Sunday, September 1, 2019

ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ

ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2019 ಸೆಪ್ಟೆಂಬರ್ 1 ಭಾನುವಾರ ಐವರು ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು ಅವರಲ್ಲಿ ಬಿಜೆಪಿಯ ತಮಿಳುನಾಡು ಘಟಕದ ಮುಖ್ಯಸ್ಥ ಡಾ.ತಮಿಳಿಸಾಯಿ  ಸೌಂದರರಾಜನ್ ಮತ್ತು ಮಾಜಿ ಸಚಿವ ಬಂಡಾರು ದತ್ತಾತ್ರೇಯ ಸೇರಿದ್ದಾರೆ.

ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರೆ, ಹಿಮಾಚಲ ಪ್ರದೇಶದ ರಾಜ್ಯಪಾಲ ಕಲರಾಜ್  ಮಿಶ್ರಾ ಅವರ ಬದಲಿಗೆ ಬಂಡಾರು ದತ್ತಾತ್ರೇಯ ಅವರನ್ನು ನೇಮಕ ಮಾಡಲಾಗಿದೆ.

ಇವರಲ್ಲದೆ, ಕೇಂದ್ರದ ಮಾಜಿ ಸಚಿವ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ಮತ್ತು ಭಗತ್ ಸಿಂಗ್ ಕೊಶ್ಯರಿ ಮಹಾರಾಷ್ಟ್ರದ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಕಲರಾಜ್ ಮಿಶ್ರಾ ಈಗ ಕಲ್ಯಾಣ್ ಸಿಂಗ್ ಬದಲಿಗೆ ರಾಜಸ್ಥಾನದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಪ್ರಕಟಣೆಯ ನಂತರ ಸುದ್ದಿ ಸಂಸ್ಥೆ  ಜೊತೆ ಮಾತನಾಡಿದ ಆರಿಫ್ ಖಾನ್ ಇದನ್ನು ಸೇವೆ ಮಾಡಲು ತಮಗೆ ಲಭಿಸಿರುವ ಅವಕಾಶ ಎಂದು  ಬಣ್ಣಿಸಿದರು.
"ಸಮೃದ್ಧಮಯವಾದ  ವೈವಿಧ್ಯತೆಗಳಿರವ ಭಾರತದಂತಹ ದೇಶದಲ್ಲಿ ಜನಿಸಿರುವುದು ನನ್ನ ಅದೃಷ್ಟ.   ದೇಶದ ಗಡಿಭಾಗವನ್ನು ತಿಳಿದುಕೊಳ್ಳಲು ಇದು ನನಗೆ ಒಂದು ಉತ್ತಮ ಅವಕಾಶವಾಗಿದೆ, ”ಎಂದು ಅವರು ಹೇಳಿದರು.

ಹೊಸ ಜವಾಬ್ದಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ  ಮತ್ತು "ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇನೆ" ಎಂದು ಬಂಡಾರು ದತ್ತಾತ್ರೇಯ ಹೇಳಿದರು.


No comments:

Post a Comment