ನಾನು ಮೆಚ್ಚಿದ ವಾಟ್ಸಪ್

Thursday, March 5, 2020

ಇಂದಿನ ಇತಿಹಾಸ History Today ಮಾರ್ಚ್ 05

ಇಂದಿನ ಇತಿಹಾಸ  History Today ಮಾರ್ಚ್ 05 
2020: ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020 ಮಾರ್ಚ್ 05ರ ಗುರುವಾರ ವಿಧಾನಸಭೆಯಲ್ಲಿ ೨೦೨೦-೨೧ ಸಾಲಿಗೆ ಒಟ್ಟು ,೩೭,೮೯೩ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದು, ಕೃಷಿ ವಲಯಕ್ಕೆ ಗರಿಷ್ಠ ಅನುದಾನ ಘೋಷಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದರು. ಆದರೆ ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಕಡಿತದ ಹಿನ್ನೆಲೆಯಲ್ಲಿ ರಾಜಸ್ವ ಸಂಗ್ರಹಕ್ಕಾಗಿ ತೈಲ ಮತ್ತು ಮದ್ಯ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕಿದರು. ಜೊತೆಗೆ ಭಾರೀ ಪ್ರಮಾಣದ ಸಾಲ ಎತ್ತಲೂ ನಿರ್ಧರಿಸಿದರು. ರೈತರ ಸಾಲಮನ್ನಾ, ಹಾಗೂ ಹೊಸ ಕಾರ್ಯಕ್ರಮಗಳ ಘೋಷಣೆ ಮಾಡದೆ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ಯತ್ನ ಮಾಡಿರುವ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಿ ಗ್ರಾಮೀಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟರು. ಆದರೆ ಸಹಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಯಿತು. ವಿತ್ತ ಖಾತೆಯನ್ನು ತಮ್ಮ ಕೈಯಲ್ಲೇ ಇರಿಸಿಕೊಂಡಿರುವ ಯಡಿಯೂರಪ್ಪ ಅವರು ಮಂಡಿಸಿರುವ ೭ನೇ ಮುಂಗಡಪತ್ರ ಇದಾಗಿದ್ದು, ಅನುದಾನವನ್ನು ಆರು ವಲಯಗಳಾಗಿ ವಿಂಗಡಿಸಿ ಹಂಚಿಕೆ ಮಾಡಿದ್ದಾರೆ. ಪೈಕಿ ಕೃಷಿ ವಲಯಕ್ಕೆ ೩೨,೨೫೯ ಕೋಟಿ ರೂಪಾಯಿಗಳನ್ನು ಅವರು ನೀಡಿದರು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತ- ಐರೋಪ್ಯ ಒಕ್ಕೂಟ (ಇಯು) ಶೃಂಗ ಸಭೆಯನು ಕೊರೋನಾವೈರಸ್ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಕಾರಣ ಬೆಲ್ಜಿಯಂ ರಾಜಧಾನಿ ಬ್ರಸ್ಸೆಲ್ಸ್ ಗೆ ನೀಡಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ರದ್ದು ಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ (ಎಇಎ) 2020 ಮಾರ್ಚ್ 05ರ ಗುರುವಾರ ಪ್ರಕಟಿಸಿತು. ಇದೇ ವೇಳೆಗೆ ದೆಹಲಿಯ ಆಮ್ ಆದ್ಮಿ ಪಕ್ಷ ಸರ್ಕಾರವು sಸೊಂಕು ಹರಡುವಿಕೆಯನ್ನು ತಡೆಯಲು ದೆಹಲಿಯ ಎಲ್ಲ ಸರ್ಕಾರಿ, ಅನುದಾನಿತ, ಎಂಸಿಡಿ ಮತ್ತು ಎನ್ ಡಿಎಂಸಿ ಪ್ರಾಥಮಿಕ ಶಾಲೆಗಳನ್ನು ತತ್ ಕ್ಷಣದಿಂದ ಮಾರ್ಚ್ ಅಂತ್ಯದವರೆಗೆ ಮುಚ್ಚುವಂತೆ ಆದೇಶ ನೀಡಿತು.  ಭಾರತ-ಇಯು ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಬೇಕಾಗಿತ್ತು. ಆದರೆ ಉಭಯ ರಾಷ್ಟ್ರಗಳ ಆರೋಗ್ಯ ಅಧಿಕಾರಿಗಳು ಸಧ್ಯದಲ್ಲಿ ಪ್ರವಾಸ ಮಾಡದಿರುವಂತೆ ಸಲಹೆ ಮಾಡಿದ್ದಾರೆ. ಆದ್ದರಿಂದ ಶೃಂಗವನ್ನು ಪರಸ್ಪರರಿಗೆ ಅನುಕೂಲಕರವಾದ ಬೇರೆ ದಿನಾಂಕದಂದು ನಡೆಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ದೆಹಲಿಯ ೨೦೧೨ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಮಾರ್ಚ್ ೨೦ರಂದು ಬೆಳಗ್ಗೆ .೩೦ ಗಂಟೆಗೆ ಗಲ್ಲಿಗೇರಿಸಲು ಆಜ್ಞಾಪಿಸಿದ ದೆಹಲಿಯ ನ್ಯಾಯಾಲಯ 2020 ಮಾರ್ಚ್ 05ರ ಗುರುವಾರ ನಾಲ್ಕನೇಡೆತ್ ವಾರಂಟ್ಜಾರಿಗೊಳಿಸಿತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ಒಂದು ದಿನದ ಬಳಿಕ ವಿಚಾರಣಾ ನ್ಯಾಯಾಲಯವು ಆದೇಶವನ್ನು ನೀಡಿದೆ. ಪವನ್ ಗುಪ್ತ ಕ್ಷಮಾದಾನ ಕೋರಿಕೆ ಅರ್ಜಿಯೊಂದಿಗೆ ಎಲ್ಲ ನಾಲ್ಕೂ ಮಂದಿ ಅಪರಾಧಿಗಳು ತಮಗೆ ಲಭ್ಯವಿದ್ದ ಎಲ್ಲ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಿದಂತಾಗಿತ್ತು. ತಿಹಾರ್ ಸೆರೆಮನೆ ಅಧಿಕಾರಿಗಳು ವಿನಯ್ ಶರ್ಮ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಮತ್ತು ಪವನ್ ಗುಪ್ತ ನಾಲ್ಕೂ ಮಂದಿ ಅಪರಾಧಿಗಳ ವಿರುದ್ದ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸುವಂತೆ ಕೋರಿ ಬುಧವಾರ ಅರ್ಜಿ ಸಲ್ಲಿಸಿದ್ದರು. ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರದ ಸಂತ್ರಸ್ಥ ಯುವತಿಯ ತಂದೆ ಶಿಕ್ಷಿತ ಅಪರಾಧಿಗಳನ್ನು ತಿಂಗಳಲ್ಲಿ ಗಲ್ಲಿಗೇರಿಸಲಾಗುವುದು ಎಂಬ ಆಶಯವನ್ನು ಬುಧವಾರ ವ್ಯಕ್ತ ಪಡಿಸಿದ್ದರು. ’ಆತನಿಗೆ ಇನ್ನೂ ಒಂದು ಆಯ್ಕೆ ಬಾಕಿ ಇದೆ. ಕ್ಷಮಾದಾನ ಕೋರಿಕೆ ಅರ್ಜಿ ವಜಾಗೊಳಿಸಿದ್ದನ್ನು ಇತರ ಅಪರಾಧಿಗಳು ಪ್ರಶ್ನಿಸಿದ್ದಂತೆ ಈತನೂ ಪ್ರಶ್ನಿಸಬಹುದು. ಮುಂದೇನಾಗುತ್ತದೋ ನೋಡೋಣ. ಆದರೆ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆಎಂದು ಅವರು ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡು ಗುರು ತೇಜ್ ಬಹಾದುರ್ ಆಸ್ಪತ್ರೆಗೆ ದಾಖಲಾಗಿದ್ದ ಮಂದಿ ಸಾವನ್ನಪ್ಪುವುದರೊಂದಿಗೆ ಹಿಂಸಾಚಾರಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 2020 ಮಾರ್ಚ್ 05ರ ಗುರುವಾರ ೫೩ಕ್ಕೆ ಏರಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದವು. ಗಲಭೆಗೆ ಸಂಬಂಧಿಸಿದಂತೆ ಈವರೆಗೆ ೬೫೪ ಪ್ರಕರಣಗಳನ್ನು ದಾಖಲಿಸಲಾಗಿದ್ದು, ೧೮೨೦ ವ್ಯಕ್ತಿಗಳನ್ನು ಬಂಧಿಸಲಾಗಿಯಿತು. ಆಮ್ ಆದ್ಮಿ ಪಕ್ಷದಿಂದ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್ ಅವರನ್ನು ಗುರುವಾರ ದೆಹಲಿಯಲ್ಲಿ ನ್ಯಾಯಾಲಯಕ್ಕೆ ಶರಣಾಗಲು ಬಂದಾಗ ಬಂಧಿಸಲಾಗಿದ್ದು, ದೆಹಲಿ ಅಪರಾಧ ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಅವರ ಮೇಜಿನಿಂದ ಕಾಗದ ಪತ್ರಗಳನ್ನು ಕಿತ್ತುಕೊಂಡದ್ದಕ್ಕಾಗಿ ಮತ್ತು ಸದನದ ನಿಯಮಾವಳಿಗಿಗೆ ಅಗೌರವ ತೋರಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಮಂದಿ ಸಂಸತ್ ಸದಸ್ಯರನ್ನು ಸದನದಿಂದ ಮುಂಗಡಪತ್ರ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆಯು 2020 ಮಾರ್ಚ್ 05ರ ಗುರುವಾರ ಕೈಗೊಂಡಿತು. ಅಮಾನತುಗೊಂಡಿರುವ ಸದಸ್ಯರು: ಗೌರವ್ ಗೊಗೋಯಿ, ಟಿ.ಎನ್. ಪ್ರತಾಪನ್, ಡೀನ್ ಕುರಿಯಾಕೋಸ್, ಮನಿಕಾ ಟ್ಯಾಗೋರ್, ರಾಜಮೋಹನ್ ಉನ್ನಿಥನ್, ಬೆನ್ನಿ ಬೆಹನನ್ ಮತ್ತು ಗುರುಜೀತ್ ಸಿಂಗ್ ಔಜ್ಲಿಯಾ. ಪಕ್ಷದ ಸಂಸದರನ್ನು ಸದನ ಕಲಾಪದಿಂದ ಅಮಾನತುಗೊಳಿಸಿದ್ದು ಸೇಡಿನ ಕ್ರಮ ಎಂಬುದಾಗಿ ಕಾಂಗ್ರೆಸ್ ಪಕ್ಷವು ಬಳಿಕ ಟೀಕಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)



No comments:

Post a Comment