Tuesday, January 21, 2020

ಇಂದಿನ ಇತಿಹಾಸ History Today ಜನವರಿ 21

2020: ನವದೆಹಲಿ:  ೨೦೧೯ರ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ  2020ರ ಜನವರಿ 21ರ ಮಂಗಳವಾರ ಪ್ರಕಟವಾಗಿದ್ದು, ಕರ್ನಾಟಕದ ಇಬ್ಬರು ಸೇರಿದಂತೆ ದೇಶದ ೨೨ ಮಕ್ಕಳು  ’ಶೌರ್ಯ ಪ್ರಶಸ್ತಿಗೆ ಭಾಜನರಾದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಉಕ್ಕಿ ಹರಿಯುತ್ತಿದ್ದ ಪ್ರವಾಹದ ನೀರಿನ ಮಧ್ಯೆ ಆಂಬುಲೆನ್ಸ್ ಮುಂದಕ್ಕೆ ಸಾಗಲು ಸಾಧ್ಯವಾಗುವಂತೆ ದಾರಿ ತೋರಿಸಿ ಐವರನ್ನು ರಕ್ಷಿಸಿದ್ದ ಬಾಲಕ ವೆಂಕಟೇಶ ಮತ್ತು ಕೋಪೋದ್ರಿಕ್ತ ಹಸುವಿನ ದಾಳಿಯಿಂದ ಮನೆಯ ಬಳಿ ನಿಂತಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದ ಆರತಿ ಸೇಠ್ ಪ್ರಶಸ್ತಿಗೆ ರಾಜ್ಯದಿಂದ ಆಯ್ಕೆಯಾದರು. ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯು ಮಕ್ಕಳ ಸಾಹಸ ಕಾರ್ಯಗಳನ್ನು ಗುರುತಿಸಿ ಶೌರ್ಯ ಪ್ರಶಸ್ತಿಯನ್ನು ಘೋಷಿಸಿತು.  ವೆಂಕಟೇಶ, ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಸಂಕನೂರು ಗ್ರಾಮದವರು ಮತ್ತು ಆರತಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆ ಇದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥೆ ಗೀತಾ ಸಿದ್ಧಾರ್ಥ ತಿಳಿಸಿದರು (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2020: ಲಕ್ನೋ: ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂದಕ್ಕೆ ಪಡೆಯಲಾಗುವುದಿಲ್ಲ  ಎಂದು 2020 ಜನವರಿ 21ರ  ಮಂಗಳವಾರ ಇಲ್ಲಿ ಖಂಡತುಂಡವಾಗಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾಗಿರುವ ಶಾಸನದ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.  ಉತ್ತರ ಪ್ರದೇಶದ ಲಕ್ನೋದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಪಕ್ಷ ಸಂಘಟಿಸಿದ ಜನ ಜಾಗೃತಿ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾಕಾಂಗ್ರೆಸ್ ಪಕ್ಷದ ಕ್ರಮಗಳು ದೇಶವನ್ನು ವಿಭಜಿಸಿವೆಎಂದು ವಿರೋಧ ಪಕ್ಷದ ಮೇಲೆ ಹರಿಹಾಯ್ದರು.  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಅಮಿತ್ ಶಾ ದಾಳಿಗೆ ಪ್ರಮುಖವಾಗಿ ಗುರಿಯಾದರು. ‘ದೇಶವನ್ನು ಒಡೆಯುವವರ ವಿರುದ್ಧ ಹಮ್ಮಿಕೊಳ್ಳಲಾಗಿರುವ ಜನಜಾಗೃತಿ ಅಭಿಯಾನದ ಬಗ್ಗೆ ಸಿಎಎ ವಿರೋಧೀ ಪಕ್ಷಗಳು ಬಿಜೆಪಿಯು ಏಕೆ ಅಭಿಯಾನವನ್ನು ನಡೆಸುತ್ತಿದೆ ಎಂಬುದಾಗಿ ಪ್ರಶ್ನಿಸುತ್ತ್ಗಾ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿವೆಎಂದು ಬಿಜೆಪಿ ನಾಯಕ ನುಡಿದರು. ‘ಜೋರಾಗಿ ಮತ್ತು ಸ್ಪಷ್ಟವಾಗಿ ನಮ್ಮ ವಿರೋಧಿಗಳಿಗೆ ಹೇಳುತ್ತೇವೆ- ಎಷ್ಟೇ ಪ್ರತಿಭಟನೆಗಳು ನಡೆದರೂ, ಯಾವುದೇ ಬೆಲೆ ತೆರಬೇಕಾಗಿ ಬಂದರೂ ಸರಿ ಪೌರತ್ವ ಕಾಯ್ದೆಯನ್ನು ವಾಪಸ್ ಪಡೆಯುವುದಿಲ್ಲಎಂದು ಶಾ ಗುಡುಗಿದರು. ‘ತಿದ್ದುಪಡಿಗೊಂಡಿರುವ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರರಿಗೆ ಪೌರತ್ವ ಒದಗಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆಎಂದು ನುಡಿದ ಸಚಿವರುಸಿಎಎಯಲ್ಲಿ ಯಾವುದೇ ಸ್ಥಳದ ಯಾವುದೇ ವ್ಯಕ್ತಿಯ ಪೌರತ್ವ ಕಿತ್ತುಕೊಳ್ಳುವ ಯಾವ ವಿಧಿಯೂ ಇಲ್ಲ, ಬದಲಿಗೆ ಅದು ಜನರಿಗೆ ಭಾರತದ ಪೌರತ್ವವನ್ನು ನೀಡುತ್ತದೆಎಂದು ಪುನರುಚ್ಚರಿಸಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2020: ನವದೆಹಲಿ: ಸಂಸತ್ತು, ಶಾಸನ ಸಭೆಗಳ ಸಭಾಧ್ಯಕ್ಷರು ನಿರ್ದಿಷ್ಟ ಪಕ್ಷವೊಂದಕ್ಕೆ ಸೇರಿದವರಾದ್ದರಿಂದ ಅವರಿಗೆ ಇರುವ ಚುನಾಯಿತ ಪ್ರತಿನಿಧಿಗಳ ಅನರ್ಹತೆ ಅಧಿಕಾರದ ಬಗ್ಗೆ ಪುನರ್ವಿಮರ್ಶೆ ನಡೆಸುವಂತೆ ಸಂಸತ್ತಿಗೆ ಸಲಹೆ ನೀಡಿರುವ ಸುಪ್ರೀಂಕೋರ್ಟ್ ವಿಚಾರದಲ್ಲಿ ಸ್ವತಂತ್ರ ಸಂಸ್ಥೆಯೊಂದಕ್ಕೆ ಅಧಿಕಾರ ನೀಡುವುದು ಉತ್ತಮ ಎಂದು 2020 ಜನವರಿ 21ರ  ಮಂಗಳವಾರ  ಅಭಿಪ್ರಾಯ ವ್ಯಕ್ತ ಪಡಿಸಿತು.  ಮಣಿಪುರದಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದು ಬಳಿಕ ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಯಾಗಿದ್ದ ಅರಣ್ಯ ಮತ್ತು ಪರಿಸರ ಸಚಿವ ತೌನೋಜಾಮ್  ಶ್ಯಾಮ ಕುಮಾರ್ (ಟಿ. ಶ್ಯಾಮ್ ಕುಮಾರ್) ಅವರನ್ನು ಅನರ್ಹಗೊಳಿಸುವಂತೆ ಕೋರಲಾಗಿರುವ  ಪ್ರಕರಣದ ವಿಚಾರಣೆಯ ವೇಳೆಯಲ್ಲಿ ನ್ಯಾಯಮೂರ್ತಿ ರೋಹಿಂಗ್ಟನ್ ನೇತೃತ್ವದ ತ್ರಿಸದಸ್ಯ ಪೀಠವು ಸಲಹೆಯನ್ನು ಮಾಡಿತು. ಇತ್ತೀಚಿನ ದಿನಗಳಲ್ಲಿ ಸಂಸತ್ ಸದಸ್ಯರು ಮತ್ತು ಶಾಸಕರನ್ನು ಅನರ್ಹಗೊಳಿಸುವ ವಿಚಾರಗಳು ತೀವ್ರ ಗೊಂದಲಗಳಿಗೆ ಕಾರಣವಾಗುತ್ತಿವೆ. ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಸೇರಿದವರೇ ಸದನದ ಸಭಾಧ್ಯಕ್ಷರಾಗಿರುವುದರಿಂದ ಅವರ ನಿರ್ಧಾರದಲ್ಲಿ ಪಕ್ಷಪಾತದ ನಿಲುವು ವ್ಯಕ್ತವಾಗುತ್ತದೆ ಎಂಬ ಟೀಕೆಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಪೀಠದ ಸಲಹೆ ಮಹತ್ವ ಪಡೆಯಿತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಚಾರವನ್ನು ಸ್ವತಂತ್ರ ಸಂಸ್ಥೆಗೆ ವಹಿಸುವ ಬಗ್ಗೆ ಸಂಸತ್ತು ಚಿಂತನೆ ನಡೆಸಬೇಕು ಎಂದು ಪೀಠ ಸಲಹೆ ಮಾಡಿತು.  ಟಿ. ಶ್ಯಾಮಕುಮಾರ್ ಪ್ರಕರಣದ ವಿಚಾರಣೆಯ ಕಾಲದಲ್ಲಿ ಕೆಲವಾರು ಸಾಧ್ಯಾಸಾಧ್ಯತೆಗಳನ್ನು ವಿಮರ್ಶಿಸಿದ ಪೀಠವುಅನರ್ಹತೆ ಅರ್ಜಿಗಳ ವಿಚಾರವನ್ನು ಸ್ಪೀಕರ್ ನಿರ್ಧಾರಕ್ಕೆ ಬಿಡುವುದು ಸರಿಯಾಗುವುದಿಲ್ಲ. ಏಕೆಂದರೆ ಸಭಾಧ್ಯಕ್ಷರು ಒಂದು ರಾಜಕೀಯ ಪಕ್ಷದ ಸದಸ್ಯರೇ ಆಗಿರುತ್ತಾರೆ. ಹಿನ್ನೆಲೆಯಲ್ಲಿ ಸ್ವತಂತ್ರವಾದ ಬೇರೆಯೇ ಆದ ಒಂದು ಸಂಸ್ಥೆಯನ್ನು ರಚಿಸುವುದು ಸೂಕ್ತಎಂದು ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020:  ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಆಪ್) ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು 2020 ಜನವರಿ 21ರ  ಮಂಗಳವಾರ  ಆರು ಗಂಟೆಗಳ ಕಾಲ ಸರತಿಯ ಸಾಲಿನಲ್ಲಿ ಕಾದು ನಿಂತ ಬಳಿಕ ಕಡೆಗೂ ನವದೆಹಲಿ ಕ್ಷೇತ್ರದಲ್ಲಿ ದೆಹಲಿ ವಿಧಾನಸಭಾ ಚುನಾವಣೆಗಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರೊಮೇಶ್ ಸಭರ್ ವಾಲ್ ಮತ್ತು ಬಿಜೆಪಿಯ ಸುನಿಲ್ ಯಾದವ್ ವಿರುದ್ಧ ಸ್ಪರ್ಧಿಸಿದ್ದು ಮೂರನೇ ಬಾರಿಗೆ ಕ್ಷೇತ್ರವನ್ನು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.  ಇದಕ್ಕೆ ಮುನ್ನ ಮಧ್ಯಾಹ್ನ ಬಿಜೆಪಿಯು ಉದ್ದೇಶಪೂರ್ವಕವಾಗಿ ಕೇಜ್ರಿವಾಲ್ ನಾಮಪತ್ರ ಸಲ್ಲಿಕೆಯನ್ನು ವಿಳಂಬವಾಗುವಂತೆ ಮಾಡಿದೆ ಎಂದ ಆಮ್ ಆದ್ಮಿ ಪಕ್ಷವು ಆಪಾದಿಸಿತ್ತು.   ಚುನಾವಣಾಧಿಕಾರಿಯ ಕಚೇರಿಯಲ್ಲಿ ಸೂಕ್ತ ನಾಮಪತ್ರಗಳಿಲ್ಲದ ಸುಮಾರು ೩೫ ಮಂದಿ ಅಭ್ಯರ್ಥಿಗಳು ಕುಳಿತು ಕೊಂಡಿದ್ದಾರೆ. ಕೆಲವರ ಬಳಿ ೧೦ ಮಂದಿ ಸೂಚಕರ ಹೆಸರು ಕೂಡಾ ಇಲ್ಲ. ವ್ಯಕ್ತಿಗಳನ್ನು ಬಿಜೆಪಿಯೇ ತಂದು ನಿಲ್ಲಿಸಿದೆ ಎಂದು ಆಪ್ ನಾಯಕ ಸೌರಭ್ ಭಾರದ್ವಾಜ್ ಆಪಾದಿಸಿದ್ದರು.  ಸ್ವತಃ ಕೇಜ್ರಿವಾಲ್ ಅವರೂ ನಾಮಪತ್ರ ಸಲ್ಲಿಸಲು ಸಾಲಿನಲ್ಲಿ ಕಾದಿದ್ದೇನೆ. ನನ್ನ ಕ್ರಮಸಂಖ್ಯೆ ೪೫ ಎಂದು ಟ್ವೀಟ್ ಮಾಡಿದ್ದರು.  ಕೇಜ್ರಿವಾಲ್ ಅವರು ಸೋಮವಾರ ನಿಗದಿಯಾಗಿದ್ದ ನಾಮಪತ್ರ ಸಲ್ಲಿಕೆಯ ಗಂಟೆಯ ಗಡುವಿನೊಳಗೆ ನಾಮಪತ್ರ ಸಲ್ಲಿಸಲೂ ವಿಫಲರಾಗಿದ್ದರು. ಇದಕ್ಕೆ ಅವರ ಭಾರೀ ರೋಡ್ ಶೋ ಬಳಸು ದಾರಿಯ ಮೂಲಕ ಚುನಾವಣಾ ಅಧಿಕಾರಿಯ ಕಚೇರಿಯನ್ನು ವಿಳಂಬವಾಗಿ ತಲುಪಿದ್ದು ಕಾರಣವಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ದಾವೊಸ್: ಸ್ವಿಟ್ಜರ್ಲೆಂಡಿನ ದಾವೊಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ (ವಿಶ್ವ ಆರ್ಥಿಕ ವೇದಿಕೆ) ಸಮಾವೇಶದ ಮೊದಲನೇ ದಿನವಾದ  ೨೦೨೦ ಜನವರಿ ೨೧ರ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತನ್ಮೂಲಕ  ಅಮೆರಿಕಾ ಅಧ್ಯಕ್ಷರ ಭಾಷಣದಲ್ಲಿ ಪಾಲ್ಗೊಂಡ  ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರನ್ನು ಒಳಗೊಂಡಂತೆ ಪೂರ್ಣ ಪ್ರಮಾಣದ ನಿಯೋಗದೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ೨೦೦೩ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಸಮಾವೇಶದಲ್ಲಿ ಭಾಗವಹಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)




No comments:

Post a Comment