ನಾನು ಮೆಚ್ಚಿದ ವಾಟ್ಸಪ್

Tuesday, January 14, 2020

ಇಂದಿನ ಇತಿಹಾಸ History Today ಜನವರಿ 14

2020: ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಾದ ವಿನಯ್ ಕುಮಾರ್ ಶರ್ಮ ಮತ್ತು ಮುಖೇಶ್ ಸಿಂಗ್ ಅವರು ಮರಣ ದಂಡನೆ ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಗಳನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠವು  2020 ಜನವರಿ 14ರ ಮಂಗಳವಾರ ವಜಾಗೊಳಿಸಿತು. ಇದರೊಂದಿಗೆ ಜನವರಿ ೨೨ರಂದು ನಾಲ್ಕೂ ಮಂದಿ ಅಪರಾಧಿಗಳ ಮರಣದಂಡನೆ ಜಾರಿಗೆ ಮಾರ್ಗ ಸುಗಮಗೊಂಡಿತು.  ನಿರ್ಭಯಾ ಪ್ರಕರಣದಲ್ಲಿ ಕೊನೆಯ ಕಾನೂನು ಅವಕಾಶ ಬಳಸಿಕೊಂಡು ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ವಿನಯ್ ಕುಮಾರ್ ಮತ್ತು ಮುಖೇಶ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪಂಚಸದಸ್ಯ ಪೀಠವು ಕೊಠಡಿಯ ಒಳಗೆ ವಿಚಾರಣೆ ನಡೆಸಿ ವಜಾಗೊಳಿಸಿತು.  ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯವು ಡೆತ್ ವಾರಂಟ್ ಹೊರಡಿಸಿತ್ತು. ಆದೇಶದ ಬಳಿಕ ದಿನದೊಳಗೆ ಕೊನೆಯ ಕಾನೂನುಬದ್ಧ ಪರಿಹಾರವಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದಾಗಿತ್ತು. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವಂತೆ ಕೋರಿ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದಾದ ಕೊನೆಯ ಅವಕಾಶ ಮಾತ್ರವೇ ಈಗ ಅಪರಾಧಿಗಳಿಗೆ ಉಳಿದಿದೆ ಎಂದು ವರದಿ ತಿಳಿಸಿತು. ನಾಲ್ವರು ಅಪರಾಧಿಗಳನ್ನು ಜನವರಿ ೨೨ರಂದು ಬೆಳಗ್ಗೆ ೭ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಸಾಕೇತ್ ನ್ಯಾಯಾಲಯವು ಡೆತ್ ವಾರಂಟ್ ಹೊರಡಿಸಿತ್ತು.  ತಿಹಾರ್ ಸೆರೆಮನೆಯಲ್ಲಿ ನಾಲ್ಕೂ ಮಂದಿ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆಗೆ ಸಿದ್ಧತೆಗಳು ನಡೆದಿವೆ ಎಂದು ವರದಿ ತಿಳಿಸಿತು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಮರಣದಂಡನೆ ವಿರುದ್ಧ ಸಲ್ಲಿಸಲಾಗಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠವು ವಜಾಗೊಳಿಸಿದ ಬೆನ್ನಲ್ಲೆ ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಅಪರಾದಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್  2020 ಜನವರಿ 14ರ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮೆ ಕೋರಿಕೆ ಅರ್ಜಿ ಸಲ್ಲಿಸಿದ್ದಾನೆ. ರಾಷ್ಟ್ರಪತಿ ಅವರಿಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವ ಅಧಿಕಾರ ಇದೆಯಾದ್ದರಿಂದ ಮುಖೇಶ್ ಸಿಂಗ್ ಯತ್ನ ನಡೆಸಿರುವುದಾಗಿ ತಿಹಾರ್ ಸೆರೆಮನೆ ಮೂಲಗಳು ತಿಳಿಸಿವೆ. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಚಿಲ್ಲರೆ ಹಣದುಬ್ಬರ ದರವು ೨೦೧೯ರ ಡಿಸೆಂಬರ್ ತಿಂಗಳಿನಲ್ಲಿ ಐದೂವರೆ ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ಏರಿ ಶೇಕಡಾ .೩೫ಕ್ಕೆ ತಲುಪಿದ್ದನ್ನು ಅನುಸರಿಸಿ, ಹಣದುಬ್ಬರ ಏರಿಕೆಗೆ ಮೂಲಕಾರಣವಾಗಿದ್ದ ಈರುಳ್ಳಿಯನ್ನು ಕಿಲೋ ಗ್ರಾಂಗೆ ತಲಾ ೨೨ ರೂಪಾಯಿ ದರದಲ್ಲಿ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ  2020 ಜನವರಿ 14ರ ಮಂಗಳವಾರ  ಪ್ರಕಟಿಸಿತು. ಕೇಂದ್ರದ ಬಳಿ ಪ್ರಸ್ತುತ ೧೮,೦೦೦ ಟನ್ಗಳಷ್ಟು  ಆಮದು ಈರುಳ್ಳಿ ದಾಸ್ತಾನು ಇದೆ ಎಂದು ಸರ್ಕಾರ ಹೇಳಿತು. ‘ಸುಮಾರು ೧೮,೦೦೦ ಟನ್ನಷ್ಟು ಆಮದು ಈರುಳ್ಳಿ ಸಂಗ್ರಹ ಈಗ ಇದೆ. ಆದರೆ ನಮ್ಮ ಎಲ್ಲ ಪ್ರಯತ್ನಗಳ ಬಳಿಕ ಕೇವಲ ೨೦೦೦ ಟನ್ ಈರುಳ್ಳಿ ಮಾರಾಟ ಮಾಡಲು ಸಾಧ್ಯವಾಗಿದೆ. ನಾವು ಈಗ ಕಿಲೋಗ್ರಾಂಗೆ ತಲಾ ೨೨ ರೂಪಾಯಿ ದರದಲ್ಲಿ ಈರುಳ್ಳಿ ಒದಗಿಸುತ್ತಿದ್ದೇವೆಎಂಬುದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ  ವರದಿಯೊಂದು ತಿಳಿಸಿತು.  ಕಳೆದ ವರ್ಷ ಬಹುತೇಕ ನಗರಗಳಲ್ಲಿ ಈರುಳ್ಳಿ ದರ ಕಿಲೋ ಗ್ರಾಂಗೆ ೧೦೦ ರೂಪಾಯಿ ಇತ್ತು. ’ಈಗ ಆಮದು ಈರುಳ್ಳಿ ಬರಲು ಆರಂಭವಾಗಿದೆ. ,೧೬೦ ಟನ್ ಈರುಳ್ಳಿ ಭಾರತಕ್ಕೆ ತಲುಪಿದೆ. ೧೦,೫೬೦ ಟನ್ ಹೆಚ್ಚುವರಿ ಈರುಳ್ಳಿ ಹಡಗುಗಳಿಗೆ ಏರಿದ್ದು ಮುಂದಿನ - ದಿನಗಳಲ್ಲಿ ಬರಲಿದೆಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ  ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕೆಂಪು ಮತ್ತು ಹಳದಿ ಈರುಳ್ಳಿಯನ್ನು ಟರ್ಕಿ, ಈಜಿಪ್ಟ್ ಮತ್ತು ಆಫ್ಘಾನಿಸ್ಥಾನದಿಂದ ಆಮದು ಮಾಡಿಕೊಳ್ಳಲಾಗಿದೆ. ಸರಕುಗಳು ಮುಂಬೈ ಬಂದರಿನಲ್ಲಿ ಇಳಿಯಲಿವೆ ಎಂದು ಅಧಿಕಾರಿ ಡಿಸೆಂಬರಿನಲ್ಲಿ ಹೇಳಿದ್ದರು.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಾಚಿಲ್ ವಿಭಾಗದ ಸಮೀಪ ಸಂಭವಿಸಿದ ಭಾರೀ ಪ್ರತ್ಯೇಕ ಹಿಮಕುಸಿತಗಳಲ್ಲಿ ನಾಲ್ವರು ಯೋಧರು ಹಾಗೂ ಐವರು ನಾಗರಿಕರು ಸಾವನ್ನಪ್ಪಿರುವ ಘಟನೆ  2020 ಜನವರಿ 14ರ ಮಂಗಳವಾರ  ನಸುಕಿನಲ್ಲಿ ಘಟಿಸಿತು. ಗಾಯಗೊಂಡಿರುವ ಯೋಧರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿತು. ಸೋಮವಾರ ರಾತ್ರಿ ಗಂಟೆ ಸುಮಾರಿಗೆ ಸೇನಾ ಶಿಬಿರದ ಮೇಲೆ ಹಿಮದ ರಾಶಿ ಕುಸಿದು ಬಿದ್ದಿರುವುದಾಗಿ ವರದಿ ಹೇಳಿದೆ. ಪ್ರತ್ಯೇಕ ಹಿಮಕುಸಿತ ಘಟನೆಗಳಲ್ಲಿ ಯೋಧರು ಹುತಾತ್ಮರಾದರು. ಜಮ್ಮು ಕಾಶ್ಮೀರದ ನೌಗಾಮ್ ವಿಭಾಗದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್ ) ಯೋಧ ಹುತಾತ್ಮರಾದರು. ಆರು ಮಂದಿ ಯೋಧರನ್ನು ರಕ್ಷಿಸಲಾಯಿತು. ಗಡಿನಿಯಂತ್ರಣ ರೇಖೆ ಬಳಿ ಗಡಿ ಭದ್ರತಾ ಪಡೆ ತೆರಳಿ ರಕ್ಷಣಾ ಕಾರ್ಯ ನಡೆಸಿರುವುದಾಗಿ ವರದಿ ತಿಳಿಸಿತು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ಕೋಲ್ಕತ: ಪೌರತ್ವ (ತಿದ್ದುಪಡಿ) ಕಾಯ್ದೆಯು (ಸಿಎಎ) ಸರಣಿ ಪ್ರತಿಭಟನೆಗಳಿಗೆ ಕಾರಣವಾದ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ಪಶ್ಚಿಮ ಬಂಗಾಳ ರಾಜ್ಯ ಪೊಲೀಸರು ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಯ್ದೆಯನ್ನು ಬೆಂಬಲಿಸಿ ಮೆರವಣಿಗೆಗಳನ್ನು ನಡೆಸದಂತೆ ತಡೆಯುವ ಸಲುವಾಗಿ ಅಪರಾಧ ದಂಡ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕ ಆಜ್ಞೆಯನ್ನು ಜಾರಿಗೊಳಿಸಿದರು. 2020 ಜನವರಿ 12ರ ಭಾನುವಾರದಿಂದಲೇ ಪ್ರತಿಬಂಧಕ ಆಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗಿದೆ. ೨೦೧೯ರ ಚುನಾವಣೆಯಲ್ಲಿ ರಾಜ್ಯದ ೪೨ ಲೋಕಸಭಾ ಸ್ಥಾನಗಳ ಪೈಕಿ ೧೮ ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್ಸಿನಿಂದ (ಟಿಎಂಸಿ) ಬಿಜೆಪಿಯು ಕಿತ್ತುಕೊಂಡಿರುವ ಉತ್ತರ ಬಂಗಾಳ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ. ಜನವರಿ ೧೨ರಂದು, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸಯಾಂತನ್ ಬಸು ಮತ್ತು ಪಕ್ಷದ ಕೂಚ್ ಬೆಹಾರ್ ಜಿಲ್ಲಾ ಘಟಕದ ಅಧ್ಯಕ್ಷೆ ಮಾಲತಿ ರೇವಾ ರೇ ಅವರನ್ನು ಜಿಲ್ಲೆಯ ಸೀತಾಲ್ಕುಚಿಗೆ ಸಾಗದಂತೆ ತಡೆಯಾಯಿತು. ಅವರು ಬಿಜೆಪಿಯು ಸಂಘಟಿಸಿದ್ದ ಸಿಎಎ ಪರ ಅಭಿನಂದನ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೊರಟಿದ್ದರು. ‘ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕ ಆಜ್ಞೆ ಇರುವುದಾಗಿಯೂ ಮುಂದೆ ಸಾಗಿದರೆ ಬಂಧಿಸಲಾಗುವುದು ಎಂದೂ ನಮಗೆ ತಿಳಿಸಲಾಯಿತು. ನಾವು ಮುಂದಕ್ಕೆ ಸಾಗಿದೆವು ಮತ್ತು ಎಲ್ಲಿ ನಮ್ಮನ್ನು ತಡೆಯಲಾಯಿತೋ ಅಲ್ಲಿಯೇ ಸಭೆ ನಡೆಸಿದೆವು. ಸರ್ಕಾರದ ತಂತ್ರಗಾರಿಕೆಗಳ ವಿರುದ್ಧ ನಾವು ಕಲ್ಕತ್ತ ಹೈಕೋರ್ಟಿಗೆ ಹೋಗುತ್ತೇವೆ. ಟಿಎಂಸಿಯು ನಮ್ಮ ದನಿ ಅಡಗಿಸಲು ಸಾಧ್ಯವಿಲ್ಲ. ಅವರಿಗೆ ಬಿಜೆಪಿಯ ಬಗ್ಗೆ ಹೆದರಿಕೆ ಹುಟ್ಟಿದೆ. ನಮ್ಮನ್ನು ತಡೆಯುವ ಯತ್ನವು ಒಂದು ರೀತಿಯ ಸಮರಕ್ಕೆ ಕಾರಣವಾಗಬಹುದುಎಂದು ಬಸು ನುಡಿದರು.   (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2020 ಜನವರಿ 14ರ ಮಂಗಳವಾರ  ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಸುಮಾರು ೪೫ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಸೋನಿಯಾ ಗಾಂಧಿ ಜೊತೆಗಿನ ಮಾತುಕತೆಯ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ. ಪಾಟೀಲ್ ಅವರ ಹೆಸರನ್ನು ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದು, ಎಂಬಿ ಪಾಟೀಲ್ ಅವರಿಗೆ ಏಕೆ ಅಧ್ಯಕ್ಷ ಸ್ಥಾನ ನೀಡಬೇಕು, ಅದರಿಂದ ಪಕ್ಷಕ್ಕೆ ಆಗುವ ಅನುಕೂಲಗಳೇನು ಎಂಬುದನ್ನು ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಡಿಯೂರಪ್ಪ ಅವರನ್ನು ಎದುರಿಸಲು ಲಿಂಗಾಯತ ಅಧ್ಯಕ್ಷರಿದ್ದರೆ ಸೂಕ್ತ. ಅದರಲ್ಲೂ  ಉತ್ತರ ಕರ್ನಾಟಕದವರಾಗಿದ್ದರೆ ಇನ್ನೂ ಒಳ್ಳೆಯದು. ರಾಜ್ಯದಲ್ಲಿ ಬಿಜೆಪಿಯೇ ಕಾಂಗ್ರೆಸ್ ಪಕ್ಷಕ್ಕೆ ವೈರಿ. ಬಿಜೆಪಿಗೆ ಭದ್ರ ನೆಲೆ ಇರುವುದು ಉತ್ತರ ಕರ್ನಾಟಕದಲ್ಲಿ. ಜೊತೆಗೆ ಯಡಿಯೂರಪ್ಪ ಇರುವುದರಿಂದ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿ ನಿಂತಿದೆ. ಎರಡೂ ದೃಷ್ಟಿಯಿಂದ ಉತ್ತರ ಕರ್ನಾಟಕದ ಲಿಂಗಾಯತರಿಗೆ ಪಕ್ಷದ ಅಧ್ಯಕ್ಷ ಗಾದಿ ಕೊಡಬೇಕು ಎಂದು ಸಿದ್ದರಾಮಯ್ಯ ವಿವರಿಸಿದರು ಎಂದು ಮೂಲಗಳು ಹೇಳಿವೆ. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜನವರಿ14  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)


No comments:

Post a Comment