ನಾನು ಮೆಚ್ಚಿದ ವಾಟ್ಸಪ್

Monday, March 16, 2020

ಇಂದಿನ ಇತಿಹಾಸ History Today ಮಾರ್ಚ್ 16

2020: ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ‘ಪಾಪು ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ ಡಾ. ಪಾಟೀಲ ಪುಟ್ಟಪ್ಪ ಅವರು  2020 ಮಾರ್ಚ್ 16ರ ಸೋಮವಾರ ರಾತ್ರಿ  ವಿಧಿವಶರಾದರು.  ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಪಾಟೀಲ ಪುಟ್ಟಪ್ಪನವರು ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಾಪು, ಹಲವಾರು ಕನ್ನಡ ಪರ ಹೋರಾಟಗಳ ನೇತೃತ್ವವನ್ನು ವಹಿಸಿ ಈ ಭಾಗದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಡಾ, ಪಾಟೀಲ ಪುಟ್ಟಪ್ಪನವರು ಬೆಳಗಾವಿಯಲ್ಲಿ ನಡೆದಿದ್ದ ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪ್ರಪಂಚ ಪತ್ರಿಕೆಯ ಸಂಪಾದಕರಾಗಿದ್ದ ಪುಟ್ಟಪ್ಪನವರು ತಮ್ಮ ಪತ್ರಿಕೆಯ ಮೂಲಕ ಈ ಭಾಗದಲ್ಲಿ ಕನ್ನಡದ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ‘ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಡಾ. ಪುಟ್ಟಪ್ಪನವರ ಅಂಕಣ ಬರಹ ‘ಪಾಪು ಪ್ರಪಂಚ ಅವರ ಬರಹದ ವೈಶಿಷ್ಟ್ಯತೆಯನ್ನು ಕರ್ನಾಟಕದ ಜನರಿಗೆ ಪರಿಚಯಿಸಿತ್ತು. ‘ವಿಶ್ವವಾಣಿ’ಯ ಸಂಸ್ಥಾಪಕರೂ ಆಗಿದ್ದರು. ಕನ್ನಡಿಗರು ಬಹುಸಂಖ್ಯಾತರಾಗಿದ್ದ ಗಡಿಭಾಗದ ಪ್ರದೇಶಗಳ ಒಗ್ಗೂಡುವಿಕೆಗೆ ಆಗ್ರಹಿಸಿ ೧೯೪೦ ಹಾಗೂ ೧೯೫೦ರಲ್ಲಿ ನಡೆದಿದ್ದ ಹಕ್ಕೊತ್ತಾಯ ಹೋರಾಟದಲ್ಲಿ ಪಾಟೀಲ ಪುಟ್ಟಪ್ಪನವರು ಮುಂಚೂಣಿಯಲ್ಲಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಭೋಪಾಲ್/ ನವದೆಹಲಿ: ಮಧ್ಯಪ್ರದೇಶ ವಿಧಾನಸಭೆಯಲ್ಲಿ ನಡೆಯಬೇಕಾಗಿದ್ದ ಕಾಂಗ್ರೆಸ್ ಮುಖ್ಯಮಂತ್ರಿ ಕಮಲನಾಥ್ ಸರ್ಕಾರದ ಬಲಾಬಲ ಪರೀಕ್ಷೆ 2020 ಮಾರ್ಚ್  16ರ ಸೋಮವಾರ ನಡೆಯದ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲಜಿ ಟಂಡನ್ ಅವರು ಬಲಾಬಲ ಪರೀಕ್ಷೆಗೆ ಹೊಸ ಗಡುವು ನಿಗದಿ ಪಡಿಸಿದ್ದು, ಮಂಗಳವಾರದ ಒಳಗಾಗಿ ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ಬಹುಮತ ಸಾಬೀತು ಪಡಿಸುವಂತೆ ಮತ್ತೆ ನಿರ್ದೇಶನ ನೀಡಿದರು. ಕೊರೋನಾವೈರಸ್ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ಕಾಳಜಿ ವ್ಯಕ್ತ ಪಡಿಸಿ ವಿಧಾನಸಭಾ ಅಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ವಿಧಾನಸಭೆಯನ್ನು ದಿಢೀರನೆ ೧೦ ದಿನಗಳ ಅವಧಿಗೆಮಾರ್ಚ್ ೨೬ಕ್ಕೆ ಮುಂದೂಡಿದ್ದು, ಇದರ ವಿರುದ್ಧ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸುಪ್ರೀಂಕೋರ್ಟ್ ಮೆಟ್ಟಿಲು ಏರಿರುವುದರ ಮಧ್ಯೆಯೇ ರಾಜ್ಯಪಾಲರು ಸದನದಲ್ಲಿ ಬಲಾಬಲ ಪರೀಕ್ಷೆಗೆ ಹೊಸ ಗಡುವು ನಿಗದಿ ಪಡಿಸಿದರು. ಸುಪ್ರೀಂಕೋರ್ಟ್ ಕೂಡಾ ಮಂಗಳವಾರ ಅರ್ಜಿಯ ವಿಚಾರಣೆ ನಡೆಸುವ ನಿರೀಕ್ಷೆ ಇದೆ. 2020 ಮಾರ್ಚ್  17ರ  ಮಂಗಳವಾರದ  ಒಳಗಾಗಿ ತಮ್ಮ ಸರ್ಕಾರದ ಬಹುಮತವನ್ನು ನಿರ್ಣಾಯಕವಾಗಿ ಸಾಬೀತು ಪಡಿಸದೇ ಇದ್ದಲ್ಲಿ, ಸರ್ಕಾರವು ವಿಧಾನಸಭೆಯ ವಿಶ್ವಾಸವನ್ನು ಕಳೆದುಕೊಂಡಿದೆ ಎಂಬುದಾಗಿ ತಾವು ಪರಿಗಣಿಸುವುದಾಗಿ ರಾಜ್ಯಪಾಲ ಲಾಲಜಿ ಟಂಡನ್ 2020 ಮಾರ್ಚ್  16ರ ಸೋಮವಾರ ಕಮಲನಾಥ್ ಅವರಿಗೆ ತಿಳಿಸಿದರು. ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪಗಳನ್ನು ಮುಂದಿನ ೧೦ ದಿನಗಳ ಅವಧಿಗೆ ದಿಢೀರನೆ ಮುಂದೂಡುವುದಾಗಿ ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ಸೋಮವಾರ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಸದನದಲ್ಲಿ ಬಲಾಬಲ ಪರೀಕ್ಷೆಗೆ ಹೊಸ ಗಡುವನ್ನು ರಾಜ್ಯಪಾಲರು ನಿಗದಿ ಪಡಿಸಿದರು. ವಿಧಾನಸಭಾಧ್ಯಕ್ಷ ಪ್ರಜಾಪತಿಯವರು ಮಾರ್ಚ್ ೨೬ರಂದು ರಾಜ್ಯಸಭಾ ಚುನಾವಣೆಗಳ ಬಳಿಕ ವಿಧಾನಸಭೆ ಮರುಸಮಾವೇಶಗೊಳ್ಳುವುದು ಎಂದು ಈ ಮುನ್ನ  ಪ್ರಕಟಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾವೈರಸ್ ಸೊಂಕಿತ ಪ್ರವಾಸಿಗರ ಮೂಲಕ ಭಾರತದಲ್ಲಿ ಹರಡದಂತೆ ತಡೆಯುವ ಸಲುವಾಗಿ ೩೨ ಐರೋಪ್ಯ ರಾಷ್ಟ್ರಗಳು ಮತ್ತು ಟರ್ಕಿಯ ಪ್ರವಾಸಿಗರಿಗೆ ಭಾರತ ಪ್ರವೇಶವನ್ನು ಕೇಂದ್ರ ಸರ್ಕಾರವು 2020 ಮಾರ್ಚ್  16ರ ಸೋಮವಾರ ನಿಷೇಧಿಸಿತು. ಐರೋಪ್ಯ ಒಕ್ಕೂಟ, ಐರೋಪ್ಯ ಮುಕ್ತ ವ್ಯಾಪಾರ ಸಂಘದ ಸದಸ್ಯ ರಾಷ್ಟ್ರಗಳಾದ ಲೀಚೆನ್ಸ್ಟೀನ್, ಐಸ್ಲ್ಯಾಂಡ್ , ನಾರ್ವೆ, ಸ್ವಿಸ್ ಕನ್ಫೆಡರೇಷನ್, ಯುನೈಟೆಡ್ ಕಿಂಗ್ಡಮ್ ಮತ್ತು ಟರ್ಕಿ ಸೇರಿದಂತೆ ೩೨ ರಾಷ್ಟ್ರಗಳಿಂದ ಪ್ರಯಾಣಿಕರನ್ನು ಕರೆತರುವ ಏರ್ ಲೈನ್ಸ್ಗಳನ್ನು ಭಾರತ ಸರ್ಕಾರ ನಿಷೇಧಿಸಿತು.  ‘ಮುಂಜಾಗರೂಕತಾ ಕ್ರಮವಾಗಿ ಪ್ರವಾಸೀ ನಿಯಮಾವಳಿಗಳನ್ನು ಬಿಗಿಗೊಳಿಸಲಾಗಿದೆಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದರು. ರಾಷ್ಟ್ರಗಳ ಪ್ರವಾಸಿಗರ ಮೇಲಿನ ಸಾರಾಸಗಟು ನಿಷೇಧವು ಮಾರ್ಚ್ ೧೮ರ ಬುಧವಾರ ಸಂಜೆ .೩೦ ಗಂಟೆಯಿಂದ ಜಾರಿಗೆ ಬರಲಿದೆ. ನಾಗರಿಕ ವಿಮಾನಯಾನದ ಮಹಾ ನಿರ್ದೇಶಕರು (ಡಿಜಿಸಿಎ) ಹೊರಡಿಸಿರುವ ಆದೇಶದ ಪ್ರಕಾರ ಸಮೂಹದ ರಾಷ್ಟ್ರಗಳ ಪ್ರಯಾಣಿಕರ ಪ್ರವಾಸವನ್ನು ೨೦೨೦ ಮಾರ್ಚ್ ೧೮ರಂದ ನಿಷೇಧಿಸಲಾಗಿದೆ ಎಂದು ತಿಳಿಸಲಾಯಿತು.  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020: ಬೆಂಗಳೂರು: ದೇಶದಲ್ಲಿ ಕೊರೊನ ವೈರಸ್ ಸೋಂಕಿತರ ಸಂಖ್ಯೆ ೧೧೯ಕ್ಕೆ ತಲುಪಿರುವುದರ ನಡುವೆಯೇ ರಾಜ್ಯದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ 2020 ಮಾರ್ಚ್  16ರ ಸೋಮವಾರ ೮ಕ್ಕೆ ಏರಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. 2020 ಮಾರ್ಚ್  16ರ ಸೋಮವಾರ  ಕೂಡಾ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದ ಪ್ರಕರಣ ಬೆಳಕಿಗೆ ಬಂದಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ೮ಕ್ಕೆ ಏರಿದಂತಾಯಿತು. ಕಲಬುರಗಿಯಲ್ಲಿ ಶನಿವಾರ ಮತ್ತೊಂದು ಪ್ರಕರಣ ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ೭ಕ್ಕೆ ಏರಿತ್ತು. ಇದೀಗ ೮ಕ್ಕೆ ಏರಿಕೆಯಾಗಿದೆ. ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ತಿಳಿಸಿದರು.ಅಮೆರಿಕದಿಂದ ಬಂದಿದ್ದ ವ್ಯಕ್ತಿಯ ಸಹೋದ್ಯೋಗಿಯನ್ನು ಪರೀಕ್ಷಿಸಿದಾಗ ಕೊರೊನಾ ವೈರಸ್ ಸೋಂಕು ತಗುಲಿದ್ದು ದೃಢಪಟ್ಟಿರುವ ವರದಿ ಬಂದಿದ್ದು, ವ್ಯಕ್ತಿಯನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು(ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020:  ನವದೆಹಲಿ: ನೇಣು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿರುವ ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಅಕ್ಷಯ್ ಸಿಂಗ್, ಪವನ್ ಗುಪ್ತ ಮತ್ತ ವಿನಯ್ ಶರ್ಮ ಮೂವರು ತಮ್ಮ ಗಲ್ಲು ಜಾರಿಗೆ ತಡೆ ಕೋರಿ 2020 ಮಾರ್ಚ್  16ರ ಸೋಮವಾರ ನೆದರ್ಲ್ಯಾಂಡ್ಸ್ ಹೇಗ್ನಲ್ಲಿರುವ  ಆಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೊಕ್ಕರು. ವಿಚಾರಣಾ ನ್ಯಾಯಾಲಯವು ಮುಕೇಶ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಶರ್ಮ (೨೬) ಮತ್ತು ಅಕ್ಷಯ್ ಸಿಂಗ್ (೩೧) ನಾಲ್ಕೂ ಮಂದಿ ಅಪರಾಧಿಗಳನ್ನು ಮಾರ್ಚ್ ೨೦ರಂದು ಬೆಳಗ್ಗೆ .೩೦ಕ್ಕೆ ಗಲ್ಲಿಗೇರಿಸಬೇಕು ಎಂದು ದಿನ ಮತ್ತು ಸಮಯ ನಿಗದಿ ಪಡಿಸಿ ಮಾರ್ಚ್ ೫ರಂದು ಹೊಸದಾಗಿ ವಾರಂಟ್ಗಳನ್ನು ಜಾರಿಗೊಳಿಸಿತ್ತುಈಮಧ್ಯೆ, ತನ್ನ ಶಾಸನಬದ್ಧ ಪರಿಹಾರಗಳನ್ನು ಪುನಸ್ಥಾಪಿಸಬೇಕು ಎಂಬುದಾಗಿ ಕೋರಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿತುತನ್ನ ವಕೀಲರು ತನ್ನನ್ನು ದಾರಿತಪ್ಪಿಸಿದರು ಎಂಬುದಾಗಿ ಆಪಾದಿಸಿ ಮುಕೇಶ್ ಸಿಂಗ್ ತನ್ನ ಶಾಸನಬದ್ಧ ಪರಿಹಾರಗಳನ್ನು ಪುನಃಸ್ಥಾಪನೆ ಮಾಡುವಂತೆ ಕೋರಿದ್ದ. ಪ್ರಕರಣದಲ್ಲಿ ಪುನರ್ ಪರಿಶೀಲನಾ ಅರ್ಜಿ ಮತ್ತು ಕ್ಯುರೇಟಿವ್ ಅರ್ಜಿಗಳನ್ನು ಈಗಾಗಲೇ ತಿರಸ್ಕರಿಸಲಾಗಿರುವುದರಿಂದ ಮುಕೇಶ್ ಸಿಂಗ್ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ಡೆತ್ ವಾರಂಟ್ ಜಾರಿಯನ್ನು ಹಿಂದೆ ಕಾನೂನುಬದ್ಧ ಪರಿಹಾರಗಳನನ್ನು ಬಳಸಿಕೊಳ್ಳುವಲ್ಲಿನ ವಿಳಂಬ ಕಾರಣಕ್ಕಾಗಿ ಮೂರು ಬಾರಿ ಮುಂದೂಡಲಾಗಿತ್ತು.  ನಾಲ್ಕನೇ ಬಾರಿ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಿದ ಬಳಿಕ, ತಿಹಾರ್ ಸೆರೆಮನೆ ಅಧಿಕಾರಿಗಳು ಉತ್ತರ ಪ್ರದೇಶದ ಸೆರೆಮನೆ ಅಧಿಕಾರಿಗಳಿಗೆ ಪತ್ರ ಬರೆದು ವಧಕಾರ (ಹ್ಯಾಂಗ್ಮನ್) ಪವನ್ ಜಲ್ಲದ್ ಸೇವೆಯನ್ನು ತಮಗೆ ಒದಗಿಸುವಂತೆ ಮನವಿ ಮಾಡಿದ್ದರು. ಜಲ್ಲದ್ ಆಗಮನದ ಬಳಿಕಗಲ್ಲಿಗೇರಿಸುವ  ರಿಹರ್ಸಲ್ನಡೆಸಲಾಗುವುದು ಎಂದು ಸೆರೆಮನೆ ಅಧಿಕಾರಿಗಳು ಹೇಳಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಜೈಪುರ: ಕೊರೋನಾ ಸೋಂಕಿನ ನಿವಾರಣೆಯಲ್ಲಿ ಮಲೇರಿಯಾ ಮತ್ತು ಏಡ್ಸ್ (ಎಚ್ಐವಿ) ಔಷಧಗಳು ಪರಿಣಾಮಕಾರಿಯಾಗಿರುವುದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿತು. ‘ಕೊರೊನಾ ಸೋಂಕು ದೃಢಪಟ್ಟವರು ಚೇತರಿಸಿಕೊಳ್ಳುವಲ್ಲಿ ಎಚ್ಐವಿ ಸೋಂಕು ತಡೆಗೆ ನೀಡುವ ಔಷಧಗಳು ಮಹತ್ವದ ಪಾತ್ರವಹಿಸಿವೆಎಂದು ರಾಜಸ್ಥಾನ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು 2020 ಮಾರ್ಚ್  16ರ ಸೋಮವಾರ ಇಲ್ಲಿ ತಿಳಿಸಿದರು. ‘ರಾಜ್ಯದಲ್ಲಿ ನಾಲ್ವರು ರೋಗಿಗಳಲ್ಲಿ ಮೂವರು ಸೋಂಕಿನಿಂದ ಮುಕ್ತರಾಗಿದ್ದಾರೆ. ಆರಂಭದಲ್ಲಿ ಇವರಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡದ್ದರಿಂದ, ಮಲೇರಿಯಾಕ್ಕೆ ನೀಡುವ ಔಷಧ ನೀಡಲಾಯಿತು. ಕೊರೊನಾ ವೈರಸ್ಸಿನ ರಚನೆ ಬಹುತೇಕ ಎಚ್ಐವಿ ರೀತಿಯೇ ಇರುವುದರಿಂದ ಬಳಿಕ ಎಚ್ಐವಿ ತಡೆಗೆ ನೀಡುವ ಔಷಧವನ್ನು ಸಹ ಕೊಡಲಾಯಿತುಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವೈದ್ಯಕೀಯ ಮತ್ತು ಆರೋಗ್ಯ) ರೋಹಿತ್ ಕುಮಾರ್ ಸಿಂಗ್ ವಿವರಿಸಿದರು. ‘ ಎರಡೂ ಔಷಧಗಳಿಂದಾಗಿಯೇ ಬಹುಶಃ ಇವರು ಚೇತರಿಸಿಕೊಂಡಿದ್ದಾರೆ.   ವಯೋಮಾನದ ವರಿಗೆ ಔಷಧಗಳು ಪರಿಣಾಮ ಬೀರಿ ಅವರು ಸೋಂಕುಮುಕ್ತರಾಗಿದ್ದು, ಮಹತ್ವದ ವಿಚಾರವಾಗಿದೆಎಂದು ಎಸ್ಎಂಎಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಆಗಿರುವ ವೈದ್ಯ ಡಿ.ಎಸ್. ಮೀನಾ ಹೇಳಿದರು. ಸೋಂಕು ದೃಢಪಟ್ಟಿದ್ದ ನಾಲ್ಕನೇ ವ್ಯಕ್ತಿಯನ್ನು ಜೈಪುರದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 16  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment