ಕರ್ನಾಟಕದಲ್ಲಿ ಕಾವೇರಿ ‘ಕಾಲಾ’ಹ
ಬೆಂಗಳೂರು:
ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ’ಕಾಲಾ’
ಚಿತ್ರ ವಿಶ್ವಾದ್ಯಂತ ಗುರುವಾರ 7 ಜೂನ್ 2018ರಂದು
ಬಿಡುಗಡೆಯಾಯಿತು. ಆದರೆ ಕರ್ನಾಟಕದಲ್ಲಿ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
ಹಿನ್ನೆಲೆಯಲ್ಲಿ ಕಾಲಾ ಚಿತ್ರ ಪ್ರದರ್ಶನ ಸ್ಥಗಿತಗೊಂಡಿತು.
ಪ್ರತಿಭಟನೆಗಳ
ಕಾರಣ ಚಿತ್ರ ಮಂದಿರಗಳು ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದವು.
ಕಾಲಾ ಬಿಡುಗಡೆಯಾಗಿರುವ
ಚಿತ್ರಮಂದಿರಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಕೆಲವು
ಚಿತ್ರಮಂದಿರಗಳು ಟಿಕೆಟ್ ಹಣ ವಾಪಸ್ ನೀಡಿದರೆ,
ಮಂಗಳೂರಿನ ಕೆಲವು
ಚಿತ್ರಮಂದಿರಗಳಲ್ಲಿ ಕಾಲಾ ಚಿತ್ರ ಪ್ರದರ್ಶನಕ್ಕೆ ವಿರೋಧ ಇದ್ದರೂ 12.30 ರಿಂದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆ, ಮೈಸೂರು, ಹಾಸನ, ರಾಯಚೂರಿನ ಮಾಲ್ ಮತ್ತು ಥಿಯೇಟರ್ಗಳಲ್ಲಿ ಕಾಲಾ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು.
ಬೆಂಗಳೂರಿನ ಓರಾಯನ್ ಮಾಲ್, ಲಿಡೋ ಚಿತ್ರಮಂದಿರ, ಗರುಡಾ ಮಾಲ್ನಲ್ಲಿ ಚಿತ್ರಪ್ರದರ್ಶನ ರದ್ದು ಮಾಡಲಾಯಿತು. ಬೆಂಗಳೂರಿನಲ್ಲಿ ಕಾಲಾ ಚಿತ್ರ ಪ್ರದರ್ಶನ ಹಿನ್ನಲೆಯಲ್ಲಿ ಒರಾಯನ್ ಮಾಲ್ ಬಳಿ ಆಗಮಿಸಿದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಮತ್ತು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸ್ಥಳದಲ್ಲಿ
ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಸೇರಿ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ರಾಯಚೂರು ನಗರದಲ್ಲಿ ಕಾಲಾ ಚಿತ್ರ ಪ್ರದರ್ಶನ ಸ್ಥಗಿತಗೊಂಡಿತ್ತು.
ರಾಯಚೂರು ನಗರದಲ್ಲಿ ಕಾಲಾ ಚಿತ್ರ ಪ್ರದರ್ಶನ ಸ್ಥಗಿತಗೊಂಡಿತ್ತು.
No comments:
Post a Comment