ರಾಹುಲ್ ಗಾಂಧಿ ಜೊತೆ ಮದುವೆ, ಸುಳ್ಳು
ನವದೆಹಲಿ: ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಶಾಸಕಿಯನ್ನು ಮದುವೆಯಾಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಫೋಟೋಗಳ ಸಮೇತ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿಯನ್ನು ಶಾಸಕಿ ನಿರಾಕರಿಸಿದ್ದಾರೆ.
ರಾಯ್ ಬರೇಲಿಯ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರೊಂದಿಗೆ ರಾಹುಲ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅದಿತಿ ಸಿಂಗ್ ಅವರು ಇದು ನನಗೆ ಬಹಳ ನೋವು ತಂದಿದೆ. ಅವರು ನನ್ನ ಹಿರಿಯಣ್ಣನ ಸಮಾನ ಎಂದು ಟ್ವೀಟ್ ಮಾಡಿದ್ದಾರೆ.
೨೯ ರ ಹರೆಯದ ಅದಿತಿ ಸಿಂಗ್ ಅವರು ಅಮೆರಿಕದ ಡ್ನೂಕ್ ವಿವಿಯಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣ ಪಡೆದಿದ್ದು, ರಾಯ್ ಬರೇಲಿಯಲ್ಲಿ ೫ ಬಾರಿ ಗೆದ್ದ ಶಾಸಕ ಅಖೀಲೇಶ್ ಸಿಂಗ್ ಅವರ ಪುತ್ರಿ . ಕಳೆದ ಚುನಾವಣೆಯಲ್ಲಿ ೯೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ರಾಹುಲ್ ಗಾಂಧಿ ಅವರ ಜೊತೆಗೆ ತಮ್ಮ ಮದುವೆಯಾಗಿದೆ ಎಂಬ ಪುಕಾರುಗಳ ಬಗ್ಗೆ ಭಾನುವಾರ ಅದಿತಿ ಸಿಂಗ್ ಅವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
’ಇಂತಹ ಬುಡರಹಿತ ಪುಕಾರುಗಳನ್ನು ಹರಡುತ್ತಿರುವದಕ್ಕೆ ನನಗೆ ನಿಜವಾಗಿಯೂ ಬೇಸರವಾಗಿದೆ. ರಾಹುಲ್ ಜಿ ನನಗೆ ಹಿರಿಯಣ್ಣನಿದ್ದಂತೆ. ನಾನು ಧಾರ್ಮಿಕ ಆಚಾರದಂತೆ ಅವರ ಕೈಗಳಿಗೆ ರಾಖಿ ಕಟ್ಟಿದ್ದೇನೆ. ಸಂಬಂಧದ ಕತೆ ಕಟ್ಟಿರುವವರು ಸಂಪೂರ್ಣವಾಗಿ ತಪ್ಪು ಭಾವಿಸಿದ್ದಾರೆ ಮತ್ತು ನನ್ನ ಹಾಗೂ ರಾಹುಲ್ ಅವರ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶ ಹೊಂದಿದ್ದಾರೆ’ ಎಂದು ಟ್ವಿಟ್ಟರಿನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ ಬಳಿಕ ಪತ್ರಿಕೆಯೊಂದರ ಜೊತೆಗೆ ಮಾತನಾಡುತ್ತಾ ಸಿಂಗ್ ಪ್ರತಿಕ್ರಿಯಿಸಿದರು.
ಕರ್ನಾಟಕದ ಚುನಾವಣೆಯ ಹಿನ್ನೆಲೆಯಲ್ಲಿ ಈ ಅಪಪ್ರಚಾರ ಮಾಡಲಾಗಿದೆ ಎಂದೂ ಅವರು ಹೇಳಿದರು.
No comments:
Post a Comment