ನಾನು ಮೆಚ್ಚಿದ ವಾಟ್ಸಪ್

Thursday, March 26, 2020

ಇಂದಿನ ಇತಿಹಾಸ History Today ಮಾರ್ಚ್ 26

2020: ನವ ದೆಹಲಿ:  ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗನ್ನು ನಿಗ್ರಹಿಸಲು ಮತ್ತು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಕ್ರಮದಿಂದ ನಷ್ಟ ಅನುಭವಿಸುವ ಮಧ್ಯಮ ಹಾಗೂ ಕೆಳ ವರ್ಗದಗಳ ಜನರಿಗೆ ನೆರವಾಗಲು ಕೇಂದ್ರ ಸರ್ಕಾರವು 2020 ಮಾರ್ಚ್ 26 . ಲಕ್ಷ ಕೋಟಿ ರೂಪಾಯಿ ಮೊತ್ತದ ಪರಿಹಾರ ಕೊಡುಗೆಯನ್ನು ಘೋಷಣೆ ಮಾಡಿತು.  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮಾರ್ಚ್ 26ರ ಶುಕ್ರವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಿಗ್ಬಂಧನ ಪರಿಹಾರ ಕೊಡುಗೆಯನ್ನು ಪ್ರಕಟಿಸಿದರು. ಮುಂದಿನ ಮೂರು ತಿಂಗಳುಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪರಿಹಾರ ಕೊಡುಗೆಯನ್ನು ಪ್ರಕಟಿಸುತ್ತಿರುವುದಾಗಿ ಸೀತಾರಾಮನ್ ತಿಳಿಸಿದರು.  ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಅನುಕೂಲವಾಗುವ ಹಲವಾರು  ಹೊಸ ಯೋಜನೆಗಳನ್ನೂ ಅವರು ಘೋಷಿಸಿದರು. 3 ತಿಂಗಳ ಕಾಲ ಉಚಿತ ಅಕ್ಕಿ, ಗೋಧಿ: ಸರ್ಕಾರದ ಘೋಷಣೆ ಪ್ರಕಾರ ಮುಂದಿನ ದಿನ ಮೂರು ತಿಂಗಳ ಕಾಲ ಬಿಪಿಎಲ್ ಕಾರ್ಡುದಾರರಿಗೆ ೫ ಕೆಜಿ ಉಚಿತ ಅಕ್ಕಿ ಮತ್ತು ಗೋದಿಯನ್ನು ನೀಡಲಾಗುವುದು.  ಉಜ್ವಲ ಯೋಜನೆಯ ಅಡಿಯಲ್ಲಿ ೮.೩ ಕೋಟಿ ಬಿಪಿಎಲ್ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಅಡುಗೆ ಅನಿಲ ಒದಗಿಸಲು ಕಾರ್ಯಕ್ರಮ ರೂಪಿಸಲಾಗಿದೆ.  ರೈತನರಿಗೆ  ಕಿಸಾನ್ ಸಮ್ಮಾನ್ ನಿಧಿ:  ರೈತರ ಅನುಕೂಲಕ್ಕಾಗಿ  ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಅಂದಾಜು  . ಕೋಟಿ ರೈತರ ಖಾತೆಗಳಿಗೆ ನೇರವಾಗಿ ಮುಂದಿನ ಮೂರು ತಿಂಗಳಲ್ಲಿ ತಲಾ ೨,೦೦೦ ರೂಪಾಯಿಗಳಂತೆ ಹಣ ಜಮಾವಣೆ ಮಾಡಲಾಗುವುದು. ಮೊದಲ ಕಂತಿನ ಹಣವನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಭರ್ತಿ ಮಾಡಲಾಗುವುದು . .ಭಾರತದಲ್ಲಿ ಗುರುವಾರ ಒಂದೇ ದಿನ ಅತೀ ಹೆಚ್ಚು ಅಂದರೆ 88 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 694ಕ್ಕೆ ಏರಿದೆ.  ದೇಶೀ ವಿಮಾನಯಾನಗಳ ಜೊತೆಗೆ ವಿದೇಶೀ ವಿಮಾನಯಾನಗಳನ್ನು ಕೂಡಾ 2020 ಏಪ್ರಿಲ್ 20ರವರೆಗೆ ಸ್ಥಗಿತಗೊಳಿಸಿ ಸರ್ಕಾರ  ಆದೇಶ ಹೊರಡಿಸಿತು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 24ರ ಮಂಗಳವಾರ ರಾತ್ರಿ ಘೋಷಿಸಲಾದ ರಾಷ್ಟ್ರವ್ಯಾಪಿ ‘ಲಾಕ್ ಡೌನ್’ ಯಶಸ್ಸುಗೊಳಿಸುವಂತೆ ‘ಮಕ್ಕಳ ಸೇನೆ’ಗೆ (ಬಾಲ ಸೇನಾ) ಕರೆ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾರ್ಚ್ 24ರ ಮಂಗಳವಾರ ಮಾಡಿದ ಭಾಷಣದಲ್ಲಿ ಅದೇ ದಿನ ಮಧ್ಯರಾತ್ರಿಯಿಂದ 21 ದಿನಗಳ ಕಾಲದ ರಾಷ್ಟ್ರವ್ಯಾಪಿ ಲಾಕ್ ಡೌನ್ (ಸಂಪೂರ್ಣ ಬೀಗಮುದ್ರೆ) ಘೋಷಿಸಿದ್ದರು. ಸಂಪೂರ್ಣ ದಿಗ್ಬಂಧನಕ್ಕೆ ಕರೆ ನೀಡಿದ ಪ್ರಧಾನಿ, 21 ದಿನಗಳ ಕಾಲ ಕಟ್ಟು ನಿಟ್ಟಾಗಿ ದಿಗ್ಬಂಧನ ಜಾರಿಗೆ ಸಹಕರಿಸುವಂತೆ ಮತ್ತು ಕೊರೋನಾ ವೈರಸ್ ಹೊಡೆದೋಡಿಸುವಂತೆ ಪ್ರತಿಯೊಬ್ಬರಿಗೂ ಸಲಹೆ ಮಾಡಿದ್ದರು. ರು. ೨೧ ದಿನಗಳವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.  ಇದೀಗ ಈ ‘ದಿಗ್ಬಂಧನ’ ಯಶಸ್ವಿಯಾಗುವಂತೆ ನೋಡಿಕೊಳ್ಳಿ ಎಂದು ಪ್ರಧಾನಿ ಮೋದಿ ಮಕ್ಕಳ ಸೇನೆಗೆ (ಬಾಲಸೇನಾ) ಕರೆಕೊಟ್ಟಿದ್ದಾರೆ. ಹಿಂದಿ ಭಾಷೆಯಲ್ಲಿರುವ  ಟ್ವಿಟ್ಟರ್ ಸಂದೇಶದಲ್ಲಿ ಮಕ್ಕಳಿಗೆ ಈ ಮನವಿ ಮಾಡಿರುವ ಪ್ರಧಾನಿ ಟ್ವೀಟಿಗೆ ವಿಡಿಯೋ ಒಂದನ್ನು ಲಗತ್ತಿಸಿದ್ದಾರೆ.  ನನ್ನ ‘ಬಾಲಸೇನೆ’ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ.  ಜನರು ತಮ್ಮ ಮನೆಗಳಲ್ಲಿ ಉಳಿಯುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ, ಇದರಿಂದ ಭಾರತವು ಕೋವಿಡ್-೧೯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು’ ಎಂದು ಪ್ರಧಾನಿ ಬರೆದರು. ಬಾಲಕಿಯೊಬ್ಬಳು ತನ್ನ ತಂದೆ ಫೋನ್ ಬಂದ ತತ್ ಕ್ಷಣವೇ ಮನೆಯಿಂದ ಹೊರಗೆ ಹೊರಟದ್ದನ್ನು ಗಮನಿಸಿ ತಡೆಯುವ ವಿಡಿಯೋವನ್ನು ಪ್ರಧಾನಿ ಈ ಟ್ವೀಟಿಗೆ ಜೋಡಿಸಿದರು. ಈ ವಿಡಿಯೋ ಕೇವಲ 14 ಗಂಟೆಗಳ ಒಳಗಾಗಿ  ೭೪,೦೦೦ ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು ೧೫,೦೦೦ ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು ಎಣಿಕೆಯನ್ನು ಪಡೆಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ).


2020: ಬೆಂಗಳೂರು: ಮಾರಕ ಕೊರೋನಾ ಮನುಕುಲಕ್ಕೆ ದುಸ್ವಪ್ನವಾಗಿ ಕಾಡುತ್ತಿದೆ. ಈ ಮಾರಕ ಸೋಂಕಿಗೆ ವಿಶ್ವದಾದ್ಯಂತ ೨೦,೦೦೦ಕ್ಕಿಂತಲೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಸೋಂಕಿಗೆ ಒಳಗಾಗಿ ಏಕಾಂಗಿವಾಸವನ್ನು ಅನುಭವಿಸುತ್ತಿರುವವರ ಸಂಖ್ಯೆ ವಿಶ್ವದಲ್ಲಿ ೫ ಲಕ್ಷದ ಹತ್ತಿರ ಬಂದಿದೆ. ಚೀನಾ, ಇಟಲಿ, ಇರಾನ್, ಅಮೆರಿಕ, ಕೊರಿಯಾ ಸೇರಿದಂತೆ ಎಲ್ಲೆಡೆಗಳಲ್ಲೂ ಸಹಸ್ರಾರು ಮಂದಿ ವ್ಯಾಧಿಯ ಕಬಂಧಬಾಹುವಿಗೆ ಸಿಲುಕಿದ್ದಾರೆ. ಭಾರತದಲ್ಲೂ ಕೊರೋನಾ ತನ್ನ ಪ್ರಭಾವವನ್ನು ಬೀರಿದೆ.  ಇಡೀ ಜಗತ್ತೇ ‘ಕೊರೋನಾಸುರನ ಅಬ್ಬರಕ್ಕೆ ನಡುಗುತ್ತಿದೆ. ದೇಶಗಳಷ್ಟೇ ಅಲ್ಲ, ದೇಶಗಳ ಒಳಗೂ ರಾಜ್ಯ ರಾಜ್ಯಗಳ ಮಧ್ಯೆ, ಪಟ್ಟಣ-ಪಟ್ಟಣಗಳ ಮಧ್ಯೆ, ನಗರ ?ಗ್ರಾಮಗಳ ಮಧ್ಯೆ ರಸ್ತೆಗಳೇ ಮುಚ್ಚಲ್ಪಡುತ್ತಿವೆ. ಗಿಜಿಗುಡುವ ಮಹಾನಗರಗಳ ರಸ್ತೆಗಳೆಲ್ಲ ನಿರ್ಜನವಾಗಿ ಭಣಗುಟ್ಟುತ್ತಿವೆ. ಎಲ್ಲ ವಾಣಿಜ್ಯ ಕೇಂದ್ರಗಳು ಸ್ಥಗಿತಗೊಂಡಿವೆ. ವಿಮಾನಗಳು, ಬಸ್ಸುಗಳು, ರೈಲುಗಳು, ಹಡಗುಗಳ ಸಂಚಾರ ಸ್ಥಗಿತಗೊಂಡಿವೆ. ದೇವಸ್ಥಾನ, ಇಗರ್ಜಿ, ಮಸೀದಿಗಳಲ್ಲೂ ಅರ್ಚನೆ, ಪ್ರಾರ್ಥನೆ, ನಮಾಜ್ ಗಳು ನಿಂತುಹೋಗಿವೆ. ವೈದ್ಯರು, ವಿಜ್ಞಾನಿಗಳು, ಈ ವ್ಯಾಧಿಗೆ ಮದ್ದು ಕಂಡು ಹಿಡಿಯಲು ನಿರಂತರ ಶ್ರಮಿಸುತ್ತಿದ್ದಾರೆ. ಆದರೆ ಮದ್ದು ಸಿಕ್ಕಿಲ್ಲ, ಸಧ್ಯಕ್ಕೆ ಇರುವ ಏಕೈಕ ಮಾರ್ಗ  ವ್ಯಾಧಿಯ ಹರಡುವಿಕೆಯನ್ನು ತಡೆಯುವುದು ಮಾತ್ರ. ಅದಕ್ಕೆ ಇರುವ ಒಂದೇ ದಾರಿ ಸಾಮಾಜಿಕ ಅಂತರ ಅಂದರೆ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಗಳು, ಸಾಮಾಜಿಕ ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.  ಟಿ.ವಿ ಮಾಧ್ಯಮಗಳಲ್ಲೂ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು  ಸರ್ವ ಸಾಹಸ ಮಾಡುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಜನರಿಗೆ ಮಾರಕ ರೋಗದ ಭೀಕರತೆ ಅರ್ಥವಾಗುತ್ತಿಲ್ಲ. ಅದನ್ನು ಸನಿಹಕ್ಕೆ ಬರದಂತೆ ತಡೆಯಬೇಕಾದ ಮಹತ್ವ ಎಂಬುದು ಗೊತ್ತಾಗುತ್ತಿಲ್ಲ. ದೇಶದಲ್ಲಿ ಮೊತ್ತ ಮೊದಲಿಗೆ ಈ ರೋಗ ಕಂಡು ಬಂದ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿರುವ ಯಕ್ಷಗಾನ ಕ್ಷೇತ್ರದ ಕಲಾವಿದರ ಯತ್ನವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲೆಡೆಯಲ್ಲೂ ಜನರ ಗಮನ ಸೆಳೆಯುತ್ತಿದೆ. ಲಕ್ಷಾಂತರ ಮಂದಿ ಇದನ್ನು ವೀಕ್ಷಿಸುತ್ತಿದ್ದಾರೆ.  ಇದೇ ‘ಕೊರೋನಾ ಜಾಗೃತಿ ಯಕ್ಷಗಾನ. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 26  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


.

No comments:

Post a Comment