ನಾನು ಮೆಚ್ಚಿದ ವಾಟ್ಸಪ್

Tuesday, March 10, 2020

ಇಂದಿನ ಇತಿಹಾಸ History Today ಮಾರ್ಚ್ 10

2020: ನವದೆಹಲಿ: ದೀರ್ಘ ಕಾಲದಿಂದ ಅಸಮಾಧಾನದಿಂದ ಕುದಿಯುತ್ತಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಟ್ಟ ಕಡೆಗೂ ಕಾಂಗ್ರೆಸ್ ಪಕ್ಷಕ್ಕೆಕೈಕೊಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ 2020 ಮಾರ್ಚ್ 10ರ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷದ ಜೊತೆಗಿನ ೧೮ ವರ್ಷಗಳ ನಂಟನ್ನು ಕಡಿದುಕೊಂಡರು.   ಬೆನ್ನಲ್ಲೇ ಸಿಂಧಿಯಾ ಅವರಿಗೆ ನಿಷ್ಠಾವಂತರಾದ ೨೨ ಮಂದಿ ಶಾಸಕರೂ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿದ್ದು, ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಇಳಿದು ಪತನದ ಅಂಚು ತಲುಪಿತು. ಸಿಂಧಿಯಾ ಅವರು ಈದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿ ಹಳೆಯ ಮಹಾನ್ ಪಕ್ಷದ ನಾಯಕನಾಗಿ ದೇಶ ಮತ್ತು ರಾಜ್ಯದ ಸೇವೆ ಸಲ್ಲಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.  ತಮ್ಮ ರಾಜೀನಾಮೆ ಪತ್ರವನ್ನು ಸಿಂಧಿಯಾ ಅವರು ಟ್ವಟ್ಟರಿನಲ್ಲೂ ಪ್ರಕಟಿಸಿದರು. ಸಿಂಧಿಯಾ ಅವರು ಮಾರ್ಚ್ ೧೨ರ ಗುರುವಾರ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿದವು. ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಅವರಿಗೆ ನಿಷ್ಠಾವಂತರಾದ ೨೦ ಮಂದಿ ಬಂಡಾಯ ಶಾಸಕರು ಗುನಾ ರಾಜವಂಶಸ್ಥರನ್ನು ಅನುಸರಿಸುವ ಮೂಲಕ ಕಮಲನಾಥ್ ಸರ್ಕಾರವನ್ನು ಬಿಕ್ಕಟ್ಟಿನತ್ತ ನೂಕಿದರು. ಬಳಿಕ ಶಾಸಕರಾದ ಎಂಡಾಲ್ ಸಿಂಗ್, ಕಂಸಾನ, ಮನೋಜ್ ಚೌಧರಿ ಮತ್ತು ಮನೋಜ್ ಚೌಧರಿ ಸೇರಿದಂತೆ ಇನ್ನೂ ನಾಲ್ವರು ಶಾಸಕರು ರಾಜ್ಯಪಾಲ ಲಾಲ್ ಜಿ ಟಂಡನ್ ಅವರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪಕ್ಷದ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ರಾಜೀನಾಮೆಯು ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಏಟನ್ನು ನೀಡಿದ್ದು, ಉನ್ನತ ನಾಯಕತ್ವದಅನಿರ್ಧಾರಮತ್ತುಯಥಾಸ್ಥಿತಿ ಮುಂದುವರಿಕೆಯ ಧೋರಣೆಪಕ್ಷದಲ್ಲಿ ಭ್ರಮನಿರಸನ ಬೆಳೆಯುತ್ತಿರುವುದಕ್ಕೆ ಕನ್ನಡಿ ಹಿಡಿದಿದೆ ಎಂದು ರಾಜಕೀಯ ವಲಯಗಳು 2020 ಮಾರ್ಚ್ 10ರ ಮಂಗಳವಾರ ವಿಶ್ಲೇಷಿಸಿದವು.
 ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರ ನೇಮಕಾತಿ ಬಗೆಗಿನ ನಿರ್ಧಾರ ೨೦೧೮ರಲ್ಲಿ ಕಮಲನಾಥ್ ಅವರು ಮುಖ್ಯಮಂತ್ರಿಯಾದಂದಿನಿಂದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನೆನೆಗುದಿಯಲ್ಲಿ ಬಿದ್ದಿತ್ತು.  ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಎರಡನ್ನು ಹೊಂದಿರುವ ಕಮಲನಾಥ್ ಅವರು ಹಲವಾರು ಬಾರಿ ವಿಷಯದ ಬಗ್ಗೆ ಚರ್ಚಿಸಲು ಕಾಂಗೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆದರೆ ನಿರ್ಧಾರ ಮಾತ್ರ ಇನ್ನೂ ಆಗಿಲ್ಲ. ವರಿಷ್ಠರ ಅನಿರ್ಧಾರದ ಪರಿಣಾಮವಾಗಿ ಬಿಕ್ಕಟ್ಟು ಬೆಳೆಯುತ್ತಲೇ ಹೋಯಿತು ಎಂದು ಇದೀಗ ವಿಶ್ಲೇಷಿಸಲಾಗುತ್ತಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕರ್ನಾಟಕದಲ್ಲಿ ಹೊಸದಾಗಿ ಮಂದಿ ಮತ್ತು ಕೇರಳದಲ್ಲಿ ಹೊಸದಾಗಿ ಮಂದಿಗೆ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು 2020 ಮಾರ್ಚ್ 10ರ ಮಂಗಳವಾರ ದೃಢ ಪಟ್ಟಿದ್ದು ಇದರೊಂದಿಗೆ ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ೪೪ರಿಂದ ೫೩ಕ್ಕೆ ಜಿಗಿದಿದೆ. ಕೊರೋನಾ ಸೋಂಕಿತರ  ಸಂಖ್ಯೆ ಕರ್ನಾಟಕದಲ್ಲಿ ೪ಕ್ಕೆ ಏರಿದರೆ, ಕೇರಳದಲ್ಲಿ ೧೨ಕ್ಕೆ ಏರಿದೆ. ವೈರಸ್ ಸೋಂಕಿತರ ಸಂಖ್ಯೆ 2020 ಮಾರ್ಚ್ 10ರ ಮಂಗಳವಾರ ೧೨ಕ್ಕೇ ಏರುತ್ತಿದ್ದಂತೆಯೇ ಕೇರಳ ಸರ್ಕಾರವು ರಾಜ್ಯಾದ್ಯಂತ ಮಾರ್ಚ್ ೩೧ರವರೆಗೆ ೭ನೇ ತರಗತಿ ವರೆಗಿನ ಪರೀಕ್ಷೆಗಳನ್ನು ಅಮಾನತುಗೊಳಿಸಿತು. ಆದರೆ ,, ಮತ್ತು ೧೦ನೇ ತರಗತಿಗಳು ನಿಗದಿಯಂತೆಯೇ ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ. ಬಹುತೇಕ ತುರ್ತು ಆರೋಗ್ಯ ಸ್ಥಿತಿಯನ್ನು ಘೋಷಿಸಿದ್ದು, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸದಂತೆ ಜನತೆಗೆ ಸೂಚನೆ ನೀಡಿತು. ಕರ್ನಾಟಕ ಸರ್ಕಾರವು ಮತ್ತೆ ಮೂರು ಮಂದಿಗೆ ರಾಜ್ಯದಲ್ಲಿ ಕೋವಿಡ್ -೧೯ ಸೋಂಕು ತಗುಲಿರುವುದನ್ನು ದೃಢ ಪಡಿಸಿದ್ದು, ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರುಹೊಸದಾಗಿ ಸೋಂಕು ತಗುಲಿದವರ ಕುಟುಂಬ ಸದಸ್ಯರನ್ನು ಪ್ರತ್ಯೇಕಿಸಿ ಅವರ ಮೇಲೂ ನಿಗಾ ಇರಿಸಲಾಗಿದೆಎಂದು ತಿಳಿಸಿದರು. ‘ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವಂತೆ ಮತ್ತು ಸೋಂಕು ಹರಡದಂತೆ ತಡೆಯುವಲ್ಲಿ ಸಹಕರಿಸುವಂತೆ ನಾನು ಜನತೆಗೆ ಮನವಿ ಮಾಡುತ್ತೇನೆಎಂದು ಸಚಿವರು ಹೇಳಿದರು. ಕೇರಳದ ಆರೋಗ್ಯ ಸಚಿವ ಕೆಕೆ ಶೈಲಜಾ ಅವರು ಕೇರಳದಲ್ಲಿ ಹೊಸದಾಗಿ ಸೋಂಕು ತಗುಲಿದವರನ್ನು ಇಟಲಿಯಿಂದ ಬಂದು ಪಟ್ಟಣಂತಿಟ್ಟದಲ್ಲಿ ವಾಸವಾಗಿರುವ ಮೂವರ ವಯೋವೃದ್ಧ ಹೆತ್ತವರೂ ಸೇರಿದ್ದಾರೆ ಎಂದು ಹೇಳಿದರು. ಇಟಲಿಯಿಂದ ಬಂದ ಮೂವರಿಗೆ ವಾರಾರಂಭದಲ್ಲಿ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 10  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment