ನಾನು ಮೆಚ್ಚಿದ ವಾಟ್ಸಪ್

Saturday, March 21, 2020

ಇಂದಿನ ಇತಿಹಾಸ History Today ಮಾರ್ಚ್ 21

2020: ನವದೆಹಲಿ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಅವರ ಪುತ್ರ ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಅವರು ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರೊಂದಿಗೆ ಸಂಪರ್ಕಕ್ಕೆ ಬಂದದ್ದು ಬೆಳಕಿಗೆ ಬಂದ ನಂತರ ನಡೆಸಿದ ಪರೀಕ್ಷೆಯಲ್ಲಿ ಕೊರೋನಾವೈರಸ್ ಸೋಂಕುನೆಗೆಟಿವ್ಆಗಿರುವುದು ಬೆಳಕಿಗೆ ಬಂದಿದೆ. ಸ್ವತಃ ವಸುಂಧರಾ ರಾಜೆ ಅವರು  2020 ಮಾರ್ಚ್ 21ರ ಶನಿವಾರ ಬಗ್ಗೆ ಟ್ವೀಟ್ ಮಾಡಿದರು. ‘ಕೋವಿಡ್ ೧೯ ಪರೀಕ್ಷೆಯನ್ನು ನಡೆಸಿದ ನಂತರ, ಫಲಿತಾಂಶಗಳು ನಕಾರಾತ್ಮಕವಾಗಿ ಕಂಡು ಬಂದಿವೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಆದಾಗ್ಯೂ, ಸೋಂಕು ಹರಡದಂತೆ ಮುಂಜಾಗರೂಕತಾ ಕ್ರಮವಾಗಿ, ನನ್ನ ಮಗ ಮತ್ತು ನಾನು ೧೫ ದಿನಗಳ ಕಾಲ ಪ್ರತ್ಯೇಕವಾಸ ಮುಂದುವರಿಯುತ್ತೇವೆಎಂದು ಬಿಜೆಪಿಯ ಹಿರಿಯ ಮುಖಂಡರಾದ ವಸುಂಧರಾ ರಾಜೆ ಟ್ವೀಟಿನಲ್ಲಿ ತಿಳಿಸಿದರು. ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಅವರಿಗೂ ಕೊರೋನಾವೈರಸ್ ಸೋಂಕು ನೆಗೆಟಿವ್  ಆಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು  ಹೆಸರು ಹೇಳಲು ಇಚ್ಛಿಸದ ಉತ್ತರಪ್ರದೇಶದ ಅಧಿಕಾರಿಯೊಬ್ಬರು ಹೇಳಿದರು. ಬಾಲಿವುಡ್ ನಟಿ ಕನಿಕಾಕಪೂರ್ ಅವರು ಮಾರ್ಚ್ ೧೧ ರಂದು ಲಂಡನ್ನಿಂದ ಆಗಮಿಸಿದ ನಂತರ ಪಾಲ್ಗೊಂಡಿದ್ದ ಮೂರು ಸಮಾರಂಭಗಳ ಪೈಕಿ ಒಂದರಲ್ಲಿ ವಸುಂಧರಾ ರಾಜೆ ಮತ್ತು ದುಶ್ಯಂತ್ ಸಿಂಗ್ ಇತರ ಹಲವರ ಜೊತೆಗೆ ಪಾಲ್ಗೊಂಡಿದ್ದರು. ಬಳಿಕ ಕನಿಕಾ ಕಪೂರ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದಜನತಾ ಕರ್ಫ್ಯೂಯಶಸ್ಸಿಗಾಗಿ ಭಾರತ ಸರ್ವ ಸಿದ್ಧತೆ ನಡೆಸುತ್ತಿರುವುದ ಮಧ್ಯೆಯೇ ದೇಶದಲ್ಲಿ ಕೋವಿಡ್-೧೯ ಸೋಂಕಿತ ಸಂಖ್ಯೆ 2020 ಮಾರ್ಚ್ 21ರ ಶನಿವಾರ  ೩೦೦ರ ಸಮೀಪಕ್ಕೆ ಬಂದಿತು. ಕೊರೋನಾಭೀತಿ ರಾಷ್ಟ್ರಪತಿ ಭವನಕ್ಕೂ ವ್ಯಾಪಿಸಿತು. ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೮ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಈವರೆಗೆ ಒಟ್ಟು ೨೯೮ ಕೊರೋನಾವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ತಿಳಿಸಿತು. ೨೯೮ ಪ್ರಕರಣಗಳ ಪೈಕಿ, ನಾಲ್ಕು ಜನರು ಸಾವನ್ನಪ್ಪಿದ್ದು, ೨೨ ಮಂದಿ ಚೇತರಿಸಿಕೊಂಡಿದ್ದಾರೆ. ಶುಕ್ರವಾರ ೫೦ ಹೊಸ ಪ್ರಕರಣಗಳು ವರದಿಯಾಗಿದ್ದು, ೨೪ ಗಂಟೆಗಳ ಅವಧಿಯಲ್ಲಿ ಕೊರೋನಾಸೋಂಕಿನ ಬೆಳವಣಿಗೆ ದುಪ್ಪಟ್ಟಾಯಿತು.  ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ಟ್ರ್ಯಾಕರ್ ಪ್ರಕಾರ, ವಿಶ್ವಾದ್ಯಂತ ಕೊರೋನಾವೈರಸ್ ವೈರಸ್ ಸಾವಿನ ಸಂಖ್ಯೆ ೧೧,೩೯೭ ಕ್ಕೆ ಏರಿದೆ, ೧೬೦ ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೨,೭೫,೪೨೭ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾದವು.  ಕೊರೋನಾವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯುವ ಮಾರ್ಗಗಳ ಬಗ್ಗೆ ಶುಕ್ರವಾರ ರಾಜ್ಯ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸುತ್ತಿದ್ದ ವೇಳೆಯಲ್ಲೇ ಭಾರತದಲ್ಲಿ ಒಂದು ದಿನದಲ್ಲಿ ಅತೀ ಹೆಚ್ಚು ಅಂದರೆ ೫೦ ಪ್ರಕರಣಗಳು ವರದಿಯಾಗಿ ಸೋಂಕಿತರ ಸಂಖ್ಯೆ ೨೨೩ಕ್ಕೆ ಏರಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಮೂರು ಶತಕದ ಸಮೀಪಕ್ಕೆ ಬರುತ್ತಿದ್ದಂತೆಯೇಸ್ವಯಂ ರಕ್ಷಣೆಯ ಜೊತೆಗೆ ಗೆಳೆಯರು ಮತ್ತು ಕುಟುಂಬದ ರಕ್ಷಣೆಗಾಗಿಸರ್ಕಾರದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂಬುದಾಗಿ 2020 ಮಾರ್ಚ್ 21ರ ಶನಿವಾರ ಮರುಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿಅನಗತ್ಯ ಪ್ರವಾಸಗಳಿಂದ ಪ್ರಯೋಜನವಿಲ್ಲ. ಅವುಗಳನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಉಳಿಯುವುದನ್ನು ಅಭ್ಯಾಸ ಮಾಡಿಕೊಳ್ಳಿಎಂದು ಆಗ್ರಹಿಸಿದರು. ಪ್ರಧಾನಿಯವರು ಈಗಾಗಲೇ ಮಾರ್ಚ್ ೨೨ರ ಭಾನುವಾರ ಸ್ವತಃ ಸಂಯಮ ಪ್ರದರ್ಶಿಸಿ, ಜನತಾ ಕರ್ಫ್ಯೂ ಪಾಲಿಸುವಂತೆ ಮತ್ತು ಬೆಳಗ್ಗೆ ಗಂಟೆಯಿಂದ ರಾತ್ರಿ ಗಂಟೆಯವರೆಗೆ ಮನೆಗಳಿಂದ ಹೊರ ಬರದಂತೆ ದೇಶವ್ಯಾಪಿ ಪ್ರಸಾರ ಭಾಷಣದ ಮೂಲಕ ಜನತೆಗೆ ಕರೆ ನೀಡಿದ್ದಾರೆ. ‘ಇದು ಸಂಯಮದ ಲಾಂಛನವಾಗಲಿದೆ  ಎಂದು ನುಡಿದ ಪ್ರಧಾನಿ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ೧೦ ಮಂದಿಗೆ ಬಾಯ್ಮಾತಿನ ಮೂಲಕ ಇಲ್ಲವೇ ದೂರವಾಣಿಯ ಮೂಲಕಜನತಾ ಕರ್ಫ್ಯೂ ಬಗ್ಗೆ ತಿಳಿಸಿ ಮನೆಯಲ್ಲೇ ಉಳಿಯುವಂತೆ ಆಗ್ರಹಿಸಬೇಕು ಎಂದು  ಪುನರುಚ್ಚರಿಸಿದರು. ‘ಎಂದಿಗೂ ಮರೆಯಬೇಡಿ- ಇವು ಮುಂಜಾಗರೂಕತೆಗಳು. ಭಯ-ಭೀತಿಗೆ ಒಳಗಾಗಬೇಡಿ. ಮನೆಗಳ ಒಳಗೇ ಉಳಿದುಕೊಳ್ಳುವುದಷ್ಟೇ ಮುಖ್ಯವಲ್ಲ, ನೀವು ಪಟ್ಟಣ, ನಗರದಲ್ಲಿ ಎಲ್ಲಿ ಇದ್ದೀರೋ ಅಲ್ಲಿಯೇ ಉಳಿದುಕೊಳ್ಳುವುದೂ ಮುಖ್ಯ. ಅನಗತ್ಯ ಪ್ರವಾಸ/ ಪ್ರಯಾಣಗಳು ನಿಮಗಾಗಲೀ, ಇತರರಿಗಾಗಲೀ ನೆರವಾಗುವುದಿಲ್ಲ. ಸಮಯದಲ್ಲಿ ಒಂದೊಂದು ಸಣ್ಣ ಪ್ರಯತ್ನ ಕೂಡಾ ದೊಡ್ಡ ಪರಿಣಾಮ ಬೀರುತ್ತದೆಎಂದು ಪ್ರಧಾನಿ ಟ್ವೀಟ್ ಮಾಡಿದರು. ಮನೆಗಳಲ್ಲೇ ಕಡ್ಡಾಯವಾಗಿ ಏಕಾಂಗಿ ವಾಸ ಮಾಡುವಂತೆ ವೈದ್ಯರು/ ಅಧಿಕಾರಿಗಳಿಂದ ಸಲಹೆ ಪಡೆದ ವ್ಯಕ್ತಿಗಳು ರೈಲುಗಳು ಮತ್ತು ಇತರ ಸಾರಿಗೆ ವಾಹನಗಳಲ್ಲಿ ಸಂಚರಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಬರುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಮನೆಯಲ್ಲೇ ಸ್ವಯಂ ಏಕಾಂಗಿವಾಸ ಅನುಸರಿಸುವಂತೆ ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸುವಂತೆಯೂ ಮೋದಿ ಜನರಿಗೆ ಸೂಚಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜೀನಾಮೆ ನೀಡಿದ ಬಳಿಕ ರಾಜ್ಯ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿ ಕಮಲನಾಥ್ ಸರ್ಕಾರದ ಪತನಕ್ಕೆ ಕಾರಣರಾದ ೨೨ ಮಂದಿ ಮಾಜಿ ಕಾಂಗ್ರೆಸ್ ಶಾಸಕರು  2020 ಮಾರ್ಚ್ 21ರ ಶನಿವಾರ  ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಈ ಶಾಸಕರ ರಾಜೀನಾಮೆಯು ಮಧ್ಯಪ್ರದೇಶದಲ್ಲಿ ಹಲವಾರು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿದ್ದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.  ‘ಮಧ್ಯಪ್ರದೇಶದ ಅಭಿವೃದ್ಧಿ ಮತ್ತು ಪ್ರಗತಿಯ ಪ್ರತಿಜ್ಞೆಯೊಂದಿಗೆ, ೨೨ ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ನನ್ನ ಮಾಜಿ ಸಹೋದ್ಯೋಗಿಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು  2020 ಮಾರ್ಚ್ 21ರ ಶನಿವಾರ  ಭೇಟಿ ಮಾಡಿದ್ದಾರೆ ಮತ್ತು ಪಕ್ಷವನ್ನು ಸೇರಿದ್ದಾರೆಎಂದು ಜ್ಯೋತಿರಾದಿತ್ಯ ಸಿಂಧಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದರು. ಮಧ್ಯಪ್ರದೇಶದ ಮಾಜಿ ಕಾಂಗ್ರೆಸ್ ನಾಯಕ ಹಾಗೂ ರಾಜಕುಟುಂಬದ ಕುಡಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ೨೨ ಶಾಸಕರು ಮಾರ್ಚ್ ೯ರಂದು ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲನಾಥ್ ಸರ್ಕಾರವನ್ನು ಪತನದ ಅಂಚಿಗೆ ತಂದಿದ್ದರು. ಆದಾಗ್ಯೂ, ರಾಜೀನಾಮೆಗಳನ್ನು ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ತತ್ ಕ್ಷಣವೇ ಅಂಗೀಕರಿಸಿರಲಿಲ್ಲ. ಕುದುರೆವ್ಯಾಪಾರದ ಸಾಧ್ಯತೆಯನ್ನು ನಿವಾರಿಸುವುದಕ್ಕಾಗಿ ರಾಜೀನಾಮೆ ನೀಡಿದ್ದ ಎಲ್ಲ ಶಾಸಕರನ್ನೂ ಬಳಿಕ ಬೆಂಗಳೂರಿಗೆ ರೆಸಾಟ್ವಾಸಕ್ಕೆ ಕರೆದೊಯ್ಯಲಾಗಿತ್ತು. ಕೆಲವು ವಾರಗಳ ರಾಜಕೀಯ ಪ್ರಹಸನದ ನಂತರ ಎಲ್ಲ ಶಾಸಕರ ರಾಜೀನಾಮೆಗಳನ್ನು, ಸುಪ್ರೀಂಕೋಟ್ ಬಲಾಬಲ ಪರೀಕ್ಷೆಗೆ ಗಡುವು ವಿಧಿಸಿದ ಬಳಿಕ ಗುರುವಾರ ವಿಧಾನಸಭಾಧ್ಯಕ್ಷರು ಅಂಗೀಕರಿಸಿದ್ದರು. ಮುಖ್ಯಮಂತ್ರಿ ಕಮಲನಾಥ್ ಅವರು ಶುಕ್ರವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 21  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:

Post a Comment