ನಾನು ಮೆಚ್ಚಿದ ವಾಟ್ಸಪ್

Friday, March 27, 2020

ಇಂದಿನ ಇತಿಹಾಸ History Today ಮಾರ್ಚ್ 27

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಾವಳಿ ಏಕಾಏಕಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ೨೧ ದಿನಗಳ ಭಾರತ ದಿಗ್ಬಂಧನದಿಂದ ಸಾಲಗಾರರಿಗೆ ಎದುರಾಗಿರುವ ಸಂಕಷ್ಟ ನಿವಾರಣೆಗಾಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ), ಹೌಸಿಂಗ್ ಫೈನಾನ್ಸ್ ಕಂಪನಿಗಳು ಮತ್ತು ಇತರ ಹಣಕಾಸು ಸಂಸ್ಥೆU ಎಲ್ಲ ಅವಧಿ ಸಾಲಗಳ (ಟರ್ಮ್ ಲೋನ್) ಇಎಂಐ ಕಂತುಗಳ ಪಾವತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)  2020 ಮಾರ್ಚ್ 27ರ ಶುಕ್ರವಾರ ಮೂರು ತಿಂಗಳ ಅವಧಿಗೆ ಸ್ಥಗಿತಗೊಳಿಸಿತು. ಮಧ್ಯಮ ವರ್ಗ ಮತ್ತು ಸಣ್ಣ ಉದ್ಯಮಿಗಳಿಗೆ ಅಗತ್ಯವಾಗಿದ್ದ ನೆರವನ್ನು ಘೋಷಣೆ ಮಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ರಮದಿಂದ ಸಾಲಗಾರನ ಸಾಲ ಇತಿಹಾಸದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರುಆರ್ಬಿಐ ಅನುಮತಿ ನೀಡಿರುವ ಮೂರು ತಿಂಗಳ ಇಎಂಐ ಕಂತು ಪಾವತಿ ನಿಷೇಧವು ಸಾಲಗಾರರಿಗೆ ತಮ್ಮ ಉಳಿತಾಯದ ಮೇಲಿನ ಹೊರೆಗಳನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸುಸ್ತಿದಾರರಾಗದಂತೆ ಅವರನ್ನು ಸಂರಕ್ಷಿಸುತ್ತದೆ. ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಸಮಯದಲ್ಲಿ ಇವುಗಳನ್ನು ನಿಷ್ಕ್ರಿಯ ಆಸ್ತಿಗಳು (ಎನ್ಪಿಎ) ಎಂದು ವರ್ಗೀಕರಿಸಬೇಕಾಗುತ್ತದೆ ಎಂಬ ಆತಂಕವಿಲ್ಲದೆ ಕಂಪೆನಿಗಳಿಗೆ ಕಾರ್ಯ ಬಂಡವಾಳದ ಚಕ್ರವನ್ನು ಪುನರ್ ರೂಪಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದು ಆರ್ಬಿಐ ಹೇಳಿತು. "ಅವದಿ ಸಾಲಗಳ ಇಎಂಐ ಕಂತು ಪಾವತಿ ಮೇಲಿನ ನಿಷೇಧವು ಎಲ್ಲ ವಾಣಿಜ್ಯ ಬ್ಯಾಂಕುಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸ್ಥಳೀಯ ಪ್ರಾದೇಶಿಕ ಬ್ಯಾಂಕುಗಳು ಸೇರಿದಂತೆ), ಸಹಕಾರಿ ಬ್ಯಾಂಕುಗಳು, ಅಖಿಲ ಭಾರತ ಹಣಕಾಸು ಸಂಸ್ಥೆಗಳು ಮತ್ತು ಎನ್ಬಿಎಫ್ಸಿಗಳು (ವಸತಿ ಹಣಕಾಸು ಕಂಪನಿಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳು ಸೇರಿದಂತೆ) - ಇವುಗಳಲ್ಲಿ ೨೦೨೦ ಮಾರ್ಚ್ ೧ರ ವೇಳೆಗೆ ಬಾಕಿ ಇರುವ ಎಲ್ಲ ಅವಧಿ ಸಾಲಗಳ ಇಎಂಐ ಕಂತುಗಳ ಪಾವತಿಯನ್ನು ಮೂರು ತಿಂಗಳ ತಿಂಗಳ ಕಾಲ ಸ್ಥಗಿತಗೊಳಿಸಲು ಅನುಮತಿ ನೀಡಲಾಗುತ್ತಿದೆ ಎಂದು  ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ) 

2020: ನವದೆಹಲಿ: ಒಂದು ದಶಕದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣzಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸಿದ ಮತ್ತು ಎಲ್ಲ ಅವಧಿ ಸಾಲಗಳ ಇಎಂಐ ಕಂತುಗಳ ಪಾವತಿಯನ್ನು ಮೂರು ತಿಂಗಳ ಅವಧಿಗೆ ಸ್ಥಗಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಕ್ರಮಗಳನ್ನು ದೈತ್ಯ ಹೆಜ್ಜೆಗಳು ಎಂಬುದಾಗಿ 2020 ಮಾರ್ಚ್ 27ರ ಶುಕ್ರವಾರ ಬಣ್ಣಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. "ಇಂದು ಆರ್ಬಿಐ ನಮ್ಮ ಆರ್ಥಿಕತೆಯನ್ನು ಕೊರೋನವೈರಸ್ ಪ್ರಭಾವದಿಂದ ರಕ್ಷಿಸಲು ದೈತ್ಯ ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ಪ್ರಧಾನಿ ಟ್ವೀಟ್ ಮಾಡಿದರು. "ಆರ್ಬಿಐ ಪ್ರಕಟಣೆಗಳು ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಿ ದ್ರವ್ಯತೆಯನ್ನು (ಲಿಕ್ವಿಡಿಟಿ) ಸುಧಾರಿಸುತ್ತದೆ, ನಿಧಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ, ಮಧ್ಯಮ ವರ್ಗ ಮತ್ತು ವ್ಯವಹಾರಗಳಿಗೆ ಸಹಾಯ ಮಾಡುತ್ತದೆ" ಎಂದು ಮೋದಿ ಟ್ವೀಟ್ ಮಾಡಿದರು. ಕೊರೋನವೈರಸ್ ಸಾಂಕ್ರಾಮಿಕ ರೋಗದ ಕ್ಷಿಪ್ರ ಹರಡುವಿಕೆಯಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ನಿಧಾನಗತಿಯ ಆರ್ಥಿಕತೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಮಾನದಂಡ ಬಡ್ಡಿದರವಾದ ರೆಪೊ ದರವನ್ನು ೭೫ ಬೇಸಿಸ್ ಪಾಯಿಂಟ್ನಿಂದ .% ಕ್ಕೆ ಇಳಿಸಲಾಗಿದೆ ಎಂದು ಪ್ರಕಟಿಸಿದ್ದರು. ಇದು ಕಳೆದ  ೧೫ ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ದರ, ಇದರ ಜೊತೆಗೆ ರಿವರ್ಸ್ ರೆಪೊ ದರವನ್ನು ಕೂಡಾ ಆರ್ಬಿಐ ೯೦ ಬೇಸಿಸ್ ಪಾಯಿಂಟ್ನಿಂದ  % ಕ್ಕೆ ಇಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಬೆಂಗಳೂರು: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮಾರ್ಗ ಕಂಡು ಹಿಡಿಯಲು ವೈದ್ಯಕೀಯ ವಿಜ್ಞಾನವು ಹೆಣಗುತ್ತಿರುವಾಗಲೇ, ತಾವು ಕಂಡು ಹಿಡಿದ ವೈದ್ಯಕೀಯ ಎಲೆಕ್ಟ್ರಾನಿಕ್ ಉಪಕರಣವು ಕೊರೋನಾವೈರಸ್ಸುಗಳನ್ನು ತಟಸ್ಥಗೊಳಿಸಬಲ್ಲುದು ಎಂದು ಬೆಂಗಳೂರಿನ ವಿಜ್ಞಾನಿಯೊಬ್ಬರು 2020 ಮಾರ್ಚ್ 27ರ ಶುಕ್ರವಾರ ಪ್ರತಿಪಾದಿಸಿದರು. ಕೊರೋನಾ ವೈರಸ್ ವ್ಯಾಧಿಗೆ (ಕೋವಿಡ್ ೧೯) ಯಾವುದೇ ಚಿಕಿತ್ಸೆ ಇಲ್ಲ ಮತ್ತು ಲಸಿಕೆ ಅಭಿವೃದ್ಧಿಯಾಗಲು ಕನಿಷ್ಠ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚಿನ ಕಾಲಾವಕಾಶ ಬೇಕು. ವಾಸ್ತವಿಕವಾಗಿ ವಿಜ್ಞಾನಿಗಳು ವೈರಸ್ಸಿನ ಇನ್ನಷ್ಟು  ಉದಯೋನ್ಮುಖ ರೂಪಾಂತರಗಳನ್ನು ಗಮನಿಸುತ್ತಿರುವುದರಿಂದ ರೋಗದ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಿಲ್ಲ. ಎಲ್ಲರೂ ಅರ್ಥ ಮಾಡಿಕೊಂಡಿರುವ ಏಕೈಕ ವಿಚಾರ ಏನೆಂದರೆ ಇದು ಅತ್ಯಂತ ವೇಗವಾಗಿ ಹರಡುವ ರೋಗ ಎಂಬುದಷ್ಟೇ. ಮಧ್ಯೆ, ವೈರಸ್ ಹರಡುವಿಕೆಯನ್ನು ತಟಸ್ಥಗೊಳಿಸುವಂತಹ ಉಪಕರಣವನ್ನೇ ತಯಾರಿಸಿದರೆ? ಹೌದು ಅಂತಹ ಉಪಕರಣದ ಮೂಲಮಾದರಿಯನ್ನು ತಾನು ಅಭಿವೃದ್ಧಿಪಡಿಸಿರುವುದಾಗಿ ಎಂದು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಸಂಶೋಧನಾ ಘಟPವಾಗಿರುವ ಬೆಂಗಳೂರಿನ ಆರ್ಗನೈಸೇಶನ್ ಡಿ ಸ್ಕಲೀನ್ ಪ್ರತಿಪಾದಿಸಿತು.  ಪರೀಕ್ಷೆಗಳನ್ನು ದೃಢೀಕರಿಸಲು ಮತ್ತು ಅದರ ಪರಿಣಾಮಕಾರಿತ್ವ ಪರಿಶೀಲನೆಗಾಗಿ ಉಪಕರಣದ ಮೂಲ ಮಾದರಿಯನ್ನು ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿತು. ತಮ್ಮ ಸಂಸ್ಥೆಯು ಆವಿಷ್ಕರಿಸಿರುವ ಪುಟ್ಟ ಉಪಕರಣ ಅಥವಾ ಗ್ಯಾಜೆಟ್ನ್ನು ಮನೆಗಳು, ಸಭಾಂಗಣಗಳು, ಕಚೇರಿಗಳು, ಶಾಲೆಗಳು, ಕಾರುಗಳು - ಹೀಗೆ ಎಲ್ಲೆಡೆಯಲ್ಲೂ ಇರಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ರಾಜಾ ವಿಜಯ್ ಕುಮಾರ್ ಮಾಧ್ಯಮ ಒಂದಕ್ಕೆ ತಿಳಿಸಿದರು. ಸಾಧನವು ಈಗಾಗಲೇ ಸೋಂಕಿತ ರೋಗಿಗಳಿಗೆ ಪರಿಹಾರವನ್ನು ನೀಡುವುದಿಲ್ಲ. ಆದರೆ ಇದು ವೈರಸ್ ಹರಡುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು. "ನೀವು ಇತರ ಕೋವಿಡ್-ಪಾಸಿಟಿವ್ ರೋಗಿಗಳೊಂದಿಗಿನ ಕೋಣೆಯಲ್ಲಿದ್ದರೆ ಮತ್ತು ಇತರರು ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲದಿದ್ದರೆ, ಸಾಧನವು ನಿಮ್ಮನ್ನು ರಕ್ಷಿಸುತ್ತದೆ ಏಕೆಂದರೆ ಸೋಂಕು ಹರಡುವುದಿಲ್ಲ" ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ವ್ಯಾಧಿಗೆ ಕಾರಣವಾಗುವ ಕೊರೋನವೈರಸ್ಸಿನ ಮೊದಲ ವೈರಾಣು ಚಿತ್ರಗಳನ್ನು ಪ್ರಸರಣ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಇಮೇಜಿಂಗ್ ಬಳಸಿ ಪುಣೆಯ ವಿಜ್ಞಾನಿಗಳು ಸೆರೆ ಹಿಡಿದಿದ್ದು, ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ  ಅವುಗಳನ್ನು 2020 ಮಾರ್ಚ್ 27ರ ಶುಕ್ರವಾರ ಪ್ರಕಟಿಸಲಾಯಿತು.
ಕೋವಿಡ್ -೧೯ ಸೋಂಕಿಗೆ ಕಾರಣವಾಗುವ ವೈರಸ್ ಸಾರ್ಸ್-ಕೋವ್ - ಚಿತ್ರಗಳು ೨೦೨೦ ಜನವರಿ ೩೦ ರಂದು ಸೆರೆ ಹಿಡಿಯಲಾಗಿದ್ದು ಅದು ಭಾರತದಲ್ಲಿ ನಡೆದ ಮೊದಲ ಪ್ರಯೋಗಾಲಯ ಪರೀಕ್ಷೆಯಲ್ಲಿ ಕೋವಿಡ್ ದೃಢ ಪಟ್ಟಿದ್ದ ವಿದ್ಯಾರ್ಥಿನಿಯೊಬ್ಬಳ ದ್ರವದಲ್ಲಿ ಪತ್ತೆಯಾಗಿದ್ದ ವೈರಸ್ಸಿನ ಚಿತ್ರಗಳಾಗಿವೆ. ವುಹಾನ್ನಲ್ಲಿ ವೈದ್ಯಕೀಯ ಕಲಿಯುತ್ತಿರುವ ಮೂವರು ವಿದ್ಯಾರ್ಥಿಗ ಪೈಕಿ ವಿದ್ಯಾರ್ಥಿನಿಯೊಬ್ಬಳು ಮನೆಗೆ ವಾಪಸಾದ ಬಳಿಕ ನಡೆಸಲಾದ ರೋಗನಿದಾನದಲ್ಲಿ ಆಕೆಗೆ ಕೋವಿಡ್ -೧೯ ಸೋಂಕು ತಗುಲಿದ್ದು ಬೆಳಕಿಗೆ ಬಂದಿತ್ತು. ೨೦೧೯ ಡಿಸೆಂಬರ್ನಲ್ಲಿ ಚೀನಾದ ವುಹಾನ್ನಲ್ಲಿ ಮೊದಲ ಗುಂಪು ಪ್ರಕರಣಗಳು ಪತ್ತೆಯಾದಾಗಿನಿಂದ ಕೋವಿಡ್ -೧೯ ವಿಶ್ವಾದ್ಯಂತ  ಕನಿಷ್ಠ ೨೫,೦೦೦ ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದು, ೫೪೦,೦೦೦ ಜನರಿಗೆ ಸೋಂಕು ತಗುಲಿದೆ. ಕೇರಳದ ಕೋವಿಡ್ -೧೯ ಪ್ರಕರಣಗಳಿಂದ ಬಂದ ವೈರಸ್ ಚಿತ್ರಗಳು, ಕೇರಳದ ಕೋವಿಡ್-೧೯ ಪ್ರಕರಣದ ಚಿತ್ರಗಳಲ್ಲಿನ ಸಾರ್ಸ್ -ಕೋವ್-  ವೈರಸ್ಸುಗಳು ೨೦೧೨ರಲ್ಲಿ ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ ಕೊರೋನಾವೈರಸ್ಗೆ ಕಾರಣವಾಗುವ ಮೆರ್ಸ್ -ಕೋವ್ ವೈರಸ್ಸನ್ನು ಮತ್ತು ತೀವ್ರ ಉಸಿರಾಟದ ಸಮಸ್ಯೆಯ  ಸಾರ್ಸ್ ಕೊರೋನಾವೈರಸ್ಗೆ ಕಾರಣವಾಗುವ ೨೦೦೨ರ ಸಾರ್ಸ್-ಕೋವ್ ವೈರಸ್ಸನ್ನು ಹೋಲುತ್ತವೆ"ಕೊರೋನವೈರಸ್ ಕಿರೀಟದಂತಹ ನೋಟವನ್ನು ಹೊಂದಿದೆ ಮತ್ತು ಮೇಲ್ಮೈಯಲ್ಲಿರುವ ಕಡ್ಡಿಗಳು (ಸ್ಪೈಕ್ಗಳು) ವೈರಸ್ ಕುಟುಂಬಕ್ಕೆ ಅದರ ಹೆಸರನ್ನು ನೀಡುತ್ತವೆ, ಏಕೆಂದರೆ ಕೊರೋನಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಕಿರೀಟ. ಪ್ರೋಟೀನ್ ಗ್ರಾಹಕಗಳು ಮತ್ತು ಸಕ್ಕರೆ ಗ್ರಾಹಕಗಳನ್ನು ಒಳಗೊಂಡಂತೆ ವಿವಿಧ ಗ್ರಾಹಕಗಳನ್ನು ಗುರುತಿಸಲು ಅವು ವಿಕಸನಗೊಂಡಿವೆ ಮತ್ತು ವೈರಾಣು ಅಂಟಿಸಲು ಆತಿಥೇಯ-ಕೋಶ-ಮೇಲ್ಮೈ ಗ್ರಾಹಕವನ್ನು ಮೊದಲು ಗುರುತಿಸುವ ಮೂಲಕ ಕೋಶಗಳನ್ನು ಪ್ರವೇಶಿಸುತ್ತವೆ, ಮತ್ತು ನಂತರ ಪ್ರವೇಶಕ್ಕಾಗಿ ವೈರಾಣು ಮತ್ತು ಆತಿಥೇಯ ಪೊರೆಗಳನ್ನು ಬೆಸೆಯುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾಜಿ ನಿರ್ದೇಶಕ ಡಾ ನಿರ್ಮಲ್ ಕೆ ಗಂಗೂಲಿ ಹೇಳಿದರು.  (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ಲಂಡನ್: ವಿಶ್ವಾದ್ಯಂತ ೨೧,೦೦೦ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಕೊರೋನಾವೈರಸ್ ಇದೀಗ ಇಂಗ್ಲೆಂಡಿನ ಯುವರಾಜ ಚಾರ್ಲ್ಸ್ ಬಳಿಕ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಆರೋಗ್ಯ ಸಚಿವ  ಮ್ಯಾಟ್ ಹ್ಯಾನ್ ಕಾಕ್ ಅವರನ್ನೂ  2020 ಮಾರ್ಚ್ 27ರ ಶುಕ್ರವಾರ ಬಾಧಿಸಿತು.. ಕಳೆದ ೨೪ ಗಂಟೆಗಳಿಂದ ನನಗೆ ಸಣ್ಣದಾಗಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು. ಪರೀಕ್ಷೆಯಲ್ಲಿ  ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗ ನಾನು ಸ್ವಯಂ ಏಕಾಂಗಿ ವಾಸದಲ್ಲಿ (ಐಸೋಲೆನ್) ಇದ್ದೇನೆ. ಆದರೆ, ನನ್ನ ನೇತೃತ್ವದಲ್ಲಿ ಸರ್ಕಾರ ಮುಂದುವರೆಯಲಿದೆ. ಮತ್ತು  ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಿದ್ಧನಾಗಿದ್ದೇನೆ ಎಂದು ಸ್ವತಃ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಟ್ವೀಟ್ ಮಾಡಿದರು. ಬ್ರಿಟನ್ ಮಹಾರಾಣಿ ಎಲಿಜೆಬೆತ್ ಅವರ ಮೊದಲ ಮಗ, ಬ್ರಿಟನ್ ರಾಜಕುಮಾರ ಹಾಗೂ ಬ್ರಿಟನ್ ಅರಸೋತ್ತಿಗೆಯ ಉತ್ತರಾಧಿಕಾರಿ ಯುವರಾಜ ಚಾರ್ಲ್ಸ್ (೭೧) ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದನ್ನು ಅರಮನೆ ಮೂಲಗಳು ಗುರುವಾರ ದೃಢಪಡಿಸಿದ್ದವು. ಇದೀಗ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಮಾರಕ ಸೋಂಕು ಕಾಣಿಸಿಕೊಂಡಿತು. ಜಾನ್ಸನ್ ಅವರು ಡೌನಿಂಗ್ ಸ್ಟ್ರೀಟ್ನಲ್ಲಿರುವ ಪ್ರಧಾನಿ ನಿವಾಸದಲ್ಲೇ ಏಕಾಂಗಿವಾಸದಲ್ಲಿ ಇರುತ್ತಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ ಶುಕ್ರವಾರ ೨೫,೨೩೪ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ ,೫೩,೨೪೪ನ್ನ್ನು ದಾಟಿದೆ. ಹೆಚ್ಚು ಸೋಂಕಿತರು ಇರುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನ ಪಡೆದಿದ್ದು ಚೀನಾ ಮತ್ತು ಇಟಲಿಯನ್ನು ಹಿಂದಕ್ಕೆ ತಳ್ಳಿದೆ. ಇರಾನಿನಲ್ಲಿ ೧೪೪ ಹೊಸ ಸಾವುಗಳು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ ,೩೭೮ಕ್ಕೆ ಏರಿದೆ ಎಂದು 2020 ಮಾರ್ಚ್ 27ರ ಶುಕ್ರವಾರ ವರದಿಗಳು ತಿಳಿಸಿದವು. ಇಟಲಿಯಲ್ಲಿ ಒಂದೇ  ದಿನ 1000 ಸಾವುಗಳು ಸಂಭವಿಸಿದವು. ಯುರೋಪಿನಲ್ಲಿ ಅತ್ಯಧಿಕ ಸಾವು (೧೭,೩೧೪) ಸಂಭವಿಸಿದೆ. ಇಟಲಿಯಲ್ಲಿ ,೧೬೫, ಸ್ಪೇನಿನಲ್ಲಿ ,೮೫೮ ಮತ್ತು ಚೀನಾದಲ್ಲಿ ೩೨೯೨ ಸಾವುಗಳು ಸಂಭವಿಸಿವೆ. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೭೨೪ಕ್ಕೆ ಏರಿದ್ದು, ಸಾವನ್ನಪ್ಪಿದವರ ಸಂಖ್ಯೆ ೧೭ಕ್ಕೆ ಏರಿದೆ. ಕೊರೋನಾವೈರಸ್ ಸೋಂಕು ಹರಡುವುದನ್ನು ತಡೆಯಲು ೨೧ ದಿನಗಳ ದಿಗ್ಬಂಧನ (ಲಾಕ್ ಡೌನ್) ಘೋಷಿಸಲಗಿರುವ ಭಾರತದಲ್ಲಿ ಜನರು ಕ್ರಮೇಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ರೂಢಿಸಿಕೊಳ್ಳಲು ಆರಂಭಿಸಿದ್ದು ಹಲವಡೆಗಳಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಕನಿಷ್ಟ ಮೀಟರ್ ( ಅಡಿ) ಅಂತರ ಕಾಯ್ದುಕೊಂಡು ಸರತಿ ಸಾಲುಗಳಲ್ಲಿ ಸಾಗುವುದನ್ನು ಅಭ್ಯಾಸ ಮಾಡಿಕೊಂಡಿರುವ ವರದಿಗಳು ಬಂದಿವೆ. ಈಮಧ್ಯೆ ಮಹಾರಾಷ್ಟ್ರದಲ್ಲಿ ೨೩ ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೫೩ಕ್ಕೇ ಏರಿದರೆ, ಕೇರಳದಲ್ಲಿ ೩೯ ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೬೪ಕ್ಕೆ ಏರಿದೆ. ತಮಿಳುನಾಡಿನಲ್ಲಿ ಹೊಸದಾಗಿ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಏತನ್ಮಧ್ಯೆ, ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿಕರ ಮೇಲಿನ ನಿಗಾದಲ್ಲಿ ಕಂಡು ಬಂದಿರುವ ವ್ಯತ್ಯಾಸವು ಕೊರೋನಾವೈರಸ್ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟವನ್ನು ಅಸ್ತವ್ಯಸ್ತಗೊಳಿಸಬಹುದು ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ದೇಶವ್ಯಾಪಿ ದಿಗ್ಬಂಧನ ಘೋಷಿಸಿರುವ ಹಿನ್ನೆಲೆಯಲ್ಲಿ  ಜೆ ಇಇ ಮತ್ತು ನೀಟ್ (ಎನ್ ಇಇಟಿ) ಪ್ರವೇಶ ಪರೀಕ್ಷೆಗಳನ್ನು ಮೇ ಕೊನೆಯ ವಾರಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರವು 2020 ಮಾರ್ಚ್ 27ರ ಶುಕ್ರವಾರ  ಪ್ರಕಟಿಸಿತು. ವಿದ್ಯಾರ್ಥಿಗಳು ಮತ್ತು ಪೋಷಕರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣ ಮಾಡಬೇಕಾಗಿರುವುದರಿಂದ ಅವರಿಗೆ ಆಗುವ ಅನಾನುಕೂಲ ತಪ್ಪಿಸಲು ನೀಟ್ (ಎನ್ಇಇಟಿ -ಯುಜಿ) ೨೦೨೦ ಮತ್ತು ಜೆಇಇ (ಮೆಯಿನ್) ಪರೀಕ್ಷೆಗಳನ್ನು ಮೇ ಕೊನೆಯ ವಾರದವರೆಗೆ ಮುಂದೂಡುವಂತೆ ನಾನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಿದ್ದೇನೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದರು. ಹಿಂದೆ ಜೆಇಇ ಪರೀಕ್ಷೆ ಏಪ್ರಿಲ್ ತಿಂಗಳಿಗೆ ಮತ್ತು ನೀಟ್ ಪರೀಕ್ಷೆ ಮೇ ೩ಕ್ಕೆ ನಿಗದಿಯಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 27  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)




No comments:

Post a Comment