ನಾನು ಮೆಚ್ಚಿದ ವಾಟ್ಸಪ್

Tuesday, March 24, 2020

ಇಂದಿನ ಇತಿಹಾಸ History Today ಮಾರ್ಚ್ 24

2020: ನವದೆಹಲಿ: ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾವೈರಸ್ ಸೊಂಕು ಹರಡುವಿಕೆಯನ್ನು ತಡೆಯಲು ದೇಶಾದ್ಯಂತ 2020 ಮಾರ್ಚ್ 24ರ  ಮಂಗಳವಾರ ರಾತ್ರಿ ೧೨ ಗಂಟೆಯಿಂದ ೨೧ ದಿನಗಳ ಕಾಲ ಶೇಕಡಾ ೧೦೦ರಷ್ಟು ಲಾಕ್ ಔಟ್ ನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಒಂದೇ ವಾರದಲ್ಲಿ ಎರಡನೇ ಬಾರಿಗೆ ಮಾರ್ಚ್ 24ರ ಮಂಗಳವಾರ ರಾತ್ರಿ ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಸಾರ ಭಾಷಣ ಮಾಡಿದ ಪ್ರಧಾನಿ, ಲಾಕ್ ಔಟ್ ಕರ್ಫ್ಯೂ ಮಾದರಿಯಲ್ಲೇ ಇರಲಿದ್ದು ದೇಶಾದ್ಯಂತ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ ಎಂದು ಹೇಳಿದರು. ದೇಶ ಇಂದು ಮಹತ್ವಪೂರ್ಣ ನಿರ್ಧಾರ ಕೈಗೊಂಡಿದೆ. ಇಂದು ರಾತ್ರಿ ೧೨ ಗಂಟೆಯಿಂದ ದೇಶಾದ್ಯಂತ ಲಾಕ್ ಔಟ್ ಘೋಷಿಸುತ್ತಿದ್ದೇನೆ. ಕರ್ಫ್ಯೂ ಮಾದರಿಯ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ನುಡಿದರು. ಪ್ರತಿಯೊಬ್ಬ ಭಾರತೀಯನ ರಕ್ಷಣೆಗಾಗಿ ಕಟ್ಟುನಿಟ್ಟಿನ ಆದೇಶ ಜಾರಿಗೆ ತರಲಾಗುತ್ತಿದೆ.ದೇಶದಲ್ಲಿ ನೀವು ಎಲ್ಲಿ ಇದ್ದೀರೋ ಅಲ್ಲಿಯೇ ಇರಿ, ೨೧ ದಿನಗಳ ಕಾಲದ ಲಾಕ್ ಡೌನ್ ಅವಧಿಯಲ್ಲಿ ಹೊರಗೆ ಹೋಗುವುದನ್ನು ಮರೆತು ಬಿಡಿ, ಮನೆ ಬಿಟ್ಟು ಹೊರಕ್ಕೆ ಬರಬೇಡಿ ಎಂದು ಮೋದಿ ಹೇಳಿದರು. ಮನೆ ಮುಂದೆ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಅದನ್ನು ದಾಟಬೇಡಿ. ಕೊರೊನಾ ಸೋಂಕಿತ ವ್ಯಕ್ತಿ ಬೀದಿಗೆ ಬರಬಹುದು. ಆತ ಸೋಂಕಿತ ಎಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಕ್ಷೇಮವಾಗಿರಿ, ರಸ್ತೆಗಿಳಿಯಬೇಡಿ ಎಂದು ಸಲಹೆ ಮಾಡಿದ ಪ್ರಧಾನಿ ಕೊರೋನಾ ತಡೆಗೆ ಇರುವುದು ಒಂದೇ ಮಂತ್ರ ಎಂಬುದಾಗಿ ಹೇಳಿ ಬ್ಯಾನರ್ ಪ್ರದರ್ಶಿಸಿ ಕೊರೋನಾ ಎಂದರೆ ಯಾರೂ ರಸ್ತೆ ಮೇಲೆ ಬರುವಂತಿಲ್ಲ ಎಂದು ಅರ್ಥ ( (ಕೊರೊನಾ: ಕೋಯಿ ರೋಡ್ ಪರ್ ನಿಕಲೇ) ಎಂದು ಹೇಳಿದರು. ಕೊರೋನಾವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಜಗತ್ತಿನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಲಕ್ಷ ಮುಟ್ಟಲು ೬೬ ದಿನ ಬೇಕಾಯಿತು. ಇದಾದ ೧೧ ದಿನಗಳಲ್ಲಿ ಇನ್ನೂ ಲಕ್ಷ ಜನರಿಗೆ ಸೋಂಕು ತಗುಲಿತು. ದಿನಗಳಲ್ಲಿ ಲಕ್ಷ ಜನರಿಗೆ ಸೋಂಕು ಹರಡಿತು ಎಂದು ಪ್ರಧಾನಿ ಕೊರೋನಾ ಸೋಂಕು ಹರಡುತ್ತಿರುವ ವೇಗವನ್ನು ಅಂಕಿ ಸಂಖ್ಯೆ ಸಹಿತವಾಗಿ ವಿವರಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ಜಿನೇವಾ: ಸಿಡುಬು ಮತ್ತು ಪೋಲಿಯೊ ಎಂಬ ಎರಡು ಮೌನ ಕೊಲೆಗಡುಕ ನಿರ್ಮೂಲನೆ ಮಾಡುವಲ್ಲಿ ಹಿಂದೆ ಜಗತ್ತನ್ನು ಮುನ್ನಡೆಸಿದ ಭಾರತ, ಇದೀಗ ಜಾಗತಿಕವಾಗಿ ಸುಮಾರು ೧೫,೦೦೦ ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನೊವೈರಸ್ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವಲ್ಲಿಯೂ ಮಾರ್ಗದರ್ಶನ ಮಾಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್) ಉನ್ನತ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತ ಪಡಿಸಿದರು. ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಏಕಾಏಕಿ ಎದುರಾಗಿರುವ ಕೊರೋನವೈರಸ್ ಸೋಂಕನ್ನು ಎದುರಿಸಿ ನಿವಾರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಏಕೆಂದರೆ ಇದು ಸಿಡುಬು ಮತ್ತು ಮತ್ತು ಪೋಲಿಯೊವ ನಿರ್ಮೂಲನೆ ಮಾಡಿದ ಅನುಭವವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್) ಆಡಳಿತ ನಿರ್ದೇಶಕ ಮೈಕೆಲ್ ರಯಾನ್ ಹೇಳಿದರು. ಕೋವಿಡ್-೧೯ ಸಾಂಕ್ರಾಮಿಕ ರೋಗದ ಕುರಿತು ಜಿನೀವಾದಲ್ಲಿ 2020 ಮಾರ್ಚ್ 23ರ ಸೋಮವಾರ (ಭಾರತದಲ್ಲಿ ಮಾರ್ಚ್ 24 ಮಂಗಳವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಎರಡು ಸದ್ದು ರಹಿತ ಕೊಲೆಗಡುಕರನ್ನು ನಿರ್ಮೂಲನೆ ಮಾಡಿ ಒದ್ದೋಡಿಸುವ ನಿಟ್ಟಿನಲ್ಲಿ ಭಾರತವು ಇಡೀ ಜಗತನ್ನೇ ಮುನ್ನಡೆಸಿದೆ ಎಂದು ಹೇಳಿದರು. ಭಾರvವು ಸಾರ್ವಜನಿಕ ಜಾಗೃತಿಯ ಮೂಲಕ ಸಿಡುಬು ಮಹಾಮಾರಿಯನ್ನು ನಿವಾರಿಸಿ ಜಗತ್ತಿಗೆ ಒಂದು ದೊಡ್ಡ ಉಡುಗೊರೆಯನ್ನು ನೀಡಿತು. ಅಷ್ಟೇ ಅಲ್ಲ, ಭಾರತವು ಪೋಲಿಯೊವನ್ನು ಕೂಡಾ ನಿರ್ಮೂಲನೆ ಮಾಡಿದೆ ಎಂಬುದನ್ನೂ ಗಮನಿಸಬೇಕು ಎಂದು ಅವರು ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾ ವೈರಸ್  ಭೀತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದ್ದು, ಅದನ್ನು ಅನುಸರಿಸಿ ಶಾಹೀನ್ ಬಾಗ್ನಲ್ಲಿ ಕಳೆದ ೧೦೦ ದಿನಗಳಿಂದ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಕಾರರನ್ನು ಪೊಲೀಸರು 2020 ಮಾರ್ಚ್ 24ರ ಮಂಗಳವಾರ ನಸುಕಿನಲ್ಲಿ ತೆರವು ಗೊಳಿಸಿದರು. ಸ್ಥಳಬಿಡಲು ನಿರಾಕರಿಸಿದ ಕೆಲವರನ್ನು ಪೊಲೀಸರು ಬಂಧಿಸಿದರು. ಸರ್ಕಾರದ ಆದೇಶದನ್ವಯ ನಸುಕಿನಿಂದಲೇ ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದರು. ವ್ಯಾನ್ ಹಾಗೂ ಬಸ್ಸುಗಳೊಂದಿಗೆ ಶಾಹೀನ್ ಬಾಗ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟಕಾರರನ್ನು ಅದೇ ವಾಹನದಲ್ಲಿ ತುಂಬಿ ಸ್ಥಳವನ್ನು ತೆರವುಗೊಳಿಸಿದರು. ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ನಿಮ್ಮ ಆರೋಗ್ಯದ ದೃಷ್ಟಿಯಿಂದಲೇ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಿ ಎಂದು ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು, ಪೊಲೀಸ್ ವಾಹನದಲ್ಲಿ ತಮ್ಮ ತಮ್ಮ ಮನೆಗಳಿಗೆ ವಾಪಸ್ ತೆರಳಿದರು. ಇದೇ ವೇಳೆಯಲ್ಲಿ ಪ್ರತಿಭಟನಾಕಾರರು ಹಾಕಿದ್ದ ಟೆಂಟುಗಳನ್ನು ಜೆಸಿಬಿ ಬಳಸಿ ಕಿತ್ತುಹಾಕಲಾಗಿದ್ದು, ಪ್ರತಿಭಟನೆ ಕೈಬಿಡದ ಕೆಲವರನ್ನು ಬಲವಂತವಾಗಿ ಸ್ಥಳದಿಂದ ಹೊರ ಹಾಕಲಾಯಿತು. ಬಳಿಕ ಪೊಲೀಸರು ಸೆಕ್ಷನ್ ೧೪೪ ಅನ್ವಯ ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದಾಗ ಉಳಿದಿದ್ದ ಪ್ರತಿಭಟನಾಕಾರರು ಸ್ಥಳದಿಂದ ಕಾಲ್ಕಿತ್ತರು ಎಂದು ವರದಿಗಳು ತಿಳಿಸಿದವು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ೪ನೇ ಬಾರಿಗೆ ಸೋಮವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ವಿಧಾನಸಭೆಯಲ್ಲಿ 2020 ಮಾರ್ಚ್ 24ರ ಮಂಗಳವಾರ ಬಿಜೆಪಿ ಸರ್ಕಾರದ ಬಹುಮತವನ್ನು ಸಾಬೀತು ಪಡಿಸಿದರು. ವಿರೋಧಿ ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ಸದನದಲ್ಲಿ ಹಾಜರಿರಲಿಲ್ಲ. ಪಕ್ಷೇತರರು, ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ ಪಿ) ಶಾಸಕರೂ ವಿಶ್ವಾಸಮತ ನಿರ್ಣಯದ ವೇಳೆ ಬಿಜೆಪಿ ಸರ್ಕಾರದ ಪರವಾಗಿ ಮತ ಚಲಾಯಿಸಿದರು. ಚೌಹಾಣ್ ಅವರು ಮಧ್ಯಪ್ರದೇಶದ ೧೯ನೇ ಮುಖ್ಯಮಂತ್ರಿಯಾಗಿ ಸೋಮವಾರ ರಾತ್ರಿ ರಾಜ್ಯಪಾಲ ಲಾಲಜಿ ಟಂಡನ್ ಅವರಿಂದ ಪ್ರಮಾಣವಚನ ಸ್ವೀಕರಿಸಿದ್ದರು. ಮಧ್ಯಪ್ರದೇಶದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ೧೦೬ ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ ಪಕ್ಷವು ೯೨ ಸದಸ್ಯರನ್ನು ಹೊಂದಿದೆ. ಸದನದ ಎರಡು ಸ್ಥಾನಗಳು ಖಾಲಿ ಉಳಿದಿದ್ದು, ೨೩ ಮಂದಿ ಶಾಸಕರ ರಾಜೀನಾಮೆಯ ಬಳಿಕ ರಾಜ್ಯ ವಿಧಾನಸಭೆಯ ಸದಸ್ಯ ಬಲವು ೨೦೫ಕ್ಕೆ ಇಳಿದಿದೆ. ಸದನದಲ್ಲಿ ನಾಲ್ವರು ಪಕ್ಷೇತರರು, ಇಬ್ಬರು ಬಿಎಸ್ ಪಿ ಮತ್ತು ಒಬ್ಬ ಎಸ್ ಪಿ ಶಾಸಕರು ಇದ್ದಾರೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತಿರುವ ಹಿನ್ನೆಲೆಯಲ್ಲಿ ದೇಶಕ್ಕೆ ಆರ್ಥಿಕ ಮತ್ತು ಮಾನಸಿಕ ನೆಮ್ಮದಿ ನೀಡುವ ಸಲುವಾಗಿ, ಮುಂದಿನ ಮೂರು ತಿಂಗಳು ಇತರ ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ಗಳನ್ನು ಬಳಸಿಕೊಂಡು ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ವಿಧಿಸಲಾಗುವ ಎಲ್ಲಾ ಶುಲ್ಕಗಳನ್ನು ತೆಗೆದುಹಾಕುವುದು ಸೇರಿದಂತೆ ಹಲವು ಸಾಂತ್ವನ ಕ್ರಮಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ಮಾರ್ಚ್ 24ರ  ಮಂಗಳವಾರ ಪ್ರಕಟಿಸಿದರು. ಆರ್ಥಿಕ ನಿರಾಳತೆಗಾಗಿ ಸರ್ಕಾg ಕೈಗೊಂಡಿರುವ ಯೋಜನೆಯ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಸೀತಾರಾಮನ್, ಮುಂದಿನ ಮೂರು ತಿಂಗಳವರೆಗೆ ಯಾವುದೇ ಶುಲ್ಕವಿಲ್ಲದೆ ಡೆಬಿಟ್ ಕಾರ್ಡ್ದಾರರು ಬೇರೆ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು ಎಂದು ಘೋಷಿಸಿದರು. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯ ಶುಲ್ಕ ಇರುವುದಿಲ್ಲ ಎಂದು ಸಚಿವರು ಹೇಳಿದರು. ಡಿಜಿಟಲ್ ವ್ಯಾಪಾರ ಮತ್ತು ವಹಿವಾಟುಗಳಿಗೆ ಬ್ಯಾಂಕ್ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದೂ ಸರ್ಕಾರ ಪ್ರಕಟಿಸಿತು. ೨೦೧೮-೧೯ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಮಾರ್ಚ್ ೩೧ ರಿಂದ ಜೂನ್ ೩೦ ರವರೆಗೆ ವಿಸ್ತರಿಸಲಾಗಿದೆ, ವಿಳಂಬವಾದ ಪಾವತಿಗಳಿಗೆ ಬಡ್ಡಿದರವನ್ನು ಶೇಕಡಾ ೧೨ ರಿಂದ ಶೇಕಡಾ ೯ಕ್ಕೆ ಇಳಿಸಲಾಗಿದೆ  ಎಂದು ಸಚಿವರು ಹೇಳಿದರು. ಆಧಾರ್-ಪ್ಯಾನ್ ಜೋಡಣೆ ಮಾಡುವ ದಿನಾಂಕವನ್ನು ಹಿಂದೆ ನಿಗದಿ ಪಡಿಸಲಾಗಿದ್ದ ಮಾರ್ಚ್ ೩೧ರಿಂದ ಜೂನ್ ೩೦ ಕ್ಕೆ ವಿಸ್ತರಿಸಲಾಗಿದೆ. ಮೂಲದಲ್ಲಿ (ಟಿಡಿಎಸ್) ಕಡಿತಗೊಳಿಸಿದ ತೆರಿಗೆಯನ್ನು ತಡವಾಗಿ ಠೇವಣಿ ಮಾಡುವ ಬಡ್ಡಿದರವನ್ನು ಕೂಡಾ ಕಡಿಮೆ ಮಾಡಲಾಗಿದೆ ಎಂದು ಸೀತಾರಾಮನ್ ತಿಳಿಸಿದರು. "ಈಗ ಮತ್ತು ಜೂನ್ ೩೦ ನಡುವೆ ಯಾವುದೇ ಹೆಚ್ಚುವರಿ ೧೦% ಬಡ್ಡಿ ವಿಧಿಸಲಾಗುವುದಿಲ್ಲ" ಎಂದು ಅವರು ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಇಡೀ ವಿಶ್ವವು ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆಯಬೇಕಾಗಿದ್ದ ೨೦೨೦ರ ಒಲಿಂಪಿಕ್ಸ್  ಕ್ರೀಡಾ ಕೂಟವನ್ನು ಒಂದು ವರ್ಷ ಅವಧಿಗೆ ಮುಂದೂಡಲು ಜಪಾನ್ ಪ್ರಧಾನಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷರು 2020 ಮಾರ್ಚ್ 24ರ  ಮಂಗಳವಾರ ಒಪ್ಪಿದ್ದು, ಅಸಾಧಾರಣ ಕ್ರಮವಾಗಿ ಇದೇ ಮೊದಲ ಬಾರಿಗೆ ಶಾಂತಿಕಾಲದಲ್ಲಿ ಒಲಿಂಪಿಕ್ ಆಟೋಟವನ್ನು ಮುಂದೂಡಲು ತೀರ್ಮಾನಿಸಲಾಯಿತು.  ಒಲಿಂಪಿಕ್ಸ್ ಕ್ರೀಡಾಕೂಟವನ್ನು ಒಂದು ವರ್ಷದ ಅವಧಿಗೆ ಮುಂದೂಡುವ ಪ್ರಸ್ತಾಪವನ್ನು ನಾನು ಮುಂದಿಟ್ಟಿದ್ದು, ಅಧ್ಯಕ್ಷ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಅವರು ಅದಕ್ಕೆ ಶೇಕಡಾ ೧೦೦ರಷ್ಟು ಒಪ್ಪಿದ್ದಾರೆ ಎಂದು ಜಪಾನ್ ಪ್ರಧಾನಿ ಶಿಂಝೋ ಅಬೆ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.  ಕ್ರೀಡಾಕೂಟ ಮುಂದೂಡಿಕೆಯ ಕ್ರಮವು ಟೋಕಿಯೋ ನಗರಕ್ಕೆ ಭಾರೀ ದೊಡ್ಡ ಹೊಡೆತವಾಗಿದೆ. ಟೋಕಿಯೋ ನಗರವು ಕ್ರೀಡಾಕೂಟದ ಸಲುವಾಗಿ ಸಕಲ ಸಿದ್ಧತೆಗಳನ್ನೂ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಗಿಸಿದ್ದಲ್ಲದೆ ವ್ಯಾಪಕ ಟಿಕೆಟ್ ಮಾರಾಟಕ್ಕೂ ವ್ಯವಸ್ಥೆ ಮಾಡಿತ್ತು. ಬಹಿಷ್ಕಾರಗಳು, ಭಯೋತ್ಪಾದನೆ ದಾಳಿಗಳು ಮತ್ತು ಪ್ರತಿಭಟನೆಗಳನ್ನು ಎದುರಿಸಿದ್ದರೂ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟ ೧೯೪೮ರಿಂದ ಇಲ್ಲಿಯವರೆಗೆ ಮುಂದೂಡಿಕೆಯಾದ ಉದಾಹರಣೆಯಿಲ್ಲ. ಆದರೆ ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾವೈರಸ್ ಬಾರಿ ಸಹಸ್ರಾರು ಮಂದಿಯನ್ನು ಬಲಿ ಪಡೆದುಕೊಂಡು ವಿಶ್ವಾದ್ಯಂತ ಕ್ರೀಡಾ ಸ್ಪರ್ಧೆಗಳನ್ನೇ ಸ್ಥಗಿತಗೊಳಿಸಿದೆ.ವಿಶ್ವಾದ್ಯಂತ ವ್ಯಾಪಿಸಿರುವ ಕೋವಿಡ್ -೧೯ ಸೋಂಕು ಇನ್ನಷ್ಟು ಹರಡದಂತೆ ಕೈಗೊಳ್ಳಲಾಗಿರುವ ಲಾಕ್ ಡೌನ್ಗಳಲ್ಲಿ ವಿಶ್ವದ . ಬಿಲಿಯನ್ (. ಶತಕೋಟಿ) ಜನರು ಸಿಕ್ಕಿಹಾಕಿಕೊಂಡಿರುವ ಹೊತ್ತಿನಲ್ಲಿ ಜುಲೈ ೨೭ರಂದು ಆರಂಭವಾಗಬೇಕಾಗಿರುವ ಜಾಗತಿಕ ಕ್ರೀಡಾಕೂಟವನ್ನು ಮುಂದೂಡಬೇಕು ಎಂಬ ತೀವ್ರ ಒತ್ತಡ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮೇಲೆ ಬಿದ್ದಿತ್ತು.   (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ೫೧೯ಕ್ಕೆ ಏರಿದ್ದು, ೧೦೭  ಸೋಂಕಿನ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದೆ. ೮೭ ಪ್ರಕರಣಗಳೊಂದಿಗೆ ಕೇರಳವು ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಮಾರ್ಚ್ 24ರ  ಮಂಗಳವಾರ ಪ್ರಕಟಿಸಿತು. ಮಧ್ಯೆ, ಹಿಮಾಚಲ ಪ್ರದೇಶವು ಮಂಗಳವಾರ ಸಂಜೆ ಗಂಟೆಯಿಂದ ರಾಜ್ಯವ್ಯಾಪಿ ಕರ್ಫ್ಯೂ ಘೋಷಿಸಿದ್ದು, ಕೋರೋನಾವೈರಸ್ ನಿಗ್ರಹಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯಗಳ ಸಾಲಿಗೆ ಸೇರ್ಪಡೆಯಾಯಿತು.  ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೧೦೭ಕ್ಕೆ ಏರಿದೆ ಎಂಬುದಾಗಿ ತಿಳಿಸಿತು. ರಾಜ್ಯದಲ್ಲಿ ಈಗಾಗಲೇ ಕೊರೋನಾಕ್ಕೆ ಸಂಬಂಧಿಸಿದಂತೆ ಸಾವುಗಳು ಸಂಭವಿಸಿವೆ. ಅಮಿತ್ ಶಾ ಸೂಚನೆ: ಮಧ್ಯೆ ದೆಹಲಿಯಲ್ಲಿ ಭೂಮಾಲೀಕರು ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ತಮ್ಮನ್ನು ಮನೆಗಳಿಂದ ಖಾಲಿ ಮಾಡಿಸುತ್ತಿದ್ದಾರೆ ಎಂಬುದಾಗಿ ಏಮ್ಸ್ ವೈದ್ಯರು ದೂರಿದ್ದನ್ನು ಅನುಸರಿಸಿ, ವೈದ್ಯರಿಗೆ ಸುರಕ್ಷತೆ ಖಾತರಿ ಪಡಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸರಿಗೆ ಸೂಚನೆ ನೀಡಿದರು. ೨೬ ಖಾಸಗಿ ಲ್ಯಾಬ್: ಮಧ್ಯೆ ಕೋವಿಡ್ -೧೯ ಪ್ರಕರಣಗಳ ಪರೀಕ್ಷೆಗಾಗಿ ೨೬ ಖಾಸಗಿ ಲ್ಯಾಬೋರೇಟರಿಗಳು ಭಾರತದಲ್ಲಿ ಕಾರ್ಯಾರಂಭ ಮಾಡಿವೆ. ಮುಖೇಶ್ ಅಂಬಾನಿ ಅವರು ಕೇವಲ ೧೫ ದಿನಗಳಲ್ಲಿ ಸುಸಜ್ಜಿತ ಕೋವಿಡ್ ಪರೀಕ್ಷಾ ಆಸ್ಪತ್ರೆಯನ್ನೇ ಸ್ಥಾಪಿಸಿದರು.  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)
  

No comments:

Post a Comment