ನಾನು ಮೆಚ್ಚಿದ ವಾಟ್ಸಪ್

Monday, March 9, 2020

ಇಂದಿನ ಇತಿಹಾಸ History Today ಮಾರ್ಚ್ 09

2020: ನವದೆಹಲಿ: ಕಣ್ಮರೆಯಾಗಿದ್ದು ಎಂಟು ಶಾಸಕರು ರಾಜ್ಯಕ್ಕೆ ವಾಪಸಾಗುತ್ತಿದ್ದಂತೆಯೇ ಅಸಮಾಧಾನದಿಂದ ಕುದಿಯುತ್ತಿರುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರು ಎನ್ನಲಾಗಿರುವ ೧೮ ಮಂದಿ ಕಾಂಗ್ರೆಸ್ ಶಾಸಕರು 2020 ಮಾರ್ಚ್ 09ರ ಸೋಮವಾರ ನಾಟಕೀಯವಾಗಿ ವಿಮಾನವೊಂದರಲ್ಲಿ ಬಿಜೆಪಿ ಆಡಳಿತವಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಹಾರಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಸರ್ಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿತು.  ೧೮ ಮಂದಿ ಶಾಸಕರ ಪೈಕಿ ಮಂದಿ ಸಚಿವರೂ ಇದ್ದಾರೆ ಎಂದು ವರದಿಗಳು ಹೇಳಿದವು. ಪಕ್ಷ ಬದಲಿಸಲು ಸಿದ್ಧರಾಗಿರುವ ಬಂಡಾಯ ಕಾಂಗೆಸ್ ಶಾಸಕರ ಪಯಣಕ್ಕೆ ಬೆಂಗಳೂರು ಗುರಿ ಎನ್ನಲಾಗಿದ್ದು, ಹೊಸ ಬೆಳವಣಿಗೆಯು ೧೫ ತಿಂಗಳ ಕಮಲನಾಥ್ ಸರ್ಕಾರವನ್ನು ಪತನದ ಅಂಚಿಗೆ ತಳ್ಳಿತು. ಒಂದು ಕಾಲದಲ್ಲಿ ಗಾಂಧಿ ಕುಟುಂಬಕ್ಕೆ ಅತ್ಯಂಕ ನಿಕಟವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಸ್ತುತ ದೆಹಲಿಯಲ್ಲಿದ್ದು, ಕಾಂಗ್ರೆಸ್ ಸಂಧಾನಕ್ಕಾಗಿ ಯತ್ನಿಸುತ್ತಿದೆ, ಆದರೆ ತತ್ ಕ್ಷಣಕ್ಕೆ ಇತ್ಯರ್ಥ ಅಸಂಭವ ಎನ್ನಲಾಯಿತು.  ೪೯ರ ಹರೆಯದ ಸಿಂಧಿಯಾ ಅವರು ೨೦೧೮ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ವಿಜಯಕ್ಕೆ ಮಹತ್ವದ ಕೊಡುಗೆ ನೀಡಿದ್ದರೂ  ಕೇವಲ ೨೩ ಶಾಸಕರ ಬೆಂಬಲ ಲಭಿಸಿದ ಪರಿಣಾಮವಾಗಿ ಪೈಪೋಟಿಯಲ್ಲಿ ಸೋತು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿದ್ದರು. ಕಮಲನಾಥ್ ಅವರು ಮುಖ್ಯಮಂತ್ರಿಯಾದುದಲ್ಲದೆ ರಾಜ್ಯ ಕಾಂಗ್ರೆಸ್ ಘಟಕದ ಮೇಲೆ ನಿಯಂತ್ರಣವನ್ನೂ ಸಾಧಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಚೀನಾದಲ್ಲಿ ಮಾರಕ ಕೊರೋನಾವೈರಸ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಭಾರತವೂ ಸೇರಿದಂತೆ ವಿಶ್ವದ ಇತರ ಕಡೆಗಳಲ್ಲಿ ಹೆಚ್ಚುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ಅನುಸರಿಸಿ ಚೀನಾವು ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ಮುಚ್ಚಿದೆ. ಭಾರತವು ಇರಾನಿನಿಂದ ತನ್ನ ಪ್ರಜೆಗಳನ್ನು ಕರೆತರಲು ಭಾರತೀಯ ವಾಯುಪಡೆ ವಿಮಾನವನ್ನು 2020 ಮಾರ್ಚ್ 09ರ ಸೋಮವಾರ ರಾತ್ರಿ ಕಳುಹಿಸಿತು. ವಿಶ್ವಾದ್ಯಂತ ೧೦೦ ರಾಷ್ಟ್ರಗಳಿಗೆ ಹರಡಿರುವ ಕೊರೋನಾವೈರಸ್ ೩೮೦೦ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದ್ದು, ಸೋಂಕಿತರ ಸಂಖ್ಯೆ ,೧೦,೦೦೦ಕ್ಕೆ ತಲುಪಿತು. ಭಾರತದಲ್ಲಿ ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಜಮ್ಮುವಿನಲ್ಲಿ ತಲಾ ಒಂದು ಕೊರೋನಾವೈರಸ್ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 45ಕ್ಕೆ ಏರಿದೆ. ಕೊರೋನಾವೈರಸ್ ಪ್ರಕರಣಗಳ ಏರುಗತಿಯು ಜಾಗತಿಕ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದ್ದು, ಷೇರು ಸಂವೇದಿ ಸೂಚ್ಯಂಕಗಳು ಕುಸಿದು ಹೂಡಿಕೆದಾರರು ಭಾರೀ ನಷ್ಟ ಅನುಭವಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಮುಂಬೈ: ಭಾರತ ಸೇರಿದಂತೆ ವಿಶ್ವಾದ್ಯಂತ ಕ್ಷಿಪ್ರವಾಗಿ ಹರಡುತ್ತಿರುವ ಮಾರಕ ಕೋರೋನಾವೈರಸ್ ಭೀತಿಗೆ ಜಗತ್ತು ತತ್ತರಿಸುತ್ತಿರುವುದರ ಜೊತೆಗೇ ಸೌದಿ ಅರೇಬಿಯಾ ಆರಂಭಿಸಿದ ದರ ಸಮರದ ಫಲವಾಗಿ ಜಾಗತಿಕ ಮಾರುಕಟ್ಟೆಯಲ್ಲಿ 2020 ಮಾರ್ಚ್ 09ರ ಸೋಮವಾರ ತೈಲ ಬೆಲೆ ಕುಸಿಯಿತು. ಪರಿಣಾಮವಾಗಿ ಷೇರು ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ೧೯೪೧ ಅಂಶದಷ್ಟು ಕುಸಿದು ಹೂಡಿಕೆದಾರರ ಸುಮಾರು ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಕರಗಿಸಿತು.  ಹಗಲಿನಲ್ಲಿ ,೪೬೭ ಅಂಶ ಕುಸಿತದ ಬಳಿಕ ಮುಂಬೈ ಷೇರುಪೇಟೆಯಲ್ಲಿ ೩೦ ಷೇರುಗಳ ಸಂವೇದಿ ಸೂಚ್ಯಂಕವು ,೯೪೧.೬೭ ಅಂಶಗಳಷ್ಟು  ಅಥವಾ ಶೇಕಡಾ .೧೭ರಷ್ಟು ಇಳಿಕೆ ಕಂಡು ೩೫,೬೩೪.೯ರಲ್ಲಿ ಸ್ಥಿರಗೊಂಡಿತು. ಅದೇ ರೀತಿ ಎನ್ಎಸ್ ನಿಫ್ಟಿ ೫೩೮ ಅಂಶ ಅಥವಾ ಶೇಕಡಾ .೯೦ ರಷ್ಟು ಕುಸಿದು ೧೦,೪೫೧.೪೫ ಕ್ಕೆ ತಲುಪಿತು. ಒಎನ್ಜಿಸಿ ಶೇಕಡಾ ೧೬ ರಷ್ಟು ಕುಸಿತ ಕಂಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಎಸ್ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಆಟೋ ಅದನ್ನು ಅನುಸರಿಸಿದವು. ಹೆವಿವೇಯ್ಟ್ ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ ೧೨ ಕ್ಕಿಂತ ಹೆಚ್ಚು ಮೌಲ್ಯ ನಷ್ಟ ಅನುಭವಿಸಿತು. ,೪೫೦ ಕೋಟಿ ರೂಪಾಯಿಗಳನ್ನು ತೊಡಗಿಸಿ ಯೆಸ್ ಬ್ಯಾಂಕಿನ ಶೇ ೪೯ ರಷ್ಟು ಪಾಲನ್ನು ಪಡೆದುಕೊಳ್ಳುವುದಾಗಿ ಪ್ರಕಟಿಸಿದ ಬಳಿಕ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಷೇರುಗಳು ಶೇಕಡಾ ಕ್ಕಿಂತಲೂ ಹೆಚ್ಚು ಕುಸಿದವು. ಮತ್ತೊಂದೆಡೆ, ಯೆಸ್ ಬ್ಯಾಂಕ್ ಷೇರುಗಳು ಶೇಕಡಾ ೩೧ರ ಆಸುಪಾಸಿನಲ್ಲಿ ಸುತ್ತಿದವು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಬೆಂಗಳೂರು: ರಾಜ್ಯದಲ್ಲಿ ಮೊದಲ ಕೊರೊನಾವೈರಸ್ ಸೋಂಕು ದೃಡಪಟ್ಟ ಪ್ರಕರಣ ವರದಿಯಾಗಿದ್ದು, ಬೆಂಗಳೂರಿಗೆ ಅಮೆರಿಕದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾವೈರಸ್ ಪತ್ತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  2020 ಮಾರ್ಚ್ 09ರ ಸೋಮವಾರ ಖಚಿತಪಡಿಸಿದರು.  ೪೦ ವರ್ಷದ ಟೆಕ್ಕಿಯಲ್ಲಿ ಕೊರೊನಾವೈರಸ್ ಪತ್ತೆಯಾಗಿದ್ದು, ಅಮೆರಿಕದಿಂದ ಮಾರ್ಚ್ ೧ರಂದು ಬೆಳಗ್ಗೆ .೩೦ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಕೊರೊನಾವೈರಸ್ ಸೋಂಕಿತ ವ್ಯಕ್ತಿ, ಆತನ ಪತ್ನಿ, ಮಗು, ಚಾಲಕನನ್ನು ಪ್ರತ್ಯೇಕವಾಗಿ ಇಡಲಾಯಿತು.  ಸೋಂಕಿತನನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜಯನಗರದ ರಾಜೀವಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಶಾಲೆಗಳಿಗೆ ರಜೆ: ಮಧ್ಯೆ, ನಗರದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಶಾಲೆಗಳಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿತು. ಸೋಮವಾರದಿಂದ ಜಾರಿಗೆ ಬರುವಂತೆ ಪ್ರಿ ಎಲ್ಕೆಜಿ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಸರ್ಕಾರ ಈಗಾಗಲೇ ರಜೆ ಘೋಷಿಸಿದೆ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಇದು ಅನ್ವಯವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 09  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment