Saturday, May 12, 2018

ಮುಕ್ತಿನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೊದಲ ವಿಶ್ವ ನಾಯಕ ನರೇಂದ್ರ ಮೋದಿ


ಮುಕ್ತಿನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ
ಮೊದಲ ವಿಶ್ವ ನಾಯಕ ನರೇಂದ್ರ ಮೋದಿ

ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಗಳು ಮತ್ತು ಬೌದ್ಧರಿಗೆ ಪವಿತ್ರವಾದ ನೇಪಾಳದ ಮುಕ್ತಿನಾಥ ದೇವಾಲಯದಲ್ಲಿ 2018 ಮೇ 12ರ ಶನಿವಾರ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೊತ್ತ ಮೊದಲ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೋದಿ ಅವರು ಬಾಗ್ಮತಿ ನದಿದಂಡೆಯಲ್ಲಿರುವ ಪಶುಪತಿ ನಾಥದೇವಾಲಯದಲ್ಲೂ ಪ್ರಾರ್ಥನೆ ಸಲ್ಲಿಸಿದರು. ಪಶುಪತಿನಾಥ ದೇವಾಲಯವು ನೇಪಾಳದಲ್ಲಿನ ಅತ್ಯಂತ ಹಳೆಯ ಹಾಗೂ ಪವಿತ್ರ ದೇವಾಲಯ.


ಪಶುಪತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಮೋದಿಯವರು ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡಿದರು. ಅವರಿಗೆ ದೇವಾಲಯದ ಕಿರು ಪ್ರತಿಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.
ನೇಪಾಳ ಪ್ರವಾಸದ ಎರಡನೇ ದಿನ ಮುಸ್ತಾಂಗ್ ಜಿಲ್ಲೆಯಿಂದ ವಾಯಮಾರ್ಗ ಮೂಲಕವಾಗಿ ಮುಕ್ತಿನಾಥಕ್ಕೆ ತೆರಳಿದ ಮೋದಿ ಅವರು  12172 ಅಡಿ ಎತ್ತರದಲ್ಲಿರುವ ಪವಿತ್ರ ಮುಕ್ತಿನಾಥ ದರ್ಶನ ಪಡೆದರು. ತನ್ಮೂಲಕ ಭಾರತ ಮತ್ತು ನೇಪಾಳದ ನಡುವಿನ ಪ್ರಾಚೀನ ಸಾಂಸ್ಕೃತಿಕ ಬಾಂಧವ್ಯಕ್ಕೆ ಸುಭದ್ರ ಬೆಸುಗೆ ಹಾಕಿದರು.

No comments:

Post a Comment