ನಾನು ಮೆಚ್ಚಿದ ವಾಟ್ಸಪ್

Monday, March 12, 2018

ಇಂದಿನ ಇತಿಹಾಸ History Today ಮಾರ್ಚ್ 11

ಇಂದಿನ ಇತಿಹಾಸ History Today ಮಾರ್ಚ್ 11
 2018: ಬೀಜಿಂಗ್: ಹೌದು. ಚೀನಾಕ್ಕೆ ಕ್ಷಿ ಜಿನ್ ಪಿಂಗ್ ಅವರು ಇನ್ನು ಮುಂದೆ ಅನಿರ್ದಿಷ್ಟ ಅವಧಿಗೆ ಅಧ್ಯಕ್ಷ. ಚೀನಾದ ರಬ್ಬರ್ ಸ್ಟಾಂಪ್ ಶಾಸನಕರ್ತರು ರಾಷ್ಟ್ರದ ಅಧ್ಯಕ್ಷರ ಅವಧಿಯ ಮಿತಿಯನ್ನು ರದ್ದು ಪಡಿಸುವ ಚಾರಿತ್ರಿಕ ಸಂವಿಧಾನ ತಿದ್ದುಪಡಿಗೆ ಈದಿನ ಒಪ್ಪಿಗೆ ನೀಡಿದರು. ಇದರೊಂದಿಗೆ ಕ್ಷಿ ಜಿನ್ಪಿಂಗ್ ಅವರು ಇನ್ನು ಮುಂದೆ ಅನಿರ್ದಿಷ್ಟ ಅವಧಿಗೆ ಅಂದರೆ ಸ್ವತಃ ಅವರು ಇಚ್ಛಿಸುವಷ್ಟು ಕಾಲ ಚೀನಾದ ಅಧ್ಯಕ್ಷರಾಗಿ ಮುಂದುವರೆಯುವರು.  ಆಯ್ದ ಸುಮಾರು ೩೦೦೦ ಮಂದಿ ಶಾಸನಕರ್ತರು ಇದ್ದ ರಬ್ಬರ್ ಸ್ಟಾಂಪ್ ಸಂಸತ್ತುನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್, ಸಂವಿಧಾನ ತಿದ್ದುಪಡಿ ಮಸೂದೆಯನ್ನು ,೯೫೮ ಮತಗಳು ಪರ, ಮತಗಳ ವಿರೋಧದೊಂದಿಗೆ ಅಂಗೀಕರಿಸಿತು. ಮತದಾನದ ವೇಳೆ ಮೂವರು ಗೈರು ಹಾಜರಾದರು. ಕ್ರಮದಿಂದ ಕ್ಷಿ ಜಿನ್ ಪಿಂಗ್ ಅವರಿಗೆ ಇದೀಗ ಅಪರಿಮಿತ ಅಧಿಕಾರ ಪ್ರಾಪ್ತವಾಗಿದೆ. ಸಂವಿಧಾನ ತಿದ್ದು ಪಡಿಯೊಂದಿಗೆ ಚೀನಾದಲ್ಲಿ ಮಾವೋ ಝೆಡೊಂಗ್ ಅವರು ೧೯೬೬-೭೬ರ ಅವಧಿಯಲ್ಲಿ ತಂದಿದ್ದ ಸಾಂಸ್ಕೃತಿಕ ಕ್ರಾಂತಿ ಮಾದರಿಯ ಆಜೀವ ಸರ್ವಾಧಿಕಾರ ತಡೆಯಲು ಮಾಜಿ ನಾಯಕ ಡೆಂಗ್ ಕ್ಷಿಯೋಪಿಂಗ್ ಅವರು ೧೯೮೨ರಲ್ಲಿ ಜಾರಿಗೆ ತಂದಿದ್ದ ವ್ಯವಸ್ಥೆ ರದ್ದಾಯಿತು. ಕ್ಷಿ ಆಡಳಿತದಲ್ಲಿ ಏಕ ವ್ಯಕ್ತಿ ಆಡಳಿತದತ್ತ ಹೊರಳಿರುವ ಚೀನಾ ಸರ್ವಾಧಿಕಾರಿ ನಾಯಕತ್ವದ ದಮನ ಕ್ರಮಗಳ ನಿವಾರಣೆ, ಆರ್ಥಿಕ ನಿಯಂತ್ರಣಗಳನ್ನು ದೃಢ ಹಾಗೂ ನಿಶ್ಚಿತಗೊಳಿಸಲು ಸಮರ್ಥವಾದೀತೇ ಎಂಬ ಚಿಂತೆಯನ್ನು ಹುಟ್ಟು ಹಾಕಿತು.  ಸಾಮಾಜಿಕ ಜಾಲತಾಣದಲ್ಲಿಕ್ಷಿ ಝೆಡೊಂಗ್ ಗೆ ನಾನು ಒಪ್ಪಲಾರೆ ಎಂಬ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಬರಹಗಳಿಗೆ ಸರ್ಕಾರ ಈಗಾಗಲೇ ತಡೆ ಹಾಕಿತು.  ಸಂವಿಧಾನ ತಿದ್ದು ಪಡಿಯ ಪರಿಣಾಮವಾಗಿ ೬೪ರ ಹರೆಯದ ಕ್ಷಿ ಜಿನ್ ಪಿಂಗ್ ಅವರು ಇನ್ನು ಮುಂದೆ ತಾವು ಇಚ್ಛಿಸಿದಷ್ಟು ಕಾಲ ಅಧಿಕಾರದಲ್ಲಿ ಉಳಿಯಬಹುದು ಮತ್ತು ವಸ್ತುಶಃ ಚಕ್ರವರ್ತಿಯಂತೆಯೇ ಆಡಳಿತ ನಡೆಸಬಹುದು.  ಐದು ವರ್ಷಗಳ ಹಿಂದೆ ಅಕ್ಟೋಬರ್ ನಲ್ಲಿ ನಡೆದಿದ್ದ ಪಕ್ಷದ ಅಧಿವೇಶನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದ ಕ್ಷಿ, ಇದೀಗ ಕಮ್ಯೂನಿಸ್ಟ್ ಚೀನ ಸ್ಥಾಪಕ ಮಾವೋ ಅವರ ಬಳಿಕ ಅಪರಿಮಿತ ಅಧಿಕಾರವನ್ನು ಕೈಗೆ ತೆಗೆದುಕೊಂಡಂತಾಯಿತು.  ಕ್ಷಿ ಅವರ ತಂದೆ ಕ್ಷಿ ಝೊಗಕ್ಷುನ್ ಅವರು ಮಾವೋ ಅವರಿಂದಲೇ ಶುದ್ಧೀಕರಿಸಲ್ಪಟ್ಟ ಕ್ರಾಂತಿಕಾರಿಯಾಗಿದ್ದರೂ ಪಕ್ಷದ ನಿಯಮಳಿಗೆ ಬದ್ಧರಾಗಿದ್ದರು.  ಕ್ಷಿ ಅವರು ೧೯೪೯ರಲ್ಲಿ ಮಾವೋ ಅವರ ಕಮೂನಿಸ್ಟ್ ಪಕ್ಷವು ಅಂತರ್ಯುದ್ಧದ ಬಳಿಕ ಅಧಿಕಾರವನ್ನು ವಶ ಪಡಿಸಿಕೊಂಡ ಬಳಿಕ ಜನಿಸಿದ ಮೊದಲ ಚೀನೀ ನಾಯಕರಾಗಿದ್ದಾರೆ. ತಂದೆಯ ಶುದ್ಧೀಕರಣವು ಕುಟುಂಬಕ್ಕೆ ಹಲವಾರು ವರ್ಷಗಳ ಕಾಲ ಸಂಕಷ್ಟವನ್ನು ತಂದೊಡ್ಡಿತ್ತು. ಅದರೆ ಅವರು ಎಂದು ನಿರೀಕ್ಷಿತ ಮಟ್ಟದಲ್ಲಿ ಮೇಲಕ್ಕೆ ಏರಲಿಲ್ಲ. ೧೯೬೯ರಲ್ಲಿ ಕೌಂಟಿ ಮಟ್ಟದ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಜೀವನ ಆರಂಭಿಸಿದ್ದ ಕ್ಷಿ ಅವರು ೧೯೯೯ರ ವೇಳೆಗೆ ಕರಾವಳಿ ಫ್ಯುಜಿ ಪ್ರಾಂತ್ಯದ ಗವರ್ನರ್ ಶಿಪ್ಗೆ ಏರಿದ್ದರು. ಬಳಿಕ ೨೦೦೨ರಲ್ಲಿ ಝೆಜಿಯಾಂಗ್ ಪ್ರಾಂತ್ಯದಲ್ಲಿ ಪಕ್ಷದ ಮುಖ್ಯಸ್ಥರಾಗಿದ್ದರು. ೨೦೦೭ರಲ್ಲಿ ಶಾಂಘಾಯಿಯಲ್ಲೂ ಪಕ್ಷದ ಮುಖ್ಯಸ್ಥರಾಗಿದ್ದರು. ಅದೇ ವರ್ಷ ಅವರು ಪಾಲಿಟ್ ಬ್ಯೂರೋ ಸ್ಥಾಯಿ ಸಮಿತಿಗೂ ನೇಮಕಗೊಂಡಿದ್ದರು. ಮಾವೋ ಅವರ ಗಂಡಾಂತರಕಾರಿ ಆರ್ಥಿಕ ಪ್ರಚಾರ ಮತ್ತು ೧೯೬೬-೭೬ರ ರಕ್ತಸಿಕ್ತ ಸಾಂಸ್ಕೃತಿಕ ಕ್ರಾಂತಿಯ ಬಳಿಕ ಅರಾಜಕತೆಯನ್ನು ತಡೆಯುವ ಸಲುವಾಗಿ ಕಮ್ಯೂನಿಸ್ಟ್ ನಾಯಕತ್ವವು ಪಾಲಿಟ್ ಬ್ಯೂರೋ ನಾಯಕತ್ವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಪ್ರಮುಖ ನೀತಿ, ನಿರ್ಧಾರಗಳೆಲ್ಲವೂ ಪಾಲಿಟ್ ಬ್ಯೂರೋ ಸಮ್ಮತಿ ಪಡೆದೇ ಜಾರಿಯಾಗುವಂತಹ ವ್ಯವಸ್ಥೆ ರೂಪಿಸಲಾಗಿತ್ತು. ಕ್ರಮವು ಒಬ್ಬನೇ ನಾಯಕನ ಕೈಯಲ್ಲಿ ಅಧಿಕಾರ ಕೇಂದ್ರಿಕೃತಗೊಳ್ಳದಂತೆ ತಡೆಯಲು ನೆರವಾಗಿತ್ತು. ಆದರೆ ನೀತಿಗೆ ಸಂಬಂಧಿಸಿದಂತೆ ಅಸ್ಥಿರತೆ ಉಂಟಾದ ಪರಿಣಾಮವಾಗಿ ಮಾಲಿನ್ಯ, ಭ್ರಷ್ಟಾಚಾರ, ಸಾಮಾಜಿಕ ಆಶಾಂತಿ ಹೆಚ್ಚಿತು ಎಂಬ ದೂಷಣೆಗಳು ಕೇಳಿ ಬಂದಿದ್ದವು.

2018: ಮುಂಬೈ: ಸಂಪೂರ್ಣ ಸಾಲಮನ್ನಾ, ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿ, ಅರಣ್ಯ ಹಕ್ಕುಗಳ ನೀಡಿಕೆ ಮತ್ತು ಸರ್ಕಾರಕ್ಕೆ ಬೇಕಾದ ಭೂಮಿಗೆ ಉತ್ತಮ ಪರಿಹಾರ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ನಾಸಿಕ್ನಿಂದ ಕಳೆದ ವಾರ ಹೊರಟಿದ್ದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದ ರೈತರ ಬೃಹತ್ ಜಾಥಾ ಭಾನುವಾರ ಮುಂಬೈ ತಲುಪಿತು. ಸುಮಾರು ೩೦,೦೦೦ಕ್ಕೂ ಹೆಚ್ಚು  ರೈತರು ಮತ್ತು ಬುಡಕಟ್ಟು ಜನರು ಪಾಲ್ಗೊಂಡಿರುವ ಬೃಹತ್ ಜಾಥಾ ಮಾ.12ರ ಸೋಮವಾರ ಮುಂಬೈಯಲ್ಲಿ ವಿಧಾನಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರೈತ ಜಾಥಾವು ನಾಸಿಕ್ ನಿಂದ ಕಳೆದವಾರ ಹೊರಟಿತ್ತು. ಮುಖ್ಯಮಂತ್ರಿ ಭೇಟಿಗೆ ಐವರು ಪ್ರತಿನಿಧಿಗಳ ತಂಡ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸರ್ಕಾರದ ಪರವಾಗಿ ಜಲ ಸಂಪನ್ಮೂಲ ಮತ್ತು ನೀರಾವರಿ ಸಚಿವ ಗಿರೀಶ್ ಮಹಾಜನ್ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಐವರು ಪ್ರತಿನಿಧಿಗಳು ಆಗಮಿಸುವಂತೆ ಅಖಿಲ ಭಾರತ ಕಿಸಾನ್ ಸಭಾಕ್ಕೆ ಮನವಿ ಮಾಡಿದರು.  ಮಹಾಜನ್ ಅವರು ಈಸ್ಟರ್ನ್ ಎಕ್ಸ್ಪ್ರೆಸ್ ಹೈವೇ ಬಳಿಯ ಕಟ್ಟಡ ಒಂದರಲ್ಲಿ ರೈತ ನಾಯಕರ ಜೊತೆ ಮಾತುಕತೆ ನಡೆಸಿದರು. ಎನ್ ಸಿಪಿ ಶಾಸಕ ಜಿತೇಂದ್ರ ಅವದ್ ಅವರು ರೈತ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವುದೆಂಬ ನಂಬಿಕೆ ತನಗಿಲ್ಲ ಎಂದು ಅವರು ನುಡಿದರು. ‘ನೀವು ಮುಂಬೈಯನ್ನು ಜಾಗೃತಗೊಳಿಸಿದ್ದೀರಿ. ಮಹಾರಾಷ್ಟ್ರದ ಎಲ್ಲ ರೈತರ ಸಲುವಾಗಿ ಹೋರಾಟ ಕೈಗೆತ್ತಿಕೊಂಡಿರುವ ನಾಸಿಕ್ ಸಹೋದರ, ಸಹೋದರಿಯರನ್ನು ನಾನು ಶ್ಲಾಘಿಸುವೆ. ನೀವು ನಗರವನ್ನು ಸ್ತಬ್ಧಗೊಳಿಸಿದ್ದೀರಿ. ಕೇವಲ ಜಾರ್ಜ್ ಫರ್ನಾಂಡಿಸ್, ದತ್ತಾ ಸಾಮಂತ್ ಮತ್ತು ಬಾಳ ಠಾಕ್ರೆ ಅವರು ಮಾತ್ರ ನಿಮಗಿಂತ ಮೊದಲು ಹೀಗೆ ಮಾಡುವಲ್ಲಿ ಸಮರ್ಥರಾಗಿದ್ದರು ಎಂದು ಜಿತೇಂದ್ರ ಅವದ್ ಹೇಳಿದರು. ವಲಯ ೭ರ ಡಿಸಿಪಿ ಅಖಿಲೇಶ್ ಸಿಂಗ್ ಅವರುರೈತರಿಗೆ ಮುಳುಂದದ (ಪೂರ್ವ) ಆಕ್ಟ್ರಾಯ್ ಪ್ಲಾಜಾದಲ್ಲಿ ಉಳಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆಹಾರಕ್ಕೆ ಅವರು ತಮ್ಮದೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರಿಗೆ ನೀರು ಮತ್ತು ವೈದ್ಯಕೀಯ ಸವಲತ್ತುಗಳನ್ನು ಒದಗಿಸುವಲ್ಲಿ ನಮ್ಮೊಂದಿಗೆ ಹಲವಾರು ಸಂಘಟನೆಗಳು ಸಹಕರಿಸುತ್ತಿವೆ ಎಂದು ನುಡಿದರು.  ಈಸ್ಟರ್ನ್ ಎಕ್ಸ್ ಪ್ರಸ್ ಹೈವೇಯಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ಸಲುವಾಗಿ ನಿಯೋಜಿಸಲಾಗಿತ್ತು. ನಾಸಿಕ್ ನಿಂದ ಪಾದಯಾತ್ರೆ ಹೊರಟಿರುವ ಜಾಥಾದಲ್ಲಿ ರೈತರಷ್ಟೇ ಅಲ್ಲ, ಬುಡಕಟ್ಟು ಜನಾಂಗದ ಜನರೂ ಜೊತೆ ಸೇರಿದ್ದಾರೆ. ಯುವಕರು, ವೃದ್ಧರು, ಮಹಿಳೆಯರೆನ್ನದೇ ಇಡೀ ರಸ್ತೆಯನ್ನು ಆವರಿಸಿಕೊಂಡು ಮುನ್ನುಗ್ಗಿಬಂದಿರುವ ಜಾಥಾದಲ್ಲಿ ಆರಂಭದಲ್ಲಿ ೧೨,೦೦೦ ರೈತರಷ್ಟೇ ಇದ್ದರು. ಆದರೆ ಜಾಥಾ ಮುಂದುವರೆದಂತೆ ಬೆಂಬಲಿಸುವವರೂ ಅದನ್ನು ಸೇರಿಕೊಂಡ ಪರಿಣಾಮವಾಗಿ ಜಾಥಾದಲ್ಲಿ ಇರುವವರ ಸಂಖ್ಯೆ ೩೦,೦೦೦ ವನ್ನೂ ಮೀರಿದೆ. ಮಹಾರಾಷ್ಟ್ರದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯ ಜೊತೆಗೆ ಮೈತ್ರಿ ಹಳಸಿರುವ ಶಿವಸೇನಾ ಜಾಥಾಕ್ಕೆ ಬೆಂಬಲ ನೀಡಿದ್ದು ಇದನ್ನುಲಾಂಗ್ ಮಾರ್ಚ್ ಆಫ್ ಫಾರ್ಮರ್ಸ್ ಎಂದು ಬಣ್ಣಿಸಿದವು.  ೧೮೦ ಕಿಮೀ ದೂರದ ಜಾಥಾದಲ್ಲಿ ಪಾಲ್ಗೊಂಡಿರುವವರ ಸಂಖ್ಯೆ ಅದು ತನ್ನ ಗಮ್ಯಸ್ಥಾನವನ್ನು ತಲುಪುವ ವೇಳೆಗೆ ೫೫,೦೦೦ ದಿಂದ ೬೦,೦೦೦ ತಲುಪಬಹುದು. ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸದ ಪರಿಣಾಮವಾಗಿ ರೈತರ ಅಸಮಾಧಾನ ಭುಗಿಲೆದ್ದಿರುವುದರ ಸಂಕೇತ ಇದು ಎಂದು ರೈತನಾಯಕರನಲ್ಲಿ ಒಬ್ಬರಾದ ನವಲೆ ಹೇಳಿದರು.  ಕೊಳಲಗಾಯನ, ಡ್ರಮ್ ವಾದನ, ಜಾನಪದ ಗೀತೆಗಳ ಗಾಯನದ ಜೊತೆಗೆ ಸಾಗಿ ಬಂದ ಜಾಥಾ ಕಳೆದ ಐದಾರು ದಿನಗಳಲ್ಲಿ ತಂಗಬೇಕಾದಾಗ ರಸ್ತೆಗಳಲ್ಲೇ ಮಲಗಿ, ನದಿಗಳ ನೀರು ಕುಡಿಯುತ್ತಾ ಸಾಗಿದೆ. ಜಾಥಾದಲ್ಲಿ ಪಾಲ್ಗೊಂಡ ಹಲವರು ಚಪ್ಪಲಿ ಕೂಡಾ ಇಲ್ಲದೆ ಬರಿಕಾಲಲ್ಲಿ ನಡೆದರು.  ಮಹಾರಾಷ್ಟ್ರ ವಿಧಾನಸಭೆಯ ಮುಂಗಡಪತ್ರ ಅಧಿವೇಶನ ಸಮಾವೇಶಗೊಂಡಿರುವ ಹೊತ್ತಿನಲ್ಲಿ ರೈತಜಾಥಾ ಮುಂಬೈ ತಲುಪಿದೆ. ರಾಜ್ಯ ವಿತ್ತ ಸಚಿವ ಸುಧೀರ್ ಮುಗಂತಿವಾರ್ ಅವರು ಇನ್ನೊಂದು ರೈತ ಮಿತ್ರ ಮುಂಗಡಪತ್ರವನ್ನು ೨೦೧೮-೧೯ರ ಸಾಲಿಗೆ ಮಂಡಿಸಿದ್ದಾರಾದರೂ, ಪ್ರತಿಭಟನಕಾರರು ಸಂತುಷ್ಟರಾಗಿಲ್ಲ.  ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವಅಚ್ಛೇ ದಿನ್ ಎಲ್ಲೂ ಕಾಣುತ್ತಿಲ್ಲ ಎಂದು ಅವರು ದೂರಿದರು.

2018: ನವದೆಹಲಿ: ೧೭೦೦ಕ್ಕೂ ಹೆಚ್ಚು ಹಾಲಿ ಸಂಸತ್ ಸದಸ್ಯರು ಮತ್ತು ಶಾಸಕರು ಇನ್ನೂ ಇತ್ಯರ್ಥವಾಗದೇ ಇರುವ ,೦೪೫ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತಿದ್ದಾರೆ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ತಿಳಿಸಿತು. ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಶಾಸಕರ ಪಟ್ಟಿಯಲ್ಲಿ ಉತ್ತರ ಪ್ರದೇಶ ನಂಬರ್ ಸ್ಥಾನದಲ್ಲಿದೆ. ರಾಜ್ಯದ ೨೪೮ ಸಂಸತ್ ಸದಸ್ಯರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿವೆ ಎಂದು ಕೇಂದ್ರ ಸರ್ಕಾರ ಹೇಳಿತು. ಉತ್ತರ ಪ್ರದೇಶದ ನಂತರದ ಸ್ಥಾನಗಳಲ್ಲಿ ತಮಿಳುನಾಡು, ಬಿಹಾರ ಮತ್ತು ಪಶ್ಚಿಮ ಬಂಗಾಳ ಇದ್ದು ಕ್ರಮವಾಗಿ ೧೭೮, ೧೪೪ ಮತ್ತು ೧೩೯ ಶಾಸನಕರ್ತರು ತನಿಖೆ ಎದುರಿಸುತ್ತಿದ್ದಾರೆ.  ೧೦೦ಕ್ಕಿಂತಲೂ ಹೆಚ್ಚು ಸಂಸತ್ ಸದಸ್ಯರು ಮತ್ತು ಶಾಸಕರು ವಿವಿಧ ಕ್ರಿಮಿನಲ್ ತನಿಖೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣ ಮೂರು ರಾಜ್ಯಗಳು ಸೇರಿವೆ.
ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ ಕೇಂದ್ರ ಸರ್ಕಾರವು ೨೦೧೪ ಮತ್ತು ೨೦೧೭ರ ನಡುವಣ ಅವಧಿಯಲ್ಲಿ ,೭೬೫ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಸಿಲುಕಿದ್ದಾರೆ ಎಂದು ಬಹಿರಂಗ ಪಡಿಸಿತು. ೧೭೬೫ ಸಂಸದರು, ಶಾಸಕರು ,೮೧೬ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂದು ವಿವಿಧ ಹೈಕೋರ್ಟ್ಗಳಿಂದ ವರ್ಷ ಮಾರ್ಚ್ ೫ರ ವೇಳೆಗೆ ಸಂಗ್ರಹಿಸಲಾದ ಅಂಕಿಸಂಖ್ಯೆಗಳನ್ನು ಉಲ್ಲೇಖಿಸಿದ ಪ್ರಮಾಣ ಪತ್ರ ತಿಳಿಸಿದೆ. ಪ್ರಕರಣಗಳ ಪೈಕಿ ೧೨೫ ಪ್ರಕರಣಗಳು ಮಾತ್ರವೇ ಒಂದು ವರ್ಷದ ಒಳಗಾಗಿ ಇತ್ಯರ್ಥಗೊಂಡಿವೆ ಎಂದು ಪ್ರಮಾಣಪತ್ರ ಹೇಳಿತು. ಇಂತಹ ಕ್ರಿಮಿನಲ್ ಪ್ರಕರಣಗಳನ್ನು ಒಂದು ವರ್ಷದ ಗಡುವಿನ ಒಳಗಾಗಿ ಇತ್ಯರ್ಥ ಪಡಿಸುವಂತೆ ಸುಪ್ರೀಂಕೋರ್ಟ್ ೨೦೧೫ರಲ್ಲಿ ನೀಡಿದ ಒಂದು ತೀರ್ಪಿನ ಮೂಲಕ ಆಜ್ಞಾಪಿಸಿತ್ತು. ಆದರೆ ಸುಪ್ರೀಂಕೋರ್ಟಿಗೆ ಒದಗಿಸಲಾಗಿರುವ ಮಾಹಿತಿಯಿಂದ ಸುಪ್ರೀಂಕೋರ್ಟಿನ ನಿರ್ದೇಶನದ ಉಲ್ಲಂಘನೆಯಾಗಿರುವುದು ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಕೇವಲ ೭೭೧ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ,೦೪೫ ಪ್ರಕರಣಗಳು ಇನ್ನೂ ನನೆಗುದಿಯಲ್ಲಿವೆ. ಉತ್ತರ ಪ್ರದೇಶದಲ್ಲಿ ೫೩೯ರಷ್ಟು ಪ್ರಕರಣಗಳು ನನೆಗುದಿಯಲ್ಲಿದ್ದರೆ, ಕೇರಳದಲ್ಲಿ ೩೭೩ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ತಮಿಳುನಾಡು, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಶಾಸಕರ ವಿರುದ್ಧದ ೩೦೦ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ಕಳೆದ ವರ್ಷ ಡಿಸೆಂಬರಿನಲ್ಲಿ ನೀಡಿದ್ದ ನಿರ್ದೇಶನಕ್ಕೆ ಅನುಗುಣವಾಗಿ ಕಾನೂನು ಸಚಿವಾಲಯವು ಸುಪ್ರೀಂಕೋರ್ಟಿಗೆ ಮಾಹಿತಿಯನ್ನು ಒದಗಿಸಿದೆ. ಪೀಠವು ವಕೀಲರೂ ಸಾಮಾಜಿಕ ಕಾರ್ಯಕರ್ತರೂ ಆದ ಅಶ್ವಿನಿ ಉಪಾಧ್ಯಾಯ ಅವರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಕಾಲದಲ್ಲಿ ನಿರ್ದೇಶನ ನೀಡಿತ್ತು. ಉಪಾಧ್ಯಾಯ ಅವರು ಶಿಕ್ಷೆಗೆ ಒಳಗಾದ ಶಾಸಕರನ್ನು ಆಜೀವ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದ್ದರು. ಕ್ರಿಮಿನಲ್ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯಗಳನ್ನು ರಚಿಸುವಂತೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್ ಸಂಸತ್ ಸದಸ್ಯರು ಮತ್ತು ಶಾಸಕರ ವಿರುದ್ಧ ನನೆಗುದಿಯಲ್ಲಿರುವ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಮತ್ತು ಅವುಗಳ ವಿಚಾರಣೆಯ ಸ್ಥಿತಿಗತಿ ಕುರಿತ ಮಾಹಿತಿ ಸಂಗ್ರಹಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಬಳಿಕ ಸಚಿವಾಲಯವು ಎಲ್ಲ ಹೈಕೋರ್ಟ್ಗಳಿಗೆ ಪತ್ರ ಬರೆದ ಮಾಹಿತಿ ತರಿಸಿಕೊಂಡು ಅದನ್ನು ಆಧರಿಸಿ ಇತ್ತೀಚಿನ ಪ್ರಮಾಣಪತ್ರವನ್ನು ಸಲ್ಲಿಸಿತ್ತು.

2018: ನಾಗಪುರ: ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸಹಮತ ಸುಲಭವಲ್ಲ, ಆದರೆ ಅಲ್ಲಿ ರಾಮಮಂದಿರ ನಿರ್ಮಿಸಲಾಗುವುದೇ ಹೊರತು ಬೇರೇನನ್ನೂ ಅಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರೆಸ್ಸೆಸ್) ಇಲ್ಲಿ ಸ್ಪಷ್ಟ ಪಡಿಸಿತು. ವಿಷಯವು ನ್ಯಾಯಾಂಗದ ವ್ಯಾಪ್ತಿಯಲ್ಲಿದೆ (ಸಬ್ಜುಡೀಸ್) ಎಂದೂ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ಭೈಯಾಜಿ ಜೋಶಿ ಇಲ್ಲಿ ಒತ್ತಿ ಹೇಳಿದರು. ‘ ಜಾಗದಲ್ಲಿ (ಅಯೋಧ್ಯಾ) ರಾಮಮಂದಿರವನ್ನು ನಿರ್ಮಿಸಲಾಗುವುದು ಎಂಬುದು ಸ್ಪಷ್ಟ, ಬೇರೇನನ್ನೂ ಅಲ್ಲಿ ನಿರ್ಮಿಸಲು ಸಾಧ್ಯವಿಲ್ಲ, ಇದು ನಿರ್ಧಾರವಾಗಿರುವ ವಿಷಯ ಎಂದು ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಜೋಶಿ ಸ್ಪಷ್ಟ ಪಡಿಸಿದರು.
ವಿಷಯದಲ್ಲಿ ಸುಪ್ರೀಂಕೋರ್ಟ್ ಅನುಕೂಲಕರ ತೀರ್ಪು ನೀಡಲಿದೆ ಎಂಬ ಬಗ್ಗೆ ದೃಢ ವಿಶ್ವಾಸ ವ್ಯಕ್ತ ಪಡಿಸಿದ ಜೋಶಿ, ಕೋರ್ಟ್ ತೀರ್ಪಿನ ಬಳಿಕ ದೇವಾಲಯ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡುವ ತೀರ್ಪನ್ನು ಆಧರಿಸಿಯೇ ಮಂದಿರವನ್ನು ನಿರ್ಮಿಸಲಾಗುವುದು ಎಂದು ಅವರು ನುಡಿದರು.  ಆಧ್ಯಾತಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಕಕ್ಷಿದಾರರ ನಡುವೆ ಸಹಮತ ಸಾಧಿಸಲು ಯತ್ನಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆಸಹಮತ ರೂಪಿಸುವುದು ಅಷ್ಟೊಂದು ಸುಲಭವಲ್ಲ ಎಂದು ಜೋಶಿ ಉತ್ತರಿಸಿದರು.  ಪರಸ್ಪರ ಒಪ್ಪಂದದ ಮೂಲಕವೇ ಮಂದಿರವನ್ನು ನಿರ್ಮಿಸಬೇಕು ಎಂದು ನಾವು ಯಾವಾಗಲೂ ಪ್ರತಿಪಾದಿಸುತ್ತಲೇ ಬಂದಿದ್ದೇವೆ. ಆದರೆ ವಿಷಯದಲ್ಲಿ ಸಹಮತ ರೂಪಿಸುವುದು ಸುಲಭವಲ್ಲ ಎಂಬುದು ನಮ್ಮ ಅನುಭವ ಎಂದು ಜೋಶಿ ಹೇಳಿದರು.  ರವಿಶಂಕರ ಗುರೂಜಿ ಅವರ ಪ್ರಯತ್ನಗಳನ್ನು ತಾವು ಸ್ವಾಗತಿಸುವುದಾಗಿ ಹೇಳಿದರೂ, ಸಮಾಜದಲ್ಲಿ ವಿವಿಧ ಗುಂಪುಗಳು ವಿಭಿನ್ನ ದೃಷ್ಟಿಕೋನಗಳನ್ನು ಇಟ್ಟುಕೊಂಡಿವೆ. ಹೀಗಾಗಿ ಅವರೆಲ್ಲರ ಮಧ್ಯೆ ಸಹಮತ ರೂಪಿಸುವುದು ಕಷ್ಟವಾಗುತ್ತದೆ ಎಂದು ಆರೆಸ್ಸೆಸ್ ನಾಯಕ ನುಡಿದರು. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವು ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಒತ್ತಾಯಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆನಾವು ಅದನ್ನು ಬೆಂಬಲಿಸುವುದಿಲ್ಲ ಎಂದು ಜೋಶಿ ಹೇಳಿದರು.  ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ .೭೭ ಎಕರೆ ಜಾಗದ ಮಾಲೀಕತ್ವ ವಿವಾದದ ವಿಚಾರಣೆ ಸುಪ್ರೀಂಕೋರ್ಟಿನ ಮುಂದೆ ಮಾರ್ಚ್ ೧೪ಕ್ಕೆ ಬರಲಿದೆ.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್.. ನಜೀಬ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ.

2018: ನವದೆಹಲಿ: ಯಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾರ್ಚ್ ೧೩ರಂದು ಭೋಜನ ಕೂಟ ಸಭೆಗೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಆಹ್ವಾನಿಸಿದ್ದು, ಸಭೆಯಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ ಡಿಎ) ಅಂಗ ಪಕ್ಷಗಳ ಹೊರತಾದ ವಿವಿಧ ರಾಜ್ಯಗಳ ವಿಭಿನ್ನ ಪಕ್ಷಗಳ ನಾಯಕರೂ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು. ಏನಿದ್ದರೂ, ಮಾರ್ಚ್ ೧೫ರಿಂದ ತಮಿಳುನಾಡಿನ ವಿಧಾನಸಭಾ ಅಧಿವೇಶನ ಆರಂಭವಾಗಲಿರುವ ಕಾರಣ ಸ್ಟಾಲಿನ್ ಅವರು ಭೋಜನ ಕೂಟಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಡಿಎಂಕೆ ನಾಯಕರೊಬ್ಬರು ತಿಳಿಸಿದರು. ‘ಹೌದು, ಅವರನ್ನು (ಸ್ಟಾಲಿನ್) ಆಮಂತ್ರಿಸಲಾಗಿದೆ, ಆದರೆ ಮಾರ್ಚ್ ೧೫ರಂದು ತಮಿಳುನಾಡು ವಿಧಾನಸಭಾ ಅಧಿವೇಶನ ಆರಂಭವಾಗಲಿರುವುದರಿಂದ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗದಿರಬಹುದು. ಕನಿಮೋಳಿ ಅವರು ಭೋಜನಕೂಟದಲ್ಲಿ ಪಾಲ್ಗೊಳ್ಳುವರು ಎಂದು ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್ ಹೇಳಿದರು. ಸೋನಿಯಾ ಗಾಂಧಿ ಅವರು ವಿರೋಧ ಪಕ್ಷದ ನಾಯಕರಿಗೆ ಭೋಜನ ಕೂಟದ ಆತಿಥ್ಯ ನೀಡಲಿದ್ದು, ಸಮಯದಲ್ಲಿ ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರುದ್ಧ ಸಮಾನ ರಂಗ ರಚಿಸುವ ಬಗ್ಗೆ ಸಲಹೆಗಳನ್ನು ಕೋರಲಿದ್ದಾರೆ.  ಬಿಹಾರಿನ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಸ್ಥಾನಿ ಆವಾಮ್ ಮೋರ್ಚಾ (ಸೆಕ್ಯುಲರ್) ಮುಖ್ಯಸ್ಥ ಜಿತನ್ ರಾಮ್ ಮಾಂಜ್ಹಿ ಅವರನ್ನೂ ಭೋಜನ ಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ಉಭಯ ಪಕ್ಷಗಳ ನಾಯಕರು ಹೇಳಿದರು. ಲಾಲು ಪ್ರಸಾದ್ ಅವರ ಗೈರುಹಾಜರಿಯಲ್ಲಿ ಬಿಹಾರಿನ ಪ್ರಮುಖ ಪ್ರತಿಪಕ್ಷವಾಗಿರುವ ರಾಷ್ಟ್ರೀಯ ಜನತಾದಳದ (ಆರ್ ಜೆಡಿ) ಸಾರಥ್ಯವನ್ನು ತೇಜಸ್ವಿ ಯಾದವ್ ಅವರು ವಹಿಸಿದ್ದಾರೆ. ಬಿಹಾರಿನ ತ್ರಿಪಕ್ಷ ಮಹಾಮೈತ್ರಿಯಲ್ಲಿ ಪ್ರಮುಖ ಪಕ್ಷವಾಗಿರುವ ಆರ್ ಜೆಡಿ, ಕಾಂಗ್ರೆಸ್ ಪಕ್ಷದ ಮಿತ್ರ ಪಕ್ಷವಾಗಿದೆ.  ಮೇವು ಹಗರಣದ ಎರಡು ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಸೆರೆವಾಸಕ್ಕೆ ಗುರಿಯಾಗಿರುವ ಲಾಲು ಪ್ರಸಾದ್ ಪ್ರಸ್ತುತ ರಾಂಚಿ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.  ಮಾಂಜ್ಹಿ ಅವರ ಹಿಂದುಸ್ಥಾನಿ ಅವಾಮ್ ಮೋರ್ಚಾ (ಸೆಕ್ಯುಲರ್) ಮಹಾಮೈತ್ರಿಗೆ ಇತ್ತೀಚೆಗೆ ಸೇರಿರುವ ಮೂರನೇ ಅಂಗಪಕ್ಷವಾಗಿದೆ.
೧೨,೬೦೦ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ವಂಚನೆ ಪ್ರಕರಣ ಸೇರಿದಂತೆ ಹಲವಾರು ವಿಷಯಗಳಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ವಿಪಕ್ಷಗಳನ್ನು ಒಟ್ಟಾಗಿಸುವ ಹೊಸ ಯತ್ನಗಳ ಮಧ್ಯೆ ಸಾಂಪ್ರದಾಯಿಕವಾದ ಭೋಜನಕೂಟದ ವ್ಯವಸ್ಥೆಯಾಗಿದೆ ಎಂದು ಮೂಲಗಳು ಹೇಳಿದವು.  ಕಳೆದ ವರ್ಷ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಆದ ಲಾಗಾಯ್ತಿನಿಂದ ಬಿಜೆಪಿ ವಿರುದ್ಧದ ಸಮಾನ ವಿಷಯಗಳಲ್ಲಿ ಒಗ್ಗಟ್ಟಿನ ಹೋರಾಟ ನಡೆಸಲು ಕಾಂಗ್ರೆಸ್ ಮತ್ತು ಇತರ ೧೭ ಪಕ್ಷಗಳು ಇಂತಹ ಸಭೆಗಳನ್ನು ನಡೆಸುತ್ತಲೇ ಬಂದಿವೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು ಸಮಾನ ಮನಸ್ಕ ರಾಜಕೀಯ ಪಕ್ಷಗಳ ಜೊತೆ ತಾವು ಕೆಲಸ ಮಾಡುವುದಾಗಿ ಸೋನಿಯಾ ಗಾಂಧಿ ಅವರು ಕಳೆದ ತಿಂಗಳು ಹೇಳಿದ್ದರು.

2018: ಚೆನ್ನೈ: ತಮಿಳುನಾಡಿನ ಥೇಣಿ ಜಿಲ್ಲೆಯ ಪಶ್ಚಿಮ ಘಟ್ಟದ ಕುರಂಗನಿ ಬೆಟ್ಟಗಳಲ್ಲಿ ಕಾಳ್ಗಿಚ್ಚಿನ ಮಧ್ಯೆ ಸಿಲುಕಿದ ಸುಮಾರು ೪೦ ಮಂದಿ ಕಾಲೇಜು  ವಿದ್ಯಾರ್ಥಿಗಳನ್ನು ರಕ್ಷಿಸಲು ಭಾರತೀಯ ವಾಯುಪಡೆ ಮುಂದಾದ ಘಟನೆ ಘಟಿಸಿದೆ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದರು. ವಾಯುಪಡೆಯ ದಕ್ಷಿಣ ಕಮಾಂಡ್ ಥೇಣಿ ಕಲೆಕ್ಟರ್ ಅವರ ಜೊತೆ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.  ನಿರ್ಮಲಾ ಅವರು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರ ಮನವಿಗೆ ಸ್ಪಂದಿಸಿದರು. ಸುಮಾರು ೪೦ ಮಂದಿ ವಿದ್ಯಾರ್ಥಿಗಳು ಕಾಳ್ಗಿಚ್ಚಿನ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು, ಅವರ ಪೈಕಿ ೧೫ ಮಂದಿಯನ್ನು ವಾಯುಪಡೆ ರಕ್ಷಿಸಿತು.  ಉಪ ಮುಖ್ಯಮಂತ್ರಿ . ಪನ್ನೀರಸೆಲ್ವಂ ಅವರು ಸ್ಥಳಕ್ಕೆ ಧಾವಿಸಿದರು.  ಎಂಐ - ೧೭ಹೆಲಿಕಾಪ್ಟರ್ ಪರಿಸ್ಥಿತಿಯ ಅಂದಾಜು ಮಾಡುತ್ತಿದ್ದು ಅಗತ್ಯ ನೆರವು ಒದಗಿಸುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತು.  ಹೆಲಿಕಾಪ್ಟರ್ ಅಗತ್ಯ ಬಿದ್ದರೆ ಇನ್ನೊಂದು ಕಾರ್ಯಾಚರಣೆಯನ್ನು  ಮಾ.12ರ ಸೋಮವಾರ ಬೆಳಗ್ಗೆ ಕೈಗೊಳ್ಳುವ ಸಾಧ್ಯತೆ ಇದೆ ಎಂದು ರಕ್ಷಣಾ ಸಚಿವಾಲಯ ಮೂಲಗಳು ಹೇಳಿದವು. ೧೦ರಿಂದ ೧೫ ವಿದಾರ್ಥಿಗಳು ಬೆಟ್ಟದ ಬುಡಕ್ಕೆ ಬಂದಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಅರಣ್ಯ ಅಧಿಕಾರಿಗಳು ಅವರ ರಕ್ಷಣೆಗೆ ಸರ್ವ ಯತ್ನಗಳನ್ನು ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿದವು. ವಿದ್ಯಾರ್ಥಿಗಳು ಕುರಂಗನಿ ಬೆಟ್ಟಗಳಲ್ಲಿ ಟ್ರೆಕ್ಕಿಂಗ್ ನಡೆಸುತ್ತಿದ್ದಾಗ ಕಾಳ್ಗಿಚ್ಚಿನ ಮಧ್ಯೆ ಸಿಕ್ಕಿಹಾಕಿಕೊಂಡರು ಎಂದು ಹೇಳಲಾಗಿಯಿತು.  ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿವೆ ಎಂದೂ ವರದಿಗಳು ಹೇಳಿದವು.

2017: ನವದೆಹಲಿ: ಪಂಚರಾಜ್ಯಗಳ ವಿಧಾನಸಭೆಯ ಪ್ರತಿಷ್ಠೆಯ ಕದನದಲ್ಲಿ ನಿರೀಕ್ಷೆಯಂತೆ ಮೋದಿ ಅಲೆಯಲ್ಲಿ ಭರ್ಜರಿ ಸಾಧನೆ ಮೆರೆದಿರುವ ಬಿಜೆಪಿ ಐದು ರಾಜ್ಯಗಳ ಪೈಕಿ ಎರಡು ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಬಂಪರ್ ಜನಾದೇಶ ಪಡೆದುಕೊಂಡಿತು. ಮುಂಬರುವ ಲೋಕಸಭೆ ಚುನಾವಣೆಯ ನಿರ್ಣಾಯಕ ಸಮರ ಎಂದೇ ವ್ಯಾಖ್ಯಾನಿಸಲಾಗಿದ್ದ ಮಹಾ ಸಮರದಲ್ಲಿ ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಕಮಲ ಪಡೆ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಜತೆಗೆ ಬಿಎಸ್ಪಿ ವರಿಷ್ಠೆ ಮಾಯಾವತಿ ಕೂಡ ಮೋದಿ ಅಲೆಯಲ್ಲಿ ಕೊಚ್ಚಿಹೋದರು. ಉತ್ತರಪ್ರದೇಶದ 37 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ 300 ಗಡಿ ದಾಟಿರುವ ಬಿಜೆಪಿ ಮೈತ್ರಿಕೂಟ 403 ಕ್ಷೇತ್ರಗಳ ಪೈಕಿ 325ರಲ್ಲಿ ಗೆಲುವು ದಾಖಲಿಸಿತು. ಉತ್ತರಾಖಂಡದಲ್ಲೂ ಕಾಂಗ್ರೆಸ್ ನೆಲಕಚ್ಚಿತು. 70 ಸ್ಥಾನಗಳಲ್ಲಿ 57 ಸ್ಥಾನ ಗೆದ್ದ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚನೆಯ ಬಲ ಪಡೆದುಕೊಂಡಿತು.  ಆಡಳಿತ ವಿರೋಧಿ ಅಲೆ ಎದ್ದಿದ್ದ ಗೋವಾದಲ್ಲಿ ಬಿಜೆಪಿಗೆ ಫಲಿತಾಂಶ ಆಘಾತ ತಂದರೂ ಮಾಜಿ ಮಿತ್ರರಾದ ಮಹಾರಾಷ್ಟ್ರ ಗೋಮಾಂತಕ್ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಮತ್ತೊಮ್ಮೆ ಸರ್ಕಾರ ರಚಿಸುವ ಅವಕಾಶ ಲಭಿಸಿತು. ಪಂಜಾಬ್ನಲ್ಲಿ ಶಿರೋಮಣಿ ಅಕಾಲಿದಳ/ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್ಗೆ ಶರಣಾಯಿತು.  ಕಾಂಗ್ರೆಸ್ ಪ್ರಬಲ ಕೋಟೆ ಮಣಿಪುರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರೂ, ಫಲಿತಾಂಶ ಅತಂತ್ರವಾಗಿರುವುದರಿಂದ ಸರ್ಕಾರ ರಚನೆಯ ಕುತೂಹಲ ಇಮ್ಮಡಿಗೊಂಡಿತು. ಒಟ್ಟಾರೆ ಮೋದಿ ಸರ್ಕಾರ ಕೈಗೊಂಡ ಸರ್ಜಿಕಲ್ ದಾಳಿ, ನೋಟು ಅಮಾನ್ಯೀಕರಣ ನಿರ್ಧಾರಕ್ಕೆ ಜನಾಶೀರ್ವಾದ ಇದೆ ಎಂಬುದನ್ನು ಪಂಚರಾಜ್ಯಗಳ ಫಲಿತಾಂಶ ಸಾಬೀತು ಮಾಡಿತು.  ಬಿಜೆಪಿ ಪಾಲಿಗಿದು ದೇಶದ ಜನತೆ ಹೋಳಿ ಹಬ್ಬಕ್ಕೆ ಕೊಟ್ಟ ಕಲರ್ಫುಲ್ ಉಡುಗೊರೆಯಾದರೆ, ಪಂಜಾಬ್ ಜನತೆ ಕಾಂಗ್ರೆಸ್ಸಿನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೆ ಜನ್ಮದಿನದ ಉಡುಗೊರೆ ನೀಡಿದರು..
2017: ರಾಯಪುರ : ಛತ್ತೀಸ್ಗಡ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 12 ಸಿಆರ್ಪಿಎಫ್
ಸಿಬ್ಬಂದಿ ಹುತಾತ್ಮರಾದರು. ಇನ್ನೂ ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಯಿತು. ಭೆಜ್ಜಿ ಪೊಲೀಸ್ಠಾಣಾ ವ್ಯಾಪ್ತಿಯ ಕೊಟ್ಟಚೆರು ಗ್ರಾಮದ ದಟ್ಟ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಲಾಯಿತು.  ಸಿಆರ್ಪಿಎಫ್ 219ನೇ ಬೆಟಾಲಿಯನ್ ಸಿಬ್ಬಂದಿ, ಭೆಜ್ಜಿ ಮತ್ತು ಕೊಟ್ಟಚೆರು ನಡುವಿನ ನಿರ್ಮಾಣ ಹಂತದಲ್ಲಿರುವ ರಸ್ತೆಯ ರಕ್ಷಣೆ ವಹಿಸಿಕೊಂಡಿದ್ದರು. ಬೆಳಗ್ಗೆ 9.15 ವೇಳೆಗೆ ತಂಡದ  112 ಸಿಬ್ಬಂದಿ ರಸ್ತೆ ತೆರವು ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ನಕ್ಸಲರು ಕೃತ್ಯ ಎಸಗಿದರು. ಮೃತ ಸಿಬ್ಬಂದಿ ಬಳಿ ಇದ್ದ ಐಎನ್ಎಸ್್ಎಎಸ್್್ ಹಾಗೂ ಎಕೆ ಸರಣಿಯ ಬಂದೂಕುಗಳು ಹಾಗೂ ಎರಡು ರೇಡಿಯೊ ಸೆಟ್ಗಳನ್ನು ನಕ್ಸಲರು ದೋಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಭೂಮಿಯೊಳಗೆ ಹುದುಗಿಸಿಟ್ಟಿದ್ದ ಐಇಡಿಗಳನ್ನು ಸ್ಫೋಟಿಸಿ ಹಾಗೂ ಗುಂಡು ಹಾರಿಸಿ ನಕ್ಸಲರು ದಾಳಿ ನಡೆಸಿದರು. 12 ಸಿಬ್ಬಂದಿ ಪ್ರಾಣತ್ಯಾಗ ಮಾಡುವ ಮೊದಲು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದರುಎಂದು ಸಿಆರ್ಪಿಎಫ್ ಪ್ರಧಾನ ನಿರ್ದೇಶಕ ಸುದೀಪ್ ಲಖ್ತಕಿಯ ತಿಳಿಸಿದರು. 100ಕ್ಕೂ ಹೆಚ್ಚು ನಕ್ಸಲರು:  ‘ದಾಳಿ ವೇಳೆ ಸ್ಥಳದಲ್ಲಿ 100ಕ್ಕೂ ಹೆಚ್ಚು ನಕ್ಸಲರು ಇದ್ದರು ಎನ್ನಲಾಯಿತು.
2009: ಕ್ಯಾಬಿನೆಟ್ ಸಚಿವರೊಬ್ಬರ ರಾಜೀನಾಮೆಯೊಂದಿಗೆ ಮೇಘಾಲಯ ಸರ್ಕಾರವು ಅಲ್ಪಮತಕ್ಕೆ
ಇಳಿಯಿತು. ಆದರೆ ಮುಖ್ಯಮಂತ್ರಿ ಡೊಂಕುಪರ್ ರಾಯ್ ಅವರು ತಾವು ರಾಜೀನಾಮೆ ನೀಡುವುದಿಲ್ಲ, ಬದಲಾಗಿ ವಿಧಾನಸಭೆಯಲ್ಲೇ ಬಲಪರೀಕ್ಷೆ ಎದುರಿಸುವುದಾಗಿ ಘೋಷಿಸಿದರು. ಸಂಪುಟದ ಹಿರಿಯ ಸಹೋದ್ಯೋಗಿ ಪೌಲ್ ಲಿಂಗ್ಡೋ ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಈ ಘೋಷಣೆ ಮಾಡಿದರು. ನಗರ ವ್ಯವಹಾರಗಳ ಸಚಿವ ಲಿಂಗ್ಡೋ ರಾಜೀನಾಮೆಯಿಂದ ಮೇಘಾಲಯ ಪ್ರೋಗ್ರೆಸ್ಸಿವ್ ಅಲಯನ್ಸ್ ಸರ್ಕಾರ ಅಲ್ಪ ಮತಕ್ಕೆ ಇಳಿದಂತಾಯಿತು. 60 ಸದಸ್ಯ ಬಲದ ಸದನದಲ್ಲಿ ಸರ್ಕಾರದ ಬಲ 30ಕ್ಕೆ ಇಳಿಯಿತು.

2009: ಭಾರತೀಯರೇ ನಿರ್ಮಿಸಿದ್ದ ಅತಿ ವೇಗದ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಶತಕದ ವಿಶ್ವದಾಖಲೆಯನ್ನು ನ್ಯೂಜಿಲೆಂಡಿನಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಮುರಿದ ವೀರೇಂದ್ರ ಸೆಹ್ವಾಗ್ ಅವರು ಭಾರತೀಯ ತಂಡಕ್ಕೆ 10 ವಿಕೆಟ್‌ಗಳ ಜಯ ತಂದುಕೊಟ್ಟರು. ಸೆಹ್ವಾಗ್ ಅವರು ಔಟಾಗದೆ 125 ರನ್ ಪೇರಿಸಿದರು. 13 ಬೌಂಡರಿ, ನಾಲ್ಕು ಸಿಕ್ಸರುಗಳನ್ನು ಒಳಗೊಂಡ 60 ಚೆಂಡು ಎಸೆತಗಳಲ್ಲಿ ಸೆಹ್ವಾಗ್ ಬಾರಿಸಿದ ಶತಕವು ಬರೋಡದಲ್ಲಿ ಕಿವೀಸ್ ವಿರುದ್ಧ ನಡೆದ ಪಂದ್ಯದಲ್ಲಿ (1988-89) ಮೊಹಮ್ಮದ್ ಅಜರುದ್ದೀನ್ ಅವರು ನಿರ್ಮಿಸಿದ್ದ 62 ಚೆಂಡು ಎಸೆತಗಳ ಶತಕದ ವಿಶ್ವದಾಖಲೆಯನ್ನು ಮುರಿಯಿತು. ಇದಕ್ಕೆ ಮುನ್ನ ಮಳೆಯ ಕಾರಣದಿಂದ ಅಡ್ಡಿಯಾದ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡನ್ನು 47 ಓವರುಗಳಲ್ಲಿ ಐದು ವಿಕೆಟ್‌ ಉರುಳಿಸಿ 270 ರನ್ನುಗಳಿಗೆ ಕಟ್ಟಿಹಾಕಿತ್ತು.

2009: ಅಮೆರಿಕದ ವಾಣಿಜ್ಯ ನಿಯತಕಾಲಿಕೆ ಫೋರ್ಬ್ಸ್ ಬಿಡುಗಡೆ ಮಾಡಿದ ವಿಶ್ವದ 10 ಅತೀ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಲಕ್ಷ್ಮೀ ಮಿತ್ತಲ್ ಮತ್ತು ಕೆ.ಪಿ.ಸಿಂಗ್ ಒಟ್ಟು ನಾಲ್ವರು ಭಾರತೀಯರೂ ಸ್ಥಾನ ಪಡೆದರು. ಮೈಕ್ರೋಸಾಫ್ಟ್ ಕಂಪೆನಿ ಸಂಸ್ಥಾಪಕ ಬಿಲ್‌ಗೇಟ್ ನಂ.1 ಸ್ಥಾನದಲ್ಲಿ ಮುಂದುವರೆದರು. 13 ವರ್ಷಗಳಿಂದ ಮೊದಲ ಸ್ಥಾನ ಉಳಿಸಿಕೊಂಡು ಬಂದದ್ದು ಗೇಟ್ ವಿಶೇಷ. ವಿಶ್ವದ ಅತೀದೊಡ್ಡ ಉಕ್ಕು ಕಂಪೆನಿ 'ಆರ್ಸೆಲರ್ ಮಿತ್ತಲ್' ಅಧ್ಯಕ್ಷ ಲಕ್ಷ್ಮೀ ಮಿತ್ತಲ್ 45 ಶತಕೋಟಿ ಡಾಲರ್ ಒಡೆಯರಾಗಿ, ನಾಲ್ಕನೇ ಸ್ಥಾನ ಗಳಿಸಿದರು. ದೀರ್ಘ ಕಾಲದಿಂದ ಲಂಡನ್ ವಾಸಿಯಾಗಿದ್ದ ಯುರೋಪಿಯನ್ ಶ್ರೀಮಂತ ಉದ್ಯಮಿ ಮಿತ್ತಲ್ ಎಂದು ನಿಯತಕಾಲಿಕ ಬಣ್ಣಿಸಿತು.

2009: ಎರಡು ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಯುವ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರಿಗೆ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ 'ಅಮೆರಿಕ ಏಷ್ಯನ್ ಸಂಗೀತ ಪ್ರಶಸ್ತಿ 2009' ನೀಡಿ ಗೌರವಿಸಲಾಯಿತು. ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಏಷ್ಯಾದ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದ ಕಾರಣಕ್ಕಾಗಿ ರೆಹಮಾನ್ ಅವರನ್ನು ಗೌರವಿಸಲಾಯಿತು. 'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಸಂಗೀತಕ್ಕಾಗಿ ರೆಹಮಾನ್ ಅವರಿಗೆ ಎರಡು ಆಸ್ಕರ್ ಅಲ್ಲದೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಹ ಸಂದಿದೆ.

2009: ದಕ್ಷಿಣ ಜರ್ಮನಿಯ ವಿನ್ನೆನ್‌ಡೆನ್‌ ಶಾಲೆಯೊಂದಕ್ಕೆ ನುಗ್ಗಿದ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿ ಕೆಲ ವಿದ್ಯಾರ್ಥಿಗಳು ಸೇರಿದಂತೆ 10 ಜನರನ್ನು ಕೊಂದ ಘಟನೆ ನಡೆಯಿತು. ಬಂದೂಕುಧಾರಿ ಘಟನೆಯ ನಂತರ ನಾಪತ್ತೆಯಾದ. ಈ ಶಾಲೆಯಲ್ಲಿ ಸುಮಾರು 1,000ದಷ್ಟು ವಿದ್ಯಾರ್ಥಿಗಳು ಇದ್ದರು.

2008: ಲಾಹೋರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಸ್ಫೋಟಗಳಲ್ಲಿ ಕನಿಷ್ಠ 23 ಮಂದಿ ಮೃತರಾಗಿ ಇತರ ಹಲವರು ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತನ್ನ ಪಾಕಿಸ್ಥಾನ ಪ್ರವಾಸವನ್ನು ಮುಂದೂಡಿತು. ಲಾಹೋರಿನ ಪ್ರತಿಷ್ಠಿತ ನೌಕಾಪಡೆ ಕಾಲೇಜಿನಲ್ಲಿ ಇಬ್ಬರು ಮಾನವ ಬಾಂಬರುಗಳು ಸ್ವತಃ ಸ್ಫೋಟಿಸಿಕೊಂಡು ಕನಿಷ್ಠ ಐವರನ್ನು ಕೊಂದು 19 ಮಂದಿಯನ್ನು ಗಾಯಗೊಳಿಸಿದ ಘಟನೆ ನಡೆದ ಒಂದು ವಾರದ ಒಳಗಾಗಿ ಈ ಸ್ಫೋಟಗಳು ಸಂಭವಿಸಿದವು. ಬೆಳಗ್ಗೆ ಸಂಭವಿಸಿದ ಈ ಸ್ಫೋಟಗಳಲ್ಲಿ ಫೆಡರಲ್ ತನಿಖಾ ಸಂಸ್ಥೆಯ ಕಚೇರಿ ಸಂಪೂರ್ಣ ನಾಶವಾಯಿತು. ಭುಟ್ಟೋ ಕುಟುಂಬದ ಬಿಲಾವಲ್ ಮನೆ ಸಮೀಪದ ಲಾಹೋರಿನ ಮಾಡೆಲ್ ಟೌನಿನ ಜಾಹೀರಾತು ಸಂಸ್ಥೆಯೊಂದರಲ್ಲಿ ಎರಡನೇ ಸ್ಫೋಟ ಸಂಭವಿಸಿತು.

2008: ಪಾಕಿಸ್ಥಾನ ಕ್ರಿಕೆಟ್ ತಂಡದ ಮಿಸ್ಬಾ ಉಲ್ ಹಕ್ ಹಾಗೂ 19 ವರ್ಷ ವಯಸ್ಸಿನೊಳಗಿನವರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಭಾರತ ಪ್ರೀಮಿಯರ್ ಲೀಗಿನ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಯಿತು. ಮುಂಬೈಯಲ್ಲಿ ನಡೆದ ಐಪಿಎಲ್ ತಂಡಗಳಿಗೆ ಆಟಗಾರರ ಎರಡನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಮಾಲೀಕ ವಿಜಯ್ ಮಲ್ಯ ಅವರು ಮಿಸ್ಬಾ ಅವರನ್ನು 50 ಲಕ್ಷ ರೂಪಾಯಿ ನೀಡಿ ಖರೀದಿಸಿದರು. ಮಿಸ್ಬಾ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

2008: ಎಂಭತ್ತು ಅಡಿಗಳಷ್ಟು ದೂರದಿಂದಲೇ ಜನರ ಉಡುಪಿನ ಒಳಗೇನಿದೆ ಎಂಬುದನ್ನು ನೋಡಬಲ್ಲಂತಹ ಕ್ಯಾಮರಾವನ್ನು ತಾನು ಅಭಿವೃದ್ಧಿ ಪಡಿಸಿರುವುದಾಗಿ ಆಕ್ಸ್ ಫರ್ಡ್ ಶೈರ್ ಮೂಲದ ಬ್ರಿಟಿಷ್ ಸರ್ಕಾರದ ಮುಂಚೂಣಿಯ ಭೌತಶಾಸ್ತ್ರ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿರುವ ರುತೆರ್ ಫೋರ್ಡ್ ಅಪ್ಲೆಟನ್ ಲ್ಯಾಬೋರೇಟರಿಯ `ಥ್ರೂ ವಿಷನ್' ವಿಭಾಗವು ಪ್ರತಿಪಾದಿಸಿತು. ಆಯುಧಗಳು, ಮಾದಕ ವಸ್ತುಗಳು ಮತ್ತು ಸ್ಫೋಟಕಗಳನ್ನು ಪತ್ತೆ ಹಚ್ಚಲು ಇದು ವರದಾನ ಎಂದು ಈ ಕಂಪೆನಿ ಹೇಳಿತು. ಹೊಸ ತಂತ್ರಜ್ಞಾನ ಬಳಸಿ ಈ ಕ್ಯಾಮರಾವನ್ನು ಈ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ ಎಂದು `ದಿ ಸಂಡೆ ಟೈಮ್ಸ್' ವರದಿ ಮಾಡಿತು. ಕ್ಯಾಮರಾವು ಬಟ್ಟೆಗಳ ಒಳಗೆ ಇರುವ ವಸ್ತುಗಳನ್ನು ನೋಡಬಲ್ಲುದಾದರೂ, ಅದು ತೆಗೆಯುವ ಚಿತ್ರವು ದೈಹಿಕ ವಿವರಗಳನ್ನು ತೋರಿಸುವುದಿಲ್ಲ ಎಂದು ಕ್ಯಾಮರಾ ವಿನ್ಯಾಸಗಾರರು ಹೇಳಿರುವುದಾಗಿ ವರದಿ ತಿಳಿಸಿತು. `ಥ್ರೂ ವಿಷನ್' ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕ್ಲೈವ್ ಬಿಯಾಟ್ಲೀ ಅವರ ಪ್ರಕಾರ `ಭಯೋತ್ಪಾದನೆಯ ಕೃತ್ಯಗಳು ಇತ್ತೀಚಿನ ವರ್ಷಗಳಲ್ಲಿ ಇಡೀ ಜಗತ್ತನ್ನು ನಡುಗಿಸುತ್ತಿವೆ. ವಿಶ್ವದಾದ್ಯಂತ ಭದ್ರತಾ ಮುನ್ನೆಚ್ಚರಿಕೆಗಳನ್ನು ಬಿಗಿಗೊಳಿಸಲಾಗುತ್ತಿದೆ. ಟಿ 5000ವು (ಕ್ಯಾಮರಾ) ಜನರ ಶೋಧನೆಯ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತದೆ'. ಟಿ 5000 ಎಂದು ಹೆಸರಿಸಲಾಗಿರುವ ಈ ಕ್ಯಾಮರಾವನ್ನು ರೈಲು ನಿಲ್ದಾಣ, ವ್ಯಾಪಾರಿ ಕೇಂದ್ರಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಭಯೋತ್ಪಾದನಾ ದಾಳಿಗಳನ್ನು ವಿಫಲಗೊಳಿಸುವ ಸಲುವಾಗಿ ಬಳಸಬಹುದು. ಪೊಲೀಸ್ ಪಡೆಗಳು, ರೈಲು ಕಂಪೆನಿಗಳು, ವಿಮಾನ ನಿಲ್ದಾಣಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೂ ಇದು ಹೆಚ್ಚು ಉಪಯುಕ್ತವಾಗಬಹುದು ಎಂಬುದು ಇದರ ವಿನ್ಯಾಸಕರ ನಿರೀಕ್ಷೆ. ವಾಸ್ತವವಾಗಿ ಬಾಹ್ಯಾಕಾಶ ನೌಕೆಗಳಲ್ಲಿ ಬಳಕೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಕಾಸ್ಮಿಕ್ ದೂಳಿನ ಮೋಡಗಳ ಮೂಲಕ ವಸ್ತುಗಳನ್ನು ಗುರುತಿಸಲು ಸಾಧ್ಯವಾಗುವ ಈ ಉಪಕರಣ ಬಳಸಿ ಬಟ್ಟೆಗಳ ಒಳಗಿನ ವಸ್ತುಗಳನ್ನೂ ನೋಡಬಹುದು ಎಂಬುದು ಸಂಶೋಧಕರು ಬೇಗನೇ ಪತ್ತೆ ಹಚ್ಚಿದರು. ಅದರ ಪರಿಣಾಮವಾಗಿಯೇ ಈ ಕ್ಯಾಮರಾ ಆವಿಷ್ಕಾರಗೊಂಡಿತು.

2008: ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ಇನ್ಫೋಸಿಸ್ ಅಧ್ಯಕ್ಷ ಎನ್.ನಾರಾಯಣ ಮೂರ್ತಿ ಅವರನ್ನು ಅಮೆರಿಕದ ವುಡ್ರೋ ವಿಲ್ಸನ್ ಪ್ರಶಸ್ತಿ ಹಾಗೂ ಕಾರ್ಪೋರೆಟ್ ಪೌರತ್ವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಮೆರಿಕದ ಸ್ಮಿತ್ ಸಾನಿಯನ್ ಸಂಸ್ಥೆಯ ವೂಡ್ರೂ ವಿಲ್ಸನ್ ಅಂತರರಾಷ್ಟ್ರೀಯ ಕೇಂದ್ರ ಪ್ರಕಟಿಸಿತು. ಪ್ರಶಸ್ತಿಯನ್ನು ನವದೆಹಲಿಯಲ್ಲಿ 2008ರ ಸೆಪ್ಟೆಂಬರ್ 29ರಂದು ಪ್ರದಾನ ಮಾಡಲಾಗುವುದು. ಸಾಮಾಜಿಕ ಕಲ್ಯಾಣ, ತಾಂತ್ರಿಕ ಸಂಶೋಧನೆ ಹಾಗೂ ಆರ್ಥಿಕ ಸಾಮರಸ್ಯ ಮೂಡಿಸುವ ದಿಸೆಯಲ್ಲಿ ಇವರು ಕೈಗೊಂಡಿರುವ ಸೇವೆ ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಹೇಳಿತು.

2008: ಪಾಕಿಸ್ಥಾನದ ವೈದ್ಯೆ ಬೇಗಂ ಜಾನ್ ತಮ್ಮ ಅಸೀಮ ಸಾಹಸದ ವೈದ್ಯಕೀಯ ಸೇವೆಗಾಗಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನರಾದರು. ಅಮೆರಿಕ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ವಾಷಿಂಗ್ಟನ್ನಿನಲ್ಲಿ ಬೇಗಂ ಜಾನ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು. ಪಾಕ್ ಗಡಿಭಾಗದ ಅಫ್ಘಾನಿಸ್ಥಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರರ ವಾಸಸ್ಥಳಗಳಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಗಳಿಗೆ ಎದೆಕೊಟ್ಟು ಬೇಗಂ ಜಾನ್ ತಮ್ಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ತಮ್ಮದೇ ಆದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಮೂಲಕ ಬುಡಕಟ್ಟು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ವೃದ್ಧಿಸಲು ಬೇಗಂ ಈ ಪ್ರದೇಶದಲ್ಲಿ ಶ್ರಮ ವಹಿಸಿದ್ದರು.

2008: ವಿಜಾಪುರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ಕೇಂದ್ರ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಸ್ವಾಯತ್ತ ವಿಶ್ವವಿದ್ಯಾಲಯದ ಮಾನ್ಯತೆ ನೀಡಿವೆ. ಈ ಸಂಸ್ಥೆ ಇನ್ನು `ಬಿ ಎಲ್ ಡಿ ಇ ವಿಶ್ವವಿದ್ಯಾಲಯ'ವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರಕಟಿಸಿದರು.

2007: ಭಾರತೀಯ ಆಟಗಾರ ವಿಶ್ವನಾಥನ್ ಆನಂದ್ ಮೊರೆಲಿಯಾ ಲಿನಾರೆಸ್ ಗ್ರ್ಯಾಂಡ್ ಮಾಸ್ಟರ್ ಚೆಸ್ ಟೂರ್ನಿಯಲ್ಲಿ ಉಕ್ರೇನಿನ ವೆಸೆಲಿ ಇವಾಂಚುಕ್ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವದ ಹೊಸ ನಂಬರ್ ಒನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007; ವಿಶ್ವ ಚಾಂಪಿಯನ್ ಚೀನಾದ ಲಿನ್ ಡ್ಯಾನ್ ಅವರು ಮೂರನೇ ಬಾರಿಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡರು.

2007: ಕೆರಿಬಿಯನ್ ದ್ವೀಪದ ಟ್ರೆಲಾನಿಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ವರ್ಣರಂಜಿತ ಉದ್ಘಾಟನೆ ನೆರವೇರಿತು. 16 ತಂಡಗಳು ವಿಶ್ವಕಪ್ ಗಾಗಿ 46 ದಿನಗಳ ಕಾಲ ವಿಂಡೀಸಿನಲ್ಲಿ ಹೋರಾಟ ನಡೆಸುವುವು.

2007: ಹಿರಿಯ ಗಮಕಿ ಸೊರಬದ ಹೊಸಬಾಳೆ ಸೀತಾರಾಮ ರಾವ್ ಅವರಿಗೆ 2007ನೇ ಸಾಲಿನ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಂ. ಕಾವೇರಿಯಪ್ಪ ಪ್ರದಾನ ಮಾಡಿದರು.

2007: ಪಾಕಿಸ್ಥಾನ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ವಜಾಗೊಂಡ ನ್ಯಾಯಮೂರ್ತಿ ಇಫ್ತಿಕರ್ ಮೊಹಮ್ಮದ್ ಚೌಧರಿ ಅವರು ರಾಜೀನಾಮೆ ಸಲ್ಲಿಸದೆಯೇ ಉನ್ನತ ನ್ಯಾಯಾಧೀಶರ ಸಮಿತಿಯ ಮುಂದೆ ತಮ್ಮನ್ನು ಸಮರ್ಥಿಸಿಕೊಳ್ಳಲು ತೀರ್ಮಾನಿಸಿದರು.

2007: ಕುರುಕ್ಷೇತ್ರದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ `ಪ್ರಿನ್ಸ್' ಪ್ರಕರಣದ ನೆನಪು ಮರೆಯಾಗುವ ಮುನ್ನವೇ ಗುಜರಾತಿನ ಭಾವನಗರ ಸಮೀಪದ ಕರ್ಮದೀಯ ಹಳಿಯಲ್ಲಿ ಈದಿನ ಮಧ್ಯಾಹ್ನ 60 ಅಡಿ ಆಳದ ಕೊಳವೆ ಬಾವಿಯೊಳಕ್ಕೆ ಬಿದ್ದ 4 ವರ್ಷದ ಬಾಲಕಿ ಆರತಿ ಚಾವ್ಲಾ ಸಂಜೆ ವೇಳೆಗೆ ಅಸು ನೀಗಿದಳು. ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡವೊಂದು ಮಧ್ಯಾಹ್ನದಿಂದಲೇ ಆರತಿಯನ್ನು ಜೀವಂತವಾಗಿ ಕೊಳವೆ ಬಾವಿಯಿಂದ ಮೇಲಕ್ಕೆ ಎತ್ತಲು ಹರಸಾಹಸ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೊಸದಾಗಿ ಕೊರೆದಿದ್ದ, ಆದರೆ ನೀರು ಸಿಗದ ಕಾರಣ ಹಾಗೆಯೇ ಬಿಟ್ಟಿದ್ದ ಕೊಳವೆ ಬಾವಿಯೊಳಕ್ಕೆ ಆಡುತ್ತಾಡುತ್ತಾ ಹೋಗಿ ಬಿದ್ದ ಆರತಿ ಚಾವ್ಲಾ ಕೊಳವೆ ಬಾವಿಯ ತೂತಿನ ಒಳಗೇ ಮೃತಳಾದಳು. ಎರಡುದಿನ ಹಿಂದೆಯಷ್ಟೇ ಈ ಕೊಳವೆ ಬಾವಿಯನ್ನು ಕೊರೆಯಲಾಗಿದ್ದು, ನೀರು ಸಿಗದ ಕಾರಣ ಮುಚ್ಚದೆ ಹಾಗೇ ಬಿಟ್ಟು ಬಿಡಲಾಗಿತ್ತು.

2006: ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸ್ಟೀವ್ ಹರ್ಮಿಸನ್ ಅವರನ್ನು ಎಲ್. ಬಿ. ಡಬ್ಲ್ಯೂ ಬಲೆಗೆ ಕೆಡವಿ 500ನೇ ವಿಕೆಟ್ ಪಡೆದ ಕರ್ನಾಟಕದ ಕುವರ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಅತ್ಯಂತ ವೇಗವಾಗಿ 500 ವಿಕೆಟ್ ಗಡಿ ದಾಟಿದ ವಿಶ್ವದ ಎರಡನೇ ಬೌಲರ್ ಎಂಬ ಕೀರ್ತಿಯೂ ಕುಂಬ್ಳೆ ಮುಡಿಗೇರಿತು.

2006: ಭಾರತೀಯ ಮಹಿಳಾ ಉದ್ಯಮಿಗಳ ಪೈಕಿ ಮುಂಚೂಣಿಯಲ್ಲಿರುವ ಬಯೋಕಾನ್ ಅಧ್ಯಕ್ಷೆ ಡಾ. ಕಿರಣ್ ಮಜುಂದಾರ್ ಷಾ ಅವರು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ಯುರೋಪ್ ಹೊರತು ಪಡಿಸಿ ವಿಶ್ವದ ಅತ್ಯಂತ ಪ್ರಭಾವಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಾರಾಷ್ಟ್ರೀಯ ನಿಯತಕಾಲಿಕ ನೇಚರ್ ಬಯೋಟೆಕ್ನಾಲಜಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಹೊರಹೊಮ್ಮಿತು.

2006: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂಬಿ)ನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಕಾನ್ಪುರದ ಗೌರವ್ ಅಗರ್ ವಾಲ್ ಅತ್ಯಂತ ಅಧಿಕ ಸಂಬಳದ (ವಾಷರ್ಿಕ 81 ಲಕ್ಷ ರೂಪಾಯಿ) ಹುದ್ದೆಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದರು. ಇವರ ಮಾಸಿಕ ಆದಾಯ 7.23 ಲಕ್ಷ ರೂಪಾಯಿ ಆಗುತ್ತದೆ. ದೇಶದ ಯಾವುದೇ ಐಐಎಂಬಿ ವಿದ್ಯಾರ್ಥಿ ಇಷ್ಟೊಂದು ಮೊತ್ತದ ಸಂಬಳಕ್ಕೆ ಈವರೆಗೆ ಆಯ್ಕೆ ಆಗಿರಲಿಲ್ಲ.

2001: ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಹರ್ ಭಜನ್ ಸಿಂಗ್ ಪಾತ್ರರಾದರು. ಎರಡನೇ ಟೆಸ್ಟ್ ಪಂದ್ಯದ ತನ್ನ 16ನೇ ಓವರಿನಲ್ಲಿ 2,3 ಮತ್ತು 4ನೇ ಚೆಂಡುಗಳಿಗೆ (ಬಾಲ್ ಗಳಿಗೆ ಅವರು ಸತತವಾಗಿ ಮೂರು ವಿಕೆಟುಗಳನ್ನು ಉರುಳಿಸಿದರು.

2001: ಚೀನಾದ ಚೆನ್ ಹಾಂಗ್ ಅವರನ್ನು ಅಂತಿಮ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪರಾಭವಗೊಳಿಸುವ ಮೂಲಕ `ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್' ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪುಲ್ಲೇಲ ಗೋಪಿಚಂದ್ ಪಾತ್ರರಾದರು.

1970: ಅಮೆರಿಕಾದ ಅಪರಾಧ ಬರಹಗಾರ ಹಾಗೂ `ಪೆರಿ ಮೇಸನ್' ಪಾತ್ರದ ಸೃಷ್ಟಿಕರ್ತ ಅರ್ಲ್ ಸ್ಟಾನ್ಲೆ ಗಾರ್ಡನರ್ ಅವರು ಕ್ಯಾಲಿಫೋರ್ನಿಯಾದ ಟೆಮೆಕ್ಯೂಲಾದಲ್ಲಿ ತಮ್ಮ 80ನೇ ವಯಸಿನಲ್ಲಿ ಮೃತರಾದರು.

1982: ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟಿನಲ್ಲಿ ಮುಂಬೈ ತಂಡದ ದಿಢೀರ್ ಕುಸಿತಕ್ಕೆ ಕಾರಣರಾದ ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಮ ಭಟ್ ಅವರು ರಣಜಿ ಟ್ರೋಪಿ ಕ್ರಿಕೆಟಿನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಕರ್ನಾಟಕದ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.

1918: ಅಮೆರಿಕಾದಲ್ಲಿ ಸ್ಪಾನಿಶ್ ಇನ್ ಫ್ಲುಯೆಂಜಾ ರೋಗದ ಮೊದಲ ಪ್ರಕರಣಗಳು ದಾಖಲಾದವು. ಜ್ವರ, ಗಂಟಲು ಕೆರೆತ ಮತ್ತು ತಲೆನೋವಿನ ದೂರಿನೊಂದಿಗೆ ಯುವಕನೊಬ್ಬ ಸೇನಾ ಆಸ್ಪತ್ರೆಗೆ ದಾಖಲಾದಾಗ ಇದು ಬೆಳಕಿಗೆ ಬಂತು. ಮಧ್ಯಾಹ್ನದ ವೇಳೆಗೆ ಇದೇ ದೂರಿನೊಂದಿಗೆ 100 ಪ್ರಕರಣಗಳು ಆಸ್ಪತ್ರೆಯಲ್ಲಿ ದಾಖಲಾದವು. ಒಂದು ವಾರದಲ್ಲಿ ಈ ಸಂಖ್ಯೆ 500ಕ್ಕೆ ಏರಿತು . ಫೋರ್ಟ್ ರೀಲಿಯಲ್ಲಿ 48 ಸೈನಿಕರು ಮೃತರಾದರು. ಸಾವಿಗೆ ಇನ್ಫ್ಲುಯೆಂಜಾ ಕಾರಣ ಎಂಬುದು ಪತ್ತೆಯಾಯಿತು. ಹೇಗೆ ನಿಗೂಢವಾಗಿ ಬಂತೋ ಅಷ್ಟೇ ನಿಗೂಢವಾಗಿ ಕಣ್ಮರೆಯಾದ ಈ ರೋಗ 6 ಲಕ್ಷ ಮಂದಿಯನ್ನು ಬಲಿತೆಗೆದುಕೊಳ್ಳುವ ಮೂಲಕ ಅಮೆರಿಕಾದ ಇತಿಹಾಸದಲ್ಲೇ ಅತ್ಯಂತ ಭೀಕರ ರೋಗ ಎನಿಸಿಕೊಂಡಿತು.

1916: ಹರೋಲ್ಡ್ ವಿಲ್ಸನ್ (1916-1995) ಹುಟ್ಟಿದ ದಿನ. ಲೇಬರ್ ಪಾರ್ಟಿಯ ರಾಜಕಾರಣಿಯಾದ ಇವರು ಎರಡು ಬಾರಿ ಇಂಗ್ಲೆಂಡಿನ ಪ್ರಧಾನಿಯಾಗಿದ್ದರು.

1915: ಭಾರತೀಯ ಟೆಸ್ಟ್ ಕ್ರಿಕೆಟಿನ ಮಾಜಿ ಕ್ಯಾಪ್ಟನ್ ವಿಜಯ್ ಹಜಾರೆ ಹುಟ್ಟಿದರು.

1886: ಪೆನ್ಸಿಲ್ವೇನಿಯಾದ ವುಮನ್ಸ್ ಮೆಡಿಕಲ್ ಕಾಲೇಜಿನಿಂದ ಪದವೀಧರೆಯಾಗುವ ಮೂಲಕ ಆನಂದಿಬಾಯಿ ಜೋಶಿ ವೈದ್ಯಳೆನಿಸಿದ ಭಾರತದ ಮೊದಲ ಮಹಿಳೆಯಾದರು.

1811: ಅರ್ಬೈನ್ ಜೀನ್ ಜೋಸೆಫ್ ಲೆ ವೆರಿಯರ್ (1811-1877) ಹುಟ್ಟಿದ ದಿನ. ಫ್ರೆಂಚ್ ಖಗೋಳ ತಜ್ಞನಾದ ಈತ ಗಣಿತ ಲೆಕ್ಕಾಚಾರದ ಮೂಲಕ ನೆಪ್ಚೂನ್ ಗ್ರಹ ಇರುವ ಕುರಿತು ಭವಿಷ್ಯ ನುಡಿದ.

1770: ವಿಲಿಯಂ ಹಸ್ ಕಿಸ್ಸನ್ (1770-1830) ಹುಟ್ಟಿದ ದಿನ. ಈತ ರೈಲ್ವೆ ಅಪಘಾತದಲ್ಲಿ ಮೃತನಾದ ಮೊದಲ ಬ್ರಿಟಿಷ್ ರಾಜಕಾರಣಿ.

No comments:

Post a Comment