ಇಂದಿನ ಇತಿಹಾಸ History Today ಮಾರ್ಚ್ 05
2018:
ನವದೆಹಲಿ: ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಯುವ ಮಹಿಳಾ ಶೂಟ್ ಮನು ಭಾಕರ್ ಚಿನ್ನದ ಪದಕ ಗಳಿಸಿದರು.
ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್ಎಸ್ಎಫ್) ಆಯೋಜಿಸಿರುವ ಈ ಪಂದ್ಯಾವಳಿಯ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಚಿನ್ನದ ದಪಕ ಕೊರಳಿಗೇರಿಸಿಕೊಂಡರು. ಮೆಕ್ಸಿಕೊದ ಅಲೆಜಾಮಡ್ರ ಝಾವಲಾ ಸವಾಲು ಎದುರಿಸಿದ ಮನು 237.5 ಅಂಕಗಳೊಂದಿಗೆ ಬಂಗಾರ ಪದಕ ಬಾಚಿಕೊಂಡರು. ಮತ್ತೊಬ್ಬ ಭಾರತೀಯ ಶೂಟರ್ ರವಿಕುಮಾರ್ ಕಂಚಿನ ಪದಕ ಗಳಿಸಿದರು.
ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್ಎಸ್ಎಫ್) ಆಯೋಜಿಸಿರುವ ಈ ಪಂದ್ಯಾವಳಿಯ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಚಿನ್ನದ ದಪಕ ಕೊರಳಿಗೇರಿಸಿಕೊಂಡರು. ಮೆಕ್ಸಿಕೊದ ಅಲೆಜಾಮಡ್ರ ಝಾವಲಾ ಸವಾಲು ಎದುರಿಸಿದ ಮನು 237.5 ಅಂಕಗಳೊಂದಿಗೆ ಬಂಗಾರ ಪದಕ ಬಾಚಿಕೊಂಡರು. ಮತ್ತೊಬ್ಬ ಭಾರತೀಯ ಶೂಟರ್ ರವಿಕುಮಾರ್ ಕಂಚಿನ ಪದಕ ಗಳಿಸಿದರು.
2018: ಲಾಸ್ ಏಂಜಲೀಸ್:
ಸಿನಿಮಾ ರಂಗ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದ ಜಾಗತಿಕ ಖ್ಯಾತಿಯ ೯೦ನೇ ’ಆಸ್ಕರ್’ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ’ದಿ ಶೇಪ್ ಆಫ್ ವಾಟರ್’೨೦೧೮ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಬೆರಗುಗೊಳಿಸುವ ದೃಶ್ಯಗಳಿರುವ ’ದಿ ಶೇಪ್ ಆಫ್ ವಾಟರ್’ ಚಿತ್ರವನ್ನು ನಿರ್ದೇಶಿಸಿರುವ ಗಿಲೆರ್ಮೊ ಡೆಲ್ ಟೋರೊ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾದರು. ಕ್ರಿಸ್ಟೋಫರ್ ನೋಲನ್ (ಚಿತ್ರ: ಡನ್ಕಿರ್ಕ್), ಜಾರ್ಡನ್ ಪೀಲೆ(ಚಿತ್ರ: ಗೆಟ್ ಔಟ್) ಸೇರಿ ಇತರ ನಿರ್ದೇಶಕರು ಪೈಪೋಟಿಯಲ್ಲಿದ್ದರು. ಅತ್ಯುತ್ತಮ ಚಿತ್ರ, ಸಂಗೀತ (ಒರಿಜಿನಲ್ ಸ್ಕೋರ್-ಅಲೆಗ್ಸಾಂಡರ್ ಡೆಸ್ಪ್ಲಾಟ್), ನಿರ್ಮಾಣ ವಿನ್ಯಾಸ ಹಾಗೂ ನಿರ್ದೇಶನ ವಿಭಾಗದಲ್ಲಿ ’ದಿ ಶೇಪ್ ಆಫ್ ವಾಟರ್’ ಪ್ರಶಸ್ತಿ ಗಳಿಸಿತು. ಒಟ್ಟು ೧೩ ವಿಭಾಗಗಳಲ್ಲಿ ಈ ಚಿತ್ರ ಅಂತಿಮ ಹಂತಕ್ಕೆ ಆಯ್ಕೆಯಾಗಿತ್ತು. ‘ಶೇಪ್ ಆಫ್ ವಾಟರ್’ ಚಿತ್ರವು ಈ ಮುನ್ನವೇ
ಗೋಲ್ಡನ್ ಗ್ಲೋಬ್ಸ್, ಡಿಜಿಎ, ದಿ ಕ್ರಿಟಿಕ್ಸ್ ಚಾಯ್ಸ್ ಹಾಗೂ ಬಾಫ್ಟಾ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಲಾಸ್ ಏಂಜಲೀಸ್‌ನ ಡೋಲ್ಬಿ ಥಿಯೇಟರ್ನಲ್ಲಿ ತುಂಬಾ ಅದ್ಧೂರಿಯಾಗಿ ನಡೆಯಿತು. ಈ ಬಾರಿ ಅತ್ಯುತ್ತಮ ಚಿತ್ರದ ಓಟದಲ್ಲಿ ’ದಿ ಶೇಪ್ ಆಫ್ ವಾಟರ್’ ಎಲ್ಲ ಚಿತ್ರಗಳಿಗಿಂತ ಮುಂದೆ ಸಾಗಿತು. ೧೩ ನಾಮನಿರ್ದೇಶನಗಳು ಈ ಚಿತ್ರದ ಪರವಾಗಿ ಬಂದವು. ಡನ್ಕಿರ್ಕ್ (Dunkrik) ಚಿತ್ರಕ್ಕೆ ೮ ನಾಮ ನಿರ್ದೇಶನಗಳು ಬಂದವು. ೨೦೧೮ರ ಅತ್ಯುತ್ತಮ ನಟಿ ಪ್ರಶಸ್ತಿ ಫ್ರಾನ್ಸಸ್ ಮ್ಯಾಕ್ ಡೊರ್ಮಾಂಡ್ ಅವರ ಮುಡಿಗೇರಿತು. 'Three Billboards Outside Ebbing, Missouri' ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ಈ ಪ್ರಶಸ್ತಿ ಒಲಿದು ಬಂದಿತು. ೨೦೧೮ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಜಾಲ್ಲೆರ್ಮ್ ಡೆಲ್ ಟೊರೊ ಅವರಿಗೆ ಲಭಿಸಿತು. ಇವರ ನಿರ್ದೇಶನದಲ್ಲಿ
’ದಿ ಶೇಪ್ ಆಫ್ ದಿ ವಾಟರ್’ ಚಿತ್ರ ಮೂಡಿ ಬಂದಿದೆ. ಅತ್ಯುತ್ತಮ ನಟ ಪ್ರಶಸ್ತಿ ಗೇರಿ ಓಲ್ಡ್ಮ್ಯಾನ್ ಅವರಿಗೆ ಡಾರ್ಕೆಸ್ಟ್ ಅವರ್ (Darkest
Hour) ಚಿತ್ರದಲ್ಲಿನ ಅಭಿನಯಕ್ಕಾಗಿ ಬಂದಿತು. ಅತ್ಯುತ್ತಮ ಹಾಡು ಪ್ರಶಸ್ತಿ ಕ್ರಿಸ್ಟೆನ್ ಆಂಡ್ರೆಸನ್-ಲೊಪೆಜ್ ಮತ್ತು ರಾಬರ್ಟ್ ಲೊಪೆಜ್ ಅವರ ’ರಿಮೆಂಬರ್ ಮಿ’ ಹಾಡಿಗೆ ಲಭಿಸಿತು. ಅತ್ಯುತ್ತಮ ಛಾಯಾಗ್ರಹಣ: ರೋಗರ್ ಎ ಡೀಕಿನ್ಸ್ (ಬ್ಲೇಡ್ ರನ್ನರ್ ೨೦೪೯ ಚಿತ್ರ) ಮೂಲ ಚಿತ್ರಕತೆ: ಜೋರ್ಡನ್ ಪೀಲೆ (ಗೆಟ್ ಔಟ್ ಚಿತ್ರ) ಅತ್ಯುತ್ತಮ ಕಿರುಚಿತ್ರ: ದಿ ಸೈಲೆಂಟ್ ಚೈಲ್ಡ್. ಅತ್ಯುತ್ತಮ ಸಾಕ್ಸ್ಯಾಚಿತ್ರ:
ಹೆವನ್ ಈಸ್ ಎ ಟ್ರಾಫಿಕ್ ಜಾಮ್ ಆನ್ ದಿ ೪೦೫. ಚಿತ್ರ ಸಂಕಲನ: ಲೀ ಸ್ಮಿತ್ (ಡನ್ಕಿರ್ಕ್ ಚಿತ್ರ). ಅತ್ಯುತ್ತಮ ವಿದೇಶಿ ಚಿತ್ರ: ’ಎ ಫೆಂಟಾಸ್ಟಿಕ್ ವುಮೆನ್’. ಅತ್ಯುತ್ತಮ ಪೋಷಕ ಪಾತ್ರ: ಎಲಿಸನ್ ಜಾನ್ನಿ. ಎನಿಮೇಷನ್
ಕಿರುಚಿತ್ರ: ಡಿಯರ್ ಬಾಸ್ಕೆಟ್ಬಾಲ್. ಧ್ವನಿ ಸಂಕಲನ: ರಿಚಾರ್ಡ್ ಕಿಂಗ್ ಮತ್ತು ಅಲೆಕ್ಸ್ ಗಿಬ್ಸನ್ (ಡನ್ಕಿರ್ಕ್ ಚಿತ್ರ). ಸಾಕ್ಷ್ಯ್ಯ ಚಿತ್ರ: (ಫೀಚರ್): ಐಕಾರುಸ್ (‘Icarus’). ಕಾಸ್ಟ್ಯೂಮ್ ಡಿಸೈನ್: ಮಾರ್ಕ್ ಬಿಡ್ಜ್ಸ್ ಮೇಕಪ್ ಮತ್ತು ಹೇರ್ಸ್ಟೈಲ್: ಕಜುಹಿರೋ ತ್ಸುಜಿ ಡೇವಿಡ್ ಮಲಿನೋವ್ಸ್ಕಿ ಮತ್ತು ಲ್ಯೂಸಿ ಸಿಬ್ಬಿಕ್ (Darkest Hour). ಅತ್ಯುತ್ತಮ ಪೋಷಕ ನಟ: ಸ್ಯಾಮ್ ರಾಕ್ವೆಲ್ .
ಶಶಿ ಕಪೂರ್, ಶ್ರೀದೇವಿ ಸ್ಮರಣೆ: ಪ್ರತಿಷ್ಠಿತ ೯೦ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಗಲಿದ ಭಾರತೀಯ ಚಿತ್ರರಂಗದ ತಾರೆಗಳಾದ ಶಶಿ ಕಪೂರ್ ಹಾಗೂ ಶ್ರೀದೇವಿ ಅವರನ್ನು ಸ್ಮರಿಸಲಾಯಿತು. ಗಾಯಕ ಎಡ್ಡೀ ವೆಡ್ಡರ್ ’ರೂಮ್ ಎಟ್ ದಿ ಟಾಪ್’ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಸ್ಪುರದ್ರೂಪಿ ಶಶಿ ಕಪೂರ್ ೧೯೬೧ರಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿದರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಇವರಿಗೆ ೨೦೧೧ರಲ್ಲಿ ಪದ್ಮಭೂಷಣ, ೨೦೧೫ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪಶಸ್ತಿ ನೀಡಿ ಗೌರವಿಸಲಾಗಿತ್ತು. ಇವರು ಡಿಸೆಂಬರ್ ೨೦೧೭ರಲ್ಲಿ ನಿಧನರಾದರು. ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಫೆ. ೨೪ರಲ್ಲಿ ಇಹಲೋಕ ತ್ಯಜಿಸಿದರು.
ಶಶಿ ಕಪೂರ್, ಶ್ರೀದೇವಿ ಸ್ಮರಣೆ: ಪ್ರತಿಷ್ಠಿತ ೯೦ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಗಲಿದ ಭಾರತೀಯ ಚಿತ್ರರಂಗದ ತಾರೆಗಳಾದ ಶಶಿ ಕಪೂರ್ ಹಾಗೂ ಶ್ರೀದೇವಿ ಅವರನ್ನು ಸ್ಮರಿಸಲಾಯಿತು. ಗಾಯಕ ಎಡ್ಡೀ ವೆಡ್ಡರ್ ’ರೂಮ್ ಎಟ್ ದಿ ಟಾಪ್’ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಸ್ಪುರದ್ರೂಪಿ ಶಶಿ ಕಪೂರ್ ೧೯೬೧ರಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿದರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಇವರಿಗೆ ೨೦೧೧ರಲ್ಲಿ ಪದ್ಮಭೂಷಣ, ೨೦೧೫ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪಶಸ್ತಿ ನೀಡಿ ಗೌರವಿಸಲಾಗಿತ್ತು. ಇವರು ಡಿಸೆಂಬರ್ ೨೦೧೭ರಲ್ಲಿ ನಿಧನರಾದರು. ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಫೆ. ೨೪ರಲ್ಲಿ ಇಹಲೋಕ ತ್ಯಜಿಸಿದರು.
2018: ನವದೆಹಲಿ: ಸಿಮ್ ಕಾರ್ಡ್ಗಳ ಅನಧಿಕೃತ ಬಳಕೆಯನ್ನು ತಡೆಯುವ ಸಲುವಾಗಿ ತಮ್ಮ ಆಧಾರ್ ನಂಬರ್ ಜೊತೆಗೆ ಮೊಬೈಲ್ ಸಿಮ್ ಕಾರ್ಡ್ಗಳು ಜೋಡಣೆಯಾಗಿವೆಯೇ ಎಂಬುದಾಗಿ ಪರಿಶೀಲಿಸುವ ಸವಲತ್ತನ್ನು ಗ್ರಾಹಕರಿಗೆ ಒದಗಿಸುವಂತೆ ಭಾರತದ ವಿಶಿಷ್ಠ ಗುರುತಿನ ಸಂಖ್ಯೆ ಪ್ರಾಧಿಕಾರವು (ಐಐಡಿಎಐ) ಟೆಲಿಕಾಂ ಆಪರೇಟರ್ ಗಳಿಗೆ ನಿರ್ದೇಶನ ನೀಡಿತು. ಟೆಲಿಕಾಂ ಕಂಪೆನಿಗಳ ಕೆಲವು ಚಿಲ್ಲರೆ ಮಾರಾಟಗಾರರು, ಆಪರೇಟರ್ ಗಳು ಮತ್ತು ಏಜೆಂಟರು ಆಧಾರ್ ದೃಢೀಕರಣ ಸವಲತ್ತನ್ನು ಹೊಸ ಸಿಮ್ ಕಾರ್ಡ್ ನೀಡಲು ಅಥವಾ ಆಧಾರ್ ಹೊಂದಿರುವ ವ್ಯಕ್ತಿಯ ಹೊರತಾಗಿ ಇತರ ನಂಬರುಗಳ ಮರುಪರಿಶೀಲನೆ ವೇಳೆ ದುರುಪಯೋಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದ ಬಳಿಕ ಯುಐಡಿಎಐ ಈ ನಿರ್ಧಾರ ಕೈಗೊಂಡಿತು. ತಮ್ಮ
ಚಿಲ್ಲರೆ ಮಾರಾಟಗಾರರು ಮತ್ತು ಏಜೆಂಟರು ಯಾವುದೇ ವಂಚಕ ಚಟುವಟಿಕೆಗಳಲ್ಲಿ ತೊಡಗದಂತೆ ಖಚಿತ ಪಡಿಸಿಕೊಳ್ಳುವಂತೆ
ಟೆಲಿಕಾಂ ಆಪರೇಟರುಗಳಿಗೆ ಎಚ್ಚರಿಕೆ ನೀಡಿದ ಯುಐಡಿಎಂಐ, ಮಾರ್ಚ್ ೧೫ರ ವೇಳೆಗೆ ಆಧಾರ್ ನಂಬರ್ ಜೊತೆಗೆ ಮೊಬೈಲ್ ಸಿಮ್ ಜೋಡಣೆಯಾಗಿರುವ ಬಗ್ಗೆ ಪರಿಶೀಲಿಸುವ ನೂತನ ಸವಲತ್ತನ್ನು ಲಭಿಸುವಂತೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿತು. ತಮ್ಮ ಮೊಬೈಲ್ ನಂಬರ್ ಆಧಾರ್ ಗೆ ಜೋಡಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಮತ್ತು ಇದಕ್ಕೆ ಸಂಬಂಧಿಸಿದ ಮಾಹಿತಿ ತಿಳಿಯಲು ಎಸ್ ಎಂಎಸ್ ಆಧಾರಿತ ಸವಲತ್ತುಗಳನ್ನು ಗ್ರಾಹಕರಿಗೆ ಕಲ್ಪಿಸುವಂತೆಯೂ ಯುಐಡಿಎಐ ಟೆಲಿಕಾಂ ಕಂಪೆನಿಗಳಿಗೆ ಸೂಚನೆ ನೀಡಿದೆ. ‘ಯಾವ ಮೊಬೈಲ್ ನಂಬರ್ ಆಧಾರ್ ಜೊತೆ ಜೋಡಣೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತೆ ಮಾರ್ಚ್ ೧೫ರ ಒಳಗೆ ಸೂಕ್ತ ಸವಲತ್ತುಗಳನ್ನು ಒದಗಿಸುವಂತೆ ಎಲ್ಲ ಟೆಲಿಕಾಂ ಆಪರೇಟರುಗಳಿಗೆ ಸೂಚಿಸಲಾಗಿದೆ’ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಸುದ್ದಿ ಸಂಸ್ಥೆಗೆ ದೃಢ ಪಡಿಸಿದರು. ೧೨೦ ಕೋಟಿ (೧.೨ ಬಿಲಿಯನ್ ) ನಿವಾಸಿಗಳು ಈಗಾಗಲೇ ಆಧಾರ್ ನೋಂದಣಿ ಮಾಡಿಸಿಕೊಂಡಿದ್ದು
ಇದು ವಿಶ್ವದಲ್ಲೇ ಅತ್ಯಂತ ಬೃಹತ್ತಾದ ಬಯೋಮೆಟ್ರಿಕ್ ಮಾಹಿತಿ ನೆಲೆ ಎಂಬ ಖ್ಯಾತಿ ಗಳಿಸಿದೆ. ಆಧಾರ್ ಈಗ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಗುರುತು ಪತ್ತೆಗೆ ಅತ್ಯಗತ್ಯವಾದ ಸಾಕ್ಷ್ಯವಾಗಿದೆ.
ಕಪ್ಪು ಹಣವನ್ನು ನಿರ್ಮೂಲನ ಮಾಡುವ ಸಲುವಾಗಿ ಸರ್ಕಾರವು ಪಾನ್ ಸಂಖ್ಯೆಗೂ ಆಧಾರ್ ಸಂಖ್ಯೆಯ ಜೋಡಣೆಯನ್ನು ಕಡ್ಡಾಯಗೊಳಿಸಿದೆ.
ಅದೇ ರೀತಿ ಸೆಲ್ ಫೋನ್ ಗಳಿಗೂ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ.
2018: ನವದೆಹಲಿ:ಇಬ್ಬರು ಉಗ್ರರೊಂದಿಗೆ ನಾಲ್ವರು ನಾಗರಿಕರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವ ಶೋಪಿಯಾನ್ ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಸರಕಾರ ಯೂ ಟರ್ನ್ ಹೊಡೆದು, ಈ ಪ್ರಕರಣದ ಎಫ್ಐಆರ್ ನಲ್ಲಿ ಮೇಜರ್ ಆದಿತ್ಯಾ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿತು. ತನ್ನ
ಪುತ್ರ ಮೇಜರ್ ಆದಿತ್ಯಾ ವಿರುದ್ಧ ದಾಖಲಾಗಿರುವ ಎಫ್ ಐಆರ್ ಅನ್ನು ವಜಾಗೊಳಿಸಬೇಕೆಂದು ಕೋರಿ ತಂದೆ ನಿವೃತ್ತ ಕರ್ನಲ್ ಕರ್ಮಾವೀರ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಡೆಸಿತ್ತು. ಜಮ್ಮು ಕಾಶ್ಮೀರ ಸರಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಸ್ಟೇಟಸ್ ರಿಪೋರ್ಟ್ (ಸ್ಥಿತಿಗತಿ ವಿವರ ವರದಿ)ನಲ್ಲಿ, ಶೋಪಿಯಾನ್ ಫೈರಿಂಗ್ ಪ್ರಕರಣದಲ್ಲಿ ದಾಖಲಿಸಿಕೊಂಡಿರುವ
ಎಫ್ಐಆರ್ ನಲ್ಲಿ ಆರ್ಮಿ ಅಧಿಕಾರಿ(ಆದಿತ್ಯಾ) ಹೆಸರಿಲ್ಲ ಎಂದು ಹೇಳಿತು. ಈ ಹಿನ್ನೆಲೆಯಲ್ಲಿ ಶೋಪಿಯಾನ್ ಫೈರಿಂಗ್ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತಡೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ನಿಗದಿಪಡಿಸಿ ಮುಂದೂಡಿತು.
2018: ನವದೆಹಲಿ: ಕಣಿವೆ
ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪ್ರಮುಖ ಉಗ್ರನೊಬ್ಬ ಸೇನಾ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ. ಜಮ್ಮು ಕಾಶ್ಮೀರದಲ್ಲಿ ಫೆಬ್ರವರಿ 10ರಂದು ಸುಂಜುವಾನ್ ಸೇನಾ ನೆಲೆಗಳ ಮೇಲೆ ದಾಳಿ ನಡೆದಿತ್ತು. ಈ ದಾಳಿಯ ಸೂತ್ರಧಾರನಾಗಿದ್ದು
ಮುಫ್ತಿ ವಖಾರ್. ಸೇನಾ ಯೋಧರು ಹಾತಿವಾರಾ ಲೆಟ್ಪೋರಾ ಪ್ರಾಂತ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ
ಮೃತನಾದ
ಎಂದು ಸೇನಾ ಮೂಲಗಳು ತಿಳಿಸಿದವು. ಸೇನಾ ಯೋಧರು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ
ಉಗ್ರರು ದಾಳಿಸಿದರು. ಯೋಧರೂ ಪ್ರತಿ ದಾಳಿ ನಡೆಸಿದಾಗ ಮುಫ್ತಿ ವಖಾರ್ ಮೃತಪಟ್ಟ ಎಂದು ಸೇನಾಧಿಕಾರಿಗಳು ತಿಳಿಸಿದರು. ಒಬ್ಬ
ಸೇನಾ ಯೋಧ ಗಾಯಗೊಂಡಿರುವುದಾಗಿ
ಅವರು ತಿಳಿಸಿದರು.
2008: ಎರಡು ದಶಕಗಳ ಹಿಂದೆ ಎಳೆಯ ಬಾಲಕನೊಬ್ಬನನ್ನು ತನ್ನ ವಿಕೃತ ಕಾಮಕ್ಕೆ ಬಳಸಿಕೊಳ್ಳಲು ಯತ್ನಿಸಿದರೆಂಬ ಆರೋಪ ಎದುರಿಸುತ್ತಿದ್ದ ಶ್ರೀ ಸಿದ್ದಗಂಗಾ ಮಠಕ್ಕೆ ಸೇರಿದ್ದ ಗೌರಿಶಂಕರ ಸ್ವಾಮಿಗಳು ನಿರ್ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಮಠದಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನು 1986ರಲ್ಲಿ ಪೊಲೀಸರಿಗೆ ದೂರು ನೀಡಿ, ಅದರಲ್ಲಿ ಗೌರಿಶಂಕರ ಸ್ವಾಮಿಗಳು ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರೆಂದು ಆರೋಪಿಸಿದ್ದನು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ 1998ರ ನವೆಂಬರಿನಲ್ಲಿ ಸ್ವಾಮಿಗಳನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಬಂದ ಮೇಲ್ಮನವಿಯ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಗೌರಿಶಂಕರ ಸ್ವಾಮಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂಪಾಯಿಗಳ ದಂಡ ವಿಧಿಸಿ 2004ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗೌರಿಶಂಕರ ಸ್ವಾಮಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ನ್ಯಾಯಮೂರ್ತಿಗಳಾದ ಎಸ್ ಬಿ ಸಿನ್ಹಾ, ಎಚ್ ಎಸ್ ಬೇಡಿ ಅವರನ್ನು ಒಳಗೊಂಡ ನ್ಯಾಯಪೀಠವು ಗೌರಿಶಂಕರ ಸ್ವಾಮಿಗಳು ನಿರ್ದೋಷಿ ಎಂದು ತೀರ್ಪು ನೀಡಿ, ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿತು.
2008: ಖ್ಯಾತ ಮೊಸಳೆ ಸಂರಕ್ಷಕ ಸ್ಟೀವ್ ಇರ್ವಿನ್ ಅವರ ಪತ್ನಿ ಟೆರ್ರಿ ಅವರು ಸಾಲ ಮರುಪಾವತಿಗೆ ಸಂಬಂಧಿಸಿದ ಕಾನೂನು ಸಮರದ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಸುಮಾರು 2.3ದಶಲಕ್ಷ ಡಾಲರ್ ಮೊತ್ತಕ್ಕಿಂತ ಹೆಚ್ಚಿನ ಸಾಲವನ್ನು ಮರುಪಾವತಿ ಮಾಡದ ಕಾರಣ ಇರ್ವಿನ್ ಅವರ ಪತ್ನಿ ವಿರುದ್ಧ ಕಳೆದ ತಿಂಗಳು ಸಾಲ ವಸೂಲಾತಿ ಸಂಸ್ಥೆ ( ಅಲಿಸ್ಸಾ ಟ್ರೆಸರಿ ಸರ್ವೀಸ್) ದಾವೆ ಹೂಡಿತ್ತು. ಸಿಂಗಪುರ ಮೂಲದ ಬ್ಯಾಂಕ್, ಇರ್ವಿನ್ ಹಾಗೂ ಟೆರ್ರಿ ಅವರು ಸ್ಥಾಪಿಸಲು ಉದ್ದೇಶಿಸಿದ್ದ ವನ್ಯಜೀವಿ ಧಾಮಕ್ಕೆ ಹಣಕಾಸು ನೆರವು ನೀಡಿತ್ತು. 2006 ರಲ್ಲಿ ಟಿವಿ ಧಾರಾವಾಹಿ ಚಿತ್ರೀಕರಣದ ವೇಳೆ ಇರ್ವಿನ್ ಮೃತರಾಗಿದ್ದರು.
2008: ಪಾಕಿಸ್ಥಾನದಲ್ಲಿ 1999ರಲ್ಲಿ ಸಂಭವಿಸಿದ ನಾಲ್ಕು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾದ ಆರೋಪದ ಮೇಲೆ ಮರಣದಂಡನೆ ಎದುರಿಸುತ್ತಿರುವ ಭಾರತದ ಸರಬ್ಜಿತ್ ಸಿಂಗ್ ಅವರಿಗೆ ಕ್ಷಮಾದಾನ ನೀಡಲು ಅಧ್ಯಕ್ಷ ಪರ್ವೇಜ್ ಮುಷರಫ್ ನಿರಾಕರಿಸಿದರು. ಸರಬ್ಜಿತ್ ಸಿಂಗ್ ಅವರನ್ನು ಭಾರತದ ಗೂಢಚಾರ ಮಂಜಿತ್ ಸಿಂಗ್ ಎಂದೇ ಪಾಕಿಸ್ಥಾನ ಭಾವಿಸಿದೆ. ಲಾಹೋರ್ ಮತ್ತು ಮುಲ್ತಾನಿನಲ್ಲಿ ಸಂಭವಿಸಿದ ಸ್ಫೋಟಗಳ ಹಿಂದೆ ಮಂಜಿತ್ ಸಿಂಗ್ ಕೈವಾಡವಿತ್ತೆಂದು ಆರೋಪಿಸಲಾಗಿದೆ. ಕೋರ್ಟ್ ಇದನ್ನು ಎತ್ತಿ ಹಿಡಿದು ಮರಣದಂಡನೆ ವಿಧಿಸಿದೆ. ತನಗೆ ಕ್ಷಮಾದಾನ ನೀಡಬೇಕು ಎಂದು ಸರಬ್ಜಿತ್ ಸಿಂಗ್ ಅಧ್ಯಕ್ಷ ಮುಷರಫ್ ಅವರಿಗೆ ಮನವಿ ಮಾಡಿದ್ದರು. `ಸಂಪೂರ್ಣ ಪರಿಶೀಲನೆ ಬಳಿಕ ಕ್ಷಮಾದಾನದ ಅರ್ಜಿಯನ್ನು ಅಧ್ಯಕ್ಷರು ತಿರಸ್ಕರಿಸಿದರು' ಎಂದು ಪಾಕಿಸ್ಥಾನದ ಸುದ್ದಿಸಂಸ್ಥೆ ಎನ್ ಎನ್ ಐ ತಿಳಿಸಿತು.
2008: ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿರುವಂತೆಯೇ ಸಂಸದೀಯ ಸಮಿತಿಯು ಈ ಎರಡು `ಹೊಸ ವಿಮಾನ ನಿಲ್ದಾಣ'ಗಳನ್ನು ಅಭಿವೃದ್ಧಿ ಪಡಿಸಿರುವ ಖಾಸಗಿ ಸಂಸ್ಥೆಗಳೊಂದಿಗಿನ ಒಪ್ಪಂದವನ್ನು ಪುನರ್ ಪರಿಷ್ಕರಣೆ ಮಾಡಿ, ಹಳೆಯ ವಿಮಾನ ನಿಲ್ದಾಣಗಳನ್ನೂ ಉಳಿಸಿಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು. `ಈ ಎರಡೂ ನಗರಗಳಲ್ಲಿ ಇರುವ ಹಳೆಯ ವಿಮಾನ ನಿಲ್ದಾಣಗಳನ್ನು ಮುಚ್ಚುವುದು ಅಥವಾ ಇನ್ನಷ್ಟು ಸುಧಾರಿಸುವ ಬಗ್ಗೆ ತೀರ್ಮಾನಿಸಲು ಸರ್ಕಾರಕ್ಕೆ ಇನ್ನೂ ಸಮಯವಿದ್ದು, ಪರಿಷ್ಕೃತ ಒಪ್ಪಂದದ ಮೂಲಕ ಹಳೆಯ ವಿಮಾನ ನಿಲ್ದಾಣಗಳನ್ನು ಉಳಿಸಿಕೊಳ್ಳಬಹುದು' ಎಂದೂ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಮುಖ್ಯಸ್ಥರಾದ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಹೇಳಿದರು.
2007: ಪೈಲಟ್ ರಹಿತ ಯುದ್ಧ ವಿಮಾನ `ಲಕ್ಷ್ಯ'ದ ಪರೀಕ್ಷಾರ್ಥ ಪ್ರಯೋಗವನ್ನು ಭಾರತವು ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಿತು. ಬೆಂಗಳೂರಿನ ವಿಮಾನ ಅಭಿವೃದ್ಧಿ ಸಂಸ್ಥೆಯಲ್ಲಿ (ಎಡಿಇ) ಸಿದ್ಧ ಪಡಿಸಲಾಗಿರುವ ಈ ವಿಮಾನ ಪೈಲಟ್ಗಳಿಲ್ಲದೆಯೇ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ.
2007: ಬೊಫೋರ್ಸ್ ಪ್ರಕರಣದ ಆರೋಪಿ ಒಟ್ಟಾವಿಯೊ ಕ್ವಟ್ರೋಚಿ ಹಸ್ತಾಂತರ ಕೋರಿ ಭಾರತ ಸರ್ಕಾರವು ಸಲ್ಲಿಸಿದ 250 ಪುಟಗಳ ದಾಖಲೆಯು ಕ್ರಮಬದ್ಧವಾಗಿದೆ ಎಂದು ನಿರ್ಧರಿಸಿದ ಅರ್ಜೆಂಟೀನಾ ಸರ್ಕಾರವು ಅದನ್ನು ಮಿಸಿಯೊನೆಸ್ ಪ್ರಾಂತದ ಎಲ್ ಡೊರಾಡೊದಲ್ಲಿನ ಫೆಡರಲ್ ಕೋರ್ಟಿಗೆ ಕಳುಹಿಸಲು ನಿರ್ಧರಿಸಿತು. ಪ್ರಾಸೆಕ್ಯೂಷನ್ ನಿರ್ದೇಶಕ ಎಸ್. ಕೆ. ಶರ್ಮಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕೇಶವ ಮಿಶ್ರ ಅವರನ್ನು ಒಳಗೊಂಡ ದ್ವಿಸದಸ್ಯ ಸಿಬಿಐ ತಂಡವು ಹಸ್ತಾಂತರಕ್ಕೆ ಸಂಬಂಧಿಸಿದ ಕೋರಿಕೆ ಹಾಗೂ ದಾಖಲೆಗಳನ್ನು ಕಳೆದ ವಾರ ಅರ್ಜೆಂಟೀನಾ ಸರ್ಕಾರಕ್ಕೆ ಸಲ್ಲಿಸಿತ್ತು.
2007: ಜೆಮ್ ಶೆಡ್ ಪುರದ ಜೆಎಂಎಂ ಸಂಸತ್ ಸದಸ್ಯ ಸುನೀಲ್ ಮಹತೋ ಅವರ ಕೊಲೆ ಪ್ರಕರಣವನ್ನು ಜಾರ್ಖಂಡ್ ಸರ್ಕಾರವು ಸಿಬಿಐ ತನಿಖೆಗೆ ಒಪ್ಪಿಸಿತು.
1997: ಮುಂಬೈಯ ಪಾಂಡುರಂಗ ಶಾಸ್ತ್ರಿ ಅಠವಳೆ ಅವರನ್ನು ಧಾರ್ಮಿಕ ಪ್ರಗತಿಗಾಗಿ ನೀಡಲಾಗುವ 1997ರ `ಜಾನ್ ಎಂ.ಟಿ. ಟೆಂಪ್ಲೆಟನ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಯಿತು. ಈ ಪ್ರಶಸ್ತಿಯ ಮೊತ್ತ 12 ಲಕ್ಷ ಡಾಲರುಗಳು.
1995: ಭಾರತ ಮತ್ತು ಚೀನಾ ಹೊಸ ಗಡಿ ರೇಖೆಯನ್ನು ಗುರುತಿಸಿದವು. ಮಿಲಿಟರಿ ಅಧಿಕಾರಿಗಳ ಮಾತುಕತೆಗೆ ನೆರವಾಗಲು ಸಿಕ್ಕಿಂನ ನಾಥೂಲಾ ಪ್ರದೇಶವನ್ನು ಗುರುತಿಸಲಾಯಿತು.
1990: ಭೋಪಾಲಿನಲ್ಲಿ 1984ರಲ್ಲಿ ಸಂಭವಿಸಿದ ಭೀಕರ ವಿಷಾನಿಲ ದುರಂತದಲ್ಲಿ ತೊಂದರೆಗೆ ಒಳಗಾದ 5 ಲಕ್ಷ ಜನರಿಗೆ 360 ಕೋಟಿ ರೂಪಾಯಿಗಳ ನೆರವನ್ನು ಸರ್ಕಾರ ಘೋಷಿಸಿತು.
1953: ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ (1922-53) ಹಾಗೂ ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದ (1941-53) ಜೋಸೆಫ್ ಸ್ಟಾಲಿನ್ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಇವರು ಸುಮಾರು ಕಾಲು ದಶಕ ಕಾಲ ಸೋವಿಯತ್ ಒಕ್ಕೂಟದ ಪ್ರಶ್ನಾತೀತ ನಾಯಕರಾಗಿ ಮೆರೆದರು.
1940: ಮಹಾತ್ಮಾ ಗಾಂಧಿಯವರು ಸೆಗಾಂವ್ ಗ್ರಾಮಕ್ಕೆ `ಸೇವಾ ಗ್ರಾಮ' ಎಂಬುದಾಗಿ ಮರುನಾಮಕರಣ ಮಾಡಿದರು.
1916: ಬಿಜೊಯಾನಂದ `ಬಿಜು' ಪಟ್ನಾಯಕ್ (1916-1997) ಹುಟ್ಟಿದರು. ಎರಡನೇ ಜಾಗತಿಕ ಯುದ್ಧದಲ್ಲಿಪಾಲ್ಗೊಂಡ್ದಿದ ಭಾರತದ ಈ ವಿಮಾನ ಚಾಲಕ, ಸ್ವಾತಂತ್ರ್ಯ ಹೋರಾಟಗಾರರೂ, ವಾಣಿಜ್ಯ ವಿಮಾನ ಉದ್ಯಮಿಯೂ ಆಗಿದ್ದರು. 1961-63 ಮತ್ತು
1990-95ರ ಅವಧಿಗಳಲ್ಲಿ ಎರಡು ಬಾರಿ ಒರಿಸ್ಸಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
1913: ಕಿರಾಣ ಘರಾಣ ಸಂಗೀತ ಪದ್ಧತಿಗೆ ದೊಡ್ಡ ಕೀರ್ತಿ ತಂದ ಡಾ. ಗಂಗೂಬಾಯಿ ಹಾನಗಲ್ ಅವರು ಚಿಕ್ಕೂರಾವ್ ನಾಡಗೀರ- ಅಂಬಾಬಾಯಿ ದಂಪತಿಯ ಮಗಳಾಗಿ ಧಾರವಾಡದ ಶುಕ್ರವಾರ ಪೇಟೆಯಲ್ಲಿ ಜನಿಸಿದರು. ತಾಯಿ ಅಂಬಾಬಾಯಿ ಅವರೇ ಇವರಿಗೆ ಸಂಗೀತದ ಗುರು ಹಾಗೂ ಎಲ್ಲ ಸಾಧನೆಗಳ ಪ್ರೇರಕ ಶಕ್ತಿ. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ, ರೂ-ಇ-ಗಜಲ್, ಬೇಗಂ ಅಕ್ತರ್ ಪ್ರಶಸ್ತಿ ಇತ್ಯಾದಿ ಸೇರಿದಂತೆ ಇವರಿಗೆ ಲಭಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.
1912: ಕಥೆಗಾರ್ತಿ ಕೊಡಗಿನ ಗೌರಮ್ಮ ಅವರು ಹುಟ್ಟಿದ ದಿನ. ವಕೀಲ ಹಾಗೂ ಪ್ಲಾಂಟರ್ ಆಗಿದ್ದ ಎನ್.ಎಸ್. ರಾಮಯ್ಯ ಮತ್ತು ನಂಜಕ್ಕ ದಂಪತಿಯ ಮಗಳಾಗಿ ಜನಿಸಿದ ಗೌರಮ್ಮ 1939ರ ಏಪ್ರಿಲ್ 13ರಂದು ನಿಧನರಾದರು. 1931ರಿಂದ 1939ರ ಅವಧಿಯಲ್ಲಿ ಅವರು 21 ಸದಭಿರುಚಿಯ, ಮನದಾಳದ ಅನಿಸಿಕೆಗಳ ಚಿತ್ರ ಕೊಡುವ ಕಥೆಗಳನ್ನು ರಚಿಸಿ ಹೆಸರು ಪಡೆದರು.
1851: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸ್ಥಾಪನೆಗೊಂಡಿತು.
1730: ಆಂಟನಿ ಲೌಮೆಟ್ ಡೆ ಲಾ ಮೋತ್ ಕಾಡಿಲ್ಯಾಕ್ (1658-1730) ಹುಟ್ಟಿದ. ಫ್ರೆಂಚ್ ಯೋಧ, ಸಂಶೋಧಕ ಹಾಗೂ ಫೆಂಚ್ ಉತ್ತರ ಅಮೆರಿಕಾದ ಆಡಳಿತಗಾರನಾದ ಈತ ಡೆಟ್ರಾಯಿಟ್ ನಗರದ ಸ್ಥಾಪಕ. ಸಿಟಿ ಆಫ್ ಕಾಡಿಲ್ಯಾಕ್, ಕಾಡಿಲ್ಯಾಕ್ ಮೌಂಟನ್, ಕಾಡಿಲ್ಯಾಕ್ ಆಟೋಮೊಬೈಲ್ ಇವುಗಳಿಗೆಲ್ಲ ಈತನ ಹೆಸರನ್ನೇ ಇಡಲಾಗಿದೆ.
1512: ಗೆರಾರ್ಡಸ್ ಮರ್ಕೇಟರ್ (1512-1594) ಹುಟ್ಟಿದ ದಿನ. ನಕಾಶೆಗಾರನಾದ ಈತ ನಕಾಶೆಗಳ ಸಂಗ್ರಹಕ್ಕೆ `ಅಟ್ಲಾಸ್' ಎಂಬ ಶಬ್ದವನ್ನು ಅನುಷ್ಠಾನಕ್ಕೆ ತಂದ. ಈತನ ಅತ್ಯಂತ ಪ್ರಮುಖ ಸಂಶೋಧನೆ `ನಕಾಶೆ' (ಮ್ಯಾಪ್). ಮುಂದೆ ಇದು ಮರ್ಕೇಟರ್ ಪ್ರೊಜೆಕ್ಷನ್ ಎಂದೇ ಖ್ಯಾತಿ ಪಡೆಯಿತು.
No comments:
Post a Comment