ನಾನು ಮೆಚ್ಚಿದ ವಾಟ್ಸಪ್

Wednesday, March 11, 2020

ಇಂದಿನ ಇತಿಹಾಸ History Today ಮಾರ್ಚ್ 11

2020: ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ  2020 ಮಾರ್ಚ್ 10ರ ಮಂಗಳವಾರ ರಾಜೀನಾಮೆ ನೀಡಿ ಪಕ್ಷಕ್ಕೆ iಘಾತ ನೀಡಿದಭರವಸೆಯ ನಾಯಕಜ್ಯೋತಿರಾದಿತ್ಯ ಸಿಂಧಿಯಾ ಅವರು  2020 ಮಾರ್ಚ್ 11ರ ಬುಧವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.. ಪಕ್ಷ ಸೇರಿದ ಬೆನ್ನಲ್ಲೇ ಅವರನ್ನು ಮಧ್ಯಪ್ರದೇಶದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಹೆಸರಿಸಲಾಯಿತು. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಿಂಧಿಯಾ ಅವರು ಬುಧವಾರ ಮಧ್ಯಾಹ್ನ  ಕೇಸರಿ ಪಕ್ಷವನ್ನು ಸೇರಿದರುತನಗೆ ಬಿಜೆಪಿ ಕುಟುಂಬಕ್ಕೆ ಸೇರಲು ಅವಕಾಶ ನೀಡಿದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಜ್ಯೋತಿರಾದಿತ್ಯ ಸಿಂಧಿಯಾ ಸಂದರ್ಭದಲ್ಲಿ ಧನ್ಯವಾದ ಹೇಳಿದರು. ನಂತರ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಪಕ್ಷ ಈಗ ಬದಲಾಗಿದೆ. ಅದು ವಾಸ್ತವಕತೆಗೆ ದೂರವಾಗಿದೆ. ಕಾಂಗ್ರೆಸ್ಸಿನಲ್ಲಿ ಇದ್ದುಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ವವಿಲ್ಲ ಎಂದು ಸಿಂಧಿಯಾ ನುಡಿದರು. ಭಾರತೀಯ ಜನತಾ ಪಕ್ಷವು ಸಂಜೆ  2020 ಮಾರ್ಚ್ ೨೬ಕ್ಕೆ ನಿಗದಿಯಾಗಿರುವ ೧೭ ರಾಜ್ಯಗಳ ೫೫ ರಾಜ್ಯಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತು. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮಧ್ಯಪ್ರದೇಶದಿಂದ ಪಕ್ಷದ ಒಬ್ಬ ಅಭ್ಯಥಿಯಾಗಿ ಬಿಜೆಪಿ ಪ್ರಕಟಿಸಿತು.  (ವಿವರಗಳಿಗೆಇಲ್ಲಿ  ಕ್ಲಿಕ್   ಮಾಡಿರಿ)

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ  ಫೆಬ್ರುವರಿ ತಿಂಗಳಲ್ಲಿ ೫೨ ಮಂದಿಯನ್ನು ಬಲಿ ಪಡೆದ ಕೋಮು ಗಲಭೆಯು ಪೂರ್ವ ನಿಯೋಜಿತ ಸಂಚಿನ ಭಾಗವಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಸಂಸತ್ತಿಗೆ 2020 ಮಾರ್ಚ್ 11ರ ಬುಧವಾರ ತಿಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈವರೆಗಿನ ತನಿಖೆಗಳು ಗಲಭೆಯು ಸಂಘಟಿತವಾದುದಾಗಿತ್ತು ಎಂಬುದಾಗಿ ಸೂಚಿಸಿವೆ ಎಂದು ಹೇಳಿದರು.  ಇಷ್ಟೊಂದು ಸಂಘಟಿತವಾದ ಗಲಭೆಗಳು ಪೂರ್ವ ನಿಯೋಜಿತವಾಗಿ ಇಲ್ಲದೇ ಇದ್ದಲ್ಲಿ ನಡೆಯಲು ಸಾಧ್ಯವಿರಲಿಲ್ಲ ಎಂದು ಶಾ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡುತ್ತಾ ನುಡಿದರು.  ಆದರೆ ಯಾರೇ ಶಿಕ್ಷಿಸದೆ ತಪ್ಪಿತಸ್ಥರನ್ನೂ ಬಿಡುವುದಿಲ್ಲ ಎಂದು ಶಾ ಗುಡುಗಿದರು.  ಲೋಕಸಭೆಯಲ್ಲಿ ಮೀನಾಕ್ಷಿ ಲೇಖಿ ಅವರ ಬಳಿಕ ಮಾತನಾಡಿದ ಗೃಹ ಸಚಿವರುಫೆಬ್ರುವರಿ ೨೫ರ ಮಧ್ಯಾಹ್ನ ೧೧ ಗಂಟೆಯ ಬಳಿ ಗಲಭೆಯ ಒಂದೇ ಒಂದು ಘಟನೆಯೂ ಘಟಿಸಿಲ್ಲ, ದೆಹಲಿ ಪೊಲೀಸರು ೩೬ ಗಂಟೆಗಳ ಒಳಗಾಗಿ ಗಲಭೆಗಳನ್ನು ಹತೋಟಿಗೆ ತಂದಿದ್ದಾರೆ ಎಂದು ಹೇಳಿ ಅವರನ್ನು ಅಭಿನಂದಿಸಿದರು.  ದೆಹಲಿ ಗಲಭೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ದಾಂಜಲಿ ಮತ್ತು ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಶಾ ಫೆಬ್ರುವರಿ ೨೫ರ ನಂತರ ದೆಹಲಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ. ಗಲಭೆಗಳಿಗೆ ರಾಜಕೀಯ ಬೆರೆಸುವ ಹುನ್ನಾರ ನಡೆದಿದೆ ಎಂದು ನುಡಿದರು. ಹೋಳಿ ಹಬ್ಬದ ನಂತರವೇ ದೆಹಲಿ ಗಲಭೆ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಕ್ಕೆ ಕಾರಣ, ಹಬ್ಬದ ಸಮಯದಲ್ಲಿ ಕೋಮು ಗಲಭೆಯುಂಟಾಗಬಾರದು ಎಂಬ ಉದ್ದೇಶದಿಂದ ಎಂದು ಸ್ಪಷ್ಟ ಪಡಿಸಿದ ಗೃಹಸಚಿವರುಗಲಭೆ ವೇಳೆ ದೆಹಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಲಾಗುತ್ತಿದೆ.   ಪೊಲೀಸರು ಅಲ್ಲಿಯೇ ಇದ್ದರು.  ಗಲಭೆ ಬಗ್ಗೆ ತನಿಖೆ ನಡೆಸಿ ಪೊಲೀಸರು ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. ಇತರ ಪ್ರದೇಶಗಳಿಗೆ ಗಲಭೆ ಹರಡದಂತೆ ತಡೆಯುವಲ್ಲಿ ಅವರು ಸಫಲರಾಗಿದ್ದಾರೆಎಂದು ವಿವರಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಬೆಂಗಳೂರು: ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ್ದು ರಾಜ್ಯದ ಪ್ರಭಾವಿ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ 2020 ಮಾರ್ಚ್ 11ರ ಬುಧವಾರ ಆದೇಶ ಹೊರಡಿಸಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಈ ಆದೇಶವನ್ನು ಹೊರಡಿಸಿದ್ದು ಇದರ ಜೊತೆಗೆ ಕೆಪಿಸಿಸಿಗೆ ಇತರೇ ಪದಾಧಿಕಾರಿಗಳನ್ನೂ ನೇಮಿಸಿ ಆದೇಶ ಹೊರಡಿಸಲಾಯಿತು. ನೂತನ ಅಧ್ಯಕ್ಷ ಡಿಕೆಶಿ ಅವರ ಕೈ ಬಲಪಡಿಸಲು ಮೂವರು ಕಾರ್ಯಾಧ್ಯಕ್ಷರನ್ನು ನೇಮಿಸಲಾಯಿತು.  ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹಮ್ಮದ್ ಅವರು ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಮಾಜೀ ಮುಖ್ಯಮಂತ್ರಿ ಮತ್ತು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿಯೂ ಮುಂದುವರಿಯಲಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

 ಇಂದಿನ ಇತಿಹಾಸ  History Today ಮಾರ್ಚ್ 11  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment