ಪೆಟ್ರೋಲ್, ಡೀಸೆಲ್ ಬೆಲೆ ಕಾಂಗ್ರೆಸ್ ಕಾಲದಲ್ಲೂ ಅಷ್ಟೇ,
ಈಗಲೂ ಅಷ್ಟೆ!
ನವದೆಹಲಿ : ಹದಿನಾರು ದಿನಗಳಿಂದ ಸತತ ಏರುತ್ತಾ ಬಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು 30 ಮೇ 2018ರ ಬುಧವಾರ ಕೊನೆಗೂ ಇಳಿದವು. ಆದರೆ ಇಳಿದದ್ದು ಕೇವಲ 1 ಪೈಸೆಯಷ್ಟು ! ಅಂದರೆ ಬೆಲೆ ಲೀಟರಿಗೆ 78ರಿಂದ 82ರ ಆಸುಪಾಸಿನಲ್ಲೇ ಇದೆ. ಅಚ್ಚರಿ ಪಡಬೇಡಿ, 5 ವರ್ಷಗಳ ಹಿಂದೆ ಕಾಂಗ್ರೆಸ್ ಕಾಲದಲ್ಲೂ ಪೆಟ್ರೋಲ್ ಬೆಲೆ ಇದ್ದದ್ದು ಹೆಚ್ಚು ಕಡಿಮೆ ಇದೇ ಮಟ್ಟದಲ್ಲಿ!
ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ) ತನ್ನ ವೆಬ್ಸೈಟಿನಲ್ಲಿ ಈದಿನ ದೆಹಲಿ ಮತ್ತು ಮುಂಬಯಿ ಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅನುಕ್ರಮವಾಗಿ ಲೀಟರ್ಗೆ 60 ಮತ್ತು 59 ಪೈಸೆ ಇಳಿದಿರುವುದಾಗಿ ಪ್ರಕಟಿಸಿತ್ತು.
ಅದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಐಓಸಿ ತನ್ನ ಈ ಪ್ರಕಟಣೆಯನ್ನು ಸರಿಪಡಿಸಿ ಪೆಟ್ರೋಲ್ , ಡೀಸೆಲ್ ದರ ಕೇವಲ 1 ಪೈಸೆ ಇಳಿದಿರುವುದಾಗಿ ಸ್ಪಷ್ಟಪಡಿಸಿತು.
ಅಂತೆಯೇ ನಾಲ್ಕು ಮೆಟ್ರೋಪಾಲಿಟನ್ ನಗರಗಳಾಗಿರುವ ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ತಿಳಿಸಿತು.
ಹಾಗೆಯೇ ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸೆಲ್ ಲೀಟರ್ ದರ ಅನುಕ್ರಮವಾಗಿ 69.30, 71.85, 73.78 ಮತ್ತು 73.17 ರೂ. ಇರುವುದಾಗಿ ಅದು ತಿಳಿಸಿತು.
ಆದರೆ ಇದಕ್ಕಿಂತಲೂ ಕುತೂಹಲಕರವಾದ ಮಾಹಿತಿ ಪ್ರಕಾರ ಐದು ವರ್ಷದ ಹಿಂದೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ (ಯುಪಿಎ) ಸರ್ಕಾರ ಇದ್ದ 2013ನೇ ಸಾಲಿನಲ್ಲೂ ಪೆಟ್ರೋಲ್ ಬೆಲೆ ಈದಿನ ದರಕ್ಕಿಂತ ಕಡಿಮೆ ಏನೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಇಲ್ಲಿ ಇರುವ ಎರಡು ಚಿತ್ರಗಳು 2013ರಲ್ಲಿನ ಪೆಟ್ರೋಲ್ ಬೆಲೆಯನ್ನು ತಿಳಿಸುತ್ತವೆ. ಅದಕ್ಕೆ ಸಮರ್ಥನೆಯಾಗಿ 17 ಸೆಪ್ಟೆಂಬರ್ 2013ರ ಪೆಟ್ರೋಲ್ ಬೆಲೆಯ ನೈಜ ಬಿಲ್ಲಿನ ಚಿತ್ರವೂ ಇಲ್ಲಿದೆ. ಆದಿನ ಗ್ರಾಹಕರೊಬ್ಬರು ಪಾವತಿ ಮಾಡಿದ ಪೆಟ್ರೋಲ್ ದರ ಲೀಟರಿಗೆ 82.87 ರೂಪಾಯಿ!
ದೆಹಲಿ, ಕೋಲ್ಕತಾ,
ಮುಂಬೈ, ಚೆನ್ನೈಯಲ್ಲಿ 20 ಡಿಸೆಂಬರ್ 2013ರಂದು ಇದ್ದ ಪೆಟ್ರೋಲ್ ದರ ಲೀಟರಿಗೆ ಕ್ರಮವಾಗಿ 71.51,
78.6, 78.56 ಮತ್ತು 74.71 ರೂಪಾಯಿಗಳು.
ಇಂಧನ ದರ ಏರಿಕೆ
ಮನಮೋಹನ್ ಸಿಂಗ್ ಕಾಲದಲ್ಲೂ ಹೀಗೆಯೇ ಇತ್ತು, ಈಗ ನರೇಂದ್ರ ಮೋದಿ ಕಾಲದಲ್ಲೂ ಹೀಗೆಯೇ ಇದೆ. ಬಹಳ ವ್ಯತ್ಯಾಸವೇನೂ ಇಲ್ಲ.
No comments:
Post a Comment