸುಪ್ರೀಂಕೋರ್ಟ್ ಮತ್ತು ಅಲ್ಲಿ ತಮ್ಮ ವಾದಗಳನ್ನು ಮಂಡಿಸುತ್ತಿರುವ ಎಲ್ಲ ಜನರ ಮೇಲೂ ಗೌರವ ತೋರಿಸಿಎಂದು ಪ್ರಧಾನಿ ಜನತೆಯನ್ನು ಒತ್ತಾಯಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ನಾಸಿಕ್ (ಮಹಾರಾಷ್ಟ್ರ): ಕಾಶ್ಮೀರಿಗಳ ದಶಕಗಳ ದುರವಸ್ಥೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬುದಾಗಿ 2019 ಸೆಪ್ಟೆಂಬರ್ 19ರ ಗುರುವಾರ ಇಲ್ಲಿ ದೂಷಿಸಿದ ಪ್ರಧಾನಿ ನರೇಂದ್ರ ಮೋದಿಕಣಿವೆಯಲ್ಲಿ ನೂತನ ಸ್ವರ್ಗವನ್ನು ಸೃಷ್ಟಿಸಲು ಯತ್ನಗಳನ್ನು ಮಾಡುವಂತೆಕರೆ ನೀಡಿದರು.ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯ ಪ್ರಚಾರ ಅಭಿಯಾನವನ್ನು ಆರಂಭಿಸಿದ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಯಿಂದ ಪ್ರಚೋದಿಸಲಾಗುತ್ತಿರುವ ಹಿಂಸಾಚಾರವನ್ನು ತಡೆಯಲು ಸಾಕಷ್ಟು ಯತ್ನಗಳನ್ನು ಮಾಡಲಾಗುತ್ತಿದೆ.  ನಾವು ನೂತನ ಸ್ವರ್ಗವನ್ನು (ಕಾಶ್ಮೀರದಲ್ಲಿ) ಸೃಷ್ಟಿಸಬೇಕಾಗಿದೆ, ಪ್ರತಿಯೊಬ್ಬ ಕಾಶ್ಮೀರಿಯನ್ನೂ ಪ್ರೀತಿಯಿಂದ ತಬ್ಬಿಕೊಂಡು ಸಂತೈಸಬೇಕಾಗಿದೆಎಂದು ಹೇಳಿದರು.೩೭೦ನೇ ವಿಧಿಯನ್ನು ರದ್ದು ಪಡಿಸುವ ನಿರ್ಧಾರವು ಭಾರತದ ಏಕತೆಗಾಗಿ ಕೈಗೊಂಡ ನಿರ್ಧಾರ. ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಜನರ ಆಶಯಗಳುಮತ್ತು ಕನಸುಗಳನ್ನು ಈಡೇರಿಸುವ ಮಾಧ್ಯಮವಾಗಲಿದೆ ಎಂದು ಪ್ರಧಾನಿ ನುಡಿದರು.’ಅಶಾಂತಿ, ಅಪನಂಬಿಕೆ ಮೂಡಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಯಿಂದ ತೀವ್ರ ಯತ್ನಗಳು ನಡೆಯುತ್ತಿವೆಎಂದು ಅವರು ಹೇಳಿದರು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ವಾಯು ಸಿಬ್ಬಂದಿಯ ಉಪ ಮುಖ್ಯಸ್ಥ ಏರ್ ಮಾರ್ಶಲ್ ಆರ್ಕೆಎಸ್ ಭದೌರಿಯಾ ಅವರು ಭಾರತದ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯವು 2019 ಸೆಪ್ಟೆಂಬರ್ 19ರ ಗುರುವಾರ ಪ್ರಕಟಿಸಿತು.ಏರ್ ಮಾರ್ಶಲ್ ಆರ್ಕೆಎಸ್ ಭದೌರಿಯಾ ಅವರು ಫ್ರಾನ್ಸ್ ಜೊತೆಗೆ ರಫೇಲ್ ವಿಮಾನ ವಹಿವಾಟಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದ ತಂಡದ ನೇತೃತ್ವ ವಹಿಸಿದ್ದರು. ಭದೌರಿಯಾ ಅವರು ಸೆಪ್ಟೆಂಬರ್ ೩೦ರಂದು ನಿವೃತ್ತರಾಗಲಿರುವ ಏರ್ ಚೀಫ್ ಮಾರ್ಶಲ್ ಬಿಎಸ್ ಧನೋವಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು.ಭದೌರಿಯಾ ನೇಮಕಾತಿ ವಿಚಾರವನ್ನು ರಕ್ಷಣ ಸಚಿವಾಲಯದ ಮುಖ್ಯ ವಕ್ತಾರರು ಟ್ವೀಟ್ ಮಾಡಿದರು.೧೯೮೦ರಲ್ಲಿ ವಾಯುಪಡೆಯ ಸಮರತಂಡಕ್ಕೆ ಸೇರ್ಪಡೆಯಾಗಿದ್ದ ಭದೌರಿಯಾ ಅವರು ತಮ್ಮ ಅರ್ಹತೆಗಾಗಿ ಪ್ರತಿಷ್ಠಿತಗೌರವ ಖಡ್ಗ’ (ಸ್ವೋರ್ಡ್ ಆಫ್ ಆನರ್) ಪುರಸ್ಕಾರ ಪಡೆದಿದ್ದರು.

2019: ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ರೌಸ್ ಅವೆನ್ಯೂ ಸಮುಚ್ಚಯದಲ್ಲಿನ ವಿಶೇಷ ನ್ಯಾಯಾಲಯವು 2019 ಸೆಪ್ಟೆಂಬರ್ 19ರ ಗುರುವಾರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ  ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು 2019 ಸೆಪ್ಟೆಂಬರ್ ೨೧ರ ಶನಿವಾರ ಬೆಳಗ್ಗೆ ೧೧ ಗಂಟೆಗೆ ಮುಂದೂಡಿತು.ಹೀಗಾಗಿ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ವೈದ್ಯರು ಫಿಟ್ ನಸ್  ಸರ್ಟಿಫಿಕೇಟ್ ಕೊಟ್ಟ ಹಿನ್ನೆಲೆಯಲ್ಲಿ  ತಿಹಾರ್ ಸೆರೆಮನೆಗೆ ಸ್ಥಳಾಂತರಗೊಂಡಿದ್ದ ಶಿವಕುಮಾರ್ ಅವರು ಅಲ್ಲಿಯೇ ಇನ್ನೆರಡು ದಿನಗಳನ್ನೂ ಕಳೆಯುವಂತಾಯಿತು.ರಕ್ತದೊತ್ತಡ ಸಹಜ ಸ್ಥಿತಿಗೆ ಬಂದ ಕುರಿತು ಆರ್ ಎಂಎಲ್ ವೈದ್ಯರು ವರದಿ ನೀಡಿದ್ದ ಹಿನ್ನೆಲೆಯಲ್ಲಿ ಈದಿನ ಬೆಳಗ್ಗೆ ಪೊಲೀಸರು ಡಿಕೆ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಿದ್ದರು.ಜಾರಿ ನಿರ್ದೇಶನಾಲಯದ ಪರ ವಕೀಲರಾದ ಕೆಎಂ ನಟರಾಜ್ ಅವರು ಗೈರು ಹಾಜರಾಗಿದ್ದ ಕಾರಣ ಬುಧವಾರ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯನ್ನು ಈದಿನಕ್ಕೆ ಮುಂದೂಡಲಾಗಿತ್ತು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2019 ಸೆಪ್ಟೆಂಬರ್ 19ರ ಗುರುವಾರ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದತೇಜಸ್ಯುದ್ಧ ವಿಮಾನದ ಮೂಲಕ ಹಾರಾಟ ನಡೆಸುವುದರೊಂದಿಗೆ ದೇಶೀ ನಿರ್ಮಿತ ಹಗುರ ಯುದ್ಧ ವಿಮಾನದಲ್ಲಿ (ಎಲ್ ಸಿಎ) ಹಾರಾಟ ನಡೆಸಿದ ದೇಶದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಹಸಿರು ಬಣ್ಣದ ಜಿ  ಸ್ಯೂಟ್ ಧರಿಸಿದ ಸಚಿವರು ಕೈ ಬೀಸುತ್ತಾ ವಿಮಾನ ಏರಿ ಪೈಲಟ್ ಹಿಂಭಾಗದ ಆಸನದಲ್ಲಿ ಸ್ವತಃ ಬಕಲ್ ಬಿಗಿದುಕೊಂಡು ಆಸೀನರಾದರು. ಎರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ (ಎಡಿಎ) ರಾಷ್ಟ್ರೀಯ ಹಾರಾಟ ಪರೀಕ್ಷಾ ಕೇಂದ್ರದ ಯೋಜನಾ ನಿರ್ದೇಶಕ ಏರ್ ವೈಸ್ ಮಾರ್ಶಲ್ ಎನ್. ತಿವಾರಿ ಸಚಿವರ ಜೊತೆಗಿದ್ದರು.ದೇಶೀಯವಾಗಿ ಅಭಿವೃದ್ಧಿ ಪಡಿಸಿದ ತೇಜಸ್ ಯುದ್ಧ ವಿಮಾನ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ನೈತಿಕ ಸ್ಥೈರ್ಯಕ್ಕೆ ಒತ್ತು ನೀಡುವ ಸಲುವಾಗಿ ಸಚಿವರು ತೇಜಸ್ ಯುದ್ಧ ವಿಮಾನ ಏರಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹಿಂದಿನ ದಿನ ತಿಳಿಸಿದ್ದರು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಸೆಪ್ಟೆಂಬರ್ ೫ರಿಂದ ತಿಹಾರ್ ಸೆರೆಮನೆಯಲ್ಲಿ ನ್ಯಾಯಾಂಗ ಬಂಧನ ಎದುರಿಸುತ್ತಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಸೆರೆಮನೆಯಲ್ಲಿ ತಮಗೆ ಕುರ್ಚಿ ಮತ್ತು ದಿಂಬನ್ನು ಕೂಡಾ ಒದಗಿಸಲಾಗಿಲ್ಲ ಎಂಬುದಾಗಿ 2019 ಸೆಪ್ಟೆಂಬರ್ 19ರ ಗುರುವಾರ ದೆಹಲಿ ನ್ಯಾಯಾಲಯದಲ್ಲಿ ತಮ್ಮ ಅಳಲು ತೋಡಿಕೊಂಡರು.ಇದ್ದ ಕುರ್ಚಿ ಹಾಗೂ ದಿಂಬನ್ನು ಹಿಂತೆಗೆದುಕೊಂಡ ಪರಿಣಾಮವಾಗಿ ೭೪ರ ಹರೆಯದ ಚಿದಂಬರಂ ಅವರಿಗೆ ಬೆನ್ನು ನೋವು ಶುರುವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಚಿದಂಬರಂ ಪರ ವಕೀಲರು ಅವರ ವೈದ್ಯಕೀಯ ತಪಾಸಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದರು. ನ್ಯಾಯಾಲಯವು ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೩ರವರೆಗೆ ವಿಸ್ತರಿಸಿತು.’ನನ್ನ ಕೊಠಡಿಯ ಹೊರಗೆ ಕುರ್ಚಿಗಳು ಇದ್ದವು. ಹಗಲಿನ ಹೊತ್ತು ನಾನು ಅವುಗಳಲ್ಲಿ ಕುಳಿತುಕೊಳ್ಳುತ್ತಿದ್ದೆ. ಈಗ ಅವುಗಳನ್ನೂ ಅಲ್ಲಿಂದ ತೆಗೆಯಲಾಗಿದೆ. ನಾನು ಅವುಗಳನ್ನು ಬಳಸುತ್ತಿದ್ದೆನೆಂಬ ಕಾರಣಕ್ಕೆ ಅವುಗಳನ್ನು ಅವರು ಅಲ್ಲಿಂದ ತೆಗೆದಿದ್ದಾರೆ. ಈಗ ಅಲ್ಲಿ ವಾರ್ಡನ್ಗೆ ಕೂಡಾ ಕುರ್ಚಿ ಇಲ್ಲಎಂದು ಚಿದಂಬರಂ ಹೇಳಿದರು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: 20ನೇ ಸಾಲಿನ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್; ‘ಐಫಾ’) ಪ್ರಶಸ್ತಿಗಳನ್ನು 2019 ಸೆಪ್ಟೆಂಬರ್ 19ರ ಗುರುವಾರ ನೀಡಲಾಗಿದ್ದು ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು..ನಟ ವಿಕ್ಕಿ ಕೌಶಲ್‌ ಹಾಗು ಆಲಿಯಾ ಭಟ್ ಅಭಿನಯದ ರಾಝಿ ಸಿನಿಮಾ ಉತ್ತಮ ಚಿತ್ರ ಪಶಸ್ತಿ ಪಡೆದುಕೊಂಡಿತು. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಾಲಿವುಡ್ ನಟ ಜಗದೀಪ್ ಜೆಫ್ರಿ ಅವರಿಗೆ ಜೀವಮಾನ ಶ್ರೇಷ್ಠ ಪಶಸ್ತಿ ನೀಡಿ ಗೌರವಿಸಲಾಯಿತು. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಾಲಿವುಡ್ ಚಿತ್ರರಂಗದ ಸಾಧಕರಿಗೆ ಐಫಾ ಪ್ರಶಸ್ತಿಗಳನ್ನು ನೀಡ ಗೌರವಿಸಲಾಯಿತು. ಆಲಿಯಾ ಭಟ್, ರಣವೀರ್ ಸಿಂಗ್, ಅದಿತಿ ರಾವ್ ಹೈದರಿ, ಸಾರಾ ಆಲಿ ಖಾನ್ ಐಫಾ ಪ್ರಶಸ್ತಿಗಳನ್ನು ಪಡೆದ ಪ್ರಮುಖರು. ಸಮಾರಂಭದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್, ಮಾಧುರಿ ದೀಕ್ಷಿತ್, ಪ್ರೀತಿ ಜಿಂಟಾ, ರಿತೇಶ್ ದೇಶ್ಮುಖ್ ಸೇರಿದಂತೆ ಹಲವರು ಭಾಗವಹಿಸಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ಬೆಂಗಳೂರು: ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ `ಭಕ್ತಧ್ರುವ’ (1934)ದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಎಸ್. ಕೆ. ಪದ್ಮಾದೇವಿ 2019 ಸೆಪ್ಟೆಂಬರ್ 19ರ ಗುರುವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.‘ಸಂಸಾರನೌಕೆ’ (1936) ಪದ್ಮಾದೇವಿಗೆ ಹೆಸರು ತಂದು ಕೊಟ್ಟ ಚಿತ್ರ. ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದ್ದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದು ವಿಶೇಷ.‘ವಸಂತಸೇನ’, ‘ಭಕ್ತ ಸುಧಾಮ’, ‘ಜಾತಕ ಫಲಚಿತ್ರಗಳಲ್ಲಿಯೂ ನಟಿಸಿದರು. ‘ಭಕ್ತಸುಧಾಮದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು. ಎರಡು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)







No comments:

Post a Comment