Showing posts with label World. Show all posts
Showing posts with label World. Show all posts

Friday, November 30, 2018

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ವಾಕರ್ ಬುಶ್ ನಿಧನ

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ವಾಕರ್ ಬುಶ್ ನಿಧನ

ವಾಷಿಂಗ್ಟನ್‌: ಅಮೆರಿಕದ 43 ನೇ ಅಧ್ಯಕ್ಷರಾಗಿದ್ದ  ಜಾರ್ಜ್‌ ಹರ್ಬರ್ಟ್ ವಾಕರ್‌ ಬುಶ್ ಅವರು 2018 ನವೆಂಬರ್ 30ರ ಶುಕ್ರವಾರ ರಾತ್ರಿ 10 ಗಂಟೆಗೆ (ಭಾರತೀಯ ಕಾಲಮಾನ 01 ಡಿಸೆಂಬರ್  ಶನಿವಾರ ಬೆಳಗ್ಗೆ 8.30 ಗಂಟೆ) ನಿಧನರಾಗಿದ್ದಾರೆ ಎಂದು ಬುಶ್  ಕುಟುಂಬ ಪ್ರಕಟಿಸಿದೆ.. ಅವರಿಗೆ 94 ವರ್ಷ ವಯಸ್ಸಾಗಿತ್ತು. 
ರಿಪಬ್ಲಿಕನ್ ಪಕ್ಷದ ನಾಯಕರಾಗಿದ್ದ ಅವರು 2001 ಜನವರಿಯಿಂದ 2009 ಜನವರಿಯವರೆಗೆ 8 ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಟೆಕ್ಸಾಸ್‌ನ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದರು.
ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗಾಲಿಚಕ್ರವನ್ನು ಅವಲಂಬಿಸಿಕೊಂಡಿದ್ದರು.
ರಷ್ಯಾದೊಂದಿಗೆ ನಡೆಯುತ್ತಿದ್ದ 4 ದಶಕಗಳ ಶೀತಲ ಸಮರಕ್ಕೆ ಅಂತ್ಯ ಹಾಡುವಲ್ಲಿ ಜಾರ್ಜ್ ಬುಶ್ ಮಹತ್ತರ ಪಾತ್ರ ವಹಿಸಿದ್ದರು.

ಬುಶ್ ಅವರ ಪತ್ನಿ, ಅಮೆರಿಕದ ಮೊದಲ ಮಹಿಳೆ ಬಾರ್ಬರಾ ಬುಶ್  ಕಳೆದ ಏಪ್ರಿಲ್ ತಿಂಗಳಲ್ಲಿ ನಿಧನರಾಗಿದ್ದರು.

ಬುಶ್ ಅವರು ಐವರು ಪುತ್ರರು ಮತ್ತು 17 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

Wednesday, May 30, 2018

ಪೆಟ್ರೋಲ್‌, ಡೀಸೆಲ್‌ ಬೆಲೆ ಕಾಂಗ್ರೆಸ್ ಕಾಲದಲ್ಲೂ ಅಷ್ಟೇ, ಈಗಲೂ ಅಷ್ಟೆ!


ಪೆಟ್ರೋಲ್‌, ಡೀಸೆಲ್‌ ಬೆಲೆ ಕಾಂಗ್ರೆಸ್ ಕಾಲದಲ್ಲೂ ಅಷ್ಟೇ, ಈಗಲೂ ಅಷ್ಟೆ!

ನವದೆಹಲಿ : ಹದಿನಾರು ದಿನಗಳಿಂದ ಸತತ ಏರುತ್ತಾ ಬಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು 30 ಮೇ 2018ರ ಬುಧವಾರ  ಕೊನೆಗೂ ಇಳಿದವು.  ಆದರೆ  ಇಳಿದದ್ದು ಕೇವಲ 1 ಪೈಸೆಯಷ್ಟು !  ಅಂದರೆ ಬೆಲೆ ಲೀಟರಿಗೆ 78ರಿಂದ 82ರ ಆಸುಪಾಸಿನಲ್ಲೇ ಇದೆ. ಅಚ್ಚರಿ ಪಡಬೇಡಿ, 5 ವರ್ಷಗಳ ಹಿಂದೆ ಕಾಂಗ್ರೆಸ್ ಕಾಲದಲ್ಲೂ ಪೆಟ್ರೋಲ್ ಬೆಲೆ ಇದ್ದದ್ದು ಹೆಚ್ಚು ಕಡಿಮೆ ಇದೇ ಮಟ್ಟದಲ್ಲಿ!

ಇಂಡಿಯನ್ ಆಯಿಲ್  ಕಾರ್ಪೋರೇಷನ್ (ಐಓಸಿ) ತನ್ನ  ವೆಬ್‌ಸೈಟಿನಲ್ಲಿ ಈದಿನ  ದೆಹಲಿ  ಮತ್ತು ಮುಂಬಯಿ ಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಅನುಕ್ರಮವಾಗಿ ಲೀಟರ್‌ಗೆ 60 ಮತ್ತು 59 ಪೈಸೆ ಇಳಿದಿರುವುದಾಗಿ ಪ್ರಕಟಿಸಿತ್ತು.

ಅದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಐಓಸಿ ತನ್ನ ಈ ಪ್ರಕಟಣೆಯನ್ನು ಸರಿಪಡಿಸಿ ಪೆಟ್ರೋಲ್‌ , ಡೀಸೆಲ್‌ ದರ ಕೇವಲ 1 ಪೈಸೆ ಇಳಿದಿರುವುದಾಗಿ ಸ್ಪಷ್ಟಪಡಿಸಿತು.

ಅಂತೆಯೇ ನಾಲ್ಕು ಮೆಟ್ರೋಪಾಲಿಟನ್‌ ನಗರಗಳಾಗಿರುವ  ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್‌ ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ತಿಳಿಸಿತು.

ಹಾಗೆಯೇ ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸೆಲ್‌ ಲೀಟರ್‌ ದರ ಅನುಕ್ರಮವಾಗಿ 69.30, 71.85, 73.78 ಮತ್ತು 73.17 ರೂ. ಇರುವುದಾಗಿ ಅದು ತಿಳಿಸಿತು.

ಆದರೆ ಇದಕ್ಕಿಂತಲೂ ಕುತೂಹಲಕರವಾದ ಮಾಹಿತಿ ಪ್ರಕಾರ ಐದು ವರ್ಷದ ಹಿಂದೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ (ಯುಪಿಎ) ಸರ್ಕಾರ ಇದ್ದ 2013ನೇ ಸಾಲಿನಲ್ಲೂ ಪೆಟ್ರೋಲ್ ಬೆಲೆ ಈದಿನ ದರಕ್ಕಿಂತ ಕಡಿಮೆ ಏನೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಇಲ್ಲಿ ಇರುವ ಎರಡು ಚಿತ್ರಗಳು 2013ರಲ್ಲಿನ ಪೆಟ್ರೋಲ್ ಬೆಲೆಯನ್ನು ತಿಳಿಸುತ್ತವೆ. ಅದಕ್ಕೆ ಸಮರ್ಥನೆಯಾಗಿ 17 ಸೆಪ್ಟೆಂಬರ್ 2013ರ ಪೆಟ್ರೋಲ್ ಬೆಲೆಯ ನೈಜ ಬಿಲ್ಲಿನ ಚಿತ್ರವೂ ಇಲ್ಲಿದೆ. ಆದಿನ ಗ್ರಾಹಕರೊಬ್ಬರು ಪಾವತಿ ಮಾಡಿದ ಪೆಟ್ರೋಲ್ ದರ ಲೀಟರಿಗೆ 82.87 ರೂಪಾಯಿ!


ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈಯಲ್ಲಿ 20 ಡಿಸೆಂಬರ್ 2013ರಂದು ಇದ್ದ ಪೆಟ್ರೋಲ್ ದರ ಲೀಟರಿಗೆ ಕ್ರಮವಾಗಿ 71.51, 78.6, 78.56 ಮತ್ತು 74.71 ರೂಪಾಯಿಗಳು.

ಇಂಧನ ದರ ಏರಿಕೆ ಮನಮೋಹನ್ ಸಿಂಗ್ ಕಾಲದಲ್ಲೂ ಹೀಗೆಯೇ ಇತ್ತು, ಈಗ ನರೇಂದ್ರ ಮೋದಿ ಕಾಲದಲ್ಲೂ ಹೀಗೆಯೇ ಇದೆ. ಬಹಳ  ವ್ಯತ್ಯಾಸವೇನೂ  ಇಲ್ಲ.

Saturday, September 23, 2017

ಭಾರತ ಭಯೋತ್ಪಾದನೆಯ ಮಾತೆ, ವಿಶ್ವಸಂಸ್ಥೆಯಲ್ಲಿ ಪಾಕ್ ಕುಹಕ



ವಿಶ್ವಸಂಸ್ಥೆ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಕಟುವಾಗಿತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪಾಕಿಸ್ತಾನವು ವಿಶ್ವಸಂಸ್ಥೆಯ 72ನೇ  ಮಹಾ ಅಧಿವೇಶನದಲ್ಲಿ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಕೆದಕಿದೆ. ಅಷ್ಟೇ ಅಲ್ಲ, “ಭಾರತವು ಭಯೋತ್ಪಾದನೆಯ ಮಾತೆ’ ಎಂದು ಟೀಕಿಸಿದೆ.
ಸುಷ್ಮಾ ಸ್ವರಾಜ್ ಅವರ ಕಟು ಟೀಕೆಗಳಿಗೆ ಉತ್ತರ ನೀಡಿದ ವಿಶ್ವ ಸಂಸ್ಥೆಯಲ್ಲಿನ ಪಾಕಿಸ್ತಾನದ ಕಾಯಂ ಪ್ರತಿನಿಧಿ ಡಾ. ಮಲಿಹಾ ಲೋಧಿ ಅವರು “ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತದ ಸಮರ ಅಪರಾಧಗಳ ಬಗ್ಗೆ  ಅಂತಾರಾಷ್ಟ್ರೀಯ ತನಿಖೆಯಾಗಲಿ ಎಂದು ಹೇಳಿದ್ದಾರೆ.
ಕಲಹಪ್ರಿಯ ಪಾಕಿಸ್ತಾನದ ಪ್ರತಿನಿಧಿ ಮಲಿಹಾ ಲೋಧಿ ಅವರ ಕೆಲವು ‘ಅಣಿಮುತ್ತುಗಳು’ ಇಂತಿವೆ:
·         * ಭಾರತ ದಕ್ಷಿಣ ಏಷ್ಯಾದಲ್ಲಿನ ಭಯೋತ್ಪಾದನೆಯ ಮಾತೆ.
·         * ವಿಶ್ವದ  ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ  ಭಾರತವು ವಾಸ್ತವದಲ್ಲಿ ಅತ್ಯಂತ ದೊಡ್ಡ  ಬೂಟಾಟಿಕೆಯ ರಾಷ್ಟ್ರ.
·         * ಕಾಶ್ಮೀರದಲ್ಲಿ ಭಾರತ ಸರ್ಕಾರಿ ಪ್ರಾಯೋಜಿತ ಹಿಂಸೆ ನಡೆಸುತ್ತಿದೆ.  ಜಮ್ಮು ಮತ್ತು ಕಾಶ್ಮೀರದ ಮೂಲ ವಿಷಯವನ್ನು ಮರೆ ಮಾಚುತ್ತಿದೆ. (ಪೆ್ಲ್ಲೆಟ್ / ಬುಲ್ಲೆಟ್ ಗಾಯದ ಮಹಿಳೆಯೊಬ್ಬಳ ಫೊಟೋ ತೋರಿಸಿ “ಇದು ನೋಡಿ ಭಾರತದ ಮುಖ’ ಎಂದರು).
·         *ಮೋದಿ ಸರ್ಕಾರ ವರ್ಣೀಯ ಮತ್ತು ಫ್ಯಾಸಿಸ್ಟ್ ಸಿದ್ಧಾಂತದಲ್ಲಿ ನೆಡಲ್ಪಟ್ಟಿರುವ ಸರ್ಕಾರ.  
(
ಹೆಚ್ಚಿನ ವಿವರಗಳಿಗೆ ಓದಿರಿ:www.paryaya.com)