ನಾನು ಮೆಚ್ಚಿದ ವಾಟ್ಸಪ್

Wednesday, March 4, 2020

ಇಂದಿನ ಇತಿಹಾಸ History Today ಮಾರ್ಚ್ 04

2020: ನವದೆಹಲಿ:  ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಗುಪ್ತ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2020 ಮಾರ್ಚ್  04ರ ಬುಧವಾರ ತಿರಸ್ಕರಿಸಿದರು. ಇದಕ್ಕೆ ಮುನ್ನ ದೆಹಲಿ ಸರ್ಕಾರವು ಗುಪ್ತ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿತ್ತು. ನಾಲ್ವರು ಅಪರಾಧಿಗಳ ಪೈಕಿ ಪವನ್ ಗುಪ್ತ ಮಾತ್ರವೇ ತನ್ನ ಎಲ್ಲ ಕಾನೂನುಬದ್ಧ ಪರಿಹಾರಗಳನ್ನು ಬಳಸಿಕೊಳ್ಳಲು ಬಾಕಿ ಉಳಿದಿದ್ದ ವ್ಯಕಿಯಾಗಿದ್ದ. ಸೋಮವಾರ ಪವನ್ ಗುಪ್ತ ಪರ ವಕೀಲ  ಎಪಿ ಸಿಂಗ್ ಅವರು ಪವನ್ ಗುಪ್ತ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿರುವುದನ್ನು ಗಮನಕ್ಕೆ ತಂದ ಬಳಿಕ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಾರ್ಚ್ ೦೩ರ ಮಂಗಳವಾರಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಜಾರಿಯನ್ನು ಮುಂದಿನ ಆದೇಶದವರೆಗೆ ಮುಂದೂಡಿದ್ದರು. ಮುಕೇಶ್ ಸಿಂಗ್, ಪವನ್ ಗುಪ್ತ, ವಿನಯ್ ಕುಮಾರ್ ಶರ್ಮ ಮತ್ತು ಅಕ್ಷಯ್ ಕುಮಾರ್ ನಾಲ್ಕು ಮಂದಿ ಅಪರಾಧಿಗಳನ್ನು ಮಾರ್ಚ್ ೩ರ ಮಂಗಳವಾರ ಬೆಳಗ್ಗೆ ಗಂಟೆಗೆ ಗಲ್ಲಿಗೆ ಏರಿಸಬೇಕಾಗಿತ್ತು. ಇದಕ್ಕೆ ಮುನ್ನ ಸೋಮವಾರ ಪವನ್ ಗುಪ್ತ ಗಲ್ಲು ಜಾರಿಗೆ ತಡೆ ನೀಡುವಂತೆ ಕೋರಿ ಪವನ್ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಬೆನ್ನಲ್ಲೇ ರಾಷ್ಟ್ರಪತಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲಿಸಿದ ಪವನ್ ಗುಪ್ತ ಹೊಸ ಅರ್ಜಿ ಸಲ್ಲಿಸುವ ಮೂಲಕ ವಿಚಾರವನ್ನು ದೆಹಲಿ ನ್ಯಾಯಾಲಯದ ಗಮನಕ್ಕೆ ತಂದಿದ್ದ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕು ತಗುಲಿದವರ ಸಂಖ್ಯೆ ಬುಧವಾರ ೨೮ಕ್ಕೆ ಏರಿದ್ದು, ಮುಂಜಾಗರೂಕತಾ ಕ್ರಮವಾಗಿ ಭಾರತವು ಎಲ್ಲ ದೇಶಗಳಿಂದ ಬರುವ ಪ್ರಯಾಣಿಕರನ್ನು ಈಗ ವೈದ್ಯಕೀಯ ತಪಾಸಣೆಗೆ ಗುರಿಪಡಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು 2020 ಮಾರ್ಚ್  04ರ ಬುಧವಾರ ಪ್ರಕಟಿಸಿದರು. ಇನ್ನು ಮುಂದೆ, ಭಾರತವು ಮೊದಲು ಪಟ್ಟಿ ಮಾಡಿದ ೧೨ ರಾಷ್ಟ್ರಗಳು ಮಾತ್ರವೇ ಅಲ್ಲ, ಎಲ್ಲ ದೇಶಗಳಿಂದ ಬರುವ ವಿಮಾನಗಳು ಮತ್ತು ಪ್ರಯಾಣಿಕರನ್ನು ಸಾರ್ವತ್ರಿಕ ತಪಾಸಣೆಗೆ ಗುರಿಪಡಿಸುವುದು ಎಂದು ಸಚಿವರು ನುಡಿದರು. ಕೊರೋನಾವೈರಸ್ ಕುರಿತಂತೆ ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹರ್ಷ ವರ್ಧನ್ ಅವರು ವಿಚಾರವನ್ನು ತಿಳಿಸಿದರು. ಹಿಂದೆ ೧೨ ದೇಶಗಳ ವಿಮಾನಗಳು ಮತ್ತು ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಲು ನಿರ್ಧರಿಸಲಾಗಿತು.
ಕೊರೋನಾವೈರಸ್ ಸೋಂಕು ಖಚಿತಪಟ್ಟ, ಆಗ್ರಾದಲ್ಲಿ ವಾಸವಾಗಿರುವ ದೆಹಲಿ ನಿವಾಸಿಯ ಕುಟುಂಬದಲ್ಲಿ ಮಂದಿ ದಸ್ಯರಿದ್ದು, ಎಲ್ಲ ಆರು ಮಂದಿಗೂ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದೂ ಸಚಿವರು ಹೇಳಿದರು. ಮಧ್ಯೆ, ದೆಹಲಿಯ ಚಾವ್ಲಾದಲ್ಲಿನ ಐಟಿಬಿಪಿಯ ಏಕಾಂಗಿವಾಸದ ಸವಲತ್ತಿನ ವಾರ್ಡಿನಲ್ಲಿದ್ದ ೨೧ ಮಂದಿ ಇಟಲಿ ಪ್ರಜೆಗಳು ಮತ್ತು ಮೂವರು ಭಾರತೀಯರಿಗೂ ಸೋಂಕು ತಗುಲಿರುವುದು ಖಚಿತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೈಪುರದಲ್ಲಿ ಏಕಾಂಗಿವಾಸದ ವಾರ್ಡಿಗೆ ಸೇರಿಸಲಾಗಿರುವ ಇಬ್ಬರು ಇಟಲಿ ಪ್ರವಾಸಿಗಳಿಗೂ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತವಾಯಿತು. ಸರ್ಕಾರವು ವಾರಾರಂಭದಲ್ಲಿ ಕೊರೋನಾವೈರಸ್ ಸೋಂಕು ತಗುಲಿದ ಹೊಸ ಪ್ರಕರಣಗಳನ್ನು ದೃಢ ಪಡಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್-೧೯ (ಕೊರೋನಾವೈರಸ್) ಸೋಂಕಿನ ಹರಡುವಿಕೆಯನ್ನು ತಡೆಯಲು ಭಾರತ ಸರ್ವ ಸನ್ನದ್ಧವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ವರ್ಷ   ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ಪ್ರಕಟಿಸಿ, ಜನತೆಗೂ ಬಹಿರಂಗ ಹೋಳಿ ಆಚರಣೆ ಮಾಡದಂತೆ 2020 ಮಾರ್ಚ್  04ರ ಬುಧವಾರ ಮನವಿ ಮಾಡಿದರು. ರಾಷ್ಟ್ರವು ಕೋವಿಡ್ -೧೯ (ಮಾರಕ ಕೊರೋನಾ ವೈರಸ್) ಹರಡುವಿಕೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ಇಲ್ಲಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ವಿವಿಧ ಭಾಗಗಳಲ್ಲಿ ಕೊರೋನಾವೈರಸ್ ಸೋಂಕು ತಗುಲಿರುವ ಬಗ್ಗೆ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ತಾವು ವರ್ಷ ಹೋಳಿ ಮಿಲನ್ ಹಬ್ಬದಲ್ಲಿ (ಹೋಳಿ ರಂಗಿನ ಆಟ) ತಾವು ಪಾಲ್ಗೊಳ್ಳುವುದಿಲ್ಲ ಎಂದು ನುಡಿದರು. ಕೊರೋನಾವೈರಸ್ ಹಬ್ಬದಂತೆ ತಡೆಯಲು ಅಗತ್ಯ ಕ್ರಮಗಳನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು ಎಂದು ಶಾ ಮನವಿ ಮಾಡಿದರು. ಹೋಳಿಯು ಭಾರತೀಯರಿಗೆ ಅತ್ಯಂತ ಮಹತ್ವದ ಹಬ್ಬ. ಆದರೆ ಕೊರೋನಾವೈರಸ್ ಹಿನ್ನೆಲೆಯಲಿ ವರ್ಷ ಯಾವುದೇ ಹೋಳಿ ಮಿಲನ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಿರಲು ನಾನು ನಿರ್ಧರಿಸಿದ್ದೇನೆ. ಮತ್ತು ಪ್ರತಿಯೊಬ್ಬರಿಗೂ ಸಾಮೂಹಿಕವಾಗಿ ಆಚರಿಸದೇ ಇರುವ ಮೂಲಕ ನಿಮ್ಮ ಹಾಗೂ ನಿಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳಿ ಎಂದು ಮನವಿ ಮಾಡುವೆ ಎಂದು ಶಾ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ನವದೆಹಲಿ: ಸರ್ಕಾರಿ ರಂಗದ ೧೦ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು ೨೦೨೦ರ ಏಪ್ರಿಲ್ ೧ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ಮಾರ್ಚ್  04ರ ಬುಧವಾರ ಇಲ್ಲಿ ಹೇಳಿದರು. ಕೇಂದ್ರ ಸಚಿವ ಸಂಪುಟವು ವಿಲೀನ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದು ಬ್ಯಾಂಕುಗಳ ಜೊತೆ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಯಾವುದೇ ನಿಯಂತ್ರಣ ಸಮಸ್ಯೆಗಳೂ ಇಲ್ಲ ಎಂದು ಸಚಿವರು ನುಡಿದರು. ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಮತ್ತು ಸಂಬಂಧಪಟ್ಟ ಬ್ಯಾಂಕ್ ಮಂಡಳಿಗಳ ಜೊತೆ ಈಗಾಗಲೇ ನಿರ್ಣಯಗಳನ್ನೂ ಕೈಗೊಳ್ಳಲಾಗಿದೆ ಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಭಾರತದಲ್ಲಿ ಜಾಗತಿಕ ಗಾತ್ರದ ಬ್ಯಾಂಕುಗಳನ್ನು ಸೃಷ್ಟಿಸುವ ಸಲುವಾಗಿ ಬಾಂಕುಗಳನ್ನು ವಿಲೀನಗೊಳಿಸಲಾಗಿದೆ. ೨೦೧೯ರ ಆಗಸ್ಟ್ ತಿಂಗಳಲ್ಲಿ ಸರ್ಕಾರಿ ರಂಗದ ನಾಲ್ಕು ಪ್ರಮುಖ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಪ್ರಕಟಿಸಿತ್ತು. ಇದೊಂದಿಗೆ ೨೦೧೭ರಲ್ಲಿ ಇದ್ದ ೨೭ ಬ್ಯಾಂಕುಗಳ ಸಂಖ್ಯೆ ೧೨ಕ್ಕೆ ಇಳಿದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಜಾಗತಿಕ ಬ್ಯಾಂಕುಗಳ ಗಾತ್ರದ ಬ್ಯಾಂಕುಗಳನ್ನಾಗಿ ಮಾರ್ಪಡಿಸುವುದು ಕ್ರಮದ ಉದ್ದೇಶವಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸೋಂಕು ಇಡೀ ಜಗತ್ತನ್ನು ಅಮುಕುತ್ತಿರುವಂತೆಯೇ ಮಕ್ಕಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಘಟಕವಾಗಿರುವ ಯುನಿಸೆಫ್ ಕೊರೋನಾವೈರಸ್ ಸೋಂಕನ್ನು ದೂರವಿಡುವಲ್ಲಿ ಕೈ ತೊಳೆದುಕೊಳ್ಳುವುದರ ಮಹತ್ವವನ್ನು ತೋರಿಸುವ ಕೈತೊಳೆಯುವ ನೃತ್ಯವನ್ನು 2020 ಮಾರ್ಚ್  04ರ ಬುಧವಾರ ಅಂತರ್ಜಾಲದಲ್ಲಿ ಪ್ರಕಟಿಸಿತುಇದೇ ವೇಳೆಗೆ ಕೊರೋನಾವೈರಸ್ ಏರುಗತಿಯನ್ನು ಗಮನಿಸಿದ ಸೌದಿ ಅರೇಬಿಯಾ ಸರ್ಕಾರವು ಮೆಕ್ಕಾ ಮತ್ತು ಮದೀನಾದ ವಾರ್ಷಿಕ ಉಮ್ರಾಹ್ ಯಾತ್ರೆಯನ್ನು ರದ್ದು ಪಡಿಸಿರುವುದಾಗಿ ಪ್ರಕಟಿಸಿತು. ವಿಯೆಟ್ನಾಮಿನ ಕುವಾಂಗ್ ಡಾಂಗ್ ಎಂಬ ಹೆಸರಿನ ವಿಯೆಟ್ನಾಮೀ ಕಲಾವಿದ ರೂಪಿಸಿದ ಕೈತೊಳೆಯುವ ನೃತ್ಯ (ಹ್ಯಾಂಡ್ ವಾಶಿಂಗ್ ಡ್ಯಾನ್ಸ್) ವಿಡಿಯೋವನ್ನು ಯುನಿಸೆಫ್ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿತು. ವಿಯಟ್ನಾಮೀ ನೃತ್ಯ ಕಲಾವಿದ ಕುವಾಂಗ್ ಡಾಂಗ್ ಅವರ ಹ್ಯಾಂಡ್ ವಾಶಿಂಗ್ ಡ್ಯಾನ್ಸ್ ವಿಡಿಯೋವನ್ನು ನಾವು ಮೆಚ್ಚಿದ್ದೇವೆ ಎಂದು ಟ್ವೀಟ್ ಮಾಡಿದ ಯುನಿಸೆಫ್, ಸಾಬೂನು ಮತ್ತು ನೀರಿನಲ್ಲಿ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು ನಿಮ್ಮನ್ನು ನೀವು ಕೊರೋನಾವೈರಸ್ ನಿಂದ ರಕ್ಷಿಸಿಕೊಳ್ಳಲು ಇರುವ ಮೊತ್ತ ಮೊದಲ ಹೆಜ್ಜೆ ಎಂದು ತಿಳಿಸಿತು. ಡಾಂಗ್ ಮತ್ತು ಇನ್ನೊಬ್ಬ ನೃತ್ಯ ಕಲಾವಿದ ಕೈತೊಳೆದುಕೊಳ್ಳುವುದನ್ನು ತೋರಿಸುತ್ತಾ ನರ್ತಿಸುವ ದೃಶ್ಯ ವಿಡಿಯೋದಲ್ಲಿ ಇದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ ಕೂಡಾ ಹೋಳಿ ಸಮಾರಂಭವನ್ನು ರದ್ದು ಪಡಿಸಿರುವುದಾಗಿ 2020 ಮಾರ್ಚ್  04ರ ಬುಧವಾರ ಪ್ರಕಟಿಸಿತು.
ಎಚ್ಚರಿಕೆ ಮತ್ತು ರಕ್ಷಣಾತ್ಮಕ ಕ್ರಮಗಳ ಮೂಲಕ ನಾವು ಕೋವಿಡ್ -೧೯ (ಮಾರಕ ಕೊರೋನಾವೈರಸ್) ಹರಡದಂತೆ ತಡೆಯಲು ನೆರವಾಗಬಹುದು. ಮುಂಜಾಗರೂಕತಾ ಕ್ರಮವಾಗಿ, ರಾಷ್ಟ್ರಪತಿ ಭವನವು ಪರಂಪರಾಗತ ಹೋಳಿ ಸಂಭ್ರಮಾಚರಣೆಯನ್ನು ನಡೆಸುವುದಿಲ್ಲ ಎಂದು ರಾಷ್ಟಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದರು.. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೨೧ರ ಪೂರ್ವಾರ್ಧದಲ್ಲಿ ಚಂದ್ರಯಾನ- ಉಡಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 2020 ಮಾರ್ಚ್  04ರ ಬುಧವಾರ ತಿಳಿಸಿದರು. ಮೂರನೇ ಚಂದ್ರಯಾನ ಯೋಜನೆಯಲ್ಲಿ ಸ್ವಲ್ವ ವಿಳಂಬವಾಗಬಹುದು ಎಂಬ ಸೂಚನೆಯನ್ನು ಅವರು ಮೂಲಕ ನೀಡಿದರು. ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ವಿಷಯವನ್ನು ತಿಳಿಸಿದರು. ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನವಾದ ಗಗನಯಾನ ಯೋಜನೆಯ ಸಂದರ್ಭದಲ್ಲಿ  ಸೂಕ್ಷ್ಮ ಗುರುತ್ವಾಕರ್ಷಣೆಗೆ (ಮೈಕ್ರೋ ಗ್ರಾವಿಟಿ) ಸಂಬಂಧಿಸಿದಂತೆ ಜೈವಿಕ ಮತ್ತು ಭೌತ ವಿಜ್ಞಾನದ ಒಟ್ಟು ಪ್ರಯೋಗಗಳನ್ನು ನಡೆಸಲಾಗುವುದು ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 04  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment