ನಾನು ಮೆಚ್ಚಿದ ವಾಟ್ಸಪ್

Sunday, March 11, 2018

ಇಂದಿನ ಇತಿಹಾಸ History Today ಮಾರ್ಚ್ 10

ಇಂದಿನ ಇತಿಹಾಸ History Today ಮಾರ್ಚ್ 10
2018: ನವದೆಹಲಿ: ಚಳವಳಿ, ಮೋರ್ಚಾಗಳ ರಾಜಕಾರಣ ಹಳತಾಯಿತು, ಅತ್ಯಂತ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಈಗಿನ ಮಹತ್ವಾಕಾಂಕ್ಷೆಯ ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು.ರಾಷ್ಟ್ರೀಯ ಶಾಸನಕರ್ತರ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಪ್ರಧಾನಿಅತ್ಯಂತ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಶ್ರಮಿಸುವುದು ಸಾಮಾಜಿಕ ನ್ಯಾಯದ ಕಡೆಗಿನ ಹೆಜ್ಜೆಯಾಗಿದೆ. ಹೋರಾಟ, ಚಳವಳಿಗಳ ರಾಜಕಾರಣ ಈಗ ಪ್ರಸ್ತುತವಲ್ಲಎಂದು ನುಡಿದರು. ‘ನಾವು ಅಭಿವೃದ್ಧಿಗಾಗಿವಿಷಯವಾಗಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರೀಯ ಶಾಸನಕರ್ತರ ಸಮ್ಮೇಳನವನ್ನು ಸಂಘಟಿಸಲಾಗಿತ್ತು. ಸಮಯದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದ ಮೋದಿ ಅತ್ಯಂತ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲಾಗಿರುವ ೧೧೫ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿ ತಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಬಣ್ಣಿಸಿದರು. ‘ಎಲ್ಲ ಮಕ್ಕಳು ಶಾಲೆಗೆ ಹೋದರೆ ಮತ್ತು ಎಲ್ಲ ಮನೆಗಳು ವಿದ್ಯುತ್ತನ್ನು ಪಡೆದರೆ ಆಗ ಅದು ಸಾಮಾಜಿಕ ನ್ಯಾಯದ ಕಡೆಗಿನ ಹೆಜ್ಜೆ ಆಗುತ್ತದೆಎಂದು ಕೇಂದ್ರ ಸಂಪುಟ ಸಚಿವರು, ಸಂಸತ್ ಸದಸ್ಯರು ಮತ್ತು ರಾಜ್ಯಗಳ ಶಾಸಕರು ಪಾಲ್ಗೊಂಡಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಹೇಳಿದರು.  ಅಭಿವೃದ್ಧಿ ಆಗದೇ ಇರಲು ಮುಂಗಡಪತ್ರದಲ್ಲಿ ಮೀಸಲಾದ ಹಣ ಅಥವಾ ಸಂಪನ್ಮೂಲದ ಕೊರತೆ ಕಾರಣವಲ್ಲ, ಅದಕ್ಕೆ ಆಡಳಿತ ಕಾರಣ. ಉತ್ತಮ ಆಡಳಿತ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಅಭಿವೃದ್ಧಿಗೆ ಅಗತ್ಯವಾದ ಚಟುವಟಿಕೆಗಳತ್ತ ಬೆಳಕು ಚೆಲ್ಲುವುದು ಅಭಿವೃದ್ಧಿ ಸಾಧಿಸಲು ಮುಖ್ಯ ಎಂದು ಮೋದಿ ಹೇಳಿದರು. ಚಳವಳಿಗಳು, ಹೋರಾಟಗಳ ಮೂಲಕ ಕೆಲಸ ಸಾಧಿಸುವ ರಾಜಕೀಯದ ಕಾಲವಿತ್ತು. ಈಗ ಕಾಲ ಬದಲಾಗಿದೆ. ಅಧಿಕಾರದಲ್ಲಿ ಇರಿ ಅಥವಾ ವಿರೋಧ ಪಕ್ಷದಲ್ಲೇ ಇರಿ, ನೀವು ಜನರಿಗೆ ನೆರವಾಗಲು ಮುಂದೆ ಬರುತ್ತೀರಾ ಅಥವಾ ಇಲ್ಲವೇ ಎಂಬುದು ಈಗ ಮುಖ್ಯವಾಗುತ್ತದೆಎಂದು ಪ್ರಧಾನಿ ನುಡಿದರು. ’ನೀವು ಎಷ್ಟು ಚಳವಳಿಗಳನ್ನು ನಡೆಸಿದಿರಿ, ಎಷ್ಟು ಮೋರ್ಚಾಗಳನ್ನು ಸಂಘಟಿಸಿದರಿ ಮತ್ತು ಎಷ್ಟು ಬಾರಿ ಸೆರೆಮನೆಗೆ ಹೋದಿರಿ ಎಂಬುದು ೨೦ ವರ್ಷಗಳ ಹಿಂದಿನ ನಿಮ್ಮ ರಾಜಕೀಯ ಜೀವನದಲ್ಲಿ ಮುಖ್ಯವಾಗಿತ್ತು, ಆದರೆ ಈಗ ಅದೆಲ್ಲ ಬದಲಾಗಿದೆಎಂದು ಶಾಸನಕರ್ತರಿಗೆ ಹೇಳಿದ ಮೋದಿ ನಿಮ್ಮ ಪ್ರದೇಶಗಳ ಅಭಿವೃದ್ಧಿ ಗುರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಿಎಂದು ಸೂಚಿಸಿದರು. ’ಮುಖ್ಯ ರಾಜಕಾರಣವನ್ನು ಬಿಡಿ ಎಂದು ನಿಮಗೆ ಹೇಳುತ್ತಿಲ್ಲ, ಆದರೆ ಸಮಾಜದಲ್ಲಿನ ಬದಲಾವಣೆ ನಿಮ್ಮನ್ನು   ರೀತಿ ಪರಿವರ್ತಿಸುವಂತೆ ಮಾಡುತ್ತದೆಎಂದು ಪ್ರಧಾನಿ ಹೇಳಿದರು. ಬಹಳಷ್ಟು ಬಾರಿ ಸಾಮಾಜಿಕ ನ್ಯಾಯದ ಚರ್ಚೆ ಸಾಮಾಜಿಕ ಪರಿಸ್ಥಿತಿಗಳಿಗೆ ಮಾತ್ರ ಸೀಮಿತವಾಗುತ್ತದೆ. ಆದರೆ ಆದಕ್ಕೆ ಹೆಚ್ಚಿನ ಆಯಾಮಗಳಿವೆ. ಒಂದು ಮನೆ ಅಥವಾ ಗ್ರಾಮದಲ್ಲಿ ವಿದ್ಯುತ್ ಇದ್ದು, ನೆರೆಯ ಮನೆ ಅಥವಾ ಗ್ರಾಮದಲ್ಲಿ ವಿದ್ಯುತ್ ಇಲ್ಲದೇ ಹೋದರೆ ಅವರಿಗೂ ವಿದ್ಯುತ್ ಲಭಿಸಬೇಕು ಎಂದು ಸಾಮಾಜಿಕ ನ್ಯಾಯ ನಿರ್ದೇಶಿಸುತ್ತದೆ ಎಂದು ಮೋದಿ ನುಡಿದರು. ಭಾರತದಲ್ಲಿಸಾಮಾಜಿಕ ನ್ಯಾಯಎಂಬ ಪದವನ್ನು ರಾಜಕೀಯ ಪಕ್ಷಗಳು, ವಿಶೇಷವಾಗಿಜನತಾ ಪರಿವಾರ ಪಕ್ಷಗಳು ಹಿಂದುಳಿದ ವರ್ಗಗಳು ಮತ್ತು ಸಮಾಜದ ದುರ್ಬಲ ವರ್ಗಗಳ ಸುತ್ತ ಸುತ್ತುವಂತೆ ಮಾಡಿವೆ. ಆದರೆ ಮೋದಿ ನೇತೃತ್ವದಲ್ಲಿ  ಬಿಜೆಪಿಯು ಸಾಮಾಜಿಕ ನ್ಯಾಯ ಪದಕ್ಕೆ ವಿವರಣಾತ್ಮಕ ಅಭಿವೃದ್ಧಿಯ ವ್ಯಾಖ್ಯಾನ ನೀಡಿದ್ದು. ಸಮುದಾಯಗಳ ದೊಡ್ಡ ವರ್ಗವನ್ನು ಆಕರ್ಷಿಸಿ ಚುನಾವಣೆ ಬಳಿಕ ಚುನಾವಣೆಯನ್ನು ಗೆಲ್ಲುವಂತೆ ಮಾಡಿವೆ. ಮತ್ತೆ ಮತ್ತೆ ಚುನಾವಣೆಗಳಲ್ಲಿ ಗೆಲ್ಲುವ ಶಾಸನಕರ್ತರು ತಮ್ಮ ಕ್ಷೇತ್ರಗಳಲ್ಲಿ ರಾಜಕೀಯಕ್ಕಿಂತ ಮಹತ್ತರವಾದ ಬೇರೆ ಸಾಧನೆಗಳನ್ನು ಮಾಡಿರುವುದರ ಜೊತೆ ಗುರುತಿಸಲ್ಪಟ್ಟಿರುತ್ತಾರೆ ಎಂದು ಪ್ರಧಾನಿ ಹೇಳಿದರು. ಜವಾಹರಲಾಲ್ ನೆಹರೂ, ಬಿ.ಆರ್. ಅಂಬೇಡ್ಕರ್, ಸರ್ದಾರ್ ಪಟೇಲ್ ಅವರಂತಹ ಐಕಾನ್ ಗಳನ್ನು ನೆನಪಿಸಿದ ಪ್ರಧಾನಿ ಅವರೆಲ್ಲ ಸಂವಿಧಾನವನ್ನು ಸಿದ್ಧ ಪಡಿಸಲು ಸೆಂಟ್ರಲ್ ಹಾಲ್ ನಲ್ಲಿ ಕುಳಿತಿದ್ದುದನ್ನು ಹಾಲಿ ಶಾಸನಕರ್ತರು ಸೆಂಟ್ರಲ್ ಹಾಲ್ ನಲ್ಲಿ ಕುಳಿತಿರುವುದಕ್ಕೆ ಹೋಲಿಸಿ, ಅಭಿವೃದ್ಧಿಯೆಡೆಗಿನ ಯಾತ್ರೆಗೆ ಸಜ್ಜಾಗಲು ಕರೆ ಕೊಟ್ಟರು.  ವಿವಿಧ ಪಕ್ಷಗಳ ಸಂಸತ್ ಸದಸ್ಯರು ಮತ್ತು ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಒಟ್ಟಾಗಿ ಕುಳಿತಿರುವುದು ಒಕ್ಕೂಟ ವ್ಯವಸ್ಥೆಯ ಸಜೀವ ನಿದರ್ಶನ ಎಂದು ಹೇಳಿದ ಮೋದಿ ರಾಜ್ಯ ಯಂತ್ರಕ್ಕೆ ನೆರವಿನ ಹಸ್ತಗಳಾಗಿ ಕೆಲಸಮಾಡಿ ಎಂದು ಸೂಚಿಸಿದರು. ಸಂದರ್ಭದಲ್ಲಿ ಮಾತನಾಡಿದ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ೨೦೨೨ರ ವೇಳೆಗೆ ಭಾರತವು ಹೇಗೆ ಅಭಿವೃದ್ಧಿ ಹೊಂದಬಹುದು ಮತ್ತು ಪ್ರಬಲ ರಾಷ್ಟ್ರವಾಗಬಹುದು ಎಂದು ಶಾಸನಕರ್ತರು ಸಾಮೂಹಿಕವಾಗಿ ಚಿಂತಿಸಬೇಕು ಎಂದು ಹೇಳಿದರು.

2018: ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿಸ್ತೃತ ಮಾತುಕತೆಯ ಬಳಿಕ ಭದ್ರತೆ, ಪರಿಮಾಣು ಇಂಧನ ಮತ್ತು ವಗೀಕೃತ ಮಾಹಿತಿ ಸಂರಕ್ಷಣೆ ಕ್ಷೇತ್ರಗಳು ಸೇರಿದಂತೆ ಮಹತ್ವದ ೧೪ ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಮತ್ತು ಫ್ರಾನ್ಸ್ ಸಹಿ ಹಾಕಿದವು. ಉಭಯ ಕಡೆಗಳ ಸಶಸ್ತ್ರ ಪಡೆಗಳಿಂದಪರಸ್ಪರ ವ್ಯವಸ್ಥಾಪನಾ ಬೆಂಬಲಕುರಿತ ಒಪ್ಪಂದ, ಶಿಕ್ಷಣ, ಪರಿಸರ, ನಗರಾಭಿವೃದ್ಧಿ ಮತ್ತ ರೈಲ್ವೆಗೆ ಸಂಬಂಧಿಸಿದ ಪರಸ್ಪರ ಸಹಕಾರ ಒಪ್ಪಂದಗಳು ಇವುಗಳಲ್ಲಿ ಸೇರಿವೆ.ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಮ್ಯಾಕ್ರನ್ ಅವರು ಭಾರತ ಮತ್ತು ಫ್ರಾನ್ಸ್ ಭಯೋತ್ಪಾದನೆ ಮತ್ತು ತೀವ್ರಗಾಮಿ ಬೆದರಿಕೆಗಳ ಬಗ್ಗೆ ವ್ಯವಹರಿಸುವಲ್ಲಿ ಒಟ್ಟಾಗಿ ಶ್ರಮಿಸಲು ನಿರ್ಧರಿಸಿವೆ ಎಂದು ಹೇಳಿದರು. ಉಭಯ ರಾಷ್ಟ್ರಗಳ ನಡುವಣ ರಕ್ಷಣಾ ಸಹಕಾರವು ಈಗ ಹೆಚ್ಚಿನ ಮಹತ್ವವನ್ನು ಪಡೆದಿದೆ ಎಂದು ಅವರು ನುಡಿದರು. ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಗೆ ಅತ್ಯಧಿಕ ಮಹತ್ವ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಮ್ಯಾಕ್ರನ್ ಅವರು, ವಿಶ್ವದ ಎರಡು ಮಹೋನ್ನತ ಪ್ರಜಾಸತ್ತೆಗಳು ಇನ್ನಷ್ಟು ನಿಕಟವಾಗಿ ಪರಿಶ್ರಮಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಪೌರ ಪರಮಾಣು ಸಹಕಾರ, ಬಾಹ್ಯಾಕಾಶ ಸರಕಾರ, ಭಾರತೀಯ ರೈಲ್ವೆಗೆ ವಿದ್ಯುತ್ ಚಾಲಿತ ತಂತ್ರಜ್ಞಾನದ ವರ್ಗಾವಣೆ ಮುಂತಾಗಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳೂ ಸಹಿ ಹಾಕಲಾದ ೧೪ ಒಪ್ಪಂದಗಳಲ್ಲಿ ಒಳಗೊಂಡಿವೆ. ೪೦ರ ಹರೆಯದ ಮ್ಯಾಕ್ರನ್ ಅವರು ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಲ್ಲಿ ಇದೊಂದು ಹೊಸ ಯುಗದ ಆರಂಭ ಎಂದು ಹೈದರಾಬಾದ್ ಭವನದಲ್ಲಿ ಜಂಟಿ ಹೇಳಿಕೆಯಲ್ಲಿ ವರ್ಣಿಸಿದರು. ’ನಾವು ಎರಡು ಪ್ರಬಲ ಸ್ವತಂತ್ರ ರಾಷ್ಟ್ರಗಳ ನಾಯಕರು ಮಾತ್ರವೇ ಅಲ್ಲ, ಎರಡು ವೈವಿಧ್ಯಮಯ ಪ್ರಜಾಪ್ರಭುತ್ವಗಳ ನಾಯಕರು ಕೂಡಾ. ನಾವು ಎರಡು ಸಮೃದ್ಧ ಮತ್ತು ಸಮರ್ಥ ಪರಂಪರೆಗಳ ವಾರಸುದಾರರೂ ಹೌದು. ರಕ್ಷಣೆ, ಭದ್ರತೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸಿನ ದ್ವಿಪಕ್ಷೀಯ ಸಹಕಾರದ ಚರಿತ್ರೆ ಅತ್ಯಂತ ಸುದೀರ್ಘವಾದದ್ದುಎಂದು ಪ್ರಧಾನಿ ಮೋದಿ ಹೇಳಿದರು. ಕಾರಣದಿಂದಲೇ ನಾವು ಈದಿನ ಎರಡು ಮಹತ್ವದ ಒಪ್ಪಂದಗಳನ್ನು ರೂಪಿಸಿದ್ದೇವೆ. ಪರಸ್ಪರರ ಶೈಕ್ಷಣಕ ಅಗತ್ಯಗಳನ್ನು ಮಾನ್ಯ ಮಾಡುವುದು ಒಂದು ಒಪ್ಪಂದ ಮತ್ತು ನಮ್ಮ ಪ್ರವಾಸ ಮತ್ತು ಚಲನಶೀಲತೆಯಲ್ಲಿನ ಪಾಲುದಾರಿಕೆ ಇನ್ನೊಂದು ಒಪ್ಪಂದ. ಎರಡು ಒಪ್ಪಂದಗಳು ಉಭಯ ರಾಷ್ಟ್ರಗಳ ಪ್ರಜೆಗಳ, ಯುವಕರ ನಡುವಣ ನಿಕಟ ಬಾಂಧವ್ಯಕ್ಕೆ ಚೌಕಟ್ಟನ್ನು ಸಿದ್ಧ ಪಡಿಸುವುದುಎಂದು ಪ್ರಧಾನಿ ನುಡಿದರು. ಮಾರ್ಚ್ ೯ರ  ಶುಕ್ರವಾರ ರಾತ್ರಿಯಿಂದ ನಾಲ್ಕು ದಿನಗಳ ಭಾರತ ಭೇಟಿ ಆರಂಭಿಸಿರುವ, ಜ್ಝಾನ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಶೃಂಗಸಭೆಯಲ್ಲಿ ಉಭಯ ರಾಷ್ಟ್ರಗಳ ಸುಮಾರು ೨೦೦ ಶಿಕ್ಷಣ ತಜ್ಞರು ಶೃಂಗದಲ್ಲಿ ಪಾಲ್ಗೊಳ್ಳುವರು.
ಶುಕ್ರವಾರ ತಡರಾತ್ರಿ ಪತ್ನಿ ಬಿಗ್ರಿಟ್ ಹಾಗೂ ಉನ್ನತ ಉದ್ಯಮಿಗಳು ಮತ್ತು ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ  ಸ್ವಾಗತಿಸಿದರು. ಇಬ್ಬರೂ ಪರಸ್ಪರ ಆತ್ಮೀಯ ಅಪ್ಪುಗೆಯನ್ನು ಹಂಚಿಕೊಂಡರು.  ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಹಕಾರ ವರ್ಧನೆ ಮ್ಯಾಕ್ರನ್ ಮತ್ತು ಮೋದಿ ಅವರ ನಡುವಣ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಪ್ರಸ್ತಾಪಗೊಳ್ಳಲಿರುವ ಅತ್ಯಂತ ಮಹತ್ವದ ವಿಷಯವಾಗಿದೆ. ಇದಲ್ಲದೆ ಪರಮಾಣು ಇಂಧನ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತ- ಫ್ರಾನ್ಸ್ ನಡುವಣ ವ್ಯೂಹಾತ್ಮಕ ಪಾಲುದಾರಿಕೆ ಕುರಿತ ಮಾತುಕತೆ ನಡೆಯಲಿದೆ.

2018: ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರೆಸ್ಸೆಸ್)ಸುರೇಶ ಭೈಯ್ಯಾಜಿ ಜೋಶಿ ಅವರನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಥವಾ ಸಹಕಾರ್ಯವಾಹ ಆಗಿ ೪ನೇ ಬಾರಿಗೆ ಪುನರಾಯ್ಕೆ ಮಾಡಿತು.ನಾಗಪುರದಲ್ಲಿ ನಡೆದ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಸಮಾವೇಶದಲ್ಲಿ ಜೋಶಿ ಅವರು ಮೂರು ವರ್ಷಗಳ ಅವಧಿಗೆ ಪುನರಾಯೆ ಮಾಡಲಾಗಿದ್ದು ಅವರ ಅವಧಿ ೨೦೨೧ಕ್ಕೆ ಮುಕ್ತಾಯಗೊಳ್ಳಲಿದೆ. ಭೈಯ್ಯಾಜಿ ಅವರು ಸಂಘಟನೆಯ ಸರಕಾರ್ಯವಾಹ ಆಗಿ ಸತತವಾಗಿ ನಾಲ್ಕನೇ ಬಾರಿಗೆ ಆಯ್ಕೆಯಾದರು.  ಜೋಶಿ ಅವರ ಹಿಂದಿನ ಮೂರು ಅವಧಿ ಮಾ.10ರ ಶುಕ್ರವಾರ ಸಂಘಟನೆಯ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಮಾವೇಶ ಆರಂಭದೊಂದಿಗೆ ಮುಕ್ತಾಯಗೊಂಡಿತ್ತು. ಈವರೆಗೆ ವರ್ಷಗಳ ಕಾಲ ಸರಕಾರ್ಯವಾಹರಾಗಿದ್ದ ಜೋಶಿ, ೨೦೦೯ರಿಂದ ಎರಡು ಬಾರಿ ವಿಸ್ತರಣೆ ಪಡೆದಿದ್ದರು.
ಭೈಯಾಜಿ ಅವರನ್ನು ಮುಂದಿನ ವರ್ಷಗಳ ಅವಧಿಗೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಗಿದೆ. ಅವರ ಅವಧಿಯಲ್ಲಿ ಸಂಘಟನೆಯ ವ್ಯಾಪಕ ವಿಸ್ತರಣೆಯನ್ನು ಗಮನದಲ್ಲಿ ಇಟ್ಟುಕೊಂಡು ಅವರನ್ನು ಪುನರಾಯ್ಕೆ ಮಾಡುವ ಸೂಚನೆ ಮುಂದಿಡಲಾಯಿತು. ಹಿಂದೂ ಸಂಸ್ಕೃತಿಯಲ್ಲಿ ೧೨ ವರ್ಷಗಳು ಅತ್ಯಂತ ಮಹತ್ವದ ಅವಧಿ. ಆದ್ದರಿಂದ ನಾಲ್ವರು ಪದಾಧಿಕಾರಿಗಳು ಅದನ್ನು ಬೆಂಬಲಿಸಿದರು. ಬೇರೆ ಯಾವುದೇ ಹೆಸರೂ ಪ್ರಸ್ತಾಪಕ್ಕೆ ಬರಲಿಲ್ಲ. ಹೀಗಾಗಿ ಭೈಯಾಜಿ ಜೋಶಿ ಅವರನ್ನು ನಾವು ಪುನರಾಯ್ಕೆ ಮಾಡಿದೆವುಎಂದು ಸಂಘಟನೆಯ ಅಖಿಲ ಭಾರತೀಯ ಪ್ರಚಾರ ಪ್ರಮುಖ ಮನಮೋಹನ್ ವೈದ್ಯ ಹೇಳಿದರು. ಸರಕಾರ್ಯವಾಹ ಹುದ್ದೆಯು ಸಂಘಟನೆಯಲ್ಲಿ ಸರಸಂಘ ಚಾಲಕರ ಬಳಿಕದ ಮಹತ್ವದ ಹುದ್ದೆ. ಸಂಘಟನಾತ್ಮಕ ದೃಷ್ಟಿಯಿಂದ ಅವರೇ ಸಂಘದ ಮುಖ್ಯು ಕಾರ್ಯ ನಿರ್ವಾಹಕರು ಕೂಡಾ. ಸಂಘದ ಸಹ ಸಂಘಟನೆಗಳ ಜೊತೆಗಿನ ಬಾಂಧವ್ಯವನ್ನು ಅವರೇ ನಿರ್ವಹಿಸುತ್ತಾರೆ.ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರು ಜೋಶಿ ಅವರ ಸ್ಥಾನಕ್ಕೆ ಬರಲಿದ್ದಾರೆ ಎಂಬ ಊಹಾಪೋಹ ಹಿಂದೆ ಹರಡಿತ್ತು. ದತ್ತಾತ್ರೇಯ ಹೊಸಬಾಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಬಂದವರಾಗಿದ್ದು ಸಂಘಟನಾ ಕಾರ್ಯದರ್ಶಿ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

2018: ಚೆನ್ನೆ: ತಮಿಳುನಾಡು ರಾಜಕೀಯ ರಂಗಕ್ಕೆ ಪದಾರ್ಪಣ ಮಾಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಮ್ಮೆ ಹಿಮಾಲಯಕ್ಕೆ ತೆರಳಿದರು. ತಮ್ಮ ಜೀವನದಲ್ಲಿ ಮಹತ್ವದ ಕಾರ್ಯ ಕೈಗೊಳ್ಳುವ ಸಂದರ್ಭಗಳಲ್ಲಿ ಹಿಮಾಲಯಕ್ಕೆ ತೆರಳುವ ಪರಿಪಾಠವನ್ನು ಹೆಚ್ಚು ಕಡಿಮೆ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಅವರು ಪಾಲಿಸುತ್ತಾ ಬಂದಿದ್ದಾರೆ. ಹಿಮಾಲಯಕ್ಕೆ ಹೋಗಿ ಧ್ಯಾನದಲ್ಲಿ ಮಗ್ನರಾಗುವ ಸಂಪ್ರದಾಯ ಪಾಲಿಸುತ್ತಿರುವ ತಲೈವಾ, ಅವಕಾಶ ಸಿಕಿದಾಗಲೆಲ್ಲ ಹಿಮಾಲಯಕ್ಕೆ ತೆರಳುತ್ತಾರೆ.ರಜನಿಕಾಂತ್ ಅವರು ಶನಿವಾರ ಬೆಳಗ್ಗೆ ಉತ್ತರಾಖಂಡದಲ್ಲಿರುವ ದುನಾಗಿರಿಯತ್ತ ತೆರಳಿದರು. ದುನಾಗಿರಿಯಲ್ಲಿ ರಜನಿಕಾಂತ್ ಅವರು ಧ್ಯಾನ ಹಾಗೂ ಸಂತರ ಜತೆ ಕಾಲ ಕಳೆಯಲಿದ್ದಾರೆ ಎಂದು ಮೂಲಗಳು ತಿಳಿಸಿದವು.  ಹಿಮಾಲಯದತ್ತ ತೆರಳುವ ಮುನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರಾದರೂ, ಹಿಮಾಲಯ ಯಾತ್ರೆಗೆ ಸಂಬಂಧಿಸಿದಂತೆ ಅವರು ಹೆಚ್ಚಿನ ವಿವರವನ್ನೇನೂ ನೀಡಲಿಲ್ಲ. ಸುಮಾರು ವಾರಗಳ ಕಾಲ ತಾವು ತಮಿಳುನಾಡಿನಿಂದ ದೂರ ಇರಲಿದ್ದೇನೆ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದರು. ಪತ್ರಕರ್ತರ ಜೊತೆ: ಹಿಮಾಲಯದತ್ತ ಹೊರಡುವ ಮುನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಅವರು ಕೆಲವು ಪ್ರಶ್ನೆಗಳನ್ನು ಉತ್ತರಿಸುವ ಸಲುವಾಗಿ ಪತ್ರಕರ್ತರ ಜೊತೆಗೆ ನಿಂತಿದ್ದರು. ಹಿಂತಿರುಗಿದ ಬಳಿಕ ಮಹತ್ವದ ರಾಜಕೀಯ ಪ್ರಕಟಣೆ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ ಚಿತ್ರ ನಟ ನಿರಾಕರಣೆಯ ಉತ್ತರ ನೀಡಿದರು. ಹಾಲಿ ಪಯಣದ ಬಗ್ಗೆ ಕೇಳಿದ ಪ್ರಶ್ನೆಗೆಅಲ್ಲಿಗೆ ತಲುಪಿದ ಬಳಿಕ ಕನಿಷ್ಠ ೧೫ ದಿನಗಳ ಅವಧಿಗೆ ನಾನು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆಎಂದು ಚಿತ್ರ ನಟ ಉತ್ತರಿಸಿದರು. ವರದಿಗಾರರೊಬ್ಬರು ರಾಜ್ಯದಲ್ಲಿ ಮಹಿಳೆಯವರ ವಿರುದ್ಧ ಹೆಚ್ಚುತ್ತಿರುವ ಹಿಂಸೆಯ ಬಗ್ಗೆ ಅವರ ಅಭಿಪ್ರಾಯ ಕೇಳಿದರು. ಆದರೆ ರಜನಿಕಾಂತ್ ಅವರು ಅದಕ್ಕೆ ಉತ್ತರಿಸಲಿಲ್ಲ. ’ರಾಜ್ಯದಲ್ಲಿ ಒಬ್ಬರ ಬಳಿಕ ಇನ್ನೊಬ್ಬರಂತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. . ’ ಎಂದು ಪತ್ರಕರ್ತ ಹೇಳುತ್ತಿದ್ದಂತೆಯೇವಣಕ್ಕಂ’ (ಧನ್ಯವಾದಗಳು) ಎಂದು ಹೇಳುತ್ತಾ ರಜನಿಕಾಂತ್ ಮುಂದಕ್ಕೆ ನಡೆದರು.
ತಿರುಚ್ಚಿಯಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಒಬ್ಬರು ಪತಿಯ ಜೊತೆಯ ಸಾಗುತ್ತಿದ್ದ ವ್ಯಕ್ತಿಯೊಬ್ಬರ ಬೈಕ್ ಗೆ ಒದೆದ ಪರಿಣಾಮವಾಗಿ ೩೪ರ ಹರೆಯದ ಉಷಾ ಎಂಬವರು ಸಾವನ್ನಪ್ಪಿದ ಘಟನೆ ಮತ್ತು ಚೆನ್ನೈಯ ಕಾಲೇಜು ಒಂದರಲ್ಲಿ ೧೮ರ ಹರೆಯದ ವಿದ್ಯಾರ್ಥಿನಿ ಒಬ್ಬಳನ್ನು ಇರಿದು ಕೊಂದ ಘಟನೆಗಳ ಬಗ್ಗೆ ರಜನಿಕಾಂತ್ ಅವರ ಅಭಿಪ್ರಾಯ ಪಡೆಯಲು ಯತ್ನಿಸಿದ್ದರು. ಮಹಿಳೆಯರ ವಿರುದ್ಧದ ಹಿಂಸಾಚಾರದ ಬಗ್ಗೆ ರಜನಿಕಾಂತ್ ಅವರು ಯಾವುದೇ ಉತ್ತರ ನೀಡದೆ ಹೋದ ಬಗ್ಗೆ ಜಾಲತಾಣದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಹಲವರು ಘಟನೆಗಳನ್ನು ಕನಿಷ್ಠ ಪಕ್ಷ ಖಂಡಿಸುವಲ್ಲಿ ಕೂಡಾ ಅವರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈ ಹಿಂದಿನ ಹಿಮಾಲಯ ಭೇಟಿಯ ನಂತರ ಕಾಕತಾಳೀಯ ಎಂಬಂತೆ ರಜನಿಕಾಂತ್ ಜೀವನದಲ್ಲಿ ಪ್ರಮುಖ ಘಟನೆಗಳು ಸಂಭವಿಸಿದ್ದವು. ಪ್ರಸಕ್ತ ವರ್ಷದಲ್ಲಿ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸಿದ್ದಾರೆ. ಅದರಲ್ಲಿ ಯಶಸ್ಸು  ಕಾಣುವ ಸಲುವಾಗಿ  ಅವರು ಹಿಮಾಲಯಕ್ಕೆ ತೆರಳುತ್ತಿದ್ದಾರೆ ಎಂದು ಹೇಳಲಾಯಿತು.  ಇದರ ಜೊತೆಗೆ ಅವರ ಭಾರಿ ವೆಚ್ಚದ ಸಿನಿಮಾಗಳಾದ ಕಾಲಾ ಮತ್ತು . ಸಿನಿಮಾ ತೆರೆಕಾಣಲು ಸಿದ್ಧವಾಗಿವೆ. ರಜನಿಕಾಂತ್ ಅವರು ಹಿಮಾಲಯದ ಧ್ಯಾನಕೇಂದ್ರದಲ್ಲಿ ಸಮಯ ಕಳೆಯಲಿದ್ದಾರೆ ಎಂದು ವರದಿ ತಿಳಿಸಿತು.  ಹಿಮಾಲಯದ ಬುಡದಲ್ಲಿ ಭಾರತೀಯ ಯೋಗ ಸತ್ಸಂಗ ಸಮಾಜ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಜನಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಭಾರತೀಯ ಯೋಗ ಸತ್ಸಂಗ ಸಮಾಜವನ್ನು ೧೯೧೭ರಲ್ಲಿ ಪರಮಹಂಸ ಯೋಗಾನಂದ ಅವರು ಸ್ಥಾಪಿಸಿದ್ದರು. ರಜನಿಕಾಂತ್ ಅವರು ಪುರಾತನ ಸ್ವಾಮೀಜಿ ಎಂದೇ ಹೇಳಲಾಗುತ್ತಿರುವ ಮಹಾವತಾರ್ ಬಾಬಾಜಿ ಅವರ ಗುಹೆಯತ್ತ ತೆರಳಿದ್ದಾರೆ ಎಂದು ವರದಿ ಹೇಳಿತು. ಮಹಾವತಾರ್ ಬಾಬಾಜಿ:  ೨೦೦೦ ಸಾವಿರ ವರ್ಷಗಳಿಂದ ಹಿಮಾಲಯ ಪರ್ವತದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂದು ನಂಬಲಾಗಿರುವ ಮಹಾವತಾರ್ ಬಾಬಾಜಿ ಕುರಿತು ಯಾವುದೇ ಐತಿಹಾಸಿಕ ಉಲ್ಲೇಖಗಳು ಲಭ್ಯವಿಲ್ಲ. ಆದರೆ ಪರಮಹಂಸ ಯೋಗಾನಂದರ ಆತ್ಮಕಥೆಯಲ್ಲಿ ಇವರ ಕುರಿತಾಗಿ ಹೇಳಿರುವಂತಹ ವಿಷಯಗಳೇ ಇವರ ಇರುವಿಕೆಗೆ ಇರುವ ದಾಖಲೆಗಳು ಎನ್ನಲಾಗಿದೆ. ಪರಮಹಂಸ ಯೋಗಾನಂದರ ಪ್ರಕಾರ ಬಾಬಾಜಿಯವರು ಒಬ್ಬ ಅವತಾರ ಪುರುಷರಾಗಿದ್ದು, ಸಹಸ್ರಾರು ವರ್ಷಗಳಿಂದ ಜೀವಂತವಾಗಿದ್ದಾರೆ. ಇವರು  ಕೆಲವರಿಗೆ ಮಾತ್ರ  ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.
 
2018: ಕೋಲ್ಕತ: ಪಶ್ಚಿಮ ಬಂಗಾಳದ ಕೆಲವು ಪ್ರಮುಖ ಬುದ್ಧಿಜೀವಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಮೂಲಕಹಿಂಸಾಚಾರಕ್ಕೆ ಪ್ರಚೋದನೆ ಮತ್ತು ನೆರವು ನೀಡುತ್ತಿರುವುದಕ್ಕಾಗಿ’ ತ್ರಿಪುರ ರಾಜ್ಯಪಾಲ ತಥಾಗತ ರಾಯ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.  ಅಗರ್ತಲದಲ್ಲಿ ಲೆನಿನ್ ಪ್ರತಿಮೆ ಉರುಳಿಸಿದ್ದನ್ನು ಸಮರ್ಥಿಸಿ ತಥಾಗತ ರಾಯ್ ಅವರು ಮೈಕ್ರೋ ಬ್ಲಾಗಿಂಗ್ ಸೈಟಿನಲ್ಲಿ ಪೋಸ್ಟ್ ಪ್ರಕಟಿಸಿದ ಕೆಲವು ದಿನಗಳ ಬಳಿಕ ಬೆಳವಣಿಗೆ ನಡೆಯಿತು.  ‘ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವು ಏನು ಮಾಡಬಹುದೋ ಅದನ್ನು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಇನ್ನೊಂದು ಸರ್ಕಾರ ತೊಡೆದುಹಾಕಬಹುದು. ಮತ್ತು ಇದಕ್ಕೆ ವಿರುದ್ಧವಾಗಿಯೂ ವರ್ತಿಸಬಹುದುಎಂದು ರಾಯ್ ಟ್ವೀಟ್ ಮಾಡಿದ್ದರು. ಸಂವಿಧಾನಬದ್ಧ ಹುದ್ದೆಯನ್ನು ಹೊಂದಿರುವ ಯಾರೇ ರಾಜ್ಯಪಾಲರು ರಾಯ್ ಅವರು ಮಾರ್ಚ್ ಮತ್ತು ೭ರಂದು ಟ್ವಿಟ್ಟರ್ ನಲ್ಲಿ ಹೇಳಿದ್ದನ್ನು ಹೇಳಲು ಸಾಧ್ಯವಿಲ್ಲ. ರಾಯ್ ಅವರ ಟೀಕೆಗಳು ರಾಷ್ಟ್ರದಲ್ಲಿ ಪ್ರಕ್ಷುಬ್ಧತೆಯನ್ನು ಹುಟ್ಟುಹಾಕುತ್ತಿವೆ. ಇದು ನಿಮ್ಮ ಗಮನಕ್ಕೂ ಬಂದಿರಬಹುದು. ದುರದೃಷ್ಟಕರವಾಗಿ ತಮ್ಮ ಸಂವಿಧಾನಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಬದಲಾಗಿ, ಅವರು ಹಿಂಸೆಗೆ ಪ್ರಚೋದನೆ ಮತ್ತು ನೆರವು ನೀಡುತ್ತಿದ್ದಾರೆ. ಅವರ ವಿರುದ್ಧ ಅತ್ಯುನ್ನತವಾದ ಸಂವಿಧಾನಬದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆಎಂದು ಶುಕ್ರವಾರ ಕಳುಹಿಸಲಾದ ಪತ್ರ ಹೇಳಿತು. ಪತ್ರಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿರಸೇಂದು ಮುಖ್ಯೋಪಾಧ್ಯಾಯ, ಕಾದಂಬರಿಕಾರ ನಬನೀತ ದೇವ್ ಸೆನ್, ಮಾಜಿ ತೃಣಮೂಲ ಕಾಂಗ್ರೆಸ್ ಸಂಸತ್ ಸದಸ್ಯ ಕಬೀರ್ ಸುಮನ್ ಮತ್ತು ಇಂಡೋಲಜಿಸ್ಟ್ ನೃಸಿಂಘ ಪ್ರಸಾದ ಭಾದುರಿ ಸಹಿ ಮಾಡಿದ್ದರು. ಏನಿದ್ದರೂ, ರಾಜ್ಯಪಾಲ ತಥಾಗತ ರಾಯ್ ಅವರು ತಮ್ಮ ವಿರುದ್ಧ ಮಾಡಲಾದ ಎಲ್ಲ ಆಪಾದನೆಗಳನ್ನೂ ತಿರಸ್ಕರಿಸಿದರು.ವಾಸ್ತವವಾಗಿ ಇದು ಬಡ ಆತ್ಮಗಳ ತಪ್ಪಲ್ಲ. ಇವರು ಪತ್ರಕ್ಕೆ ಸಹಿ ಹಾಕಲು ಬೆದರಿರುವ ದೊಡ್ಡವರನ್ನು ಅವಲಂಬಿಸಿದ್ದಾರೆಎಂದು ರಾಯ್ ಪ್ರತಿಕ್ರಿಯಿಸಿದರು.

2009: ಶಂಕಿತ ಎಲ್‌ಟಿ ಟಿಇ ಆತ್ಮಾಹುತಿ ಬಾಂಬರ್ ದಕ್ಷಿಣ ಶ್ರೀಲಂಕಾದ ಮಟಾರ ನಗರದ ಮಸೀದಿಯೊಂದರ ಮೇಲೆ ನಡೆಸಿದ ದಾಳಿಯಲ್ಲಿ 15 ಜನ ಮೃತರಾಗಿ ಸಚಿವರೊಬ್ಬರು ಸೇರಿ ಐವತ್ತು ಮಂದಿ ಗಾಯಗೊಂಡ ಘಟನೆ ಘಟಿಸಿತು. ಈದ್ ಮಿಲಾದ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಜನರು ಸೇರಿದ್ದಾಗ ಆತ್ಮಾಹುತಿ ಬಾಂಬರ್ ದಾಳಿ ನಡೆಯಿತು ಎಂದು ಪೊಲೀಸರು ಹೇಳಿದರು. ಎಲ್‌ಟಿಟಿಇಗೆ ಸೇರಿದ್ದ ಬಾಂಬರ್ ಮಸೀದಿಯತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದ ಆರು ಸಚಿವರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿದ ಎಂದು ಸೇನಾ ಮೂಲಗಳು ಹೇಳಿದವು.

2009: ಹಣವನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಚಾಂದ್ರಮಾನ ಹೊಸ ವರ್ಷ ಆಚರಣೆಗಾಗಿ ಮನೆಯಲ್ಲಿರುವ 70 ವರ್ಷ ವಯಸ್ಸಿನ ತಾಯಿಯ ಜತೆಗೂಡಲು 800 ಕಿ.ಮೀ. ದೂರವನ್ನು ಸತತ 34 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಕ್ರಮಿಸಿದ ಘಟನೆ ಚೀನಾದಲ್ಲಿ ನಡೆಯಿತು. ಲೀ ಹೈಟಾವೊ (30) ಕಾಲ್ನಡಿಗೆಯಲ್ಲಿ 800 ಕಿ.ಮೀ. ಕ್ರಮಿಸಿ ಮನೆ ಸೇರಿದ ವ್ಯಕ್ತಿ. ಮಧ್ಯ ಚೀನಾದ ಹೆನನ್ ಪ್ರಾಂತ್ಯದವನಾದ ಹೈಟಾವೋ ವೃತ್ತಿಯಲ್ಲಿ ವಲಸೆ ಕಾರ್ಮಿಕ. ಬೇಸಗೆಯ ಹಬ್ಬವನ್ನು ತನ್ನ ತಾಯಿ ಜೊತೆ ಸೇರಿ ಆಚರಿಸಲು ಬೀಜಿಂಗ್‌ನಿಂದ ಫೆ. 3ರಂದು ಕಾಲ್ನಡಿಗೆ ಆರಂಭಿಸಿ ಮಾರ್ಚ್ 9ರಂದು ಝೆಂಗ್‌ರೆವ್‌ನಲ್ಲಿರುವ ಮನೆಗೆ ತಲುಪಿದ್ದಾನೆ ಎಂದು ದಾಹೆ ದಿನಪತ್ರಿಕೆ ವರದಿ ಮಾಡಿತು. ಮಂಗೋಲಿಯಾದ ಸ್ವಾಯತ್ತ ವಲಯದಲ್ಲಿ ವೆಲ್ಡರ್ ಆಗಿ ಲೀ ಹೈಟಾವೋ ದುಡಿಯುತ್ತಿದ್ದ. ಜನವರಿ 21ರಂದು ಉತ್ತರ ಚೀನಾದ ಬಾಟೋವ್ ರೈಲ್ವೆ ನಿಲ್ದಾಣದಲ್ಲಿ ಊರಿಗೆ ತೆರಳಲು ಟಿಕೆಟ್ ಖರೀದಿಸುವ ಮೊದಲು ಆತನ ಬಳಿಯಲ್ಲಿದ್ದ 2,000 ಯುವಾನ್ (290 ಡಾಲರ್) ಮೊತ್ತದ ಹಣ ಕಳ್ಳತನವಾಗಿತ್ತು. ಆನಂತರ ಬೀಜಿಂಗ್‌ನಿಂದ ಮನೆಗೆ ಕಾಲ್ನಡಿಗೆಯಲ್ಲಿ ಹೋಗಲು ನಿರ್ಧರಿಸಿದ ಲೀ ಪ್ರಯಾಣದ ಉದ್ದಕ್ಕೂ ಖಾಲಿ ನೀರಿನ ಬಾಟಲಿಗಳನ್ನು ಹೆಕ್ಕಿ ಅವುಗಳ ಮಾರಾಟದಿಂದ ಬಂದ ಹಣದಿಂದ ಆಹಾರ ಸೇವಿಸುತ್ತಿದ್ದ. ರಾತ್ರಿ ವೇಳೆ ತುಂಬಾ ಚಳಿ ಇದ್ದುದರಿಂದ ಹಗಲು ವಿಶ್ರಾಂತಿ ಪಡೆಯುತ್ತಿದ್ದ ಎಂದು ಓರಿಯೆಂಟ್ ಪತ್ರಿಕೆ ವರದಿ ಹೇಳಿತು.

2009: ಬಡ್ತಿಗೆ ಪದವೀಧರರು ಹಾಗೂ ಡಿಪ್ಲೊಮಾ ಎಂಜಿನಿಯರುಗಳನ್ನು ಸರ್ಕಾರ ಸಮಾನವಾಗಿ ಪರಿಗಣಿಸಿದರೆ ಅದು ಅಸಾಂವಿಧಾನಿಕ ಎನಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಡಿಪ್ಲೊಮಾ ಎಂಜಿನಿಯರುಗಳನ್ನು ಪದವೀಧರರಿಗೆ ಸಮಾನರೆಂದು ಪರಿಗಣಿಸಿದರೆ ಸಂವಿಧಾನದ 14 ನೇ ಪರಿಚ್ಛೇದವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂಬ ಪದವೀಧರರ ವಾದವನ್ನು ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಹಾಗೂ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠ ತಳ್ಳಿಹಾಕಿತು. ಸಮಾನರನ್ನು ಅಸಮಾನರಂತೆ ಪರಿಗಣಿಸುವುದು ಮಾತ್ರವಲ್ಲ; ಅಸಮಾನರನ್ನು ಸಮಾನರೆಂಬಂತೆ ಪರಿಗಣಿಸುವುದು ಸಂವಿಧಾನ ಉಲ್ಲಂಘಿಸಿದಂತಾಗುತ್ತದೆ ಎಂದು ದಿಲೀಪ್ ಕುಮಾರ್ ಜಾರ್ಜ್ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಲಾಗಿತ್ತು.

2009: ಇಂಗ್ಲಿಷ್ ಸಾಹಿತ್ಯ ಲೋಕದ ಮೇರು ಪರ್ವತ ಹಾಗೂ ಶ್ರೇಷ್ಠ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರನ ನಾಟಕಗಳಿಗೆ ಮೀಸಲಾಗಿದ್ದ ಮೊದಲ ರಂಗಭೂಮಿ ಎಂದೇ ನಂಬಲಾದ ಸ್ಥಳವನ್ನು ಉತ್ಖನನದ ಮೂಲಕ ಪತ್ತೆ ಹಚ್ಚಿರುವುದಾಗಿ ಪುರಾತತ್ವ ಶಾಸ್ತ್ರಜ್ಞರ ತಂಡವೊಂದು ಪ್ರಕಟಿಸಿತು. ಈ ರಂಗಸ್ಥಳವನ್ನು 1576ರಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಯಿತು. ಇದು ಪೂರ್ವ ಲಂಡನ್ನಿನ ಶೋರ್‌ಡಿಚ್‌ನಲ್ಲಿರುವ ಜಗತ್ತಿನ ಮೊದಲ ರಂಗಸ್ಥಳ ಎಂದೇ ಈತನಕ ನಂಬಲಾಗಿದ್ದ ಕಟ್ಟಡದ ಗೋಡೆಗೆ ಅಂಟಿಕೊಂಡೇ ಇರುವುದು ಬೆಳಕಿಗೆ ಬಂತು.

2009: 'ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘ ನೀಡುವ 'ಸವಿತಾ ಕಲಾ ರತ್ನ' ಪ್ರಶಸ್ತಿಯನ್ನು ಸಂಗೀತ ವಿದ್ವಾಂಸ ಡಾ. ಎಂ.ಬಾಲಮುರಳಿ ಕೃಷ್ಣ ಅವರಿಗೆ ಬೆಂಗಳೂರಿನ ಪುರಭವನದಲ್ಲಿ ಪ್ರದಾನ ಮಾಡಲಾಯಿತು. ಡಾ. ಬಾಲಮುರಳಿಕೃಷ್ಣ ಅವರೊಂದಿಗೆ ಶಾಸ್ತ್ರೀಯ ವಯೋಲಿನ್ ವಾದಕ ಎಂ.ಚಂದ್ರಶೇಖರನ್, ಡೋಲು ವಾದಕ ಡಾ. ಎ.ಆರ್.ಮುನಿರತ್ನಂ ಅವರಿಗೂ 'ಸವಿತಾ ಕಲಾ ರತ್ನ' ಪುರಸ್ಕಾರ ನೀಡಿ ಸಂಘವು ಗೌರವ ಸಲ್ಲಿಸಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಭಾರತಕ್ಕೆ ಎಂಟು ಬಾರಿ ಚಿನ್ನದ ಪದಕಗಳನ್ನು ತಂದುಕೊಟ್ಟ ಹಾಕಿ ಆಟಗಾರರು 1928ರಲ್ಲಿ ರಂಗಪ್ರವೇಶ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಸ್ಯಾಂಟಿಯಾಗೋದಲ್ಲಿ ಒಲಿಂಪಿಕ್ಸ್ ಪ್ರವೇಶ ಯತ್ನದಲ್ಲಿ ವಿಫಲರಾದರು. ಸ್ಯಾಂಟಿಯಾಗೋದ ಪ್ರಿನ್ಸ್ ಆಫ್ ವೇಲ್ಸ್ ಕಂಟ್ರಿ ಕ್ಲಬ್ ಮೈದಾನದಲ್ಲಿ ನಡೆದ ವಿಶ್ವ ಹಾಕಿ ಅರ್ಹತಾ ಪಂದ್ಯದ ಅಂತಿಮ ಸುತ್ತಿನಲ್ಲಿ, ಪ್ರಭೋದ್ ಸಿಂಗ್- ದಿಲೀಪ್ ಟರ್ಕಿ ಬಳಗವನ್ನು 2-0 ಗೋಲುಗಳಿಂದ ಪರಾಭವಗೊಳಿಸುವ ಮೂಲಕ ಬ್ರಿಟನ್ ಭಾರತದ ಒಲಿಂಪಿಕ್ಸ್ ಪ್ರವೇಶ ಕನಸನ್ನು ನುಚ್ಚುನೂರು ಮಾಡಿತು. ಬ್ಯಾರಿ ಮಿಡ್ಲ್ ಟನ್ ಮತ್ತು ರಿಚರ್ಡ್ ಮ್ಯಾಂಟೆಲ್ ಅವರು ಬ್ರಿಟನನ್ನು ಗೆಲುವಿನತ್ತ ಮುನ್ನಡೆಸಿ, ತಂಡಕ್ಕೆ 2008ರ ಬೀಜಿಂಗ್ ಒಲಿಂಪಿಕ್ಸ್ ಪ್ರವೇಶಕ್ಕೆ ಅರ್ಹತೆ ತಂದುಕೊಟ್ಟರು. ಕಳೆದ 80 ವರ್ಷಗಳ ಅವದಿಯಲ್ಲಿ ಭಾರತ ಹಾಕಿ ತಂಡ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆಯದಿರುವುದು ಇದೇ ಮೊದಲು. 1928 ರಿಂದಲೂ ಭಾರತ ಹಾಕಿ ತಂಡ ಒಲಿಂಪಿಕ್ ಕೂಟದ ಅವಿಭಾಜ್ಯ ಅಂಗವಾಗಿ ಬದಲಾಗಿತ್ತು.

2008: ಮೇಘಾಲಯದಲ್ಲಿ ನೂತನ ಸರ್ಕಾರ ರಚಿಸುವುದಕ್ಕೆ ಬಹುಮತ ಹೊಂದಿರದ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ. ಡಿ. ಲಪಾಂಗ್ ಅವರು ಈದಿನ ಸಂಜೆ ಅಧಿಕಾರ ಸ್ವೀಕರಿಸಿದರು. ಮಾ.3ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ 60 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗಳಿಸಿತ್ತು. ಏಕೈಕ ದೊಡ್ಡ ಪಕ್ಷದ ನೆಲೆಯಲ್ಲಿ ರಾಜ್ಯಪಾಲ ಎಸ್. ಎಸ್. ಸಿಧು ಅವರು ಸರ್ಕಾರ ರಚನೆಗೆ ಲಪಾಂಗ್ ಅವರಿಗೆ ಆಹ್ವಾನ ನೀಡಿದರು.

2008: ಮುಂಬೈ ಸರಣಿ ಬಾಂಬ್ ಸ್ಫೋಟ ಘಟನೆಗೆ ಮುನ್ನ ನಟ ಸಂಜಯ್ ದತ್ ಗೆ ಎಕೆ-56 ರೈಫಲ್ ಒದಗಿಸಿದ ಆಪಾದನೆ ಹೊತ್ತ ಚಿತ್ರ ನಿರ್ಮಾಪಕ ಸಮೀರ್ ಹಿಂಗೋರಾ ಅವರ ವಿದೇಶಯಾನಕ್ಕೆ ಅವಕಾಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

2008: ಮಲೇಷ್ಯಾ ಪ್ರಧಾನಿಯಾಗಿ ಸತತ ಎರಡನೇ ಅವಧಿಗೆ ಅಬ್ದುಲ್ಲಾ ಅಹ್ಮದ್ ಬದಾವಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಸಂವಿಧಾನ ಮುಖ್ಯಸ್ಥರಾದ ದೊರೆ ಮಿಜಾನ್ ಜೈನಲ್ ಅಬಿದಿನ್ ಮತ್ತು ಡಜನ್ನಿನಷ್ಟು ಸರ್ಕಾರಿ ಅತಿಥಿ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಡಳಿತರೂಢ ರಾಜಕೀಯ ಗುಂಪಿನ ನಾಯಕತ್ವವನ್ನು ತ್ಯಜಿಸಬೇಕೆಂಬ ವಿರೋಧಿಗಳ ಒತ್ತಾಯದ ನಡುವೆ ಬದಾವಿ 2ನೇ ಅವಧಿಗೂ ಪ್ರಧಾನಿಯಾಗಿ ಮುಂದುವರೆದರು.

2007: ಮುಖೇಶ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ಮತ್ತು ಇಂಡಿಯನ್ ಪೆಟ್ರೊ ಕೆಮಿಕಲ್ಸ್ ಕಾರ್ಪೋರೇಷನ್ ಲಿಮಿಟೆಡ್ (ಐಪಿಸಿಎಲ್) ವಿಲೀನಕ್ಕೆ ಉಭಯ ಕಂಪೆನಿಗಳ ನಿರ್ದೇಶಕರ ಮಂಡಳಿ ಒಮ್ಮತದ ಒಪ್ಪಿಗೆ ನೀಡಿದವು. ಈ ವಿಲೀನದಿಂದಾಗಿ ಆರ್ ಐ ಎಲ್ ಒಂದು ಲಕ್ಷ ಕೋಟಿ ರೂಪಾಯಿ ಬಂಡವಾಳದ ಕಂಪೆನಿಯಾಗಿ ಹೊರಹೊಮ್ಮುವುದು.

2007: ಖ್ಯಾತ ರಂಗಭೂಮಿ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಂದೋಡಿ ಶಾಂತರಾಜ್ (75) ನಿಧನರಾದರು. ಶಾಂತರಾಜ್ ಅವರು ಚಿಂದೋಡಿ ಲೀಲಾ ಅವರ ಅಣ್ಣ. ಕನ್ನಡ ರಂಗಭೂಮಿ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶಾಂತರಾಜ್ ಟಿಪ್ಪು ಸುಲ್ತಾನ್ ನಾಟಕದಲ್ಲಿ ಮೀರ್ ಸಾದಕ್ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರು.

2007: ಮೇಘಾಲಯದ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿದ್ದ ಹಗ್ಗ ಜಗ್ಗಾಟ ಕೊನೆಗೊಂಡು ಕ್ಷಿಪ್ರ ಬೆಳವಣಿಗೆಯಲ್ಲಿ ಡಿ.ಡಿ. ಲಪಾಂಗ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2007: ಉತ್ತರ ಪ್ರದೇಶದ ಬಾಬನ್ ಪರ್ವ ಗ್ರಾಮದ ರಾಮ್ ಜಿ ದುಬೇ ಅವರ ಪತ್ನಿ 21ರ ಹರೆಯದ ಬಬಿತಾ ಎಂಬ ಮಹಿಳೆ ಐವರು ಮಕ್ಕಳಿಗೆ ಜನ್ಮನೀಡಿದಳು. ಮೂರು ಹೆಣ್ಣು, ಎರಡು ಗಂಡು ಮಗುವಾಗಿದ್ದು ಎಲ್ಲವೂ ಆರೋಗ್ಯಪೂರ್ಣವಾಗಿದ್ದು ಎಲ್ಲವೂ ತಲಾ ಒಂದು ಕಿ.ಗ್ರಾಂ. ತೂಗುತ್ತಿದ್ದವು.

2007: ಪ್ರಚಾರ ಪಡೆಯುವ ಸಲುವಾಗಿ ಉಗ್ರಗಾಮಿಗಳ ಜೊತೆಗೆ `ನಕಲಿ ಘರ್ಷಣೆ' ದಾಖಲೆಗಳನ್ನು ಸೃಷ್ಟಿಸಿ `ನಕಲಿ ಘರ್ಷಣೆ ಬ್ರಿಗೇಡಿಯರ್' ಎಂದೇ ಖ್ಯಾತರಾದ ಸುರೇಶ ಎಸ್. ರಾವ್ ಅವರಿಗೆ ಈ ಅಪರಾಧಕ್ಕಾಗಿ ವಿಧಿಸಲಾಗಿದ್ದ ಸೇವೆಯಿಂದ ವಜಾ ಶಿಕ್ಷೆಯನ್ನು ಸೇನಾ ನ್ಯಾಯಾಲಯವು ಸ್ಪಲ್ಪ ಕಡಿಮೆಗೊಳಿಸಿ, ತೀಕ್ಷ್ಣ ವಾಗ್ದಂಡನೆ ಹಾಗೂ 7 ವರ್ಷಗಳ ಹಿರಿತನ ಕಡಿತದ ಶಿಕ್ಷೆಗೆ ಗುರಿಪಡಿಸಿತು. ಅವರನ್ನು ಕೇಂದ್ರ ಭಾರತದಲ್ಲಿನ ವಿಭಾಗದ ಡೆಪ್ಯುಟಿ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ನೇಮಿಸಲಾಯಿತು. ರಾವ್ ಮತ್ತು ಅವರ ಬೆಟಾಲಿಯನ್ ನ ಕಮಾಂಡರುಗಳಲ್ಲಿ ಒಬ್ಬರಾದ ಕರ್ನಲ್ ಎಚ್.ಎಸ್. ಕೊಹ್ಲಿ ಅವರನ್ನು ಉಗ್ರಗಾಮಿಗಳ ಜೊತೆಗೆ `ನಕಲಿ ಘರ್ಷಣೆ' ದಾಖಲೆ `ಸೃಷ್ಟಿ' ಅಪರಾಧಕ್ಕಾಗಿ ಸೇನಾ ನ್ಯಾಯಾಲಯವು ವಿಚಾರಣೆಗೆ ಗುರಿಪಡಿಸಿ, ತಪ್ಪಿಸಸ್ಥರೆಂದು ತೀರ್ಮಾನಿಸಿತ್ತು. ಸತ್ತ ಉಗ್ರಗಾಮಿಗಳ ಚಿತ್ರಗಳನ್ನು ಹೊಂದಿಸಿ ಉಗ್ರಗಾಮಿಗಳ ಜೊತೆ ಘರ್ಷಣೆ ನಡೆಸಿದಂತೆ ದಾಖಲೆ ಸೃಷ್ಟಿಸುವ ಮೂಲಕ ಇವರು ಪ್ರಚಾರ ಪಡೆದುಕೊಳ್ಳುತ್ತಿದ್ದರು. 2003ರಲ್ಲಿ ಅಸ್ಸಾಮಿನ ಕಾಚಾರ್  ಜಿಲ್ಲೆಯಲ್ಲಿ ವಿವಿಧ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ತೀವ್ರ ರೀತಿಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಇವರು ಈ ಕೃತ್ಯ ಎಸಗಿದ್ದರು. ಈಗ ಸೇನಾ ಹಿರಿತನ ಕಡಿತ ಶಿಕ್ಷೆಯಿಂದ ಅಪರಾಧಿ ಬ್ರಿಗೇಡಿಯರ್ ಗೆ ಅಂದಾಜು 7ರಿಂದ 8 ಲಕ್ಷ ರೂಪಾಯಿಗಳಷ್ಟು ನಿವೃತ್ತಿ ಕಾಲದ ಲಾಭಗಳು ಕೈತಪ್ಪುವುವು.

2006: ಫೋಬ್ಸ್ ನಿಯತಕಾಲಿಕ ಹೊಸದಾಗಿ ಬಿಡುಗಡೆ ಮಾಡಿದ ಈ ವರ್ಷದ ವಿಶ್ವದ ಕೋಟ್ಯಧಿಪತಿಗಳ ಪಟ್ಟಿಗೆ ಹೊಸದಾಗಿ 10 ಭಾರತೀಯರ ಹೆಸರು ಸೇರಿತು. ಉಕ್ಕು ಉದ್ಯಮದ ದೊರೆ ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಜಗತ್ತಿನ ಐದನೇ ಅತಿದೊಡ್ಡ ಶ್ರೀಮಂತ ಎಂಬ ಗೌರವಕ್ಕೆ ಪಾತ್ರರಾದರು. 5000 ಕೋಟಿ ಡಾಲರ್ (2.25 ಲಕ್ಷ ಕೋಟಿ ರೂಪಾಯಿ) ಒಡೆಯ ಮೈಕ್ರೋಸಾಫ್ಟ್ ಉದ್ಯಮಿ ಬಿಲ್ ಗೇಟ್ಸ್ ಪ್ರಥಮ ಸ್ಥಾನದ ಗೌರವ ಪಡೆದರು.

2006: ಕಾರ್ಮಿಕ ಕಾಯ್ದೆ ಉಲ್ಲಂಘನೆ ಮತ್ತು ತಮ್ಮ ನೌಕರರಿಗೆ ವಿಮಾ ಸವಲತ್ತು ಒದಗಿಸಲು ವಿಫಲರಾದುದಕ್ಕಾಗಿ ಖ್ಯಾತ ಪಾಪ್ ಹಾಡುಗಾರ ಮೈಕೆಲ್ ಜಾಕ್ಸನ್ ಗೆ ಕ್ಯಾಲಿಫೋರ್ನಿಯಾ ಅಧಿಕಾರಿಗಳು 1,69,000 ಡಾಲರುಗಳ ದಂಡ ವಿಧಿಸಿ, ಜಾಕ್ಸನ್ ಅವರ ನೆದರ್ ಲ್ಯಾಂಡ್ ವ್ಯಾಲಿ ರಾಂಚನ್ನು ಮುಚ್ಚಲು ಆಜ್ಞಾಪಿಸಿದರು.

1985: ಮೆಲ್ಬೋರ್ನಿನಲ್ಲಿ ಪಾಕಿಸ್ಥಾನವನ್ನು ಪರಾಭವಗೊಳಿಸುವ ಮೂಲಕ ಭಾರತವು `ಬೆನ್ಸನ್ ಅಂಡ್ ಹೆಜೆಸ್' ವಿಶ್ವ ಕ್ರಿಕೆಟ್ ಚಾಂಪಿಯನ್ ಶಿಪ್ ಗೆದ್ದುಕೊಂಡಿತು. ರವಿಶಾಸ್ತ್ರಿ ಅವರನ್ನು `ಚಾಂಪಿಯನ್ನರ ಚಾಂಪಿಯನ್' ಎಂದು ಘೋಷಿಸಲಾಯಿತು.

1985: ಕೇವಲ 13 ತಿಂಗಳುಗಳ ಕಾಲ ಸೋವಿಯತ್ ಧುರೀಣರಾಗಿದ್ದ ಕೊನ್ ಸ್ಟಾಂಟಿನ್ ಯು. ಚೆರ್ನೆಂಕೊ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸಾವಿನ ಸುದ್ದಿಯನ್ನು ಮಾರ್ಚ್ 11ರಂದು ಪ್ರಕಟಿಸಲಾಯಿತು. ಪಾಲಿಟ್ ಬ್ಯೂರೋ ಸದಸ್ಯ ಮಿಖಾಯಿಲ್ ಎಸ್. ಗೊರ್ಬಚೆವ್ ಅವರನ್ನು ಚೆರ್ನೆಂಕೊ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.

1982: ಸೂರ್ಯನ ಸುತ್ತ ಸುತ್ತುವ ಒಂಬತ್ತು ಗ್ರಹಗಳು ಸೂರ್ಯನ ಒಂದೇ ಬದಿಯಲ್ಲಿ ಸಾಲಾಗಿ ಕಂಡು ಬಂದವು.

1958: ಶರೋನ್ ಸ್ಟೋನ್ ಹುಟ್ಟಿದರು. ಅಮೆರಿಕಾದ ಚಿತ್ರನಟಿಯಾದ ಈಕೆ `ಬೇಸಿಕ್ ಇನ್ ಸ್ಟಿಂಕ್ಟ್' ಚಿತ್ರದ ಪಾತ್ರದಿಂದ ವಿಶ್ವ ವಿಖ್ಯಾತಿ ಗಳಿಸಿದರು.

1957: ಒಸಾಮಾ ಬಿನ್ ಲಾಡೆನ್ (1957-2001ರಿಂದ ನಾಪತ್ತೆ) ಹುಟ್ಟಿದ ದಿನ. 2001ರ ಸೆಪ್ಟೆಂಬರಿನಲ್ಲಿ ಅಮೆರಿಕಾದ ನ್ಯೂಯಾರ್ಕಿನಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ಉಗ್ರಗಾಮಿ ದಾಳಿಯ ರೂವಾರಿಯಾದ ಈತನಿಗಾಗಿ ನಿತ್ಯ ಹುಡುಕಾಟ ನಡೆದಿದೆ.

1947: ಕಲಾವಿದ ಸಿ. ಚಂದ್ರಶೇಖರ್ ಜನನ.

1944: ಕಲಾವಿದ ಎಂ.ಆರ್. ರಾಜಶೇಖರ ಜನನ.

1928: ಜೇಮ್ಸ್ ಅರ್ಲ್ ರೇ (1928-98) ಹುಟ್ಟಿದ ದಿನ. ಈತ ಅಮೆರಿಕದ ನಾಗರಿಕ ಹಕ್ಕುಗಳ ಧುರೀಣ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಕೊಲೆಗೈದ. ಈ ಅಪರಾಧಕ್ಕಾಗಿ 1969ರಲ್ಲಿ ಈತನಿಗೆ 99 ವರ್ಷಗಳ ಸೆರೆವಾಸ ವಿಧಿಸಲಾಯಿತು.

1921: ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದೇ ಹೆಸರಾಗಿದ್ದ ಎಂ.ವಿ. ರಾಜಮ್ಮ (10-3-1921ರಿಂದ 6-7-2000) ಅವರು ನಂಜಪ್ಪ- ಸುಬ್ಬಮ್ಮ ದಂಪತಿಯ ಮಗಳಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ಅಭಿನಯದ ಗೀಳು ಹತ್ತಿಸಿಕೊಂಡು ವೃತ್ತಿ ರಂಗಭೂಮಿಯಲ್ಲಿ ಖ್ಯಾತಿ ಪಡೆದ ರಾಜಮ್ಮ 1936ರಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಕಾಲಿಟ್ಟರು. `ಸಂಸಾರ ನೌಕೆ' ಅವರು ನಟಿಸಿದ ಮೊದಲ ಚಿತ್ರ. ನಂತರ ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚಿದರು. 1943ರಲ್ಲಿ ರಾಧಾ ರಮಣ ಚಿತ್ರವನ್ನು ನಿರ್ಮಿಸುವ ಮೂಲಕ ಮೊತ್ತ ಮೊದಲ ಮಹಿಳಾ ಚಿತ್ರ ನಿರ್ಮಾತೃ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ರಾಷ್ಟ್ರಪತಿಗಳಪದಕ ಸಹಿತವಾಗಿ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿದವು.

1876: ಮಸಾಚ್ಯುಸೆಟ್ಸ್ ಬೋಸ್ಟನ್ನಿನ ಎಕ್ಸೆಟರ್ ಪ್ಯಾಲೇಸಿನಿಂದ ಕಳುಹಿಸಲಾದ ಮೊತ್ತ ಮೊದಲ ಟೆಲಿಫೋನ್ ಸಂದೇಶವು ಅಲೆಗ್ಸಾಂಡರ್ ಗ್ರಹಾಂಬೆಲ್ನ ಸಹಾಯಕ ಥಾಮಸ್ ವಾಟ್ಸನ್ಗೆ ತಲುಪುವುದರೊಂದಿಗೆ ದೂರವಾಣಿ ಸಂದೇಶವು ಮೊದಲ ಬಾರಿಗೆ ಯಶಸ್ವಿಯಾಗಿ ರವಾನೆಗೊಂಡಿತು. `ಕಮ್ ಹಿಯರ್ ವಾಟ್ಸನ್, ಐ ವಾಂಟ್ ಯೂ' -ಇವು ವಾಟ್ಸನ್ ಕಿವಿಗೆ ತಲುಪಿದ ಮೊತ್ತ ಮೊದಲ ದೂರವಾಣಿ ಮಾತುಗಳು.

No comments:

Post a Comment