ಸಮುದ್ರದ ಮೇಲಿನ “ಲಿಫ್ಟ್ʼ ಸೇತುವೆ ಲೋಕಾರ್ಪಣೆ
ಬೆಂಗಳೂರು: ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊತ್ತ ಮೊದಲ ಲಿಫ್ಟ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸುಮಾರು ೫೦೦ ಕೋಟಿ ರೂಪಾಯಿಗಳ ವೆಚ್ಚದ ತಮಿಳುನಾಡಿನ ರಾಮೇಶ್ವರಂ ಬಳಿಯ ನೂತನ ಪಂಬನ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ೨೦೨೬ರ ರಾಮನವಮಿಯ ದಿನವಾಗಿರುವ ಈದಿನ (೦೬ ಏಪ್ರಿಲ್) ಲೋಕಾರ್ಪಣೆ ಮಾಡಿದರು.
ಶ್ರೀರಾಮನು ಲಂಕೆಯಲ್ಲಿ ರಾವಣನನ್ನು ವಧಿಸಿ ಅಯೋಧ್ಯೆಗೆ ವಾಪಸಾಗುವಾಗ ರಾಮೇಶ್ವರಂಗೆ ಭೇಟಿ ನೀಡಿ ಜ್ಯೋತಿರ್ಲಿಂಗ ದರ್ಶನ ಪಡೆದಿದ್ದನೆಂಬ ಪ್ರತೀತಿ ಇದೆ.
ಕಾಕತಾಳೀಯವಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಶ್ರೀಲಂಕಾ ಪ್ರವಾಸದಿಂದ ವಾಪಸಾಗುವಾಗ ರಾಮೇಶ್ವರದಲ್ಲಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ ನಂತರ ನೂತನ ಪಂಬನ್ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆಯ ವಿಡಿಯೋ ಇಲ್ಲಿದೆ ನೋಡಿರಿ:
ಇವುಗಳನ್ನೂ ನೋಡಿರಿ/ ಓದಿರಿ:
ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!
ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?
No comments:
Post a Comment