2020: ಕೋಯಿಕ್ಕೋಡ್:
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಎರಡು ಕೋಳಿ ಸಾಕಣೆ ಕೇಂದ್ರಗಳಲ್ಲಿ (ಪೌಲ್ಟ್ರಿ ಫಾರಂ) ಹಕ್ಕಿ ಜ್ವರ ಕಂಡು ಬಂದಿದ್ದು, ಬೆನ್ನಲ್ಲೇ ಸೋಂಕಿತ ಪ್ರದೇಶದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿನ ಬಾತುಕೋಳಿಗಳು ಮತ್ತು ಹೇಂಟೆಗಳನ್ನು (ಹೆಣ್ಣುಕೋಳಿ) ಸಾಮೂಹಿಕವಾಗಿ ಹತ್ಯೆ ಮಾಡುವವಂತೆ ಅಧಿಕಾರಿಗಳು 2020 ಮಾರ್ಚ್ 07ರ ಶನಿವಾರ ಆಜ್ಞಾಪಿಸಿದರು. ತಮ್ಮ
ಅಧ್ಯಕ್ಷತೆಯಲ್ಲಿ ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖಾ ಅಧಿಕಾರಿಗಳ ತುರ್ತು ಸಭೆ ಕರೆದಿದ್ದ ಜಿಲ್ಲಾಧಿಕಾರಿ ಶ್ರೀರಾಮ್ ಸಾಂಬಶಿವ ರಾವ್ ಅವರು ಹಕ್ಕಿಜ್ವರದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸರ್ಕಾರವು ಕಾರ್ಯಯೋಜನೆಯನ್ನು ರೂಪಿಸಿದ್ದು, ಐವರು ಸದಸ್ಯರನ್ನು ಒಳಗೊಂಡ ಕಾರ್ಯತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು. ಭಯಗ್ರಸ್ತರಾಗದಂತೆ ಸಾರ್ವಜನಿಕರಿಗೆ ಸಲಹೆ ಮಾಡಿದ ಅವರು ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ‘ಎರಡು ಕೋಳಿ ಸಾಕಣೆ ಕೇಂದ್ರಗಳ ಸುತ್ತುಮುತ್ತಣ ಒಂದು ಕಿಮೀ ಸರಹದ್ದಿನಲ್ಲಿ ಎಲ್ಲ ಕೋಳಿಗಳು, ಬಾತುಕೋಳಿಗಳು ಮತ್ತು ಇತರ ದೇಶೀ ಹಕ್ಕಿಗಳನ್ನು ಸಾಮೂಹಿಕವಾಗಿ ಹತ್ಯೆಗೈಯಲು ಕ್ಷಿಪ್ರ ಕ್ರಮ ಕೈಗೊಳ್ಳಲಾಗಿದೆ. ಇದು ಸೋಂಕು ನೆರೆಯ ಪ್ರದೇಶಗಳಿಗೆ ಹರಡದಂತೆ ಮುಂಜಾಗರೂಕತಾ ಕ್ರಮ ಮಾತ್ರ. ನಿರ್ದಿಷ್ಟ ಸಂಖ್ಯೆ ಲಭ್ಯವಿಲ್ಲವಾದರೂ, ಈ ಪೌಲ್ಟ್ರಿ ಫಾರಂ
ಸುತ್ತಮುತ್ತಣ ನೂರಾರು ಹಕ್ಕಿಗಳನ್ನು ಕೊಲ್ಲಲಾಗುವುದು ಎಂದು ಪಶು ಸಂಗೋಪನಾ ಇಲಾಖೆಯ ತಿರುವಂತಪುರಂ ಕಚೇರಿಯಲ್ಲಿನ ಉಪ ನಿರ್ದೇಶಕ ಎಂಕೆ
ಪ್ರಸಾದ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ:
ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕಿನ ಪುನಶ್ಚೇತನಕ್ಕೆ ಗರಿಷ್ಠ ೧೦ ಸಾವಿರ ಕೋಟಿ
ರೂಪಾಯಿಗಳವರೆಗಿನ ನ ಹೂಡಿಕೆ ಮಿತಿಯನ್ನು
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನಿಗದಿ ಪಡಿಸಿತು. ‘ಪುನಶ್ಚೇತನ ಯೋಜನೆಯ ಕುರಿತಾಗಿ ನಮ್ಮ ಕಾನೂನು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ಅದು ಪೂರ್ಣಗೊಂಡ ಬಳಿಕ ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್ಬಿಐ) ನಮ್ಮ ಸಲಹೆ ಮತ್ತು ಪ್ರತಿಕ್ರಿಯೆ ನೀಡಲಾಗುವುದು. ಆರ್ಬಿಐ , ಬ್ಯಾಂಕಿಗೆ ವಿಧಿಸಿರುವ ೩೦ ದಿನಗಳ ಗಡುವು
ಮುಗಿಯುವುದರ ಒಳಗಾಗಿ ಯೋಜನೆಗೆ ಅನುಮತಿ ಪಡೆದು, ಜಾರಿಗೊಳಿಸಲು ಪ್ರಯತ್ನಿಸಲಾಗುವುದು’ ಎಂದು
ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ 2020 ಮಾರ್ಚ್ 07ರ ಶನಿವಾರ ತಿಳಿಸಿದರು. ‘ಪಾಲು ಬಂಡವಾಳ ಖರೀದಿಸುವ ಸಂಬಂಧ ಒಕ್ಕೂಟವನ್ನು ರಚಿಸುವಂತೆ ಎಸ್ಬಿಐಗೆ ಹಲವು ಹೂಡಿಕೆದಾರರು ಕೇಳಿದ್ದಾರೆ. ಈ ಬಗ್ಗೆ ಚರ್ಚೆ
ನಡೆಯುತ್ತಿದೆ. ಶೇ ೪೯ರಷ್ಟು ಷೇರನ್ನು
ಎಸ್ಬಿಐ ಒಂದೇ ಖರೀದಿಸುವುದಾದರೆ ತಕ್ಷಣಕ್ಕೆ ೨,೪೫೦ ಕೋಟಿ
ರೂಪಾಯಿ ಹೂಡಿಕೆಯ ಅಗತ್ಯವಿದೆ. ಯೆಸ್ ಬ್ಯಾಂಕಿನ ರಕ್ಷಣೆಗಾಗಿ ಮಾಡಲಿರುವ ಹೂಡಿಕೆಯಿಂದ ಎಸ್ಬಿಐನ ಬಂಡವಾಳ ಲಭ್ಯತೆ ಪ್ರಮಾಣದ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ’ ಎಂದು
ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ:
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ ೧೦೦ ದಿನಗಳನ್ನು ಆಚರಿಸಲು 2020 ಮಾರ್ಚ್ 07ರ ಶನಿವಾರ ಅಯೋಧ್ಯೆಗೆ ಭೇಟಿ
ನೀಡಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಮ ಮಂದಿರಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ವಚನ ನೀಡಿದರು. ತಮ್ಮ ಪಕ್ಷವು ಬಿಜೆಪಿಯಿಂದ ಪ್ರತ್ಯೇಕಗೊಂಡಿದೆ ಹೊರತು ಹಿಂದುತ್ವದಿಂದ ಅಲ್ಲ ಎಂಬುದಾಗಿ ಈ ಸಂದರ್ಭದಲ್ಲಿ ಅವರು
ಹೇಳಿದರು. ಅಯೋಧ್ಯಾ ಚಳವಳಿಗೆ ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ನೀಡಿದ್ದ ಕೊಡುಗೆಯನ್ನು ನೆನಪು ಮಾಡಿಕೊಂಡ ಉದ್ಧವ್, ’ಕೊರೋನಾವೈರಸ್ ಭೀತಿಯ ಕಾರಣ ನಾನು ಸರಯೂ ನದಿಯಲ್ಲಿ ’ಆರತಿ’ ಕಾರ್ಯಕ್ರಮವನ್ನು ಬಲವಂತವಾಗಿ ಕೈಬಿಡಬೇಕಾಗಿ ಬಂದಿದೆ, ಆದರೆ ಅಯೋಧ್ಯೆಗೆ ಭೇಟಿ ನೀಡುವುದನ್ನು ಮುಂದುವರೆಸುವೆ’ ಎಂದು
ನುಡಿದರು. ಇದಕ್ಕೆ
ಮುನ್ನ, ಮಹಾರಾಷ್ಟ್ರದಲ್ಲಿ ತ್ರಿಪಕ್ಷ ಸರ್ಕಾರದ ನೇತೃತ್ವ ವಹಿಸಿದ ಶಿವಸೇನೆಯ ಸಿದ್ಧಾಂತದಲ್ಲಿ ಯಾವುದೇ ವ್ಯತ್ಯಾಸವೂ ಆಗಿಲ್ಲ ಎಂದು ಅವರು ಹೇಳಿದರು. ಈ ಮಧ್ಯೆ, ಶಿವಸೇನಾ
ಮುಖವಾಣಿಯಾಗಿರುವ ’ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ಬಿಜೆಪಿಯನ್ನು ಕಟುವಾಗಿ ಟೀಕಿಸಿತು. ’ಭಗವಾನ್ ಶ್ರೀರಾಮ ಮತ್ತು ಹಿಂದುತ್ವ ಯಾವುದೇ ಒಂದು ರಾಜಕೀಯ ಪಕ್ಷದ ಆಸ್ತಿಯಲ್ಲ’
ಎಂದು ಅದು ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಸಾರ್ವಜನಿಕ
ಸೇವಕರಾದ ರಾಕೇಶ್ ಅಸ್ಥಾನ ಮತ್ತು ದೇವೇಂದರ್ ಕುಮಾರ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂಬುದಾಗಿ ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ ಅಗರ್ವಾಲ್ ಅವರು ತಮ್ಮ
ಆದೇಶದಲ್ಲಿ ತಿಳಿಸಿದರು. ತಮ್ಮ ವಿರುದ್ಧ ಅಲೋಕ್ ವರ್ಮ ಕುಮ್ಮಕ್ಕಿನಿಂದ ’ಕಲ್ಪಿತ’ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೊದಲ ದಿನದಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದ ರಾಕೇಶ್ ಅಸ್ಥಾನ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವು ಭಾರೀ ನಿರಾಳತೆಯನ್ನು ಒದಗಿಸಿತು. ಆರೋಪಿಗಳು ಎಂಬುದಾಗಿ ಹೆಸರಿಸಲಾಗಿರುವ ಮನೋಜ್ ಪ್ರಸಾದ್ ಮತ್ತು ಸೋಮೇಶ್ ಪ್ರಸಾದ್ ಅವರ ವಿರುದ್ಧ ದೋಷಾರೋಪ ಪಟ್ಟಿಯಲ್ಲಿ ಮಾಡಲಾಗಿರುವ ವಂಚನೆ ಮತ್ತು ಕ್ರಿಮಿನಲ್ ಸಂಚು ಆಪಾದನೆಗಳನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿದೆ. ಸೋಮೇಶ್ ಪ್ರಸಾದ್ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರಲಿಲ್ಲ, ಆದರೆ ಈಗ ಅವರಿಗೂ ಆರೋಪಿಯಾಗಿ
ಸಮನ್ಸ್ ಹೊರಡಿಸಲಾಗಿದೆ. ಏನಿದ್ದರೂ ಮನೋಜ್ ಪ್ರಸಾದ್ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಆರೋಪಿಯಾಗಿ ಹೆಸರಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಬಿಕ್ಕಟ್ಟಿನಲ್ಲಿ ಸಿಲುಕಿರುವ ಯೆಸ್ ಬ್ಯಾಂಕ್ ರಕ್ಷಣೆಗೆ ರೂಪಿಸಲಾಗಿರುವ ಯೋಜನೆ ’ವಿಲಕ್ಷಣ’ವಾದುದಾಗಿದ್ದು, ಆರ್ಥಿಕ
ದುಸ್ಥಿತಿಗೆ ಹೊಣೆಗಾರರೇ ಇಲ್ಲ ಎಂದು 2020 ಮಾರ್ಚ್ 07ರ ಶನಿವಾರ ಟೀಕಿಸಿದ ಕಾಂಗ್ರೆಸ್
ನಾಯಕ ಪಿ. ಚಿದಂಬರಂ ಅವರು ’ಬಿಜೆಪಿ ನೇತೃತ್ವದ ಸರ್ಕಾರವು ೨೦೧೪ರಿಂದೀಚೆಗೆ ಬ್ಯಾಂಕಿನ ಸಾಲವು ಪ್ರತಿರ್ಷ ಶೇಕಡಾ ೩೫ರಷ್ಟು ಏರಲು ಅವಕಾಶ ನೀಡಿದ್ದು ಇದು ದೂರದೃಷ್ಟಿಯ ಸಂಪೂರ್ಣ ವೈಫಲ್ಯವಾಗಿದೆ ಎಂದು ದೂರಿದರು. ‘ಯೋಜನೆಯ
ಪ್ರಕಾರ ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ೨,೪೫೦ ಕೋಟಿ
ರೂಪಾಯಿಗಳನ್ನು ಪುನರ್ರಚನಾ ಬಂಡವಾಳವಾಗಿ ಹೂಡಿಕೆ ಮಾಡಿ ೨ ರೂಪಾಯಿ ಮುಖಬೆಲೆಯ
ಬ್ಯಾಂಕಿನ ಶೇಕಡಾ
೪೯ರಷ್ಟು ಷೇರುಗಳನ್ನು ತಲಾ ೧೦ ರೂಪಾಯಿಗಳಂತೆ ಪಡೆಯಲಿದೆ.
ಬ್ಯಾಂಕಿನ ಬೆಲೆ ಶೂನ್ಯಕ್ಕೆ ಇಳಿದಿರುವಾಗ ಹೀಗೆ ಮಾಡುವುದು ವಿಲಕ್ಷಣವಾದ ಕ್ರಮ ಎಂದು ಚಿದಂಬರಂ ಹೇಳಿದರು. ರಕ್ಷಣಾ
ಕೆಲಸಕ್ಕೆ ಎಸ್ಬಿಐ ಸ್ವಯಂ ಸ್ಫೂರ್ತಿಯಿಂದ ಮುಂದಾಗಿದೆ ಎಂದು ನಾನು ಭಾವಿಸುವುದಿಲ್ಲ. ಐಡಿಬಿಐ (ಬ್ಯಾಂಕಿಗೆ) ಎಲ್ ಐಸಿ (ಜೀವ ವಿಮಾ ನಿಗಮ) ನೆರವಾದಂತೆ ಇವೆಲ್ಲವೂ ಆದೇಶ ಪಾಲನೆಯ ಕೆಲಸಗಳಂತೆ ಕಾಣುತ್ತಿವೆ ಎಂದು ಮಾಜಿ ವಿತ್ತ ಸಚಿವರು ನುಡಿದರು. ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣಗಳನ್ನು ಹೇರಿದ ಬಳಿಕ ಯೆಸ್ ಬ್ಯಾಂಕ್ ಪುನಃಶ್ಚೇತನಕ್ಕಾಗಿ ರೂಪಿಸಲಾಗಿರುವ ಪುನರ್ರಚನಾ ಯೋಜನೆ ಬಗ್ಗೆ ವಿವರಿಸುತ್ತಾ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಅವರು ವಿರೋಧ ಪಕ್ಷಗಳನ್ನು ಅವುಗಳ ಟೀಕೆಗಾಗಿ ತರಾಟೆಗೆ ತೆಗೆದುಕೊಂಡಿದ್ದರು. ಬ್ಯಾಂಕ್ ಬಿಕ್ಕಟ್ಟು ಕಾಂಗ್ರೆಸ್ ಕಣ್ಗಾವಲಿನಲ್ಲಿಯೇ ಜನಿಸಿತ್ತು ಎಂದು ಅವರು ಪ್ರತಿಪಾದಿಸಿದ್ದರು. ಚಿದಂಬರಂ ಅವರು ’ಸ್ವಯಂ ಘೋಷಿತ ಸಮರ್ಥ ವೈದ್ಯ’ ಎಂಬುದಾಗಿ ಛೇಡಿಸಿದ್ದ ಸಚಿವೆ ಅವರ ಇತಿಹಾಸದ ದಾಖಲೆಯನ್ನು ಪ್ರಶ್ನಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಭಾರತದಲ್ಲಿ ಹೊಸದಾಗಿ ಇನ್ನೂ ಮೂವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತಗೊಳ್ಳುವುದರೊಂದಿಗೆ ಮಾರಕ ವ್ಯಾಧಿ ಕೋವಿಡ್ -೧೯ ಸೋಂಕಿತರ ಸಂಖ್ಯೆ 2020 ಮಾರ್ಚ್ 07ರ ಶನಿವಾರ ೩೪ಕ್ಕೆ ಏರಿತು.
ಇದೇ ವೇಳೆಗೆ ವಿಶ್ವಾದ್ಯಂತ ಕೊರೋನಾವೈರಸ್ ಸೋಂಕು ತಗುಲಿದೆ ದೇಶಗಳ ಸಂಖ್ಯೆ ೯೧ಕ್ಕೇ ಏರಿದ್ದು, ಸೋಂಕು ತಗುಲಿದವರ ಸಂಖ್ಯೆ ೧ ಲಕ್ಷ ದಾಟಿದೆ.
ವಿಶ್ವಾದ್ಯಂತ ಒಟ್ಟು ೩೪೦೦ಕ್ಕೂ ಹೆಚ್ಚು ಮಂದಿಯನ್ನು ಸೋಂಕು ಬಲಿ ತೆಗೆದುಕೊಂಡಿದೆ. ಭಾರತದಲ್ಲಿ ಸೋಂಕು ತಗುಲಿದ ೩೪ ಮಂದಿಯ ಪೈಕಿ
ಮೂವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 2020 ಮಾರ್ಚ್ 07ರ ಶನಿವಾರ ಲಡಾಖ್ನಲ್ಲಿ
ಇಬ್ಬರು ಮತ್ತು ತಮಿಳುನಾಡಿನಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು ಖಚಿತವಾಗಿದೆ ಎಂದು ವರದಿಗಳು ಹೇಳಿದವು. ಲಡಾಖ್ನಲ್ಲಿ ಸೋಂಕು ತಗುಲಿರುವುದು ಖಚಿತಗೊಂಡಿರುವ ವ್ಯಕ್ತಿಗಳು ಇರಾನ್ ಪಯಣ ಮಾಡಿದ್ದು ಇತ್ತೀಚೆಗೆ ಒಮಾನ್ ನಿಂದ ವಾಪಸಾಗಿದ್ದರು. ಕೊರೋನಾವೈರಸ್ ಹಿನ್ನೆಲೆಯಲ್ಲಿ ಭಾರತ ಮತ್ತು ಇತರ ೬ ರಾಷ್ಟ್ರಗಳಿಗೆ ತನ್ನ
ವಿಮಾನಯಾನಗಳನ್ನು ಕುವೈಟ್ ಶನಿವಾರ ಅಮಾನತುಗೊಳಿಸಿತು. ಪ್ರಧಾನಿ ಮೋದಿ ಸಲಹೆ: ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವದಂತಿಗಳನ್ನು ಹರಡುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎಚ್ಚರಿಸಿದರು. ‘ಜನರು ತಮ್ಮ ವೈದ್ಯರ ಸಲಹೆ ಪಡೆಯಬೇಕು, ವದಂತಿಗಳಿಗೆ ಕಿವಿಗೊಡಬಾರದು’ ಎಂದು
ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment