Showing posts with label President. Show all posts
Showing posts with label President. Show all posts

Thursday, May 15, 2025

PARYAYA: ಸುಪ್ರೀಂಕೋರ್ಟಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶ್ನೆ

 ಸುಪ್ರೀಂಕೋರ್ಟಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶ್ನೆ

ರಾಷ್ಟ್ರಪತಿರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ

ವದೆಹಲಿ: ಅಪರೂಪದ ನಡೆಯೊಂದರಲ್ಲಿಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಒಪ್ಪಿಗೆ ನೀಡಲು ಸಮಯ ಮಿತಿಗಳನ್ನು ನಿಗದಿಪಡಿಸಿದ್ದ ಸುಪ್ರೀಂಕೋರ್ಟಿನ ತೀರ್ಪಿನ ಬಗ್ಗೆ ಅಭಿಪ್ರಾಯ ನೀಡುವಂತೆ ಭಾರತದ ಸಂವಿಧಾನದ 143 (1) ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ಗೆ ಉಲ್ಲೇಖವನ್ನು ಕಳುಹಿಸಿದ್ದಾರೆ ಎಂದು ಬಾರ್‌ ಎಂಡ್‌ ಬೆಂಚ್‌ ವರದಿ ಮಾಡಿದೆ.

ಸಂವಿಧಾನದ 143(1) ನೇ ವಿಧಿಯು ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಪಡೆಯಲು ಅವಕಾಶ ನೀಡುತ್ತದೆ. ಉಲ್ಲೇಖಕ್ಕೆ ಉತ್ತರಿಸಲು ಸುಪ್ರೀಂ ಕೋರ್ಟ್ ಈಗ ಸಂವಿಧಾನ ಪೀಠವನ್ನು ರಚಿಸಬೇಕಾಗುತ್ತದೆ.

ನಿರ್ದಿಷ್ಟವಾಗಿಮಸೂದೆಗಳಿಗೆ ಒಪ್ಪಿಗೆ ನೀಡಲು ನಿಗದಿಪಡಿಸಿದ ಸಮಯವನ್ನು ಪಾಲಿಸಲು ವಿಫಲವಾದರೆ ʼಭಾವಿತ ಒಪ್ಪಿಗೆʼ (ಒಪ್ಪಿಗೆ ಇದೆ ಎಂದು ಪರಿಗಣಿಸಲಾಗುತ್ತದೆ) ಇರುತ್ತದೆ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅಧ್ಯಕ್ಷ ಮುರ್ಮು ಪ್ರಶ್ನಿಸಿದ್ದಾರೆ.

ರಾಷ್ಟ್ರಪತಿ ಮತ್ತು ರಾಜ್ಯಪಾಲರ ಭಾವಿತ ಒಪ್ಪಿಗೆಯ ಪರಿಕಲ್ಪನೆಯು ಸಾಂವಿಧಾನಿಕ ಯೋಜನೆಗೆ ಪರಕೀಯವಾಗಿದೆ ಮತ್ತು ಮೂಲಭೂತವಾಗಿ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಅಧಿಕಾರವನ್ನು ಕಟ್ಟಿಹಾಕುತ್ತದೆ ಎಂದು ಉಲ್ಲೇಖವು ಹೇಳಿದೆ.

ರಾಷ್ಟ್ರಪತಿ ಮುರ್ಮು ಅವರು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಕೋರಿ 14 ನೇರ ಪ್ರಶ್ನೆಗಳನ್ನು ಕಳುಹಿಸಿದ್ದಾರೆಆದರೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂವಿಧಾನದ 200 ಮತ್ತು 201 ನೇ ವಿಧಿಗಳು ಯಾವುದೇ ಗಡುವನ್ನು ಅಥವಾ ನಿರ್ದಿಷ್ಟ ಕಾರ್ಯವಿಧಾನದ ಅವಶ್ಯಕತೆಗಳನ್ನು ಸೂಚಿಸುವುದಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

ಭಾರತದ ರಾಷ್ಟ್ರಪತಿಗಳು ಕೇಳಿದ 14 ಪ್ರಶ್ನೆಗಳು:

1. ಭಾರತದ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ಮಸೂದೆಯೊಂದನ್ನು ತನ್ನ ಮುಂದೆ ಮಂಡಿಸಿದಾಗ ರಾಜ್ಯಪಾಲರ ಮುಂದೆ ಇರುವ ಸಾಂವಿಧಾನಿಕ ಆಯ್ಕೆಗಳು ಯಾವುವು?

2. ಭಾರತ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ಮಸೂದೆಯನ್ನು ಮಂಡಿಸಿದಾಗ ರಾಜ್ಯಪಾಲರು ತಮ್ಮೊಂದಿಗೆ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಚಲಾಯಿಸುವಲ್ಲಿ ಮಂತ್ರಿ ಮಂಡಳಿಯು ನೀಡುವ ಸಹಾಯ ಮತ್ತು ಸಲಹೆಗೆ ಬದ್ಧರಾಗಿದ್ದಾರೆಯೇ?

3. ಭಾರತ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಸಾಂವಿಧಾನಿಕ ವಿವೇಚನೆಯನ್ನು ಚಲಾಯಿಸುವುದು ನ್ಯಾಯಸಮ್ಮತವೇ?

4. ಭಾರತದ ಸಂವಿಧಾನದ 361 ನೇ ವಿಧಿಯು, ಭಾರತದ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಗೆ ಸಂಪೂರ್ಣ ನಿರ್ಬಂಧವೇ?

5. ಸಾಂವಿಧಾನಿಕವಾಗಿ ನಿಗದಿಪಡಿಸಿದ ಸಮಯ ಮಿತಿ ಮತ್ತು ರಾಜ್ಯಪಾಲರು ಅಧಿಕಾರಗಳನ್ನು ಚಲಾಯಿಸುವ ವಿಧಾನದ ಅನುಪಸ್ಥಿತಿಯಲ್ಲಿರಾಜ್ಯಪಾಲರು ಭಾರತ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ಎಲ್ಲ ಅಧಿಕಾರಗಳನ್ನು ಚಲಾಯಿಸಲು ನ್ಯಾಯಾಂಗ ಆದೇಶಗಳ ಮೂಲಕ ಸಮಯ ಮಿತಿಗಳನ್ನು ವಿಧಿಸಬಹುದೇ ಮತ್ತು ಚಲಾಯಿಸುವ ವಿಧಾನವನ್ನು ಸೂಚಿಸಬಹುದೇ?

6. ಭಾರತ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಸಾಂವಿಧಾನಿಕ ವಿವೇಚನೆಯನ್ನು ಚಲಾಯಿಸುವುದು ನ್ಯಾಯಸಮ್ಮತವೇ?

7. ಸಾಂವಿಧಾನಿಕವಾಗಿ ನಿಗದಿಪಡಿಸಿದ ಸಮಯ ಮಿತಿ ಮತ್ತು ರಾಷ್ಟ್ರಪತಿಗಳು ಅಧಿಕಾರಗಳನ್ನು ಚಲಾಯಿಸುವ ವಿಧಾನದ ಅನುಪಸ್ಥಿತಿಯಲ್ಲಿಭಾರತ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ವಿವೇಚನೆಯನ್ನು ಚಲಾಯಿಸಲು ನ್ಯಾಯಾಂಗ ಆದೇಶಗಳ ಮೂಲಕ ಸಮಯ ಮಿತಿಗಳನ್ನು ವಿಧಿಸಬಹುದೇ ಮತ್ತು ಚಲಾಯಿಸುವ ವಿಧಾನವನ್ನು ಸೂಚಿಸಬಹುದೇ?

8. ರಾಷ್ಟ್ರಪತಿಗಳ ಅಧಿಕಾರಗಳನ್ನು ನಿಯಂತ್ರಿಸುವ ಸಾಂವಿಧಾನಿಕ ಯೋಜನೆಯ ಬೆಳಕಿನಲ್ಲಿರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದಾಗ, ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಪಡೆಯಲು ರಾಷ್ಟ್ರಪತಿಗಳು ಭಾರತದ ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಉಲ್ಲೇಖವನ್ನು ಕಳುಹಿಸಿ ಸುಪ್ರೀಂ ಕೋರ್ಟ್‌ನ ಸಲಹೆಯನ್ನು ಪಡೆಯಬೇಕೆ?

9. ಭಾರತ ಸಂವಿಧಾನದ 200 ನೇ ವಿಧಿ ಮತ್ತು 201 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ತೆಗೆದುಕೊಳ್ಳುವ ನಿರ್ಧಾರಗಳು ಕಾನೂನು ಜಾರಿಗೆ ಬರುವ ಮೊದಲು ಯಾವುದೇ ಹಂತದಲ್ಲಿ ನ್ಯಾಯ ವಿಚಾರಣೆಗೆ ಯೋಗ್ಯವೇಮಸೂದೆಯು ಕಾನೂನಾಗುವ ಮೊದಲು ಅದರ ವಿಷಯಗಳ ಬಗ್ಗೆ ನ್ಯಾಯಾಲಯಗಳು ಯಾವುದೇ ರೀತಿಯಲ್ಲಿ ನ್ಯಾಯಾಂಗ ತೀರ್ಪು ನೀಡಲು ಅನುಮತಿ ಇದೆಯೇ?

10. ಸಾಂವಿಧಾನಿಕ ಅಧಿಕಾರಗಳ ಚಲಾವಣೆ ಮತ್ತು ರಾಷ್ಟ್ರಪತಿಗಳು / ರಾಜ್ಯಪಾಲರು ನೀಡುವ ಆದೇಶಗಳನ್ನು ಭಾರತ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಯಾವುದೇ ರೀತಿಯಲ್ಲಿ ಬದಲಾಯಿಸಬಹುದೇ?

11. ರಾಜ್ಯ ಶಾಸಕಾಂಗವು ಮಾಡಿದ ಕಾನೂನನ್ನು ಭಾರತ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ನೀಡಲಾಗುವ ರಾಜ್ಯಪಾಲರ ಒಪ್ಪಿಗೆಯಿಲ್ಲದೆ, ಜಾರಿಯಲ್ಲಿರುವ ಕಾನೂನು ಆಗುತ್ತದೆಯೇ?

12. ಭಾರತ ಸಂವಿಧಾನದ 145(3) ನೇ ವಿಧಿಯ ನಿಬಂಧನೆಯನ್ನು ಗಮನದಲ್ಲಿಟ್ಟುಕೊಂಡುಈ ಗೌರವಾನ್ವಿತ ನ್ಯಾಯಾಲಯದ ಯಾವುದೇ ಪೀಠವು ಮೊದಲು ವಿಚಾರಣೆಯಲ್ಲಿ ಒಳಗೊಂಡಿರುವ ಪ್ರಶ್ನೆಯು ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಕಾನೂನಿನ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿರುವ ಸ್ವರೂಪದ್ದಾಗಿದೆಯೇ ಎಂದು ನಿರ್ಧರಿಸುವುದು ಮತ್ತು ಅದನ್ನು ಕನಿಷ್ಠ ಐದು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸುವುದು ಕಡ್ಡಾಯವಲ್ಲವೇ?

13. ಭಾರತದ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಅಧಿಕಾರಗಳು ಕಾರ್ಯವಿಧಾನ ಕಾನೂನು ಅಥವಾ ಭಾರತದ ಸಂವಿಧಾನದ 142 ನೇ ವಿಧಿಯ ವಿಷಯಗಳಿಗೆ ಸೀಮಿತವಾಗಿವೆಯೇ?

14. ಭಾರತದ ಸಂವಿಧಾನದ 131 ನೇ ವಿಧಿಯ ಅಡಿಯಲ್ಲಿ ಮೊಕದ್ದಮೆ ಹೂಡುವುದನ್ನು ಹೊರತುಪಡಿಸಿಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್‌ನ ಯಾವುದೇ ಇತರ ನ್ಯಾಯವ್ಯಾಪ್ತಿಯನ್ನು ಸಂವಿಧಾನವು ನಿಷೇಧಿಸುತ್ತದೆಯೇ?

PARYAYA: ಸುಪ್ರೀಂಕೋರ್ಟಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶ್ನೆ:   ಸುಪ್ರೀಂಕೋರ್ಟಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶ್ನೆ ರಾಷ್ಟ್ರಪತಿ , ರಾಜ್ಯಪಾಲ ರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ನ ವದೆಹಲಿ: ಅಪರೂಪದ ನಡೆ ಯೊಂದರಲ್ಲ...

Thursday, November 14, 2024

PARYAYA: ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

 ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

“‘ಪ್ನಾ ಘರ್ ಹೋಅಪ್ನಾ ಅಂಗನ್ ಹೋಈಸ್ ಖವಾಬ್ ಮೇ ಹರ್ ಕೋಯಿ ಜೀತಾ ಹೈಇನ್ಸಾನ್ ಕೆ ದಿಲ್ ಕಿ ಯೇ ಚಾಹತ್ ಹೈ ಕಿ ಏಕ್ ಘರ್ ಕಾ ಸಪ್ನಾ ಕಭಿ ನಾ ಚೂಟೇ' (ಸ್ವಂತ ಮನೆ ಇರಲಿಸ್ವಂತ ಅಂಗಳ ಇರಲಿ ಎಂಬ ಕನಸು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲೂ ವಾಸವಾಗಿರುತ್ತದೆ. ಎಂದಿಗೂ ಕಳೆದುಹೋಗದ ಮನೆಯ ಕನಸು- ಇದು ಎಂದಿಗೂ ಮರೆಯಾಗದ ಹಂಬಲ).

“‘Apna ghar ho, apna aangan ho, is khawab mein har koi jeeta hai; Insaan ke dil ki ye chahat hai ki ek ghar ka sapna kabhi naa choote’ (To have one’s own home, one’s own courtyard – this dream lives in every heart. It’s a longing that never fades, to never lose the dream of a home)."

೨೦೨೪ ನವೆಂಬರ್‌ ೧೩ರ ಬುಧವಾರ ಬುಲ್‌ ಡೋಜರ್‌ ಓಡಿಸಿ ಮನೆ ಕೆಡವಿ ಹಾಕುವ ಸರ್ಕಾರಿ ಸಿಬ್ಬಂದಿಯ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್‌ ತೀರ್ಪಿನ ಪೀಠಿಕೆ ಭಾಗದಲ್ಲಿ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಅವರು ಉಲ್ಲೇಖಿಸಿರುವ ಹಿಂದಿ ಕವಿ ಪ್ರದೀಪ್‌ ಅವರ ಕವನದ ಸಾಲುಗಳಿವು.

ಆದರೆ, ಸ್ವಂತ ಸೂರು, ಸ್ವಂತ ಮನೆ, ಸ್ವಂತ ಆಸ್ತಿ ಹೊಂದುವ ಅದಕ್ಕಾಗಿ ಅವುಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತಿರುವ ಸಹಸ್ರಾರು ಮಂದಿಯ ಕನಸು ಕರ್ನಾಟಕದಲ್ಲಿ ಮುರುಟಿಹೋಗುತ್ತಿದೆಯೇ? ಎಂಬ ಪ್ರಶ್ನೆ ರಾಜ್ಯದ ಹಲವರ ಮನಸ್ಸಿನಲ್ಲಿ ಮೂಡಿದ್ದರೆ ವಿಶೇಷವೇನೂ ಅಲ್ಲ. ಏಕೆಂದರೆ ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದಲ್ಲಿ ಮನೆ, ಆಸ್ತಿ ಖರೀದಿಸಬಯಸಿದವರ ಕನಸುಗಳು ಈಡೇರುತ್ತಿಲ್ಲ, ಅವರ ಕ್ರಯಪತ್ರಗಳು ನೋಂದಣಿ ಆಗುತ್ತಿಲ್ಲ.

ಪತ್ರಿಕಾ ವರದಿಗಳ ಪ್ರಕಾರ ಇದಕ್ಕೆ ಕಾರಣ ಸರ್ಕಾರ ಜಾರಿಗೊಳಿಸಿರುವ ನೀತಿ. ಯಾವುದೇ ಆಸ್ತಿ ಖರೀದಿ, ಮಾರಾಟಕ್ಕೆ ಇ-ಖಾತೆ ಕಡ್ಡಾಯ ಎಂಬ ನಿಯಮ. ಮಾರಾಟ- ಖರೀದಿ ಕ್ರಯಪತ್ರ ನೋಂದಣಿ ದಿನಾಂಕದವರೆಗಿನ ಇ-ಖಾತೆ ಇರಲೇಬೇಕು ಎಂಬ ಆದೇಶ.

ಆದರೆ ಬೆಂಗಳೂರಿನ ಬಿಬಿಎಂಪಿಯಿಂದ ಹಿಡಿದು, ಹಳ್ಳಿಗಳ ಗ್ರಾಮ ಪಂಚಾಯಿತಿ, ಪುಟ್ಟ ಪಟ್ಟಣ, ನಗರಗಳ ನಗರಸಭೆಯವರೆಗೂ ಇ-ಖಾತೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಸಿಬ್ಬಂದಿಯ ಅಳಲು. ಅದಕ್ಕೆ ಅವರು ನೀಡುತ್ತಿರುವ ಕಾರಣ – ಹಿಂದೆ ಭೂಮಿ ತಂತ್ರಾಂಶ ಇತ್ತು. ಆಗ ಎಲ್ಲವೂ ಸರಳವಾಗಿತ್ತು. ಸರ್ಕಾರ ಈಗ ಹೊಸದಾಗಿ ಕಾವೇರಿ ತಂತ್ರಾಂಶವನ್ನು ಅಳವಡಿಸಿದೆ. ಈ ತಂತ್ರಾಂಶದ ಜೊತೆಗೆ ನಮ್ಮ ಕಂಪ್ಯೂಟರ್‌ ವ್ಯವಸ್ಥೆ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂಬುದು ಅವರ ಅಳಲು.

ಹೀಗೇಕೆ? ಎಂಬ ಪ್ರಶ್ನೆಗೆ ಲಭಿಸುವ ಉತ್ತರ – ಹಿಂದೆ ಖಾತೆಗಳನ್ನು ಕೈಗಳಲ್ಲೇ ಬರೆದು ಸಹಿ, ಮೊಹರು ಹಾಕಿ ಕೊಟ್ಟರೆ ಸಾಕಿತ್ತು. ಆದರೆ ಈಗ ಖಾತೆಗಳನ್ನು ಇ-ಸ್ವತ್ತು ಇಲ್ಲವೇ ಇ-ಆಸ್ತಿ ತಂತ್ರಾಂಶದ ಮೂಲಕವೇ ಪಡೆಯಬೇಕು. ಆದರೆ ಇ-ಸ್ವತ್ತು ಇಲ್ಲವೇ ಇ-ಆಸ್ತಿ ಮೂಲಕ ಖಾತೆ ಪಡೆಯಲು ಅದಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ನೀಡಲಾಗುವ ಋಣಭಾರ ಪತ್ರ ಲಗತ್ತಿಸಲ್ಪಡಬೇಕು. ಆದರೆ ಅದು ಕಾವೇರಿ ತಂತ್ರಾಂಶ ಮೂಲಕ ತಾನೇ ತಾನಾಗಿ ಇ-ಸ್ವತ್ತು ಇಲ್ಲವೇ ಇ-ಆಸ್ತಿ ದಾಖಲೆಗಳ ಜೊತೆಗೆ ಸಂಯೋಜನೆಯಾಗಬೇಕು. ಆದರೆ, ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಕಾವೇರಿ ತಂತ್ರಾಂಶದ ಜೊತೆಗೆ ನಮ್ಮ ತಂತ್ರಾಂಶಗಳನ್ನು ಜೋಡಿಸಲು ನೀಡಬೇಕಾದ ಕೋಡ್‌ ಈವರೆಗೂ ಸರಿಯಾಗಿ ಎಲ್ಲ ಪಂಚಾಯತ್‌, ನಗರಸಭೆಗಳಿಗೆ ಸಿಕ್ಕಿಲ್ಲ ಎಂಬುದು ಉಡುಪಿಯ ನಗರಸಭೆಯ ಸಿಬ್ಬಂದಿಯೊಬ್ಬರ ಹೇಳಿಕೆ.

ಕಳೆದೆರಡು ತಿಂಗಳುಗಳಲ್ಲಿ ಈ ಸಂಯೋಜನೆಯ ಅಭಾವದ ಪರಿಣಾಮವಾಗಿ ಸಹಸ್ರಾರು ಕ್ರಯಪತ್ರಗಳು ನೋಂದಣಿಯಾಗದೆ ಸರ್ಕಾರಕ್ಕೆ ಕೋಟಿಗಟ್ಟಲೆ ರೂಪಾಯಿ ನಷ್ಟವಾಗಿರುವ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ವರದಿಗಳು ಬಂದಿವೆ.

ಕಾವೇರಿ ತಂತ್ರಾಂಶವು ಕೇಂದ್ರ ಸರ್ಕಾರದ ಎನ್‌ ಐಸಿ ರೂಪಿಸಿದ ತಂತ್ರಾಂಶಗಳ ಜೊತೆಗೂ ಹೊಂದಾಣಿಕೆಯಾಗದ ಪರಿಣಾಮವಾಗಿ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಿಗಳಿಗೆ ಬರಬೇಕಾದ ಅನುದಾನ ಕೂಡಾ ಕೂಡಾ ರಾಜ್ಯಕ್ಕೆ ಬಂದಿಲ್ಲ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಕೆಲ ಸಮಯದ ಹಿಂದೆ ಹೇಳಿದ್ದರು.

ಅಂದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಂತ್ರಾಂಶಗಳು ರಾಜ್ಯದಲ್ಲೇ ಬಿಬಿಎಂಪಿ, ನಗರಸಭೆ, ಪಂಚಾಯತಿಗಳ ಜೊತೆಷ್ಟೇ ಅಲ್ಲ, ಕೇಂದ್ರ ಸರ್ಕಾರದ ತಂತ್ರಾಂಶಗಳ ಜೊತೆಗೂ ಸಮರ್ಪಕವಾಗಿ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂದಾಯಿತು. ಇದರಿಂದಾಗಿಯೇ ಇ-ಖಾತೆ ನೀಡಲು ಸಮಸ್ಯೆಯಾಗುತ್ತಿದೆ, ಪರಿಣಾಮವಾಗಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಆಸ್ತಿ ವಿಕ್ರಯ, ಖರೀದಿ ಕ್ರಯಪತ್ರಗಳ ನೋಂದಣಿ ಆಗುತ್ತಿಲ್ಲ ಎಂದಾಯಿತು.

ಆದರೆ ಇದೇ ವೇಳೆಯಲ್ಲಿ ಇನ್ನೊಂದು ವಿದ್ಯಮಾನವೂ ಇದರ ಜೊತೆಗೆ ತಳಕು ಹಾಕಿಕೊಂಡಂತೆ ಕಾಣುತ್ತಿದೆ. ವರ್ಷದ ಹಿಂದೆ ನಕಲಿ ದಾಖಲೆಗಳ ನೋಂದಣಿಗೆ ತಡೆ ಹಾಕಲು ರಾಜ್ಯ ಸರ್ಕಾರವು ನೋಂದಣಿ ಕಾಯ್ದೆಗೆ ಮಹತ್ವದ ತಿದ್ದುಪಡಿಯೊಂದನ್ನು ಮಾಡಿ ಕಾಯ್ದೆ ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿಯವರು ಇತ್ತೀಚೆಗೆ ತಮ್ಮ ಅನುಮೋದನೆ ನೀಡಿದ್ದರು. ಈ ಅನುಮೋದನೆ ಬಳಿಕ ಅದನ್ನು ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದ್ದು ಅದೀಗ ಕಾನೂನಾಗಿ ಜಾರಿಗೊಂಡಿದೆ.

ಈ ಕಾನೂನನ್ನು ವಿರೋಧಿಸಿ ಸಬ್‌ ರಿಜಿಸ್ಟ್ರಾರ್‌ ಗಳು ರಾಜ್ಯವಾಪಿ ಮುಷ್ಕರ ಆರಂಭಿಸಿದ್ದರು. ಈ ಮುಷ್ಕರದ ಸ್ಥಿತಿ ಏನಾಗಿದೆ ಎಂಬುದು ಆ ನಂತರ ಪತ್ರಿಕೆಗಳಲ್ಲಿ ವರದಿ ಬಂದಿಲ್ಲ. ಈ ಮುಷ್ಕರ ಕೂಡಾ ಕ್ರಯಪತ್ರಗಳ ನೋಂದಣಿ ಸ್ಥಗಿತದ ಹಿಂದೆ ಕೆಲಸ ಮಾಡಿರಬಹುದೇ ಎಂಬ ಅನುಮಾನವೂ ಇದೆ.

ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ಎಂಬ ಗಾದೆಯಂತೆ, ಕಾರಣ ಏನೇ ಇದ್ದರೂ ಸ್ವಂತ ಮನೆ, ಸ್ವಂತ ನಿವೇಶನ, ಸ್ವಂತ ಆಸ್ತಿ ಹೊಂದುವ ಹಲವರ ಕನಸಿಗೆ ಮಾತ್ರ ನಿತ್ಯ ತಣ್ಣೀರು ಅಭಿಷೇಕವಾಗುತ್ತಿದೆ.

ಸರ್ಕಾರ ಈ ಸಮಸ್ಯೆ ಬಗೆ ಹರಿಸಲು ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ʼಜಂಟಿ ಕಾರ್ಯಪಡೆʼ ರಚಿಸುವ ನಿರ್ಧಾರವನ್ನು ಬುಧವಾರ (೧೩.೧೧.೨೦೨೪) ಕೈಗೊಂಡಿದೆ. ವರದಿ ಕೊಡಲು ಕಾರ್ಯಪಡೆಗೆ ಎರಡು ತಿಂಗಳ ಗಡುವು ನೀಡಲಾಗಿವೆ ಎನ್ನುತ್ತಿವೆ ವರದಿಗಳು.

ಆದರೆ ಜ್ವಲಂತ ಪ್ರಶ್ನೆ ಇದಲ್ಲ. ಈಗಾಲೇ ಕ್ರಯಪತ್ರಗಳನ್ನು ಸಿದ್ಧ ಪಡಿಸಿಕೊಂಡು, ಬ್ಯಾಂಕುಗಳಿಂದ ಸಾಲ ಮಂಜೂರು ಮಾಡಿಸಿಕೊಂಡು ಕ್ರಯಪತ್ರಗಳ ನೋಂದಣಿಗಾಗಿ ಕಾದುಕುಳಿತಿರುವ ಸಹಸ್ರಾರು ಮಂದಿ ಈಗ ಏನು ಮಾಡಬೇಕು? ಕಾರ್ಯಪಡೆಯ ವರದಿ ಬರುವವರೆಗೆ, ಅದನ್ನು ಸರ್ಕಾರ ಪರಿಶೀಲಿಸುವವರೆಗೆ, ಅದನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುವವರೆಗೆ ʼಚಾತಕ ಪಕ್ಷಿಗಳಂತೆʼ ಕಾಯುತ್ತಾ ಕೂರಬೇಕೇ?

ಅಥವಾ ತುರ್ತಾಗಿ ಅಂತಹ ಮಂದಿಗೆ ನಗರಸಭೆ/ ಪುರಸಭೆಗಳಿಂದ ʼತಾತ್ಕಲಿಕ ಖಾತೆʼ ನೀಡಿ ನಂತರ ಅದಕ್ಕೆ ಇ-ಖಾತೆ ಸೇರ್ಪಡೆ ಮಾಡಲು ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಈ ಸಮಸ್ಯೆ ಬಗೆಹರಿಸುತ್ತದೆಯೇ?

ಈ ಪ್ರಶ್ನೆ/ ಸಮಸ್ಯೆಯನ್ನು ಬಗೆ ಹರಿಸಬೇಕಾದದ್ದು ಈಗಿನ ತುರ್ತು ಅಗತ್ಯ.

(ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.  ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.)

-ನೆತ್ರಕೆರೆ ಉದಯಶಂಕರ

PARYAYA: ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?:   ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ? “‘ ಅ ಪ್ನಾ ಘರ್ ಹೋ , ಅಪ್ನಾ ಅಂಗನ್ ಹೋ , ಈಸ್ ಖವಾಬ್ ಮೇ ಹರ್ ಕೋಯಿ ಜೀತಾ ಹೈ ; ಇನ್ಸಾನ್ ಕೆ ದಿಲ್ ಕಿ ಯೇ ...

Sunday, September 1, 2019

ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ

ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2019 ಸೆಪ್ಟೆಂಬರ್ 1 ಭಾನುವಾರ ಐವರು ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು ಅವರಲ್ಲಿ ಬಿಜೆಪಿಯ ತಮಿಳುನಾಡು ಘಟಕದ ಮುಖ್ಯಸ್ಥ ಡಾ.ತಮಿಳಿಸಾಯಿ  ಸೌಂದರರಾಜನ್ ಮತ್ತು ಮಾಜಿ ಸಚಿವ ಬಂಡಾರು ದತ್ತಾತ್ರೇಯ ಸೇರಿದ್ದಾರೆ.

ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರೆ, ಹಿಮಾಚಲ ಪ್ರದೇಶದ ರಾಜ್ಯಪಾಲ ಕಲರಾಜ್  ಮಿಶ್ರಾ ಅವರ ಬದಲಿಗೆ ಬಂಡಾರು ದತ್ತಾತ್ರೇಯ ಅವರನ್ನು ನೇಮಕ ಮಾಡಲಾಗಿದೆ.

ಇವರಲ್ಲದೆ, ಕೇಂದ್ರದ ಮಾಜಿ ಸಚಿವ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ಮತ್ತು ಭಗತ್ ಸಿಂಗ್ ಕೊಶ್ಯರಿ ಮಹಾರಾಷ್ಟ್ರದ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಕಲರಾಜ್ ಮಿಶ್ರಾ ಈಗ ಕಲ್ಯಾಣ್ ಸಿಂಗ್ ಬದಲಿಗೆ ರಾಜಸ್ಥಾನದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಪ್ರಕಟಣೆಯ ನಂತರ ಸುದ್ದಿ ಸಂಸ್ಥೆ  ಜೊತೆ ಮಾತನಾಡಿದ ಆರಿಫ್ ಖಾನ್ ಇದನ್ನು ಸೇವೆ ಮಾಡಲು ತಮಗೆ ಲಭಿಸಿರುವ ಅವಕಾಶ ಎಂದು  ಬಣ್ಣಿಸಿದರು.
"ಸಮೃದ್ಧಮಯವಾದ  ವೈವಿಧ್ಯತೆಗಳಿರವ ಭಾರತದಂತಹ ದೇಶದಲ್ಲಿ ಜನಿಸಿರುವುದು ನನ್ನ ಅದೃಷ್ಟ.   ದೇಶದ ಗಡಿಭಾಗವನ್ನು ತಿಳಿದುಕೊಳ್ಳಲು ಇದು ನನಗೆ ಒಂದು ಉತ್ತಮ ಅವಕಾಶವಾಗಿದೆ, ”ಎಂದು ಅವರು ಹೇಳಿದರು.

ಹೊಸ ಜವಾಬ್ದಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ  ಮತ್ತು "ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇನೆ" ಎಂದು ಬಂಡಾರು ದತ್ತಾತ್ರೇಯ ಹೇಳಿದರು.