ನಾನು ಮೆಚ್ಚಿದ ವಾಟ್ಸಪ್

Saturday, May 25, 2019

ಇಂದಿನ ಇತಿಹಾಸ History Today ಮೇ 25

ಇಂದಿನ ಇತಿಹಾಸ History Today ಮೇ 25
2019: ನವದೆಹಲಿ: ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ೪೦ ಮಂದಿ ನಾಯಕರಿಂದ  ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರನ್ನು  ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2019 ಮೇ 25ರ ಶನಿವಾರ ನೂತನ ಪ್ರಧಾನಿಯಾಗಿ ನೇಮಕ ಮಾಡಿದರು.  ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದ ಬಳಿಕ  ಔಪಚಾರಿಕವಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಲು ಮೋದಿಯವರು ತಮ್ಮನ್ನು ಭೇಟಿ  ಮಾಡಿದಾಗ ಸರ್ಕಾರ ರಚನೆಗೆ ಹಾಗೂ ಇತರ ಸಚಿವರ ಹೆಸರುಗಳನ್ನು ನೀಡಲು ರಾಷ್ಟ್ರಪತಿಯವರು ಮೋದಿ ಅವರಿಗೆ ಸೂಚಿಸಿದರು. ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮೇ 30ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಪ್ರಧಾನಿಯವರು ಮುಂದಿನ ವಾರದ ಆದಿಯಲ್ಲಿ ತಮ್ಮ ರಾಜ್ಯವಾದ ಗುಜರಾತಿಗೆ ಭೇಟಿ ನೀಡಿ ತಮ್ಮ ತಾಯಿ ಹೀರಾ ಬೆನ್ ಮೋದಿ  ಅವರನ್ನು ಭೇಟಿ ಮಾಡಿ ಆಶೀರ್ವಾದ ಕೋರಲಿದ್ದಾರೆ. ಆಮೇಲೆ ತಮ್ಮನ್ನು ಶೇಕಡಾ ೬೪ರಷ್ಟು ಮತಗಳನ್ನು ನೀಡಿ ಆಯ್ಕೆ ಮಾಡಿದ ವಾರಾಣಸಿ ಕ್ಷೇತ್ರಕ್ಕೆ ಭೇಟಿ ನೀಡಿ ಧನ್ಯವಾದ ಸಮರ್ಪಿಸಿದ ಬಳಿಕ ದೆಹಲಿಗೆ ವಾಪಸಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ೫೪೩ ಸದಸ್ಯ ಬಲದ ಲೋಕಸಭೆಯ ೫೪೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೩೫೩ ಸ್ಥಾನಗಳನ್ನು ಗೆದ್ದು ಪ್ರಚಂಡ ಜಯಭೇರಿ ಬಾರಿಸಿರುವ ಎನ್ಡಿಎ ದೇಶಾದ್ಯಂತ ಶೇಕಡಾ ೪೫ರಷ್ಟು ಮತಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದೆ. ಇದಕ್ಕೆ ಮುನ್ನ ರಾಷ್ಟ್ರಪತಿ ಕೋವಿಂದ್ ಅವರು ಕೇಂದ್ರ ಸಂಪುಟದ ಶಿಫಾರಸಿನ ಮೇರೆಗೆ ತತ್ ಕ್ಷಣದಿಂದ ಜಾರಿಗೆ ಬರುವಂತೆ ೧೬ನೇ ಲೋಕಸಭೆಯನ್ನು ಈದಿನ ವಿಸರ್ಜಿಸಿದರು ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ೨೦೨೨ರ ಪೂರ್ವಾರ್ಧದವರೆಗೆ ಅಂದರೆ ಭಾರತದ ೭೫ನೇ ಸ್ವಾತಂತ್ರ್ಯ ಉತ್ಸವದ ವೇಳೆಗೆ ಕಾರ್ಯಗತಗೊಳಿಸಲು ೧೦೦೦ ದಿನಗಳ ಕಾರ್ಯಸೂಚಿಯನ್ನು ಯೋಜಿಸಿದ್ದು ಬಗ್ಗೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇಬ್ಬರು ವ್ಯಕ್ತಿಗಳ ಜೊತೆಗೆ ಸಮಾಲೋಚಿಸಿದ್ದಾರೆ. ಮೋದಿಯವರ ಎರಡನೇ ಅವಧಿಯಲ್ಲಿನನವಭಾರತ ಭರವಸೆಯ ಅಂಗವಾಗಿ ಕೃಷಿ ಕ್ಷೇತ್ರದಲ್ಲಿನ ಮಹಿಳೆಯರನ್ನು ಸಬಲೀಕರಣಗೊಳಿಸುವುದರಿಂದ ಹಿಡಿದು ಭಾರತೀಯನೊಬ್ಬನನ್ನು ಬಾಹ್ಯಾಕಾಶಕ್ಕೆ ಕಳುಹಿಸುವವರಗಿನ ಹಲವಾರು ಉಪಕ್ರಮಗಳನ್ನು ೧೦೦೦ ದಿನಗಳ ಕಾರ್ಯಸೂಚಿಯು ಹೊಂದಿರುತ್ತದೆ.  ಸಂಜೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಸದಸ್ಯರು ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನಾಗಿ ಆಯ್ಕೆ ಮಾಡಿದರು. ಎನ್ಡಿಎಯ ವಿವಾದಾತೀತ ನಾಯಕ ಮೋದಿ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ಔಪಚಾರಿಕ ಸಭೆಯು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಭಾರೀ ಕರತಾಡನ, ಹರ್ಷೋದ್ಘಾರ, ಮೇಜು ಕುಟ್ಟುವಿಕೆ ಮತ್ತುಮೋದಿ ಮೋದಿ ಘೋಷಗಳ ಮಧ್ಯೆ ನಡೆಯಿತು.   ಸಂದರ್ಭದಲ್ಲಿ ಎನ್ಡಿಎ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ  ’ ಬಾರಿ ಜನರು ಆಡಳಿತ ಪರ ಮತ ನೀಡಿದ್ದಾರೆ. ಬಾರಿಯ ಚುನಾವಣೆಯಲ್ಲಿ ಆಡಳಿತ ಪರ ಅಲೆ ಇತ್ತು. ಅದರ ಪರಿಣಾಮವಾಗಿ ಧನಾತ್ಮಕ ಜನಾದೇಶ ಬಂದಿದೆ ಎಂದು ಹೇಳಿದರುನಾವು ಎಲ್ಲರ ಸಹಯೋಗ- ಎಲ್ಲರ  ವಿಕಾಸಕ್ಕಾಗಿ (ಸಬ್ ಕಾ ಸಾಥ್- ಸಬ್ ಕಾ ವಿಕಾಸ್) ಕೆಲಸ ಮಾಡಿದ್ದೇವೆ. ಈಗ ನಾವು ಸಬ್ ಕಾ ವಿಶ್ವಾಸ್ಗಾಗಿ (ಎಲ್ಲರ ವಿಶ್ವಾಸ) ದುಡಿಯಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರತಿಸರ್ಕಾರವೂ ಏನಾದರೂ ಒಂದು ಕೆಲಸ ಮಾಡುತ್ತದೆ. ನಾವು ಏನಾದರೂ ಒಂದಲ್ಲ, ಹಲವಾರು ಕೆಲಸಗಳನ್ನು ಮಾಡಬೇಕಾಗಿದೆ ಎಂದು ಪ್ರಧಾನಿ ನುಡಿದರು. ಅಲ್ಪಸಂಖ್ಯಾತರನ್ನು ಭಯ ಭೀತಿಯ ಪರಿಸರದಲ್ಲಿ ಇರಿಸುತ್ತಾ ಬರಲಾಗಿದೆ. ನಾವು ಇದನ್ನು ತೊಡೆದುಹಾಕಬೇಕಾಗಿದೆ. ೨೦೧೪ರಲ್ಲಿ ನನ್ನ ಸರ್ಕಾರವನ್ನು ದಲಿತರು, ಬಡವರು, ಶೋಷಿತರು ಮತ್ತು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಇರಿಸಿದ್ದೆ. ಬಾರಿ ಯಾರನ್ನೂ ನಾವು ಹಿಂದುಳಿಯಲು ಬಿಡಬಾರದು ಮತ್ತು ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು ಎಂದು ಮೋದಿ ಹೇಳಿದರು. ನಮ್ಮ ಪಕ್ಷ ಕಾರ್ಯಕರ್ತರು ಸದಾ ಜಾಗೃತರಾಗಿರಬೇಕು. ನಾವು ಇಂದು ಏನಾಗಿದ್ದೇವೋ ಅದು ಮೋದಿಯಿಂದಾಗಿ ಅಲ್ಲ, ಜನತೆಯಿಂದಾಗಿ ಎಂದು ಪ್ರಧಾನಿ ನುಡಿದರು. ಪ್ರಧಾನಿಯಾಗಿದ್ದರೂ ನನ್ನನ್ನು ವಿಶೇಷವಾಗಿ ನೋಡಿಕೊಳ್ಳುವುದನ್ನು ನಾನು ಬಯಸುವುದಿಲ್ಲ. ವಿಮಾನ ನಿಲ್ದಾಣದಲ್ಲಿಯೂ ಭದ್ರತಾ ತಪಾಸಣೆಗಾಗಿ ನಾನು ಸಾಲಿನಲ್ಲಿ ನಿಲ್ಲ ಬಯಸುತ್ತೇನೆ ಎಂದು ಮೋದಿ ಹೇಳಿದರು.  ‘೨೦೧೯ರ ಚುನಾವಣೆಯು ಗೋಡೆಗಳನ್ನು ಕೆಡವಿಹಾಕಲು ನೆರವಾಗಿದೆ ಎಂದು ಪ್ರಧಾನಿ ನುಡಿದರು. ಮಾತನಾಡಲು ಆರಂಭಿಸುವ ಮುನ್ನ ಪ್ರಧಾನಿಯವರು ಸಂವಿಧಾನದ ಮುಂದೆ ನಿಂತು ತಲೆಬಾಗಿದರು. ೫೪೩ ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ೩೦೩ ಸ್ಥಾನಗಳನ್ನು ಗೆದ್ದಿದೆ. ಎನ್ಡಿಎ ಅಂಗಪಕ್ಷಗಳ ಸದಸ್ಯರು ಸೇರಿದಂತೆ ಆಡಳಿತಾರೂಢ ಮೈತ್ರಿಕೂಟದ ಸ್ಥಾನಬಲ ಗಮನಾರ್ಹವಾದ ೩೫೩ಕ್ಕೆ ಏರಿದೆಜನತಾದಳ (ಸಂಯುಕ್ತ) ನಾಯಕ ನಿತೀಶ್ ಕುಮಾರ್, ಶಿವಸೇನೆಯ ಉದ್ಧವ್ ಠಾಕ್ರೆ, ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್ ಸೇರಿದಂತೆ ಮೈತ್ರಿಕೂಟದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರುಬಿಜೆಪಿಯ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ವೇದಿಕೆಯಲ್ಲಿ ಆಸೀನರಾಗಿದ್ದು, ಮೋದಿ ಅವರನ್ನು ಅಭಿನಂದಿಸಿದರು. ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರು ಪ್ರಧಾನಿ ಮೋದಿ ಅವರನ್ನು ಎನ್ಡಿಎ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ನಿರ್ಣಯವನ್ನು ಮಂಡಿಸಿದರು. ಜೆಡಿಯು ಮುಖ್ಯಸ್ಥ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಮತ್ತು ಎನ್ಡಿಎಯ ಇತರ ನಾಯಕರು  ನಿರ್ಣಯವನ್ನು ಅನುಮೋದಿಸಿದರು.  ‘ಜನರು ನರೇಂದ್ರ ಮೋದಿ ಪ್ರಯೋಗವನ್ನು ಹೃದಯಪೂರ್ವಕವಾಗಿ ಪುನಃ ಸ್ವೀಕರಿಸಿದ್ದಾರೆ. ನಾನು ಮೋದಿಯವರ ಬಗ್ಗೆ ಮಾತು ಹೇಳಬಯಸಿದ್ದೇನೆ. ನಾನು ಅವರ ಜೊತೆಎ ೨೦ ವರ್ಷಗಳ ಕಾಲ ದುಡಿದಿದ್ದೇನೆ. ಅವರು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ, ಅವರು ದಿನಕ್ಕೆ ೧೮ ಗಂಟೆಗಳ ಕಾಲ ದುಡಿದಿದ್ದಾರೆ ಎಂದು ಬಾದಲ್ ಹೇಳಿದರುಹಿಂದಿನ ದಿನ  ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟವು ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅದನ್ನು ಅಂಗೀಕರಿಸುವ ಮೂಲಕ ನೂತನ ಸರ್ಕಾರ ರಚನೆಗೆ ದಾರಿ ಸುಗಮಗೊಳಿಸಿದ್ದರುಪ್ರಧಾನಿ ಮೋದಿಯವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿಯವರು ನೂತನ ಸರ್ಕಾರ ರಚಿಸುವವರೆಗೆ ಉಸ್ತುವಾರಿಯಾಗಿ ಮುಂದುವರೆಯುವಂತೆ ಸೂಚಿಸಿದ್ದರು.

2019: ನವದೆಹಲಿ: ರಾಷ್ಟ್ರೀಯ ಚುನಾವಣೆಯಲ್ಲಿ ಸಂಭವಿಸಿದ ಹೀನಾಯ ಸೋಲಿನ ಬಗ್ಗೆ ಪರಿಶೀಲನೆ ನಡೆಸಿದ ಕಾಂಗ್ರೆಸ್ ವರಿಷ್ಠ ಮಂಡಳಿಯು, ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಲು ಮುಂದಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆ ಕೊಡುಗೆಯನ್ನು ಸರ್ವಾನುಮತದಿಂದ ತಿರಸ್ಕರಿಸಿ, ಪಕ್ಷ ದ ಮರುಸಂಘಟನೆಗೆ  ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿತು.  ಆದರೆ ರಾಹುಲ್ ಗಾಂಧಿಯವರು ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಬಗ್ಗೆ ವಿಮರ್ಶಿಸಿದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯು ಸುದೀರ್ಘ ಪರಾಮರ್ಶೆ ಸಭೆಯು, ಬಳಿಕ ರಾಹುಲ್ ಗಾಂಧಿಯವರಿಗೆ ಪಕ್ಷ ಪುನಸ್ಸಂಘಟನೆಯ ಪೂರ್ಣ ಅಧಿಕಾರ ನೀಡುವ ನಿರ್ಣಯ ಅಂಗೀಕಾರದೊಂದಿಗೆ ಮುಕ್ತಾಯಗೊಂಡಿತುಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿರೋಧಿ ಟೀಕಾ ಅಭಿಯಾನದ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿಯವರು ಮೂರೂವರೆ ಗಂಟೆಗಳ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಲಿಲ್ಲ. ಪಕ್ಷದ ದಯನೀಯ ಸೋಲಿನ ಹೊಣೆಯನ್ನು ಅವರು ವಹಿಸಿಕೊಂಡರು ಎಂದು ಮೂಲಗಳು ಹೇಳಿದವು. ಪಕ್ಷದ ಚುನಾವಣಾ ಸಾಧನೆ ಬಗ್ಗೆ ರಾಹುಲ್ ಗಾಂಧಿ ಸಂಕ್ಷಿಪ್ತ ವಿಶ್ಲೇಷಣೆ ಮಾಡಿದರು. ಅವರ ಪಕ್ಕದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕುಳಿತಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರ, ಮಾಜಿ ಸಚಿವ ಪಿ. ಚಿದಂಬರಂ, ಹೊರಹೋಗುತ್ತಿರುವ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಉನ್ನತ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.   ರಾಜ್ಯ ಘಟಕಗಳ ಮುಖ್ಯಸ್ಥರು ತಮ್ಮ ರಾಜೀನಾಮೆಗಳನ್ನು ಕಳುಹಿಸಬೇಕು ಎಂಬುದಾಗಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಸರ್ವಾನುಮತದ ಅಭಿಪ್ರಾಯ ವ್ಯಕ್ತ ಪಡಿಸಿತು. ’ಹೊಸ ತಂಡದ ರಚನೆಯ ಸಲುವಾಗಿ ನಾನು ಕೂಡಾ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಅಶೋಕ ಚವಾಣ್ ಹೇಳಿದರುಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ರಾಜ್ ಬಬ್ಬರ್ ಮತ್ತು ಒಡಿಶಾ ಕಾಂಗ್ರೆಸ್ ಮುಖ್ಯಸ್ಥ ನಿರಂಜನ್ ಪಾಟ್ನಾಯಕ್ ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ೫೨ ಸ್ಥಾನಗಳನ್ನು ಗೆದ್ದಿದೆ. ೨೦೧೪ರ ಚುನಾವಣೆಗಳಿಗೆ ಹೋಲಿಸಿದರೆ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಸ್ವಲ್ಪ ಸುಧಾರಿಸಿದೆ೨೦೧೪ರಲ್ಲಿ ಕಾಂಗ್ರೆಸ್ ೪೪ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಕಾಂಗ್ರೆಸ್ ಪಕ್ಷಕ್ಕೆ ತತ್ ಕ್ಷಣದ ಆದ್ಯತೆ ವರ್ಷ ತಡವಾಗಿ ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ರಾಜ್ಯ ವಿಧಾನಸಭೆ ಚುನಾವಣೆಗಳು ಹಾಗೂ ಶೀಘ್ರದಲ್ಲೇ ಯಾವಾಗ ಬೇಕಿದ್ದರೂ ನಡೆಯಬಹುದಾದ ಜಮ್ಮು ಮತ್ತು ಕಾಶ್ಮೀರದ ಚುನಾವಣೆಗಳು ಹಾಗೂ ಮುಂದಿನ ವರ್ಷ ಫೆಬ್ರುವರಿಯಲಿ ನಡೆಯಲಿರುವ ದೆಹಲಿ ಚುನಾವಣೆಗಳುಮುಂದಿನ ಒಂದರೆಡು ವಾರಗಳ ಒಳಗಾಗಿ ಹಲವಾರು ರಾಜ್ಯಗಳ ಮುಖ್ಯಸ್ಥರ ಬದಲಾವಣೆ ಆಗಬಹುದು ಎನ್ನಲಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಪುನಸ್ಸಂಘಟನೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗುವುದು ಎನ್ನಲಾಗಿದೆ. ಕೆಲವು ರಾಜ್ಯಗಳ ಉಸ್ತುವಾರಿ ವಹಿಸಿರುವ ಪ್ರಧಾನ ಕಾರ್ಯದರ್ಶಿಗಳನ್ನೂ ಬದಲಾಯಿಸಿ ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಬಹುದು ಎಂದು ಹೇಳಲಾಯಿತು.  ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮಗಳ ಜೊತೆಗೆ ಸಂಕ್ಷಿಪ್ತವಾಗಿ ಮಾತನಾಡಿದ್ದ ರಾಹುಲ್ ಗಾಂಧಿಪಕ್ಷವು ಮರುಹೋರಾಟಕ್ಕೆ ಕಟಿಬದ್ಧವಾಗಿದೆ ಎಂದು ಹೇಳಿದ್ದರು.  ‘ವಿಶ್ವಾಸ ಇಡಿ, ನಾವು ಶ್ರಮಿಸುತ್ತೇವೆ, ಮುಂಬರುವ ದಿನಗಳಲ್ಲಿ ಗೆಲ್ಲಲಿದ್ದೇವೆ. ಪ್ರೇಮವು ಎಂದಿಗೂ ಸೋಲುವುದಿಲ್ಲ, ನಾವು ಇನ್ನಷ್ಟು ಬಲಾಢ್ಯರಾಗಿ ಮೂಡಿ ಬರಲಿದ್ದೇವೆ ಎಂಬುದು ನನಗೆ ಖಚಿತವಿದೆ. ಪ್ರೇಮವು ನಮಗೆ ಮಾರ್ಗದರ್ಶನ ಮಾಡುತ್ತದೆ ಎಂದು ಅವರು ಹೇಳಿದ್ದರು. ೨೦೧೪ರಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಹುದ್ದೆ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್ ಬಾರಿಯೂ ವಿರೋಧ ಪಕ್ಷ ನಾಯಕನ ಸ್ಥಾನಮಾನ ಪಡೆಯುವ ಸಾಧ್ಯತೆಗಳಿಲ್ಲ. ೫೪೩ ಸದಸ್ಯ ಬಲದ ಲೋಕಸಭೆಯಲ್ಲಿ ಶೇಕಡಾ ೧೦ರಷ್ಟು ಸ್ಥಾನಗಳನ್ನು ಪಡೆದ ಪಕ್ಷಕ್ಕೆ ಮಾತ್ರವೇ ವಿರೋಧ ಪಕ್ಷದ ನಾಯಕನ ಹುದ್ದೆ ಲಭಿಸುತ್ತದೆ. ರಾಜೀನಾಮೆಗೆ ಪಟ್ಟು ಹಿಡಿದಿದ್ದ ರಾಹುಲ್: ಬಿಜೆಪಿ ಮತ್ತು ನರೇಂದ್ರ ಮೋದಿ  ಅವರ ಕೈಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರು ಹುದ್ದೆಯಿಂದ ಕೆಳಗಿಳಿಯುವುದಾಗಿ ಪಟ್ಟು ಹಿಡಿದಿದ್ದರು, ಆದರೆ ಪಕ್ಷದ ವರಿಷ್ಠ ಮಂಡಳಿಯು ಅದಕ್ಕೆ ಒಪ್ಪಲಿಲ್ಲ ಎಂದು ಮೂಲಗಳು ಹೇಳಿದವು. ತಾವು ರಾಜೀನಾಮೆ ನೀಡಲು ಬಯಸಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ ಎಂಬುದಾಗಿ ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದರು ಎಂದು ಪಕ್ಷದ ಉನ್ನತ ನಾಯಕರು ಪಾಲ್ಗೊಂಡಿದ್ದ ಸಭೆಯಲ್ಲಿ ಹಾಜರಿದ್ದ ನಾಯಕರೊಬ್ಬರು ಹೇಳಿದ್ದಾರೆಆದರೆ ರಾಹುಲ್ ಗಾಂಧಿಯವರು ರಾಜೀನಾಮೆಯ ಕೊಡುಗೆ ಮುಂದಿಟ್ಟಿದ್ದರು ಎಂಬುದನ್ನು ಕಾಂಗ್ರೆಸ್ ಪಕ್ಷವು ಅಧಿಕೃತವಾಗಿ ನಿರಾಕರಿಸಿದೆ. ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು ರಾಹುಲ್ ಗಾಂಧಿಯವರು ರಾಜೀನಾಮೆ ಕೊಡಬಯಸಿದ್ದರು ಎಂಬ ವರದಿಗಳನ್ನು ನಿರಾಕರಿಸಿದರುರಾಹುಲ್ ಗಾಂಧಿಯವರ ನಾಯಕತ್ವವನ್ನು  ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲಿ ಪ್ರಶ್ನಿಸಲಾಯಿತೇ ಎಂಬ ಪ್ರಶ್ನೆಗೆ ಪಕ್ಷದ ನಾಯಕಿ ಅಂಬಿಕಾ ಸೋನಿ ಅವರುಇಲ್ಲವೇ ಇಲ್ಲ ಎಂಬುದಾಗಿ ಉತ್ತರಿಸಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ರಾಜೀನಾಮೆ ಕೊಡುಗೆಯನ್ನು ಸರ್ವಾನುಮತದಿಂದ ತಿರಸ್ಕರಿಸಿದ ಬಳಿಕವೂ ರಾಹುಲ್ ಗಾಂಧಿಯವರು ಪುನಃ ಮಾತನಾಡಿ, ಹಿಂದಿನಂತೆ ನಗೆಪಾಟಲಿಗೆ ಗುರಿಯಾಗದಿರಲು  ’ಸಮಗ್ರ ಆತ್ಮಾವಲೋಕನ ಅಗತ್ಯವಿದೆ ಹೀಗಾಗಿ ತಾನು ಹೊರಹೋಗಲೇ ಬೇಕಾಗಿದೆ ಎಂದು ಹೇಳಿದರು ಎಂದು ಮೂಲಗಳು ಹೇಳಿವೆತಾಯಿ ಸೋನಿಯಾ ಗಾಂಧಿ ಅವರಿಂದ ಅಧಿಕಾರ ವಹಿಸಿಕೊಂಡ ಒಂದೂವರೆ ವರ್ಷದ ಬಳಿಕ ಉನ್ನತ ಹುದ್ದೆಯಿಂದ ತಾವು ನಿರ್ಗಮಿಸಬಹುಸುವುದಾಗಿ ೪೮ರ ಹರೆಯದ ರಾಹುಲ್ ಗಾಂಧಿಯವರು ೫೨ ಸದಸ್ಯರನ್ನು ಒಳಗೊಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ತಿಳಿಸಿದರು. ರಾಹುಲ್ ಗಾಂಧಿಯವುರು ಹುದ್ದೆ ತ್ಯಜಿಸಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು ಪಟ್ಟು ಹಿಡಿದಿದ್ದಾರೆ ಎಂಬ ವರದಿಗಳ ಮಧ್ಯೆ ೪೫ ನಿಮಿಷ ತಡವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿಪಕ್ಷವು ತನಗೆ ರಾಹುಲ್ ಗಾಂಧಿ ಅವರ ಅಗತ್ಯವಿದೆ ಎಂಬುದಾಗಿ ಹೇಳಿದೆ ಎಂದು ಪಕ್ಷದ ವಕ್ತಾರರು ತಿಳಿಸಿದರು. ರಾಹುಲ್ ಗಾಂಧಿಯವರು ಸಭೆಯಿಂದ ಹೊರಹೋಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಯಾವ ಮಾತನ್ನೂ ಆಡಲಿಲ್ಲ. ಉಳಿದ ಕಾಂಗ್ರೆಸ್ ನಾಯಕರು ಮಾತ್ರವೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಾಯಿ ಸೋನಿಯಾಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರ ಅವರೂ ರಾಹುಲ್ ಗಾಂಧಿಯವರು ಮನಸ್ಸು ಬದಲಾಯಿಸುವಂತೆ ಮಾಡಲು ಯತ್ನಿಸಿದರು ಎಂದು ಮೂಲಗಳು ಹೇಳಿವೆರಾಹುಲ್ ಗಾಂಧಿ ಅವರ ಅಲ್ಲವಾದರೆ ಬೇರೆ ಯಾರು?’ ಎಂಬ ದೊಡ್ಡ ಹೊಯ್ದಾಟದಲ್ಲಿ ಪಕ್ಷ ಸಿಲುಕಿದೆ ಎಂದು ವರದಿಗಳು ಹೇಳಿದವು.  ಕಾಂಗ್ರೆಸ್ ಪಕ್ಷವು ನಿರಂತರವಾಗಿ ನಾಯಕತ್ವಕ್ಕಾಗಿ ನೆಹರೂ-ಗಾಂಧಿ ಕುಟುಂಬವನ್ನು ನೆಚ್ಚಿಕೊಂಡಿದ್ದು, ಅದರಾಚೆಗೆ ನೋಡಿದ್ದೇ ಅಪರೂಪ. ಫಲಿತಾಂಶದ ದಿನವೇ ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡಿದ್ದ ರಾಹುಲ್ ಗಾಂಧಿಯವರು ತಾವು ಸೋಲಿಗೆ ಪ್ರತಿಶತ ೧೦೦ರಷ್ಟು ಹೊಣೆ ಹೊರುವುದಾಗಿ ಹೇಳಿದ್ದರು. ಕುಟುಂಬವು ನಾಲ್ಕು ದಶಕಗಳಿಂದ ಹೊಂದಿದ್ದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರು ಪರಾಭವ ಅನುಭವಿಸಿದ್ದು, ಕಾಂಗ್ರೆಸ್ ಅಧ್ಯಕ್ಷರ ಪಾಲಿಗೆ ನುಂಗಲಾಗದ ತುತ್ತಾಗಿದೆ. ೨೦೧೪ರ ಚುನಾವಣೆಯಲ್ಲಿ ರಾಹುಲ್ ಕೈಯಲ್ಲಿ ಸೋಲು ಅನುಭವಿಸಿದ್ದ  ಬಿಜೆಪಿಯ ಸ್ಮೃತಿ ಇರಾನಿ ಅವರು ನೆಹರೂ -ಗಾಂಧಿ ಕೋಟೆಯಿಂದ ರಾಹುಲ್ ಗಾಂಧಿಯವರನ್ನು ಹೊರತಳ್ಳಲು ಕೇವಲ ವರ್ಷಗಳನ್ನು ತೆಗೆದುಕೊಂಡರು. ಇದೀಗ ರಾಹುಲ್ ಅವರು ಕೇರಳದ ವಯನಾಡು ಕ್ಷೇತ್ರದ ವಿಜಯದ ಕಾರಣ ಸಂಸದರಾಗಿ ಮುಂದುವರೆಯಲು ಸಾಧ್ಯವಾಗಿದೆ. ಚುನಾವಣಾ ಚಿತ್ರ ಸ್ಪಷ್ಟವಾಗುತ್ತಿದ್ದಂತೆಯೇ ರಾಹುಲ್ ಗಾಂಧಿಯವರು ರಾಜೀನಾಮೆಯ ಇಂಗಿತ ವ್ಯಕ್ತ ಪಡಿಸಿದ್ದರು.ಆದರೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಜೀನಾಮೆ ಕೊಡುಗೆಯನ್ನು ತಿರಸ್ಕರಿಸಿ ಪ್ರಸ್ತಾಪವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಬಹುದು ಎಂದು ಹೇಳಿದ್ದರು ಎಂದು ವರದಿಗಳು ತಿಳಿಸಿದವು.

2019: ನವದೆಹಲಿ/ ಕೋಲ್ಕತ: ಲೋಕಸಭಾ ಚುನಾವಣೆಯ ಫಲಿತಾಂಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದೆ, ಆದರೆ ಪಕ್ಷವು ಅದನ್ನು ತಿರಸ್ಕರಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  ಕೋಲ್ಕತದಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, ’ಚುನಾವಣಾ ಆಯೋಗವು ಚುನಾವಣೆಯಮ್ಯಾನ್ ಆಫ್ ದಿ ಮ್ಯಾಚ್ ಆಗಿದೆ. ನಾನು ಏನು ಮಾಡಲು ಸಾಧ್ಯ?’ ಎಂದು ಕೇಳಿದರು.  ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ಪಕ್ಷವು ಅದನ್ನು ತಿರಸ್ಕರಿಸಿತು ಎಂದು ಅವರು ನುಡಿದರು. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ರೆಕ್ಕೆಗಳಿಗೂ ಕ್ಲಿಪ್ ಹಾಕಿದ್ದಾರೆ. ಅವರ ಕೈಕೆಳಗೆ ಇದ್ದ ಎಲ್ಲ ಜಿಲ್ಲೆಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಬಿಜೆಪಿಯು ಗೆಲುವು ಸಾಧಿಸಿದ ಪುರುಲಿಯಾ ಮತ್ತು ಜಾರ್ಗ್ರಾಮ್ ಜಿಲ್ಲೆಗಳ ಉಸ್ತುವಾರಿ ಅಭಿಷೇಕ್ ಬ್ಯಾನರ್ಜಿ ಅವರ ಕೈಗಳಲ್ಲಿ ಇತ್ತು.  ‘ಕೇಂದ್ರೀಯ ಪಡೆಗಳು ಟಿಎಂಸಿ ವಿರುದ್ಧ ಕೆಲಸ ಮಾಡಿವೆ. ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಲಾಯಿತು. ಹಿಂದು - ಮುಸ್ಲಿಮರನ್ನು ವಿಭಜಿಸುವ ಮೂಲಕ ಅವರ ಮತಗಳನ್ನೂ ವಿಭಜಿಸಲಾಯಿತು. ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದೆವು. ಆದರೆ ಚುನಾವಣಾ ಆಯೋಗವು ಏನನ್ನೂ ಮಾಡಲಿಲ್ಲ ಎಂದು ಮಮತಾ ಪ್ರತಿಪಾದಿಸಿದರು. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ೩೪ ಸ್ಥಾನಗಳನ್ನು ಗೆದ್ದಿತ್ತು೨೦೧೪ರಲ್ಲಿ ಕೇವಲ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಬಾರಿ ೧೮ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಗಂಭೀರ ಪ್ರವೇಶ ಮಾಡಿ, ಟಿಎಂಸಿಗೆ ಆಘಾತ ನೀಡಿದೆ. ಎಡಪಕ್ಷಗಳು ಶೂನ್ಯ ಸಂಪಾದನೆ ಮಾಡಿವೆ. ಅವರು ತಮ್ಮ ಧ್ರುವೀಕರಣದ ಸೂತ್ರದಲ್ಲಿ ಯಶಸ್ವಿಯಾಗಿದ್ದಾರೆ. ಹಿಂದು - ಮುಸ್ಲಿಮ್ ವಿಭಜನೆ ಮಾಡುವಲ್ಲಿ ಅವರು ಸಫಲರಾಗಿದ್ದಾರೆ. ಯಾರಾದರೂ ನಂಬಲಿ ಅಥವಾ ಬಿಡಲಿ ಚುನಾವಣಾ ಆಯೋಗ ಕೂಡಾ ಬಿಜೆಪಿಗಾಗಿ ಕೆಲಸ ಮಾಡಿರುವುದು ನಿಜ ಎಂದು ಮಮತಾ ಹೇಳಿದರು. ಕೇಂದ್ರವು ರಾಜ್ಯದ ಆಡಳಿತವನ್ನು ಹೈಜಾಕ್ ಮಾಡಿದೆ ಎಂಬುದಾಗಿ ಆಪಾದಿಸಿದ ಮಮತಾ ಅವರು ತುರ್ತುಪರಿಸ್ಥಿಯನ್ನು ರಾಜ್ಯದಲ್ಲಿ ಸೃಷ್ಟಿಸಿದರು ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ೨೩ ಸ್ಥಾನಗಳನ್ನು ಗೆಲ್ಲಲಾಗದೇ ಇದ್ದುದಕ್ಕಾಗಿ ಕೇಸರಿ ಪಕ್ಷವನ್ನು ಲೇವಡಿ ಮಾಡಿದ ಮಮತಾಅವರು ಬಂಗಾಳದಲ್ಲಿ ೨೩ ಸ್ಥಾನಗಳಿಗೆ ಗುರಿ ಇಟ್ಟಿದ್ದರು. ಅವರು ಗುರಿ ಮುಟ್ಟಿದರೇ?’ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತ ತಂಡದ ಸದಸ್ಯರಾದ ಪಾರ್ಥ ಚಟರ್ಜಿ, ಅಭಿಷೇಕ್ ಬ್ಯಾನರ್ಜಿ, ಅಮಿತ್ ಮಿತ್ರ, ದಿನೇಶ್ ತ್ರಿವೇದಿ, ಸುದೀಪ್ ಬಂದೋಪಾಧ್ಯಾಯ, ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್ ಮತ್ತು ಸುಪ್ರತಾ ಬಕ್ಷಿ ಹಾಜರಿದ್ದರು


2018: ಬೆಂಗಳೂರು: ಜೆಡಿ(ಎಸ್)- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಮೇ  23ರ ಬುಧವಾರ ಅಧಿಕಾರ ವಹಿಸಿಕೊಂಡ ಎಚ್ ಡಿ ಕುಮಾರಸ್ವಾಮಿ ಅವರು ಈದಿನ ವಿಧಾನಸಭೆಯಲ್ಲಿ ನಡೆದ ಸುದೀರ್ಘ ಭಾಷಣದ ಬಳಿಕ ಬಿಜೆಪಿಯ ಸಭಾತ್ಯಾಗದ ಮಧ್ಯೆ ಧ್ವನಿ ಮತದ ಮೂಲಕ ಬಹುಮತ ಸಾಬೀತು ಪಡಿಸಿದರು. ಕುಮಾರ ಸ್ವಾಮಿ ಅವರು ವಿಶ್ವಾಸ ಮತ ಯಾಚನೆಯ ಪ್ರಸ್ತಾಪ ಮುಂದಿಟ್ಟು ಸುದೀಘ ಭಾಷಣ ಮಾಡಿದ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಜನತಾಳ (ಎಸ್)- ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಯನ್ನು ಕಟುವಾಗಿ ಟೀಕಿಸಿ, ೨೪ ಗಂಟೆಗಳ ಒಳಗಾಗಿ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ ರೈತ ಸಾಲ ಮನ್ನಾ ಮಾಡದೇ ಇದ್ದಲ್ಲಿ  ಮೇ 28ರ ಸೋಮವಾರ ಕರ್ನಾಟಕ ಬಂದ್ ನಡೆಸುವುದಾಗಿ ಘೋಷಿಸಿ, ಪಕ್ಷ ಸದಸ್ಯರ ಜೊತೆಗೆ ಸಭಾತ್ಯಾಗ ಮಾಡಿದರು.  ದೇವೇಗೌಡ ಕುಟುಂಬದ ಬಗ್ಗೆ ಸಾಕಷ್ಟು ಭ್ರಷ್ಟಾಚಾರ ಆರೋಪಗಳಿವೆ ಎಂದು ಹೇಳಿದ ಬಿಜೆಪಿ ನಾಯಕ ’ಜೆಡಿ(ಎಸ್) ಈ ಹಿಂದೆ ಬಿಜೆಪಿಗೆ ವಿಶ್ವಾಸದ್ರೋಹ ಮಾಡಿದೆ. ಕಾಂಗ್ರೆಸ್ಸಿಗೂ ಅದನ್ನೇ ಮಾಡಲಿದೆ ಎಂದು ಎಚ್ಚರಿಸಿ ತಮ್ಮ ಸದಸ್ಯರ ಜೊತೆಗೆ ಸದನದಿಂದ ಹೊರನಡೆದರು.  ಬಿಜೆಪಿ ಸದಸ್ಯರ ಸಭಾತ್ಯಾಗದ ಬಳಿಕ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು ವಿಶ್ವಾಸ ಮತ ಪ್ರಸ್ತಾಪವನ್ನು ಧ್ವನಿಮತಕ್ಕೆ ಹಾಕಿದರು.  ಸದನದಲ್ಲಿ ಹಾಜರಿದ್ದ ಶಾಸಕರಿಗೆ ಪ್ರಸ್ತಾಪದ ಪರ ಇರುವವರು ಹೌದು ಎಂದು ಸೂಚಿಸಬೇಕು ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದಾಗ, ಸದನದಲ್ಲಿ ಇದ್ದ ಜನತಾದಳ (ಎಸ್), ಕಾಂಗ್ರೆಸ್ ಪಕ್ಷ,  ಬಿಎಸ್ ಪಿ, ಕೆಪಿಜೆಪಿ ಮತ್ತು ಒಬ್ಬ ಪಕ್ಷೇತರ ಸದಸ್ಯ ಸೇರಿದಂತೆ ೧೧೬ ಶಾಸಕರುಹೌದು ಎಂದು ಹೇಳಿ ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತ ಪಡಿಸಿದರು.  ‘ಪ್ರಸ್ತಾಪ ಅಂಗೀಕಾರಗೊಂಡಿದ್ದು, ಬಹುಮತ ಸಾಬೀತಾಗಿದೆ ಎಂದು ಘೋಷಿಸಿದ ಸಭಾಧ್ಯಕ್ಷರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಸಭಾಧ್ಯಕ್ಷರಾಗಿ ರಮೇಶ್ ಕುಮಾರ್: ಇದಕ್ಕೆ ಮುನ್ನ ಬೆಳಗ್ಗೆ ಹಂಗಾಮೀ ಸಭಾಧ್ಯಕ್ಷ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ವಿಧಾನಸಭಾ ಕಲಾಪದಲ್ಲಿ ರಮೇಶ್ ಕುಮಾರ್ ಅವರು ಸಭಾಧ್ಯಕ್ಷರಾಗಿ ಆಗಿ ಅವಿರೋಧವಾಗಿ ಆಯ್ಕೆಯಾದರು. ಸಭಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ  ಬಿಜೆಪಿಯ ಸುರೇಶ್ ಕುಮಾರ್ ಅವರು ಬಳಿಕ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು. ಸಭಾಧ್ಯಕ್ಷರಾಗಿ ಆಯ್ಕೆಯಾದ ರಮೇಶ ಕುಮಾರ್ ಅವರನ್ನು ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ವಿಪಕ್ಷ ನಾಯಕ ಯಡಿಯೂರಪ್ಪ ಪೀಠಕ್ಕೆ ಕರೆತಂದರು. ಬಳಿಕ ರಮೇಶ್ ಕುಮಾರ್ ಸಭಾಧ್ಯಕ್ಷತೆಯಲ್ಲಿ ಕಲಾಪ ಮುಂದುವರೆಯಿತು. ಕುಮಾರ ಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮುಖಂಡರು ರಮೇಶ್ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು. ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತಿಗೆ ಮುನ್ನ ರಾಜೀನಾಮೆ ನೀಡಿದ ಬಳಿಕ ಜನತಾದಳ(ಎಸ್)- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರು ಪ್ರಮಾಣವಚನ ಸ್ವೀಕರಿಸಿದ್ದರು. ಪ್ರಮಾಣವಚನ ಸ್ವೀಕಾರದ ಬಳಿಕ ೨೪ ಗಂಟೆಗಳ ಒಳಗಾಗಿ ಬಹುಮತ ಸಾಬೀತು ಪಡಿಸುವುದಾಗಿ ಹೇಳಿದ್ದ ಕುಮಾರ ಸ್ವಾಮಿ ಅವರು ಈದಿನ ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಸುವುದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ಜೆಡಿ(ಎಸ್) ನಾಯಕ ಮುಖ್ಯಮಂತ್ರಿಯಾಗಿ ಐದು ವರ್ಷ ಮುಂದುವರೆಯುವ ಬಗ್ಗೆ ಮಾತುಕತೆ ನಡೆದಿಲ್ಲ ಎಂದು ಹೇಳುವ ಮೂಲಕ ಮೈತ್ರಿಯಲ್ಲಿ ಆರಂಭಿಕ ಬಿರುಕಿನ ಸೂಚನೆ ಕಾಣಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರು ’ಕುಮಾರಸ್ವಾಮಿ ಅವರಿಗೆ ೫ ವರ್ಷ ಅಥವಾ ೨ ವರ್ಷಗಳ ಅಧಿಕಾರಾವಧಿಯೇ ಎಂಬ ಬಗ್ಗೆ ಪಕ್ಷದ ವರಿಷ್ಠ ಮಂಡಳಿ ನಿರ್ಧರಿಸುವುದು ಎಂದು ಹೇಳಿದ್ದರು.  ನಾಟಕದ ಸಂಭಾಷಣೆ: ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಸದನವನ್ನು ಉದ್ದೇಶಿಸಿ ಯಡಿಯೂರಪ್ಪ ಮಾತುಗಳಿಗೆ ಉತ್ತರಿಸಿದ ಕುಮಾರಸ್ವಾಮಿ ಅವರು ’ನಾನು ಯಡಿಯೂರಪ್ಪ ಅವರ ಭಾಷಣವನ್ನು ಅತ್ಯಂತ ಎಚ್ಚರಿಕೆಯಿಂದ ಆಲಿಸಿದ್ದೇನೆ. ಅವರು ಸದನಕ್ಕೆ ತಪ್ಪು ಮಾಹಿತಿಯನ್ನೂ ನೀಡಿದ್ದಾರೆ. ಅವಿನಯದ ಮಾತುಗಳನ್ನು ಆಡಿದ್ದಾರೆ. ನಾನು ಇಂತಹ ವೈಯಕ್ತಿಕ ದಾಳಿಗಳನ್ನು ಮಾಡುವುದಿಲ್ಲ. ಅವರ ಮಾತುಗಳನ್ನು ಕೇಳಿದ ಬಳಿಕ, ಜನರು ಬಿಜೆಪಿಗೆ ಅಧಿಕಾರವನ್ನು ನೀಡುವುದಿಲ್ಲ ಎಂದು ನನಗೆ ಅನ್ನಿಸುತ್ತದೆ. ಅವರ ಭಾಷಣ ಯಾವುದೋ ನಾಟಕ ಕಂಪೆನಿಗಾಗಿ ಪೂರ್ವಾಭ್ಯಾಸ (ರಿಹರ್ಸಲ್) ಮಾಡಿದಂತಿದೆ ಎಂದು ಕುಮಾರಸ್ವಾಮಿ ಹೇಳಿದರು.  ಬಿಜೆಪಿ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರು ೨೪ ಗಂಟೆಗಳ ಒಳಗೆ ಭ್ರಷ್ಟಾಚಾರದ ಆರೋಪದಲ್ಲಿ ಸೆರೆಮನೆಯಲ್ಲಿ ಇರುತ್ತಾರೆ ಎಂಬುದಾಗಿ ಪ್ರಕಾಶ ಜಾವಡೇಕರ್ ಹೇಳಿದ್ದ ಬಗೆಗಿನ ಪತ್ರಿಕಾ ವರದಿಯನ್ನು ಉಲ್ಲೇಖಿಸಿದ ಕುಮಾರ ಸ್ವಾಮಿ ’ಇದೇ ವ್ಯಕ್ತಿಗಳು ಈಗ ನನ್ನ ಕುಟುಂಬಕ್ಕೆ ಮಸಿ ಬಳಿಯುತ್ತಿದ್ದಾರೆ ಮತ್ತು ಕಾಂಗ್ರೆಸ್ಸಿಗೆ ನಮ್ಮನ್ನು ಬೆಂಬಲಿಸಬೇಡಿ ಎನ್ನುತ್ತಿದ್ದಾರೆ. ನನಗೆ ಅವರೆಷ್ಟು ಕಿರುಕುಳ ನೀಡಿದ್ದಾರೆ ಎಂಬುದನ್ನು ತಿಳಿಯಲು ಬಿಜೆಪಿಯ ಪ್ರಚೋದನೆಯಿಂದ ದೆಹಲಿಯ ಅಧಿಕಾರಿಗಳಿಂದ ಬಂದ ಕರೆದಾಖಲೆಗಳನ್ನು ನೋಡಿ ಎಂದು ಮುಖ್ಯಮಂತ್ರಿ ಹೇಳಿದರು.  ‘ಇಲ್ಲಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ ದೆಹಲಿಯಲ್ಲಿನ ಜನ ಯಡಿಯೂರಪ್ಪ ಅವರನ್ನು ಗುರುತಿಸುವುದು ಕೂಡಾ ಇಲ್ಲ ಎಂಬುದು ಅವರಿಗೆ ಗೊತ್ತಿದೆಯೇ?’ ಎಂದು ಕುಮಾರ ಸ್ವಾಮಿ ಕೇಳಿದರು. ‘ನಾನು ಮಲೇಷ್ಯಾದಲ್ಲಿ ಕಂಪೆನಿಯೊಂದರ ಜೊತೆಗೆ ಉದ್ಯಮ ಸ್ಥಾಪಿಸಿದ್ದು ಅಲ್ಲಿ ಹಣ ಮಾಡುತ್ತಿದ್ದೇನೆ ಎಂಬ ಸುಳ್ಳು ದಾಖಲೆಯನ್ನು ಕೇಂದ್ರವು ಈಗಾಗಲೇ ಸೃಷ್ಟಿಸಿದೆ. ಆದರೆ ಇಂತಹ ಬೆದರಿಕೆಗಳಿಗೆಲ್ಲ ನಾನು ತಲೆಬಾಗವುದಿಲ್ಲ ಎಂದು ಅವರು ನುಡಿದರು.  ’ನಾನು ಕೇವಲ ಓಡಿಗಾಗಿ ಯೋಜನೆಗಳನ್ನು ಪ್ರಕಟಿಸುವುದಿಲ್ಲ. ಸಿದ್ದರಾಮಯ್ಯ ನನ್ನ ಜೊತೆಗಿದ್ದಾರೆ, ರಾಜ್ಯದ ಹಣಕಾಸನ್ನು ಹೇಗೆ ಹೊಂದಿಸಬೇಕು ಎಂದು ಅವರಿಗೆ ಗೊತ್ತಿದೆ  ಎಂದು ನುಡಿದ ಕುಮಾರ ಸ್ವಾಮಿ ’ಯಡಿಯೂರಪ್ಪ ಅವರು ವಿಪಕ್ಷ ನಾಯಕನ ವರ್ಚಸ್ಸು ಕುಂದಿಸುವಂತಹ ಮಾತುಗಳನ್ನು ಆಡಿದ್ದಾರೆ. ತಮ್ಮ ರಾಜಕೀಯದ ಭವಿಷ್ಯ ಮಸುಕುತ್ತಿರುವುದು ಅವರಿಗೆ ತಿಳಿದಿದೆಯೇ ಎಂಬುದನ್ನು ನಾನು ಅರಿಯೆ. ನಾನು ಹಲವಾರು ನಾಯಕರನ್ನು ನೋಡಿದ್ದೇನೆ. ಆದರೆ ವಿಪಕ್ಷ ನಾಯಕನ ಹುದ್ದೆಯ ಗೌರವ ಕುಂದಿಸುವ ಈ ಮಾದರಿಯ ಭಾಷಣಗಳನ್ನು ಕೇಳಿಲ್ಲಎಂದೂ ಮುಖ್ಯಮಂತ್ರಿ ಚುಚ್ಚಿದರು. ಯಡಿಯೂರಪ್ಪ ವಾಗ್ದಾಳಿ: ಇದಕ್ಕೆ ಮುನ್ನ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ ’ಸ್ವತಂತ್ರ ಭಾರತದಲ್ಲಿ ಯಾರಾದರೂ ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡದೇ ಇದ್ದಲ್ಲಿ ಸಾಯುವುದಾಗಿ ಹೇಳಿದ್ದು ಇದೆಯೇ? ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನು ತಾನು ಏಕೆ ಇಟ್ಟುಕೊಳ್ಳಲಿಲ್ಲ? ಚುನಾವಣಾ ಫಲಿತಾಂಶ ಪೂರ್ತಿಯಾಗಿ ಬರುವುದಕ್ಕೆ ಮುನ್ನವೇ ಸಮಿಶ್ರ ಸರ್ಕಾರದ ಮಾತುಗಳು ಶುರುವಾಗಿದ್ದವು ಎಂದು ಟೀಕಿಸಿದರು.  ‘ಚುನಾವಣೆಯ ಬಳಿಕ ಯಾರು ಯಾರು ನನ್ನನ್ನು ಸಂಪರ್ಕಿಸಿದ್ದರು ಎಂದು ನಾನು ಚರ್ಚಿಸವುದಿಲ್ಲ. ಭ್ರಷ್ಟ ಅಪ್ಪ-ಮಕ್ಕಳು ಅಧಿಕಾರಕ್ಕೆ ಬರದಂತೆ ತಡೆಯುವ ಸಲುವಾಗಿ ನಾನು ಕೆಲವರನ್ನು ಸಂಪರ್ಕಿಸಿದ್ದೆ ಎಂಬುದು ನಿಜ. ಈ ಸಮ್ಮಿಶ್ರ ಕೂಟ ರಚನೆಗೆ ಏಕೈಕ ಕಾರಣ ಬಿಜೆಪಿಗೆ ಸರ್ಕಾರ ರಚನೆಯ ಅವಕಾಶವನ್ನು ನಿರಾಕರಿಸುವುದಾಗಿತ್ತು ಎಂದು ಯಡಿಯೂರಪ್ಪ ಹೇಳಿದರು.  ‘ಅಪವಿತ್ರ ಮೈತ್ರಿಯ ಬಗ್ಗೆ ಯೋಚನೆ ಮಾಡಿ ಎಂದು ಕಾಂಗ್ರೆಸ್ ಶಾಸಕರನ್ನು ಆಗ್ರಹಿಸಿದ ಬಿಜೆಪಿ ನಾಯಕ, ಜನತಾದಳ (ಎಸ್) ಜೊತೆ ಕೈಜೋಡಿಸಿದ್ದಕ್ಕಾಗಿ ಜನರು ಕಾಂಗ್ರೆಸ್ಸನ್ನು ನೋಡಿ ನಗುತ್ತಿದ್ದಾರೆ. ಬಿಜೆಪಿಯ ಬಗ್ಗೆ ಚಿಂತಿಸುವುದು ಬಿಟ್ಟು ನಿಮ್ಮ ಪಕ್ಷದ ಭವಿಷ್ಯದ ಬಗ್ಗೆ ಯೋಚಿಸಿ ಎಂದು ಯಡಿಯೂರಪ್ಪ ಹೇಳಿದರು.  ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದೂ ಹೇಳಿದ ಅವರು ’ಅಲ್ಲಿದ್ದುಕೊಂಡು ನೀವು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತೀರಾ?’ ಎಂದು ಡಿಕೆ ಶಿವಕುಮಾರ್ ಅವರನ್ನೂ ಕೆಣಕಿದರು.  ‘ರೈತರ ೫೩,೦೦೦ ಕೋಟಿ ರೂ. ಸಾಲಮನ್ನಾ,  ಹಿರಿಯ ನಾಗರಿಕರಿಗೆ ಮಾಸಿಕ ೬೦೦೦ ರೂ.ಗಳ ಮಾಸಾಶನ, ಗರ್ಭಿಣಿ ತಾಯಂದಿರಿಗೆ ಮಾಸಿಕ ತಲಾ ೬೦೦೦ ರೂ., ಮಹಿಳಾ ಸ್ವ ಸಹಾಯ ಸಮೂಹಗಳ ಸಾಲಮನ್ನಾ ಘೋಷಿಸಿದ್ದಿರಿ. ಅದನ್ನು ಸ್ವಾಗತಿಸುತ್ತೇವೆ. ಆದರೆ ರೈತರ ಸಂಪೂರ್ಣ ಸಾಲಮನ್ನಾವನ್ನು ಮಾಡಿದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಇಲ್ಲದೇ ಇದ್ದಲ್ಲಿ ಸೋಮವಾರ ಕರ್ನಾಟಕ ಬಂದ್ ನಡೆಸುತ್ತೇವೆ ಮತ್ತು ಜನತಾದಳ (ಎಸ್)ಗೆ ಪಾಠ ಕಲಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.  ಕುಮಾರ ಸ್ವಾಮಿ ಅವರು ೨೦೦೬ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದು ತಂದೆ ದೇವೇಗೌಡರಿಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ’೨೦೦೬-೨೦೦೮ರ ಅವಧಿಯಲ್ಲಿನ ೨೦ ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರ ಸ್ವಾಮಿ ಅವರಿಗೆ ನಾನು ಸಂಪೂರ್ಣ ಬೆಂಬಲ ನೀಡಿದ್ದೆ. ಅವರನ್ನು ಯಾವ ವಿಷಯಕ್ಕೂ ಪ್ರಶ್ನಿಸಿರಲಿಲ್ಲ. ಆದರೆ ನಾನು ಮುಖ್ಯಮಂತ್ರಿ ಆಗಬೇಕಾದ ಸಂದರ್ಭ ಬಂದಾಗ ಅಪ್ಪ ಮಕ್ಕಳು ರಾಜಕೀಯ ಶುರು ಮಾಡಿದರು. ಈಗ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದಕ್ಕಾಗಿ ಜನರ ಕ್ಷಮೆ ಯಾಚಿಸುವುದಾಗಿ ಹೇಳುತ್ತಿದ್ದಾರೆ. ೨೦೦೬ರಲ್ಲಿ ಅವರನ್ನು ಬೆಂಬಲಿಸಿ ದೊಡ್ಡ ಅಪರಾಧ ಎಸಗಿದೆ ಎಂದು ನಾನು ಈಗ ಹೇಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.  ‘ನಮ್ಮ ಬಳಿ ಒಪ್ಪಂದ ಇರಲಿಲ್ಲವೇ? ಅದರ ಬಗ್ಗೆ ಚರ್ಚೆ ನಡೆದಿರಲಿಲ್ಲವೇ? ಚರ್ಚೆಯಲ್ಲಿ ಬಿಜೆಪಿ ಮತ್ತು ಜೆಡಿ(ಎಸ್) ನಾಯಕರು ಇರಲಿಲ್ಲವೇ? ರಾಜ್ಯದ ಜನತೆ ಇದನ್ನು ನೋಡಿದ್ದಾರೆ. ನಾನು ಎರಡು ವರ್ಷಗಳಲ್ಲಿ ರಾಜ್ಯವನ್ನು ಮೂರು ಬಾರಿ ಪ್ರವಾಸ ಮಾಡಿ ವಿಷಯಗಳನ್ನು ಅರಿತಿದ್ದೇನೆ. ಜನ ಯಾರನ್ನು ತಿರಸ್ಕರಿಸಿದ್ದಾರೆ? ಅವರು ಜನತಾದಳ(ಎಸ್)ಗೆ ಜನಾದೇಶ ಕೊಟ್ಟಿದ್ದಾರೆಯೇ ಅಥವಾ ಕಾಂಗ್ರೆಸ್ಸಿಗೆ ಕೊಟ್ಟಿದ್ದಾರೆಯೇ? ಸಿದ್ದರಾಮಯ್ಯನವರೇ ಜೆಡಿಎಸ್ ನಿಮ್ಮ ವಿರುದ್ಧ ಜಿ.ಟಿ. ದೇವೇಗೌಡರನ್ನು ನಿಲ್ಲಿಸಿ ನೀವು ಸೋಲುವಂತೆ ಮಾಡಿ ನಿಮ್ಮನ್ನು ಅವಮಾನಿಸಿತು. ಇದು ಸತ್ಯವಲ್ಲವೇನು? ಎಂದು ಯಡಿಯೂರಪ್ಪ ಸಿದ್ದರಾಮಯ್ಯ ಅವರನ್ನೂ ಕೆಣಕಿದರು. ಮಾತಿನ ಮಧ್ಯೆ ಕೆಲವು ಶಾಸಕರು ಗೊಣಗಾಟ ಶುರುಮಾಡಿದರು. ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಚರ್ಚೆಗೆ ಗೌರವ ಕೊಟ್ಟು ಯಡಿಯೂರಪ್ಪ ಮಾತುಗಳಲ್ಲಿ ಅಲಿಸಿ ಎಂದು ಶಾಸಕರಿಗೆ ಸೂಚಿಸಿದರು. ‘ಜೆಡಿ(ಎಸ್) ಒಪ್ಪಂದವನ್ನು ಅಗೌರವಿಸಿತು ಎಂದು ಹೇಳಿದ ಯಡಿಯೂರಪ್ಪ ಡಿಕೆ. ಶಿವಕುಮಾರ್ ಅವರತ್ತ ತಿರುಗಿ ’ಶಾಸಕರನ್ನು ರಕ್ಷಿಸಿ ನಂಬಿಕೆಗೆ ಅನರ್ಹರಾದ ವ್ಯಕ್ತಿಯ ಮೇಲೆ ವಿಶ್ವಾಸ ಇಟ್ಟದ್ದಕ್ಕಾಗಿ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ. ಜೆಡಿಎಸ್ ೧೨೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ. ೧೬ ಜಿಲ್ಲೆಗಳಲ್ಲೂ ಗೆದ್ದಿಲ್ಲ. ನೀವು ಎಲ್ಲರೂ ಗುಂಪುಕಟ್ಟಿಕೊಂಡು ಜೆಡಿ(ಎಸ್) ನಾಯಕನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ. ಮೋದಿಯವರು ಬಿಜೆಪಿ ಮಾತ್ರವೇ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿರಲಿಲ್ಲ. ಈ ರೀತಿ ಸುಳ್ಳು ಪ್ರಚಾರ ಮಾಡುವ ಅಗತ್ಯವಿಲ್ಲ. ನೀವು ಮುಳುಗುವ ದೋಣಿ ಹತ್ತಿರುವುದಕ್ಕೆ ನನ್ನ ಆಕ್ಷೇಪವೇನೂ ಇಲ್ಲ ಎಂದು ಯಡಿಯೂರಪ್ಪ ಹೇಳಿದರು. ಯಡಿಯೂರಪ್ಪ ವಿರೋಧಿ ನಾಯಕ: ಇದಕ್ಕೂ ಮುನ್ನ ಸಭಾಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಕುಮಾರ್ ಅವರು ಯಡಿಯೂರಪ್ಪ ಅವರನ್ನು ವಿರೋಧ ಪಕ್ಷದ ನಾಯಕರಾಗಿಯೂ, ಗೋವಿಂದ ಕಾರಜೋಳ ಅವರನ್ನು ವಿರೋಧ ಪಕ್ಷದ ಉಪ ನಾಯಕನಾಗಿಯೂ ಮಾನ್ಯತೆ ನೀಡಲಾಗಿದೆ ಎಂದು ಪ್ರಕಟಿಸಿದರು.

2018: ನವದೆಹಲಿ: ಪತಿ ದೀಪಕ್ ಕೊಚ್ಚರ್ ಅವರಿಗೆ ಸಂಪರ್ಕ ಇರುವ ವಿಡಿಯೋಕೋನ್ ಸಮೂಹ ಮತ್ತು ನುಪವರ್ ಸಮೂಹದ ಜೊತೆಗಿನ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಆಡಳಿತ ನಿರ್ದೇಶಕಿ ಚಂದಾ ಕೊಚ್ಚರ್ ಅವರಿಗೆ ಭಾರತೀಯ ಭದ್ರತೆ ಮತ್ತು ವಿನಿಯಮಯ ಮಂಡಳಿ (ಸೆಬಿ) ನೋಟಿಸ್ ಜಾರಿ ಮಾಡಿತು. ಸೆಬಿ ನೋಟಿಸಿಗೆ ಸೂಕ್ತ ಪ್ರತಿಕ್ರಿಯೆಯನ್ನು ಸಲ್ಲಿಸಲಾಗುವುದು ಎಂದು ಐಸಿಐಸಿಐ ಬ್ಯಾಂಕ್ ಶೇರು ವಿನಿಮಯಕ್ಕೆ ಸಲ್ಲಿಸಿದ ತನ್ನ ಪತ್ರದಲ್ಲಿ ತಿಳಿಸಿತು. ಐಸಿಐಸಿಐ ಬ್ಯಾಂಕ್ ೨೦೧೨ರಲ್ಲಿ ವಿಡಿಯೋಕೋನ್ ಗೆ ನೀಡಿದ ೩,೨೫೦ ಕೋಟಿ ರೂಪಾಯಿ ಸಾಲ ಮತ್ತು ಈ ವ್ಯವಹಾರದಲ್ಲಿ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಅವರ ಸಂಭಾವ್ಯ ಪಾತ್ರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆ ಆರಂಭಿಸಿತ್ತು. ವಿಡಿಯೋಕೋನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರು ಐಸಿಐಸಿಐ ಸೇರಿದಂತೆ ಬ್ಯಾಂಕುಗಳ ಒಕ್ಕೂಟದಿಂದ ವಿಡಿಯೋಕೋನ್ ಸಾಲ ಪಡೆದ ಬಳಿಕ, ದೀಪಕ್ ಕೊಚ್ಚರ್ ಮಾಲೀಕತ್ವದ ನು ಪವರ್ ರಿನ್ಯೂವೇಬಲ್ಸ್ ನಲ್ಲಿ ೬೪ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು ಎಂದು ವರದಿಗಳು ಆಪಾದಿಸಿದ್ದವು. ‘ಆಡಳಿತ ನಿರ್ದೇಶಕರು ಮತ್ತು ಸಿಇಒ ಹಾಗೂ ಬ್ಯಾಂಕ್ ೨೦೧೮ರ ಮೇ ೨೪ರಂದು ಸೆಬಿಯಿಂದ ನೋಟೀಸನ್ನು ಪಡೆದಿವೆ. ಪರಿಣಾಮವಾಗಿ ಹಿಂದಿನ ಲಿಸ್ಟಿಂಗ್ ಒಪ್ಪಂದ ಮತ್ತು ಭಾರತೀಯ ಭದ್ರತೆಗಳು ಮತ್ತು ವಿನಿಯಯ ಮಂಡಳಿ ನಿಯಮಾವಳಿಗಳು ೨೦೧೫ ರ ಕೆಲವು ವಿಧಿಗಳ ಪಾಲನೆ ಮಾಡಿಲ್ಲವೆಂಬ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಬೇಕಾಗಿದೆ ಎಂದು ಬ್ಯಾಂಕ್ ತಿಳಿಸಿತು. ಸೆಬಿಯು ಬ್ಯಾಂಕ್ ಮತ್ತು ವಿಡಿಯೋಕೋನ್ ಸಮೂಹ ಮತ್ತು ನುಪವರ್ ನಡುವಣ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಾಡಿದ ಕೆಲವು ತನಿಖೆಗಳಿಗೆ ಬ್ಯಾಂಕ್ / ಅದರ ಆಡಳಿತ ನಿರ್ದೇಶಕರು ಮತ್ತು ಸಿಇಒ ನೀಡಿದ ಉತ್ತರಗಳಲ್ಲಿ ನೀಡಿದ ಮಾಹಿತಿಯನ್ನು ಅನುಸರಿಸಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ನೋಟಿಸ್ ತಿಳಿಸಿತು. ಕಳೆದ ತಿಂಗಳು ಐಸಿಐಸಿಐ ಬ್ಯಾಂಕ್ ಮಂಡಳಿಯು ಚಂದಾ ಕೊಚ್ಚರ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿ ವಿಡಿಯೋಕೋನ್ ಸಮೂಹಕ್ಕೆ ನೀಡಿದ ಸಾಲ ವ್ಯವಹಾರಕ್ಕೆ ಸಂಬಂಧಿಸಿದಂತೆ ಅವರ ಬಂದ ವರದಿಗಳು ಬುಡರಹಿತ ವದಂತಿಗಳು ಎಂದು ಹೇಳಿ ಚಂದಾ ಕೊಚ್ಚರ್ ಅವರಲ್ಲಿ ತನ್ನ ಪೂರ್ಣ ವಿಶ್ವಾಸವನ್ನು ವ್ಯಕ್ತ ಪಡಿಸಿತ್ತು.  ಮಂಡಳಿಯು ಬ್ಯಾಂಕಿನ ಆಂತರಿಕ ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ಪರಿಶೀಲಿಸಿದ್ದು, ಅದು ಸಾಕಷ್ಟು ಸದೃಢವಾಗಿದೆ ಎಂದು ಮನವರಿಕೆ ಮಾಡಿಕೊಂಡಿದೆ ಎಂದು ಹೇಳಿಕೆ ತಿಳಿಸಿತು. ವಿಡಿಯೋಕೋನ್ ಸಮೂಹಕ್ಕೆ ನೀಡಿದ ಸಾಲಕ್ಕೆ ಸಂಬಂಧಿಸಿದಂತೆ, ಇದು ಒಗ್ಗೂಡಿಸಲಾದ ಒಕ್ಕೂಟ ವ್ಯವಸ್ಥೆಯ ಭಾಗ ಎಂದು ಅದು ಹೇಳಿತ್ತು.  ‘ಈ ಒಕ್ಕೂಟಕ್ಕೆ ಐಸಿಐಸಿಐ ಬ್ಯಾಂಕ್ ಲೀಡ್ ಬ್ಯಾಂಕ್ ಅಲ್ಲ. ಒಕ್ಕೂಟಕ್ಕೆ ಬ್ಯಾಂಕ್ ತನ್ನ ಪಾಲಿನ ೩,೨೫೦ ಕೋಟಿ ರೂಪಾಯಿಗಳ ಸವಲತ್ತುಗಳನ್ನು ಮಂಜೂರು ಮಾಡಿದೆ ಅಷ್ಟೆ. ಇದು ೨೦೧೨ರ ಏಪ್ರಿಲ್ ನಲ್ಲಿನ ಒಟ್ಟು ಒಕ್ಕೂಟ ಸವಲತ್ತಿನ ಶೇಕಡಾ ೧೦ ಮಾತ್ರ ಎಂದು ಅದು ತಿಳಿಸಿತ್ತು. ನುಪವರ್ ರಿನ್ಯೂವೇಬಲ್ಸ್ ನ ಯಾವ ಹೂಡಿಕೆದಾರರು ಕೂಡಾ ಐಸಿಐಸಿಐ ಬ್ಯಾಂಕಿನ ಸಾಲಗಾರರಲ್ಲ ಎಂದೂ ಬ್ಯಾಂಕ್ ಸ್ಪಷ್ಟ ಪಡಿಸಿತ್ತು.

2018: ಲಕ್ನೋ: ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸುವಂತೆ ನೀಡಲಾದ ನೋಟಿಸುಗಳಿಗೆ ಮಾಯಾವತಿ, ಮುಲಾಯಂ ಸಿಂಗ್, ಅಖಿಲೇಶ ಯಾದವ್ ಸೇರಿದಂತೆ ಹಲವಾರು ಮಾಜಿ ಮುಖ್ಯಮಂತ್ರಿಗಳು ಅನಾಸಕ್ತಿ ವ್ಯಕ್ತ ಪಡಿಸಿದರು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ತೆರವುಗೊಳಿಸುವಂತೆ ಸೂಚಿಸಲಾಗಿರುವ ಸರ್ಕಾರಿ ಬಂಗ್ಲೆಯನ್ನು ೨೦೧೧ರಲ್ಲಿ ಕಾನ್ಶೀರಾಂ ಸ್ಮಾರಕವಾಗಿ ಪರಿವರ್ತಿಸಲಾಗಿದೆ ಎಂದು ಪಕ್ಷದ ನಿಯೋಗವೊಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿರುವ ಮನವಿಯೊಂದರಲ್ಲಿ ತಿಳಿಸಿತು. ಸದರಿ ಬಂಗಲೆಯಲ್ಲಿ ಮಾಯಾವತಿ ಅವರು ಇರುವುದು ಎರಡು ಕೊಠಡಿಗಳಲ್ಲಿ ಮಾತ್ರ. ಆದ್ದರಿಂದ ಆ ಕೊಠಡಿಗಳಲ್ಲಿ ಮುಂದುವರೆಯಲು ಮಾಯಾವತಿ ಅವರಿಗೆ ಅವಕಾಶ ನೀಡಬೇಕು ಎಂದು ನಿಯೋಗವು ಮುಖ್ಯಮಂತ್ರಿಯವರಿಗೆ ಮನವಿ ಮಾಡಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬಂಗಲೆಯನ್ನು ತೆರವುಗೊಳಿಸುವಂತೆ ಮಾಯಾವತಿ ಅವರಿಗೆ ನೋಟಿಸ್ ಜಾರಿಯಾದ ಬಳಿಕ ಮೇ ೨೧ರಂದು ಬಿಎಸ್ ಪಿಯು ಸರ್ಕಾರಿ ಬಂಗಲೆಯಲ್ಲಿ ’ಶ್ರೀ ಕಾನ್ಶೀರಾಮ್ ಜಿ ಯಾದ್ಗಾರ್ ವಿಶ್ರಮ ಸ್ಥಲ್ ಎಂಬ ಫಲಕವನ್ನು ತೂಗುಹಾಕಿತ್ತು. ವಾಸ್ತವ್ಯಕ್ಕಾಗಿ ಲಕ್ನೋದಲ್ಲಿ ಅಧಿಕೃತ ಬಂಗಲೆಗಳು ಮಂಜೂರಾದ ಆರು ಮಂದಿ ಮಾಜಿ ಮುಖ್ಯಮಂತ್ರಿಗಳಿಗೆ ಸುಪ್ರೀಂಕೋರ್ಟಿನ ಆದೇಶ ಅನ್ವಯಿಸುತ್ತದೆ. ಪಕ್ಷದ ರಾಷ್ಟ್ರೀಯ ನಾಯಕ ಸತೀಶ ಮಿಶ್ರ ನೇತೃತ್ವದ ಬಿಎಸ್ ಪಿ ನಿಯೋಗವು ’ತೆರವುಗೊಳಿಸುವಂತೆ ಮಾಯಾವತಿ ಅವರಿಗೆ ಸೂಚಿಸಲಾಗಿರುವ ೧೩ಎ ಮಾಲ್ ಅವೆನ್ಯೂ ಬಂಗಲೆಯನ್ನು ೨೦೧೧ರ ಜನವರಿ ೧೩ರ ಸಂಪುಟ ಸಭೆಯ ನಿರ್ಣಯದಂತೆ ಸ್ಮಾರಕವನ್ನಾಗಿ ಪರಿವರ್ತಿಸಲಾಗಿತ್ತು. ಮಾಯಾವತಿ ಅವರ ಹೆಸರಿನಲ್ಲಿ ಮಂಜೂರಾಗದೇ ಇರುವ ೧೩ಎ ಮಾಲ್ ಅವೆನ್ಯೂವನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.  ಆದರೆ ಲಾಲ್ ಬಹಾದುರ್ ಶಾಸ್ತ್ರಿ ಮಾರ್ಗದಲ್ಲಿನ ನಂ.೬ ಬಂಗಲೆಯನ್ನು ತೆರವುಗೊಳಿಸುವಂತೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಇದನ್ನು ಮಾಜಿ ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ಮಂಜೂರು ಮಾಡಲಾಗಿತ್ತು ಎಂದು ಅವರು ನುಡಿದರು. ಮಾಯಾವತಿ ಅವರು ೧೩ಎ, ಮಾಲ್ ಅವೆನ್ಯೂದಲ್ಲಿನ ಎರಡು ಕೊಠಡಿಗಳಲ್ಲಿ ಮಾತ್ರ ವಾಸವಾಗಿದ್ದಾರೆ. ಅವರು ಆವರಣವನ್ನು ತೆರವುಗೊಳಿಸಿದರೆ ಆ ಕೊಠಡಿಗಳು ಕೂಡಾ ಸ್ಮಾರಕದ ಭಾಗವಾಗುತ್ತವೆ. ಈ ಹಿನ್ನೆಲೆಯಲ್ಲಿ ಈ ಸಣ್ಣ ಭಾಗದಲ್ಲಿ ವಾಸವಿರಲು ಅವಕಾಶ ನೀಡಬೇಕು ಎಂದು ಪಕ್ಷವು ಮನವಿ ಮಾಡಿದೆ. ಬಂಗಲೆಯ ಉಳಿದ ಭಾಗಗಳಲ್ಲಿ ಗ್ರಂಥಾಲಯ, ಮುರಾಲ್, ವಿಗ್ರಹಗಳು ಮತ್ತು ಬಹುಜನ ಸಮಾಜ ಪಕ್ಷ ಸ್ಥಾಪಕನಿಗೆ ಸಂಬಂಧಿಸಿದ ಇತರ ವಸ್ತುಗಳಿವೆ ಎಂದು ಮಿಶ್ರ ಹೇಳಿದರು.  ಎರಡನೇ ಬಂಗಲೆ ತೆರವಿಗೆ ನೋಟಿಸ್ ನೀಡಿದರೆ ಅದನ್ನು ಪಾಲಿಸಲಾಗುವುದು ಎಂದು ಅವರು ನುಡಿದರು.  ‘೧೩ ಎ ಮಾಲ್ ಅವೆನ್ಯೂವನ್ನು ನಮ್ಮ ಅರಿವಿನ ಪ್ರಕಾರ ಮಾಯಾವತಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ಮಂಜೂರು ಮಾಡಲಾಗಿದೆ. ಆದರೆ ಅಲ್ಲಿ ಕಾನ್ಶೀರಾಮ್ ಜಿ ಅವರ ಹೆಸರಿನ ಫಲಕ ಬಂದಿರುವ ಕಾರಣ ನಾವು ದಾಖಲೆಗಳನ್ನು ಪರಿಶೀಲಿಸುತ್ತೇವೆ ಎಂದು ಎಸ್ಟೇಟ್ ಇಲಾಖೆಯ ಅಧಿಕಾರಿ ಹೇಳಿದರು.  ಸುಪ್ರೀಂಕೋರ್ಟ್ ಮೇ ೭ರಂದು ನೀಡಿದ ತೀರ್ಪಿನಲ್ಲಿ ’ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಅವಧಿ ಮುಗಿದ ಬಳಿಕ ಜನ ಸಾಮಾನ್ಯರಿಗೆ ಸಮಾನರಾಗುವುದರಿಂದ ಪದವಿಯಿಂದ ಕೆಳಗಿಳಿದ ಬಳಿಕ ಸರ್ಕಾರಿ ವಾಸ್ತವ್ಯವನ್ನು ಉಳಿಸಿಕೊಳ್ಳುವಂತಿಲ್ಲ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ಅನುಸರಿಸಿ, ಉತ್ತರ ಪ್ರದೇಶ ಸರ್ಕಾರವು ಮೇ ೧೭ರಂದು ನಾರಾಯಣ ದತ್ತ ತಿವಾರಿ, ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್, ಮಾಯಾವತಿ, ರಾಜನಾಥ್ ಸಿಂಗ್ ಮತ್ತು ಅಖಿಲೇಶ್ ಯಾದವ್ ಅವರಿಗೆ ಮಂಜೂರಾಗಿದ್ದ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸುವಂತೆ ನೋಟಿಸ್‌ಗಳನ್ನು ಕಳುಹಿಸಿತ್ತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಾಜಸ್ಥಾನ ರಾಜ್ಯಪಾಲ ಕಲ್ಯಾಣ ಸಿಂಗ್ ಅವರು ತೆರವುಗೊಳಿಸುವ ಇಂಗಿತ ನೀಡಿದ್ದರೂ, ಇತರರು ತೆರವುಗೊಳಿಸಲು ನಿರಾಸಕ್ತಿ ವ್ಯಕ್ತ ಪಡಿಸಿದ್ದರು. ಎನ್ ಡಿ ತಿವಾರಿ ಅವರ ಪತ್ನಿ, ತಮ್ಮ ಪತಿ ಬದುಕಿನ ಕೊನೆಯ ಹಂತದಲ್ಲಿ ಇರುವುದರಿಂದ ಇನ್ನಷ್ಟು ಸಮಯ ಕೋರಿದ್ದಾರೆ. ಉಜ್ವಲ ತಿವಾರಿ ಅವರು ಕನಿಷ್ಠ ಒಂದು ವರ್ಷ ಕಾಲಾವಕಾಶ ನೀಡುವಂತೆ ಕೋರಿದರು.  ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ಅವರು ತಮ್ಮ ಅಧಿಕೃತ ನಿವಾಸಗಳನ್ನು ತೆರವುಗೊಳಿಸಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ಕೋರಿ ಎಸ್ಟೇಟ್ ಇಲಾಖೆಗೆ ಪತ್ರಗಳನ್ನು ಬರೆದಿದ್ದರು. ಉಜ್ಜಲ ತಿವಾರಿ ಅವರು ಆದಿತ್ಯ ನಾಥ್ ಅವರಿಗೆ ಪತ್ರವೊಂದನ್ನು ಬರೆದು ತಮ್ಮ ಪತಿ ನವದೆಹಲಿಯ ಸಾಕೇತದಲ್ಲಿನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕಳೆದ ೮ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ತಮಗೆ ಮತ್ತು ಕುಟುಂಬಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಗೌರವ ಇರುವುದಾದರೂ, ತಿವಾರಿಯವರು ತಮ್ಮ ಬದುಕಿನ ಕೊನೆಯ ಹಂತದಲ್ಲಿ ಇರುವುದರಿಂದ ಯಾವ ಹೊತ್ತಿನಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ. ಬಂಗಲೆಯಲ್ಲಿ ’ಪಂಡಿತ ನಾರಾಯಣ ದತ್ತ ತಿವಾರಿ ಸರ್ವಜನ ವಿಕಾಸ ಫೌಂಡೇಶನ್ ಕೂಡಾ ಇದೆ ಎಂದು ಅವರು ತಿಳಿಸಿದ್ದರು. ಮಾಜಿ ಮುಖ್ಯಮಂತ್ರಿಯಾಗಿ ತಾವು ಹೊಂದಿರುವ ಭದ್ರತಾ ಭದ್ರತಾ ಸಿಬ್ಬಂದಿಗೆ ಅವಕಾಶ ಇರುವಂತಹ ಸೂಕ್ತ ಮನೆ ತಮ್ಮ ಬಳಿ ಇಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶ ಸಚಿವರು (ವೇತನಗಳು, ಭತ್ಯೆಗಳು, ಇತರ ಸವಲತ್ತುಗಳು) ಕಾಯ್ದೆ, ೧೯೮೧ಕ್ಕೆ ಹಿಂದಿನ ಅಖಿಲೇಶ್ ಯಾದವ್ ಸರ್ಕಾರವು ಮಾಡಿದ್ದ ತಿದ್ದುಪಡಿಗಳನ್ನು ಪ್ರಶ್ನಿಸಿ ಲೋಕಪ್ರಹರಿ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಈ ಆದೇಶವನ್ನು ನೀಡಿತ್ತು. ತಿದ್ದುಪಡಿಯು ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ಜೀವಮಾನ ಪೂರ್ತಿ ಸರ್ಕಾರಿ ಬಂಗಲೆಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸಿತ್ತು.

2018: ಟೊರಾಂಟೊ: ಕೆನಡಾದ ಮಿಸ್ಸಿಸ್ಸಾಗುವಾ ನಗರದಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದಕ್ಕೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ರೆಸ್ಟೋರೆಂಟ್ ಒಳಗೆ ಬಾಂಬ್ ಸ್ಫೋಟಿಸಿ ೧೫ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿ ಪರಾರಿಯಾದ ಘಟನೆ ಘಟಿಸಿತು.  ಸ್ಥಳೀಯ ಕಾಲಮಾನ ರಾತ್ರಿ ೧೦.೩೦ ಗಂಟೆಗೆ ಬಾಂಬೆ ಭೇಲ್ ರೆಸ್ಟೋರೆಂಟಿನಲ್ಲಿ ಸ್ಫೋಟ ಸಂಭವಿಸಿದೆ. ಗಾಯಗೊಂಡ ೧೫ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಪೈಕಿ ಮೂವರು ಸ್ಥಿತಿ ಚಿಂತಾಜನಕವಾಗಿದೆ ಎಂದು ಪೀಲ್ ರೀಜನಲ್ ಪಾರಾಮೆಡಿಕ್ ಸೊಸೈಟಿ ಟ್ವೀಟ್ ಮಾಡಿತು. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೂ ಟೊರಾಂಟೋದಲ್ಲಿನ ಭಾರತೀಯರ ಸಲುವಾಗಿ ತುರ್ತು ದೂರವಾಣಿ ನಂಬರನ್ನು ನೀಡಿದ್ದು, ತಾವು ಟೊರಾಂಟೋದಲ್ಲಿನ ರಾಜತಾಂತ್ರಿಕ ಕಚೇರಿ ಮತ್ತು ಭಾರತೀಯ ಹೈಕಮೀಷನ್ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದರು.  ‘ನಮ್ಮ ರಾಜತಾಂತ್ರಿಕ ಕಚೇರಿಗಳು ಹಗಲೂ ರಾತ್ರಿ ಕೆಲಸ ಮಾಡುತ್ತಿವೆ. ತುರ್ತು ದೂರವಾಣಿ ಸಂಖ್ಯೆ +೧-೬೪೭-೬೬೮-೪೧೦೮ ಎಂದು ಸುಷ್ಮಾ ಸ್ವರಾಜ್ ಹೇಳಿದರು.  ಇಬ್ಬರು ಪುರುಷ ಶಂಕಿತರು ರೆಟ್ಟೋರೆಂಟಿನಲ್ಲಿ ಬಾಂಬ್ ಸ್ಫೋಟದ ಬಳಿಕ ಪರಾರಿಯಾದರು ಎಂದು ಪೀಲ್ ರೀಜನಲ್ ಪೊಲೀಸರು ಟ್ವೀಟಿನಲ್ಲಿ ತಿಳಿಸಿದರು.  ಸುಧಾರಿತ ಸ್ಫೋಟಕ ಸಾಧನ ಬಳಸಿ ನಡೆಸಲಾಗಿರುವ ಸ್ಫೋಟದ ಹೊಣೆಗಾರಿಕೆಯನ್ನು ಈವರೆಗೆ ಯಾವುದೇ ಸಂಘಟನೆಯೂ ಹೊತ್ತುಕೊಂಡಿಲ್ಲ, ಸ್ಫೋಟದ ಉದ್ದೇಶವೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದರು.  ಶಂಕಿತ ವ್ಯಕ್ತಿಗಳು ರೆಸ್ಟೋರೆಂಟಿನ ಒಳಕ್ಕೆ ಬರುತ್ತಿದ್ದ ಫೊಟೋವನ್ನು ಪೊಲೀಸರು ಟ್ವಟ್ಟರಿನಲ್ಲಿ ಪ್ರಕಟಿಸಿದ್ದು ಅವರ ಪೈಕಿ ಒಬ್ಬನ ಕೈಯಲ್ಲಿ ಏನೋ ಒಂದು ವಸ್ತು ಇದ್ದುದು ಫೊಟೋದಲ್ಲಿ ಕಾಣುತ್ತಿದೆ.  ಶಂಕಿತರಲ್ಲಿ ಒಬ್ಬ ೨೦ರ ಹರೆಯವನಾಗಿದ್ದು, ಕಡು ನೀಲಿ ಬಣ್ಣದ ಜೀನ್ಸ್ ಧರಿಸಿದ್ದು, ಡಾಕ್ ಜಿಪ್-ಅಪ್ ಹೂಡಿಯನ್ನು ತಲೆಗೆ ಸುತ್ತಿಕೊಂಡಿದ್ದು ಮತ್ತು ಮುಖವನ್ನು ಕರಿವಸ್ತ್ರದಿಂದ ಮುಚ್ಚಿಕೊಂಡಿದ್ದ ಎಂದು ಪೊಲೀಸರು ಹೇಳಿದರು. ಎರಡನೇ ಶಂಕಿತ ವ್ಯಕ್ತಿ ತೆಳ್ಳಗಿನ ವ್ಯಕ್ತಿಯಾಗಿದ್ದು, ಮಾಸಿದ ನೀಲಿ ಬಣ್ಣದ ಜೀನ್ಸ್ ಮತ್ತು ಬೂದು ಬಣ್ಣದ ಟೀ ಶರ್ಟ್ ಧರಿಸಿದ್ದ, ಆತನೂ ಡಾರ್ಕ್ ಜಿಪ್ -ಅಪ್ ಹೂಡಿಯನ್ನು ತಲೆಯ ಮೇಲೆ ಹಾಕಿಕೊಂಡು ಮುಖವನ್ನು ಕಾಣದಂತೆ ಮುಚ್ಚಿಕೊಂಡಿದ್ದ ಎಂದು ಪೊಲೀಸರು ಹೇಳಿದರು. ಟೊರಾಂಟೋದಲ್ಲಿ ಮಧ್ಯಾಹ್ನ ಭೋಜನ ನಡೆಸುತ್ತಿದ್ದ ಜನರ ಮಧ್ಯೆ ಬಿಳಿಯ ಬಾಡಿಗೆ ವ್ಯಾನ್ ಒಂದನ್ನು ನುಗ್ಗಿಸಿ ೧೦ ಜನರನ್ನು ಕೊಂದು ೧೫ ಜನರನ್ನು ಗಾಯಗೊಳಿಸಿದ ಘಟನೆಯ ಒಂದು ತಿಂಗಳ ಬಳಿಕ ಈದಿನ ಮಿಸ್ಸಿಸ್ಸಾಗುವಾ ದಾಳಿ ನಡೆಯಿತು. ಮಿಸ್ಸಿಸ್ಸಾಗುವಾ ಕೆನಡಾ ೬ನೇ ದೊಡ್ಡ ನಗರವಾಗಿದ್ದು, ೭ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಟೊರೊಂಟೋದಿಂದ ಪಶ್ಚಿಮಕ್ಕೆ ೨೦ ಕಿಮೀ ದೂರದಲ್ಲಿ ಲೇಕ್ ಒಂಟಾರಿಯೋ ಸಮೀಪ ಈ ನಗರ ಇದೆ.
2009: ಅಪಾ ಶೆರ್ಪಾ (49) ಅವರು ಹತ್ತೊಂಬತ್ತು ಬಾರಿ ಮೌಂಟ್ ಎವೆರೆಸ್ಟ್‌ನ್ನು ಏರಿ ದಾಖಲೆ ನಿರ್ಮಿಸಿ ಸಂಭ್ರಮಿಸಿದರು.

2009: ಪಶ್ಚಿಮ ಬಂಗಾಳದ ಐದು ಜಿಲ್ಲೆಗಳು ಹಾಗೂ ಒರಿಸ್ಸಾದ ಕರಾವಳಿ ತೀರ ಪ್ರದೇಶಗಳಿಗೆ ಅಪ್ಪಳಿಸಿದ 'ಐಲಾ' ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿತು. ಒಂದು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾದರು. ಕೋಲ್ಕತ್ತ ನಗರಕ್ಕೆ ಅಪ್ಪಳಿಸಿದ ಚಂಡಮಾರುತ ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.. ಬಸ್, ರೈಲು ಹಾಗೂ ವಿಮಾನ ಸಂಚಾರದಲ್ಲಿ ಏರುಪೇರಾಯಿತು.

2009: ಸತ್ಯಂ ಕಂಪ್ಯೂಟರ್ ಕಂಪೆನಿಯ ಹೊರ ಗುತ್ತಿಗೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಉನ್ನತ ಮಟ್ಟದ ಅಧಿಕಾರಿಗಳು ರಾಜೀನಾಮೆ ನೀಡಿದರು. ಈ ಮೂಲಕ ಕಂಪೆನಿಯ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡುವ ಪ್ರಕ್ರಿಯೆ ಆರಂಭವಾಯಿತೇ ಎಂಬ ಶಂಕೆ ಹುಟ್ಟುಕೊಂಡಿತು. ಆದರೆ ಕಂಪೆನಿ ಈ ಶಂಕೆಯನ್ನು ತಳ್ಳಿಹಾಕಿತು. 'ಈ ಅಧಿಕಾರಿಗಳು ರಾಜೀನಾಮೆ ಪತ್ರವನ್ನು ಒಂದೆರಡು ತಿಂಗಳು ಹಿಂದೆಯೇ ನೀಡಿದ್ದರು' ಎಂದು ಕಂಪೆನಿ ಹೇಳಿತು. ಬಿಪಿಒ ವಿಭಾಗದ ಗ್ಲೋಬಲ್ ಮುಖ್ಯಸ್ಥ (ಎಚ್‌ಆರ್) ನರೇಶ್ ಜಂಗಿನಿ, ಕಾರ್ಪೋರೇಟ್ ಸೇವಾ ವಿಭಾಗದ ವಿ. ಸತ್ಯಾನಂದಮ್ ಹಾಗೂ ಏಷ್ಯಾ-ಪೆಸಿಫಿಕ್ ಮಾರ್ಕೆಟಿಂಗ್ ವಿಭಾಗದ ಕುಲವಿಂದರ್ ಸಿಂಗ್ ರಾಜೀನಾಮೆ ನೀಡಿದವರು.

2009: ಕಮ್ಯುನಿಸ್ಟ್ ಹಿರಿಯ ನಾಯಕ ಮಾಧವ್ ಕುಮಾರ್ ನೇಪಾಳ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇವರಲ್ಲಿ ನಂಬಿಕೆ ಇಲ್ಲದಿದ್ದರೂ ಈ ಸಂದರ್ಭದಲ್ಲಿ ಸಾಂಪ್ರದಾಯಿಕ ನೇಪಾಳಿ ವೇಷಭೂಷಣದಲ್ಲಿ ಗಮನ ಸೆಳೆದರು. 56 ವರ್ಷದ ನೇಪಾಳ್ ಮೊದಲು ಬ್ಯಾಂಕ್ ಒಂದರಲ್ಲಿ ಕ್ಯಾಷಿಯರ್ ಆಗಿದ್ದರು. ಇದೀಗ ಗಣರಾಜ್ಯ ನೇಪಾಳದ ಎರಡನೇ ಪ್ರಧಾನಿಯಾದರು.

2009: ಎರಡು ವರ್ಷಗಳಿಂದ ಛತ್ತೀಸ್‌ಗಢ ಕಾರಾಗೃಹದಲ್ಲಿದ್ದ ಪ್ರಸಿದ್ಧ ನಾಗರಿಕ ಹಕ್ಕುಗಳ ಕಾರ್ಯಕರ್ತ ವಿನಾಯಕ ಸೇನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತು. ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ದೀಪಕ್ ವರ್ಮಾ ಅವರನ್ನು ಒಳಗೊಂಡ ನ್ಯಾಯಪೀಠವು, ಸ್ಥಳೀಯ ವಿಚಾರಣಾ ನ್ಯಾಯಾಲಯದ ಇಚ್ಛೆಯನ್ವಯ ವೈಯಕ್ತಿಕ ಬಾಂಡ್ ಪಡೆದು ಸೇನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಸೂಚಿಸಿತು.

2009: ಜಾಗತಿಕ ಸಮುದಾಯದ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ ಯಶಸ್ವಿಯಾಗಿ 2ನೇ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಈ ಬಾರಿಯ ಸ್ಫೋಟ ಮೊದಲಿಗಿಂತಲೂ ಪ್ರಬಲವಾಗಿತ್ತು. ಸ್ವರಕ್ಷಣಾ ಯೋಜನೆಯ ಭಾಗವಾಗಿ ಭೂಗತವಾಗಿ ಯಶಸ್ವಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಲಾಗಿದೆ ಎಂದು ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿತು.

2008: ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಭಾರತೀಯ ಜನತಾ ಪಕ್ಷದ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು. ಆದರೆ ಸರ್ಕಾರ ರಚಿಸಲು ಮೂರು ಸ್ಥಾನಗಳ ಕೊರತೆ ಬಿಜೆಪಿಯನ್ನು ಕಾಡಿತು. ಮೂರು ಹಂತದಲ್ಲಿ ನಡೆದ ಮತದಾನದ ಫಲಿತಾಂಶ ಪ್ರಕಟಗೊಂಡು, ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 110, ಕಾಂಗ್ರೆಸ್ 80 ಮತ್ತು ಜನತಾದಳ (ಎಸ್) 28 ಸ್ಥಾನಗಳಲ್ಲಿ ಜಯಗಳಿಸಿದವು. ಕಾಂಗ್ರೆಸ್ಸಿನಿಂದ ಬಂಡೆದ್ದು ಸ್ಪರ್ಧಿಸಿದ್ದ ನಾಲ್ವರು ಹಾಗೂ ಬಿಜೆಪಿ ಮತ್ತು ಜೆಡಿಎಸ್ನ ತಲಾ ಒಬ್ಬೊಬ್ಬರು ಬಂಡಾಯ ಅಭ್ಯರ್ಥಿಗಳು ಗೆದ್ದರು. ಒಟ್ಟಾರೆ ಮೂವರು ಮಹಿಳೆಯರಿಗೆ ಮಾತ್ರ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಯಿತು. ಅತಂತ್ರ ವಿಧಾನಸಭೆಯಿಂದಾಗಿ ಕಳೆದ ನಾಲ್ಕು ವರ್ಷಗಳ ರಾಜಕೀಯ ಪ್ರಹಸನಗಳಿಂದ ರೋಸಿಹೋದಂತೆ ಕಂಡು ಬಂದ ರಾಜ್ಯದ ಮತದಾರರು ಹೆಚ್ಚು ಕಡಿಮೆ ಒಂದು ಪಕ್ಷಕ್ಕೆ ಬಹುಮತ ನೀಡುವ ಇಂಗಿತ ವ್ಯಕ್ತಪಡಿಸಿದರು.

2008: ಚಿತ್ತಾಪುರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಸತತ 9ನೇ ಸಲ ವಿಧಾನಸಭೆ ಪ್ರವೇಶಿಸಿ ವಿಶ್ವದಾಖಲೆ ಮಾಡಿದರು. ಜೇವರ್ಗಿಯಲ್ಲಿ ಸೋಲುವ ಮೂಲಕ ಧರ್ಮಸಿಂಗ್ ಅವರು ಸತತ 9ನೇ ಬಾರಿ ಆಯ್ಕೆಯಾಗಿ ವಿಶ್ವ ದಾಖಲೆ ಮಾಡುವ ಅವಕಾಶದಿಂದ ವಂಚಿತರಾದರು.

2008: ಚೀನಾದಲ್ಲಿ ಭೂಕಂಪದ ಅವಶೇಷಗಳಡಿ ಹೂತುಹೋಗಿದ್ದ 80 ವರ್ಷದ ಕ್ಷತಾ ಝೀಹು ಎಂಬ ಪಾರ್ಶ್ವವಾಯು ಪೀಡಿತ ವ್ಯಕ್ತಿಯನ್ನು 11 ದಿನಗಳ ಬಳಿಕ ಜೀವಂತವಾಗಿಯೇ ಹೊರ ತೆಗೆಯಲಾಯಿತು ಎಂದು ಸರ್ಕಾರಿ ಸುದ್ದಿ ವಾಹಿನಿ ಪ್ರಸಾರ ಮಾಡಿತು. ಈತ ಭೂಕಂಪದಲ್ಲಿ ಕುಸಿದುಬಿದ್ದ ತನ್ನ ಮನೆಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡಿದ್ದ.

2008: ನ್ಯೂಯಾರ್ಕಿನ `ಫೋಬ್ಸರ್್' ಪತ್ರಿಕೆ ಪ್ರಕಟಿಸಿದ ಮಲೇಷ್ಯಾದ 40 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂಲದ ಆನಂದ ಕೃಷ್ಣನ್ ಮತ್ತು ವಿನೋದ್ ಶೇಖರ್ ಸ್ಥಾನ ಪಡೆದರು. ಆನಂದ ಕೃಷ್ಣನ್ ಅವರು 7.2 ಶತಕೋಟಿ ಡಾಲರ್ ವಹಿವಾಟು ಹೊಂದಿದ್ದು ಟೆಲಿಕಾಂ ವಾಣಿಜ್ಯ ಸಂಸ್ಥೆಯೊಂದನ್ನು ನಡೆಸುತ್ತಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು. 320 ದಶಲಕ್ಷ ಡಾಲರ್ ಮೌಲ್ಯದ ಆಸ್ತಿ ಹೊಂದಿದ ವಿನೋದ್ ಶೇಖರ್ (40) ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿದರು. ಇವರು ತಮ್ಮ ಮಗಳ ಹೆಸರಿನಲ್ಲಿ `ಪೆಟ್ರಾ ಸಮೂಹ'ವನ್ನು ಸ್ಥಾಪಿಸಿದ್ದು, ಅದು ಪುನರ್ ಬಳಕೆ ಮಾಡಬಹುದಾದ ಹಸಿರು ರಬ್ಬರನ್ನು ಉತ್ಪಾದಿಸುತ್ತದೆ.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಮುನ್ನ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಸಾಗಿಸಿದ 8 ಮಂದಿಗೆ ವಿಶೇಷ ಟಾಡಾ ನ್ಯಾಯಾಲಯವು ಐದರಿಂದ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಿತು.

2007: ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಅತಿ ಹೆಚ್ಚು ಶತಕಗಳ ಜೊತೆಯಾಟ (65ನೇ ಪಂದ್ಯದಲ್ಲಿ) ನಿಭಾಯಿಸಿದ ಹೊಸ ದಾಖಲೆ ಸ್ಥಾಪಿಸಿದರು. ಬಾಂಗ್ಲಾದೇಶದ ಢಾಕಾದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ವಾಸಿಂ ಜಾಫರ್ ಜೊತೆಗೆ 106 ರನ್ನುಗಳ ಜೊತೆಯಾಟ ನಿಭಾಯಿಸುವ ಮೂಲಕ ದ್ರಾವಿಡ್ ಈ ಗೌರವ ಪಡೆದರು. ಆಸ್ಟ್ರೇಲಿಯಾದ ಸ್ಟೀವ್ ವಾ ಅವರ ಹೆಸರಿನಲ್ಲಿ (64 ಪಂದ್ಯಗಳು) ಈ ದಾಖಲೆ ಇತ್ತು.

2007: ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ವಾರದ ಹಿಂದೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಜಲ್ಸಾ ಪಟ್ಟಣದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದರು.

2006: ಕನ್ನಡ ಭಾಷೆ 2300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಎಂಬುದನ್ನು ವಿವರಿಸುವ ದಾಖಲೆಗಳನ್ನು ಒಳಗೊಂಡ ವರದಿಯನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಗೌರವ ನೀಡಬೇಕೆಂಬ ಮನವಿಗೆ ಪೂರಕವಾಗಿ ಸಂಶೋಧಕ ಸಾಹಿತಿ ಡಾ. ಎಂ. ಚಿದಾನಂದ ಮೂರ್ತಿ ನೇತೃತ್ವದ ಸಮಿತಿಯು ಸಿದ್ಧಪಡಿಸಿದ ಈ ವರದಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರಿಗೆ ಸಲ್ಲಿಸಿದರು.

2001: ಕನೆಕ್ಟಿಕಟ್ಟಿನ ಸರ್ಜನ್ ಅರುವತ್ತನಾಲ್ಕು ವರ್ಷದ ಶೆರ್ಮನ್ ಬುಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿಕೊಂಡರು.

1982: ಮರುಸೃಷ್ಟಿಯಾದ ವೆನಿಸ್ ಸಿಂಪ್ಲೊನ್ ಓರಿಯಂಟ್ ಎಕ್ಸ್ ಪ್ರೆಸ್ ಮೊತ್ತ ಮೊದಲ ಬಾರಿಗೆ ಲಂಡನ್ನಿನಿಂದ ಪ್ರಯಾಣ ಹೊರಟಿತು. ಶಿಪ್ಪಿಂಗ್ ಉದ್ಯಮಿ ಜೇಮ್ಸ್ ಶೆರ್ ವುಡ್ ಅವರು ಹಳೆ ಓರಿಯಂಟ್ ಎಕ್ಸ್ ಪ್ರೆಸ್ಸಿನ ಬೋಗಿಗಳನ್ನು ಸೋದ್ ಬಿಯ ಹರಾಜಿನಲ್ಲಿ ಖರೀದಿಸಿ ತಂದು ಹೊಸ ವೆನಿಸ್ ಸಿಂಪ್ಲೋನ್ ಓರಿಯಂಟ್ ಎಕ್ಸ್ ಪ್ರೆಸ್ಸಿಗಾಗಿ ಬಳಸಿಕೊಂಡರು. ಈ ರೈಲುಗಾಡಿ ಲಂಡನ್ನಿನ ವಿಕ್ಟೋರಿಯಾ ಟರ್ಮಿನಸ್ ಮತ್ತು ವೆನಿಸ್ ಮಧ್ಯೆ ಓಡಾಡುತ್ತದೆ.

1950: ಖ್ಯಾತ ಸುಗಮ ಸಂಗೀತಗಾರ ಯಶವಂತ ಹಳಿಬಂಡಿ ಅವರು ಕರ್ನಾಟಕ ಜಾನಪದ ಹಾಡುಗಾರಿಕೆಯ ಮನೆತನದ ಹನುಮಂತಪ್ಪ- ಬಸವೇಶ್ವರಿ ದಂಪತಿಯ ಮಗನಾಗಿ ಉತ್ತರ ಕರ್ನಾಟಕದ ತೇರಗಾಂವದಲ್ಲಿ ಜನಿಸಿದರು.

1948: ಕಲಾವಿದ ಸುರೇಶ ವೆಂಕಟೇಶ ಕುಲಕರ್ಣಿ ಜನನ.

1940: ಆಕ್ಸಫರ್ಡ್ ವಿಶ್ವವಿದ್ಯಾಲಯದ ಪೆಥಾಲಜಿ ವಿಭಾಗದಲ್ಲಿ ಅರ್ನೆಸ್ಟ್ ಚೈನ್ ಮತ್ತು ನಾರ್ಮನ್ ಜಿ. ಹೀಟ್ಲೆ ಅವರು ಎಂಟು ಇಲಿಗಳಿಗೆ ಸ್ಟ್ರೆಪ್ಟೋಕೋಕ್ಸಿಯನ್ನು ನೀಡಿದರು. ಅವುಗಳಲ್ಲಿ ನಾಲ್ಕು ಇಲಿಗಳಿಗೆ ನಂತರ ಪೆನಿಸಿಲಿನ್ ನೀಡಲಾಯಿತು. ಮರುದಿನ ಮುಂಜಾನೆ ವೇಳೆಗೆ ಪೆನಿಸಿಲಿನ್ ನೀಡಲಾಗಿದ್ದ ಇಲಿಗಳು ಜೀವಂತವಾಗಿದ್ದರೆ, ಉಳಿದ ನಾಲ್ಕು ಇಲಿಗಳು ಸತ್ತು ಬಿದ್ದಿದ್ದವು. ಸೋಂಕಿಗೆ ಚಿಕಿತ್ಸೆ ನೀಡಲು ಪೆನಿಸಿಲಿನ್ ಬಳಸುವ ಸಾಧ್ಯತೆ ಈ ಮೂಲಕ ಮೊತ್ತ ಮೊದಲ ಬಾರಿಗೆ ಪತ್ತೆಯಾಯಿತು.

1935: ಕಲಾವಿದ ನೀಲಾರಾಮ್ ಗೋಪಾಲ್ ಜನನ.

1908: ಸಾಹಿತಿ ವಾಸಂತಿ ದೇವಿ (25-5-1908ರಿಂದ 1-4-1995) ಅವರು ಅಣ್ಣಾಜಿರಾವ್- ರಾಧಾಬಾಯಿ ದಂಪತಿಯ ಮಗಳಾಗಿ ಬರ್ಮಾ ದೇಶದ (ಈಗಿನ ಮ್ಯಾನ್ಮಾರ್) ಮಿಥಿಲದಲ್ಲಿ ಹುಟ್ಟಿದರು. ಚಿತ್ರರಂಗ, ಸಾಹಿತ್ಯ, ರಂಗಭೂಮಿ, ಚಿತ್ರಕಲೆಗಳಿಗೆ ಕಾಣಿಕೆ ನೀಡಿರುವ ವಾಸಂತಿ ದೇವಿ ಅವರ ಪ್ರಮುಖ ಕೃತಿಗಳಲ್ಲಿ ಒಂದು `ನನ್ನ ಮಗ ಗುರುದತ್ತ'.

1889: ಸಿಕೊರಸ್ಕಿ (1889-1972) ಜನ್ಮದಿನ. ರಷ್ಯ ಮೂಲದ ಈ ಅಮೆರಿಕನ್ ವಿಮಾನ ವಿನ್ಯಾಸಗಾರ ಹೆಲಿಕಾಪ್ಟರನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದ ವ್ಯಕ್ತಿ.

1886: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್ (1886-1945) ಜನ್ಮದಿನ.

No comments:

Post a Comment