Thursday, September 5, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 05

2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶಾಲಯವು (ಇಡಿ) ಬಂಧಿಸದಂತೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಸಿಬಿಐ ವಿಶೇಷ ನ್ಯಾಯಾಲಯವು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಸೆಪ್ಟೆಂಬರ್ ೧೯ರವರೆಗೆ ತಿಹಾರ್ ಸೆರೆಮನೆಗೆ ಕಳುಹಿಸುವಂತೆ ಆಜ್ಞಾಪಿಸಿತು. ಇದರೊಂದಿಗೆ ಚಿದಂಬರಂ ಅವರು ಒಂದೇ ದಿನ ಎರಡೆರಡು ಹಿನ್ನಡೆ ಅನುಭವಿಸುವಂತಾಯಿತು. ಮಧ್ಯೆ  ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಏರ್ ಸೆಲ್ ಮ್ಯಾಕ್ಸಿಸ್ ಟೆಲಿಕಾಂ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಷರತ್ತಿನ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.  ೭೪ರ ಹರೆಯದ ಚಿದಂಬರಂ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು ಎಂದು ಸಿಬಿಐ ಮಂಡಿಸಿದ ವಾದವನ್ನು ಅಂಗೀಕರಿಸಿದ ವಿಶೇಷ ಸಿಬಿಐ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ ೧೯ರವರೆಗೆ ಚಿದಂಬರಂ ಅವರನ್ನು ತಿಹಾರ್ ಸೆರೆಮನೆಯಲ್ಲಿ ಇರಿಸುವಂತೆ ಆಜ್ಞಾಪಿಸಿತು. ಚಿದಂಬರಂ ಅವರಿಗೆ ಪ್ರತ್ಯೇಕ ಸೆಲ್, ಒಂದು ಮಂಚ ಮತ್ತು ಪಾಶ್ಚಾತ್ಯ ಶೌಚಾಲಯ ಹಾಗೂ ಔಷಧಗಳನ್ನು ಒದಗಿಸುವಂತೆ ಹಿರಿಯ ಕಾಂಗ್ರೆಸ್ ನಾಯಕನ ಪರ ಹಾಜರಾಗಿದ್ದ ವಕೀಲ ಹಾಗೂ ಪಕ್ಷ ಸಹೋದ್ಯೋಗಿಯಾದ ಕಪಿಲ್ ಸಿಬಲ್ ಅವರು ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ಮುನ್ನ ಚಿದಂಬರಂ ಪರವಾಗಿ ಪ್ರಬಲ ವಾದ ಮಂಡನೆ ಮಾಡಿದ್ದ ಸಿಬಲ್ ಅವರು ನ್ಯಾಯಾಂಗ ಬಂಧನ ಅಥವಾ ತಿಹಾರ್ ಸೆರೆಮನೆವಾಸಕ್ಕೆ ಬದಲಾಗಿ ಜಾರಿ ನಿರ್ದೇಶನಾಲಯದ ಮುಂದೆ ಶರಣಾಗಲು ಚಿದಂಬರಂ ಅವರು ಸಿದ್ಧರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪ್ರಶ್ನೆಗಳನ್ನು ಎದುರಿಸುವ ಸಲುವಾಗಿ ತಾವು ಜಾರಿ ನಿರ್ದೇಶನಾಲಯದ ಮುಂದೆ ಶರಣಾಗಲು ಸಿದ್ಧ. ಆದ್ದರಿಂದ ನ್ಯಾಯಾಂಗ ವಶಕ್ಕೆ ಒಪ್ಪಿಸುವ ಬದಲು ಅಥವಾ ತಿಹಾರ್ ಸೆರೆಮನೆಗೆ ಕಳುಹಿಸುವ ಬದಲು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಬೇಕು ಎಂದು ಸಿಬಲ್ ಅವರು ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.  ರಾಷ್ಟ್ರದ ವಿತ್ತ ಹಾಗೂ ಗೃಹ ಸಚಿವರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕನನ್ನು  ನ್ಯಾಯಾಂಗ ವಶಕ್ಕೆ ಒಪ್ಪಿಸಲು ಅವರನ್ನು ಅವಮಾನ ಮಾಡುವುದರ ಹೊರತಾಗಿ ಸಿಬಿಐಗೆ ಬೇರೆ ಯಾವ ಕಾರಣವೂ ಇಲ್ಲ ಎಂದೂ ಸಿಬಲ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಚಿದಂಬರಂ ಅವರನ್ನು ಸಿಬಿಐ ಆಗಸ್ಟ್ ೨೧ರಂದು ಬಂಧಿಸಿದ್ದು ಅವರು ಅದರ ವಶದಲ್ಲಿ ೧೫ ದಿನಗಳನ್ನು ಪೂರೈಸಿದ್ದಾರೆ. ಆರೋಪಿಯೊಬ್ಬರ ಪೊಲೀಸ್ ಕಸ್ಟಡಿ ಮುಗಿದ ಬಳಿಕ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು ಎಂಬ ನಿಯಮ ಕಾನೂನಿನಲ್ಲಿ  ಇಲ್ಲ ಎಂದು ಸಿಬಲ್ ಅವರು ವಾದಿಸಿದ್ದರು. ಆದರೆ, ’ಆರೋಪಿಯು ಅತ್ಯಂತ ಬಲಾಢ್ಯ ಹಾಗೂ ಪ್ರಭಾವಶಾಲಿ ವ್ಯಕ್ತಿ, ಆದ್ದರಿಂದ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು ಎಂದು ಸಿಬಿಐ ವಾದಿಸಿತು. ಸಾಕ್ಷ್ಯದಲ್ಲಿ ಕೈಯಾಡಿಸಿದ ಅಥವಾ ಸಾಕ್ಷ್ಯದ ಮೇಲೆ ಪ್ರಭಾವ  ಬೀರಿದ ಯಾವುದೇ ಪ್ರಕರಣವೂ ಇಲ್ಲ ಎಂದು ಸಿಬಲ್ ಪ್ರತಿವಾದ ಮಂಡಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್  ತುಷಾರ ಮೆಹ್ತ ಅವರು ಸುಪ್ರೀಂಕೋರ್ಟ್ ಸಾಕ್ಷ್ಯದಲ್ಲಿ ಕೈಯಾಡಿಸುವ ಸಾಧ್ಯತೆ ಇದೆ ಎಂಬ ನೆಲೆಯಲ್ಲಿ ಚಿದಂಬರಂ ಅವರಿಗೆ ಜಾಮೀನು ನೀಡಲು ಈದಿನ ಮುಂಜಾನೆ ನಿರಾಕರಿಸಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಎರಡು ಉನ್ನತ ನ್ಯಾಯಾಲಯಗಳು ಈಗಾಗಲೇ ಚಿದಂಬರಂ ಅವರಿಗೆ ನಿರಾಳತೆ ಒದಗಿಸಲು ನಿರಾಕರಿಸಿವೆ ಎಂದೂ ನ್ಯಾಯಾಧೀಶರಿಗೆ ತಿಳಿಸಿದರು. ಐಎನ್ ಎಕ್ಸ್ ಮೀಡಿಯಾ ಪ್ರಕರಣವು, ೨೦೦೭ರಲ್ಲಿ ೩೦೫ ಕೋಟಿ ರೂಪಾಯಿ ವಿದೇಶೀ ಹೂಡಿಕೆಯನ್ನು ಮಾಧ್ಯಮ ಸಂಸ್ಥೆಗೆ ದೊರಕಿಸಿ ಕೊಡುವಲ್ಲಿ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯಿಂದ (ಎಫ್ ಐಪಿಬಿ) ಅನುಮತಿಯಲ್ಲಿ ಅಕ್ರಮ ನಡೆದಿದೆ ಎಂದು ಆಪಾದಿಸಲಾದ ಪ್ರಕರಣವಾಗಿದೆ. ಆಗ ಚಿದಂಬರಂಅವರು ಕೇಂದ್ರ ವಿತ್ತ ಸಚಿವರಾಗಿದ್ದರು. ವಿದೇಶೀ ಹಣ ಹೂಡಿಕೆಗೆ ಅನುಮತಿ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ಸಿಬಿಐ ೨೦೧೭ರ ಮೇ ೧೫ರಂದು ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿತ್ತು. ಜಾರಿ ನಿರ್ದೇಶನಾಲಯವು (ಇಡಿ) ಬಂಧಿಸಿದ್ದರೆ ಚಿದಂಬರಂ ಅವರು ಕೇಂದ್ರ ದೆಹಲಿಯ ತುಘ್ಲಕ್ ರಸ್ತೆ ಪೊಲೀಸ್ ಠಾಣೆ ಸೆರೆಮನೆಗೆ ಹೋಗುತ್ತಿದ್ದರು. ಕಳೆದ ೧೫ ದಿನಗಳಿಂದ ಸಿಬಿಐ ವಶದಲ್ಲಿದ್ದ ಚಿದಂಬರಂ ಅವರನ್ನು ತನಿಖಾ ಸಂಸ್ಥೆಯ ಕಟ್ಟಡದ ನೆಲಮಹಡಿಯಲ್ಲಿನ ಕೊಠಡಿಯೊಂದರಲ್ಲಿ ಇರಿಸಲಾಗಿತ್ತು. ಸಿಬಿಐ ತನಿಖೆ ನಡೆಸುತ್ತಿರುವ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಹಣ ವರ್ಗಾವಣೆ ನಡೆಸಿದ್ದಂತೆ ಸಂಬಂಧಿಸಿದ ಆರೋಪ ಚಿದಂಬರಂ ಅವರ ಮೇಲಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿತು. ೨೦೦೭ರಲ್ಲಿ ದೇಶದ ವಿತ್ತ ಸಚಿವರಾಗಿದ್ದಾಗ ಚಿದಂಬರಂ ಅವರು ತಮ್ಮ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರ ಪ್ರಚೋದನೆ ಮೇರೆಗೆ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ದೊಡ್ಡ ಮೊತ್ತದ ವಿದೇಶೀ ಹಣ ಹರಿದು ಬರಲು ವ್ಯವಸ್ಥೆ ಮಾಡಿದ್ದರು ಎಂದು ಸಿಬಿಐ ಆಪಾದಿಸಿತ್ತು. ಐಎನ್ಎಕ್ಸ್ ಮೀಡಿಯಾ ಸಹ ಸಂಸ್ಥಾಪಕರಾದ ಪೀಟರ್ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿ ಅವರು ನೀಡಿದ್ದ ಹೇಳಿಕೆಯನ್ನು ಆಧರಿಸಿ ಚಿದಂಬರಂ ಮತ್ತು ಅವರ ಪುತ್ರನ ವಿರುದ್ಧ ಸಿಬಿಐ ಮತ್ತು ಇಡಿ ಆಪಾದನೆಗಳನ್ನು ಮಾಡಿವೆ. ಪೀಟರ್ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿ ಪ್ರಸ್ತುತ ಇಂದ್ರಾಣಿಯ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯಲ್ಲಿ ಸೆರೆವಾಸದಲ್ಲಿದ್ದಾರೆ. ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶೀ ಹಣ ಪಡೆಯುವಲ್ಲಿ ವಹಿಸಿದ ಪಾತ್ರಕ್ಕಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ  ಕಾರ್ತಿ ಚಿದಂಬರಂ ಅವರು ೨೦೧೮ರಲ್ಲಿ ಬಂಧಿತರಾಗಿ ೨೩ ದಿನಗಳ ನಂತರ ಬಿಡುಗಡೆಯಾಗಿದ್ದರು.  ಚಿದಂಬರಂ ಅವರನ್ನು ತಿಹಾರ್ ಸೆರೆಮನೆಗೆ ಕಳುಹಿಸಬಾರದು ಎಂಬುದಾಗಿ ಅವರ ವಕೀಲರು ಕೋರಿದ ಬಳಿಕ ಸುಪ್ರೀಂಕೋರ್ಟ್ ಮಾಜಿ ಕೇಂದ್ರ ಸಚಿವರ ಸಿಬಿಐ ಕಸ್ಟಡಿಯನ್ನು ಎರಡು ದಿನಗಳ ಅವಧಿಗೆ ವಿಸ್ತರಿಸಿತ್ತು.  ಇದಕ್ಕೆ ಮುನ್ನ ಈದಿನ ಬೆಳಗ್ಗೆ ಸುಪ್ರೀಂಕೋರ್ಟ್ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯವು ಬಂಧಿಸದಂತೆ ರಕ್ಷಣೆ ಒದಗಿಸಲು ನಿರಾಕರಿಸಿತ್ತು.’ಆರ್ಥಿಕ ಅಪರಾಧಗಳಲ್ಲಿ ನಿರೀಕ್ಷಣಾ ಜಾಮೀನನ್ನು ಅತ್ಯಂತ ಅಪರೂಪಕ್ಕೆ ಚಲಾಯಿಸಲಾಗುತ್ತದೆ. ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದಾಗ, ಇದು ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಯೋಗ್ಯವಾದ ಪ್ರಕರಣವಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸಿಬಿಐ ವಶದಲ್ಲಿ ೧೫ ದಿನಗಳನ್ನು ಕಳೆದಿರುವ ಚಿದಂಬರಂ ಅವರಿಗೆ ಇದು ಬಹುದೊಡ್ಡ ಹೊಡೆತವಾಗಿತ್ತು.  ತನಿಖಾ ಸಂಸ್ಥೆಗೆ ತನ್ನ ತನಿಖೆಯನ್ನು ನಡೆಸಲು ಸಾಕಷ್ಟು ಸ್ವಾತಂತ್ರ್ಯ ನೀಡಬೇಕು ಮತ್ತು ಹಂತದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದರಿಂದ ತನಿಖೆಗೆ ಧಕ್ಕೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಚಿದಂಬರಂ ಅವರು ಬಯಸಿದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ಸಲಹೆ ಮಾಡಿತು. ಇದೇ ವೇಳೆ, ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸುವಾಗ ತೀರ್ಪು ಬರೆದ ರೀತಿಯ ಬಗ್ಗೆಯೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು. ದೆಹಲಿ ಹೈಕೋರ್ಟ್ ಪೀಠವು ಚಿದಂಬರಂ ಅರ್ಜಿ ವಜಾಗೊಳಿಸುವಾಗ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸಿನ ಅಂಶಗಳನ್ನೇ ಯಥಾವತ್ತಾಗಿ ನಕಲು ಮಾಡಿ ತನ್ನ ತೀರ್ಪಿನಲ್ಲಿ ಸೇರಿಸಿತ್ತು. ವಿಚಾರವನ್ನು ಚಿದಂಬರಂ ಪರ ವಕೀಲರು ಸುಪ್ರೀಂ ಕೋರ್ಟಿನ ವಿಚಾರಣೆ ವೇಳೆ ಪ್ರಸ್ತಾಪ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮಧ್ಯೆ, ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ಅವರು ,೫೦೦ ಕೋಟಿ ರೂಪಾಯಿ ಮೊತ್ತದ ಏರ್ ಸೆಲ್ ಮ್ಯಾಕ್ಸಿಸ್ ವ್ಯವಹಾರಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಬಂಧನಪೂರ್ವ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು. ೨೦೦೬ರಲ್ಲಿ ಲಂಚಕ್ಕೆ ಪ್ರತಿಯಾಗಿ ಏರ್ ಸೆಲ್ ಮ್ಯಾಕ್ಸಿಸ್ ಟೆಲಿಕಾಂ ಕಂಪೆನಿಗೆ ೮೦೦ ಮಿಲಿಯನ್ (೮೦ ಕೋಟಿ) ಡಾಲರ್ ಮೊತ್ತದ ವಿದೇಶೀ ಹಣ ಪಡೆಯಲು ಅವಕಾಶ ಮಾಡಿಕೊಟ್ಟಿದ್ದರೆಂದು ಆರೋಪಿಸಲಾದ ಹಗರಣ ಇದು. ಚಿದಂಬರಂ ಮತ್ತು ಕಾರ್ತಿ ಚಿದಂಬರಂ ಅವರಿಗೆ ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಿದ ದೆಹಲಿ ನ್ಯಾಯಾಲಯ ಅವರು ಅನುಮತಿ ಇಲ್ಲದೆ ದೇಶ ಬಿಡುವಂತಿಲ್ಲ ಮತ್ತು ಅಗತ್ಯ ಬಿದ್ದಾಗಲೆಲ್ಲ ತನಿಖೆಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿತ್ತು.

2019: ನವದೆಹಲಿ: ಐಆರ್ ಸಿಟಿಸಿ ನಿರ್ವಹಣೆಯಲ್ಲಿ ಭಾರತದ ಪ್ರ ಪ್ರಥಮ ಖಾಸಗಿ ರೈಲು ಸಂಚಾರ ನವರಾತ್ರಿಯಲ್ಲಿ ಆರಂಭವಾಗಲಿದೆ ಎಂದು ರೈಲ್ವೇ ಮೂಲಗಳು  ಈದಿನ  ತಿಳಿಸಿದವು.  ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ ನಿರ್ವಹಣೆಯಲ್ಲಿ ದೆಹಲಿ-ಲಕ್ನೋ ನಡುವೆ ಸಂಚರಿಸುವ ರೈಲು ಆಕ್ಟೋಬರ್ 4ರಿಂದ ಸೇವೆ ಆರಂಭಿಸುವ ಸಾಧ್ಯತೆ ಇದೆ ಎಂದು  ವರದಿ ತಿಳಿಸಿತು. ಅಲ್ಲದೇ ಖಾಸಗಿ ವಲಯದಿಂದ ಅಹ್ಮದಾಬಾದ್-ಮುಂಬೈ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್ ರೈಲು ಸಂಚಾರದ ದಿನಾಂಕದ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ. ದೆಹಲಿ-ಲಕ್ನೋ ತೇಜಸ್ ಎಕ್ಸ್ ಪ್ರೆಸ್ ವಾರದ ಆರು ದಿನಗಳ ಕಾಲ ಸಂಚರಿಸಲಿದ್ದು, ಮಂಗಳವಾರ ತೇಜಸ್ ಸಂಚಾರ  ಇರುವುದಿಲ್ಲ ಎಂದು ವರದಿ ಹೇಳಿತು.  ರೈಲಿನ ಆರಂಭಿಕ ಸಂಚಾರದ ಬಳಿಕ ಐಆರ್ ಸಿಟಿಸಿ ತೇಜಸ್ ಎಕ್ಸ್ ಪ್ರೆಸ್ ರೈಲಿನ ಸಂಚಾರದ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ಒಪ್ಪಿಸಲಿದೆ ಎಂದು ಮೂಲಗಳು ತಿಳಿಸಿದವು. ಪ್ರಯಾಣಿಕರು ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿನ ಪ್ರಯಾಣಕ್ಕಾಗಿ 15 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು ಎಂದು ರೈಲ್ವೇ ಮೂಲ ಹೇಳಿತು. ದೆಹಲಿ-ಲಕ್ನೋ ಮಾರ್ಗದ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ವಿಮಾನಯಾನದ ಮಾದರಿಯಲ್ಲಿ ಸೌಲಭ್ಯ ಲಭ್ಯವಾಗಲಿದೆ. ಮೊದಲಿಗೆ ಎಕ್ಸಿಕ್ಯೂಟಿವ್ ದರ್ಜೆಯ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ ವ್ಯವಸ್ಥೆ ಲಭ್ಯವಾಗಲಿದೆ. ಇದು ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿ ಮಾದರಿಯಲ್ಲಿಯೇ ಸುಖಕರ ಮತ್ತು ಸೌಲಭ್ಯಯುತವಾಗಿರಲಿದೆ ಎಂದು ವರದಿ ತಿಳಿಸಿತು. ವಿಶ್ರಾಂತಿ ಕೊಠಡಿಯಲ್ಲಿ ಪ್ರಯಾಣಿಕರು ವ್ಯವಹಾರ ಸಂಬಂಧಿ ಮೀಟಿಂಗ್ ಕೂಡಾ ನಡೆಸಬಹುದು. ಅಷ್ಟೇ ಅಲ್ಲ ವಿಮಾನದಲ್ಲಿ ಗಗನಸಖಿಯರು ಇರುವಂತೆ ಟ್ರೈನ್ ಹೋಸ್ಟೆಸ್ (ಸಖಿಯರು) ಮೂಲಕ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಧ್ಯತೆ ಇದೆ ಎಂದು  ವರದಿ ವಿವರಿಸಿತು. ಖಾಸಗಿಯವರ ನಿರ್ವಹಣೆಯಾದರೂ  ಭಾರತೀಯ ರೈಲ್ವೆಯು  ಟ್ರೈನ್ ಡ್ರೈವರ್, ಗಾರ್ಡ್, ಆರ್ ಪಿಎಫ್ ನ್ನು  ತೇಜಸ್ ಎಕ್ಸ್ ಪ್ರೆಸ್ ರೈಲಿಗೆ ಒದಗಿಸಲಿದೆ. ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ನೀಡುವ ಸಿಬ್ಬಂದಿ, ಹೌಸ್ ಕೀಪಿಂಗ್ ಮತ್ತು ಕೇಟರಿಂಗ್ ಸೇವೆಯನ್ನು ಐಆರ್ ಸಿಟಿಸಿ ನಿರ್ವಹಣೆ ಮಾಡಲಿದೆ ಎಂದು ತಿಳಿಸಿತು.

2019: ಮುಂಬೈ:ಟೆಲಿಕಾಂ ಕ್ಷೇತ್ರದಲ್ಲಿ ಕಡಿಮೆ ದರದಲ್ಲಿ 4ಜಿ ಸೇವೆಯನ್ನು ನೀಡುವ ಮೂಲಕ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಅಧಿಕೃತವಾಗಿ ಜಿಯೋ ಫೈಬರ್ ಸೇವೆಗೆ ಚಾಲನೆ ನೀಡಿತು. ಜಿಯೋ ಫೈಬರ್ ಮಹಾ ಕೊಡುಗೆಯನ್ನು ಇಂದು ರಿಯಲನ್ಸ್ ಘೋಷಿಸಿತು. ಜಿಯೋ ಮೆಗಾ ಆಫರ್ ವಿವರ  ಈ ಕೆಳಗಿನಂತಿದೆ: ಮಹಾ ಕೊಡುಗೆ: ರಿಲಯನ್ಸ್ ಒಟ್ಟು ಆರು ಪೂರ್ವ ಪಾವತಿ ಕೊಡುಗೆ ( ಪ್ರಿ ಪೇಯ್ಡ್ ಪ್ಲ್ಯಾನ್ಸ್ ಆಫರ್) ನೀಡಿದೆ. ಅದರಲ್ಲಿ ಕಂಚು-ತಿಂಗಳಿಗೆ 699 ರೂಪಾಯಿ, ಬೆಳ್ಳಿ-ತಿಂಗಳಿಗೆ 849 ರೂಪಾಯಿ, ಚಿನ್ನ-ತಿಂಗಳಿಗೆ 1,299 ರೂಪಾಯಿ, ವಜ್ರ-ತಿಂಗಳಿಗೆ 2,499, ಪ್ಲಾಟಿನಂ-ತಿಂಗಳಿಗೆ 3,999 ಮತ್ತು ಟಿಟಾನಿಯಂ-ತಿಂಗಳಿಗೆ 8,499 ರೂಪಾಯಿಗಳ ಕೊಡುಗೆಯನ್ನು ಮುಂದಿಟ್ಟಿತು. ಜಿಯೋ ಫೈಬರ್ ಬ್ರೋನ್ಜ್ (ಕಂಚು) ಮತ್ತು ಸಿಲ್ವರ್(ಬೆಳ್ಳಿ) ಪ್ಲಾನುಗಳಲ್ಲಿ ಡಾಟಾ ವೇಗವು ಕನಿಷ್ಠ 100 ಎಂಬಿಪಿಎಸ್ ವರೆಗೆ, ಗೋಲ್ಡ್ (ಚಿನ್ನ) ಮತ್ತು ಡೈಮಂಡ್(ವಜ್ರ) ಪ್ಲಾನುಗಳಲ್ಲಿ ಕನಿಷ್ಠ 250 ಎಂಬಿಪಿಎಸ್ ಮತ್ತು 500 ಎಂಬಿಪಿಎಸ್ ವೇಗದ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಅದೇ ರೀತಿ ಪ್ಲಾಟಿನಂ ಮತ್ತು ಟಿಟಾನಿಯಂ ಪ್ಲಾನುಗಳಲ್ಲಿ ಒಂದು ಜಿಬಿಪಿಎಸ್ ಡಾಟಾ ಸ್ಪೀಡ್ ಲಭ್ಯವಾಗಲಿದೆ. ಇದು ಒಂದು ತಿಂಗಳ ಪ್ಲ್ಯಾನ್ ಹೊಂದಿದ್ದು, ಇನ್ನುಳಿದಂತೆ ಜಿಯೋ 3 ತಿಂಗಳ, 6 ತಿಂಗಳ ಹಾಗೂ ಒಂದು ವರ್ಷದ ಪ್ಲ್ಯಾನ್ ಕೂಡಾ ನೀಡಲಿದೆ. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)
2019: ನವದೆಹಲಿ: ಹೈಬ್ರಿಡ್ ವಾಹನಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಕಡಿತ ಮಾಡುವ ಬಗ್ಗೆ ಭಾರತ ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈದಿನ ಇಲ್ಲಿ ತಿಳಿಸಿದರು. ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟದ (ಎಸ್ಐಎಎಂ) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಗಡ್ಕರಿ ಅವರು  ಗ್ರಾಹಕರ ಬೇಡಿಕೆ ದುರ್ಬಲಗೊಂಡ ಪರಿಣಾಮವಾಗಿ ಮಾರಾಟದ ತೀವ್ರ ಕುಸಿತದಿಂದ ಕಂಗೆಟ್ಟಿರುವ ವಾಹನ ವಲಯಕ್ಕೆ ಬಲ ತುಂಬಲು ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಿದರು. ಆಟೋಮೊಬೈಲ್ ವಾಹನ ವಲಯದಲ್ಲಿ ಆರ್ಥಿಕ ಹಿಂಜರಿತವಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿಯನ್ನು ಕೇಂದ್ರ ಸಾರಿಗೆ ಸಚಿವರು ನಿರಾಕರಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಬೇಕು ಎಂಬ ಸಲಹೆಯನ್ನು ಸಚಿವಾಲಯ ಸ್ವೀಕರಿಸಿದೆ ಎಂಬ ವಿಷಯ ಚರ್ಚೆಯಾಗುತ್ತಿದೆಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ನಾವು ರೀತಿಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ನುಡಿದರು.  (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment