ನಾನು ಮೆಚ್ಚಿದ ವಾಟ್ಸಪ್

Wednesday, March 18, 2020

ಇಂದಿನ ಇತಿಹಾಸ History Today ಮಾರ್ಚ್ 18

2020: ನವದೆಹಲಿ/ ಕಾಶ್ಮೀರ: ಕೊರೊನಾವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಮುಂಜಾಗರೂಕತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 2020 ಮಾರ್ಚ್  18ರ  ಬುಧವಾರ ನಾಡಿನ ಪ್ರಖ್ಯಾತ ವೈಷ್ಣೊದೇವಿ ಯಾತ್ರೆಯನ್ನು ರದ್ದುಪಡಿಸಿತು. ವೈಷ್ಣೊದೇವಿ ಯಾತ್ರೆಯನ್ನು ಬುಧವಾರದಿಂದಲೇ ರದ್ದುಪಡಿಸಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಅಂತರರಾಜ್ಯ ಬಸ್ಸುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕ್ತಾರರು ಶ್ರೀನಗರದಲ್ಲಿ ತಿಳಿಸಿದರು. ಯಾತ್ರೆಯ ಆರಂಭಿಕ ಸ್ಥಳವಾದ ಕತ್ರಾವನ್ನು ಈಗಾಗಲೇ ತಲುಪಿರುವ ಯಾತ್ರಿಕರು ಹಾಗೂ ಪ್ರಸ್ತುತ ಯಾತ್ರೆ ಆರಂಭಿಸಿರುವ ಯಾತ್ರಿಕರು ಮುಂಜಾಗ್ರತೆ ವಹಿಸಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿತು. ಎಲ್ಲೆಡೆ ಕೊರೊನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ಮುಂದೂಡುವಂತೆ ಶ್ರೀಮಾತಾ ವೈಷ್ಣೊದೇವಿ ದೇವಸ್ಥಾನ ಮಂಡಳಿಯು ಮಂಗಳವಾರ ಮನವಿ ಮಾಡಿತ್ತು. ಅಲ್ಲದೇ ಯಾತ್ರಿಕರ ಸುರಕ್ಷತೆಗಾಗಿ ದೇವಸ್ಥಾನ ಮಂಡಳಿಯು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಅಧುಕುವರಿ ಪ್ರದೇಶದ ಗುಹೆಯ ಪ್ರವೇಶವನ್ನು ನಿಷೇಧಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬರ್ಲಿನ್: ವಿಶ್ಯಾದ್ಯಂತ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ೮೦೦೦ಕ್ಕೆ ತಲುಪಿದ್ದು, ಸೋಂಕಿತರ ಸಂಖ್ಯೆ ,೦೦,೦೦೦ ದಾಟಿದೆ ಎಂದು ವರದಿಗಳು  2020 ಮಾರ್ಚ್  18ರ  ಬುಧವಾರ ತಿಳಿಸಿದ್ದು, ದೇಶ-ದೇಶಗಳ ಮಧ್ಯೆ ಗಡಿಗಳನ್ನು ಮುಚ್ಚಿದ್ದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕೋವಿಡ್ ೧೯ ಹರಡದಂತೆ ತಡೆಯಲು ದೇಶಗಳು ಹರಸಾಹಸ ಪಡುತ್ತಿದ್ದು, ಗಡಿಗಳಲ್ಲಿ ಸಂಚಾರ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಪರಿಣಾಮವಾಗಿ ಐರೋಪ್ಯ ದೇಶಗಳ ಗಡಿಗಳಲ್ಲಿ ಬುಧವಾರ ತೀವ್ರ ವಾಹನ ದಟ್ಟಣೆ ಉಂಟಾಯಿತು. ರಸ್ತೆಗಳಲ್ಲಿ ಮೈಲುಗಟ್ಟಲೆಟ್ರಾಫಿಕ್ ಜಾಮ್ಆಗಿ, ತುರ್ತು ಔಷಧ ಒಯ್ಯುವ ಟ್ರಕ್ಕುಗಳಿಗೂ ಸಾಗುವುದು ಅತ್ಯಂತ ದುಸ್ತರವಾಗಿ ಪರಿಣಮಿಸಿತು೮೨,೦೦೦ ಮಂದಿ ಕೊರೋನಾ ವೈರಸ್ ವ್ಯಾಧಿಯಿಂದ ಗುಣಮುಖರಾಗಿದ್ದರೂ, ವಿಶ್ಯಾದ್ಯಂತ ಇದಕ್ಕೆ ಬಲಿಯಾದವರ ಸಂಖ್ಯೆ ೮೦೦೦ಕ್ಕೆ ಮತ್ತು ಸೋಂಕಿತರ ಸಂಖ್ಯೆ ,೦೦,೦೦೦ದ ಗಡಿ ದಾಟಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯದ ಮಾಹಿತಿ ತಿಳಿಸಿತು. ಆಸ್ಟ್ರಿಯಾದ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಪೂರ್ವ ಭಾಗದ ಐರೋಪ್ಯರು ಸ್ವದೇಶಕ್ಕೆ ಮರಳುವ ಸಲುವಾಗಿ ಹಾಕುತ್ತಿರುವ  ಒತ್ತಡದ ಹಿನ್ನೆಲೆಯಲ್ಲಿ ಹಂಗೆರಿಯು ರಾತ್ರೋರಾತ್ರಿ ತನ್ನ ಗಡಿಗಳನ್ನು ಹಂತ ಹಂತಗಳಲ್ಲಿ ತೆರೆಯಿತು. ಬಲ್ಗೇರಿಯಾದ ನಾಗರಿಕರಿಗೆ ಮೊದಲ ನಿಯಂತ್ರಿತ ವಾಹನಗಳ ಮೂಲಕ ಸಾಗಲು ಅನುಮತಿ ನೀಡಲಾಯಿತು. ಅವರ ಬಳಿಕ ರೋಮೇನಿಯನ್ನರು ಸಾಗಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ವಿವಿಧ ಕಡೆ ಹೊಸದಾಗಿ ಸೋಂಕು ತಗುಲಿದ ಪ್ರಕರಣಗಳ ವರದಿಯ ಬಳಿಕ ಕೊರೋನಾ ವೈರಸ್ (ಕೋವಿಡ್ -೧೯) ಸೋಂಕಿತರ ಸಂಖ್ಯೆ  ೧೫೧ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಮಾರ್ಚ್  18ರ  ಬುಧವಾರ ತಿಳಿಸಿತು. ೧೫೧ ಜನರಲ್ಲಿ ೧೨೬ ಮಂದಿ ಭಾರತೀಯರಾಗಿದ್ದು, ೨೫ ಮಂದಿ ವಿದೇಶೀಯರು ಎಂದು ಸಚಿವಾಲಯ ಹೇಳಿತು. ವೈರಸ್ ಸೋಂಕಿತರ ರಾಜ್ಯವಾರು ವಿವರಗಳನ್ನು ನೀಡಿದ ಆರೋಗ್ಯ ಸಚಿವಾಲಯ ಕೋವಿಡ್ ೧೯ ದೃಢಪಟ್ಟ ೪೨ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದರ ನಂತರದ ಸ್ಥಾನದಲ್ಲಿ ಇರುವ ಕೇರಳವು ೨೭, ಉತ್ತರ ಪ್ರದೇಶ ೧೬ ಮತ್ತು ಕರ್ನಾಟಕ ೧೧ ಪ್ರಕರಣಗಳನ್ನು ದಾಖಲಿಸಿವೆ ಎಂದು ತಿಳಿಸಿತು. ಸೋಂಕು ತಗುಲಿದ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ,೭೦೦ಕ್ಕೂ ಹೆಚ್ಚು ಮಂದಿಯನ್ನು ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಸಚಿವಾಲಯ ಹೇಳಿತು. ದೆಹಲಿಯಲ್ಲಿ ಈವರೆಗೆ ಕೊರೋನಾವೈರಸ್ ಸೋಂಕು ತಗುಲಿದ ೧೦ ಪ್ರಕರಣಗಳು ವರದಿಯಾಗಿದ್ದು, ಇವುಗಳ ಪೈಕಿ ಒಬ್ಬ ವಿದೇಶೀ ಪ್ರಜೆ ಸೇರಿದ್ದಾನೆ. ಸರ್ಕಾರಿ ಮಾಹಿತಿಯ ಪ್ರಕಾರ, ೧೪ ಸೋಂಕು ಪೀಡಿತರು ಈವರೆಗಿನ ಅವಧಿಯಲ್ಲಿ ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಕೇರಳದಲ್ಲಿ ಕಳೆದ ತಿಂಗಳು ಬಿಡುಗಡೆ ಮಾಡಲಾಗಿದ್ದ ಮೂವರು ವಿದಾರ್ಥಿಗಳೂ ಸೇರಿದ್ದಾರೆ.  . (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ನಗರದ ಖಾಸಗಿ ರೆಸಾರ್ಟ್ನಲ್ಲಿರುವ ಬಂಡಾಯ ಶಾಸಕರ ಭೇಟಿಗೆ ತಮಗೆ ಅವಕಾಶ ನೀಡುವಂತೆ ಪೊಲೀಸರಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ 2020 ಮಾರ್ಚ್  18ರ  ಬುಧವಾರ ತಿರಸ್ಕರಿಸಿತು. ಇದರೊಂದಿಗೆ ದಿಗ್ವಿಜಯ್ ಸಿಂಗ್ ಅವರಿಗೆ ಭಾರೀ ಹಿನ್ನಡೆಯಾಯಿತುಬಂಡಾಯ ಶಾಸಕರ ಭೇಟಿಗೆ ಅವಕಾಶ ಕೋರಿ ದಿಗ್ವಿಜಯ್ ಸಿಂಗ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರು, ಮಧ್ಯ ಪ್ರದೇಶ ಶಾಸಕರು ತಮ್ಮ ಜೀವಕ್ಕೆ ಅಪಾಯವಿದ್ದು, ಇದನ್ನು ತಪ್ಪಿಸಲು ಮಧ್ಯ ಪ್ರದೇಶದ ಯಾವುದೇ ಕಾಂಗ್ರೆಸ್ ನಾಯಕರಿಗೆ ತಮ್ಮ ಭೇಟಿಗೆ ಅವಕಾಶ ನೀಡಬಾರದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದನ್ನು ಉಲ್ಲೇಖಿಸಿದರು. ವಿಚಾರದಲ್ಲಿ ಪೊಲೀಸರ ಕ್ರಮದಿಂದ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದೂ ನ್ಯಾಯಮೂರ್ತಿ ಹೇಳಿದರುಇದೇ ವೇಳೆ, ತಮ್ಮನು ಅಕ್ರಮವಾಗಿ ಬಂಧಿಸಲಾಗಿದೆ ಎಂಬುದಾಗಿ ದಿಗ್ವಿಜಯ್ ಸಿಂಗ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಯಾರಿಗೆ ಬಹುಮತ ಇದೆ ಎಂಬುದಾಗಿ ನಿರ್ಧರಿಸುವ ಸಲುವಾಗ ಶಾಸನಸಭೆಯ ಮಾರ್ಗಕ್ಕೆ ತಾನು ಅಡ್ಡ ಬರುವುದಿಲ್ಲ ಎಂಬುದಾಗಿ 2020 ಮಾರ್ಚ್  18ರ  ಬುಧವಾರ ಇಲ್ಲಿ ಸ್ಪಷ್ಟ ಪಡಿಸಿದ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು 2020 ಮಾರ್ಚ್ 19ರ ಗುರುವಾರ ಬೆಳಗ್ಗೆ ೧೦.೩೦ ಗಂಟೆಗೆ ಮುಂದೂಡಿತು. ಬಂಡಾಯ ಶಾಸಕರನ್ನು ಭೇಟಿ ಮಾಡಲು ಬೆಂಗಳೂರಿಗೆ ತನ್ನ ರಿಜಿಸ್ಟ್ರಾರ್ ಅವರನ್ನು ಕಳುಹಿಸಲೂ ಕೋರ್ಟ್ ನಿರಾಕರಿಸಿತು. ಮಧ್ಯಪ್ರದೇಶ ವಿಧಾನಸಭೆಯಲ್ಲಿ ತತ್ ಕ್ಷಣ ವಿಶ್ವಾಸ ಮತ ಯಾಚನೆ ಕಲಾಪ ನಡೆಸುವಂತೆ ನಿರ್ದೇಶನ ಕೋರಿ ಭಾರತೀಯ ಜನತಾ ಪಕ್ಷವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಾಲದಲ್ಲಿ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹೇಮಂತ ಗುಪ್ತ ಅವರನ್ನು ಒಳಗೊಂಡ ಪೀಠವು ಸ್ಪಷ್ಟನೆಯನ್ನು ನೀಡಿತು. ‘ಸಂವಿಧಾನಬದ್ಧ ನ್ಯಾಯಾಲಯವಾಗಿ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆಎಂದು ಪೀಠ ಹೇಳಿತು. ೨೨ ಶಾಸಕರ ರಾಜೀನಾಮೆಯ ನಂತರ, ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಲ್ಪಮತಕ್ಕೆ ಇಳಿದಿದೆಯೇ ಅಥವಾ ಇನ್ನೂ ಬಹುಮತವನ್ನು ಹೊಂದಿದೆಯೇ ಎಂಬುದನ್ನು ನಿರ್ಧರಿಸಲು ತತ್ ಕ್ಷಣ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂದು ಬಿಜೆಪಿ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತ್ತು. ಮಧ್ಯೆ, ತನ್ನ ಶಾಸಕರನ್ನು ಬೆಂಗಳೂರಿನಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ಆಪಾದಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ "ಪ್ರಜಾಪ್ರಭುತ್ವವನ್ನು ಮಟ್ಟಹಾಕಲು" ಬಿಜೆಪಿ ಯತ್ನಿಸಿದೆ ಎಂದು ದೂಷಿಸಿತು. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಇರಾನಿನಲ್ಲಿ ೨೫೫ ಮಂದಿ ಭಾರತೀಯರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2020 ಮಾರ್ಚ್  18ರ  ಬುಧವಾರ ತಿಳಿಸಿತು.  ಇರಾನಿನ ಹೊರತಾಗಿ  ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ೧೨ ಮಂದಿ, ಇಟಲಿಯಲ್ಲಿ ಐವರು, ಶ್ರೀಲಂಕಾ, ರ್ವಾಂಡಾ, ಕುವೈಟ್ ಮತ್ತು ಹಾಂಕಾಂಗ್ನಲ್ಲಿ ತಲಾ ಒಬ್ಬರಿಗೆ ಕೋವಿಡ್ -೧೯ ಸೋಂಕು ತಗುಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ ಮುರಳೀಧರನ್ ಅವರು ಲೋಕಸಭೆಗೆ ಲಿಖಿತ ಉತ್ತರ ಒಂದರಲ್ಲಿ ತಿಳಿಸಿದರು. ಭಾರತವು ಒಂದು ಲಕ್ಷ ಮುಖಗವಸು (ಮಾಸ್ಕ್), ಒಂದು ಲಕ್ಷ ಸರ್ಜಿಕಲ್ ಮಾಸ್ಕ್, ಐದು ಲಕ್ಷ ಸರ್ಜಿಕಲ್ ಕೈಗವಸು (ಗ್ಲೋವ್), ೭೫ ಇನ್ಫ್ಯೂಷನ್ ಪಂಪ್ಗಳು, ೩೦ ಎಂಟ್ರಿಯಲ್ಲ ಫೀಡಿಂಗ್ ಪಂಪ್ಗಳು, ೨೧ ಡೆಫಿಬ್ರಿಲ್ಲೇಟರ್, ೪೦೦೦ ಎನ್-೯೫ ಮಾಸ್ಕ್ಗಳು ಸೇರಿದಂತೆ ೧೫ ಟನ್ಗಳಷ್ಟು ವೈದ್ಯಕೀಯ ನೆರವನ್ನು ಚೀನಾಕ್ಕೆ ನೀಡಿದೆ ಎಂದು ಸಚಿವರು ಹೇಳಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ನೂತನ ಕೊರೋನಾವೈರಸ್ ಸೋಂಕು ಗಾಳಿಯಲ್ಲಿ ಗಂಟೆಗಳವರೆಗೆ ಮತ್ತು ಮೇಲ್ಮೈಗಳಲ್ಲಿ ದಿನಗಳವರೆಗೆ ಉಳಿಯಬಲ್ಲುದು ಎಂಬುದು ಮಹತ್ವದ ಅಧ್ಯಯನ ಒಂದರಿಂದ  2020 ಮಾರ್ಚ್  18ರ  ಬುಧವಾರ ಬೆಳಕಿಗೆ ಬಂದಿತು. ವಿಶ್ವಾದ್ಯಂತ ಸುಮಾರು ,೦೦೦ ಜನರನ್ನು ಬಲಿಪಡೆದುಕೊಂಡು, ೨೦೦,೦೦೦ ಜನರಿಗೆ ಸೋಂಕು ತಗುಲಿರುವ ಕೊರೋನಾವೈರಸ್ ಹಲವಾರು ಗಂಟೆಗಳ ಕಾಲ ಗಾಳಿಯಲ್ಲಿ ಮತ್ತು ಹಲವಾರು ದಿನಗಳ ಕಾಲ ಮೇಲ್ಮೈಗಳಲ್ಲಿ ಉಳಿದುಕೊಂಡು ಸಾಂಕ್ರಾಮಿಕವಾಗಿ ಹರಡಬಲ್ಲುದು ಎಂದು ಸೋಂಕಿತ ಹನಿಗಳ ಮೂಲಕ ಮತ್ತು ಕಲುಷಿತ ಮೇಲ್ಮೈಗಳ ಸಂಪರ್ಕದಿಂದ ರೋಗಕಾರಕವು ಹೇಗೆ ವೇಗವಾಗಿ ಹರಡುತ್ತದೆ ಎಂಬುದನ್ನು ವಿವರಿಸುವ ಒಂದು ಅಧ್ಯಯನ ಹೇಳಿತು. ಕೋವಿಡ್ -೧೯ ಕಾಯಿಲೆಗೆ ಕಾರಣವಾಗುವ ಸಾರ್ಸ್-ಕೋವಿ - ವೈರಸ್, ವಾಯುದ್ರವಗಳಲ್ಲಿ (ಏರೋಸಾಲ್) ಮೂರು ಗಂಟೆಗಳವರೆಗೆ, ತಾಮ್ರದ ಮೇಲ್ಮೈಯಲ್ಲಿ ನಾಲ್ಕು ಗಂಟೆಗಳವರೆಗೆ, ಹಲಗೆಯಲ್ಲಿ ೨೪ ಗಂಟೆಗಳವರೆಗೆ ಮತ್ತು ಪ್ಲಾಸ್ಟಿಕ್ ಮತ್ತು ಸ್ಟೇನ್ಲೆಸ್ ಸ್ಟೀಲ್ ಮೇಲ್ಮೈಯಲ್ಲಿ ಎರಡು-ಮೂರು ದಿನಗಳವರೆಗೆ ಉಳಿಯುತ್ತದೆ ಎಂದುನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ (ಎನ್ಇಜೆಎಂ)’ ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿತು. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ರಾಜ್ಯಸಭಾ ಸದಸ್ಯರಾಗಿ 2020 ಮಾರ್ಚ್ 19ರ  ಗುರುವಾರ ಬೆಳಗ್ಗೆ ೧೧ ಗಂಟೆಗೆ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ ಎಂದು ಮೂಲಗಳು  2020 ಮಾರ್ಚ್  18ರ  ಬುಧವಾರ ತಿಳಿಸಿದವು.  ಗೊಗೋಯಿ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾರ್ಚ್ ೧೬ರಂದು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ಅತಿ ಸೂಕ್ಷ್ಮ ಪ್ರಕರಣವಾಗಿದ್ದ ಅಯೋಧ್ಯಾ ಭೂ ವಿವಾದ ಪ್ರಕರಣ ಸೇರಿದಂತೆ ಹಲವಾರು ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಪೀಠಗಳ ನೇತೃತ್ವ ವಹಿಸಿದ್ದ ಗೊಗೋಯಿ ಅವರು ರಾಜ್ಯಸಭಾ ಸದಸ್ಯರ ಕೆಟಿಎಸ್ ತುಳಸಿ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದು, ರಾಜ್ಯಸಭೆಗೆ ನೇಮಕಗೊಂಡಿರುವ ಮೊತ್ತ ಮೊದಲ ಸಿಜೆಐ ಆಗಿದ್ದಾರೆ. ಗೊಗೋಯಿ ನೇಮಕವನ್ನು ಟೀಕಿಸುವ ಮೂಲಕ ವಿರೋಧ ಪಕ್ಷಗಳು ವಿವಾದ ಹುಟ್ಟುಹಾಕಿದ್ದು, ನೇಮಕಾತಿ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 18  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment