ನಾನು ಮೆಚ್ಚಿದ ವಾಟ್ಸಪ್

Tuesday, January 7, 2020

ಇಂದಿನ ಇತಿಹಾಸ History Today ಜನವರಿ 07

 ಇಂದಿನ ಇತಿಹಾಸ  History Today ಜನವರಿ 07 
2020: ನವದೆಹಲಿ: ಏಳು ವರ್ಷಗಳ ಹಿಂದೆ, ೨೦೧೨ರ ಡಿಸೆಂಬರ್ ೧೬ರ ರಾತ್ರಿ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ  ’ನಿರ್ಭಯಾಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರ ಹಲ್ಲೆ ನಡೆಸಿ ಆಕೆಯ ದಾರುಣ ಸಾವಿಗೆ ಕಾರಣರಾದ ನಾಲ್ವರು ಅಪರಾಧಿಗಳ ವಿರುದ್ಧ 2020 ಜನವರಿ 07ರ ಮಂಗಳವಾರಡೆತ್ ವಾರಂಟ್ಹೊರಡಿಸಿದ ದೆಹಲಿಯ ನ್ಯಾಯಾಲಯ, 2020 ಜನವರಿ ೨೨ರ ಬೆಳಗ್ಗೆ ಗಂಟೆಗೆ ಅವರನ್ನು ಗಲ್ಲಿಗೆ ಏರಿಸುವಂತೆ ಆದೇಶ ನೀಡಿತು.  ಯುವ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆಸಿದ ೨೦೧೨ರ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಲೆ ಕೃತ್ಯದಲ್ಲಿ ಅಕ್ಷಯ್ ಥಾಕೂರ್ ಸಿಂಗ್, ಮುಖೇಶ್, ಪವನ್ ಗುಪ್ತ ಮತ್ತು ವಿನಯ್ ಶರ್ಮ ಅವರ ಅಪರಾಧಗಳು ಸಾಬೀತಾಗಿದ್ದು ಅವರಿಗೆ ವಿಧಿಸಲಾಗಿರುವ ಮರಣದಂಡನೆ ಜಾರಿಗೆ ನ್ಯಾಯಾಲಯ ಆದೇಶ ನೀಡಿದೆ. ಅಪರಾಧ ಕೃತ್ಯದಲ್ಲಿ ಶಾಮೀಲಾಗಿದ್ದ ಮಂದಿಯ ಪೈಕಿ ಒಬ್ಬನನ್ನು ಬಾಲಾಪರಾಧಿ ಎಂಬುದಾಗಿ ಪರಿಗಣಿಸಿ ೨೦೧೫ರ ಡಿಸೆಂಬರ್ ೨೦ರಂದು ಬಿಡುಗಡೆ ಮಾಡಲಾಗಿತ್ತುಇನ್ನೊಬ್ಬ ಆರೋಪಿ ರಾಮ್ ಸಿಂಗ್ ವಿಚಾರಣೆ ವೇಳೆಯಲ್ಲಿಯೇ ಸೆರೆಮನೆಯಲ್ಲೇ ಆತ್ಯಹತ್ಯೆ ಮಾಡಿಕೊಂಡಿದ್ದ. ನಾಲ್ಕು ಮಂದಿ ಅಪರಾಧಿಗಳ ವಿರುದ್ಧ ನ್ಯಾಯಾಲಯವು ಹೊರಡಿಸಿದ ಡೆತ್ ವಾರಂಟ್ ಮತ್ತು ಗಲ್ಲು ಶಿಕ್ಷೆಯ ಜಾರಿಯುನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರು ಇರಿಸಿದ ನಂಬಿಕೆಯನ್ನು ಬಲಪಡಿಸುವುದು ಮತ್ತು ನನ್ನ ಮಗಳಿಗೆ ನ್ಯಾಯ ಒದಗಿಸುವುದರ ಜೊತೆಗೆ ಮಹಿಳೆಯನ್ನು ಸಬಲಗೊಳಿಸುವುದುಎಂದು ಡೆತ್ ವಾರಂಟ್ ಹೊರಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಮೃತ ನಿರ್ಭಯಾಳ ತಾಯಿ ಪ್ರತಿಕ್ರಿಯಿಸಿದರುಡೆತ್ ವಾರಂಟ್ ಎಂಬುದಾಗಿಯೇ ಪರಿಗಣಿಸಲಾಗುವಬ್ಲ್ಯಾಕ್ ವಾರಂಟ್ ವಾಸ್ತವವಾಗಿ ಮರಣದಂಡನೆ ಜಾರಿಗೆ ನೀಡುವ ಆದೇಶವಾಗಿದೆ, ಆದಾಗ್ಯೂ ತಪ್ಪಿತಸ್ಥರು ಮೇಲ್ಮನವಿ ಸಲ್ಲಿಸುವ ತಮ್ಮ ಹಕ್ಕು ಚಲಾಯಿಸಿದರೆ ಅಥವಾ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದರೆ, ’ಬ್ಲ್ಯಾಕ್ ವಾರಂಟನ್ನು ತಡೆ ಹಿಡಿಯಬಹುದು ಅಥವಾ ರದ್ದು ಪಡಿಸಬಹುದು. ಕಾನೂನುಬದ್ಧ ಪರಿಹಾರವನ್ನು ಬಳಸಿಕೊಳ್ಳಲು ನ್ಯಾಯಾಲಯವು ಅಪರಾಧಿಗಳಿಗೆ ೧೪ ದಿನಗಳ ಕಾಲಾವಕಾಶವನ್ನು ಕೊಟ್ಟಿದೆ. ಪರಿಹಾರದಲ್ಲಿ ಸುಪ್ರೀಂಕೋರ್ಟಿನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಅಥವಾ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸುವ ಅವಕಾಶಗಳೂ ಸೇರಿವೆ. ದೇಶವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಕ್ರೂರ ಸಾಮೂಹಿಕ ಅತ್ಯಾಚಾರ ಕೃತ್ಯದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಒಂದು ವರ್ಷದ ಒಳಗಾಗಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಮತ್ತು ಪ್ರಕರಣ ದೇಶದ ಅತ್ಯಾಚಾರ ಸಂಬಂಧಿತ ಕಾನೂನನ್ನೇ ಮೊತ್ತ ಮೊದಲ ಬಾರಿಗೆ ಪರಿಷ್ಕರಿಸಲು ಕಾರಣವಾಗಿತ್ತುವಿಚಾರಣಾ ನ್ಯಾಯಾಲಯ ಒಂದು ವರ್ಷದ ಒಳಗಾಗಿ ಮರಣದಂಡನೆ ಶಿಕ್ಷೆ ವಿಧಿಸಿದ್ದರೂ, ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಲು ವರ್ಷಗಳೇ ಹಿಡಿದಿದ್ದವು (ವಿವರಗಳಿಗೆಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ
: ೨೦೧೨ರನಿರ್ಭಯಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ನ್ಯಾಯಾಲಯ 2020 ಜನವರಿ 07ರ ಮಂಗಳವಾರ  ಬ್ಲ್ಯಾಕ್ ವಾರಂಟ್ ಜಾರಿಗೊಳಿಸುತ್ತಿದ್ದಂತೆಯೇ ನಗರದ ತಿಹಾರ್ ಸೆರೆಮನೆಯಲ್ಲಿ ತೀರ್ಪು ಜಾರಿಗೆ ಸಕಲ ಸಿದ್ಧತೆಗಳು ಆರಂಭವಾದವು.   ಜನವರಿ ೨೨ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ನಾವು ಮೀರತ್ನಿಂದ ವಧಕಾರರ (ಗಲ್ಲಿಗೇರಿಸುವವರ) ಸೇವೆಯನ್ನು ಕೋರಲಿದ್ದೇವೆ. ನಾಲ್ಕೂ ಮಂದಿ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸಲು ಸೆರೆಮನೆಯಲ್ಲಿ ನಾವು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆಎಂದು ಹೆಸರು ಹೇಳಲು ಇಚ್ಛಿಸದ ಸೆರೆಮನೆ ಅಧಿಕಾರಿಯೊಬ್ಬರು ತಿಳಿಸಿದರು. ಕುಣಿಕೆಗಾಗಿ ಬಿಹಾರದ ಬಕ್ಸರ್ ಸೆರೆಮನೆಯಿಂದ ವಿಶೇಷ ಹಗ್ಗಗಳನ್ನು ತರಲಾಗುವುದು. ೨೦೧೩ರಲ್ಲಿ ಸಂಸತ್ ಮೇಲಿನ ದಾಳಿ ಅಪರಾಧಿ ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸಲು ಕೂಡಾ ಬಿಹಾರಿನ ಬಕ್ಸರ್ ಸೆರೆಮನೆಯಿದಲೇ ವಿಶೇಷ ಹಗ್ಗವನ್ನು ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿದವು. ಏಷ್ಯಾದ ಅತ್ಯಂತ ದೊಡ್ಡ ಸೆರೆಮನೆಯಾಗಿರುವ ತಿಹಾರ್ ಸೆರೆಮನೆಯಲ್ಲಿ ಗಲ್ಲುಗಂಭದ ಸುಸ್ಥಿತಿ ಬಗ್ಗೆ ಪರೀಕ್ಷೆಗಾಗಿ ಗಲ್ಲಿಗೇರಿಸುವ ಡಮ್ಮಿ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಅವರು ನುಡಿದರುಅಪರಾಧಿಗಳನ್ನು ಬೇರೆ ಬೇರೆ ಸೆಲ್ಗಳಲ್ಲಿ ಇರಿಸಲಾಗಿದ್ದು ಅವರ ಮೇಲೆ ಸಿಸಿಟಿವಿ ಮೂಲಕ ನಿಗಾ ಇಡಲಾಗಿದೆ. ಮರಣದಂಡನೆಗಳನ್ನು ಜಾರಿಗೊಳಿಸುವ ಸೆರೆಮನೆ ನಂಬರ್ ೩ರಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು. .  (ವಿವರಗಳಿಗೆಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಆವರಣದಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆಯಲ್ಲಿ ಸಶಸ್ತ್ರ ಮುಸುಕುಧಾರಿಗಳಿಂದ ಹಲ್ಲೆಗೀಡಾಗಿ ತಲೆಗೆ ಗಾಯಗಳಾಗಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ವಿಧ್ವಂಸಕ ಕೃತ್ಯಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಪಿಂಕಿ ಚೌಧರಿ ನೇತೃತ್ವದ ಹಿಂದೂ ರಕ್ಷಾ ದಳ ಎಂಬ ಸಂಘಟನೆಯೊಂದು  2020 ಜನವರಿ 07ರ ಮಂಗಳವಾರ ಜೆಎನ್‌ಯು ಹಲ್ಲೆಯ ಹೊಣೆ ಹೊತ್ತುಕೊಂಡಿತು. ಜನವರಿ ೫ರಂದು ನಡೆದ ಹಿಂಸಾಚಾರದ ಘಟನೆಗೆ ಮುನ್ನ 2020 ಜನವರಿ ೩ ಮತ್ತು ೪ರಂದು ಸೆಮೆಸ್ಟರ್  ರಿಜಿಸ್ಟ್ರೇಷನ್ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಿ, ಕಂಪ್ಯೂಟರ್ ಸರ್ವರ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ಆಡಳಿತವು ಪೊಲೀಸರಿಗೆ ನೀಡಿದ್ದ ಮೂರು ದೂರುಗಳ ಪೈಕಿ ಒಂದರಲ್ಲಿ ಘೋಷ್ ಅವರ ಹೆಸರಿದ್ದುದು ಮೊದಲ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ದಾಖಲಾಗಿದೆ. ಈ ಮಧ್ಯೆ, ಮುಂಬೈಯಲ್ಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕವರ್ಗಕ್ಕೆ ಬೆಂಬಲ ವ್ಯಕ್ತ ಪಡಿಸಿ, ಮುಂಬೈಯ ಗೇಟ್ ವೇ ಆಫ್ ಇಂಡಿಯಾ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿದರು. ಬಳಿಕ ಅವರು ಪ್ರತಿಭಟನೆಯ ತಾಣವನ್ನು ಆಜಾದ್ ಮೈದಾನಕ್ಕೆ ಸ್ಥಳಾಂತರಿಸಿದರು.  ಕಾನೂನು ಸುವ್ಯವಸ್ಥೆ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ  ಅನುಮತಿ ನೀಡದ ಕಾರಣ ಅವರ ಪ್ರದರ್ಶನವನ್ನು ಸ್ಥಳಾಂತರಿಸಲಾಯಿತು ಎಂದು ಮುಂಬೈ ಪೊಲೀಸರು ಹೇಳಿದರು. ಅಹ್ಮದಾಬಾದಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಚೇರಿಯ ಸಮೀಪ ಎನ್‌ಎಸ್‌ಯುಐ ಪ್ರತಿಭಟನೆ ನಡೆಸಿದಾಗ ಉಭಯು ಸಂಘಟನೆಗಳ ಕಾರ್‍ಯಕರ್ತರ ಮಧ್ಯೆ ಘರ್ಷಣೆ ಸಂಭವಿಸಿತು. ಘರ್ಷಣೆ ನಿರತರನ್ನು ಚದುರಿಸಲು ಪೊಲೀಸರು ಬೆತ್ತ ಪ್ರಹಾರ ನಡೆಸಿದರು. ಘಟನೆಯಲ್ಲಿ ೧೦ ಮಂದಿ ಗಾಯಗೊಂಡರು.
.  (ವಿವರಗಳಿಗೆಇಲ್ಲಿ  ಕ್ಲಿಕ್   ಮಾಡಿರಿ)

2020: ಶಿರಸಿ: ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು 2020 ಜನವರಿ 07ರ ಮಂಗಳವಾರ  ಮಧ್ಯಾಹ್ನ ೨.೪೫ಕ್ಕೆ ನಿಧನ ಹೊಂದಿದರು. ಅವರು ಕಳೆದ ಒಂದು ತಿಂಗಳುಗಳಿಂದ ಸೋಂದಾ - ಹಳೆಯೂರಿನಲ್ಲಿರುವ ಶ್ರೀಪಾದ ಜೋಶಿ ಬಾಡಲಕೊಪ್ಪ ಅವರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಅವರಿಗೆ ೮೦ ವರ್ಷ ಪ್ರಾಯವಾಗಿತ್ತು. ಹೊಸ್ತೋಟ ಮಂಜುನಾಥ ಭಾಗವತರು ಒಂದರ್ಥದಲ್ಲಿ ಯಕ್ಷಗಾನ ಕಲೆಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಿಸಿಕೊಂಡಿದ್ದ ಕಲಾ ತಪಸ್ವಿ. ಅವರು ಬಡಗುತಿಟ್ಟಿನ ಯಕ್ಷಗಾನದ ಅಧ್ಯಯನ-ಪರಾಮರ್ಶೆ-ಪ್ರಸರಣೆಗಾಗಿ ಜಂಗಮರಂತೆ ಏಕಾಂಗಿಯಾಗಿ ಊರೂರು ಸುತ್ತುತ್ತಿದ್ದ ಯಕ್ಷ ಭೈರಾಗಿ. ಶಿರಸಿ ತಾಲೂಕಿನ ಹನುಮಂತಿ ಗ್ರಾಮದ ಹೊಸ್ತೋಟದಲ್ಲಿ ಮಂಜುನಾಥ ಭಾಗವತರು ೧೯೪೦ರಲ್ಲಿ ಜನಿಸಿದರು. ಆರನೇ ತರಗತಿಗೆ ಮಂಜುನಾಥ ಭಾಗವತರ ಶಾಲಾ ಕಲಿಕೆ ನಿಂತರೂ ಯಕ್ಷಗಾನದ ಕಡೆಗೆ ಬಾಲ್ಯದಿಂದಲೇ ಅವರಿಗಿದ್ದ ಆಸಕ್ತಿ ಅವರನ್ನು ಕೆರೆಮನೆ ಶಿವರಾಮ ಹೆಗಡೆ ಮತ್ತು ಕೆರೆಮನೆ ಮಹಾಬಲ ಹೆಗಡೆ ಅವರ ಸಂಪರ್ಕಕ್ಕೆ ಬರುವಂತೆ ಮಾಡಿತು.  ಮುಂದೆ ಸುಮಾರು ೨೮ ವರ್ಷಗಳವರೆಗೆ ಯಕ್ಷಗಾನದ ಸರ್ವಾಂಗೀಣ ವಿಭಾಗಗಳಲ್ಲಿ ಪ್ರಾವಿಣ್ಯತೆಯನ್ನು ಸಾಧಿಸಿದ್ದು ಮಾತ್ರವಲ್ಲದೇ ಜೊತೆಯಲ್ಲೇ ಕನ್ನಡ ಸಾಹಿತ್ಯ ಹಾಗೂ ಛಂದಸ್ಸುಗಳ ಅಧ್ಯಯನವನ್ನೂ ಮಾಡಿದ್ದರು. ಈ ನಡುವೆ ೧೯೬೬ರಲ್ಲಿ ಕಾರವಾರದ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಪ್ರಭಾನಂದಜೀ ಅವರಿಂದ ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದುಕೊಂಡು ಪಾರಿವ್ರಾಜಕ ವೃತವನ್ನು ಸ್ವೀಕರಿಸಿದರು. ಆ ಬಳಿಕ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಸಂಪೂರ್ಣ ಜೀವನವನ್ನು ಯಕ್ಷಗಾನಕ್ಕಾಗಿಯೇ ಮುಡುಪಾಗಿಟ್ಟರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಟೆಹರಾನ್: ಅಮೆರಿಕದಿಂದ ಕೊಲ್ಲಲ್ಪಟ್ಟ ಇರಾನಿನ ಹಿರಿಯ ಸೇನಾಧಿಕಾರಿ ಜನರಲ್ ಖಾಸಿಂ  ಸೊಲೈಮಾನಿ ಅಂತ್ಯಯಾತ್ರೆ -ಅಂತ್ಯಕ್ರಿಯೆಯ   ವೇಳೆ  2020 ಜನವರಿ 07ರ ಮಂಗಳವಾರ ಕಾಲ್ತುಳಿತ ಉಂಟಾಗಿ ಕನಿಷ್ಠ ೪೦ ಮಂದಿ ಅಸುನೀಗಿ, ಹಲವರು ಗಾಯಗೊಂಡರು. ಸೊಲೈಮಾನಿ ಅವರ ಹುಟ್ಟೂರು ಕೆರ್ಮಾನಿಯಲ್ಲಿ ಅಂತ್ಯಕ್ರಿಯೆಗಾಗಿ ಲಕ್ಷಾಂತರ ಮಂದಿ ನೆರೆದಿದ್ದ ಕಾರಣ ಈ ದುರ್ಘಟನೆ ಸಂಭವಿಸಿತು. ಇರಾನಿನ ತುರ್ತು ವೈದ್ಯಕೀಯ ಸೇವಾ ಮುಖ್ಯಸ್ಥ ಪಿಹ್ಸೋಸ್ಸಿನ್ ಕೊಲಿವಾಂಡ್ ಕೂಡ ಸರ್ಕಾರಿ ವಾಹಿನಿ ಜತೆಗೆ ಮಾತನಾಡಿ, ದುರಂತ ನಡೆದದ್ದು ಹೌದು ಎಂದು ಖಚಿತಪಡಿಸಿದರು. ಹಿಂದಿನ ದಿನ ಸುಲೈಮನಿ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಟೆಹರಾನ್ನಲ್ಲಿ ೧೦ ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. ಅಂತ್ಯಸಂಸ್ಕಾರಕ್ಕೆ ಸೇರಿರುವ ಜನರ ಸಂಖ್ಯೆ ಇರಾನ್ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಎಂದು ಹೇಳಲಾಯಿತು. ಟೆಹರಾನ್, ಖೂಮ್, ಮಶ್ಘಾಡ್ ಮತ್ತು ಅಹ್ವಾಝ್ ನಗರಗಳಲ್ಲೂ ಅಷ್ಟೇ ಸಂಖ್ಯೆಯ ಜನರು ಸೇರಿ, ಸೇನಾಧಿಕಾರಿಗೆ ಗೌರವ ಅರ್ಪಿಸಿದರು ಮತ್ತು ಅಮೆರಿಕದ ವಿರುದ್ಧ ಘೋಷಣೆ ಕೂಗಿದರು.
(ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)


-ಸಂಗ್ರಹ: ನೆತ್ರಕೆರೆ ಉದಯಶಂಕರ                         


No comments:

Post a Comment