2019: ರಾಂಚಿ
(ಜಾರ್ಖಂಡ್): ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ವಿರುದ್ಧ ಇಲ್ಲಿ ಪರೋಕ್ಷ ಆಕ್ರಮಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರವು ಭ್ರಷ್ಟರನ್ನುಜೈಲಿಗೆ ಅಟ್ಟುವುದಾಗಿ ಪ್ರತಿಜ್ಞೆ ಮಾಡಿದೆ, ಕೆಲವರು ಈಗಾಗಲೇ ಸೆರೆಮನೆಗೆ ಹೋಗಿದ್ದಾರೆ. ಆದರೆ ಪೂರ್ತಿ ಚಿತ್ರ ಇನ್ನೂ ಬರಲು ಬಾಕಿ ಇದೆ. ಈಗಿನದ್ದು ತಮ್ಮ ಸರ್ಕಾರದಿಂದ ೧೦೦ ದಿನಗಳ ಕಾರ್ಯ ನಿರ್ವಹಣೆಯ ಟ್ರೇಲರ್ ಮಾತ್ರ ಎಂದು ಗುಡುಗಿದರು. ‘ನಮ್ಮ
ಹೋರಾಟ ಭ್ರಷ್ಟಾಚಾರ ಮತ್ತು ಅಂತಹ ಚಟುವಟಿಕೆಗಳಲ್ಲಿ ಶಾಮೀಲಾಗಿರುವವರ ವಿರುದ್ಧ. ೧೦೦ ದಿನಗಳಲ್ಲಿ ನಾವು ಅಂತಹ ವ್ಯಕ್ತಿಗಳ ವಿರುದ್ಧ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಅವರಲ್ಲಿ ಕೆಲವರನ್ನು ಜೈಲಿಗೆ ಕಳುಹಿಸಲಾಗಿದೆ’ ಎಂದು
ಪ್ರಧಾನಿ ಮೋದಿ ಜಾರ್ಖಂಡ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು. ಭ್ರಷ್ಟಾಚಾರವನ್ನು ಪೂರ್ತಿಯಾಗಿ ಕೊನೆಗೊಳಿಸುವುದರತ್ತ ತಮ್ಮ ಸರ್ಕಾರ ಗಮನ ಹರಿಸಿದೆ ಎಂದು ಅವರು ನುಡಿದರು. ಜಾರ್ಖಂಡ್ ವಿಧಾನಸಭೆಗೆ ಕೆಲ ತಿಂಗಳುಗಳಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು. ‘ಹಿಂದೆ ಕೆಲವರು ತಾವು ಕಾನೂನು ಮತ್ತು ನ್ಯಾಯಾಲಯಗಳಿಗೆ ಅತೀತರು ಎಂಬುದಾಗಿ ಭಾವಿಸಿದ್ದರು. ಆದರೆ ನಮ್ಮ ಸರ್ಕಾರವು ಭ್ರಷ್ಟಾಚಾರಕ್ಕೆ ಕೊನೆ ಹಾಡಲು ನಿರ್ಧರಿಸಿದೆ. ಹೀಗಾಗಿ ಕಾನೂನು, ನ್ಯಾಯಾಲಯಗಳಿಗೆ ಅತೀತರು ತಾವು ಎಂಬುದಾಗಿ ಭಾವಿಸಿದ್ದವರು ಈಗ ಜಾಮೀನಿಗಾಗಿ ನ್ಯಾಯಾಲಯಗಳಿಗೆ
ಅಂಡಲೆಯುತ್ತಿದ್ದಾರೆ’ ಎಂದು
ಮೋದಿ ಹೇಳಿದರು. ‘ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ಕಾರ್ಯಾಚರಣೆ ಆರಂಭವಾಗಿದೆ. ಸಾರ್ವಜನಿಕರನ್ನು ಲೂಟಿ ಮಾಡಲು ಯತ್ನಿಸುವವರಿಗೆ ಸೂಕ್ತ ಜಾಗವನ್ನು ತೋರಿಸಲಾಗುವುದು’ ಎಂದು
ಅವರು
ಹೇಳಿದರು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ನೋಟು ಅಮಾನ್ಯೀಕರಣದ ಸೋಲು ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯ ದೋಷಪೂರಿತ ಅನುಷ್ಠಾನದ ಪರಿಣಾಮವಾಗಿ ಕುಸಿತದತ್ತ ಸಾಗಿರುವ ದೇಶದ ಹಾಲಿ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿ ಮತ್ತೆ ಹಳಿಗೆ ತರಲು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ
ನರೇಂದ್ರ ಮೋದಿ ಅವರಿಗೆ ’ಪಂಚ
ಸೂತ್ರಗಳನ್ನು’ ಸಲಹೆ ಮಾಡಿದರು.
ದಿನ
ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಲಹೆಯನ್ನು ಮುಂದಿಟ್ಟ ಮಾಜಿ ಪ್ರಧಾನಿ, ಈ ಪಂಚಸೂತ್ರಗಳ ಜಾರಿಗೆ
ಮುನ್ನ ರಾಷ್ಟ್ರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಹಾಲಿ ಆರ್ಥಿಕ ಹಿಂಜರಿತವು ಅಲ್ಪಕಾಲಿಕವಲ್ಲ, ದೀರ್ಘಕಾಲಿಕದ್ದಾಗಲಿದೆ. ಹೀಗಾಗಿ ಸರ್ಕಾರವು ತಜ್ಞರು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಮುಕ್ತ ಮಾತುಕತೆ ನಡೆಸಿ ಅವರ ಮಾತು ಕೇಳಬೇಕು. ಮೋದಿ ಸರ್ಕಾರವು ಈ ನಿಟ್ಟಿನಲ್ಲಿ ಗಮನ
ಕೇಂದ್ರೀಕರಿಸಿದ್ದನ್ನು ತಾವು ನೋಡಿಲ್ಲ ಎಂದು ಮನಮೋಹನ್ ಸಿಂಗ್ ನುಡಿದರು. ‘ತಲೆಬರಹ
(ಶೀರ್ಷಿಕೆ) ನಿರ್ವಹಣೆ’ಯ ಹವ್ಯಾಸದಿಂದ
ಮೋದಿ
ಸರ್ಕಾರ ಹೊರಬರಬೇಕು. ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ. ಭಾಗಶಃ ಪ್ರಕಟಣೆಗಳ ಬದಲಿಗೆ ಈಗ ಸಂಪೂರ್ಣ ಆರ್ಥಿಕ
ಚೌಕಟ್ಟು ಸುಧಾರಣೆಗೆ ಸಮಗ್ರ ಪ್ರಯತ್ನಗಳನ್ನು ಮಾಡಬೇಕು’ ಎಂದು ಆರ್ಥಿಕತೆಯನ್ನು ಉನ್ನತ ಬೆಳವಣಿಗೆಯ ಹಾದಿಗೆ ತರಲು ಪಂಚ ಸೂತ್ರಗಳನ್ನು ಸಲಹೆ ಮಾಡುತ್ತಾ ಸಿಂಗ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಭಾರತವು ೭೫ನೇ ಸ್ವಾತಂತ್ರ್ಯೋತ್ಸವ ಆಚರಿಸಲಿರುವ ೨೦೨೨ರ ಆಗಸ್ಟ್ ೧೫ರ ವೇಳೆಗೆ ಹೊಸ ಸಂಸತ್ ಭವನ ಕಟ್ಟಡವನ್ನು - ಸಂಪೂರ್ಣ ಹೊಸತು ಅಥವಾ ಹಾಲಿ ಚಾರಿತ್ರಿಕ ಕಟ್ಟಡದ ನವೀಕೃತ ರೂಪವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ನೂತನ ಸಂಸತ್ ಭವನ ಕಟ್ಟಡದ ಪ್ರಸ್ತಾಪಕ್ಕಾಗಿ ಮನವಿಯನ್ನು ಸೆಪ್ಟೆಂಬರ್ ೨ರಂದು ಮಾಡಲಾಗಿದ್ದು, ಸಂಸತ್ತಿನ ನವೀಕೃತ ಆವೃತ್ತಿಗಾಗಿ ವಿನ್ಯಾಸ ಮತ್ತು ಕಲ್ಪನೆಗಳನ್ನು
ನೀಡುವಂತೆ ವಿನ್ಯಾಸ ಮತ್ತು ವಾಸ್ತುಶಿಲ್ಪ ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ಈದಿನ
ತಿಳಿಸಿದವು. ಸಂಸತ್
ಕಟ್ಟಡದ ಮರು ಅಭಿವೃದ್ಧಿಗೆ ಮತ್ತು ೩ ಕಿಮೀ ದೂರದಲ್ಲಿ
ಕೇಂದ್ರ ಸರ್ಕಾರದ ಎಲ್ಲ ಸರ್ಕಾರಿ ಕಚೇರಿಗಳನ್ನು ಹೊಂದಿದ ಹೊಸ ಸಾಮಾನ್ಯ ಸಚಿವಾಲಯ ಕಟ್ಟಡಕ್ಕಾಗಿ ಮುನ್ನೋಟವನ್ನು ರೂಪಿಸುವಂತೆ ವಿನ್ಯಾಸ ವಾಸ್ತುಶಿಲ್ಪ ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ. ಶಾಸ್ತ್ರಿಭವನದಂತಹ ಹಾಲಿ ಕಟ್ಟಡಗಳನ್ನು ಕೆಡವಿಹಾಕಿ ಅಲ್ಲಿ ನೂತನ ಕೇಂದ್ರ ಸರ್ಕಾರಿ ಸಚಿವಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿಕೆ
ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈದಿನ
ಏಳು
ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದರು. ಅಕ್ರಮ ಆಸ್ತಿ ಹಾಗೂ ಕೆಫೆ ಕಾಫಿ ಡೇ ಸಂಸ್ಥೆ
ಜೊತೆಗೆ ನಡೆಸಿದ ಹಣದ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐಶ್ವರ್ಯಾ ಅವರನ್ನು ಪ್ರಶ್ನಿಸಿದರು ಎನ್ನಲಾಗಿದ್ದು, ಶುಕ್ರವಾರ ಬೆಳಗ್ಗೆ ಮತ್ತೆ ೧೧ ಗಂಟೆಗೆ ವಿಚಾರಣೆಗೆ
ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ
ಜತೆ ವ್ಯವಹಾರ ನಡೆಸಿದ್ದ ಐಶ್ವರ್ಯಾ ೨೦ ಕೋಟಿ ರೂಪಾಯಿಗೂ
ಅಧಿಕ ಮೊತ್ತದ ಲೇವಾದೇವಿ ನಡೆಸಿದ್ದರು ಎನ್ನಲಾಗಿತ್ತು. ಇದಲ್ಲದೇ ಮತ್ತೊಂದು ಕಂಪನಿಗೂ ಐಶ್ವರ್ಯಾ ಖಾತೆಯಿಂದ ಕೋಟ್ಯಂತರ ರೂ. ವಹಿವಾಟು ನಡೆಸಲಾಗಿತ್ತು ಎಂದು ಹೇಳಲಾಗಿತ್ತು. ಈ ವ್ಯವಹಾರದ ನಂತರ ಕೆಲವೇ ದಿನದಲ್ಲಿ ಮತ್ತೆ ಐಶ್ವರ್ಯಾ ಖಾತೆಗೆ ಕೋಟಿ ಕೋಟಿ ರೂ. ಜಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಾರಿ
ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ಸಮನ್ಸ್ ಜಾರಿ ಮಾಡಿ ಐಶ್ವರ್ಯಾ ವಿಚಾರಣೆಗೆ ಸೂಚನೆ ನೀಡಿದ್ದರು. ಅದರಂತೆ
ಗುರುವಾರ ಬೆಳಗ್ಗೆ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದರು. ಅಲ್ಲಿ ಐಶ್ವರ್ಯಾರನ್ನು ಪ್ರಶ್ನಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಸೆಪ್ಟೆಂಬರ್ 12
(2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment