2020: ನವದೆಹಲಿ:
೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ,
ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಫೆಬ್ರುವರಿ ೧ರ ಶನಿವಾರ ಬೆಳಗ್ಗೆ
೬ ಗಂಟೆಗೆ ಗಲ್ಲಿಗೇರಿಸಲು ನೀಡಲಾಗಿದ್ದ ಆದೇಶದ ಜಾರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯವು 2020
ಜನವರಿ
31ರ ಶುಕ್ರವಾರ ಸಂಜೆ ತಡೆಯಾಜ್ಞೆ ನೀಡಿತು.
ಮರಣದಂಡನೆ
ಜಾರಿಯನ್ನು ತಡೆ ಹಿಡಿಯುವಂತೆ ಕೋರಿ ಶಿಕ್ಷಿತ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ,
ಅರ್ಜಿಯ
ಕುರಿತು ಮುಂದಿನ ಆದೇಶ ನೀಡುವವರೆಗೆ ಗಲ್ಲು ಜಾರಿಯನ್ನು ತಡೆಹಿಡಿದಿರುವುದಾಗಿ ಪ್ರಕಟಿಸಿತು.
ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ ನತದೃಷ್ಟ ಯುವತಿಯ ತಾಯಿ ಆಶಾದೇವಿ ಅವರು ನ್ಯಾಯಾಲಯವು ಗಲ್ಲು ಶಿಕ್ಷೆಯ ಜಾರಿಗೆ ತಡೆಯಾಜ್ಞೆ ನೀಡಿದ ಕೆಲವೇ ನಿಮಿಷಗಳಲ್ಲಿ ನ್ಯಾಯಾಲಯದಲ್ಲೇ ಬಿಕ್ಕಳಿಸಿ ಅತ್ತ ಘಟನೆಯೂ ಘಟಿಸಿತು.
ಶಿಕ್ಷಿತ ಅಪರಾಧಿಗಳು ಮರಣದಂಡನೆ ಜಾರಿಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡುವಂತೆ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು ಎಂದು ಶಿಕ್ಷಿತರ ಪರ ವಕೀಲ ಎಪಿ
ಸಿಂಗ್ ಹೇಳಿದರು. ’
ಈ ಶಿಕ್ಷಿತರು ಭಯೋತ್ಪಾದಕರಲ್ಲ’ ಎಂದು
ಅವರು ನುಡಿದರು.
ಸೆರೆಮನೆ ನಿಯಮಾವಳಿಯ ೮೩೬ನೇ ನಿಯಮವನ್ನು ಉಲ್ಲೇಖಿಸಿದ ವಕೀಲರು ’
ಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳು ಮರಣದಂಡನೆಗೆ ಗುರಿಯಾಗಿರುವ ಪ್ರಕರಣಗಳಲ್ಲಿ ಎಲ್ಲ ಶಿಕ್ಷಿತರೂ ತಮ್ಮ ಕಾನೂನುಬದ್ಧ ಪರಿಹಾರಗಳ ಆಯ್ಕೆಯನ್ನು ಚಲಾಯಿಸುವವರೆಗೂ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವಂತಿಲ್ಲ ಎಂದು ಈ ನಿಯಮ ಹೇಳುತ್ತದೆ’ ಎಂದು
ವಿವರಿಸಿದರು.
ಶಿಕ್ಷಿತರಲ್ಲಿ ಒಬ್ಬನಾಗಿರುವ ಪವನ್ ಕುಮಾರ್ ಗುಪ್ತ ತನ್ನ ಅಪ್ರಾಪ್ತ ವಯಸ್ಸಿನ ಪ್ರತಿಪಾದನೆಯನ್ನು ತಿರಸ್ಕರಿಸಿದ್ದರ ವಿರುದ್ಧ ಸುಪ್ರಿಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು,
ಅಕ್ಷಯ್ ಕುಮಾರ್ ಸಲ್ಲಿಸಿದ ಕುರೇಟಿವ್ ಅರ್ಜಿ ತಿರಸ್ಕೃತಗೊಂಡಿದೆ.
ಸುಪ್ರೀಂಕೋರ್ಟಿನ ಆದೇಶ ಲಭಿಸಿದ ಬಳಿಕ ನಾನು ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಲಿದ್ದೇನೆ’ ಎಂದು
ಪವನ್ ಕುಮಾರ್ ಗುಪ್ತನನ್ನು ಪ್ರತಿನಿಧಿಸಿದ ವಕೀಲ ಸಿಂಗ್ ನುಡಿದರು.
ಏನಿದ್ದರೂ,
ಪವನ್ ಗುಪ್ತ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಬಳಿಕ ತಿರಸ್ಕರಿಸಿತು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಪ್ರಸ್ತುತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ (
ಜಿಡಿಪಿ)
ಶೇ ೫ರಷ್ಟು ಇರಲಿದೆ
ಹಾಗೂ ಮಾರ್ಚ್ ೨೦೨೧ಕ್ಕೆ ಕೊನೆಯಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ ೬-
೬.
೫ ರಷ್ಟಕ್ಕೆ ಏರಲಿದೆ
ಎಂದು ಸರ್ಕಾರದ ಆರ್ಥಿಕ ಸಮೀಕ್ಷೆ ಅಂದಾಜು ಮಾಡಿತು. ಸಮೀಕ್ಷೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ
ಸೀತಾರಾಮನ್ ಅವರು ಸದನದಲ್ಲಿ 2020 ಜನವರಿ 31ರ ಶುಕ್ರವಾರ ಮಂಡಿಸಿದರು. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ೨೦೧೯-
೨೦ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ ೭ರಷ್ಟು ಇರಲಿದೆ
ಎಂದು ಅಂದಾಜು ಮಾಡಲಾಗಿತ್ತು.
ಆದರೆ,
ಜಿಡಿಪಿ ಶೇ ೫ಕ್ಕೆ ಕುಸಿಯಿತು.
ಆರ್ಥಿಕತೆಗೆ ಚೇತರಿಕೆ ನೀಡುವುದು,
ಏಪ್ರಿಲ್ ನಿಂದ ಆರಂಭವಾಗುವ ೨೦೨೦-
೨೧ರ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ಸವಾಲು ಎದುರಿಸಲು ವಿತ್ತೀಯ ಕೊರತೆ ಗುರಿಯನ್ನು ಸಡಿಲಗೊಳಿಸುವ ಅನಿವಾರ್ಯತೆ ಇರುವುದಾಗಿ ಸಮೀಕ್ಷೆ ಹೇಳಿತು.
೨೦೧೯ರ
ಏಪ್ರಿಲ್ ನಲ್ಲಿ ಶೇ ೩.
೨ರಷ್ಟಿದ್ದ
ಹಣದುಬ್ಬರ ಡಿಸೆಂಬರ್ ವೇಳೆಗೆ ಶೇ ೨.
೬ಕ್ಕೆ
ಕುಸಿದಿದೆ.
ಆರ್ಥಿಕತೆ ಮೇಲೆ ಆಗಿರುವ ಬೇಡಿಕೆ ಕುಸಿತದ ಪರಿಣಾಮವನ್ನು ಇದು ಬಿಂಬಿಸುತ್ತಿದೆ.
೨೦೧೮-
೧೯ರಲ್ಲಿ ವಿತ್ತೀಯ ಕೊರತೆ ಗುರಿ ಶೇ.
೩.
೩ರಷ್ಟಿತ್ತು.
೨೦೧೯ರ ಬಜೆಟ್ ವೇಳೆ,
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೧೯-
೨೦ರ ಗುರಿಯನ್ನು ಶೇ.
೩.
೪ರಿಂದ
ಶೇ.
೩.
೩ಕ್ಕೆ ಇಳಿಸಿದ್ದರು.
ಮುಂದಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಪರಿಷ್ಕರಿಸುವ ಅಗತ್ಯವನ್ನು ತಿಳಿಸಲಾಗಿದ್ದು,
ಎಂಕೇಯ್ ಬ್ರೊಕರೇಜ್ ಶೇ ೩.
೫
ಆಗಲಿದೆ ಎಂದು ಅಂದಾಜು ಮಾಡಲಾಗಿದೆ. . (
ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ಜಿನೇವಾ
(
ಸ್ವಿಜರ್ಲೆಂಡ್):
ಚೀನಾವನ್ನು ನಡುಗಿಸುತ್ತಿರುವ ಮಾರಣಾಂತಿಕ ಕೊರೋನಾವೈರಸ್
ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದ್ದಂತೆಯೇ
ವ್ಯಾಧಿಯ ಗಂಭೀರತೆಯನ್ಹು ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆಯು (
ಡಬ್ಲ್ಯುಎಚ್
ಒ)
ಅಂತಾರಾಷ್ಟ್ರೀಯ
ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಣೆ ಮಾಡಿತು. ಇತರ ದೇಶಗಳು ಅಪಾಯದಲ್ಲಿರುವ ಕಾರಣ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು ಇದೊಂದು "
ಅಸಾಮಾನ್ಯ ಘಟನೆ"
ಎಂದು ವಿಶ್ವ ಆರೋಗ್ಯ ಸಂಸ್ಥೆ ಬಣ್ಣಿಸಿತು. ಮೂರು ವಾರಗಳ ಹಿಂದೆ ಚೀನಾದ ನಗರವಾದ ವುಹಾನ್
ನಲ್ಲಿ ಆರಂಭವಾಗಿರು ಕೊರೋನಾವೈರಸ್ ಸೃಷ್ಟಿಸಿರುವ ಅಸಾಮಾನ್ಯ ಸ್ಥಿತಿಯ ಹಿನ್ನೆಲೆಯಲ್ಲಿ,
ವೈರಸ್ ನಿಯಂತ್ರಣಕ್ಕೆ ಜಾಗತಿಕವಾದ ಸಂಘಟಿತ ಪ್ರಯತ್ನ ಅಗತ್ಯ ಎಂದು ಸಂಸ್ಥೆ ಹೇಳಿತು. ಹೊಸ ವೈರಸ್
ನಿಂದ ಈವರೆಗೆ ಸತ್ತಿರುವವರ ಸಂಖ್ಯೆ ಚೀನಾದಲ್ಲಿ ಸುಮಾರು ೨೧೩ಕ್ಕೆ ತಲುಪಿದೆ ಮತ್ತು ವರದಿಯಾದ ಪ್ರಕರಣಗಳ ಸಂಖ್ಯೆ ೧೦,
೦೦೦ಕ್ಕೆ ಏರಿದೆ.
ಚೀನಾದ ಹುಬೈ ಪ್ರಾಂತ ಒಂದರಲ್ಲೇ ಸತ್ತವರ ಸಂಖ್ಯೆ ೨೦೪ಕ್ಕೆ ಏರಿದೆ.
೧೯೮೨ ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದೆ.
ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.
ವಿಶ್ವ
ಆರೋಗ್ಯ ಸಂಸ್ಥೆಯ ಪ್ರಕಾರ ೧೮ ದೇಶಗಳಲ್ಲಿ ೧೦೦
ಪ್ರಕರಣಗಳು ಪತ್ತೆಯಾಗಿದ್ದು,
ಎಲ್ಲಡೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಇಟಲಿ ಕೂಡಾ ತನ್ನ ದೇಶಕ್ಕೆ ಬಂದ ಇಬ್ಬರು ಚೀನೀ ಪ್ರವಾಸಿಗರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಇಟಲಿಯು
ತನ್ನ ಎಲ್ಲ ಚೀನೀ ವಿಮಾನ ಸೇವೆಗಳನ್ನು ರದ್ದು ಪಡಿಸಿತು. ‘
ಚೀನಾದಲ್ಲಿ ಏನಾಗುತ್ತಿದೆ ಎಂಬುದು ಈ ಘೋಷಣೆಗೆ ಮುಖ್ಯ
ಕಾರಣವಲ್ಲ,
ಬದಲಿಗೆ ಇತರ ದೇಶಗಳಲ್ಲಿ ಏನಾಗುತ್ತಿದೆ ಎಂಬುದು ಇದಕ್ಕೆ ಕಾರಣ.
ದುರ್ಬಲ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳು ಈ ವ್ಯಾಧಿಯನ್ನು ಎದುರಿಸಲು
ಯಾವುದೇ ಸಿದ್ಧತೆಯನ್ನೂ ಹೊಂದಿಲ್ಲವಾದ ಕಾರಣ ವ್ಯಾಧಿ ತಡೆಗೆ ಸಂಘಟಿತವಾದ ಕ್ರಮಗಳ ಅಗತ್ಯವಿದೆ’
ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು. ‘
ನಾವೆಲ್ಲರೂ ಒಗ್ಗಟ್ಟಿನಿಂದ ನಿಂತಾಗ ಮಾತ್ರ ಅದನ್ನು ತಡೆಯಬಹುದು’
ಎಂದು ಟೆಡ್ರೊಸ್ ನುಡಿದರು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ದಕ್ಷಿಣ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಬಳಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರ ನೋಂದಣಿ ವಿರೋಧಿ ಪ್ರತಿಭಟನಾಕಾರರ ಮೇಲೆ ವ್ಯಕ್ತಿಯೊಬ್ಬ ಪಿಸ್ತೂಲು ಝಳಪಿಸುತ್ತಾ ಗುಂಡು ಹಾರಿಸಿದ ಘಟನೆ 2020
ಜನವರಿ
30ರ ಗುರುವಾರ ಘಟಿಸಿದ್ದು,
ವಿದಾರ್ಥಿಯೊಬ್ಬ ಗುಂಡೇಟಿನಿಂದ ಗಾಯಗೊಂಡ ಎಂದು ವರದಿಗಳು ತಿಳಿಸಿದವು.
ಗುಂಡು
ಹಾರಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಜೇವಾರ್ ಜಿಲ್ಲೆಯ ೩೧ರ ಹರೆಯದ ಗೋಪಾಲ್ ಎಂಬುದಾಗಿ ಗುರುತಿಸಲಾಯಿತು. ಆತನನ್ನು
ವಶಕ್ಕೆ ತೆಗೆದುಕೊಳ್ಳಲಾಗಿದ್ದು,
ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. "
ಪಿಸ್ತೂಲು ಝಳಪಿಸುತ್ತ ಬಂದ ಯುವಕ ’
ಯೇ ಲೋ ಆಜಾದಿ,
ಆವೋ ಮೈ ಶೂಟ್ ಕರೂಂಗಾ’ (
ಇದೋ
ತೆಗೆದುಕೊಳ್ಳಿ ಸ್ವಾತಂತ್ರ್ಯ,
ಬನ್ನಿ ನಾನು ನಿಮ್ಮ ಮೇಲೆ ಗುಂಡು ಹಾರಿಸುತ್ತೇನೆ’ ಎಂದು
ಘೋಷಣೆ ಕೂಗುತ್ತಾ ಪ್ರತಿಭಟನಕಾರರತ್ತ ಗುಂಡು ಹಾರಿಸಿದ ಎಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದ ಪ್ರತ್ಯಕ್ಷದರ್ಶಿ ವಿದ್ಯಾರ್ಥಿಯೊಬ್ಬರು ಹೇಳಿದರು.
ಈ
ಮಧ್ಯೆ,
ಸಾಮಾಜಿಕ ಮಾಧ್ಯಮದಲ್ಲಿ ಗುಂಡು ಹಾರಿಸಿದ ಘಟನೆಯ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಗುಂಡು ಹಾರಿಸಿದ ವ್ಯಕ್ತಿ ‘
ಜೈ ಶ್ರೀ ರಾಮ್’ ಘೋಷಣೆ
ಕೂಗುತ್ತಿರುವುದು ಮತ್ತು ಪ್ರತಿಭಟನಾಕಾರರು ಭಾರತದಲ್ಲಿ ಉಳಿಯಲು ಬಯಸಿದರೆ ’
ವಂದೇ ಮಾತರಂ’ ಜಪಿಸಬೇಕು’
ಎಂದು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದ್ದು ದಾಖಲಾಗಿದೆ.
ಗುಂಡೇಟಿನಿಂದ ಗಾಯಗೊಂಡ ವಿದ್ಯಾರ್ಥಿಯನ್ನು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಶಾದಾಬ್ ಫರೂಕ್ ಎಂಬುದಾಗಿ ಗುರುತಿಸಲಾಗಿದ್ದು ಅವರ ಕೈಗೆ ಗುಂಡು ತಗುಲಿದೆ.
ಘಟನೆಯ ಬೆನ್ನಲ್ಲೆ ಗಾಯಾಳುವನ್ನು ಜಾಮಿಯಾ ನಗರದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸೇರಿಸಿ ಬಳಿಕ ಏಮ್ಸ್
ಗೆ ಸ್ಥಳಾಂತರಿಸಲಾಯಿತು.
ಗಾಯಾಳುವಿನ ಆರೋಗ್ಯ
ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿದವು. ವಿಶ್ವವಿದ್ಯಾಲಯದ ಆವರಣದಿಂದ ಮಧ್ಯ
ದೆಹಲಿಯ ಜಂತರ್ ಮಂತರ್
ಗೆ ಪ್ರತಿಭಟನಾ ಮೆರವಣಿಗೆ
ಹೋಗುತ್ತಿದ್ದಾಗ ಈ ಘಟನೆ ಘಟಿಸಿತು.
ಘಟನೆ ನಡೆದಾಗ ಅಲ್ಲಿದ್ದ ಪೊಲೀಸರು ಘಟನೆಯನ್ನು ನೋಡುತ್ತಾ ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಪಾದಿಸಿದರು.
ಗುಂಡು ಹಾರಾಟದ ಘಟನೆಯ ಬಳಿಕ,
ಹೆಚ್ಚಿನ ಪ್ರತಿಭಟನೆಗಳಾಗಬಹುದು ಎಂಬ ಹಿನ್ನೆಲೆಯಲ್ಲಿ ದೆಹಲಿಯ ಮೂರು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಾದ ಜಾಮಾ ಮಸೀದಿ,
ಐಟಿಒ ಮತ್ತು ದೆಹಲಿ ಗೇಟ್ ದ್ವಾರಗಳನ್ನು ಅಧಿಕಾರಿಗಳು ಮುಚ್ಚಿದರು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿ ಎನ್.
ವಿ.
ರಮಣ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು 2020
ಜನವರಿ 30ರ ಗುರುವಾರ ತಿರಸ್ಕರಿಸಿತು.
ತನ್ನ ಕೊಠಡಿಯಲ್ಲೇ ಅರ್ಜಿಯನ್ನು ಆಲಿಸಿದ ಬಳಿಕ ಗಲ್ಲು ಶಿಕ್ಷೆಯಿಂದ ಪಾರುಮಾಡುವಂತೆ ಕೋರಿರುವ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿ ಪೀಠವು ಅರ್ಜಿಯನ್ನು ವಜಾಗೊಳಿಸಿತು.
ಮರಣದಂಡನೆಗೆ ತಡೆಯಾಜ್ಞೆ ನೀಡುವಂತೆ ಮಾಡಿದ ಅಕ್ಷಯ್ ಮನವಿಯಲ್ಲೂ ಯಾವುದೇ ಅರ್ಹತೆ ಇಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.
ನಾಲ್ಕೂ ಮಂದಿ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಈಗಾಗಲೇ ಫೆಬ್ರುವರಿ ೧ರ ದಿನಾಂಕವನ್ನು ನಿಗದಿ
ಪಡಿಸಿ ಡೆತ್
ವಾರಂಟ್ ಹೊರಡಿಸಲಾಗಿದೆ.
ದೆಹಲಿ
ಕೋರ್ಟ್ ನಿರ್ದೇಶನ: ಈ
ಬೆಳವಣಿಗೆಯ ಮಧ್ಯೆ,
ದೆಹಲಿಯ ವಿಚಾರಣಾ ನ್ಯಾಯಾಲಯವು ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡುವಂತೆ ನಿರ್ಭಯಾ ಪ್ರಕರಣದ ಶಿಕ್ಷಿತ ಅಪರಾಧಿಗಳು ಸಲ್ಲಿಸಿದ ಮನವಿಗೆ ಉತ್ತರ ನೀಡುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ 2020
ಜನವರಿ
30ರ ಗುರುವಾರ ಆಜ್ಞಾಪಿಸಿತು.
ವಿಶೇಷ ನ್ಯಾಯಾಧೀಶ ಎಕೆ ಜೈನ್ ಅವರು ಜನವರಿ ೩೧ರ ಶುಕ್ರವಾರ
ಬೆಳಗ್ಗೆ ೧೦ ಗಂಟೆ ಒಳಗಾಗಿ ತಮ್ಮ ಉತ್ತರವನ್ನು ಸಲ್ಲಿಸುವಂತೆ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ದೆಹಲಿಯ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರ ಮೇಲೆ ಅಪ್ರಾಪ್ತ ವಯಸ್ಕನೆಂದು ಹೇಳಲಾಗುತ್ತಿರುವ ಶಸ್ತ್ರಧಾರಿ ವ್ಯಕ್ತಿ ಗುಂಡು ಹಾರಿಸಿದ ಘಟನೆಯ ಬೆನ್ನಲ್ಲೆ 2020
ಜನವರಿ 30ರ ಗುರುವಾರ ದೆಹಲಿ ಪೊಲೀಸ್ ಕಮೀಷನರ್ ಜೊತೆಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ’
ಅಪರಾಧಿಯನ್ನು ಬಿಡುವುದಿಲ್ಲ’ ಎಂದು
ಹೇಳಿದರು. ‘
ನಾನು ದೆಹಲಿ ಪೊಲೀಸ್ ಕಮೀಷನರ್ ಜೊತೆಗೆ ಶೂಟಿಂಗ್ ಘಟನೆಯ (
ಜಾಮಿಯಾ ಪ್ರದೇಶದಲ್ಲಿ)
ಬಗ್ಗೆ ಮಾತನಾಡಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ.
ಇಂತಹ ಯಾವುದೇ ಘಟನೆಯನ್ನು ಕೇಂದ್ರ ಸರ್ಕಾರವು ಸಹಿಸುವುದಿಲ್ಲ,
ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಪರಾಧಿಯನ್ನು ಬಿಟ್ಟು ಬಿಡಲಾಗುವುದಿಲ್ಲ’ ಎಂದು
ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದರು.
ಈ ಮಧ್ಯೆ,
ಘಟನೆಗೆ
ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ನಶಿಸುತ್ತಿರುವ ಬಗ್ಗೆ ಕಾಳಜಿ ವಹಿಸುವಂತೆ ಗೃಹ ಸಚಿವರನ್ನು ಒತ್ತಾಯಿಸಿದರು. ‘
ದೆಹಲಿಯಲ್ಲಿ
ಏನಾಗುತ್ತಿದೆ?
ಕಾನೂನು ಮತ್ತು ಸುವ್ಯವಸ್ಥೆ ನಶಿಸುತ್ತಿದೆ.
ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ದಯವಿಟ್ಟು ಕಾಳಜಿ ವಹಿಸಿ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಚೀನಾದ
ವುಹಾನ್ ನಗರದಿಂದ ಭಾರತಕ್ಕೆ ವಾಪಸಾಗಿರುವ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ದೃಢ ಪಡಿಸಿತು.
ಇದರೊಂದಿಗೆ ಕೇರಳದಲ್ಲಿ ಭಾರತದ ಮೊದಲ ಕೊರೋನಾವೈರಸ್ ಪ್ರಕರಣ ಪತ್ತೆಯಾಯಿತು. ‘
ವುಹಾನ್
ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ನೂತನ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಬಗ್ಗೆ ಕೇರಳದಿಂದ ವರದಿಯಾಗಿದೆ.
ರೋಗಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಾತರಿಯಾಗಿದ್ದು ಆಕೆಯನ್ನು ಆಸ್ಪತ್ರೆಯಲ್ಲಿ ಏಕಾಂಗಿವಾಸದಲ್ಲಿ ಇರಿಸಲಾಗಿದೆ ಎಂದು ಅರೋಗ್ಯ ಸಚಿವಾಲಯ ಹೇಳಿತು. ವಿದ್ಯಾರ್ಥಿನಿಯ ಆರೋಗ್ಯ ಸ್ಥಿರವಾಗಿದ್ದು,
ಆಕೆಯ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇರಳ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಮಧ್ಯಾಹ್ನ ೩ ಗಂಟೆಗೆ ತುರ್ತು
ಸಭೆ ಕರೆದಿದ್ದರು.
ರಾಜ್ಯದ ಎಲ್ಲ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನಲ್ಲಿ ’
ಏಕಾಂಗಿ ವಾಸ’ದ ವಾರ್ಡ್
ಗಳನ್ನು
ಸಜ್ಜುಗೊಳಿಸಲಾಗಿದೆ.
ದೇಶದ ಪ್ರಪ್ರಥಮ ಕೊರೋನಾವೈರಸ್ ಕೇರಳದಲ್ಲಿ ಪತೆಯಾದ ಬಳಿಕ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಯಿತು. ಕೇರಳದಲ್ಲಿ ಒಟ್ಟು ೮೦೬ ಜನರನ್ನು ತೀವ್ರ ನಿಗಾದಲ್ಲಿ ಇರಿಸಲಾಯಿತು ಈ ಮಧ್ಯೆ,
ದೆಹಲಿಯ ರಾಮಮನೋಹರ ಲೋಹಿಯಾ (
ಆರ್
ಎಂಎಲ್)
ಆಸ್ಪತ್ರೆಗೆ ದಾಖಲಾಗಿದ್ದ ಮೂವರು ರೋಗಿಗಳನ್ನು ಗುರುವಾರ ಕೊರೋನಾವೈರಸ್ ಸೋಂಕು ಇಲ್ಲವೆಂದು ಖಚಿತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಈ ಮೂರೂ ಮಂದಿಯ
ಮೇಲೆ ಅವರು
ಉಸಿರಾಟದ ಸಮಸ್ಯೆ ಬಗ್ಗೆ ದೂರಿದ ಬಳಿಕ ಸೋಮವಾರದಿಮದ ವೈದ್ಯಕೀಯ ಚಿಕಿತ್ಸೆಗಾಗಿ ತೀವ್ರ ನಿಗಾ ಇಡಲಾಗಿತ್ತು. (
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)